ಸಂಕಷ್ಟದಲ್ಲಿದ್ದ ‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಈ ಸಿನಿಮಾಗೆ ತಕ್ಷಣವೇ ಸೆನ್ಸಾರ್ ಪತ್ರ ನೀಡುವಂತೆ ಆದೇಶ ಹೊರಡಿಸಿದೆ. ಇದರಿಂದ ತಂಡಕ್ಕೆ ದೊಡ್ಡ ರಿಲೀಫ್ ಸಿಕ್ಕಿದೆ. ಸಿನಿಮಾನ ಯಾವಾಗ ರಿಲೀಸ್ ಮಾಡಬೇಕು ಎಂಬುದರ ಬಗ್ಗೆ ತಂಡ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಿನಿಮಾಗೆ ಸೆನ್ಸಾರ್ ಪತ್ರ ನೀಡದ ಬಗ್ಗೆ ಕೆವಿಎನ್ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆ ಮಾಡಿದರೂ ನಮಗೆ ಪ್ರಮಾಣಪತ್ರ ನೀಡಿಲ್ಲ ಎಂದು ನಿರ್ಮಾಣ ಸಂಸ್ಥೆ ಅಳಲು ತೋಡಿಕೊಂಡಿತ್ತು. ಸಿನಿಮಾಗೆ ದೊಡ್ಡ ಮೊತ್ತದ ಬಂಡವಾಳ ಹೂಡಿದ್ದಾಗಿಯೂ ಹೇಳಿಕೊಂಡಿತ್ತು. ಈಗ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಕೋರ್ಟ್ ಆದೇಶ ನೀಡಿದ್ದು, ‘ಯುಎ’ ಸೆನ್ಸಾರ್ ಪತ್ರ ನೀಡುವಂತೆ ಸೂಚಿಸಿದೆ.
ಬೆಂಗಳೂರು, ಜ.9: ಕೋಗಿಲು ಅಕ್ರಮ ವಾಸಿಗಳು ರಾಜ್ಯ ಸರ್ಕಾರ ವಸತಿ ಭಾಗ್ಯವನ್ನು ನೀಡಲು ಮುಂದಾಗಿದೆ. ಆದರೆ ನಿಜವಾಗಿಯು ಸರ್ಕಾರದಿಂದ ಈ ವಸತಿ ಭಾಗ್ಯ ಸಿಗಬೇಕಾಗಿರುವುದು ಇವರಿಗೆ. ಇದು ಟಿವಿ9 ಕನ್ನಡ ಮಾಡಿದ ವಿಶೇಷ ವರದಿ. ಸಾಧಕರಿಗೆ ಸಿಗಬೇಕಾದ ಸೌಲಭ್ಯ ಅಕ್ರಮವಾಗಿ ಬಂದವರಿಗೆ ಸಿಗುತ್ತಿದೆ ಎಂಬುದನ್ನು ಜನರ ಅಕ್ರೋಶವಾಗಿದೆ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ. ದೇಶವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ಯಾರಾ-ಅಥ್ಲೀಟ್ ಪ್ರಸಾದ್ ಅವರು, ವಿಕಲಚೇತನ ಕುಟುಂಬದೊಂದಿಗೆ ಐದು ವರ್ಷಗಳಿಂದ ಮನೆಗಾಗಿ ಪರದಾಡುತ್ತಿದ್ದಾರೆ. ಆದರೆ, ಕೋಗಿಲು ಅಕ್ರಮ ವಾಸಿಗಳಿಗೆ 30 ದಿನಗಳಲ್ಲಿ ಮನೆ ಮಂಜೂರಾಗಿದ್ದು, ಅರ್ಹರಿಗೆ ಅನ್ಯಾಯವಾಗುತ್ತಿದೆ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ. ಕೋಗಿಲು ಪ್ರದೇಶದ 26 ಅತಿಕ್ರಮಣದಾರರಿಗೆ 30 ದಿನಗಳೊಳಗೆ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ವಸತಿ ಮತ್ತು ಕಂದಾಯ ಸಚಿವರು ದೃಢಪಡಿಸಿದ್ದಾರೆ. ಸರ್ಕಾರವು ಮಾನವೀಯತೆ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ ಎಂದು ಹೇಳಿದೆ. ಆದರೆ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಪ್ಯಾರಾ-ಅಥ್ಲೀಟ್ ಪ್ರಸಾದ್ ಅವರಿಗೆ ಕಳೆದ ಐದು ವರ್ಷಗಳಿಂದ ಮನೆ ಮಂಜೂರಾಗಿಲ್ಲ. ಪ್ರಸಾದ್ ಅವರ ಕುಟುಂಬದಲ್ಲಿ ತಂದೆ ರಾಮು (70) ಮತ್ತು ತಾಯಿ (65) ಸೇರಿದಂತೆ ಎಲ್ಲರೂ ವಿಕಲಚೇತನರಾಗಿದ್ದಾರೆ. 