ಬ್ಯಾನರ್ ಗಲಭೆ: ನಾಳೆ ಬಳ್ಳಾರಿಗೆ ಬಿಜೆಪಿ ನಾಯಕರ ದಂಡು; ಮದ್ಯ ಮಾರಾಟ ಬ್ಯಾನ್ – Kannada News | BJP rally condemns banner riots: Sale of liquor banned in Bellari tomorrow
ಬಳ್ಳಾರಿ, ಜನವರಿ 16: ಬಳ್ಳಾರಿ ಬ್ಯಾನರ್ ಗಲಾಟೆ (Bellari Riots) ಬಿಜೆಪಿಗೆ ದೊಡ್ಡ ಅಸ್ತ್ರವಾಗಿದೆ. ಗುಂಡೇಟಿಗೆ ಓರ್ವ ಕಾರ್ಯಕರ್ತ ಸಾವನ್ನಪ್ಪಿರುವ ವಿಚಾರವನ್ನೇ ಮುಂದಿಟ್ಕೊಂಡು ಸರ್ಕಾರದ ವಿರುದ್ಧ ಸಮರಕ್ಕೆ ರೆಡ್ಡಿ ಮತ್ತು ಶ್ರೀರಾಮುಲು ಸಜ್ಜಾಗಿದ್ದಾರೆ. ಹೀಗಾಗಿ ನಗರದಲ್ಲಿ ನಾಳೆ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಲಿದೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಈ ಬೆನ್ನಲ್ಲೇ ಇದೀಗ ಮದ್ಯ ಮಾರಾಟ ನಿಷೇಧ (liquor ban) ಮಾಡಿ ಬಳ್ಳಾರಿ ಡಿಸಿ ನಾಗೇಂದ್ರ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಬಳ್ಳಾರಿ…