All posts by nagaraj11081993

Shankh Significance: ಮನೆಯಲ್ಲಿ ಶಂಖವಿದ್ದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಆಧ್ಯಾತ್ಮಿಕ ಮಹತ್ವ ತಿಳಿಯಿರಿ – Kannada News | Shankha Significance: Sanatana Dharma, Puja Benefits and Spiritual Power

ಸನಾತನ ಧರ್ಮದಲ್ಲಿ ಶಂಖವನ್ನು ಅತ್ಯಂತ ಪವಿತ್ರ ಪೂಜಾ ವಸ್ತುಗಳಲ್ಲಿ ಒಂದೆಂದು ಗೌರವದಿಂದ ಪರಿಗಣಿಸಲಾಗುತ್ತದೆ. ಪೂಜಾ ವಿಧಿಗಳಲ್ಲಿ ಶಂಖವನ್ನು ಬಳಸುವುದು ಕೇವಲ ಆಧ್ಯಾತ್ಮಿಕ ಆಚರಣೆಯಷ್ಟೇ ಅಲ್ಲ, ಮನೆ ಮತ್ತು ಮನಸ್ಸಿನಲ್ಲಿ ಶುಭ ಶಕ್ತಿಗಳ ಹರಿವನ್ನು ಹೆಚ್ಚಿಸುವುದಕ್ಕೂ ಸಹಾಯಕವಾಗಿದೆ. ಪುರಾಣಗಳ ಪ್ರಕಾರ ಸಮುದ್ರ ಮಂಥನದ ಸಂದರ್ಭದಲ್ಲಿ ಶಂಖವು ಉದ್ಭವಿಸಿದ್ದು, ಇದು ಶ್ರೀ ವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿವ್ಯ ವಸ್ತುವೆಂದು ಹೇಳಲಾಗುತ್ತದೆ. ಆದ್ದರಿಂದ ಶಂಖವು ವೈಷ್ಣವ ಪರಂಪರೆಯಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ.

ಪೂಜೆಯ ಸಮಯದಲ್ಲಿ ಶಂಖವನ್ನು ಊದುವುದನ್ನು ಶುಭೋದಯದ ಸಂಕೇತವಾಗಿ ಹಾಗೂ ಸಕಾರಾತ್ಮಕ ಶಕ್ತಿಗಳಿಗೆ ಆಹ್ವಾನವೆಂದು ಪರಿಗಣಿಸಲಾಗುತ್ತದೆ. ಶಂಖದಿಂದ ಹೊರಹೊಮ್ಮುವ ದಿವ್ಯ ಶಬ್ದವು ಮನೆಯಿಂದ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ, ಶಾಂತಿ, ನೆಮ್ಮದಿ ಮತ್ತು ಶುದ್ಧೀಕರಣದ ಸಾತ್ವಿಕ ವಾತಾವರಣವನ್ನು ನಿರ್ಮಿಸುತ್ತದೆ ಎಂಬ ನಂಬಿಕೆ ಜನಮಾನಸದಲ್ಲಿದೆ. ದೇವಾರಾಧನೆ ಆರಂಭಿಸುವಾಗ ಅಥವಾ ಆರತಿಯ ಸಮಯದಲ್ಲಿ ಶಂಖನಾದ ಕೇಳಿಸುವುದು ಪೂಜೆಯ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಶಾಸ್ತ್ರಗಳು ವಿವರಿಸುತ್ತವೆ.

ಪೂಜೆಗೆ ಮುನ್ನ ಶಂಖವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ ಪವಿತ್ರವಾಗಿ ಇಡುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಪೂಜಾ ಕೋಣೆಯಲ್ಲಿ ಅಥವಾ ದೇವರ ಮಂಟಪದಲ್ಲಿ ಶಂಖವನ್ನು ಸ್ಥಾಪಿಸಿದರೆ ಅದು ಶುಭ ಕಾರ್ಯಗಳಿಗೆ ದೈವಿಕ ಶಕ್ತಿಯನ್ನು ಒದಗಿಸುತ್ತದೆ ಎಂಬ ನಂಬಿಕೆ ಇದೆ. ಶಂಖದ ನಿಯಮಿತ ಪೂಜೆಯಿಂದ ಗ್ರಹ ದೋಷಗಳು ಕಡಿಮೆಯಾಗುತ್ತವೆ ಮತ್ತು ಜೀವನದಲ್ಲಿ ಸ್ಥಿರತೆ ಹಾಗೂ ಶಾಂತಿ ದೊರೆಯುತ್ತದೆ. ಶಂಖವನ್ನು ಊದುವಾಗ ಮನಸ್ಸನ್ನು ಸ್ಥಿರಗೊಳಿಸಿ, ದೀರ್ಘ ಉಸಿರಾಟದೊಂದಿಗೆ ನಿಧಾನವಾಗಿ ಶಬ್ದ ಮಾಡುವುದರಿಂದ ಅದರ ಪೂರ್ಣ ಫಲವನ್ನು ಅನುಭವಿಸಬಹುದು.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಶಂಖ ಪೂಜೆಯು ಕೇವಲ ಆಧ್ಯಾತ್ಮಿಕ ಲಾಭಗಳನ್ನು ಮಾತ್ರವಲ್ಲದೆ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನೂ ನೀಡುತ್ತದೆ ಎಂದು ಹೇಳಲಾಗುತ್ತದೆ. ಶಂಖ ಊದುವುದರಿಂದ ಉಸಿರಾಟದ ವ್ಯವಸ್ಥೆ ಬಲಗೊಳ್ಳುತ್ತದೆ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ. ಅದರ ಮೃದುವಾದ ದಿವ್ಯ ಶಬ್ದವು ಮನಸ್ಸನ್ನು ಶಾಂತಗೊಳಿಸಿ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗುತ್ತದೆ. ಈ ಕಾರಣದಿಂದ ಶಂಖವನ್ನು ಶುದ್ಧ ಶಕ್ತಿ, ಯಶಸ್ಸು ಮತ್ತು ಸಾತ್ವಿಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಪೂಜಾ ಮಂಟಪದಲ್ಲಿ ಶಂಖವನ್ನು ಇಡುವುದರಿಂದ  ಲಕ್ಷ್ಮೀ ದೇವಿಯ ಅನುಗ್ರಹ ದೊರೆಯುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ವಿಶೇಷವಾಗಿ ಬಲಭಾಗಕ್ಕೆ ತೆರೆದಿರುವ ಶಂಖವನ್ನು ಲಕ್ಷ್ಮೀ ದೇವಿಯ ವಾಸಸ್ಥಾನವೆಂದು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಇಂತಹ ಶಂಖ ಇರುವ ಸ್ಥಳದಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದ್ದು, ಅದನ್ನು ನಿಯಮಿತವಾಗಿ ಪೂಜಿಸಿದರೆ ಮನೆಗೆ ಸಂಪತ್ತು, ಸಮೃದ್ಧಿ ಮತ್ತು ಐಶ್ವರ್ಯ ಬರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಶಂಖವು ಧಾರ್ಮಿಕವಾಗಿ ಮಾತ್ರವಲ್ಲ, ಜೀವನದಲ್ಲಿ ಶುಭಫಲಗಳನ್ನು ತರುವ ದಿವ್ಯ ಸಂಕೇತವಾಗಿಯೂ ಮಹತ್ವ ಹೊಂದಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನ ನಾಯಗನ್ ಬಜೆಟ್ ಎಷ್ಟು? ವಿಜಯ್ ಸಂಭಾವನೆಯೇ ಸಿಂಹಪಾಲು – Kannada News | Thalapathy Vijay’s Jananaayagan: 380 Cr Budget and 220 Cr Salary Shock