2001ರಲ್ಲಿ ಮನೆಗಾಗಿ 1 ಲಕ್ಷ ರೂಪಾಯಿ ಪಾವತಿಸಿದ್ದರೂ, ಪ್ರಸಾದ್ ಮತ್ತು ಅವರ ಕುಟುಂಬ ಕಾದು ಕುಳಿತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಾದ್ ಅವರ ಸಾಧನೆಯನ್ನು ಮೆಚ್ಚಿದ್ದರೂ, ವಸತಿ ಸೌಲಭ್ಯ ಒದಗಿಸುವಲ್ಲಿ ವಿಳಂಬವಾಗಿದೆ. ಅರ್ಹರಿಗೆ ಸೂರು ನೀಡುವಲ್ಲಿ ಸರ್ಕಾರವು ತನ್ನ ಕರ್ತವ್ಯವನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದೀಗ ಪ್ಯಾರಾಒಲಂಪಿಕ್ ಕ್ರೀಡಾಪಟು ಪ್ರಸಾದ್ಗೆ ಮನೆ ನೀಡುವ ಭರವಸೆಯನ್ನು ರಾಜೀವ್ ಗಾಂಧಿ ವಸತಿ ನಿಗಮ ಅಧ್ಯಕ್ಷ ಪರಶುರಾಮ್ ಅವರು ಟಿವಿ9ಗೆ ಹೇಳಿದೆ. ನಮ್ಮ ಇಲಾಖೆಯಿಂದ ಮನೆ ಕೊಡಿಸುವ ಪ್ರಯತ್ನ ಮಾಡುತ್ತೇವೆ. ನಮ್ಮಿಂದ ತಪ್ಪಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ. ಕೂಡಲೇ ನಮ್ಮ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇವೆ. ಇಂದೇ ಕ್ರೀಡಾಪಟು ಪ್ರಸಾದ್ ನಮ್ಮ ಕಚೇರಿ ಬಂದು ಭೇಟಿ ನೀಡಲಿ ಎಂದು ಹೇಳಿದ್ದಾರೆ.
SSLC ವಿದ್ಯಾರ್ಥಿಗಳೇ ಎಚ್ಚರ! ಹಣ ಕೊಟ್ರೆ ಪ್ರಶ್ನೆ ಪತ್ರಿಕೆ ಸಿಗತ್ತೆ ಅಂತಾ ಯಾಮಾರಬೇಡಿ
ಬೆಂಗಳೂರು, ಜನವರಿ 09:ಎಸ್‌ಎಸ್‌ಎಲ್‌ಸಿ ಪರೀಕ್ಷೆಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಗೇಡಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತೇವೆ ಎಂದು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಪೋಸ್ಟ್‌ಗಳು, ವೀಡಿಯೊಗಳು ಹಾಗೂ ಬಯೋಗಳಲ್ಲಿ ಪ್ರಕಟಿಸಿ, ಹಣ ಕೇಳಿ ವಿದ್ಯಾರ್ಥಿಗಳನ್ನು ಯಾಮಾರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ನೂರು ರೂ. ಕೊಟ್ಟರೆ ಸಿಗುತ್ತೆ ಪ್ರಶ್ನೆ ಪತ್ರಿಕೆ
ಈಗಾಗಲೇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊದಲನೇ ಹಂತದ ಪೂರ್ವ ಸಿದ್ಧತಾ ಪರೀಕ್ಷೆಗಳು ಆರಂಭವಾಗಿದ್ದು, ಮಾರ್ಚ್ನಿಂದ ಮುಖ್ಯ ಪರೀಕ್ಷೆ ಆರಂಭವಾಗಲಿದೆ. ಇದರ ನಡುವೆ ಕೆಲ ಕಿಡಗೇಡಿಗಳು ಎಸ್‌ಎಸ್‌ಎಲ್‌ಸಿ, ಪೂರ್ವಭಾವಿ ಪ್ರಶ್ನೆ ಪತ್ರಿಕೆ ಲೀಕ್ ಮಾಡತ್ತೇವೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. 100 ರೂಪಾಯಿ ಫೋನ್‌ಪೇ ಅಥವಾ ಆನ್‌ಲೈನ್ ಪಾವತಿ ಮಾಡಿದರೆ ಪ್ರಶ್ನೆ ಪತ್ರಿಕೆ ಕಳುಹಿಸುತ್ತೇವೆ ಎಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ರೀತಿ ಲೀಕ್ ಆಗುತ್ತಿರುವ ಪ್ರಶ್ಬೆ ಪತ್ರಿಕೆಗಳು ಸಂಪೂರ್ಣ ನಕಲಿಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯದೊಂದಿಗೆ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ.
