ಗದಗ, ಜನವರಿ 16: ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಕಾರಣ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಬಳಿ ನಡೆದಿದೆ. ಅತಿವೇಗದಲ್ಲಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ಸವಾರ ಸುಮಾರು ಹತ್ತು ಅಡಿ ಎತ್ತರಕ್ಕೆ ಹಾರಿಬಿದ್ದಿದ್ದಾನೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎರಡು ದಿನಗಳ ಹಿಂದೆ ನಡೆದ ಅಪಘಾತ ತಡವಾಗಿ ಬೆಳಕಿಗೆ ಬಂದಿದೆ. ಗೌಸ್ಮುದ್ದೀನ್ ಒಂಟಿ (27), ಫಾತಿಮಾ ಗೌಸ್ಮುದ್ದೀನ್ ಒಂಟಿ (53), ಖುಬುದ್ದೀನ್ ಒಂಟಿ (5), ಗಂಗವ್ವ ನಾಯ್ಕರ್ (75) ಮತ್ತು ಭೀಮಪ್ಪ ನಾಯ್ಕರ್ (80) ಘಟನೆಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ನವದೆಹಲಿ, ಜನವರಿ 16: ಸೌರಶಕ್ತಿ ಮತ್ತು ಸೌರ ಮಾರುಕಟ್ಟೆ (Solar Market) ಭಾರತದಲ್ಲಿ ಅಗಾಧವಾಗಿ ಬೆಳೆಯುತ್ತಿದೆ. ಈ ವರ್ಷ (2026) ಭಾರತ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆಯಾಗಲಿದೆ. ಸೌರ ಮಾರುಕಟ್ಟೆ ಗಾತ್ರದಲ್ಲಿ ಭಾರತ ಮೊದಲ ಬಾರಿಗೆ ಅಮೆರಿಕವನ್ನು ಹಿಂದಿಕ್ಕಲಿದೆ. ಜಾಗತಿಕವಾಗಿ ಸೌರ ಸ್ಥಾಪನೆಗಳು (Solar Installations) ಕುಸಿಯುತ್ತಿರುವಾಗ ಭಾರತದಲ್ಲಿ ಈ ಕ್ಷೇತ್ರ ಬೆಳವಣಿಗೆ ಹೊಂದುತ್ತಿರುವುದು ಗಮನಾರ್ಹ.
2026ರಲ್ಲ ಭಾರತದಲ್ಲಿ 50 ಗಿಗಾವ್ಯಾಟ್ಗೂ ಅಧಿಕ ಸೌರ ವಿದ್ಯುತ್ ಶಕ್ತಿ ಸೇರ್ಪಡೆಯಾಗುವ ನಿರೀಕ್ಷೆ ಇದೆ. 2025ಕ್ಕೆ ಹೋಲಿಸಿದರೆ ಸೌರ ಶಕ್ತಿ ಸಾಮರ್ಥ್ಯ ಶೇ. 6ರಷ್ಟು ಹೆಚ್ಚಾಗಬಹುದು. ಮನೆಗಳ ಮೇಲ್ಛಾವಣಿ ಸೋಲಾರ್ ಸ್ಥಾಪನೆಗೆ ಸರ್ಕಾರ ನೀಡುತ್ತಿರುವ ಉತ್ತೇಜನವು ಭಾರತದಲ್ಲಿ ಹೊಸ ಸೋಲಾರ್ ಕೆಪಾಸಿಟಿ ಸೇರ್ಪಡೆಗೆ ಇರುವ ಕಾರಣಗಳಲ್ಲಿ ಒಂದು.
ಜಾಗತಿಕವಾಗಿ ಸೋಲಾರ್ ಸ್ಥಾಪನೆಗಳು 2026ರಲ್ಲಿ ಮಂದಗೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ಅಮೆರಿಕದಲ್ಲಿ ಶೇ. 14ರಷ್ಟು ಕಡಿಮೆ ಆಗಬಹುದು. ಟ್ರಂಪ್ ಸರ್ಕಾರದ ಕೆಲ ನೀತಿಗಳು ಸೋಲಾರ್ ಯೋಜನೆಗಳಿಗೆ ಹಿನ್ನಡೆ ತರಬಹುದು. ಒಂದೆಡೆ, ಅಮೆರಿಕದಲ್ಲಿ ಸೌರಶಕ್ತಿ ಸ್ಥಾಪನೆ ಕಡಿಮೆಗೊಂಡರೆ, ಭಾರತದಲ್ಲಿ ಇದು ಹೆಚ್ಚಳಗೊಳ್ಳುತ್ತದೆ. ಇದರಿಂದ ಭಾರತವು ಅಮೆರಿಕವನ್ನು ಹಿಂದಿಕ್ಕಲು ಸಾಧ್ಯವಾಗಬಹುದು.
ಚೀನಾದ ಪ್ರಾಬಲ್ಯ ಮುಂದುವರಿಕೆ
ಸೌರಶಕ್ತಿಯ ವಿಚಾರಕ್ಕೆ ಬಂದರೆ ಚೀನಾ ವಿಶ್ವದ ಕಿಂಗ್. ಈ ಕ್ಷೇತ್ರದಲ್ಲಿ ಬಹುತೇಕ ಚೀನಾದ ಪಾರಮ್ಯತೆ ಇದೆ. ಕಳೆದ ವರ್ಷದ ಶೇ. 14ರಷ್ಟು ಇಳಿಮುಖವಾದರೂ 2026ರಲ್ಲಿ ಜಾಗತಿಕವಾಗಿಚೀನಾ 321 ಗಿಗಾವ್ಯಾಟ್ನಷ್ಟು ಸೌರ ನಿಯೋಜನೆ ಮಾಡಬಹುದು.