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಗಮನ ಸೆಳೆಯುವ ನಿರೀಕ್ಷೆ ಇದೆ. ಈ ಚಿತ್ರವು ತೆಲುಗಿನ ಬಾಲಯ್ಯ ನಟನೆಯ ‘ಭಗವಂತ ಕೇಸರಿ’ ಚಿತ್ರದ ತಮಿಳು ರಿಮೇಕ್ ಆಗಿದೆ. ಈಗ ಸಿನಿಮಾ ರಿಲೀಸ್ ಹಂತದಲ್ಲಿ ತೊಂದರೆ ಅನುಭವಿಸಿದ್ದು ಗೊತ್ತೇ ಇದೆ. ಹೀಗಿರುವಾಗಲೇ ಚಿತ್ರದ ಬಜೆಟ್ ಬಗ್ಗೆ ಹಾಗೂ ಕಲಾವಿದರ ಸಂಭಾವನೆಯ ಬಗ್ಗೆ ಚರ್ಚೆಗಳು ನಡೆದಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಜನ ನಾಯಗನ್’ ಚಿತ್ರವು ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಾ ಇದೆ. ಆ ಬಳಿಕ ಅವರು ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗಾಗಲೇ ಟಿವಿಕೆ ಪಕ್ಷ ಕಟ್ಟಿ ಅವರು 2026ರ ಚುನಾವಣೆಯಲ್ಲಿ ಸ್ಪರ್ಧಿಸಲು ರೆಡಿ ಆಗಿದ್ದಾರೆ. ಹೀಗಾಗಿ ‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ.

‘ಜನ ನಾಯಗನ್’ ಚಿತ್ರವನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಬಜೆಟ್ 380 ಕೋಟಿ ರೂಪಾಯಿ ಎಂದು ಹೇಳಲಾಗುತ್ತಾ ಇದೆ. ಈ ಚಿತ್ರದಲ್ಲಿ ವಿಜಯ್ ಅವರು 220 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇದು ಅವರ ವೃತ್ತಿ ಜೀವನದ ಅತಿ ದೊಡ್ಡ ಸಂಭಾವನೆ ಆಗಿದೆ. ಈ ಮೊದಲು ಅವರು 100 ಕೋಟಿ ರೂಪಾಯಿಗೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು.

ಇನ್ನು, ನಿರ್ದೇಶಕ ವಿನೋದ್ ಅವರು 25 ಕೋಟಿ ರೂಪಾಯಿ ಪಡೆದಿದ್ದಾರೆ. ರಿಮೇಕ್ ಸಿನಿಮಾ ಮಾಡಲು ಅವರು ಇಷ್ಟು ಹಣ ಪಡೆದಿದ್ದಾರೆ. ಸಂಗೀತ ಸಂಯೋಜಕ ಅನಿರುದ್ಧ್ ಅವರು 13 ಕೋಟಿ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಬಾಬಿ ಡಿಯೋಲ್ ಚಿತ್ರದ ವಿಲನ್. ಅವರಿಗೆ 3 ಕೋಟಿ ರೂಪಾಯಿ ಸಿಕ್ಕಿದೆ. ಮಲಯಾಳಂ ನಟಿ ಮಮಿತಾ ಬೈಜು ಅವರ ಸಂಭಾವನೆ 60 ಲಕ್ಷ ರೂಪಾಯಿ. ಉಳಿದ ಎಲ್ಲಾ ಕಲಾವಿದರ ಸಂಭಾವನೆ ಸೇರಿದರೆ 9 ಕೋಟಿ ರೂಪಾಯಿ ಆಗಲಿದೆ. ಈ ಸಿನಿಮಾನ 148 ದಿನ ಶೂಟ್ ಮಾಡಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಜಯ; ಯುಎ ಪ್ರಮಾಣಪತ್ರ ನೀಡಲು ಕೋರ್ಟ್ ಆದೇಶ

‘ಜನ ನಾಯಗನ್’ ಸಿನಿಮಾದ ಸೆಟ್ ಕೆಲಸಕ್ಕೆ 15 ಕೋಟಿ ರೂಪಾಯಿ ಖರ್ಚಾಗಿದೆ. ಶೂಟಿಂಗ್​​ಗೆ 48 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಸಿಜಿ ಕೆಲಸಕ್ಕೆ 5 ಕೋಟಿ ರೂಪಾಯಿ ಖರ್ಚಾಗಿದೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಕಿಂಗ್ ಈ ಡಿಟೆಕ್ಟಿವ್ ಡಾಗ್ ಜಿನ್ನಿ! ಬೆಂಗಳೂರು ಪೊಲೀಸರ ಹೆಮ್ಮೆಯ ಶ್ವಾನವಿದು – Kannada News | Detective Dog ‘Ginny’ Becomes King of Murder Case Detection, Pride of Bengaluru Police

ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಕಿಂಗ್ ಈ ಡಿಟೆಕ್ಟಿವ್ ಡಾಗ್ ಜಿನ್ನಿ!