ಈ ರೀತಿಯ ವದಂತಿಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದು, ಶಿಕ್ಷಣ ಇಲಾಖೆಯ ಮೇಲೂ ಕಿಡಗೇಡಿಗಳು ಚಾಲೆಂಜ್ ಹಾಕಿದಂತೆ ವರ್ತಿಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾತು ಕೇಳಿ ವಿದ್ಯಾರ್ಥಿಗಳು ಆತುರಕ್ಕೆ ಒಳಗಾಗಿ ಮೋಸ ಹೋಗಬಾರದು ಎಂದು ಶಿಕ್ಷಣ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಖಾಸಗಿ ಶಿಕ್ಷಣ ಇಲಾಖೆ ಹಾಗೂ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ ಸಂಘಟನೆಗಳು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದು, ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ವಿದ್ಯಾರ್ಥಿಗಳು ಯಾವುದೇ ಸುಳ್ಳು ಪ್ರಚಾರಕ್ಕೆ ಬಲಿಯಾಗದೆ ಅಧಿಕೃತ ಮಾಹಿತಿ ಮೇಲೆ ಮಾತ್ರ ನಂಬಿಕೆ ಇಡಬೇಕು ಎಂದು ಮನವಿ ಮಾಡಲಾಗಿದೆ.
ಗಿಲ್ಲಿ ನಟ ಅವರು ಸಖತ್ ಕ್ರೇಜ್ ಹೊಂದಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರ ಕ್ರೇಜ್ ದಿನ ಕಳೆದಂತೆ ಹೆಚ್ಚುತ್ತಿದೆ. ಈಗ ಅಭಿಮಾನಿಯೋರ್ವ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಇದು ಗಿಲ್ಲಿ ಕ್ರೇಜ್ಗೆ ಹಿಡಿದ ಕೈಗನ್ನಡಿ ಆಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
2026ರ ವರ್ಷ ಆರಂಭವಾಗಿದ್ದು ಹಲವರಿಗೆ ಇದು ಹೊಸ ಯೋಜನೆಗಳು ಮತ್ತು ಹೊಸ ಆರಂಭಗಳೊಂದಿಗೆ ಶುರುವಾಗಿದೆ. ಆದರೆ ಸಂಖ್ಯಾಶಾಸ್ತ್ರದ ದೃಷ್ಟಿಯಲ್ಲಿ ಪ್ರತಿಯೊಬ್ಬರಿಗೂ ಈ ವರ್ಷ ಒಂದೇ ರೀತಿಯಲ್ಲಿ ಅನುಕೂಲಕರವಾಗುವುದಿಲ್ಲ. ವಿಶೇಷವಾಗಿ ಕೆಲವು ಜನ್ಮ ಸಂಖ್ಯೆಗಳೊಂದಿಗೆ ರಾಹು, ಕೇತು ಮತ್ತು ಶನಿ ಗ್ರಹಗಳ ಸಂಬಂಧ ಇರುವುದರಿಂದ, ಇಂತಹ ಸಂಖ್ಯೆಯಲ್ಲಿ ಹುಟ್ಟಿದವರು 2026ರ ಜನವರಿ ತಿಂಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವೆಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ, 2026ರ ಜನವರಿ ತಿಂಗಳು ಕೆಲವರಿಗೆ ಕರ್ಮದ ಪಾಠ ಕಲಿಸುವ ಕಾಲವಾಗಿದೆ. ಇದು ಆಕ್ರಮಣಕಾರಿ ವಿಸ್ತರಣೆ ಅಥವಾ ದೊಡ್ಡ ಅಪಾಯಗಳನ್ನು ತೆಗೆದುಕೊಳ್ಳುವ ಸಮಯವಲ್ಲ. ಆರ್ಥಿಕ, ವ್ಯವಹಾರಿಕ ಅಥವಾ ವೈಯಕ್ತಿಕ ಜೀವನದಲ್ಲಿ ಅತಿಯಾದ ಆತುರ ಅಥವಾ ಧೈರ್ಯ ತೊಂದರೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ 4, 7 ಮತ್ತು 8 ಸಂಖ್ಯೆಯಲ್ಲಿ ಜನಿಸಿದವರು ಈ ತಿಂಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.