2025ರಲ್ಲಿ ಜನವರಿಂದ ನವೆಂಬರ್ವರೆಗೆ ಭಾರತ 35 ಗಿಗಾವ್ಯಾಟ್ನಷ್ಟು ಹೊಸ ಸೌರವಿದ್ಯುತ್ ಸಾಮರ್ಥ್ಯ ಸೇರಿಸಿದೆ. 2030ರಲ್ಲಿ ಪಳೆಯುಳಿಕೆಯಲ್ಲದ ಇಂಧನ ಸಾಮರ್ಥ್ಯವನ್ನು 500 ಗಿಗಾವ್ಯಾಟ್ಗೆ ಬೆಳೆಸಬೇಕೆಂಬ ಗುರಿ ಇದೆ. ಈ ನಿಟ್ಟಿನಲ್ಲಿ ಭಾರತ ದಾಪುಗಾಲು ಇಡುತ್ತಿದೆ.
ಭಾರತದ ಮಾಡ್ಯೂಲ್ ಮ್ಯಾನುಫ್ಯಾಕ್ಚರಿಂಗ್ ಕೆಪಾಸಿಟಿ ಈಗ ವರ್ಷಕ್ಕೆ 125 ಗಿಗಾವ್ಯಾಟ್ ಮುಟ್ಟಿದೆ.
ಕಾರವಾರ, ಜನವರಿ 16: ಜೆಡಿಎಸ್ (JDS) ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ (suicide) ಪ್ರಕರಣ ಇದೀಗ ಎರಡು ಗ್ರಾಮಗಳ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. ಚಿರಾಗ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬರುತ್ತಿದ್ದು, ಗ್ರಾಮಸ್ಥರು ಪರಸ್ಪರ ಸುದ್ದಿಗೋಷ್ಠಿ ನಡೆಸಿ ಸುಳ್ಳು ಆರೋಪ ಮಾಡದಂತೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ದಿನಕ್ಕೊಂದು ತಿರುವು
ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜ್ ಆತ್ಮಹತ್ಯೆ ಪ್ರಕರಣ ಸದ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಎರಡು ಕುಟುಂಬಗಳ ನಡೆವೆ ಹೋರಾಟ ನಡೆದಿತ್ತು. ಆದರೆ ಇದೀಗ ಎರಡು ಗ್ರಾಮಗಳ ಮಧ್ಯೆ ವೈಮನಸ್ಸು ಮೂಡುವ ಹಂತಕ್ಕೆ ತಲುಪಿದೆ.
ಜೆಡಿಎಸ್ ಮುಖಂಡೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಾ ಕೋಠಾರಕರ ಪುತ್ರ ಚಿರಾಗ್ ಕೋಠಾರಕರ ಕಿರುಕುಳದಿಂದ ರಿಶೇಲ್ ಡಿಸೋಜ್ ಸಾವನಪ್ಪಿದ್ದಾಳೆ ಎಂದು ಸಾಕ್ಷಿ ಸಮೇತ ಸುದ್ದಿಗೊಷ್ಠಿ ಮಾಡಿದ್ದ ಕದ್ರಾ ಗ್ರಾಮಸ್ಥರು ಹಾಗೂ ಕ್ರಿಶ್ಚಿಯನ್ ಮುಖಂಡರು, ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಚಿರಾಗ್ ಕೊಠಾರಕರ ಅತ್ಯಾಚಾರ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಆತನನ್ನು ಕೂಡಲೆ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಸುಳ್ಳು ಆರೋಪ ಮಾಡುವವರೇ ನೇರ ಹೊಣೆ
ಇನ್ನು ಕದ್ರಾ ಗ್ರಾಮಸ್ಥರ ಎಚ್ಚರಿಕೆಗೆ ಕಿನ್ನರ ಗ್ರಾಮಸ್ಥರು ತಿರುಗೇಟು ನೀಡಿದ್ದಾರೆ. ಚಿರಾಗ್ ಮತ್ತು ರಿಶೇಲ್ ನಡುವೆ ಪವಿತ್ರ ಪ್ರೀತಿ ಇತ್ತು. ರಿಶೇಲ್ ಆಗಾಗ ಚಿರಾಗ ಮನೆಗೆ ಬಂದು ಹೋಗುತ್ತಿದ್ದಳು ಎಂಬುವುದಕ್ಕೆ ಫೋಟೋ, ವಿಡಿಯೋ ಸಾಕ್ಷಿ ಇದೆ ಆದರೆ, ಇದೀಗ ರಾಜಕೀಯ ದುರಿದ್ದೇಶದಿಂದ ಚಿರಾಗ ಮೇಲೆ ಇಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮಾನಸಿಕ ಒತ್ತಡದಲ್ಲಿರುವ ಚಿರಾಗ್ ಏನಾದರೂ ಮಾಡಿಕೊಂಡರೆ ಸುಳ್ಳು ಆರೋಪ ಮಾಡುತ್ತಿರುವವರೇ ನೇರ ಹೊಣೆ ಆಗುತ್ತಾರೆ. ಅಲ್ಲದೆ ಅವರ ಮೇಲೆ ಕಾನೂನು ಹೋರಾಟ ಮಾಡಲಾಗುವುದು ಎಂದು ಕಿನ್ನರ ಗ್ರಾಮಸ್ಥೆ ಸಿಮಾ ಕೋಠಾರಕರ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇತ್ತೀಚೆಗೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ಪಿಜಿ 2026-27 ಶೈಕ್ಷಣಿಕ ವರ್ಷದ ವಿವಿಧ ಪಿಜಿ ಕೋರ್ಸ್‌ಗಳಿಗೆ ಪ್ರವೇಶದ ಕುರಿತು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 14 ರಿಂದ ಆನ್‌ಲೈನ್ ಅರ್ಜಿಗಳು ಪ್ರಾರಂಭವಾಗಿದ್ದು, ಆದಾಗ್ಯೂ, ಅಧಿಸೂಚನೆಯ ಪ್ರಕಾರ, ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಜನವರಿ 14 ರಂದು ರಾತ್ರಿ 11.50 ಕ್ಕೆ ಕೊನೆಗೊಂಡಿತ್ತು. ಈ ಆದೇಶದಲ್ಲಿ, NTA ಆನ್‌ಲೈನ್ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಇತ್ತೀಚಿನ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಜನವರಿ 20, ರವರೆಗೆ ಅವಕಾಶ ನೀಡಲಾಗಿದೆ.
