All posts by nagaraj11081993

ಬಿಗ್ ಬಾಸ್ ಕನ್ನಡ 12: ಗಿಲ್ಲಿಗಿಂತಲೂ ಮೊದಲೇ ಫಿನಾಲೆ ತಲುಪಿದ ಧನುಷ್ – Kannada News | Dhanush reaches the finale of Bigg Boss Kannada Season 12 before Gilli Nata

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಗಿಲ್ಲಿ ನಟ ಅವರ ಮೇಲೆ ವೀಕ್ಷಕರು ಭರವಸೆ ಇಟ್ಟುಕೊಂಡಿದ್ದಾರೆ. ಆದರೆ ಟಾಪ್ 6 ಆಟದಲ್ಲಿ ಗಿಲ್ಲಿ ನಟ (Gilli Nata) ಅವರು ಎಡವಿದ್ದಾರೆ. ಎಲ್ಲರಿಗಿಂತ ಮೊದಲು ಗಿಲ್ಲಿ ನಟ ಅವರೇ ಫಿನಾಲೆ ಪ್ರವೇಶಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಗಿಲ್ಲಿ ನಟ ಅವರಿಗಿಂತಲೂ ಮೊದಲು ಧನುಷ್ (Dhanush) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆಯನ್ನು ತಲುಪಿದ್ದಾರೆ. ಅವರ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಕಳೆದ ವಾರ ಧನುಷ್ ಅವರು ಕ್ಯಾಪ್ಟನ್ ಆದರು. ಅವರು ಈ ಸೀಸನ್​ನ ಕೊನೇ ಕ್ಯಾಪ್ಟನ್ ಆದ್ದರಿಂದ ಅವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಕ್ಕವು. ಟಾಪ್ 6 ಆಟದಲ್ಲಿ ನೇರವಾಗಿ ಸ್ಪರ್ಧಿಸುವ ಚಾನ್ಸ್ ಅವರಿಗೆ ಸಿಕ್ಕಿತ್ತು. ಅದನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡರು. ಕೊನೆಯ ಟಾಸ್ಕ್​​ನಲ್ಲಿ ಜಯಶಾಲಿ ಆಗುವ ಮೂಲಕ ಅವರು ಫಿನಾಲೆ ತಲುಪಿದರು.

ಈ ಟಾಸ್ಕ್​​ನಲ್ಲಿ ಅಶ್ವಿನಿ ಗೌಡ, ಧನುಷ್, ಮ್ಯೂಟೆಂಟ್ ರಘು, ಕಾವ್ಯಾ ಶೈವ ಅವರು ಭಾಗಿ ಆಗಿದ್ದರು. ಎಲ್ಲರ ನಡುವೆ ಟಫ್ ಸ್ಪರ್ಧೆ ಏರ್ಪಟ್ಟಿತ್ತು. ಅತಿ ಕಡಿಮೆ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸಿದ ಧನುಷ್ ಅವರು ಫಿನಾಲೆಗೆ ಟಿಕೆಟ್ ಪಡೆದರು. ಇನ್ನುಳಿದವರಿಗೆ ಸಹಜವಾಗಿಯೇ ನಿರಾಸೆ ಆಯಿತು. ಧನುಷ್ ಫಿನಾಲೆ ತಲುಪಿದ್ದಕ್ಕೆ ರಾಶಿಕಾ ಶೆಟ್ಟಿ ಅವರು ಹೆಚ್ಚು ಖುಷಿಪಟ್ಟರು.

ಆರಂಭದಲ್ಲಿ ಧನುಷ್ ಅವರು ಹೆಚ್ಚು ಆ್ಯಕ್ಟೀವ್ ಆಗಿರಲಿಲ್ಲ. ಟಾಸ್ಕ್ ಚೆನ್ನಾಗಿ ಆಡಿದ್ದರೂ ಕೂಡ ಮನರಂಜನೆ ನೀಡುವುದರಲ್ಲಿ ಹಿಂದುಳಿದಿದ್ದರು. ಆದರೆ ಟಾಸ್ಕ್​​ನಲ್ಲಿ ಸಿಕ್ಕ ಅವಕಾಶಗಳನ್ನು ಅವರು ಸೂಕ್ತವಾಗಿ ಉಪಯೋಗಿಸಿಕೊಂಡು ಇನ್ನುಳಿದವರನ್ನು ಹಿಂದಿಕ್ಕಿದರು. ಕಿರುತೆರೆಯಲ್ಲಿ ಮಿಂಚಿರುವ ಅವರಿಗೆ ಅಭಿಮಾನಿ ಬಳಗ ಇದೆ. ಅಭಿಮಾನಿಗಳಿಂದ ವೋಟ್ಸ್ ಸಿಗಲಿದೆ.

ಇದನ್ನೂ ಓದಿ: ಬನಿಯನ್ ಹಾಕಿದರೂ ರಾಜನಂತೆ ಬಾಳುತ್ತಿರುವ ಗಿಲ್ಲಿ ನಟ: ಗೆಲುವಿನ ಸೂಚನೆ ಕೊಟ್ಟ ಸುದೀಪ್