ಈ ಸಂಖ್ಯೆಗಳೊಂದಿಗೆ ಸಂಬಂಧ ಹೊಂದಿರುವವರು ಜನವರಿಯಲ್ಲಿ ಶಾಂತ, ಪ್ರಾಯೋಗಿಕ ಮತ್ತು ವ್ಯವಸ್ಥಿತವಾಗಿ ಕೆಲಸ ಮಾಡುವುದೇ ಉತ್ತಮ. ಆತುರದ ನಿರ್ಧಾರಗಳು ಅಥವಾ ತಕ್ಷಣ ಫಲ ಬೇಕೆಂಬ ಮನಸ್ಥಿತಿ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಈ ಸಮಯವನ್ನು ಹೊಸದನ್ನು ಆರಂಭಿಸುವುದಕ್ಕಿಂತಲೂ, ಈಗಾಗಲೇ ಮಾಡಿರುವ ಕೆಲಸಗಳನ್ನು ಸುಧಾರಿಸುವುದು, ಅಪೂರ್ಣ ಗುರಿಗಳನ್ನು ಪೂರ್ಣಗೊಳಿಸುವುದು ಮತ್ತು ಹಳೆಯ ತಪ್ಪುಗಳಿಂದ ಪಾಠ ಕಲಿಯಲು ಬಳಸಿಕೊಳ್ಳುವುದು ಹೆಚ್ಚು ಫಲಪ್ರದವಾಗುತ್ತದೆ.
ಸಂಖ್ಯೆ 4ಕ್ಕೆ ಸಂಬಂಧಿಸಿದಂತೆ, 4, 13, 22 ಅಥವಾ 31ರಂದು ಜನಿಸಿದವರು ರಾಹು ಗ್ರಹದ ಪ್ರಭಾವಕ್ಕೆ ಒಳಪಟ್ಟಿರುತ್ತಾರೆ. ಸೂರ್ಯನ ಪ್ರಭಾವ ಇರುವ ಈ ವರ್ಷದಲ್ಲಿ ಇವರಲ್ಲಿ ಬದಲಾವಣೆಗಳನ್ನು ತಕ್ಷಣ ತರಬೇಕೆಂಬ ಬಲವಾದ ಆಸೆ ಕಾಣಿಸಬಹುದು. ಜನವರಿ ತಿಂಗಳಲ್ಲಿ ಅನಿರೀಕ್ಷಿತ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಇದ್ದಕ್ಕಿದ್ದಂತೆ ಸುರಕ್ಷಿತ ಉದ್ಯೋಗವನ್ನು ಬಿಟ್ಟುಬಿಡುವುದು, ಅಪಾಯಕಾರಿ ಹಣಕಾಸಿನ ಹೂಡಿಕೆ ಮಾಡುವುದು ಅಥವಾ ಹಿರಿಯ ಅಧಿಕಾರಿಗಳೊಂದಿಗೆ ಸಂಘರ್ಷಕ್ಕೆ ಇಳಿಯುವಂತಹ ನಿರ್ಧಾರಗಳು ತೊಂದರೆ ತಂದಿಡಬಹುದು. ಈ ತಿಂಗಳಲ್ಲಿ ತಾಳ್ಮೆಯಿಂದ ನಡೆದು, ಯಾವುದೇ ದೊಡ್ಡ ಹಣಕಾಸಿನ ನಿರ್ಧಾರಗಳನ್ನು ಮುಂದೂಡುವುದು ಉತ್ತಮ, ಏಕೆಂದರೆ ಅದರ ಪರಿಣಾಮಗಳು ಮುಂದಿನ ತಿಂಗಳಲ್ಲಿ ಸ್ಪಷ್ಟವಾಗಿ ಕಾಣಿಸಬಹುದು.
ಸಂಖ್ಯೆ 7ಕ್ಕೆ ಸೇರಿದವರು, ಅಂದರೆ 7, 16 ಅಥವಾ 25ರಂದು ಜನಿಸಿದವರು ಕೇತು ಗ್ರಹದ ಪ್ರಭಾವವನ್ನು ಹೆಚ್ಚು ಅನುಭವಿಸುತ್ತಾರೆ. ಜನವರಿ ತಿಂಗಳು ಇವರಿಗೆ ಒಳನೋಟ ಮತ್ತು ಆತ್ಮಪರಿಶೀಲನೆಯ ಕಾಲವಾಗಬಹುದು. ಈ ಸಮಯದಲ್ಲಿ ಸಂಗಾತಿ, ವಾಸಸ್ಥಳ ಅಥವಾ ಕೆಲಸದ ಬಗ್ಗೆ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ. ಭಾವನಾತ್ಮಕ ಪ್ರಚೋದನೆಗಳು ತೀರ್ಮಾನಗಳನ್ನು ಪ್ರಭಾವಿಸಬಹುದಾದ್ದರಿಂದ, ತಕ್ಷಣದ ನಿರ್ಧಾರಗಳಿಗಿಂತ ಆಲೋಚನೆಯೊಂದಿಗೆ ಮುಂದೆ ಸಾಗುವುದು ಸೂಕ್ತ.