ಮಾರ್ಚ್‌ನಲ್ಲಿ ನಡೆಯಲಿರುವ ಆನ್‌ಲೈನ್ ಲಿಖಿತ ಪರೀಕ್ಷೆಗಳು ದೇಶಾದ್ಯಂತ 276 ನಗರಗಳಲ್ಲಿ ಮತ್ತು ವಿದೇಶಗಳಲ್ಲಿ 16 ನಗರಗಳಲ್ಲಿ ನಡೆಯಲಿವೆ. ಈ ಪರೀಕ್ಷೆಗಳನ್ನು ಒಟ್ಟು 157 ವಿಷಯಗಳಲ್ಲಿ ನಡೆಸಲಾಗುವುದು. ದೇಶಾದ್ಯಂತ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶವು CUET ಪಿಜಿ ಪರೀಕ್ಷೆಯಲ್ಲಿ ಪಡೆದ ಶ್ರೇಣಿಯನ್ನು ಆಧರಿಸಿರುತ್ತದೆ. ಇದರಲ್ಲಿ ಕೇಂದ್ರದ ಆಶ್ರಯದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳು, ರಾಜ್ಯ ಮಟ್ಟದ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿವೆ. ಈ ಪ್ರವೇಶ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುತ್ತದೆ. ಪದವಿ ಪಡೆದ ಯಾವುದೇ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು. ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಯಾವುದೇ ವಯಸ್ಸಿನ ಮಿತಿಯಿಲ್ಲ. ಆದಾಗ್ಯೂ, ಅರ್ಜಿ ಶುಲ್ಕದ ಅಡಿಯಲ್ಲಿ, ಸಾಮಾನ್ಯ ಅಭ್ಯರ್ಥಿಗಳು 1400 ರೂ., ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳು 1200 ರೂ., ಎಸ್‌ಸಿ/ಎಸ್‌ಟಿ/ತೃತೀಯ ಲಿಂಗ ಅಭ್ಯರ್ಥಿಗಳು 1100 ರೂ. ಮತ್ತು ದಿವ್ಯಾಂಗ ಅಭ್ಯರ್ಥಿಗಳು 1000 ರೂ. ಪಾವತಿಸಬೇಕಾಗುತ್ತದೆ.
ಲಿಖಿತ ಪರೀಕ್ಷೆಯು ಒಟ್ಟು 74 ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಪ್ರಶ್ನೆಗೆ 4 ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಅವಧಿ 90 ನಿಮಿಷಗಳು. ಪ್ರತೀ ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕಗಳು ಇರುತ್ತವೆ.
ಮಂಡ್ಯ, ಜನವರಿ 16: ಇನ್ನೇನು 5 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕನನ್ನು ಆಸ್ತಿ ವಿಚಾರಕ್ಕೆ ಆತನ ಸಹೋದರನೇ ತನ್ನ ಮಕ್ಕಳ ಜೊತೆ ಸೇರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಯೋಗೇಶ್ ಮೃತ ದುರ್ದೈವಿಯಾಗಿದ್ದು, ಮನೆಯ ಕೊಟ್ಟಿಗೆಯಲ್ಲಿದ್ದ ಈತನನ್ನು ಚಾಕುವಿನಿಂದ 2Oಕ್ಕೂ ಹೆಚ್ಚು ಬಾರಿ ಚುಚ್ಚಿ ಸಾಯಿಸಲಾಗಿದೆ. ಲಿಂಗರಾಜು ಮತ್ತು ಅವನ ಮಕ್ಕಳಾದ ಭರತ್ ಹಾಗೂ ದರ್ಶನ್ ಕೊಲೆ ಆರೋಪಿಗಳಾಗಿದ್ದು, ಘಟನೆ ಬಳಿಕ ತಲೆಮರೆಸಿಕೊಂಡಿದ್ದಾರೆ.
