All posts by nagaraj11081993

IndiGo Crisis: ಡಿಸೆಂಬರ್​ನಲ್ಲಿ ಉಂಟಾದ ವಿಮಾನಗಳ ಹಾರಾಟದ ತೊಂದರೆಗೆ ಇಂಡಿಗೋಗೆ 22 ಕೋಟಿ ರೂ. ದಂಡ! – Kannada News | IndiGo Airlines fined Rs 22 crore by DGCA for flight disruptions in December 2025

ನವದೆಹಲಿ, ಜನವರಿ 17: 2025ರ ಡಿಸೆಂಬರ್​ನಲ್ಲಿ ಇಂಡಿಗೋ (IndiGo) ಪ್ರಯಾಣಿಕರಿಗೆ ಭಾರೀ ತೊಂದರೆ ಉಂಟಾಗಿತ್ತು. ಡಿಸೆಂಬರ್ 3ರಿಂದ 5ರವರೆಗೆ ಇಂಡಿಗೋ ಸಾವಿರಾರು ವಿಮಾನಗಳ ಹಾರಾಟವನ್ನು ರದ್ದುಮಾಡಿತ್ತು. ವಿಮಾನಗಳ ರದ್ದತಿ ಮತ್ತು ವಿಳಂಬಗಳಿಗೆ ಪ್ರತಿಕ್ರಿಯೆಯಾಗಿ ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇಂಡಿಗೋ ಸಂಸ್ಥೆಗೆ 22.2 ಕೋಟಿ ರೂ. ದಂಡ ವಿಧಿಸಿದೆ. ಇದರ ಜೊತೆಗೆ ಇಂಡಿಗೋ ವಿಮಾನಯಾನ ಸಂಸ್ಥೆಗೆ 50 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ನೀಡುವಂತೆ ಆದೇಶಿಸಿದೆ.

ಡಿಸೆಂಬರ್ ಮೊದಲ ವಾರ ಇಂಡಿಗೋ 2,507 ವಿಮಾನಗಳನ್ನು ರದ್ದುಗೊಳಿಸಿತ್ತು. ಇಂಡಿಗೋದ 1,852 ವಿಮಾನಗಳ ಹಾರಾಟ ವಿಳಂಬಗೊಂಡಿತ್ತು. ಇದರಿಂದಾಗಿ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಿಲುಕಿಕೊಂಡಿದ್ದರು. ಇದರಿಂದ ಸಾವಿರಾರು ಪ್ರಯಾಣಿಕರು ಮದುವೆ, ತಿಥಿ, ನಾಮಕರಣ ಮುಂತಾದ ತಮ್ಮ ಜೀವನದ ಅಮೂಲ್ಯ ಕ್ಷಣಗಳಿಂದ ವಂಚಿತರಾದರು. ಅನೇಕ ಜನರು ಆಹಾರ, ನಿದ್ರೆಯಿಲ್ಲದೆ ಅನಾರೋಗ್ಯಕ್ಕೂ ತುತ್ತಾದರು. ಈ ಸಮಸ್ಯೆಗಳನ್ನು ಪರಿಹರಿಸಲು ಇಂಡಿಗೋ ಸಂಸ್ಥೆ ವಿಫಲವಾದ ಕಾರಣ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಸರ್ಕಾರ ಕೂಡ ಇಂಡಿಗೋ ಮುಖ್ಯಸ್ಥರ ಜೊತೆ ಸಭೆ ನಡೆಸಿ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಅದರಂತೆ ಇದೀಗ ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ವಿಮಾನ ರದ್ದತಿಯಿಂದ ತೀವ್ರ ತೊಂದರೆಗೊಳಗಾದ ಪ್ರಯಾಣಿಕರಿಗೆ ಇಂಡಿಗೋದಿಂದ 10,000 ರೂ. ಪ್ರಯಾಣ ವೋಚರ್‌

“ಡಿಸೆಂಬರ್ 2025ರ ಅಡಚಣೆಗಳ ಸಂದರ್ಭದಲ್ಲಿ ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಕಾರ್ಯಾಚರಣೆಯ ಲೋಪಗಳಿಗೆ ನಾವು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಅಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ಬದ್ಧರಾಗಿದ್ದೇವೆ” ಎಂದು ಇಂಡಿಗೋ ವಕ್ತಾರರು ಹೇಳಿದ್ದಾರೆ. ಇದರ ಜೊತೆಗೆ ವಿಮಾನಗಳು ರದ್ದಾದ ಅಥವಾ 3 ಗಂಟೆಗಳಿಗಿಂತ ಹೆಚ್ಚು ವಿಳಂಬವಾದ ಪ್ರಯಾಣಿಕರಿಗೆ 10,000 ರೂ. ವೋಚರ್ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಸ್ಸಾಂನಲ್ಲಿ ಪ್ರಧಾನಿ ಮೋದಿ ಮುಂದೆ 10 ಸಾವಿರ ಕಲಾವಿದರಿಂದ ಬಾಗುರುಂಬಾ ನೃತ್ಯ ಪ್ರದರ್ಶನ – Kannada News | PM Modi Witnessed 10000 Bodo Dancers Performing Bagurumba in Guwahati