ಸಂಖ್ಯೆ 8ಕ್ಕೆ ಸೇರಿದವರು, ಅಂದರೆ 8, 17 ಅಥವಾ 26ರಂದು ಜನಿಸಿದವರು ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ. ಇವರು ಸದಾ ಪರಿಶ್ರಮಶೀಲರಾಗಿದ್ದರೂ, ಜನವರಿಯಲ್ಲಿ ತಮ್ಮ ಜೀವನ ನಿಧಾನವಾಗಿ ಸಾಗುತ್ತಿದೆ ಎಂಬ ಅನುಭವವಾಗಬಹುದು. ಇತರರು ವೇಗವಾಗಿ ಮುಂದೆ ಸಾಗುತ್ತಿರುವಂತೆ ಕಂಡಾಗ, ಶಾರ್ಟ್‌ಕಟ್ ಮಾರ್ಗಗಳನ್ನು ಹುಡುಕಬೇಕೆಂಬ ಆಲೋಚನೆ ಮೂಡಬಹುದು. ಆದರೆ ಶನಿ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಪರೀಕ್ಷಿಸುವ ಗ್ರಹವಾಗಿರುವುದರಿಂದ, ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಪ್ರಯತ್ನಗಳು ಫಲ ನೀಡುವುದಿಲ್ಲ. ಹಳೆಯ ಬಾಕಿ ಕೆಲಸಗಳನ್ನು ಮುಗಿಸಿ, ಬದ್ಧತೆಗಳನ್ನು ಪೂರೈಸಿ ಮತ್ತು ತಾಳ್ಮೆಯಿಂದ ಕಾಯುವುದೇ ಈ ತಿಂಗಳ ಅತ್ಯುತ್ತಮ ಮಾರ್ಗವಾಗಿರುತ್ತದೆ.
ಒಟ್ಟಾರೆ, 2026ರ ಜನವರಿ ತಿಂಗಳು ಕೆಲವರಿಗೆ ಎಚ್ಚರಿಕೆಯ ಸಂಕೇತವಾಗಿದೆ. ಆತುರವಿಲ್ಲದೆ, ಶಾಂತ ಮನಸ್ಸಿನಿಂದ, ಜವಾಬ್ದಾರಿಯುತ ನಿರ್ಧಾರಗಳನ್ನು ತೆಗೆದುಕೊಂಡರೆ ಈ ಸಮಯವೂ ಮುಂದಿನ ಯಶಸ್ಸಿಗೆ ದೃಢವಾದ ನೆಲೆಯಾಗಿ ಮಾರ್ಪಡಬಹುದು ಎಂಬುದನ್ನು ಸಂಖ್ಯಾಶಾಸ್ತ್ರ ಸೂಚಿಸುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಾಷಿಂಗ್ಟನ್, ಜನವರಿ 09: ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್ ಲುಟ್ನಿಕ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡದ ಕಾರಣ ಅಮೆರಿಕ-ಭಾರತದ ನಡುವಿನ ವ್ಯಾಪಾರ ಒಪ್ಪಂದ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ.
ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು, ಹೊವಾರ್ಡ್ ಲುಟ್ನಿಕ್ ಮಾತನಾಡಿ, ತಾವು ಸ್ವತಃ ಸಿದ್ಧಪಡಿಸಿದ್ದಾಗಿ ಹೇಳಿಕೊಂಡಿರುವ ಅವರು, ಒಂದು ತೀರ್ಮಾನಕ್ಕೆ ಬರಲು, ಮೋದಿ ಟ್ರಂಪ್‌ಗೆ ಕರೆ ಮಾಡುವುದು ಅಗತ್ಯವಾಗಿತ್ತು , ಭಾರತ ಈ ಒಪ್ಪಂದದಿಂದ ತೃಪ್ತರಾಗಿರಲಿಲ್ಲ ಮತ್ತು ಮೋದಿ ಕರೆ ಮಾಡಲಿಲ್ಲ.
ಈ ಕಾರಣದಿಂದಾಗಿ, ಈ ಒಪ್ಪಂದವು ದೀರ್ಘಕಾಲದವರೆಗೆ ಸ್ಥಗಿತಗೊಂಡಿದೆ ಎಂದಿದ್ದಾರೆ. ಭಾರತದೊಂದಿಗೆ ಮಾಡಿಕೊಂಡಿದ್ದ ವ್ಯಾಪಾರ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದೆ ಎಂದು ಅವರು ಹೇಳಿದ್ದಾರೆ.ನಾವು ಇನ್ನು ಮುಂದೆ ಅದನ್ನು ಪರಿಗಣಿಸುವುದಿಲ್ಲ ಎಂದು ಹೇಳಿದರು.