ತಂದೆ ಚಿನ್ನಮರಿಗೌಡ ನಿಧನದ ಬಳಿಕ ಎಲ್ಲ ವ್ಯವಹಾರಗಳನ್ನ ಹಿರಿಯಣ್ಣನಾದ ಲಿಂಗರಾಜು ನೋಡಿಕೊಳ್ಳುತ್ತಿದ್ದ. ಪಿತ್ರಾರ್ಜಿತವಾಗಿ ಬಂದಿದ್ದ 12 ಎಕರೆ ಕೃಷಿ ಭೂಮಿಯನ್ನು ತನ್ನ ತಾಯಿ ಹೆಸರಿಗೆ ಪೌತಿ ಖಾತೆ ಮಾಡಿಸುವ ಬದಲು ತನ್ನ ಹೆಸರಿಗೇ ಲಿಂಗರಾಜು ವರ್ಗಾವಣೆ ಮಾಡಿಸಿಕೊಂಡಿದ್ದ. ಅಲ್ಲದೆ ತಾಯಿ ಹೆಸರಿನಲ್ಲಿ ಖರೀದಿಸಿದ್ದ 6 ಎಕರೆ ಜಮೀನು, ಮೈಸೂರು ಮತ್ತು ಮಂಡ್ಯದಲ್ಲಿದ್ದ 4 ನಿವೇಶನಗಳನ್ನೂ ತನ್ನ ಹೆಸರಿಗೆ ಖಾತೆ ಮಾಡಿಕೊಂಡಿದ್ದ. ಮುಂದೆ ನಮ್ಮ ಪಾಲಿನ ಆಸ್ತಿಯನ್ನ ನಮ್ಮಣ್ಣ ನೀಡುತ್ತಾನೆ ಎಂದು ಯೋಗೇಶ್ ಸೇರಿದಂತೆ ಇಬ್ಬರು ಸಹೋದರರು ಹಾಗೂ ಸಹೋದರಿಯರು ನಂಬಿಕೊಂಡಿದ್ದರು. ಆದರೆ, ಅವರಿಗೆಲ್ಲ ಮೋಸ ಮಾಡಿ ಲಿಂಗರಾಜು ತನ್ನ ಪತ್ನಿ ಹೆಸರಿಗೆ ದಾನಪತ್ರ ಮಾಡುವ ಮೂಲಕ ಸಂಪೂರ್ಣ ಆಸ್ತಿಯನ್ನು ವರ್ಗಾವಣೆ ಮಾಡಿಸಿದ್ದ. ಈ ವಿಚಾರ ತಿಳಿದು ಸಹೋದರಾದ ಕೆಂಪರಾಜು, ಯೋಗೇಶ್ ಪ್ರಶ್ನೆ ಮಾಡಿದಾಗ ಲಿಂಗರಾಜು ಜಗಳ ತೆಗೆದು ಹಲ್ಲೆ ಮಾಡಿದ್ದ. ಬಳಿಕ ಆಸ್ತಿ ವಿಚಾರವಾಗಿ ಯೋಗೇಶ್ ನ್ಯಾಯಾಲಯದ ಮೊರೆಯೋಗಿದ್ದ. ಯೋಗೇಶ್ ಹತ್ಯೆ ಮಾಡಿದ್ರೆ ಉಳಿದವರು ಸೈಲೆಂಟ್ ಆಗುತ್ತಾರೆ ಎಂದು ಕೊಲೆ ಮಾಡಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.
ಕೊಲೆಯಾದ ಯೋಗೇಶ್ಗೆ ಮದುವೆ ಕೂಡ ನಿಶ್ಚಯವಾಗಿದ್ದು, ನೆಂಟರಿಸ್ಟರಿಗೆಲ್ಲ ಆಹ್ವಾನ ಪತ್ರಿಕೆ ನೀಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೇ ತಿಂಗಳು 21ರಂದು ಹಸೆಮಣೆ ಏರಬೇಕಿತ್ತು. ಆದರೆ ಅಣ್ಣನ ಅಟ್ಟಹಾಸಕ್ಕೆ ಮದುವೆಗೂ ಮೊದಲೇ ತಮ್ಮ ಬಲಿಯಾಗಿದ್ದಾನೆ. ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಅಣ್ಣ ಲಿಂಗರಾಜು ಹೆಸರನ್ನೂ ಯೋಗೇಶ್ ಹಾಕಿಸಿದ್ದು, ಮುಂದೆ ನಿಂತು ಮದುವೆ ಮಾಡಬೇಕಿದ್ದ ಅಣ್ಣನೇ ತನ್ನ ಮಕ್ಕಳ ಜೊತೆ ಸೇರಿ ಯೋಗೇಶ್ನ ಪರಲೋಕಕ್ಕೆ ಕಳುಹಿಸಿದ್ದಾನೆ. ಇನ್ನು ಘಟನೆಯಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಹಾಗೂ ಸಂಬಂಧಿಕರು ಆರೋಪಿ ಲಿಂಗರಾಜು ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳನ್ನು ಧ್ವಂಸಗೊಳಿಸಿರುವ ಪ್ರಸಂಗವೂ ನಡೆದಿದೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆ ಮರೆಸಿಕೊಂಡಿರುವ ಆರೋಪಿಗಳಿಗೆ ಶೋಧ ಶುರುಮಾಡಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದ್ದಾರೆ. ಈ ನಡುವೆ ತಮ್ಮ ಮಡದಿ ಅನುಷ್ಕಾ ಶರ್ಮಾ ಜೊತೆಗೂಡಿ ಭೂಮಿ ಖರೀದಿಯ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಮತ್ತು ಮಡದಿ ಅನುಷ್ಕಾ ಶರ್ಮಾ ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ 5 ಎಕರೆ ಭೂಮಿಯನ್ನು ಖರೀದಿಸಿದ್ದಾರೆ.