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಗಿಲ್ಲಿ ನಟ ಅವರು ಸಿಕ್ಕಾಪಟ್ಟೆ ಹೈಲೈಟ್ ಆಗಿದ್ದಾರೆ. ಹೊರಗಡೆ ಅವರಿಗೆ ಇರುವ ಅಭಿಮಾನಿ ಬಳಗ ಹಿರಿದಾಗಿದೆ. ಇನ್​ಸ್ಟಾಗ್ರಾಮ್​​ನಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ 10 ಲಕ್ಷ ದಾಟಿದೆ. ಒಂದು ಮಿಲಿಯನ್ ಫಾಲೋವರ್ಸ್ ಆಗಬೇಕು ಎಂಬುದು ಗಿಲ್ಲಿ ಕನಸಾಗಿತ್ತು. ಅದು ನನಸಾಗಿದೆ. ಅವರು ವಿನ್ ಆಗುತ್ತಾರಾ ಇಲ್ಲವಾ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇರಳದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಹೇರಿಕೆ: ಪಿಣರಾಯಿ ವಿಜಯನ್​ಗೆ ಸಿದ್ದರಾಮಯ್ಯ ಎಚ್ಚರಿಕೆ ಸಂದೇಶ – Kannada News | CM Siddaramaiah Opposes Making Malayalam Compulsory in Kannada Schools, Writes to Kerala CM Pinarayi Vijayan

ಸಿಎಂ ಸಿದ್ದರಾಮಯ್ಯ, ಕೇರಳ ಸಿಎಂ ಪಿಣರಾಯಿ ವಿಜಯನ್

ಬೆಂಗಳೂರು, ಜನವರಿ 09: ಕೋಗಿಲು ಲೇಔಟ್ ವಿಚಾರಕ್ಕೆ ಮೂಗು ತೂರಿಸಿದ್ದ ಕೇರಳ ಇದೀಗ ಮಲಯಾಳಂ ಭಾಷಾ ಮಸೂದೆ-2025 (Kerala Malayalam Language Bill) ಮೂಲಕ ಕಿರಿಕ್​ ತೆಗೆದಿದ್ದು, ಕೇರಳದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಹೇರಿಕೆಗೆ ಮುಂದಾಗಿದೆ. ಸದ್ಯ ಕೇರಳ ಸರ್ಕಾರದ ಈ ನಡೆಯನ್ನ ತೀವ್ರವಾಗಿ ಖಂಡಿಸಿರುವ ಸಿಎಂ ಸಿದ್ದರಾಮಯ್ಯ (Siddaramaiah), ಸಿಎಂ ಪಿಣರಾಯಿ ವಿಜಯನ್​ಗೆ ಪತ್ರ ಬರೆದಿದ್ದಾರೆ. ಆ ಮೂಲಕ ಗಡಿ ಜಿಲ್ಲೆಯಲ್ಲಿ ಕೇರಳದ ಮಲಯಾಳಂ ಭಾಷಾ ಮಸೂದೆ ಜಾರಿಯಾದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಭಾಷಾ ಮಸೂದೆಯ ಬಗ್ಗೆ ಸಿಎಂ ಕಳವಳ 

ಕೇರಳದಲ್ಲಿ ಮಲಯಾಳಂ ಕಡ್ಡಾಯ ಮಸೂದೆ ಜಾರಿಗೆ ಮುಂದಾಗಿದೆ. ಇದು ಗಡಿಭಾಗದ ಕಾಸರಗೋಡು ಮತ್ತು ಮಂಜೇಶ್ವರ ಭಾಗದ ಕನ್ನಡ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಕೇರಳ ಸರ್ಕಾರದ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತ ಸಿಎಂ ಸಿದ್ದರಾಮಯ್ಯ ಕೂಡ ಭಾಷಾ ಮಸೂದೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಸಿಎಂ ಸಿದ್ದರಾಮಯ್ಯ ಪತ್ರ

ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಲ್ಲಿ ಮಲಯಾಳಂ ಮೊದಲ ಭಾಷೆಯಾಗಿ ಕಡ್ಡಾಯಗೊಳಿಸುವುದು ಸರಿಯಲ್ಲ. ​ಗಡಿ ಭಾಗದಲ್ಲಿ ಮಲಯಾಳಂ, ಕನ್ನಡ, ತುಳು, ಬ್ಯಾರಿ ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವವರಿದ್ದಾರೆ. ಹಾಗಾಗಿ ಮಲಯಾಳಂ ಹೇರಿಕೆ ಮಾಡುವುದರಿಂದ ಮಕ್ಕಳಿಗೆ ಹೊರೆಯಾಗುವುದರಿಂದ ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕೇರಳದ ಮಲಯಾಳ ಭಾಷಾ ಮಸೂದೆಯಲ್ಲೇನಿದೆ? ಕನ್ನಡಿಗರಿಗೆ, ಕನ್ನಡ ಶಾಲೆಗಳಿಗೇಕೆ ಆತಂಕ?

ಸಂವಿಧಾನದ 29, 30, 350A, 350B ಅಡಿ ಶಿಕ್ಷಣ ಪಡೆವ ಹಕ್ಕಿದೆ. ತಮ್ಮ ಸಂಸ್ಕೃತಿ ಉಳಿಸಿಕೊಳ್ಳುವ ಹಕ್ಕಿದೆ. ​ಯಾವುದೇ ಭಾಷೆ ಪ್ರಚಾರ ಇನ್ನೊಂದು ಭಾಷೆಯ ಹೇರಿಕೆ ಆಗಬಾರದು. ಒಂದು ವೇಳೆ ಮಸೂದೆ ಅಂಗೀಕರಿಸಿದರೆ ಕರ್ನಾಟಕವು ಈ ಮಸೂದೆಯನ್ನು ಸಾಂವಿಧಾನಿಕವಾಗಿ ವಿರೋಧಿಸಲಿದೆ. ​ಕೇರಳ ಸರ್ಕಾರವು ಈ ನಿರ್ಧಾರವನ್ನು ಮರುಪರಿಶೀಲಿಸಬೇಕು. ಭಾಷಾ ಅಲ್ಪಸಂಖ್ಯಾತರು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಬೇಕು ಎಂದು ಪತ್ರದ ಮೂಲಕ ಕೇರಳ ಸಿಎಂ ವಿಜಯನ್​ಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:02 pm, Fri, 9 January 26