ಗುವಾಹಟಿ, ಜನವರಿ 17: ಅಸ್ಸಾಂನಲ್ಲಿ ಬೋಡೋ ಸಮುದಾಯದ ಸಾಂಪ್ರದಾಯಿಕ ಬಾಗುರುಂಬಾ ನೃತ್ಯವು ಜಾಗತಿಕವಾದ ಇತಿಹಾಸ ನಿರ್ಮಿಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಎದುರು ಇಂದು ರಾತ್ರಿ ಸುಮಾರು 10,000 ಕಲಾವಿದರು ಬಾಗುರುಂಬಾ ನೃತ್ಯ ಪ್ರದರ್ಶಿಸಿದರು. ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಅಸ್ಸಾಂಗೆ ಆಗಮಿಸಿದ್ದಾರೆ. ಗುವಾಹಟಿಯ ಸರೋಷ್‌ಜೈತ್‌ನಲ್ಲಿ ನಡೆದ ಐತಿಹಾಸಿಕ ಬಾಗ್ರುಂಬಾ ನೃತ್ಯವನ್ನು ಇಡೀ ಜಗತ್ತು ವೀಕ್ಷಿಸಿತು. ಪ್ರಧಾನಿ ಮೋದಿ ಮಾತ್ರವಲ್ಲದೆ ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಇತರ ನಾಯಕರು ಈ ಸಮಾರಂಭಕ್ಕೆ ಸಾಕ್ಷಿಯಾದರು.

ಗುವಾಹಟಿಯ ಸರೋಸ್ಜೈ ಪ್ರದೇಶದ ಅರ್ಜುನ್ ಭೋಗೇಶ್ವರ ಬರುವಾ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು. 23 ಜಿಲ್ಲೆಗಳ 81 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 8,000 ನೃತ್ಯಗಾರರು ಸೇರಿದಂತೆ 10,000 ಕ್ಕೂ ಹೆಚ್ಚು ಕಲಾವಿದರು ಈ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜೀವ್‌ಗೌಡಗೆ ಜಾಮೀನು ನೀಡಲು ಕೋರ್ಟ್‌ ನಕಾರ: ‘ಕೈ’ ಮುಖಂಡನ ಬಂಧನಕ್ಕೆ ಅಡ್ಡಿ ಆಗಿದ್ದಾರಾ ಸಚಿವ? – Kannada News | Rajeev Gowda Absconds After Shidlaghatta Threat Case: Bail Rejected, Land Grab Allegations Surface

ಚಿಕ್ಕಬಳ್ಳಾಪುರ, ಜನವರಿ 17: ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಧಮ್ಕಿ ಹಾಕಿ ಎಸ್ಕೇಪ್ ಆಗಿರುವ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ (Rajeev Gowda) ಮೂರು ದಿನವಾದರೂ ಪತ್ತೆ ಆಗಿಲ್ಲ. ಮೊನ್ನೆ ವೀರಾವೇಷದ ಮಾತನಾಡಿದ್ದ ರಾಜೀವ್‌ಗೌಡ, ಕೇಸ್‌ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ. ಇದರ ನಡುವೆ ನಿರೀಕ್ಷಣಾ ಜಮೀನಿಗಾಗಿ ರಾಜೀವ್ ಗೌಡ ಪರ ವಕೀಲ ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರದ 2ನೇ ಜಿಲ್ಲಾ ಅಪರ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ನಿರೀಕ್ಷಣಾ ಜಾಮೀನು (Bail) ನೀಡಲು ನಿರಾಕರಿಸಿರುವ ಕೋರ್ಟ್‌, ವಿಚಾರಣೆಯನ್ನ ಜನವರಿ 22ಕ್ಕೆ ಮುಂದೂಡಿದೆ.

ರಾಜೀವ್‌ಗೌಡ ಪತ್ತೆಗಾಗಿ ಸಿಸಿಟಿವಿ ಮೊರೆ ಹೋದ ಖಾಕಿ!

