All posts by nagaraj11081993

Horoscope Today 09 January: ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ – Kannada News | Daily Horoscope for January 9th 2025: Dr. Basavaraj Gurujis Predictions for Zodiac Signs

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 09-01-2026 ರ ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಕೃಷ್ಣ ಪಕ್ಷ, ಷಷ್ಠಿ, ಶೋಭನ ಯೋಗ ಮತ್ತು ವಣಿಜ ಕರಣ ಒಳಗೊಂಡಿದೆ. ಉತ್ತರಾ ನಕ್ಷತ್ರದಲ್ಲಿ ಚಂದ್ರನ ಸಂಚಾರವಿರುತ್ತದೆ. ರವಿ ಧನುಸ್ಸು ರಾಶಿಯಲ್ಲಿ, ಚಂದ್ರ ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿರುವುದು ವಿಶೇಷವಾಗಿದೆ.

ಇಂದಿನ ರಾಹು ಕಾಲ ಬೆಳಗ್ಗೆ 11:00 ರಿಂದ 12:26 ರವರೆಗೆ ಇರುತ್ತದೆ. ಸರ್ವ ಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲ ಮಧ್ಯಾಹ್ನ 12:26 ರಿಂದ 01:52 ರವರೆಗೆ ಇರುತ್ತದೆ. ಇದು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಸೂಕ್ತವಾದ ದಿನ ಎಂದು ಗುರುತಿಸಲಾಗಿದೆ. ಉಡುಪಿ ಸಪ್ತೋತ್ಸವ, ಕೋಟಾ ಅಮೃತೇಶ್ವರದಲ್ಲಿ ಜಾತ್ರಾ ಮಹೋತ್ಸವ ಮತ್ತು ತಟ್ಟನಾಯಕನಹಟ್ಟಿಯಲ್ಲಿ ರಥೋತ್ಸವ ಸಹ ಇಂದು ನಡೆಯಲಿವೆ.

ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲದಿಂದ ಆರ್ಥಿಕವಾಗಿ ಮತ್ತು ವ್ಯಾಪಾರದಲ್ಲಿ ಉತ್ತಮ ಫಲಿತಾಂಶಗಳು ದೊರೆಯಲಿವೆ. ವೃಷಭ ರಾಶಿಯವರಿಗೆ ಆರು ಗ್ರಹಗಳ ಶುಭಫಲದಿಂದ ಆರ್ಥಿಕ ಲಾಭ, ಸಂಕಲ್ಪಗಳ ಈಡೇರಿಕೆ ಮತ್ತು ಕಾನೂನು ವಿಷಯಗಳಲ್ಲಿ ಯಶಸ್ಸು ಸಿಗಲಿದೆ. ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲದಿಂದ ಆರ್ಥಿಕ ಸ್ಥಿತಿ ಸುಧಾರಿಸಿ, ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಕರ್ಕ ರಾಶಿಯವರಿಗೆ ಆಕಸ್ಮಿಕ ಕಾರ್ಯಸಿದ್ಧಿ ಮತ್ತು ಧನಯೋಗದ ಸಾಧ್ಯತೆಗಳಿವೆ. ಸಿಂಹ ರಾಶಿಯವರಿಗೆ ಆರು ಗ್ರಹಗಳ ಶುಭಫಲದಿಂದ ಕುಟುಂಬದಲ್ಲಿ ಸಹಕಾರ, ವ್ಯಾಪಾರದಲ್ಲಿ ಲಾಭ ಮತ್ತು ಹೊಸ ವಾಹನ ಖರೀದಿ ಯೋಗವಿದೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

Source link

ಮರುಜೀವ ಪಡೆಯುತ್ತಿದೆ ಚಿನ್ನಸ್ವಾಮಿ ಸ್ಟೇಡಿಯಂ! ಸದ್ಯದಲ್ಲೇ ಸಿಗಲಿದೆ ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ – Kannada News | Chinnaswamy Stadium Set for Revival, Good News Soon for RCB Fans After Safety Upgrades