Source link

Viral News: ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಮಗುವಿನ ಗುಪ್ತಾಂಗವನ್ನೇ ಸುಟ್ಟ ತಾಯಿ! – Kannada News | Stepmother Burns 5 year old Daughters Private Part For Bedwetting In Kerala

ಪಾಲಕ್ಕಾಡ್, ಜನವರಿ 9: 5 ವರ್ಷದ ಪುಟ್ಟ ಬಾಲಕಿ ಮಲಗಿದ್ದಾಗ ಹಾಸಿಗೆಯಲ್ಲಿ ಮೂತ್ರ ಮಾಡಿದ್ದಾಳೆಂಬ ಕಾರಣಕ್ಕೆ ಆಕೆಯ ಮಲತಾಯಿ ಆ ಮಗುವಿನ ಗುಪ್ತಾಂಗವನ್ನೇ (Private Part) ಸುಟ್ಟಿದ್ದಾಳೆ. ಕಳೆದ ವಾರ ಉತ್ತರ ಕೇರಳ ಜಿಲ್ಲೆಯ ಕಾಂಜಿಕೋಡ್ ಬಳಿ ಈ ಘಟನೆ ನಡೆದಿದೆ. ಆ ಮಗು ಅಂಗನವಾಡಿಯಲ್ಲಿ ಕುಳಿತುಕೊಳ್ಳಲು ಕಷ್ಟಪಡುತ್ತಿರುವುದನ್ನು ಗಮನಿಸಿ ಶಿಕ್ಷಕಿ ಏನಾಯಿತು ಎಂದು ವಿಚಾರಿಸಿದಾಗ ಆ ಮಗು ಈ ವಿಷಯವನ್ನು ಹೇಳಿದೆ.

ಬಳಿಕ ಆ ಮಗುವಿನ ಗುಪ್ತಾಂಗವನ್ನು ಪರೀಕ್ಷಿಸಿದ ಅಂಗನವಾಡಿ ಶಿಕ್ಷಕಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಿಹಾರ ಮೂಲದ ಮಲತಾಯಿಯನ್ನು ಬಂಧಿಸಲಾಗಿದೆ. ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆ ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಬಾಲ ನ್ಯಾಯ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಆ ಮಗು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಆರೈಕೆಯಲ್ಲಿದೆ.

ಇದನ್ನೂ ಓದಿ: ಅಮ್ಮನ ಎದೆಹಾಲು ಕುಡಿಯುವಾಗ ಮಗು ಸಾವು!

ಆ ಮಹಿಳೆ ಇದಕ್ಕೂ ಮುಂಚೆ ಕೂಡ ಮಗುವಿನ ಮೇಲೆ ಇದೇ ರೀತಿ ಹಲ್ಲೆ ನಡೆಸಿದ್ದಾಳೆ ಎಂದು ಅಕ್ಕಪಕ್ಕದವರು ಹೇಳಿದ್ದಾರೆ. ಈ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಿ, ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:03 pm, Fri, 9 January 26

Source link

ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಸಿಡಿದೆದ್ದ ಮೃತಳ ಸಹಪಾಠಿಗಳು – Kannada News | Yashaswini Suicide for lecturer harassment harassment In Bengaluru; Students Protest For Justice

ಬೆಂಗಳೂರು, (ಜನವರಿ 09): ಉಪನ್ಯಾಸಕನ ಅವಮಾನಕ್ಕೆ ಮನನೊಂದು ಡೆಂಟಲ್ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಚಂದಾಪುರದಲ್ಲಿ ನಡೆದಿದೆ. ಮೃತಳನ್ನು ಯಶಸ್ವಿನಿ(23) ಎಂದು ಗುರುತಿಸಲಾಗಿದ್ದು, ಬೊಮ್ಮನಹಳ್ಳಿ ಖಾಸಗಿ ಕಾಲೇಜಿನ Oral Medicine and Radiology ವಿಭಾಗದಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಕಣ್ಣು ನೋವಿನಿಂದ ಕಾಲೇಜಿಗೆ ರಜೆ ಹಾಕಿದ್ದಕ್ಕೆ ಉಪನ್ಯಾಸಕ ಕ್ಲಾಸ್‌ನಲ್ಲಿ ಅವಮಾನ ಮಾಡಿ, ಕಿರುಕುಳ ನೀಡಿದ್ದನ್ನು ತಾಳಲಾರದೇ ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿದ್ಯಾರ್ಥಿಗಳು ಉಪನ್ಯಾಸನಕ ವಿರುದ್ಧ ಸಿಡಿದೆದಿದ್ದಾರೆ. ಕಾಲೇಜು ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಸ್ಟೀಸ್ ಫಾರ್ ಯಶಸ್ವಿನಿ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ಆತ್ಮಹತ್ಯೆಗೆ ಕಾರಣರಾದ ಉಪನ್ಯಾಸಕನ ವಿರುದ್ಧ ಸೂಕ್ತ ಕ್ರಮವಾಗಬೇಕೆಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಯಶ್ ಮುಂದಿನ ಸಿನಿಮಾ ನಿರ್ದೇಶಕರಿಗೆ ಸಲಹೆ ಕೊಟ್ಟ ‘ಟಾಕ್ಸಿಕ್’ ನಿರ್ದೇಶಕಿ – Kannada News | Toxic movie director Geetu Mohandas writes about Yash and his brilliance