ಈ ಒಪ್ಪಂದವನ್ನು ರಿಯಲ್ ಎಸ್ಟೇಟ್ ಮಾಹಿತಿ ಕಂಪನಿ CRE ಮ್ಯಾಟ್ರಿಕ್ಸ್ ಬಹಿರಂಗಪಡಿಸಿದೆ. ವರದಿಯ ಪ್ರಕಾರ, ದಂಪತಿಗಳು ಜಂಟಿಯಾಗಿ 5 ಎಕರೆ ಭೂಮಿ ಖರೀದಿಸಿದ್ದಾರೆ. ಇದರ ಮೌಲ್ಯ ಸುಮಾರು 37.86 ಕೋಟಿ ರೂ ಎನ್ನಲಾಗುತ್ತಿದೆ. ಮುಂಬೈ ಬಳಿ ಇರುವ ಈ ಪ್ರದೇಶ ರಜಾ ದಿನಗಳನ್ನು ಕಳೆಯಲೂ ಸೂಕ್ತ ಸ್ಥಳವಾಗಿದ್ದು, ವಿರೂಷ್ಕ ದಂಪತಿಗಳು ಈ ಸ್ಥಳದಲ್ಲಿ ತಮ್ಮ ಎರಡನೇ ಮನೆಯನ್ನು ನಿರ್ಮಿಸಿಲು ಚಿಂತಿಸಿದ್ದಾರೆ.
ಅಲಿಬಾಗ್‌ನಲ್ಲಿ ಕೊಹ್ಲಿ ದಂಪತಿಗಳು ಎರಡನೇ ಬಾರಿಗೆ ಭೂಮಿ ಖರೀದಿಸಿದ್ದಾರೆ. ಇದಕ್ಕೂ ಮೊದಲು ಸುಮಾರು 1.474 ಹೆಕ್ಟೇರ್ ಮತ್ತು ಸುಮಾರು 0.627 ಹೆಕ್ಟೇರ್ ಭೂಮಿಯನ್ನು ಖರೀದಿ ಮಾಡಿದ್ದರು. ದಾಖಲೆಗಳ ಪ್ರಕಾರ, ಈ ಭೂಮಿ ರಾಯಗಡ ಜಿಲ್ಲೆಯ ಅಲಿಬಾಗ್ ಪ್ರದೇಶದ ಆವಾಸ್ ಬೀಚ್ ಬಳಿಯ ಜಿರಾದ್ ಗ್ರಾಮದಲ್ಲಿದೆ. ಆಸ್ತಿಯನ್ನು ಜನವರಿ 2026 ರಲ್ಲಿ ನೋಂದಣಿ ಮಾಡಿಸಲಾಗಿದ್ದು, ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕವನ್ನು ಸಹ ಪಾವತಿಸಲಾಗಿದೆ.
ಮೇಲೆ ಹೇಳಿದಂತೆ ಅಲಿಬಾಗ್ ರಜಾ ದಿನಗಳನ್ನು ಕಳೆಯಲು ಸೂಕ್ತ ಸ್ಥಳವಾಗಿದ್ದು, ಈ ಭಾಗದಲ್ಲಿ ಕ್ರಿಕೆಟಿಗರು, ಚಲನಚಿತ್ರ ತಾರೆಯರು ಮತ್ತು ದೊಡ್ಡ ಉದ್ಯಮಿಗಳು ಐಷಾರಾಮಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಶಾಂತ ವಾತಾವರಣ, ಶುದ್ಧ ಗಾಳಿ ಮತ್ತು ಸಮುದ್ರ ಸಮೀಪವಿರುವ ಕಾರಣ ಈ ಪ್ರದೇಶದ ಮೇಲೆ ಹಣವಂತರ ಕಣ್ಣು ಬಿದ್ದಿದೆ.
ಅಲಿಬಾಗ್ ಮುಂಬೈ, ನವಿ ಮುಂಬೈ ಮತ್ತು ಪುಣೆಯಂತಹ ಪ್ರಮುಖ ನಗರಗಳಿಗೆ ಹತ್ತಿರದಲ್ಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಅಲಿಬಾಗ್ ಅನ್ನು ಸಾಮಾನ್ಯವಾಗಿ ‘ಮಿನಿ ಗೋವಾ’ ಎಂದು ಕರೆಯಲಾಗುತ್ತದೆ. ಇದು ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ನೆಲೆಗೊಂಡಿರುವ ಒಂದು ಸುಂದರ ಪಟ್ಟಣವಾಗಿದೆ. ವಾರಾಂತ್ಯದ ಪ್ರವಾಸಗಳಿಗಾಗಿ ಜನರು ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಇದು ಮುಂಬೈನಿಂದ ಸುಮಾರು 110 ಕಿಲೋಮೀಟರ್ ದೂರದಲ್ಲಿದೆ. ಸಮುದ್ರ ಮತ್ತು ಕಡಲತೀರಗಳಿಂದ ಸುತ್ತುವರೆದಿರುವ ಈ ಸ್ಥಳವು ಸಮುದ್ರ ಪ್ರಿಯರಿಗೆ ವಿಶೇಷ ಸ್ಥಳವೆಂದು ಪರಿಗಣಿಸಲಾಗಿದೆ.