ಚಿನ್ನಸ್ವಾಮಿ ಸ್ಟೇಡಿಯಂ (ಸಂಗ್ರಹ ಚಿತ್ರ)

ಬೆಂಗಳೂರು, ಜನವರಿ 9: ಆರ್​ಸಿಬಿ (RCB) ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದರು. ಇದರಿಂದ ಇಡೀ ಸರ್ಕಾರ ಮತ್ತು ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿತ್ತು. ಸೂಕ್ತ ಭದ್ರತೆ ನೀಡದ ಸಲುವಾಗಿ ಕಮಿಷನರ್ ದಯಾನಂದ್ ಸೇರಿ ಹಲವರ ತಲೆದಂಡವಾಗಿತ್ತು. ಅಲ್ಲದೆ RCB ಮ್ಯಾನೆಜ್‌ಮೆಂಟ್‌ ಸೇರಿ ಹಲವರ ಬಂಧನ ಕೂಡ ಆಗಿತ್ತು. ನಿವೃತ್ತ ನ್ಯಾ ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ಸಮಿತಿ ರಚಿಸಿ ಸರ್ಕಾರ ವರಧಿ ಕೇಳಿತ್ತು. ಇದಕ್ಕೆಲ್ಲ ಕಾರಣ ಚಿನ್ನಸ್ವಾಮಿಯಲ್ಲಿ ವ್ಯವಸ್ಥೆ ಸರಿ ಇಲ್ಲದ್ದು ಎಂದು ಸಮಿತಿ ವರದಿ ನೀಡಿತ್ತು. ಅಂದಿನ ಘಟನೆಗೆ ಸ್ಟೇಡಿಯಂನಲ್ಲಿರುವ 16 ಲೋಪಗಳೇ ಕಾರಣ ಎಂದು ಕುನ್ಹಾ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಅಲ್ಲದೇ ಮುಂದಿನ ಕ್ರಿಕೆಟ್‌ ಪಂದ್ಯಾವಳಿಗೆ ಅನುಮತಿ ನಿರಾಕರಿಸುವಂತೆ ವರಧಿಯಲ್ಲಿ ಶಿಫಾರಸು ಮಾಡಲಾಗಿತ್ತು. ಸ್ಟೇಡಿಯಂನ ಎಲ್ಲಾ ಗೇಟ್​ಗಳು ತುಂಬಾ ಚಿಕ್ಕದಾಗಿವೆ. ಅಗ್ನಿಶಾಮಕ ವಾಹನ, ಆ್ಯಂಬುಲೆನ್ಸ್ ಸಂಚಾರಕ್ಕೆ ಸ್ಟೇಡಿಯಂ ಸುತ್ತ ಜಾಗ ಇಲ್ಲ. ಜನ ಬಂದರೆ ಅವರ ವಾಹನಗಳ ಪಾರ್ಕಿಂಗ್​ಗೆ ವ್ಯವಸ್ಥೆ ಇಲ್ಲ, ಕ್ರಿಕೆಟ್‌ ತಂಡದ ವಾಹನಗಳ ಪಾರ್ಕಿಂಗ್‌ಗೂ ಸ್ಟೇಡಿಯಂನಲ್ಲಿ ಅವಕಾಶ ಇಲ್ಲ. ಕ್ರೀಡಾಂಗಣದ ಒಳಭಾಗದಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ಸೆಟ್‌ಬ್ಯಾಕ್‌ ಬಿಟ್ಟಿಲ್ಲ. ಸ್ಟೇಡಿಯಂಗೆ ಎಲ್ಲೂ ತುರ್ತು ನಿರ್ಗಮನ ವ್ಯವಸ್ಥೆ ಇಲ್ಲ. ಸ್ಟೇಡಿಯಂ ಸುತ್ತಲೂ ನಿರ್ಮಾಣ ಆಗಿರುವ ತಡೆಗೋಡೆ ಅವೈಜ್ಞಾನಿಕವಾಗಿದೆ. ಕಾಲ್ತುಳಿತ ನಡೆದ ಬಳಿಕ ಸ್ಟೇಡಿಯಂನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪಂದ್ಯ ನಡೆಸುವ ದೃಷ್ಟಿಯಲ್ಲಿ ಸ್ಟೇಡಿಯಂ ಸದ್ಯದ ವಾತಾವಾರಣ ಪೂರಕವಾಗಿಲ್ಲ ಎಂದು ವರದಿ ನೀಡಲಾಗಿತ್ತು.

ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್‌ ಹಾಗೂ ಮೆಟ್ಟಿಲು ಚಿಕ್ಕದಾಗಿವೆ. ಕಟ್ಟಡಗಳಿಗೆ ನಿಯಮ ಪ್ರಕಾರ ಸೆಟ್‌ಬ್ಯಾಕ್‌ ಬಿಟ್ಟಿಲ್ಲ, ಸ್ಟೇಡಿಯಂನ ಸಂಪೂರ್ಣ ಕಾಂಪೌಂಡ್‌ ಅವೈಜ್ಞಾನಿವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಸಮಸ್ಯೆ, ಲೋಪಗಳ ಬಗೆಹರಿಸಲು ಕೆಎಸ್​ಸಿಎ ಕ್ರಮ

ನ್ಯಾ ಮೈಕಲ್ ಡಿ ಕುನ್ಹಾ ವರದಿಯಲ್ಲಿ ಉಲ್ಲೇಖಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಈಗ KSCA ಮುಂದಾಗಿದೆ. ಆ್ಯಂಬುಲೆನ್ಸ್ ಓಡಾಟಕ್ಕೆ ಜಾಗ, ಪರ್ಕಿಂಗ್ ವ್ಯವಸ್ಥೆ, ತುರ್ತು ನಿರ್ಗಮನ, ಅಗಲವಾದ ಗೇಟ್ ಗಳು, ಮಹಿಳೆಯರಿಗೆ ಪ್ರತ್ಯೇಕ ಮಾರ್ಗ ಸೇರಿ ಎಲ್ಲಾ ಮಾರ್ಗಸೂಚಿಗಳನ್ನು ಸರಿಪಡಿಸುವ ಕೆಲಸಕ್ಕೆ KSCA ಮುಂದಾಗಿದೆ. ಸದ್ಯದಲ್ಲೇ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮತ್ತೆ ಕ್ರಿಕೆಟ್ ವೈಭವವನ್ನ ಜನರೆದುರುತರಲು ಚಿನ್ನಸ್ವಾಮಿ ಸ್ಟೇಡಿಯಂ ಸಿದ್ದವಾಗುತ್ತಿದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ – Kannada News | Youth Spotted on Train Roof at Sompeta Station, Safety Concern Raised

ಶ್ರೀಕಾಕುಳಂ, ಜನವರಿ 09: ಯುವಕನೊಬ್ಬ ಭುವನೇಶ್ವರ-ತಿರುಪತಿ ಸೂಪರ್​​ಫಾಸ್ಟ್​ ಎಕ್ಸ್​​ಪ್ರೆಸ್ ರೈಲಿನ ಮೇಲೇರಿ ಪವರ್ ಲೈನ್ ಕೆಳಗೆ ಕುಳಿತು ಸಮಸ್ಯೆ ಸೃಷ್ಟಿಸಿದ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ. ಈ ಕಾರಣದಿಂದಾಗಿ ರೈಲು 30 ನಿಮಿಷಗಳ ಕಾಲ ನಿಲ್ಲಿಸಲಾಯಿತು. ಬಳಿಕ ರೈಲ್ವೆ ಪೊಲೀಸರು ಆತನನ್ನು ರೈಲಿನಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತ ಪಶ್ಚಿಮ ಬಂಗಾಳದವನು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

 

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ – Kannada News | Daily Devotional: Unprecedented Fortune for Names Starting with S