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ನಿನ್ನೆ (ಜನವರಿ 08) ಬಿಡುಗಡೆ ಆಗಿದೆ. ಟೀಸರ್ ಕೇವಲ ಒಂದೇ ದಿನದಲ್ಲಿ ದಾಖಲೆ ಸಂಖ್ಯೆಯ ವೀಕ್ಷಣೆ ಪಡೆದಿದೆ. ಟೀಸರ್​ ಅನ್ನು ಹಾಲಿವುಡ್ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಸಿನಿಮಾ ಸಹ ಇದೇ ಗುಣಮಟ್ಟದಲ್ಲಿ ನಿರ್ಮಾಣ ಆಗಿರುವುದು ಟೀಸರ್​​ನಿಂದ ಖಾತ್ರಿ ಆಗಿದೆ. ಆದರೆ ಟೀಸರ್​​ನ ಕೆಲವು ದೃಶ್ಯಗಳ ಬಗ್ಗೆ ಪರ-ವಿರೋಧ ಚರ್ಚೆ ಜಾರಿಯಲ್ಲಿದೆ. ಇದೆಲ್ಲದರ ನಡುವೆ ‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತು ಮೋಹನ್​​ದಾಸ್, ಯಶ್ ಅವರ ಮುಂದಿನ ಸಿನಿಮಾ ನಿರ್ದೇಶನ ಮಾಡಲಿರುವ ನಿರ್ದೇಶಕರಿಗೆ ಸಲಹೆ ಕೊಟ್ಟಿದ್ದಾರೆ.

ನಿನ್ನೆ ಯಶ್ ಅವರ ಹುಟ್ಟುಹಬ್ಬವೂ ಆಗಿದ್ದು, ತಮ್ಮ ಸಿನಿಮಾದ ನಾಯಕನಿಗೆ ಹುಟ್ಟುಹಬ್ಬ ಶುಭಾಶಯ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿರ್ದೇಶಕಿ ಗೀತು ಮೋಹನ್​​ದಾಸ್, ‘ಪ್ರತಿಭೆ ಮತ್ತು ಸೂಪರ್‌ಸ್ಟಾರ್‌ಡಮ್‌ನ ಅಪರೂಪದ ಸಮ್ಮಿಲನವಾಗಿದ್ದಾರೆ ಯಶ್. ಅವರ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ, ಜಗತ್ತು ಇನ್ನೂ ನೋಡದ ‘ರಾಯ’ ಪಾತ್ರದಲ್ಲಿನ ಅವರ ಅಭಿನಯಕ್ಕಾಗಿ ಮಾತ್ರವೇ ಅಲ್ಲ, ಅವರು ನಮ್ಮ ಸಿನಿಮಾಕ್ಕೆ ಪ್ರತಿದಿನ ತಂದ ಶಿಸ್ತಿಗಾಗಿ. ‘ರಾಯ’ ಕೇವಲ ಅವರು ನಿರ್ವಹಿಸಿದ ಪಾತ್ರ ಮಾತ್ರ ಅಲ್ಲ, ತಮ್ಮ ಅಭಿನಯ ಚತುರತೆಯಿಂದ ಅವರೇ ಕೆತ್ತಿದ ಪಾತ್ರ’ ಎಂದಿದ್ದಾರೆ ಗೀತು ಮೋಹನ್​​ದಾಸ್.

ಮುಂದುವರೆದು, ‘‘ಟಾಕ್ಸಿಕ್’ ಚಿತ್ರೀಕರಣದ ವೇಳೆ ಅವರು ನನ್ನನ್ನು ಪ್ರಶ್ನಿಸಿದರು, ಸವಾಲು ಹಾಕಿದರು, ನನ್ನ ನಿರ್ಣಯಗಳನ್ನು ಪರಿಶೀಲಿಸಿಕೊಳ್ಳುವಂತೆ ಮಾಡಿದರು, ನನ್ನ ಕತೆಯನ್ನೇ ನಾನು ಅನ್ವೇಶಣೆ ಮಾಡುವಂತೆ ಮಾಡಿದರು ಮತ್ತು ನಿರ್ದೇಶಕಿಯ ಯೋಚನೆಗೆ ತಮ್ಮನ್ನು ತಾವು ಶರಣಾಗಿಸಿಕೊಂಡರು. ಸದಾ ಕತೆ ಮತ್ತು ಕಲೆಯ ಸೇವೆಯಲ್ಲಿಯೇ ಇದ್ದರು. ನಮ್ಮ ಈ ಪರಿಚಯದಲ್ಲಿ ನಾನು ಸಾಕಷ್ಟು ಕಲಿತೆ ವಿಶೇಷವಾಗಿ ನಾನು ಕಥೆ ಹೇಳುವಿಕೆಯ ಆಳವನ್ನು ಅರಿತುಕೊಂಡೆ. ಜೊತೆಗೆ ನಿರ್ದೇಶಕಿಯೊಬ್ಬರ ಸಾಹಸಕ್ಕೆ ಸದಾ ಬೆನ್ನೆಲುಬಾಗಿ ನಿಲ್ಲುವ ನಿರ್ಮಾಪಕನನ್ನು ಕಂಡುಕೊಂಡೆ’ ಎಂದಿದ್ದಾರೆ.

ಇದನ್ನೂ ಓದಿ:ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್; ಇದು ಯಶ್ ಹವಾ

‘ಅವರ ಖ್ಯಾತಿಯ ಬೆನ್ನು ಹತ್ತಿ ಅವರಲ್ಲಿರುವ ಪ್ರತಿಭೆಯನ್ನು ಕಡೆಗಣಿಸುವ ಸಾಧ್ಯತೆ ಇದೆ. ಹಾಗಾಗಿ ನಾನು ಯಶ್ ಅವರ ಮುಂದಿನ ಸಿನಿಮಾಗಳನ್ನು ನಿರ್ದೇಶಿಸಲಿರುವ ನಿರ್ದೇಶಕರುಗಳಿಗೆ ಕೆಲವು ಸಲಹೆ ನೀಡುವೆ, ಅವರು ಯಶ್ ಅವರ ಅದ್ಭುತ ನಟನಾ ಪ್ರತಿಭೆಯನ್ನು ಸಂಪೂರ್ಣವಾಗಿ ಹೊರಗೆತ್ತುವ ಕಾರ್ಯವನ್ನು ಮಾಡಬೇಕು’ ಎಂದಿದ್ದಾರೆ ಗೀತು ಮೋಹನ್​​ದಾಸ್.