‘ಕಾಂತಾರ: ಚಾಪ್ಟರ್ 1’ ಚಿತ್ರ ಅಕ್ಟೋಬರ್ನಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಈ ಚಿತ್ರ ಬಳಿಕ ಒಟಿಟಿಗೆ ಕಾಲಿಟ್ಟಿತು. ಈಗ ಸಿನಿಮಾ ಟಿವಿಯಲ್ಲಿ ಪ್ರಸಾರ ಕಾಣಲು ರೆಡಿ ಆಗಿದೆ. ಜೀ ಕನ್ನಡ ವಾಹಿನಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಆದರೆ, ಅವರು ದಿನಾಂಕ ರಿವೀಲ್ ಮಾಡಿಲ್ಲ. ಸಾಮಾನ್ಯವಾಗಿ ವಿಶೇಷ ಸಂದರ್ಭದಗಳಲ್ಲಿ ಈ ಸಿನಿಮಾಗಳನ್ನು ಪ್ರಸಾರ ಮಾಡಲಾಗುತ್ತದೆ. ಹೀಗಾಗಿ, ‘ಕಾಂತಾರ: ಚಾಪ್ಟರ್ 1’ ಸಂಕ್ರಾಂತಿಗೆ ಪ್ರಸಾರ ಕಾಣಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರು, ಜ.9: ಬೆಂಗಳೂರು ಎಂಬ ಮಹಾನಗರದಲ್ಲಿ ಜೀವನ ಕಟ್ಟಿಕೊಳ್ಳಲು ತುಂಬಾ ಉತ್ತಮ ಸ್ಥಳ, ಶ್ರಮಕ್ಕೆ ತಕ್ಕ ಇಲ್ಲಿ ಸರಿಯಾದ ಫಲ ಸಿಗುತ್ತದೆ. ಅದೆಷ್ಟೋ ಯುವಕರು ಬೆಂಗಳೂರಿಗೆ ಬಂದು ಕಡಿಮೆ ಆದಾಯ ಗಳಿಸುತ್ತಿದ್ದಾರೆ. ಇದಕ್ಕೆ ರ‍್ಯಾಪಿಡೋ ಬೈಕ್-ಟ್ಯಾಕ್ಸಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ರೆಡ್ಡಿಟ್ನಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿರುವ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ರ‍್ಯಾಪಿಡೋ (Rapido) ಬೈಕ್-ಟ್ಯಾಕ್ಸಿ ಚಾಲಕರಾಗಿ ನಾಲ್ಕು ದಿನಗಳ ಕಾಲ ನಡೆಸಿದ ಪ್ರಯೋಗದ ಬಗ್ಗೆ ಸೋಶಿಯಲ್ಲ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅವರು ರಾತ್ರಿ 10ರ ನಂತರ ಈ ಕೆಲಸ ಮಾಡಲು ಶುರು ಮಾಡಿದ್ದಾರೆ. ರ‍್ಯಾಪಿಡೋ ರಾತ್ರಿ ಸಮಯದಲ್ಲಿ ಶೇ. 20ರಷ್ಟು ಹೆಚ್ಚುವರಿ ಹಣವನ್ನು (Night Bonus) ನೀಡುತ್ತದೆ. ಅಲ್ಲದೆ, ರಾತ್ರಿ ಸಂಚಾರ ದಟ್ಟಣೆ ಕಡಿಮೆ ಇರುವುದರಿಂದ ಬೇಗನೆ ಟ್ರಿಪ್‌ಗಳನ್ನು ಮುಗಿಸಬಹುದು.
ಈ ಇದರಲ್ಲಿ ಯಾವುದೇ ಕಮಿಷನ್ ಕಡಿತವಾಗುವುದಿಲ್ಲ. ಈ ವ್ಯಕ್ತಿ ದಿನಕ್ಕೆ ಒಟ್ಟು 16 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ (8 ಗಂಟೆ ಆಫೀಸ್ + 8 ಗಂಟೆ ರ‍್ಯಾಪಿಡೋ). ಇದು ಆರ್ಥಿಕವಾಗಿ ಲಾಭದಾಯಕವಾಗಿ ಕಂಡರೂ, ದೀರ್ಘಕಾಲದ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ.ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ರ‍್ಯಾಪಿಡೋಗೆ ಇರುವ ಬೇಡಿಕೆ ಮತ್ತು ಸಿಗುವ ಬೋನಸ್, ಸಾಮಾನ್ಯ ಸಂಬಳಕ್ಕಿಂತ ಹೆಚ್ಚಿನ ಆದಾಯ ತಂದುಕೊಡುತ್ತಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಜೀವನ ವೆಚ್ಚ ಹೆಚ್ಚಿರುವುದರಿಂದ, ಕೇವಲ ಒಂದು ಸಂಬಳದಿಂದ ಜೀವನ ನಿರ್ವಹಣೆ ಕಷ್ಟ ಎಂದು ಈ ವೃತ್ತಿಯನ್ನು ಕೂಡ ಮಾಡುತ್ತಾರೆ.