ಬೆಂಗಳೂರು, ಜನವರಿ 09: 2026ರ ವರ್ಷವು ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವವರಿಗೆ ಮಹತ್ತರವಾದ ಅದೃಷ್ಟವನ್ನು ತರಲಿದೆ. ಈ ವರ್ಷವು ಶುಭ ಫಲಗಳು, ಸಕಾರಾತ್ಮಕ ತಿರುವುಗಳು ಮತ್ತು ಸಂತೋಷವನ್ನು ನೀಡುವ ಸಾಧ್ಯತೆಗಳು ಹೆಚ್ಚಿವೆ. ಎಸ್ ಅಕ್ಷರದಿಂದ ಹೆಸರನ್ನು ಹೊಂದಿರುವ ಮಹಿಳೆಯರು, ಪುರುಷರು ಮಾತ್ರವಲ್ಲದೆ, ಈ ಅಕ್ಷರದಿಂದ ಪ್ರಾರಂಭವಾಗುವ ಕಂಪೆನಿಗಳಿಗೂ ಸಹ ವರ್ಷಪೂರ್ತಿ ಸಾಕಷ್ಟು ಅದೃಷ್ಟವಿರಲಿದೆ.

ಗುರು, ಶನಿ ಮತ್ತು ಕೇತು ಗ್ರಹಗಳ ಅನುಗ್ರಹದಿಂದ, ವರ್ಷದ 80% ಭಾಗವು ಶುಭಕರವಾಗಿರುತ್ತದೆ ಎಂದು ಹೇಳಲಾಗುತ್ತದೆ. ವೈವಾಹಿಕ ಜೀವನದಲ್ಲಿ ಸುಧಾರಣೆ, ಆರ್ಥಿಕ ಬದಲಾವಣೆಗಳು, ವೃತ್ತಿ ಜೀವನದಲ್ಲಿ ಪ್ರಗತಿ ಮತ್ತು ಉತ್ತಮ ಆರೋಗ್ಯವನ್ನು ನಿರೀಕ್ಷಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು, ಹೊಸ ಆಲೋಚನೆಗಳು, ಧೈರ್ಯ ಹೆಚ್ಚಳ ಮತ್ತು ದೃಢ ನಿರ್ಧಾರಗಳನ್ನು ಕೈಗೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳು, ಕಾರ್ಮಿಕರಿಗೆ ಉದ್ಯೋಗದಲ್ಲಿ ಬಡ್ತಿ ಮತ್ತು ಉದ್ಯಮಿಗಳಿಗೆ ಹೊಸ ಅವಕಾಶಗಳು ಲಭಿಸಲಿವೆ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನ ಮತ್ತು ಪ್ರಭಾವ ಹೆಚ್ಚಳವಾಗಬಹುದು. ಮನೆ, ಸೈಟ್, ಫ್ಲಾಟ್ ಖರೀದಿ ಮತ್ತು ಹೂಡಿಕೆಗಳಿಂದ ಶುಭ ಫಲಗಳ ಸಾಧ್ಯತೆಯಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

Source link

ಕೇರಳದ ವಿರುದ್ಧ ಸಿಡಿದೆದ್ದ ಸಿಎಂ ಸಿದ್ದರಾಮಯ್ಯ: ಪಿಣರಾಯ್ ವಿಜಯನ್​ಗೆ ಖಡಕ್ ಸಂದೇಶ – Kannada News | Karnataka CM Siddaramaiah backs Kasaragod Kannadigas urged Pinarayi and Kerala govt to Withdraw Malayalam language bill 2025