ರಾಜೀವ್‌ಗೌಡರ ಬಂಧನಕ್ಕೆ ಮೂರು ತಂಡ ಮಾಡಿಕೊಂಡಿರುವ ಪೊಲೀಸರು, ಬೆಂಗಳೂರಿನಲ್ಲಿ ಸಿಸಿಟಿವಿ ಆಧರಿಸಿ ಶೋಧ ನಡೆಸಿದ್ದಾರೆ. ಬೆಂಗಳೂರಿನ ಇಂದಿರಾನಗರದಲ್ಲಿ ರಾಜೀವ್‌ಗೌಡ ಫೋನ್‌ ಸ್ವೀಚ್ ಆಫ್​ ಆಗಿದ್ದು, ಅದೇ ಏರಿಯಾದಲ್ಲೇ ಶೋಧ ಆಗುತ್ತಿದೆ. ರಾಜೀವ್‌ಗೌಡರನ್ನ ಬಂಧಿಸದಂತೆ ರಾಜ್ಯದ ಪ್ರಭಾವಿ ಮಂತ್ರಿ ಪೊಲೀಸರ ಮೇಲೆ ಒತ್ತಡ ಹಾಕಿರುವ ಆರೋಪ ಕೇಳಿ ಬಂದಿದೆ.

15 ಕೋಟಿ ರೂ ಮೌಲ್ಯದ ಭೂಮಿ ಕಬಳಿಸಿದ್ರಾ ರಾಜೀವ್‌?

ಧಮ್ಕಿ ಕೇಸ್‌ನಿಂದ ರಾಜೀವ್‌ಗೌಡರ ಅಸಲಿತ್ತು ಬಯಲಾಗುತ್ತಿದ್ದಂತೆ ಒಂದೊಂದೇ ಅಕ್ರಮಗಳು ಕೂಡ ಹೊರಬರುತ್ತಿವೆ. ಇವರ ವಿರುದ್ಧ 15 ಕೋಟಿ ರೂಪಾಯಿ ಮೌಲ್ಯದ ಭೂಮಿ ಕಬಳಿಸಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಪೂರ್ವ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿರುವ 15 ಕೋಟಿ ರೂ ಮೌಲ್ಯದ 1 ಎಕರೆ 18 ಗುಂಟೆ ಭೂಮಿ ರಾಜೀವ್ ಗೌಡ ಕಬಳಿಸಿದ್ದಾರೆ ಅಂತಾ ಆಶಾಲತಾ ಅನ್ನೋರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ನಿಂದನೆ ಪ್ರಕರಣ: ಬ್ಯಾನರ್ ತೆಗೆಸೋಕೆ ಇತ್ತು ಬಲವಾದ ಕಾರಣ

ಇನ್ನು ಮಂಡೂರಿನ ಸುತ್ತಮುತ್ತ ಜನರಿಗೆ ಇವರು ಮಾಡಿರುವ ವಂಚನೆ ಬಗ್ಗೆ ಭಿತ್ತಿಪತ್ರ ಮಾಡಲಾಗಿದ್ದು, ಶಿಡ್ಲಘಟ್ಟದಲ್ಲಿ ವಿತರಿಸಲಾಗ್ತಿದೆ. ಇದರ ನಡುವೆ ಹಲವು ಸಂಘಟನೆಗಳು ಪೌರಾಯುಕ್ತರ ಕಚೇರಿಗೆ ತೆರಳಿದ ಅಮೃತಾರಿಗೆ ಧೈರ್ಯ ತುಂಬುವ ಕೆಲಸ ಮಾಡಿವೆ. ರೇಷ್ಮೆ ಸೀರೆ, ಬಳೆ ಹರಿಸಿನ ಕುಂಕಮ ಸೇರಿದಂತೆ ಬಾಗಿನ ಕೊಟ್ಟು ಬೆಂಬಲಕ್ಕೆ ನಿಂತಿದ್ದಾರೆ. ಜನರ ಪ್ರೀತಿಗೆ ಅಮೃತಾ ಭಾವುಕರಾದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಅಸ್ಸಾಂನ ಸಾಂಪ್ರದಾಯಿಕ ಸೆರ್ಜಾ ವಾದ್ಯ ನುಡಿಸಿದ ಪ್ರಧಾನಿ ಮೋದಿ – Kannada News | PM Narendra Modi tries his hand at the Serja a traditional musical instrument of the Bodo community

ಗುವಾಹಟಿ, ಜನವರಿ 17: ಅಸ್ಸಾಂನ ಗುವಾಹಟಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂ ಸಂಸ್ಕೃತಿಗೆ ಜಾಗತಿಕ ಮನ್ನಣೆ ನೀಡುವುದಾಗಿ ಪ್ರತಿಜ್ಞೆ ಮಾಡಿದರು. ಈ ವೇಳೆ ಅಸ್ಸಾಂ ಜನರಿಗೆ ಪ್ರಧಾನಿ ಮೋದಿಗೆ (PM Modi in Guwahati) ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅಸ್ಸಾಂನ ಬಗುರುಂಬಾ ದ್ವೌ 2026 ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿಗೆ ಬೋಡೋ ಸಮುದಾಯದ ಸಾಂಪ್ರದಾಯಿಕ ಸಂಗೀತ ವಾದ್ಯವಾದ ಸೆರ್ಜಾವನ್ನು ನೀಡಲಾಯಿತು. ಈ ವೇಳೆ ಅದನ್ನು ಹೇಗೆ ನುಡಿಸುವುದೆಂದು ಕೇಳಿ ತಿಳಿದುಕೊಂಡ ಪ್ರಧಾನಿ ಮೋದಿ ಆ ವಾದ್ಯವನ್ನು ನುಡಿಸಿದರು. ಇದಕ್ಕೆ ಸಾವಿರಾರು ಕಲಾವಿದರಿಂದ ಭಾರೀ ಚಪ್ಪಾಳೆ ದೊರಕಿತು.