‘ನಮ್ಮ ಈ ಜಂಟಿ ಪ್ರಯಾಣವು ನಂಬಿಕೆ, ಸುದೀರ್ಘ ಸಂಭಾಷಣೆಗಳು ಮತ್ತು ನಮ್ಮಿಬ್ಬರಿಗಿಂತ ದೊಡ್ಡದಾದ ಕಲೆಯ ಪಸರಿಕೆಗಾಗಿ ಆಗಿದೆ ಎಂದು ನಾನು ನಂಬಿದ್ದೇನೆ. ನಮ್ಮಿಬ್ಬರ ಸ್ನೇಹದಲ್ಲಿ ನಾನು ಅತಿ ಹೆಚ್ಚು ಗೌರವ ನೀಡುವುದು ಯಶ್ ನನ್ನ ಮೇಲಿಟ್ಟ ನಂಬಿಕೆ ಮತ್ತು ಅವರ ಕಲಾತ್ಮಕತೆ. ಈ ಸಿನಿಮಾ ಮುಗಿದ ಬಳಿಕವೂ ಹಲವು ಕಾಲ ಯಶ್ ನನ್ನೊಂದಿಗೆ ಇರಲಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಯಶ್’ ಎಂದಿದ್ದಾರೆ ನಿರ್ದೇಶಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

WPL 2026: ಡಬ್ಲ್ಯುಪಿಎಲ್​ನಿಂದ ಹೊರಬಿದ್ದ ಭಾರತದ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟರ್

Source link

ಬಳ್ಳಾರಿ ಗಲಭೆ ಕೇಸ್​​: ಗನ್‌ಮ್ಯಾನ್‌ ಹೊರತು ಪಡಿಸಿ 25 ಆರೋಪಿಗಳಿಗೆ ಜಾಮೀನು – Kannada News | Bellari Violence Case: 25 accused except gunman granted bail

ಬೆಂಗಳೂರು, ಜನವರಿ 09: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಪ್ರಕರಣ (Bellari Violence Case) ನಿತ್ಯ ಒಂದಿಲ್ಲೊಂದು ತಿರುವು ಪಡೆದುಕೊಳ್ಳುತ್ತಿದೆ. ದಿನಕ್ಕೊಂದು ವಿಡಿಯೋಗಳು ಹೊರಬರುತ್ತಿವೆ. ಪೊಲೀಸರು ಕೂಡ ತನಿಖೆಯನ್ನ ತೀವ್ರಗೊಳಿಸಿದ್ದಾರೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಮ್ ನಂಬರ್ 4ರಲ್ಲಿನ 25 ಆರೋಪಿಗಳಿಗೆ ಜಾಮೀನು (bail) ನೀಡಿ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್‌ ಶುಕ್ರವಾರ ಆದೇಶ ಹೊರಡಿಸಿದೆ.

25 ಬಂಧಿತ ಆರೋಪಿಗಳಿಗೆ ಜಾಮೀನು ಮಂಜೂರು

ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಖಾಸಗಿ ಗನ್ ಮ್ಯಾನ್ ಗುರುಚರಣ್​​​ ಸಿಂಗ್​​ಗೆ ಸಂಬಂಧಿಸಿದ ಗನ್‌ನಿಂದಲೇ 12 ಎಂಎಂ ಬುಲೆಟ್ ಫೈರ್ ಮಾಡಿದ್ದಾನೆ. ಹೀಗಾಗಿ ಗುರುಚರಣ್​​ ಸಿಂಗ್ ಹೊರತು ಪಡಿಸಿ ಕ್ರೈಮ್ ನಂಬರ್ 4ರಲ್ಲಿನ 25 ಬಂಧಿತ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಇದನ್ನೂ ಓದಿ: ಬಳ್ಳಾರಿ ಗಲಭೆ: 26 ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್​

ಬಳ್ಳಾರಿ ಬ್ಯಾನರ್ ಗಲಾಟೆ ಸಂಬಂಧ ಬ್ರೂಸ್‌ಪೇಟೆ ಠಾಣೆಯಲ್ಲಿ ಒಟ್ಟು 6 ಪ್ರಕರಣ ದಾಖಲಾಗಿವೆ. ಗನ್‌ಮ್ಯಾನ್‌ಗಳಾದ ಗುರುಚರಣ್‌ ಸಿಂಗ್‌, ಬಲ್ಜಿತ್ ಸಿಂಗ್‌ ಹಾಗೂ ಮಹೇಂದ್ರ ಸಿಂಗ್‌ ಸೇರಿದಂತೆ ಕಾಂಗ್ರೆಸ್‌ನ 10, ಬಿಜೆಪಿಯ 11 ಕಾರ್ಯಕರ್ತರು ಸೇರಿದಂತೆ ಒಟ್ಟು 26 ಜನರನ್ನು ಪೊಲೀಸರು ಬಂಧಿಸಿದ್ದರು.

ಜನವರಿ 05ರಂದು ಪ್ರಮುಖ ಆರೋಪಿ ಗುರುಚರಣ್‌ ಸಿಂಗ್ ಸೇರಿ 26 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದೇಶ ಬೆನ್ನಲ್ಲೇ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಶಿಫ್ಟ್ ಮಾಡಿದ್ದರು.