‘ಮಲಯಾಳ ಭಾಷಾ ಮಸೂದೆ 2025’: ಕಾಸರಗೋಡು ಕನ್ನಡಿಗರ ಪರ ನಿಂತ ಸಿದ್ದರಾಮಯ್ಯ

ಬೆಂಗಳೂರು, ಜನವರಿ 9: ಕೇರಳ (Kerala) ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ‘ಮಲಯಾಳ ಭಾಷಾ ಮಸೂದೆ 2025’ರಿಂದ (Malayalam language bill 2025) ಕಾಸರಗೋಡಿನ ಕನ್ನಡಿಗರಿಗೆ ತೀವ್ರ ಸಮಸ್ಯೆಯಾಗಲಿದ್ದು, ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕೇರಳ ಸರ್ಕಾರವನ್ನು ಹಾಗೂ ಅಲ್ಲಿನ ಸಿಎಂ ಪಿಣರಾಯಿ ವಿಜಯನ್ ಅವರನ್ನು ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಸುದೀರ್ಘ ಸಂದೇಶ ಪ್ರಕಟಿಸಿರುವ ಸಿದ್ದರಾಮಯ್ಯ, ಒಂದು ವೇಳೆ ಕಾಸರಗೋಡು ಕನ್ನಡಿಗರ ಹಿತ ನಿರ್ಲಕ್ಷಿಸಿ ಅವರ ಮೇಲೆ ಭಾಷೆಯನ್ನು ಹೇರಿದ್ದೇ ಆದಲ್ಲಿ ನಮ್ಮ ಸರ್ಕಾರ ಅವರ ಜತೆಯಲ್ಲಿ ನಿಂತು ಸರ್ವ ರೀತಿಯ ಬೆಂಬಲ ನೀಡಲಿದೆ ಎಂದಿದ್ದಾರೆ.

ಸಂವಿಧಾನದ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ: ಸಿದ್ದರಾಮಯ್ಯ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಹೇಳಲು ವಿಷಾದಿಸುತ್ತೇನೆ. ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಎಂದು ಎಕ್ಸ್ ಸಂದೇಶದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಭಾವನಾತ್ಮಕವಾಗಿ ಕರ್ನಾಟಕದೊಂದಿಗಿದೆ ಕಾಸರಗೋಡು: ಸಿಎಂ

ಕಾಸರಗೋಡು ಇಂದು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ ಅದು ಭಾವನಾತ್ಮಕವಾಗಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಮಿಳಿತವಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆ ಕನ್ನಡಿಗರೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ಇದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಮಸೂದೆ ಹಿಂಪಡೆಯಲು ಪಿಣರಾಯಿ ವಿಜಯನ್​ಗೆ ಆಗ್ರಹ

ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಆಗ್ರಹಿಸುತ್ತೇನೆ. ಭಾಷಾ ಅಲ್ಪಸಂಖ್ಯಾತರಿಗೆ ಮಾತೃಭಾಷೆ ಎನ್ನುವುದು ಕೇವಲ ಭಾಷೆ ಅಲ್ಲ, ಅದು ಅವರಿಗೆ ಘನತೆಯ ಬದುಕು ನೀಡುವ ಅಸ್ಮಿತೆಯಾಗಿರುತ್ತದೆ. ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ಸುಲಭದಲ್ಲಿ ವಿಷಯಗಳನ್ನು ಗ್ರಹಿಸುತ್ತಾರೆ ಎನ್ನುವದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅವರ ಮೇಲೆ ಅನ್ಯಭಾಷೆಯನ್ನು ಹೇರುವುದರಿಂದ ಅವರ ಕಲಿಕಾ ಸಾಮರ್ಥ್ಯವನ್ನು ಕುಂದಿಸುವುದು ಮಾತ್ರವಲ್ಲ, ಒಂದು ಸ್ವತಂತ್ರಭಾಷೆಯ ಅವಸಾನಕ್ಕೆ ದಾರಿ ಮಾಡಿಕೊಟ್ಟ ಹಾಗಾಗುತ್ತದೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಕಾಸರಗೋಡಿನ ಜನ ಹಲವು ತಲೆಮಾರುಗಳಿಂದ ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ, ನಿತ್ಯದ ಬದುಕಿನಲ್ಲಿ ಕನ್ನಡವನ್ನು ನಿರಂತರವಾಗಿ ಬಳಸುತ್ತಾ ಬಂದಿದ್ದಾರೆ. ಕಾಸರಗೋಡು ಜಿಲ್ಲೆಯ ಶೇಕಡಾ 70ರಷ್ಟು ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಮತ್ತು ಕನ್ನಡ ಮಾಧ್ಯಮದಲ್ಲಿಯೇ ಕಲಿಯುವುದನ್ನು ಬಯಸುತ್ತಾರೆ ಎಂಬುದು ಅಲ್ಲಿನ ಕನ್ನಡಿಗರ ಒಕ್ಕೊರಲ ಅಭಿಪ್ರಾಯವಾಗಿದೆ. ಯಾವುದೇ ಒಂದು ಭಾಷೆ ಮತ್ತೊಂದು ಭಾಷೆಯ ವಿರುದ್ಧವಾಗಿ ಇರುವುದಿಲ್ಲ. ಭಾರತ ಬಹುಭಾಷೆ, ಬಹುಸಂಸ್ಕೃತಿ ಮತ್ತು ಬಹುಧರ್ಮದ ತೊಟ್ಟಿಲಾಗಿದೆ. ಈ ಬಹುತ್ವದ ವಾತಾವರಣಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನ ಅಪಾಯಕಾರಿಯಾಗಿದೆ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಎಕ್ಸ್ ಸಂದೇಶ