“2020ರ ಬೋರೋ ಶಾಂತಿ ಒಪ್ಪಂದವು ಶಾಶ್ವತ ಶಾಂತಿಯನ್ನು ತರುವಲ್ಲಿ ಸಹಾಯ ಮಾಡಿದೆ ಮತ್ತು ಅಸ್ಸಾಂನಲ್ಲಿ ಸಂಗೀತ ವಾದ್ಯಗಳ ಶಬ್ದವನ್ನು ಗುಂಡಿನ ಶಬ್ದವು ಬದಲಾಯಿಸಿದೆ. ನಾನು ಅಸ್ಸಾಮಿ ಸಂಸ್ಕೃತಿಗೆ ಸಂಬಂಧಿಸಿದ ವಸ್ತುಗಳನ್ನು ಧರಿಸಿದರೆ ಅಥವಾ ನನ್ನೊಂದಿಗೆ ಗಮೋಚಾ ಹೊಂದಿದ್ದರೆ, ಕಾಂಗ್ರೆಸ್ ನನ್ನನ್ನು ಗೇಲಿ ಮಾಡುತ್ತದೆ. ಅಸ್ಸಾಂಗೆ ಆಗಾಗ ಭೇಟಿ ನೀಡುವ, ರಾಜ್ಯದ ಅಭಿವೃದ್ಧಿಗೆ ಬದ್ಧತೆಯನ್ನು ತೋರಿಸುವ ಏಕೈಕ ಪ್ರಧಾನಿ ನಾನು ಎಂದು ಪ್ರಧಾನಿ ಮೋದಿ ಹೇಳಿದರು.

“ನಾನು ಅಸ್ಸಾಂಗೆ ಭೇಟಿ ನೀಡಿದಷ್ಟು ಬೇರೆ ಯಾವುದೇ ಪ್ರಧಾನಿ ಭೇಟಿ ನೀಡಿಲ್ಲ. ಅಸ್ಸಾಂನ ಸಂಸ್ಕೃತಿಯನ್ನು ಜಾಗತಿಕವಾಗಿ ಗುರುತಿಸಬೇಕೆಂದು ನಾನು ಬಯಸುತ್ತೇನೆ ಮತ್ತು ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದ ಮೋದಿ ಬಾಗೂರುಂಬಾ ನೃತ್ಯದ ಅಪಾರ ಸಾಂಸ್ಕೃತಿಕ ಮಹತ್ವವನ್ನು ಶ್ಲಾಘಿಸಿದರು. ಈ ಪ್ರದರ್ಶನವು ಬೋಡೋ ಸಮುದಾಯದ ಸಂಪ್ರದಾಯಗಳು, ಮೌಲ್ಯಗಳು ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ: ಸಿಎಂ, ಡಿಸಿಎಂ ಭಾಗಿ – Kannada News | Veteran congress leader Dr Bhimanna Khandre funeral with full government honours: CM, DCM attend

ಬೀದರ್, ಜನವರಿ 17: ಜಿಲ್ಲೆ ಭಾಲ್ಕಿಯ ಚಿಕಲ್ ಚೆಂದ‌ ರಸ್ತೆಯ ಜಮೀನಿನಲ್ಲಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ.ಭೀಮಣ್ಣ ಖಂಡ್ರೆ ಅವರ ಅಂತ್ಯಸಂಸ್ಕಾರ ನೆರವೇರಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆಯವರ ತಂದೆ ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಮಾಡಲಾಗುತ್ತಿದ್ದು, ಪಂಚಭೂತಗಳಲ್ಲಿ ಲೀನರಾದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಬೊಮ್ಮಾಯಿ ಸೇರಿದಂತೆ ರಾಜ್ಯದ ಹಲವು ಉನ್ನತ ರಾಜಕೀಯ ಗಣ್ಯರು, ಮುಖಂಡರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

PM Modi in Assam: ಗುವಾಹಟಿಯಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ – Kannada News | PM Modi leads roadshow in Guwahati during Assam visit

ಗುವಾಹಟಿ, ಜನವರಿ 17: ಅಸ್ಸಾಂನ ಗುವಾಹಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಸಂಜೆ ಗುವಾಹಟಿಯಲ್ಲಿ ವರ್ಣರಂಜಿತ ರೋಡ್ ಶೋನಲ್ಲಿ ಭಾಗವಹಿಸಿದರು. ಎರಡು ದಿನಗಳ ಅಸ್ಸಾಂ ಪ್ರವಾಸದ ಮೊದಲ ದಿನವಾದ ಇಂದು ಅಸ್ಸಾಂನ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯಗಳನ್ನು ಮೋದಿ ವೀಕ್ಷಿಸಿದರು.

ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಅಸ್ಸಾಂ ರಾಜಧಾನಿ ಗುವಾಹಟಿಗೆ ಆಗಮಿಸಿದರು. ತಮ್ಮ 2 ದಿನಗಳ ಪ್ರವಾಸದಲ್ಲಿ ಅವರು ಸುಮಾರು 7,000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಎಲ್‌ಜಿಬಿಐಎ) ಹೊರಗಿನ ರಾಷ್ಟ್ರೀಯ ಹೆದ್ದಾರಿ-17 ರ ಸುತ್ತಿನಿಂದ ರೋಡ್ ಶೋ ಪ್ರಾರಂಭವಾಗಿ ಸುಮಾರು 4 ಕಿಲೋಮೀಟರ್ ದೂರ ನಡೆಯಿತು. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಪಕ್ಷದ ಇತರ ಹಿರಿಯ ನಾಯಕರು ರೋಡ್ ಶೋ ಸಮಯದಲ್ಲಿ ಮೋದಿ ಅವರೊಂದಿಗೆ ಇದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ಅಸ್ಸಾಂ ಜನರಿಗೆ ಗೌರವ ಕೊಡಲಿಲ್ಲ, ವಲಸಿಗರಿಗೆ ಮಣೆ ಹಾಕಿತು; ಗುವಾಹಟಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ – Kannada News | Congress dislikes people of Assam likes foreign infiltrators PM Modi attacks opposition in Guwahati

ಗುವಾಹಟಿ, ಜನವರಿ 17: ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಗುವಾಹಟಿಗೆ ಭೇಟಿ ನೀಡಿದ್ದಾರೆ. ಬೋಡೋಲ್ಯಾಂಡ್ ಅನ್ನು ನಿರ್ಲಕ್ಷಿಸುವಲ್ಲಿ ಮತ್ತು ರಾಜಕೀಯ ಲಾಭಕ್ಕಾಗಿ ಅಕ್ರಮ ಒಳನುಸುಳುವಿಕೆಯನ್ನು ಪ್ರೋತ್ಸಾಹಿಸುವಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳ ಪಾತ್ರ ದೊಡ್ಡದು ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಬೋಡೋಲ್ಯಾಂಡ್ ಸಂಪರ್ಕವನ್ನು ಮುಖ್ಯವಾಹಿನಿಯಿಂದ ಕಡಿತಗೊಳಿಸಿತು. ಇದರಿಂದಾಗಿ ಒಳನುಸುಳುವವರು ಮತ ಬ್ಯಾಂಕ್ ರಾಜಕೀಯಕ್ಕಾಗಿ ಈ ಪ್ರದೇಶವನ್ನು ಬಳಸಿಕೊಳ್ಳಲು ಸುಲಭವಾಯಿತು ಎಂದು ಮೋದಿ ಹೇಳಿದ್ದಾರೆ.

ಅಸ್ಸಾಂ ರಾಜ್ಯದಲ್ಲಿ ಒಂದು ಕಾಲದಲ್ಲಿ ಹತ್ಯೆಗಳು ನಿಯಮಿತವಾಗಿತ್ತು. ಇಂದು, ಅಸ್ಸಾಂ ರಾಜ್ಯವು ಅದರ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಣ್ಣಗಳಿಂದ ತುಂಬಿದೆ. ಬಿಜೆಪಿಯ ಆಡಳಿತದಲ್ಲಿ ಅಸ್ಸಾಂನ ರೂಪಾಂತರವಾಗಿದೆ. ಭೂತಕಾಲದ ಹಿಂಸಾತ್ಮಕತೆಯನ್ನು ಈಗ ನಡೆಯುತ್ತಿರುವ ಸಾಂಸ್ಕೃತಿಕ ಪುನರುಜ್ಜೀವನದೊಂದಿಗೆ ಹೋಲಿಸಿ ನೋಡಿದರೆ ಆ ಬದಲಾವಣೆ ತಿಳಿಯುತ್ತದೆ. ಅಸ್ಸಾಂನಲ್ಲಿ ಪ್ರತಿಧ್ವನಿಸುತ್ತಿದ್ದ ಗುಂಡೇಟಿನ ಶಬ್ದಗಳ ಬದಲಾಗಿ ಈಗ ಶಾಂತಿ ಮತ್ತು ಸ್ಥಿರತೆಯನ್ನು ಸಂಕೇತಿಸುವ ಸಂಗೀತ ವಾದ್ಯಗಳ ಶಬ್ದಗಳು ಕೇಳಿಬರುತ್ತಿವೆ ಎಂದು ಮೋದಿ ಬಣ್ಣಿಸಿದರು.