ಗಮನಾರ್ಹವಾಗಿ, ಕಳೆದ ಕೆಲವು ವರ್ಷಗಳಲ್ಲಿ ಆಸ್ತಿ ಬೆಲೆಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಇಂದು, ಅಲಿಬಾಗ್‌ನಲ್ಲಿ ಅಪಾರ್ಟ್‌ಮೆಂಟ್‌ಗಳ ಬೆಲೆ ಪ್ರತಿ ಚದರ ಅಡಿಗೆ ಸುಮಾರು 15,000 ರಿಂದ 17,000 ರೂವರೆಗೆ ಇದೆ. ಕೃಷಿ ಭೂಮಿಯ ಬೆಲೆ ಎಕರೆಗೆ 3 ಕೋಟಿಯಿಂದ 5 ಕೋಟಿಗೆ ಏರಿದೆ. ವಸತಿ ಪ್ಲಾಟ್‌ಗಳ ಬೆಲೆ ಎಕರೆಗೆ 8 ಕೋಟಿಯಿಂದ 10 ಕೋಟಿಗೆ ತಲುಪಿದೆ. ಇದು ಈ ಪ್ರದೇಶವನ್ನು ಕೇವಲ ಪ್ರವಾಸಿ ತಾಣವನ್ನಾಗಿ ಮಾತ್ರವಲ್ಲದೆ ಐಷಾರಾಮಿ ರಿಯಲ್ ಎಸ್ಟೇಟ್ ಹೂಡಿಕೆಯ ಪ್ರಮುಖ ಕೇಂದ್ರವನ್ನಾಗಿ ಮಾಡಿದೆ.
ಈ ಕಾರಣಗಳಿಂದಾಗಿ, ವಿರಾಟ್ ಮತ್ತು ಅನುಷ್ಕಾ ಅವರಂತಹ ಸೆಲೆಬ್ರಿಟಿಗಳು, ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ಇಲ್ಲಿ ಆಸ್ತಿಗಳನ್ನು ಖರೀದಿಸಿದ್ದಾರೆ. ಪರಿಣಾಮವಾಗಿ, ಈ ಪ್ರದೇಶದಲ್ಲಿ ಆಸ್ತಿ ಬೆಲೆಗಳು ಗಗನಕ್ಕೇರುತ್ತಿವೆ. ಗೌಪ್ಯತೆ, ಭದ್ರತೆ ಮತ್ತು ಐಷಾರಾಮಿ ಜೀವನಶೈಲಿ ಅಲಿಬಾಗ್ ಅನ್ನು ಜನಪ್ರಿಯ ತಾಣವನ್ನಾಗಿ ಮಾಡಿದೆ. ಇಂದು, ಭಾರತದ ಕೋಟ್ಯಾಧಿಪತಿಗಳು ಮತ್ತು ಚಲನಚಿತ್ರ ತಾರೆಯರು ಇಲ್ಲಿ ಮನೆಗಳನ್ನು ನಿರ್ಮಿಸುತ್ತಿದ್ದಾರೆ.
ಕಾವ್ಯಾ ಶೈವ ಹಾಗೂ ಗಿಲ್ಲಿ ನಟ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಮೂಡಿದೆ. ಸದಾ ‘ಕಾವು.. ಕಾವು..’ ಎಂದು ಗಿಲ್ಲಿ ಓಡಾಡುತ್ತಾ ಇರುತ್ತಾರೆ. ಈಗ ಬಿಗ್ ಬಾಸ್ ಫಿನಾಲೆ ಹಂತ ತಲುಪಿದೆ. ಈ ವೇಳೆ ಕಾವ್ಯಾ ಒಂದು ಮಾತನ್ನು ಹೇಳಿದ್ದರು. ‘ತಮ್ಮ ಮದುವೆಗೆ ಏನಾದರೂ ತೊಂದರೆ ಆದರೆ ಅದಕ್ಕೆ ಗಿಲ್ಲಿ ಕಾರಣ’ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ. ಈ ಫನ್ ವಿಡಿಯೋ ವೈರಲ್ ಆಗಿದೆ. ‘ಗಿಲ್ಲಿನೇ ಮದುವೆ ಆಗಿ’ ಎಂದು ಕೆಲವರು ಬೇಡಿಕೆ ಇಟ್ಟಿದ್ದಾರೆ.
ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಅವರ ಹೆಸರು ಈಗ ಹೊಸ ವಿವಾದದಲ್ಲಿ ಸಿಲುಕಿಕೊಂಡಿದೆ. ದೇಶದ ಹಲವು ಕಡೆಗಳಲ್ಲಿ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ನಡುವೆ ಘರ್ಷಣೆ ನಡೆಯುತ್ತಿದೆ. ಮಹಾರಾಷ್ಟ್ರ ಕೂಡ ಇದಕ್ಕೆ ಹೊರತಾಗಿಲ್ಲ. ಮರಾಠಿ (Marathi) ಮಾತನಾಡಿಲ್ಲ ಎಂದು ಕೆಲವರು ಗಲಾಟೆ ಮಾಡಿದ ಪ್ರಕರಣಗಳು ಹಲವು ಬಾರಿ ದಾಖಲಾಗಿವೆ. ಈಗ ಆಮಿರ್ ಖಾನ್ ಅವರ ನೀಡಿದ ಒಂದು ಹೇಳಿಕೆ ವೈರಲ್ ಆಗಿದೆ. ಅದರಿಂದಾಗಿ ಮತ್ತೆ ಮರಾಠಿ ವರ್ಸಸ್ ಹಿಂದಿ (Hindi) ಚರ್ಚೆಗೆ ಕಿಡಿ ಹೊತ್ತಿಸಿದಂತಾಗಿದೆ.
ಮುಂಬೈ ಕಾರ್ಪೋರೇಷನ್ ಚುನಾವಣೆಯಲ್ಲಿ ಆಮಿರ್ ಖಾನ್ ಅವರು ಮತ ಚಲಾಯಿಸಿದರು. ಮತ ಹಾಕಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮೊದಲು ಮರಾಠಿಯಲ್ಲಿ ಮಾತನಾಡಿದರು. ಬಳಿಕ ಹಿಂದಿಯಲ್ಲೂ ಹೇಳಿಕೆ ನೀಡುವಂತೆ ಮಾಧ್ಯಮದವರು ಮನವಿ ಮಾಡಿದರು. ಆದರೆ ಆಮಿರ್ ಖಾನ್ ಅವರು ‘ಹಿಂದಿಯಲ್ಲಿ ಹೇಳಬೇಕಾ? ಇದು ಮಹಾರಾಷ್ಟ್ರ’ ಎಂದು ಹೇಳಿದರು.