ಬೆಂಗಳೂರು, ಜನವರಿ 10: ಬೆಂಗಳೂರು (Bangalore) ಪೊಲೀಸ್ ವಿಭಾಗದ ಡಿಟೆಕ್ಟಿವ್ ಡಾಗ್ ‘ಜಿನ್ನಿ’ ಇದೀಗ ತನ್ನ ಅಸಾಧಾರಣ ಪತ್ತೇದಾರಿ ಸಾಮರ್ಥ್ಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬರೋಬ್ಬರಿ 15ಕ್ಕೂ ಹೆಚ್ಚು ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿರುವ ಜಿನ್ನಿ, ವಿಶೇಷವಾಗಿ ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆಯ ‘ಕಿಂಗ್’ ಆಗಿ ಗುರುತಿಸಿಕೊಂಡಿದೆ. ಕಳೆದ ಐದು ವರ್ಷಗಳಿಂದ ಬೆಂಗಳೂರು ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿನ್ನಿ, ಕಳೆದ ಸುಮಾರು ಒಂದು ವರ್ಷದಿಂದ ಪತ್ತೇದಾರಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ಸಂಕೀರ್ಣ ಪ್ರಕರಣಗಳನ್ನೂ ಸುಲಭವಾಗಿ ಬಗೆಹರಿಸುವ ಜಿನ್ನಿಯ ಚುರುಕು ಕಾರ್ಯಕ್ಷಮತೆ ಪೊಲೀಸ್ ಅಧಿಕಾರಿಗಳನ್ನೂ ಅಚ್ಚರಿಗೊಳಿಸಿದೆ.

ಪೊಲೀಸರನ್ನು ನೇರವಾಗಿ ಕೊಲೆ ಆರೋಪಿ ಬಳಿ ಕರೆದೊಯ್ದಿದ್ದ ಜಿನ್ನಿ!

ಇತ್ತೀಚೆಗೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜಿನ್ನಿಯ ಪಾತ್ರ ನಿರ್ಣಾಯಕವಾಗಿತ್ತು. ಕನಕಪುರ ರಸ್ತೆಯ ಮೆಟ್ರೋ ಪಿಲ್ಲರ್ ಸಂಖ್ಯೆ 113ರ ಪಕ್ಕದಲ್ಲಿ ಸುಮಾರು 50 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಯಾರೋ ಕಲ್ಲಿನಿಂದ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಿದ್ದರಿಂದ, ಆರೋಪಿಯನ್ನು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.

ಈ ವೇಳೆ ಪತ್ತೇದಾರಿ ಕಾರ್ಯಕ್ಕೆ ಇಳಿದ ಜಿನ್ನಿ, ನೇರವಾಗಿ ಆರೋಪಿಯು ಮಲಗಿದ್ದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದಿತ್ತು. ಜಿನ್ನಿಯ ಸುಳಿವುಗಳ ಆಧಾರದಲ್ಲಿ ಕೊನೆಗೆ ಆರೋಪಿಯನ್ನು ಬಂಧಿಸಲು ಪೊಲೀಸರು ಯಶಸ್ವಿಯಾದರು. ಈ ಸಾಧನೆಗೆ ಬೆಂಗಳೂರು ಪೊಲೀಸ್ ಆಯುಕ್ತರು ಜಿನ್ನಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

ಮಗು ಕಳ್ಳತನ ಪ್ರಕರಣ ಬಯಲಿಗೆಳೆದಿದ್ದ ಜಿನ್ನಿ

ಇದಲ್ಲದೆ, ಕೆಲ ತಿಂಗಳ ಹಿಂದೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಮಗು ಪ್ರಕರಣದಲ್ಲಿಯೂ ಜಿನ್ನಿ ಮಹತ್ವದ ಪಾತ್ರ ವಹಿಸಿತ್ತು. ಪತ್ತೇದಾರಿ ಶ್ವಾನ ಜಿನ್ನಿಯ ನೆರವಿನಿಂದ ಮಗು ಸುರಕ್ಷಿತವಾಗಿ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು.

ಇದನ್ನೂ ಓದಿ: ವಿಚ್ಛೇದಿತ ಮಹಿಳೆಗೆ ಬಾಳು ಕೊಡುವುದಾಗಿ ಮಗು ಮಾಡಿ, 36 ಲಕ್ಷ ರೂ. ತೆಗೆದುಕೊಂಡು ವ್ಯಕ್ತಿ ಪರಾರಿ!

ಸತತ ಯಶಸ್ಸುಗಳಿಂದ ಬೆಂಗಳೂರು ಪೊಲೀಸರಿಂದ ಜಿನ್ನಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಪತ್ತೇದಾರಿ ಶ್ವಾನಗಳು ಅಪರಾಧ ತನಿಖೆಯಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದಕ್ಕೆ ಜಿನ್ನಿಯೇ ಜೀವಂತ ಉದಾಹರಣೆ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೆಲುಗು ಖಾಕಿ ಸಿನೆಮಾ ಸ್ಟೈಲ್​ನಲ್ಲಿ ರಾಯಚೂರು ಪೊಲೀಸರ ಆಪರೇಷನ್: ನಕಲಿ ಡಿಸಿ ಫೇಸ್‌ಬುಕ್ ಖಾತೆ ಪ್ರಕರಣದಲ್ಲಿ ಸೈಬರ್ ವಂಚಕ ಅರೆಸ್ಟ್! – Kannada News | Raichur Cyber Police Arrest Notorious Fake Profile Fraudster in Rajasthan

ರಾಯಚೂರು, ಜನವರಿ 10: ತೆಲುಗು ಖಾಕಿ ಸಿನೆಮಾ ಶೈಲಿಯನ್ನು ನೆನಪಿಸುವಂತೆ ರಾಯಚೂರು ಸೈಬರ್ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕುಖ್ಯಾತ ಸೈಬರ್ ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸತತ ಎರಡು ತಿಂಗಳ ಕಾಲ ರಾಜಸ್ಥಾನದಲ್ಲಿ ಗುಪ್ತ ಕಾರ್ಯಾಚರಣೆ ನಡೆಸಿದ ಪೊಲೀಸರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ರಾಜಸ್ಥಾನ ಮೂಲದ ಆರೋಪಿ ಅಂದರ್