ಭಾಷೆಯೂ ಸೇರಿದಂತೆ ಅಲ್ಪಸಂಖ್ಯಾತರ ಹಿತರಕ್ಷಣೆಯ ವಿಚಾರದಲ್ಲಿ ನಾವೆಲ್ಲರೂ ಗೌರವಿಸುವ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಸಂವಿಧಾನದ 29 ಮತ್ತು 30ನೇ ಪರಿಚ‍್ಛೇದಗಳು ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವವರಿಗೆ ತಮ್ಮ ಭಾಷೆ, ಲಿಪಿ ಮತ್ತು ಸಂಸ್ಕೃತಿ ರಕ್ಷಿಸಿಕೊಳ್ಳುವ ಹಕ್ಕನ್ನು ನೀಡಿದೆ. ಅವರಿಗೆ ತಮ್ಮ ಆಯ್ಕೆಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುವ ಹಕ್ಕನ್ನೂ ನೀಡುತ್ತದೆ. ಸಂವಿಧಾನದ 350 (ಎ) ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯವನ್ನು ನೀಡಿದೆ. ಸಂವಿಧಾನದ 350(ಬಿ) ಅಲ್ಪಸಂಖ್ಯಾತರ ರಕ್ಷಣೆಯ ಖಾತರಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರ ಅಲ್ಪಸಂಖ್ಯಾತರ ಭಾಷಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಬುಲ್ಡೋಜರ್ ರಾಜ್’ ನೀತಿಯಿಂದ ಬೀದಿಗೆ ಬಂದ ಮುಸ್ಲಿಂ ಕುಟುಂಬ: ಪಿಣರಾಯಿ ವಿಜಯನ್ ಆಕ್ರೋಶ

ಕರ್ನಾಟಕದಲ್ಲಿ ನಾವು ಕನ್ನಡ ಭಾಷೆಯನ್ನು ಪೊರೆಯುವ ಕೆಲಸ ಮಾಡಿದ ಹಾಗೆ, ಕೇರಳ ರಾಜ್ಯದಲ್ಲಿ ಮಲೆಯಾಳಿ ಭಾಷೆಯನ್ನು ಬೆಳೆಸುವ ಮತ್ತು ಉಳಿಸುವ ಸರ್ವ ಸ್ವಾತಂತ್ರ್ಯ ಅಲ್ಲಿನ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ಒಂದು ಭಾಷೆಯ ಮೇಲೆ ಇನ್ನೊಂದು ಭಾಷೆಯನ್ನು ಹೇರುವ ಪ್ರಯತ್ನ ಸಲ್ಲದು.