ಈ ದುಡಿಮೆಯಲ್ಲಿ ವ್ಯತ್ಯಾಸಗಳು ಕಂಡು ಬರುತ್ತದೆ. ಮೊದಲ ದಿನ, ಐದು ಗಂಟೆಗಳ ಕಾಲ ಸಂಜೆ ಮತ್ತು ತಡರಾತ್ರಿಯವರೆಗೆ ರೈಡ್ ಮಾಡಿದ್ರೆ 630 ರೂ. ಗಳಿಸಬಹುದು. ಎರಡನೇ ದಿನವೂ ಇದೇ ಅವಧಿಯಲ್ಲಿ 750 ಗಳಿಸಿದೆ. ಕೊನೆಯ ಎರಡು ದಿನಗಳಲ್ಲಿ, ಪ್ರತಿ ರಾತ್ರಿ ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಸವಾರಿ ಮಾಡಿ 420 ಗಳಿಸಿದ್ದಾರೆ. ಪ್ರತಿದಿನ ಒಂದೇ ರೀತಿಯ ದುಡಿಮೆ ಇದರಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ. ಈ ನಾಲ್ಕು ದಿನ ಕೆಲಸ ಮಾಡಿದ ನಂತರ ಒಟ್ಟು ಆದಾಯ 2,220 ರೂ. ಆಗಿತ್ತು. ಪೆಟ್ರೋಲ್ಗೆ 400 ಹೋದ್ರೆ ಉಳಿಯುವುದು 1,820 ರೂ.
“ಪದವೀಧರರಿಗೆ ಸಿಗುವ ಆರಂಭಿಕ ಸಂಬಳಕ್ಕಿಂತಲೂ ರಸ್ತೆಯಲ್ಲಿ ಕಷ್ಟಪಟ್ಟು ಮಾಡುವ ಕೆಲಸಕ್ಕೆ ಹೆಚ್ಚು ಹಣ ಸಿಗುತ್ತಿದೆ. ಈ ಕೆಲಸ ನನಗೆ ಅನಿವಾರ್ಯ ಅಲ್ಲದೆ ಇರುಬಹುದು. ಇದು ದೊಡ್ಡ ಸಂಪಾದನೆಯೂ ಅಲ್ಲ, ಆದರೆ ಇದು ನನ್ನ ಚಿಕ್ಕಪುಟ್ಟ ಖರ್ಚಿಗೆ ಸಹಾಯವಾಗುತ್ತದೆ” ಎಂದು ಹೇಳಿದ್ದಾರೆ. ಇನ್ನು ಈ ಪೋಸ್ಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದಾರೆ. ನನ್ನ ರೂಮ್‌ಮೇಟ್ ಕೂಡ ಅದೇ ರೀತಿ ಮಾಡುತ್ತಾನೆ. ಮಧ್ಯಾಹ್ನ 2-10 ಕಚೇರಿ ಕೆಲಸ. ಬೆಳಿಗ್ಗೆ 10-6 ರವರೆಗೆ ಕೆಲಸ ಮಾಡುತ್ತಾನೆ. ದಿನಕ್ಕೆ 1000 ರೂ. ದುಡಿಯುತ್ತಾನೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ನಿಜವಾದ ಐಟಿ ಕೆಲಸಕ್ಕಿಂತ ಗಿಗ್ ಕೆಲಸದಿಂದ ಹೆಚ್ಚು ಹಣ ಸಂಪಾದಿಸುತ್ತಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ.
ಚಾಮರಾಜನಗರ, ಜನವರಿ 9: ಚಾಮರಾಜನಗರದಲ್ಲಿ ಅವಧಿ ಮೀರಿದ ಮದ್ಯವನ್ನು ಅಬಕಾರಿ ಇಲಾಖೆ ನಾಶಪಡಿಸಿದೆ. ಚಾಮರಾಜನಗರದ ಕೈಗಾರಿಕಾ ಪ್ರದೇಶದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭಾರಿ ಪ್ರಮಾಣದಲ್ಲಿ ಅವಧಿ ಮೀರಿದ ಬಿಯರ್ ಮತ್ತು ವೈನ್ ಅನ್ನು ನಾಶಪಡಿಸಿದ್ದಾರೆ. ಬಿಯರ್ ಬೆಲೆ ದಿಢೀರ್ ಹೆಚ್ಚಳವಾದ ಹಿನ್ನೆಲೆ ಮದ್ಯ ಮಾರಾಟದಲ್ಲಿ ಗಣನೀಯ ಕುಂಠಿತ ಉಂಟಾಗಿದ್ದು, ಬಾರ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಎಂಆರ್‌ಪಿ ವೈನ್ ಸ್ಟೋರ್‌ಗಳತ್ತ ಜನರು ಸುಳಿಯದ ಸ್ಥಿತಿ ನಿರ್ಮಾಣವಾಗಿತ್ತು. ಇದರ ಪರಿಣಾಮವಾಗಿ ಲೋಡ್ಗಟ್ಟಲೆ ಬಿಯರ್ ಮತ್ತು ವೈನ್ ಮಾರಾಟವಾಗದೆ ಉಳಿದು, ಅವುಗಳ ಅವಧಿ ಮೀರಿತ್ತು.
ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಿದ್ದು, ಡಿಸಿ ಚಂದ್ರ ಅವರ ನೇತೃತ್ವದ ತಂಡ ಕೈಗಾರಿಕಾ ಪ್ರದೇಶದಲ್ಲಿ ದಾಳಿ ನಡೆಸಿ, ಸುಮಾರು 22 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಬಿಯರ್ ಮತ್ತು ವೈನ್ ಅನ್ನು ಸಂಪೂರ್ಣವಾಗಿ ನಾಶಪಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
‘ರಾಧೆ ಶ್ಯಾಮ್’ ಸಿನಿಮಾ ಹೆಸರು ಹೇಳಿದಾಗಲೆಲ್ಲ, ಅದು ಕಂಡ ದುರಂತ ಅಂತ್ಯ ನೆನಪಾಗುತ್ತದೆ. ದೊಡ್ಡ ಬಜೆಟ್ನಲ್ಲಿ ನಿರ್ಮಾಣದವಾದ ಈ ಚಿತ್ರ ನಿರ್ಮಾಪಕರಿಗೆ ಸಾಕಷ್ಟು ನಷ್ಟವನ್ನು ಉಂಟು ಮಾಡಿತ್ತು. ಈಗ ‘ರಾಧೆ ಶ್ಯಾಮ್’ ಸಿನಿಮಾ ಬಳಿಕ ‘ರಾಜಾ ಸಾಬ್’ ಕೂಡ ಇದೇ ಹಾದಿಯಲ್ಲಿ ಸಾಗುವ ಸೂಚನೆ ಸಿಕ್ಕಿದೆ. ಈ ಸಿನಿಮಾನೋಡಿದ ಅನೇಕರು ನೆಗೆಟಿವ್ ವಿಮರ್ಶೆ ಕೊಡುತ್ತಿದ್ದಾರೆ. ಅವರ ಅಭಿಮಾನಿಗಳಿಗೆ ಸಿನಿಮಾ ಇಷ್ಟ ಆಗಿದೆ.
‘ರಾಜಾ ಸಾಬ್’ ಚಿತ್ರವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಥಮನ್ ಅವರು ಮ್ಯೂಸಿಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಸಂಜಯ್ ದತ್, ಬೋಮನ್ ಇರಾನಿ, ಮಾಳವಿಕಾ ಮೋಹನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಸಿನಿಮಾ ನೋಡಿದ ಅನೇಕರು ನೆಗೆಟಿವ್ ವಿಮರ್ಶೆ ಕೊಟ್ಟಿದ್ದಾರೆ.
‘ದಿ ರಾಜಾ ಸಾಬ್’ ನೋಡಿದ ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ‘ರಾಧೆ ಶ್ಯಾಮ್’ ಬಳಿಕ ‘ಹರಿ ಹರ ವೀರ ಮಲ್ಲು’, ಈಗ ರಾಜಾ ಸಾಬ್ ಎಂದು ಅನೇಕರು ಹೇಳಿದ್ದಾರೆ. ‘ಅದೇನು ಗ್ರಾಫಿಕ್ಸ್, ಅದೇನು ವಿಶ್ಯುವಲ್ಸ್, ನಿದ್ದೆ ಬಂದೋಯ್ತು’ ಎಂದು ಕೆಲವರು ಹೇಳಿದ್ದಾರೆ. ಇನ್ನು, ಸಿನಿಮಾದ ಅವಧಿ ಮೂರು ಗಂಟೆಗೂ ಅಧಿಕವಾಗಿದೆ. ಇದು ಸಿನಿಮಾಗೆ ಹಿನ್ನಡೆ ಆಗುತ್ತಿದೆ. ಹಳೆಯ ಕಾಲದ ಬರವಣಿಗೆ, ಗುರಿರಹಿತ ನಿರ್ದೇಶನ, ಕಳಪೆ ಸಂಗೀತ, ಅನಗತ್ಯವಾದ ಅತಿರಂಜಿತ ಭವ್ಯತೆ ಸಿನಿಮಾಗೆ ಹಿನ್ನಡೆ ತಂದಿದೆ ಎನ್ನಲಾಗಿದೆ.
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ 2024ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಿತು. ಇದಾದ ಬಳಿಕ ಅವರು ಹೀರೋ ಆಗಿ ಕಾಣಿಸಿಕೊಂಡಿರಲಿಲ್ಲ. ಈಗ ‘ರಾಜಾ ಸಾಬ್’ ಮೂಲಕ ದೊಡ್ಡ ಸೋಲು ಕಾಣುವ ಸೂಚನೆ ಕೊಟ್ಟಿದೆ. ಮೊದಲ ದಿನ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಸುತ್ತದೆ ಎಂಬ ಕುತೂಹಲ ಮೂಡಿದೆ.