ಬಂಧಿತನನ್ನು ಶಕೀಲ್ (19) ಎಂದು ಗುರುತಿಸಲಾಗಿದ್ದು, ಆತ ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಚಂದ್ ಬಾಸ್ ಚಿರ್ ಖಾನಾ ಗ್ರಾಮದ ನಿವಾಸಿ ಎನ್ನಲಾಗಿದೆ. ಆಳ್ವಾರ್ ಹಾಗೂ ಭರತಪುರ ಜಿಲ್ಲೆಗಳು ಸೈಬರ್ ವಂಚಕರ ಕೇಂದ್ರಗಳಾಗಿದ್ದು, ಅಲ್ಲಲ್ಲಿ ಗುಂಪುಗಳಾಗಿ ಕೂತು ಆನ್‌ಲೈನ್ ವಂಚನೆ ನಡೆಸುತ್ತಿರುವ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಪೊಲೀಸ್ ಅಧಿಕಾರಿ ಹೆಸರು ಬಳಸಿ ವಂಚನೆ

ಆರೋಪಿ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ನನ್ನ ಪರಿಚಯದ ಸಬ್ ಇನ್‌ಸ್ಪೆಕ್ಟರ್ ವರ್ಗಾವಣೆ ಆಗಿದೆ. ಅವರ ಏಸಿ, ಮಂಚ, ಫ್ರಿಡ್ಜ್ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಮೆಸೇಜ್ ಕಳುಹಿಸಿ ಜನರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದ. ಈ ವಂಚನೆಯನ್ನು ನಂಬಿ ರಾಯಚೂರಿನ ನಿವಾಸಿ ರಮೇಶ್ ಹಣ ಕಳೆದುಕೊಂಡಿದ್ದರು. ಈ ಸಂಬಂಧ ಜೂನ್ ತಿಂಗಳಲ್ಲೇ ಪ್ರಕರಣ ದಾಖಲಾಗಿತ್ತು.

ಆರೋಪಿಯನ್ನು ಪತ್ತೆ ಹಚ್ಚುವ ವೇಳೆ ಪೊಲೀಸರು ಸಿನೆಮಾ ಶೈಲಿಯಲ್ಲಿ ಅಪರಿಚಿತರಂತೆ ಓಡಾಡಿ ಚಾಣಾಕ್ಷತನದಿಂದ ಆತನನ್ನು ಲಾಕ್ ಮಾಡಿದ್ದಾರೆ. ಆರೋಪಿ ನೀಡಿದ ಮಾಹಿತಿಯ ಆಧಾರದಲ್ಲಿ, ಇತರ ಸಹಚರರನ್ನು ಬಂಧಿಸಲು ಮತ್ತೊಮ್ಮೆ ರಾಜಸ್ಥಾನಕ್ಕೆ ತೆರಳಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ರಾಯಚೂರು ಸೈಬರ್ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Gold Ring Astrology: ಈ ಬೆರಳಿಗೆ ಚಿನ್ನದ ಉಂಗುರ ಧರಿಸುವುದು ಶನಿದೋಷಕ್ಕೆ ಕಾರಣವಾಗಬಹುದು! – Kannada News | Gold Ring Astrology: Which Finger Brings Luck? Rules and Benefits

ಚಿನ್ನವು ಸೂರ್ಯ ಮತ್ತು ಗುರುವಿನ ಸಂಕೇತ. ಅದಕ್ಕಾಗಿಯೇ ಹಿರಿಯರು ಅದನ್ನು ಧರಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಹೇಳುತ್ತಾರೆ. ತೋರು ಬೆರಳಿನಲ್ಲಿ ಧರಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ, ಆದರೆ ಮಧ್ಯದ ಬೆರಳಿಗೆ ಧರಿಸುವುದು ಅಶುಭ ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ. ನಿಮ್ಮ ರಾಶಿಚಕ್ರದ ಪ್ರಕಾರ ಯಾವ ಬೆರಳು ನಿಮಗೆ ಅದೃಷ್ಟವನ್ನು ತರುತ್ತದೆ? ಚಿನ್ನವನ್ನು ಧರಿಸಲು ಸರಿಯಾದ ಮಾರ್ಗ ಯಾವುದು ಎಂದು ಇಲ್ಲಿ ತಿಳಿದುಕೊಳ್ಳಿ.

ಜ್ಯೋತಿಷ್ಯದ ಪ್ರಕಾರ, ಚಿನ್ನವನ್ನು ಧರಿಸುವುದರಿಂದ ನಮ್ಮ ಮೇಲೆ ಸಕಾರಾತ್ಮಕ ಗ್ರಹಗಳ ಪ್ರಭಾವ ಉಂಟಾಗುತ್ತದೆ. ಪ್ರತಿ ಬೆರಳಿಗೆ ಚಿನ್ನವನ್ನು ಧರಿಸುವುದರಿಂದಾಗುವ ಫಲಿತಾಂಶಗಳನ್ನು ಇಲ್ಲಿ ತಿಳಿಯಿರಿ.

ತೋರುಬೆರಳು:

ಈ ಬೆರಳು ‘ಗುರು’ ಗ್ರಹದ ಚಿಹ್ನೆ. ನೀವು ಶಿಕ್ಷಣ, ವೃತ್ತಿ ಅಥವಾ ಆತ್ಮವಿಶ್ವಾಸದಲ್ಲಿ ಶ್ರೇಷ್ಠರಾಗಲು ಬಯಸಿದರೆ, ಈ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದು ಉತ್ತಮ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಉಂಗುರ ಬೆರಳು:

ಇದು ಸೂರ್ಯ ಮತ್ತು ಶುಕ್ರನ ಸ್ಥಾನ. ಈ ಬೆರಳಿಗೆ ಚಿನ್ನ ಧರಿಸುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವಿವಾಹಿತ ಮಹಿಳೆಯರಿಗೆ, ಇದು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಮಧ್ಯದ ಬೆರಳು:

ಮಧ್ಯದ ಬೆರಳು ಶನಿ ಗ್ರಹಕ್ಕೆ ಸೇರಿದೆ. ಚಿನ್ನವು ಸೂರ್ಯನಿಗೆ ಸಂಬಂಧಿಸಿದ ಲೋಹವಾಗಿರುವುದರಿಂದ, ಈ ಬೆರಳಿನಲ್ಲಿ ಚಿನ್ನವನ್ನು ಧರಿಸುವುದರಿಂದ ಸೂರ್ಯ ಮತ್ತು ಶನಿಯ ನಡುವಿನ ದ್ವೇಷದಿಂದಾಗಿ ಜೀವನದಲ್ಲಿ ಅಡೆತಡೆಗಳು ಮತ್ತು ಸಂಘರ್ಷಗಳಿಗೆ ಕಾರಣವಾಗಬಹುದು. ಆದ್ದರಿಂದ ತಪ್ಪಿಯೂ ಈ ಬೆರಳಿಗೆ ಚಿನ್ನದ ಉಂಗುರು ಧರಿಸಬೇಡಿ.