ಇದನ್ನೂ ಓದಿ: Vande Bharat Sleeper Train: ಬಂಗಾಳದ ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಭೂಪೇನ್ ಹಜಾರಿಕಾ ಅವರಿಗೆ ಭಾರತ ರತ್ನ ನೀಡುವುದನ್ನು ವಿರೋಧಿಸಿದ್ದು ಕಾಂಗ್ರೆಸ್ ಪಕ್ಷ. ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಸೌಲಭ್ಯವನ್ನು ಸ್ಥಾಪಿಸುವುದನ್ನು ಕಾಂಗ್ರೆಸ್ ಪಕ್ಷವು ವಿರೋಧಿಸಿತು. ಕಾಂಗ್ರೆಸ್ ಪಕ್ಷವು ಅಸ್ಸಾಂ ಜನರನ್ನು ಇಷ್ಟಪಡುವುದಿಲ್ಲ. ಅವರು ವಿದೇಶಿ ನುಸುಳುಕೋರರನ್ನು ಪ್ರೀತಿಸುತ್ತಾರೆ. ಏಕೆಂದರೆ ಅವರು ಇಲ್ಲಿಗೆ ಬಂದು ಕಾಂಗ್ರೆಸ್ ಪಕ್ಷದ ಕಟ್ಟಾ ಬೆಂಬಲಿಗರಾಗುತ್ತಾರೆ. ಅದಕ್ಕಾಗಿಯೇ ಕಾಂಗ್ರೆಸ್ ನುಸುಳುಕೋರರನ್ನು ಪ್ರೋತ್ಸಾಹಿಸಿತು. ಆದರೆ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಪ್ರಸ್ತುತ ಬಿಜೆಪಿ ಸರ್ಕಾರವು ಲಕ್ಷಾಂತರ ಬಿಘಾ ಅತಿಕ್ರಮಣಗೊಂಡ ಭೂಮಿಯನ್ನು ಮುಕ್ತಗೊಳಿಸುತ್ತಿದೆ ಎಂದು ಮೋದಿ ಹೇಳಿದರು.

ಬೋಡೋ ಸಮುದಾಯದ ಸಾಂಪ್ರದಾಯಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಅಸ್ಸಾಂಗೆ ಆಗಾಗ ಭೇಟಿ ನೀಡುವುದು ಅಸ್ಸಾಂ ರಾಜ್ಯದ ಅಭಿವೃದ್ಧಿಗೆ ತಮ್ಮ ಬದ್ಧತೆಯ ಸಂಕೇತವೆಂದು ಹೇಳಿದರು. ಕಾಂಗ್ರೆಸ್ ಬೋಡೋಲ್ಯಾಂಡ್ ಅನ್ನು ನಿರ್ಲಕ್ಷಿಸುತ್ತಿದೆ ಮತ್ತು ಒಳನುಸುಳುವಿಕೆ ಸಮಸ್ಯೆಗಳೊಂದಿಗೆ ರಾಜಕೀಯ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಟೀಕಿಸಿದರು.

ಇದನ್ನೂ ಓದಿ: PM Modi in Assam: ಗುವಾಹಟಿಯಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲು, ಪ್ರಧಾನಿ ಮೋದಿ ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ನಡೆದ ಭವ್ಯ ರೋಡ್ ಶೋನಲ್ಲಿ ಭಾಗವಹಿಸಿದರು. ಸಾವಿರಾರು ಉತ್ಸಾಹಿ ಬೆಂಬಲಿಗರು ಬೀದಿಗಳಲ್ಲಿ ನೆರೆದು, ಜೋರಾಗಿ ಘೋಷಣೆಗಳು ಮತ್ತು ಧ್ವಜಗಳನ್ನು ಬೀಸುವ ಮೂಲಕ ಪ್ರಧಾನಿಯನ್ನು ಸ್ವಾಗತಿಸಿದರು. ರೋಡ್ ಶೋ ಸಮಯದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರಧಾನಿ ಮೋದಿ ಅವರೊಂದಿಗೆ ಇದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AUS: ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ – Kannada News | India Women’s Cricket Squad for Australia Tour Announced: Kaur Leads, shreyank Patil in T20Is

ಪ್ರಸ್ತುತ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ನಡುವೆ ಭಾರತ ಮಹಿಳಾ ತಂಡದ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ವನಿತಾ ಪಡೆ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಎರಡೂ ತಂಡಗಳನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದು, ಎಂದಿನಂತೆ ಸ್ಮೃತಿ ಮಂಧಾನ ತಂಡದ ಉಪನಾಯಕತ್ವವಹಿಸಿಕೊಂಡಿದ್ದಾರೆ. ಭಾರತದ ಈ ಪ್ರವಾಸ ಫೆಬ್ರವರಿ 15 ರಿಂದ ಆರಂಭವಾಗಲಿರುವ ಟಿ20 ಸರಣಿಯೊಂದಿಗೆ ಆರಂಭವಾಗಲಿದ್ದು, ಮಾರ್ಚ್​ 1 ರಂದು ನಡೆಯಲಿರುವ ಏಕದಿನ ಸರಣಿಯ ಕೊನೆಯ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಎರಡೂ ಸರಣಿಗಳಿಗೆ ಭಾಗಶಃ ಒಂದೇ ತಂಡವನ್ನು ಆಯ್ಕೆ ಮಾಡಲಾಗಿದೆ. ಖುಷಿಯ ಸಂಗತಿಯೆಂದರೆ ಟಿ20 ಸರಣಿಗೆ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.