ಕಾಸರಗೋಡು ಕನ್ನಡಿಗರಿಗೆ ಸರ್ವ ರೀತಿಯ ಬೆಂಬಲ: ಸಿದ್ದರಾಮಯ್ಯ

ಕೇರಳ ಸರ್ಕಾರ ಈ ಮಸೂದೆಯನ್ನು ಜಾರಿಗೊಳಿಸಲು ಹೊರಟರೆ ಕನ್ನಡಿಗರು ಇದನ್ನು ಒಕ್ಕೊರಲಿನಿಂದ ವಿರೋಧಿಸಲಿದ್ದಾರೆ. ಕಾಸರಗೋಡಿನ ಕನ್ನಡಿಗರ ಜೊತೆಯಲ್ಲಿ ನಿಂತು ಅವರ ಭಾಷಾ ಸ್ವಾತಂತ್ರ್ಯದ ರಕ್ಷಣೆಗೆ ಸರ್ವರೀತಿಯ ಬೆಂಬಲವನ್ನು ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರಿಗೆ ಇಂದು ಬೆನ್ನು, ಕುತ್ತಿಗೆ ನೋವು ಕಾಡಬಹುದು

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮನ್ನು ನೀವು ವಿಶ್ಲೇಷಿಸಿಕೊಳ್ಳುವ ದಿನ ಇದಾಗಿರುತ್ತದೆ. ಜನರ ಗುಂಪಿನ ನಡುವೆ ಇರುವುದಕ್ಕಿಂತ ಒಂಟಿಯಾಗಿ ಕೆಲಸ ಮಾಡಲು ಇಷ್ಟಪಡುತ್ತೀರಿ. ಸಂಶೋಧನೆ ಕ್ಷೇತ್ರದಲ್ಲಿ ಇರುವವರಿಗೆ ಮತ್ತು ಬರಹಗಾರರಿಗೆ ಹೊಸ ಆಲೋಚಬೆಗಳು ಹೊಳೆಯಲಿವೆ. ಧಾರ್ಮಿಕ ಕೆಲಸಗಳಿಗಾಗಿ ಸ್ವಲ್ಪ ಹಣ ವಿನಿಯೋಗಿಸುವಿರಿ. ಹಳೆಯ ಗೆಳೆಯನೊಬ್ಬ ಸಹಾಯ ಕೇಳಿ ಬರಬಹುದು, ಆದರೆ ಶಕ್ತಿ ಮೀರಿ ಸಾಲ ನೀಡಬೇಡಿ. ರಾತ್ರಿ ನಿದ್ರಾಹೀನತೆ ಕಾಡಬಹುದು, ಮಲಗುವ ಮುನ್ನ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಉದ್ಯೋಗಸ್ಥರಿಗೆ ಕಠಿಣ ಶ್ರಮದ ದಿನ. ಯುಪಿಐ ಪಾವತಿ ವಿಧಾನ ಬಳಸುತ್ತಿದ್ದೀರಿ ಅಂತಾದಲ್ಲಿ ಯಾವ ಸಂಖ್ಯೆಗೆ ಹಾಗೂ ಎಷ್ಟು ಮೊತ್ತ ವರ್ಗಾವಣೆ ಮಾಡುತ್ತಿದ್ದೀರಿ ಎಂಬುದನ್ನು ಪರಿಶೀಲಿಸಿಕೊಳ್ಳಿ. ಕಾನೂನು ಸಂಬಂಧಿತ ಸಮಸ್ಯೆಗಳು ಬಗೆಹರಿಯುವ ಲಕ್ಷಣಗಳಿವೆ. ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಇಂದು ಶುಭ ದಿನ. ಕೆಲಸಗಾರರ ಕೊರತೆ ಇಂದು ನಿಮ್ಮನ್ನು ಕಾಡಬಹುದು. ಆದರೂ ಸೋಲೊಪ್ಪದೆ ಕೆಲಸ ಮುಗಿಸುವಿರಿ. ಬೆನ್ನು ಅಥವಾ ಕುತ್ತಿಗೆ ನೋವು ಕಾಡಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಶಕ್ತಿಯ ಮಟ್ಟ ತುಂಬಾ ಹೆಚ್ಚಿರುತ್ತದೆ. ಆದರೆ ಆ ಶಕ್ತಿಯನ್ನು ಕೋಪಕ್ಕೆ ಬಳಸದೆ ಕೆಲಸಕ್ಕೆ ಬಳಸಿ. ಭೂ ವ್ಯವಹಾರ ಅಥವಾ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿದವರಿಗೆ ಇಂದು ಲಾಭದಾಯಕ ಒಪ್ಪಂದಗಳು ಸಿಗಲಿವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉತ್ತಮ ಫಲಿತಾಂಶದ ಮುನ್ಸೂಚನೆ ಇದೆ. ವಾಹನ ಚಾಲನೆಯಲ್ಲಿ ಅತಿ ವೇಗ ಬೇಡ. ರಕ್ತದೊತ್ತಡ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಕೆಂಪು ಬಣ್ಣದ ಹಣ್ಣುಗಳ ಸೇವನೆ ಅಥವಾ ದಾನ ಮಾಡುವುದು ಶುಭದೆ.