ಯಾವಾಗ ಧರಿಸಬೇಕು?

ಅಧಿಪತಿ ಗುರುವಾಗಿರುವುದರಿಂದ, ಗುರುವಾರದಂದು ಚಿನ್ನ ಧರಿಸುವುದು ಅತ್ಯಂತ ಶುಭ. ಧರಿಸುವ ಮೊದಲು, ಹಸಿ ಹಾಲು ಅಥವಾ ಗಂಗಾ ಜಲದಿಂದ ಶುದ್ಧೀಕರಿಸಿ ಮತ್ತು ತ್ವರಿತ ಶುಭ ಫಲಿತಾಂಶಗಳನ್ನು ಪಡೆಯಲು ‘ಓಂ ಬೃಹಸ್ಪತಯೇ ನಮಃ’ ಎಂಬ ಮಂತ್ರವನ್ನು ಪಠಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಒಂದು ಎಸೆತದಿಂದ ಭರ್ಜರಿ ದಾಖಲೆ ತಪ್ಪಿಸಿಕೊಂಡ ಲಾರೆನ್ ಬೆಲ್

Source link

ಟಿವಿ9 ಬಿಗ್ ಇಂಪ್ಯಾಕ್ಟ್: ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ಸಿಕ್ತು ಸೂರು ಭಾಗ್ಯ! – Kannada News | TV9 Impact: Government Grants House to Specially Abled Athlete Prasad After Five Year Wait

ಬೆಂಗಳೂರು, ಜನವರಿ 10: ಪ್ಯಾರಾಲಿಂಪಿಕ್ ಕ್ರೀಡಾಪಟು ಪ್ರಸಾದ್ ಕುಟುಂಬವು ಐದು ವರ್ಷಗಳಿಂದ ಮನೆಗಾಗಿ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಟಿವಿ9 ವಾಹಿನಿಯು ಪ್ರಸಾದ್ ಅವರ ಕಷ್ಟವನ್ನು ಬೆಳಕಿಗೆ ತಂದ ಕೇವಲ 12 ಗಂಟೆಗಳಲ್ಲಿಯೇ ರಾಜೀವ್ ಗಾಂಧಿ ವಸತಿ ನಿಗಮದಿಂದ ಅವರಿಗೆ ಫ್ಲಾಟ್ ಮಂಜೂರಾಗಿದೆ. ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರೂ ಪ್ರಸಾದ್ ಫ್ಲೋರ್‌ಬಾಲ್, ಬಾಸ್ಕೆಟ್‌ಬಾಲ್, ಸೈಕ್ಲಿಂಗ್‌ ಸೇರಿ ಹಲವು ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ತಂದೆ ರಾಮು ಅವರೊಂದಿಗೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈ ಕುಟುಂಬ, ಮನೆ ಬಾಡಿಗೆ ಕಟ್ಟಲೂ ಪರದಾಡುತ್ತಿತ್ತು. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಒಂದು ಲಕ್ಷ ರೂಪಾಯಿ ಪಾವತಿಸಿದ್ದರೂ, ಬಿದರಹಳ್ಳಿಯ ಬಿ-ಬ್ಲಾಕ್ ಕಾಮಗಾರಿ ವಿಳಂಬದಿಂದ ಮನೆ ಮಂಜೂರಾಗಿರಲಿಲ್ಲ. ಟಿವಿ9 ನಿನ್ನೆ ಬೆಳಗ್ಗೆ 9 ಗಂಟೆಗೆ ಈ ಕುರಿತು ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಎಂ.ಡಿ ಪರಶುರಾಮ್ ಅವರು ಪ್ರಸಾದ್ ಅವರ ತಂದೆ ರಾಮುಗೆ ಬಿದರಹಳ್ಳಿ ಎ-ಬ್ಲಾಕ್‌ನಲ್ಲಿ 601ನೇ ಸಂಖ್ಯೆಯ ಫ್ಲಾಟ್ ಹಂಚಿಕೆ ಪತ್ರ ನೀಡಿದ್ದಾರೆ. ಮಹದೇವಪುರ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರ ಕೋಟಾದಲ್ಲಿ ಈ ಮನೆ ಮಂಜೂರಾಗಿದೆ. ಪ್ರಸಾದ್ ತಂದೆ ರಾಮು ಟಿವಿ9ಗೆ ಧನ್ಯವಾದ ಅರ್ಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಭಾರತದ ಟಾಪ್ 10 ಶ್ರೀಮಂತರು ಇವರು; ದಕ್ಷಿಣದವರು ಎಷ್ಟು ಮಂದಿ? – Kannada News | Richest Indian Actors 2026: Top 10 Bollywood and South Stars Net Worth

ಭಾರತದ ಅನೇಕ ಕಲಾವಿದರು ಸಾವಿರಾರು ಕೋಟಿ ರೂಪಾಯಿಯ ಒಡೆಯರು. ಅವರ ಬಳಿ ಕೋಟಿ ಕೋಟಿ ರೂಪಾಯಿ ಹಣ ಇದೆ. ಸಿನಿಮಾದಲ್ಲಿ ನಟಿಸೋದಕ್ಕೆ ದೊಡ್ಡ ಸಂಭಾವನೆ ಪಡೆಯುವ ಕಲಾವಿದರು, ನಟನೆಯ ಜೊತೆಗೆ ನಿರ್ಮಾಣದಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು, ಸಾಕಷ್ಟು ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಾರೆ. ಭಾರತದ ಟಾಪ್ 10 ಶ್ರೀಮಂತ ನಟರ ಪಟ್ಟಿ ಇಲ್ಲಿದೆ ನೋಡಿದೆ.