‘ನಿಮ್ಮ ಹೇಳಿಕೆ ದೆಹಲಿಯಲ್ಲಿ ಕೂಡ ಪ್ರಸಾರ ಆಗುತ್ತದೆ’ ಎಂದು ಮಾಧ್ಯಮದವರು ಹೇಳಿದ ಬಳಿಕ ಆಮಿರ್ ಖಾನ್ ಅವರು ಹಿಂದಿಯಲ್ಲಿ ಮಾತನಾಡಿದರು. ‘ಓಹ್ ದೆಹಲಿಯಲ್ಲೂ ಪ್ರಚಾರ ಆಗುತ್ತಾ? ಮತದಾನಕ್ಕೆ ಬಹಳ ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಎಲ್ಲರೂ ಬಂದು ಮತದಾನ ಮಾಡಿ’ ಎಂದು ಆಮಿರ್ ಖಾನ್ ಹೇಳಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಆಮಿರ್ ಖಾನ್ ಅವರು ವಾಸಿಸುತ್ತಿರುವುದು ಮಹಾರಾಷ್ಟ್ರದಲ್ಲಿ. ಆದರೆ ಈವರೆಗೂ ಅವರು ಮರಾಠಿ ಸಿನಿಮಾ ಮಾಡಿಲ್ಲ. ಅವರು ಫೇಮಸ್ ಆಗಿರುವುದು, ಹಣ ಗಳಿಸಿರುವುದು ಹಿಂದಿ ಸಿನಿಮಾದಿಂದ. ಒಂದು ವೇಳೆ ಅವರಿಗೆ ಮರಾಠಿ ಮೇಲೆ ಅಷ್ಟೊಂದು ಪ್ರೀತಿ ಇರುವುದೇ ಹೌದಾದರೆ ಮರಾಠಿಯಲ್ಲೇ ಸಿನಿಮಾ ಮಾಡಲಿ. ಬರೀ ಹಿಂದಿ ಸಿನಿಮಾ ಯಾಕೆ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ಕೆಲವರು ಆಮಿರ್ ಖಾನ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ‘ಆಮಿರ್ ಖಾನ್ ಅವರು ವ್ಯಂಗ್ಯವಾಗಿ ಆ ಹೇಳಿಕೆ ನೀಡಿದ್ದಾರೆ. ಅದನ್ನು ಅರ್ಥಮಾಡಿಕೊಳ್ಳುವ ಬುದ್ಧಿ ಈ ಜನರಿಗೆ ಇಲ್ಲ’ ಎಂಬ ಕಮೆಂಟ್ ಬಂದಿದೆ. ಒಟ್ಟಿನಲ್ಲಿ ಆಮಿರ್ ಖಾನ್ ಅವರ ಹೇಳಿಕೆಯಿಂದ ಹಿಂದಿ ವರ್ಸಸ್ ಮರಾಠಿ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಂತೆ ಆಗಿದೆ.
ಕಲಬುರಗಿ, ಜನವರಿ 16: ಸಿಬ್ಬಂದಿ ಬಳಿ ತಹಶೀಲ್ದಾರ್ ಅವರೇ ಹಣಕ್ಕಾಗಿ ಬೇಡಿಕೆ ಇಟ್ಟು ಕಿರುಕುಳ ನೀಡಿರುವ ಆರೋಪ ಕಲಬುರಗಿಯಲ್ಲಿ ಕೇಳಿಬಂದಿದ್ದು, ಜೇವರ್ಗಿ ತಹಶೀಲ್ದಾರ್ಮತ್ತು ಸಿಬ್ಬಂದಿ ನಡುವಿನ ಆಡಿಯೋ ವೈರಲ್ ಆಗಿದೆ. ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಓಪನ್ ಮೀಟಿಂಗ್ನಲ್ಲೇ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗಿದ್ದು, ಕಿರುಕುಳದಿಂದ ಬೇಸತ್ತ ಸಿಬ್ಬಂದಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರನ್ನೂ ನೀಡಿರುವ ಪ್ರಸಂಗ ನಡೆದಿದೆ.