ಇದನ್ನೂ ಓದಿ: ಬಳ್ಳಾರಿ ಗಲಭೆ: ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್

ಇನ್ನು ಬಳ್ಳಾರಿ ಬ್ಯಾನರ್ ಘರ್ಷಣೆ ವಿಚಾರವಾಗಿ ದಿನಕ್ಕೊಂದು ವಿಡಿಯೋ ಬಯಲಾಗುತ್ತಿವೆ. ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಬ್ಯಾನರ್ ಗಲಭೆಯ ಮತ್ತಷ್ಟು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಅಂತ್ಯಕ್ರಿಯೆ ವೇಳೆ ಸ್ಮಶಾನದಲ್ಲಿನ ವ್ಯಕ್ತಿಯೊಬ್ಬ ಮೊದಲು ಮಣ್ಣು ಮಾಡಲು ಗುಂಡಿ ತೋಡಿ, ಆ ಬಳಿಕ ಮೃತದೇಹ ಸುಡಲಾಗುತ್ತೆ ಅನ್ನೋ ವಿಡಿಯೋ ರಿಲೀಸ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:16 pm, Fri, 9 January 26

Source link

ಅಶ್ವಿನಿ ಗೌಡಗೆ ಅಹಂಕಾರ ಇತ್ತು: ಪ್ರಶಾಂತ್ ಸಂಬರ್ಗಿ ಹೀಗೆ ಹೇಳಿದ್ದು ಯಾಕೆ? – Kannada News | Bigg Boss Kannada Season 12 Ashwini Gowda was arrogant says Prashanth Sambargi

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಅಶ್ವಿನಿ ಗೌಡ (Ashwini Gowda), ಗಿಲ್ಲಿ ನಟ, ಕಾವ್ಯ ಶೈವ, ಧ್ರುವಂತ್, ಮ್ಯೂಟೆಂಟ್ ರಘು, ಧನುಷ್, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ ಅವರು ಕೊನೇ ಹಂತದ ತನಕ ಬಂದಿದ್ದಾರೆ. ಗಿಲ್ಲಿ ನಟ ಅವರಿಗೆ ವಿಪರೀತ ಫ್ಯಾನ್ ಫಾಲೋಯಿಂಗ್ ಸೃಷ್ಟಿ ಆಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ (Prashanth Sambargi) ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

‘ನನಗೆ ಮೊದಲು ಹತ್ತು ದಿನ ಅಶ್ವಿನಿ ಗೌಡ ಅವರು ಇಷ್ಟ ಆಗಲಿಲ್ಲ. ಅಹಂಕಾರ, ಜಂಭ, ಕೊಬ್ಬು ಇತ್ತು. ಮಾತಿನಲ್ಲಿ ಹಿಡಿತ ಇರಲಿಲ್ಲ. ಬೇರೆಯವರಿಗೆ ಅವರು ಗೌರವ ಕೊಡುತ್ತಿರಲಿಲ್ಲ. ಆದರೆ ಕ್ರಮೇಣ ಅವರ ಮೇಲೆ ಪ್ರೀತಿ, ಮರ್ಯಾದೆ, ಅನುಕಂಪ ಶುರು ಆಯಿತು. ಇದು ಹೇಗೆ ಎಂದರೆ.. ಎಲ್ಲರೂ ಅವರನ್ನೇ ಟಾರ್ಗೆಟ್ ಮಾಡಿದಾಗ ಹೊರಗಡೆ ತುಂಬಾ ಟ್ರೋಲ್ ಆಗಿದೆ. ಅದು ಅವರಿಗೆ ಗೊತ್ತಿಲ್ಲ. ಸುದೀಪ್ ಅವರು ಹೇಳಿದ್ದನ್ನು ಕೇಳಿ ಅಶ್ವಿನಿ ಗೌಡ ತಿದ್ದಿಕೊಂಡಿದ್ದಾರೆ’ ಎಂದಿದ್ದಾರೆ ಪ್ರಶಾಂತ್ ಸಂಬರ್ಗಿ.

‘ಗಿಲ್ಲಿ ನಟ ಕಾಮಿಡಿಯನ್ ಆಗಿ ನನಗೆ ಮೊದಲಿನಿಂದಲೂ ಇಷ್ಟ ಆಗುತ್ತಾರೆ. ಹಾಗಾಗಿ ನಾನು ಗಿಲ್ಲಿಯನ್ನು ಬಿಟ್ಟು ಕೊಡೋಕೆ ಆಗಲ್ಲ. ಆದರೆ ಅಶ್ವಿನಿ ಅವರು ಗಟ್ಟಿ ಮನಸ್ಸು, ಇಷ್ಟು ದಿನ ಫೈಟ್ ಮಾಡಿದ್ದಾರೆ. ಹಾಗಾಗಿ ಅವರ ಮೇಲೆ ನನಗೆ ಪ್ರೀತಿ, ಅಭಿಮಾನ ಮೂಡಿದೆ. ಆದರೆ ಗೆಲ್ಲೋದು ಗಿಲ್ಲಿಯೇ’ ಎಂದು ಪ್ರಶಾಂತ್ ಸಂಬರ್ಗಿ ಅವರು ಹೇಳಿದ್ದಾರೆ.