ಈ ಪಟ್ಟಿಯಲ್ಲಿ ಶಾರುಖ್ ಖಾನ್ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ. ಅವರ ಆಸ್ತಿ 12,931 ಕೋಟಿ ರೂಪಾಯಿ ಎಂದು ವರದಿ ಆಗಿದೆ. ಅಂದರೆ ಅವರೆಷ್ಟು ಶ್ರೀಮಂತರು ಎಂಬುದನ್ನು ನೀವೇ ಲೆಕ್ಕ ಹಾಕಿ. ವಿಶ್ವ ಶ್ರೀಮಂತ ಹೀರೋಗಳ ಪಟ್ಟಿಯಲ್ಲೂ ಶಾರುಖ್ ಖಾನ್ ಅವರಿಗೆ ಸ್ಥಾನ ಇದೆ. ಅನೇಕ ಖ್ಯಾತ ನಾಮರನ್ನು ಅವರು ಹಿಂದಿಕ್ಕುತ್ತಾರೆ.

ಎರಡನೇ ಸ್ಥಾನದಲ್ಲಿ ತೆಲುಗಿನ ಅಕ್ಕಿನೇನಿ ನಾಗಾರ್ಜುನ ಇದ್ದಾರೆ. ಇವರು ಮೊದಲಿನಿಂದಲೂ ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿರುವವರು. ಅವರ ಅಪ್ಪ ಮಾಡಿಟ್ಟು ಹೋದ ಆಸ್ತಿ ಇದೆ. ಅನೇಕ ಪ್ರಾಪರ್ಟಿ ಅವರ ಹೆಸರಲ್ಲಿ ಇದೆ. ಅವರ ಆಸ್ತಿ 5 ಸಾವಿರ ಕೋಟಿ ರೂಪಾಯಿ. ಮೂರನೇ ಸ್ಥಾನದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಇದ್ದಾರೆ. ಇವರ ಆಸ್ತಿ 3225 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.

ನಾಲ್ಕನೇ ಸ್ಥಾನದಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಇದ್ದಾರೆ, ಅವರು ತಮ್ಮ ಸ್ಪೋರ್ಟ್ಸ್ ಬ್ರ್ಯಾಂಡ್ ಎಚ್​​ಆರ್​ಎಕ್ಸ್ ಮೂಲಕ ಸಾಕಷ್ಟು ದುಡಿಯುತ್ತಾರೆ. ಅವರ ಆಸ್ತಿ 3100 ಕೋಟಿ ರೂಪಾಯಿ. ಐದನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ದಾರೆ. ಅವರ ಆಸ್ತಿ 2,250 ಕೋಟಿ ರೂಪಾಯಿ. ಆರನೇ ಸ್ಥಾನದಲ್ಲಿ ಆಮಿರ್ ಖಾನ್ ಇದ್ದಾರೆ. ಅವರು 1860 ಕೋಟಿ ರೂಪಾಯಿ ಒಡೆಯ.

ಇದನ್ನೂ ಓದಿ:  ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ

ಏಳನೇ ಸ್ಥಾನದಲ್ಲಿ ಚಿರಂಜೀವಿ ಇದ್ದಾರೆ. ಅವರ ಆಸ್ತಿ 1750 ಕೋಟಿ ರೂಪಾಯಿ, ಅಮಿತಾಭ್ ಅವರು 1680 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದ್ದು ಎಂಟನೇ ಸ್ಥಾನದಲ್ಲಿ ಇದ್ದಾರೆ. ವೆಂಕಟೇಶ್ (1650) ಹಾಗೂ ರಾಮ್ ಚರಣ್ (1630) ಅನುಕ್ರಮವಾಗಿ ಒಂಭತ್ತು ಹಾಗೂ ಹತ್ತನೇ ಸ್ಥಾನದಲ್ಲಿದ್ದಾರೆ. ಅನೇಕ ಸ್ಟಾರ್​​ಗಳ ಬಳಿ ಖಾಸಗಿ ವಿಮಾನ ಕೂಡ ಇದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ಮಾಡಿ.

Source link

World Hindi Day 2026: ವಿಶ್ವ ಹಿಂದಿ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು? – Kannada News | World Hindi Day 2026: Know the history and significance of World Hindi Day

ವಿವಿಧತೆಯಲ್ಲಿ ಏಕತೆಯ ನಾಡಾಗಿರುವ ಭಾರತದಲ್ಲಿ ಹಲವು ವಿಭಿನ್ನ ಸಂಸ್ಕೃತಿ, ಭಾಷೆ, ಲಿಪಿಗಳಿವೆ. ನಮ್ಮ ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡುವಂತೆ ದೇಶದ ಹೆಚ್ಚಿನ ಕಡೆ ಹಿಂದಿ (Hindi) ಭಾಷೆಯನ್ನೇ ಮಾತನಾಡುತ್ತಾರೆ. ಅಲ್ಲದೆ ಹಿಂದಿ ಪ್ರಪಂಚದಲ್ಲಿಯೇ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಹೌದು ಹಿಂದಿ ಭಾಷೆ ಭಾರತದಲ್ಲಿ ಮಾತ್ರವಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಮಾರಿಷಸ್ ಮತ್ತು ಫಿಲಿಪೈನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಜನಪ್ರಿಯವಾಗಿದೆ. ಹಾಗಾಗಿ ಹಿಂದಿ ಭಾಷೆಯನ್ನು ವಿಶ್ವ ಭಾಷೆಯನ್ನಾಗಿ ಬೆಳೆಸುವ ಉದ್ದೇಶದಿಂದ ವಿಶ್ವ ಹಿಂದಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಯಾವಾಗ ಪ್ರಾರಂಭವಾಯಿತು ಎಂಬುದರ ಬಗ್ಗೆ ತಿಳಿಯಿರಿ.

ವಿಶ್ವ ಹಿಂದಿ ದಿನದ ಇತಿಹಾಸವೇನು?