Published On – 10:00 pm, Sat, 17 January 26

Source link

ನಾಯಿ – ನಾಗರ ಹಾವಿನ ಮಧ್ಯೆ ಬಿಗ್​ ಫೈಟ್​​​​​​​​​​​​​​​: ಸಾವನ್ನಪ್ಪಿದ ಹಾವು, ನಾಯಿ ಸ್ಥಿತಿ ಏನಾಯಿತು ನೋಡಿ? – Kannada News | Ittige Village Shock: Rottweiler Cobra Battle Leads to Both Deaths, Public Mourns

ಚಿಕ್ಕಮಗಳೂರು, ಜ.17: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ಸಾಕು ನಾಯಿ ಹಾಗೂ ನಾಗರಹಾವಿನ ನಡುವೆ ಬಿಗ್​​ ಫೈಟ್​​ ನಡೆದಿದೆ. ರಾಟ್ ವಿಲರ್ ನಾಯಿ ನಾಗರಹಾವಿನ ಜೊತೆ ಒಂದು ಗಂಟೆ ಫೈಟ್​ ಮಾಡಿದೆ. ಆದರೆ ಈ ಜಗಳದಲ್ಲಿ ನಾಗರಹಾವು ಹಾಗೂ ರಾಟ್ ವಿಲರ್ ಶ್ವಾನ ಸಾವನ್ನಪ್ಪಿದೆ. ಈ ಶ್ವಾನ ಮೊದಲು ನಾಗರ ಹಾವನ್ನು ಸಾಯಿಸಿ, ನಂತರ ತನ್ನ ಗೂಡಿಗೆ ಹೋಗಿ ಸಾವನ್ನಪ್ಪಿದೆ. ನಾಗರಹಾವು ಕಚ್ಚಿದರಿಂದ ಶ್ವಾನ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಸಾಕಿದ ಶ್ವಾನ ಹಾಗೂ ನಾಗರಹಾವು ಸಾವನ್ನಪ್ಪಿದ್ದರಿಂದ ಸ್ಥಳೀಯರಿಗೆ ಬೇಸರ ಉಂಟಾಗಿದೆ. ಗ್ರಾಮಸ್ಥರು ನಾಗಹಾವಿಗೆ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಲಸಿಗರ ಶೆಡ್​ಗೆ ನುಗ್ಗಿ ಬೆದರಿಕೆ: ಪುನೀತ್​ ಕೆರೆಹಳ್ಳಿಗೆ ಜಾಮೀನು; ಹೋರಾಟ ಆರಂಭವೆಂದ ಹಿಂದೂ ಕಾರ್ಯಕರ್ತ – Kannada News | Puneeth Kerehalli Gets Conditional Bail in Anekal; Vows to Continue Anti Immigrant Fight

ಆನೇಕಲ್, ಜನವರಿ 17: ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಪೌರತ್ವ ದಾಖಲೆಗಳನ್ನು ಪಡೆದು ಪರಿಶೀಲಿಸಿ ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದ ಆರೋಪದ ಹಿನ್ನೆಲೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನ (Puneeth Kerehalli) ಪೊಲೀಸರು ಬಂಧಿಸಿದ್ದರು. ಕೆರೆಹಳ್ಳಿ ಬಂಧನದ ಬಳಿಕ ಠಾಣೆ ಮುಂದೆ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಇದೀಗ ಪುನೀತ್ ಕೆರೆಹಳ್ಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಮತ್ತವರ ತಂಡ ಕಳೆದ ಕೆಲ ದಿನಗಳಿಂದ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಬಿಂಗೀಪುರ ಗ್ರಾಮದಲ್ಲಿ ಶಂಕಿತ ಬಾಂಗ್ಲಾ ವಲಸಿಗರು ಇರುವ ಬಗ್ಗೆ ಪುನೀತ್ ಕೆರೆಹಳ್ಳಿ ತಂಡ ತೆರಳಿದ್ದರು. ಅಲ್ಲಿದ್ದ ವಲಸೆ ಕಾರ್ಮಿಕರ ದಾಖಲೆಗಳನ್ನ ಪರಿಶೀಲನೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದಿಂದ ಬರೋ ರೈಲುಗಳಲ್ಲೇ ಬರ್ತಾರಾ ಬಾಂಗ್ಲಾ ಅಕ್ರಮ ವಲಸಿಗರು? ಬೆಂಗಳೂರಿನ ಭದ್ರತೆಗೆ ಭಾರಿ ಆತಂಕ