‘ಆರಂಭದಲ್ಲಿ ಅಶ್ವಿನಿ ಗೌಡ ಬಹಳ ಗಲಾಟೆ ಮಾಡುತ್ತಿದ್ದರು. ಎಲ್ಲರನ್ನೂ ಅವರು ಎದುರು ಹಾಕಿಕೊಳ್ಳುತ್ತಿದ್ದರು. ತುಂಬಾ ಗಲಾಟೆ ಮಾಡುವವರನ್ನು ಜನರು ಇಷ್ಟಪಡಲ್ಲ. ಬಿಗ್ ಬಾಸ್ ಮನೆಯಲ್ಲಿ ಗುಂಪುಗಾರಿಕೆ ಆಗುತ್ತದೆ. ನೀವು ಒಬ್ಬರೇ ಆದಾಗ ಮಾನಸಿಕವಾಗಿ ಕುಗ್ಗುತ್ತೀರಿ. ಅಶ್ವಿನಿ ಗೌಡ ಅವರು ಆರಂಭದಲ್ಲಿ ಫುಲ್ ವೇಗದಲ್ಲಿ ಹೋಗಿ ಪೆಟ್ರೋಲ್ ಖಾಲಿ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಚೆನ್ನಾಗಿ ಆಡಿದ್ದಾರೆ. ಅವರು ಆಟ ಬದಲಾಯಿಸಿಕೊಂಡಿದ್ದಾರೆ. ನಾನು ನನ್ನ ಅಭಿಪ್ರಾಯ ಬದಲಾಯಿಸಿಕೊಂಡಿದ್ದೇನೆ’ ಎಂದಿದ್ದಾರೆ ಪ್ರಶಾಂತ್ ಸಂಬರ್ಗಿ.

ಇದನ್ನೂ ಓದಿ: ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ

ಈ ಬಾರಿಯಾದರೂ ಮಹಿಳಾ ಸ್ಪರ್ಧಿಗೆ ಬಿಗ್ ಬಾಸ್ ಕಪ್ ಸಿಗುತ್ತಾ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಇದೆ. ಆದರೆ ಪ್ರಶಾಂತ್ ಸಂಬರ್ಗಿ ಅವರು ಈ ಬಾರಿ ಖಂಡಿತವಾಗಿಯೂ ಗಿಲ್ಲಿಯೇ ವಿನ್ ಆಗುತ್ತಾರೆ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ. ನೂರಾರು ದಿನಗಳ ಜರ್ನಿ ಮುಕ್ತಾಯ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

22ರಲ್ಲಿ 19 ಮಸೂದೆ ಪಾಸ್, ಎರಡು ವಾಪಸ್: ಕಾಂಗ್ರೆಸ್​​​​ನ ದ್ವೇಷ ಭಾಷಣ ಬಿಲ್ ಆಸೆ​ ಠುಸ್ – Kannada News | Karnataka governor thawar chand gehlot returns two Bills, 19 others get assent

ಬೆಂಗಳೂರು, (ಜನವರಿ 09): ರಾಜ್ಯ ಸರ್ಕಾರ ಕಳಿಸಿದ್ದ 22 ಮಸೂದೆಗಳ (Bills) ಪೈಕಿ 19ಕ್ಕೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ (Karnataka governor thawar chand gehlot) ಅಂಕಿತ ಹಾಕಿದ್ದಾರೆ. ಆದ್ರೆ, ತೀವ್ರ ವಿವಾದಕ್ಕೆ ಕಾರಣವಾಗಿರುವ ದ್ವೇಷ ಭಾಷಣ ಮಸೂದೆಯನ್ನು ಪೆಂಡಿಂಗ್ ಇಟ್ಟಿದ್ದು, 2 ಮಸೂದೆಗಳ ಬಗ್ಗೆ ಹೆಚ್ಚಿನ ಸ್ಪಷ್ಟನೆ ಕೇಳಿ ವಾಪಸ್ ಕಳುಹಿಸಿದ್ದಾರೆ. ಈ ಸಂಬಂಧ ಇಂದು (ಜನವರಿ 09) ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿವರಣೆ ಕೇಳಿ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮಸೂದೆ ಹಾಗೂ ಪರಿಶಿಷ್ಟ ಜಾತಿಗಳ (ಉಪವರ್ಗೀಕರಣ) ವಿಧೇಯಕಗಳನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದಾರೆ.

ದ್ವೇಷ ಭಾಷಣ ಮಸೂದೆ ಪೆಂಡಿಂಗ್

ಮಂಡನೆಯಾಗಿ ಪಾಸ್ ಆಗಿತ್ತು. ಇದರ ಬೆನ್ನಲ್ಲೇ ಈ ಮಸೂದೆಗೆ ಅಂಕಿತ ಹಾಕದಂತೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ದ್ವೇಷ ಭಾಷಣ ಮಸೂದೆಗೆ ಅಂಕಿತವೂ ಹಾಕದೇ ವಾಪಸ್ಸೂ ಕಳಿಸದೇ ಪೆಂಡಿಂಗ್ ಇಟ್ಟಿದ್ದಾರೆ. ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ವಿಧೇಯಕ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ದ್ವೇಷ ಭಾಷಣ ಮಸೂದೆ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಲು ರಾಜ್ಯಪಾಲರು ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ. ರಾಷ್ಟ್ರಪತಿಗಳಿಗೂ ದ್ವೇಷ ಭಾಷಣ ಮಸೂದೆ ಕಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ದ್ವೇಷ ಭಾಷಣ ವಿಧೇಯಕ ರಿಜೆಕ್ಟ್​ ಮಾಡಲು ಸಾಕಾಗಲಿದೆಯಾ ಆ ಒಂದು ಕಾರಣ! ರಾಜ್ಯಪಾಲರಿಗೆ ಸಲ್ಲಿಕೆಯಾದ ಪತ್ರದಲ್ಲೇನಿದೆ?