ವಿಶ್ವ ಹಿಂದಿ ದಿನದ ಇತಿಹಾಸವು ತುಂಬಾ ಹಳೆಯದು. ಜನವರಿ 10, 1975 ರಂದು, ಮಹಾರಾಷ್ಟ್ರದ ನಾಗ್ಪುರದಲ್ಲಿ ಮೊದಲ ವಿಶ್ವ ಹಿಂದಿ ಸಮ್ಮೇಳನ ನಡೆಯಿತು. ಭಾರತ ಸೇರಿದಂತೆ ಹಲವು ದೇಶಗಳ ಹಿಂದಿ ವಿದ್ವಾಂಸರು, ಬರಹಗಾರರು ಮತ್ತು ಭಾಷಾ ಪ್ರೇಮಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಸಮ್ಮೇಳನವು ಜಾಗತಿಕವಾಗಿ ಹಿಂದಿಗೆ ಸಂಘಟಿತ ವೇದಿಕೆಯನ್ನು ಒದಗಿಸಿತು. ವಿದೇಶಗಳಲ್ಲಿ ವಾಸಿಸುವ ಹಿಂದಿ ಭಾಷಿಕರನ್ನು ಒಗ್ಗೂಡಿಸುವುದು ಮತ್ತು ಹಿಂದಿಯ ಪ್ರಚಾರಕ್ಕಾಗಿ ಜಂಟಿ ಪ್ರಯತ್ನಗಳನ್ನು ಮಾಡುವುದು ಇದರ ಉದ್ದೇಶವಾಗಿತ್ತು. ಆನಂತರ 2006 ರಲ್ಲಿ, ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಪ್ರತಿ ವರ್ಷ ಜನವರಿ 10 ಅನ್ನು “ವಿಶ್ವ ಹಿಂದಿ ದಿನ” ಎಂದು ಆಚರಿಸುವುದಾಗಿ ಘೋಷಿಸಿದರು. ಮತ್ತು  ವಿಶ್ವ ಹಿಂದಿ ದಿನವನ್ನು ಮೊದಲು ಭಾರತ ಸರ್ಕಾರವು 2006 ರಲ್ಲಿ ಅಧಿಕೃತವಾಗಿ ಆಚರಿಸಿತು. ಅಂದಿನಿಂದ ಪ್ರತಿವರ್ಷ ಜನವರಿ 10 ರಂದು ವಿಶ್ವ ಹಿಂದಿ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಪಕ್ಷಿಗಳಿಗೆ ಜೀವಿಸಲು ಸ್ವಚ್ಛಂದ ಪರಿಸರ ನಿರ್ಮಿಸೋಣ

ವಿಶ್ವ ಹಿಂದಿ ದಿನವನ್ನು ಆಚರಿಸುವ ಉದ್ದೇಶವೇನು?

  • ವಿಶ್ವಾದ್ಯಂತ ಹಿಂದಿ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದನ್ನು ಅಂತರರಾಷ್ಟ್ರೀಯ ಭಾಷೆಯಾಗಿ ಸ್ಥಾಪಿಸುವುದು ಇದರ ಉದ್ದೇಶವಾಗಿದೆ.
  • ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹಿಂದಿ ಬಳಕೆಯನ್ನು ಉತ್ತೇಜಿಸುವುದು.
  • ಶಿಕ್ಷಣ, ತಂತ್ರಜ್ಞಾನ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಹಿಂದಿ ಭಾಷೆಯನ್ನು ಬಲಪಡಿಸುವುದು.
  • ಬಾಲಿವುಡ್, ಸಾಹಿತ್ಯ ಮತ್ತು ಮಾಧ್ಯಮಗಳ ಮೂಲಕ ಜಾಗತಿಕ ಹಿಂದಿ ಚಿತ್ರಣವನ್ನು ಉತ್ತೇಜಿಸುವುದು.
  • ಹಿಂದಿಯೇತರ ಭಾಷಿಕರಿಗೆ ಹಿಂದಿ ಕಲಿಯಲು ಪ್ರೋತ್ಸಾಹ ನೀಡುವುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: 2026 ಈ ಅಕ್ಷರದಿಂದ ಪ್ರಾರಂಭವಾಗುವವರಿಗೆ ಅಪಾರ ಅದೃಷ್ಟ, ಶ್ರೀಮಂತರಾಗುವ ಯೋಗ! – Kannada News | Horoscope 2026 : Unprecedented Fortune for Names Starting with S

ಜ್ಯೋತಿಷ್ಯದ ಪ್ರಕಾರ, 2026ರ ವರ್ಷವು ‘S’ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವವರಿಗೆ ಅಪಾರ ಅದೃಷ್ಟವನ್ನು ಹೊತ್ತು ತರಲಿದೆ. ಈ ವರ್ಷವು ಸಾಕಷ್ಟು ಶುಭ ಫಲಗಳನ್ನು, ಸಕಾರಾತ್ಮಕ ತಿರುವುಗಳನ್ನು ಮತ್ತು ಸಂತೋಷವನ್ನು ನೀಡುವ ಸಾಧ್ಯತೆಗಳು ಬಹಳ ಹೆಚ್ಚಿವೆ. ‘S’ ಅಕ್ಷರದಿಂದ ಹೆಸರನ್ನು ಹೊಂದಿರುವ ಮಹಿಳೆಯರು, ಪುರುಷರು, ಮತ್ತು ಈ ಅಕ್ಷರದಿಂದ ಪ್ರಾರಂಭವಾಗುವ ಯಾವುದೇ ಕಂಪೆನಿಗಳಿಗೂ ಕೂಡ ವರ್ಷಪೂರ್ತಿ ಅದೃಷ್ಟ ಇರಲಿದೆ. ಇದು ಯಾವುದೇ ನಿರ್ದಿಷ್ಟ ಮಾಸಕ್ಕೆ ಸೀಮಿತವಾಗಿಲ್ಲದೆ, ವರ್ಷದ ಉದ್ದಕ್ಕೂ ವ್ಯಾಪಿಸಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಈ ಅದೃಷ್ಟದ ಹಿಂದಿನ ಪ್ರಮುಖ ಕಾರಣವೆಂದರೆ ಗುರು, ಶನಿ ಮತ್ತು ಕೇತು ಗ್ರಹಗಳ ಅನುಗ್ರಹ. ಧರ್ಮ, ಕರ್ಮ ಮತ್ತು ಮೋಕ್ಷಕ್ಕೆ ಕಾರಕರಾದ ಈ ಗ್ರಹಗಳ ಶುಭ ಫಲಗಳು ಎಸ್ ಅಕ್ಷರದವರಿಗೆ ದೊರೆಯಲಿವೆ. ಇದರ ಪರಿಣಾಮವಾಗಿ, ವರ್ಷದ ಸುಮಾರು 80 ಪ್ರತಿಶತ ಭಾಗವು ಶುಭಕರವಾಗಿರುತ್ತದೆ. ಮನಸ್ಸನ್ನು ಶುದ್ಧವಾಗಿಟ್ಟುಕೊಂಡು, ನಿರ್ಮಲ ಆಲೋಚನೆಗಳೊಂದಿಗೆ ಕಾರ್ಯಗಳನ್ನು ನಿರ್ವಹಿಸಿದರೆ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಭಗವದ್ಗೀತೆಯಲ್ಲಿ ಹೇಳಿದಂತೆ, ಕೆಲಸವನ್ನು ನಿಷ್ಠೆಯಿಂದ ಮಾಡಿ, ಫಲಿತಾಂಶದ ಬಗ್ಗೆ ಚಿಂತಿಸಬೇಡಿ ಎಂಬ ತತ್ವ ಇಲ್ಲಿ ಅನ್ವಯಿಸುತ್ತದೆ.