ಸಿಬ್ಬಂದಿಗೆ ತಹಶೀಲ್ದಾರ್ ಆವಾಜ್
ನನ್ನ ಹೆಸರಿನಲ್ಲಿ ನೀವು ಹಣ ಮಾಡ್ತೀರಿ, ಹಾಗಾಗಿ ನನಗೂ ಹಣ ನೀಡಿ ಎಂದು ತಹಶೀಲ್ದಾರ್ ಮಲ್ಲಣ್ಣ ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ ಎಂದು ದೂರಲಾಗಿದೆ. ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು RI ಜವಾಬ್ದಾರಿಯೇ ಬೇಡ, ನನ್ನನು ಕಚೇರಿ ಕೆಲಸಕ್ಕೆ ಹಾಕಿ, ನನಗೆ ಹಣ ನೀಡಲು ಆಗಲ್ಲ ಎಂದ ಸಿಬ್ಬಂದಿ ಅಲವತ್ತುಕೊಂಡಿದ್ದಾರೆ. ಸರ್ಕಾರಿ ಜಯಂತಿಗಳು, ಶಾಸಕರು ಹೇಳುವ ಕೆಲಸಗಳಿಗೆಲ್ಲ ನಾವು ಹಣ ಕೊಡಬೇಕು. ನಾವು ದುಡ್ಡನ್ನು ಎಲ್ಲಿಂದ ಕೊಡೋದು? ಎಂದು ತಹಶೀಲ್ದಾರ್ ಮಲ್ಲಣ್ಣಗೆ ಸಿಬ್ಬಂದಿ ಪ್ರಶ್ನೆ ಹಾಕಿದ್ದರೂ ಎಲ್ಲಾ ಇಲಾಖೆಯವರು ಹಣ ಕೊಡ್ತಾರೆ ನೀವು ಕೊಡಿ ಎಂದು ಮಲ್ಲಣ್ಣ ಹೇಳಿದ್ದಾರೆ. ಇಲ್ಲವಾದರೆ ನಿಮ್ಮ ವಿರುದ್ಧ ತನಿಖೆಗೆ ಆದೇಶಿಸುವೆ ಎಂದು ಬೆದರಿಕೆಯನ್ನೂ ಹಾಕಿರೋದಾಗಿ ಸಿಬ್ಬಂದಿ ದೂರಿದ್ದಾರೆ.
ಇನ್ನು ತಮ್ಮ ಮೇಲೆ ಕೇಲಿಬಂದಿರುವ ಆರೋಪಗಳ ಕುರಿತು ಜೇವರ್ಗಿ ತಹಶೀಲ್ದಾರ ಮಲ್ಲಣ್ಣ ಯಲಗೋಡ್ ಪ್ರತಿಕ್ರಿಯಿಸಿದ್ದಾರೆ. 6 ತಿಂಗಳ ಹಿಂದೆ ಕನ್ನಡಭವನದಲ್ಲಿ ನಡೆದಿದ್ದ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು. ಈ ಬಗ್ಗೆ ನಾನು ಸಿಬ್ಬಂದಿ ಜೊತೆ ಸಭೆಯಲ್ಲಿ ಚರ್ಚಿಸಿದ್ದೇನೆಯೇ ಹೊರತು, ಯಾವ ಸಿಬ್ಬಂದಿ ಬಳಿಯೂ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಶರಣು ಎಂಬ ವಿಎಯನ್ನು 6 ತಿಂಗಳ ಹಿಂದೆ ಅಮಾನತು ಮಾಡಿದ್ದು, ಆತನೇ ಇದನ್ನೆಲ್ಲ ಮಾಡಿ ಎಲ್ಲ ಕಡೆ ದೂರು ಕೊಟ್ಟಿದ್ದಾನೆ. ನಾನು ಹಣ ಕೇಳಿದ್ರೆ ಎಲ್ಲ ಸಿಬ್ಬಂದಿ ಸೇರಿ ದೂರು ಕೊಡಬಹುದಾಗಿತ್ತು. ಈ ಹಿಂದಿನ ತಹಶೀಲ್ದಾರ್ ಅವರಿಗೂ ಆತ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಅದೇ ರೀತಿ ನನಗೂ ಸಹ ಬ್ಲ್ಯಾಕ್‌ಮೇಲ್ ಮಾಡಲು ಬಂದಿದ್ದಾನೆ. ಆದರೆ ಆತನ ಬೆದರಿಕೆಗೆ ನಾನು ಹೆದರಿಲ್ಲ ಎಂದು ತಿಳಿಸಿದ್ದಾರೆ.
ನವದೆಹಲಿ, (ಜನವರಿ 16): ಸಂಕ್ರಮಣದ ದಿನ ಸೂರ್ಯ ತನ್ನ ಪಥ ಬದಲಿಸಿದ್ದಾನೆ. ಆದ್ರೆ ಸಂಕ್ರಾಂತಿಗೆ (Sankranthi) ಕರ್ನಾಟಕ ಕಾಂಗ್ರೆಸ್‌ನಲ್ಲಿ (Karnataka Congress) ಪಥಬದಲಾಗಿ ಕ್ರಾಂತಿಯಾಗುತ್ತೆ ಎನ್ನುವ ಗೊಂದಲಕ್ಕೆ ತೆರೆಬಿದ್ದಿಲ್ಲ. ಅಧಿಕಾರ ಹಂಚಿಕೆಗೆ . ಮೊನ್ನೆ ಮೈಸೂರಿಗೆ (Mysuru) ಬಂದಿದ್ದ ರಾಹುಲ್ ಗಾಂಧಿಯನ್ನು (Rahul Gandhi) ವಿಮಾನ ನಿಲ್ದಾಣದಲ್ಲೇ ಸಿಎಂ, ಡಿಸಿಎಂ ಭೇಟಿ ಮಾಡಿದ್ರು. ಅದರಲ್ಲೂ ಡಿಕೆಶಿ ಪ್ರತ್ಯೇಕವಾಗಿ ನಿಂತು ಅಧಿಕಾರ ಹಂಚಿಕೆ ಗೊಂದಲವನ್ನು ಬಗೆಹರಿಸುವಂತೆ ಒತ್ತಾಯಿಸಿದ್ದರು. ಏರ್‌ಪೋರ್ಟ್ ರನ್‌ವೇನಲ್ಲಿ ಇಂತಹ ಚರ್ಚೆ ಬೇಡ. ದೆಹಲಿಗೆ ಬನ್ನಿ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅದರಂತೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ಈ ವೇಳೆ ಮೈಸೂರಿನಲ್ಲಿ ರಾಹುಲ್ ರಹಸ್ಯ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