ಒಳಮೀಸಲಾತಿ ಮಸೂದೆ ವಾಪಸ್

ಇನ್ನು ಒಳಮೀಸಲಾತಿ ಹಂಚಿಕೆಗೆ ಕಾನೂನು ಮಾನ್ಯತೆ ಕೊಡುವ ಪರಿಶಿಷ್ಟ ವರ್ಗಗಳ ಮಸೂದೆ ಬಗ್ಗೆ ಹೆಚ್ಚಿನ ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ವಿಧೇಯಕ ವಾಪಸ್ ಕಳಿಸಿದ್ದಾರೆ. ಶೇ.17ರಷ್ಟು ಎಸ್‌ಸಿ ಮೀಸಲಾತಿಯನ್ನು ಒಳಪಂಗಡಗಳಿಗೆ 6+6+5ರ ಅನುಪಾತದಲ್ಲಿ ಹಂಚಿಕೆ ಮಾಡಲಾಗಿತ್ತು. ಒಳಮೀಸಲಾತಿಗೆ ಕಾನೂನಾತ್ಮಕ ತೊಡಕು ಬರದಿರಲು ಸರ್ಕಾರ ಮಸೂದೆ ತಂದಿತ್ತು. ಆದ್ರೆ ಇಂದಿರಾ ಸಹಾನಿ ಪ್ರಕರಣದಲ್ಲಿ ಒಟ್ಟಾರೆ ಮೀಸಲಾತಿ ಪ್ರಮಾಣ 50% ಮೀರಬಾರದೆಂಬ ಸುಪ್ರೀಂಕೋರ್ಟ್ ತೀರ್ಪು ಇದೆ. ಈ ಹಿನ್ನೆಲೆ ರಾಜ್ಯಪಾಲರು ಹೆಚ್ಚಿನ ಸ್ಪಷ್ಟನೆ ಕೇಳಿದ್ದಾರೆ. ಸದ್ಯದಲ್ಲೇ ಸರ್ಕಾರ, ರಾಜ್ಯಪಾಲರಿಗೆ ಸ್ಪಷ್ಟೀಕರಣ ನೀಡಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:27 pm, Fri, 9 January 26

Source link

Union Budget 2026: ಜನವರಿ 28ರಿಂದ ಸಂಸತ್ ಅಧಿವೇಶನ ಆರಂಭ; ಫೆಬ್ರವರಿ 1ಕ್ಕೆ ಕೇಂದ್ರ ಬಜೆಟ್ ಮಂಡನೆ – Kannada News | Parliament Budget Session to begin on January 28 Union Budget 2026 to be tabled on February 1

ನವದೆಹಲಿ, ಜನವರಿ 9: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 28ರಂದು ಆರಂಭವಾಗಲಿದ್ದು, ಫೆಬ್ರವರಿ 1ರಂದು ಕೇಂದ್ರ ಬಜೆಟ್ 2026 (Union Budget 2026) ಮಂಡನೆಯಾಗಲಿದೆ. ಈ ಕುರಿತು ಮಾಹಿತಿಯನ್ನು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಇಂದು ಬಿಡುಗಡೆ ಮಾಡಿದೆ. ಬಜೆಟ್ ಅಧಿವೇಶನವು ಜನವರಿ 28ರಂದು ಪ್ರಾರಂಭವಾಗಿ ಏಪ್ರಿಲ್ 2ರವರೆಗೆ ಮುಂದುವರಿಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಅಧಿವೇಶನಕ್ಕೆ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ. ಅವರು ಅಧಿವೇಶನದ ಮೊದಲ ದಿನದಂದು ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬಜೆಟ್ ಅಧಿವೇಶನದ ಮೊದಲ ಹಂತವು ಫೆಬ್ರವರಿ 13ರಂದು ಮುಕ್ತಾಯಗೊಳ್ಳಲಿದ್ದು, ಎರಡನೇ ಹಂತಕ್ಕೆ ಮಾರ್ಚ್ 9ರಂದು ಸಂಸತ್ ಸಭೆ ಸೇರಲಿದೆ. ಕೇಂದ್ರ ಸರ್ಕಾರವು 2025-26 ರ ಆರ್ಥಿಕ ಸಮೀಕ್ಷೆಯನ್ನು ಜನವರಿ 29ರಂದು ಮಂಡಿಸಲಿದೆ. ಕೇಂದ್ರ ಬಜೆಟ್ 2026-27 ಅನ್ನು ಫೆಬ್ರವರಿ 1ರಂದು ಮಂಡಿಸಲಾಗುವುದು.

ಇದನ್ನೂ ಓದಿ: ಬರಲಿದೆ ಹೊಸ ಆದಾಯ ತೆರಿಗೆ ಕಾಯ್ದೆ; ಬಜೆಟ್​ನಲ್ಲಿ ಘೋಷಣೆ, ಏ. 1ರಿಂದ ಜಾರಿ

ಈ ಬಜೆಟ್ ಅಧಿವೇಶನದಲ್ಲಿ ಬಜೆಟ್ ಚರ್ಚೆಗಳು, ಸಬ್ಸಿಡಿ ಬೇಡಿಕೆಗಳು ಮತ್ತು ಪ್ರಮುಖ ಆರ್ಥಿಕ ನೀತಿಗಳ ಕುರಿತು ವಿವರವಾದ ಚರ್ಚೆಗಳು ನಡೆಯಲಿವೆ. ಸಾರ್ವಜನಿಕರು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಮತ್ತು ತೆರಿಗೆದಾರರು ಎಲ್ಲರೂ ಈ ಬಜೆಟ್ ಬಗ್ಗೆ ಬಹಳ ಕಾತುರ ಇಟ್ಟುಕೊಂಡಿದ್ದಾರೆ. ಈ ಅಧಿವೇಶನದಲ್ಲಿ ಕೇಂದ್ರ ಬಜೆಟ್, ಸಬ್ಸಿಡಿ ಬೇಡಿಕೆಗಳು ಮತ್ತು ಪ್ರಮುಖ ಆರ್ಥಿಕ ನೀತಿಗಳ ಕುರಿತು ವಿವರವಾದ ಚರ್ಚೆಗಳು ಸಂಸತ್ತಿನಲ್ಲಿ ನಡೆಯಲಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link