2026 ರಲ್ಲಿ, ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳಿರುವವರಿಗೆ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬರಲಿವೆ. ವೈವಾಹಿಕ ಜೀವನದಲ್ಲಿ ಉತ್ತಮ ಹೊಂದಾಣಿಕೆ ಮತ್ತು ಸಕಾರಾತ್ಮಕ ಬದಲಾವಣೆಗಳು ನಿರೀಕ್ಷಿತವಾಗಿವೆ. ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಪ್ರಗತಿಯಾಗಲಿದ್ದು, ಹೂಡಿಕೆಗಳಿಂದ ಉತ್ತಮ ಲಾಭ ಸಿಗುವ ಸಾಧ್ಯತೆಯಿದೆ. ಹಳೆಯ ಬಾಕಿಗಳು ವಸೂಲಿಯಾಗಲಿದ್ದು, ಹಿಂದಿನ ಸಾಲಗಳು ಕೂಡ ತೀರುತ್ತವೆ. ವೃತ್ತಿ ಜೀವನವು ಅತ್ಯುತ್ತಮವಾಗಿರಲಿದ್ದು, ಕಾರ್ಮಿಕರಿಗೆ ಉದ್ಯೋಗದಲ್ಲಿ ಬಡ್ತಿ, ಉದ್ಯಮಿಗಳಿಗೆ ಹೊಸ ಉದ್ಯಮಗಳನ್ನು ಪ್ರಾರಂಭಿಸುವ ಅಥವಾ ವಿಸ್ತರಿಸುವ ಅವಕಾಶಗಳು ದೊರೆಯಲಿವೆ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನ, ಮಂತ್ರಿ ಪದವಿ, ಚೇರ್ಮನ್ ಅಥವಾ ಕಾರ್ಪೊರೇಟರ್ ಆಗುವಂತಹ ಯೋಗಗಳು ಇರಬಹುದು.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಆರೋಗ್ಯದ ವಿಷಯದಲ್ಲಿಯೂ ಶುಭ ಫಲಗಳನ್ನು ನಿರೀಕ್ಷಿಸಬಹುದು. ದೀರ್ಘಕಾಲದ ಅನಾರೋಗ್ಯಗಳು ಸುಧಾರಣೆಯಾಗಲಿವೆ. ಶನಿ ಗ್ರಹದ ಪ್ರಭಾವದಿಂದ ಆರೋಗ್ಯವು ಮತ್ತಷ್ಟು ಉತ್ತಮಗೊಳ್ಳಲಿದೆ. ಹೊಸ ಆಲೋಚನೆಗಳು, ಧೈರ್ಯದ ಹೆಚ್ಚಳ ಮತ್ತು ದೃಢ ನಿರ್ಧಾರಗಳನ್ನು ಕೈಗೊಳ್ಳುವ ಯೋಗವು ಈ ವರ್ಷದ ಪ್ರಮುಖ ಲಕ್ಷಣವಾಗಿದೆ. “ಧೈರ್ಯಂ ಸರ್ವತ್ರ ಸಾಧನಂ” ಎಂಬಂತೆ, ಧೈರ್ಯದಿಂದ ಮುನ್ನುಗ್ಗಿದವರಿಗೆ ಗೌರವ ಮತ್ತು ಫಲಿತಾಂಶಗಳು ಸಿಗುತ್ತವೆ.

ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳು ದೊರೆಯಲಿವೆ. ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಜೂನ್ 2ರ ವರೆಗೆ ಒಂದು ರೀತಿಯ ಬಲವಿದ್ದರೆ, ಜೂನ್ 2ರ ನಂತರ ಮತ್ತಷ್ಟು ಬಲ ಸಿಗಲಿದೆ. ಮನೆ, ಸೈಟ್, ಫ್ಲಾಟ್ ಖರೀದಿಸುವ ಯೋಗವಿರಲಿದೆ. ಪ್ರೇಮ ವ್ಯವಹಾರಗಳಲ್ಲಿ ಬಾಂಧವ್ಯಗಳು ಗಟ್ಟಿಯಾಗಲಿವೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳು ಹೆಚ್ಚಾಗುತ್ತವೆ. ವಿದೇಶ ಪ್ರವಾಸ, ವಿದೇಶಗಳಲ್ಲಿ ಉದ್ಯೋಗ ದೊರೆಯುವ ಸಾಧ್ಯತೆಗಳು ಇವೆ. ಪಾಲುದಾರಿಕೆಯಿಂದ ಒಳಿತಾಗಲಿದ್ದು, ಗುರಿ ಸಾಧನೆಗೆ ತಾಳ್ಮೆ ಮತ್ತು ಸಹನೆ ವೃದ್ಧಿಯಾಗುತ್ತದೆ. ಒಟ್ಟಾರೆ, 2026ರ ವರ್ಷವು ‘S’ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳಿರುವ ಪ್ರತಿಯೊಬ್ಬರಿಗೂ ಅದೃಷ್ಟವೋ ಅದೃಷ್ಟ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link