ಇದಾದ ಬಳಿಕ ಜಾಗದ ಮಾಲೀಕ ಸಿದ್ದೇಶ್ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ, ಡಾ.ನಾಗೇಂದ್ರಪ್ಪ ಸೇರಿದಂತೆ ಇತರರ ವಿರುದ್ಧ ವಲಸೆ ಕಾರ್ಮಿಕರ ಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಕೇಳಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಬನ್ನೇರುಘಟ್ಟ ಪೊಲೀಸರು ತಡರಾತ್ರಿ ಪುನೀತ್ ಕೆರೆಹಳ್ಳಿಯನ್ನ ಬಂಧಿಸಿ ಠಾಣೆಗೆ ಕರೆತಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ಠಾಣೆ ಬಳಿ ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿ ಬಾಂಗ್ಲಾ ವಲಸಿಗರಿಗೆ ಇರಲು ಸ್ಥಳ ನೀಡಿದ ಜಾಗದ ಮಾಲೀಕನ ಮೇಲೆ ಕ್ರಮವಾಗಬೇಕೆಂದು ಒತ್ತಾಯಿಸಿದರು.

ಇನ್ನು ಪುನೀತ್ ಕೆರೆಹಳ್ಳಿಯನ್ನ ವಿಚಾರಣೆ ನಡೆಸಿದ ಬನ್ನೇರುಘಟ್ಟ ಪೊಲೀಸರು ತದನಂತರ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ಯ ಪುನೀತ್ ಕೆರೆಹಳ್ಳಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು ತಲಾ 10 ಸಾವಿರ ರೂ ನಗದು ಶ್ಯೂರಿಟಿ ಹಾಗೂ ಪರ್ಸನಲ್ ಬಾಂಡ್ ಷರತ್ತು ವಿಧಿಸಲಾಗಿದೆ.

ಬಾಂಗ್ಲಾ ವಲಸಿಗರ ವಿರುದ್ಧ ನಮ್ಮ ಹೋರಾಟ ಹೋರಾಟ: ಪುನೀತ್ ಕೆರೆಹಳ್ಳಿ

ಜಾಮೀನು ಪಡೆದು ಕೋರ್ಟ್​​ನಿಂದ ಹೊರಬರುತ್ತಿದ್ದಂತೆ ಕಾರ್ಯಕರ್ತರು ಘೋಷಣೆ ಕೂಗಿ ಸಂಭ್ರಮಿಸಿದರು. ಇನ್ನೂ ಜಾಮೀನು ಸಿಕ್ಕ ಬಳಿಕ ಮಾತನಾಡಿದ ಪುನೀತ್ ಕೆರೆಹಳ್ಳಿ, ಬಾಂಗ್ಲಾ ವಲಸಿಗರ ವಿರುದ್ಧ ನಮ್ಮ ಹೋರಾಟ ಅಂತ್ಯ ಅಲ್ಲ, ಇಂದಿನಿಂದಲೇ ಹೋರಾಟ ಆರಂಭವಾಗಿದೆ. ಕಾಂಗ್ರೆಸ್ ಸರ್ಕಾರ ಅಕ್ರಮ ಬಾಂಗ್ಲಾ ವಲಸಿಗರ ಪರವಾಗಿದೆ, ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ ಹಚ್ಚುವ ಕೆಲಸ ಮಾಡಿದ್ದೇವೆ. ಎಡಪಂಥೀಯರ ಒತ್ತಡಕ್ಕೆ ಮಣಿದು ಸರ್ಕಾರ ರಾತ್ರಿ ವೇಳೆ ಬಂಧಿಸಿದೆ. ಠಾಣೆಯಲ್ಲೇ ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳಿವೆ, ಅದ್ರೂ ಕೂಡ ಬಂಧನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಉಪವಿಭಾದಲ್ಲಿ 34 ಮಂದಿ ಬಾಂಗ್ಲಾ ಅಕ್ರಮ ವಲಸಿಗರು ಪತ್ತೆ

ಸದ್ಯ ಪುನೀತ್ ಕೆರೆಹಳ್ಳಿ ಮತ್ತವರ ತಂಡಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಬಾಂಗ್ಲಾ ವಲಸಿಗರ ವಿರುದ್ಧ ಹೋರಾಟ ನಿಲ್ಲುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ವಲಸೆ ಕಾರ್ಮಿಕರಿಗೆ ಪುನೀತ್ ಕೆರೆಹಳ್ಳಿ ತಂಡ ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸರ್ಕಾರ ಮತ್ತು ಪೊಲೀಸರು ಯಾವ ರೀತಿ ಕ್ರಮಕೈಗೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link