ಲೇಖನ- ಎನ್‌.ಕೆ.ಸ್ವಾತಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರ ಅಂದುಕೊಂಡ ಕೆಲಸ ಕೊನೆ ಕ್ಷಣದಲ್ಲಿ ರದ್ದಾಗಲಿದೆ – Kannada News | Numerology Horoscope Jan 9: Birth Numbers 4, 5, 6 Daily Predictions

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಹಠಾತ್ ಬದಲಾವಣೆಗಳಿಗೆ ಸಾಕ್ಷಿಯಾಗಲಿದ್ದೀರಿ. ಅಂದುಕೊಂಡ ಕೆಲಸ ಕೊನೆ ಕ್ಷಣದಲ್ಲಿ ರದ್ದಾಗಬಹುದು, ಅದಕ್ಕೆ ಧೃತಿಗೆಡಬೇಡಿ. ಬದಲಿಗೆ ಸಿಕ್ಕ ಬಿಡುವಿನ ವೇಳೆಯನ್ನು ಬಾಕಿ ಉಳಿದ ಕೆಲಸ ಮುಗಿಸಲು ಬಳಸಿ. ತಾಂತ್ರಿಕ ದೋಷಗಳಿಂದಾಗಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ರಿಪೇರಿಗೆ ಬರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಪೋಸ್ಟ್ ಹಾಕಿ ವಿವಾದ ಮೈಮೇಲೆ ಎಳೆದುಕೊಳ್ಳಬೇಡಿ. ಸರ್ಕಾರಿ ಕೆಲಸಗಳು ಸ್ವಲ್ಪ ನಿಧಾನಗತಿಯಲ್ಲಿ ಸಾಗಲಿವೆ, ತಾಳ್ಮೆಯೇ ಮುಖ್ಯ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ವ್ಯವಹಾರ ಹಾಗೂ ವ್ಯಾಪಾರದಲ್ಲಿ ‘ಬಾಯಿ ಮಾತಿನ ವ್ಯವಹಾರ’ ಇಂದು ಕೈಕೊಡಬಹುದು, ಎಲ್ಲವನ್ನೂ ಲಿಖಿತ ರೂಪದಲ್ಲಿ ಇಟ್ಟುಕೊಳ್ಳಿ. ದಲ್ಲಾಳಿ ಕೆಲಸ ಅಥವಾ ಕಮಿಷನ್ ಆಧಾರಿತ ಕೆಲಸ ಮಾಡುವವರಿಗೆ ದೊಡ್ಡ ಮೊತ್ತದ ಹಣ ಕೈ ಸೇರಲಿದೆ. ಪ್ರೀತಿ-ಪ್ರೇಮದ ವಿಚಾರದಲ್ಲಿ ಹೊಸ ಪ್ರಸ್ತಾವನೆ ಸಲ್ಲಿಸಲು ಇದು ಸಕಾಲವಲ್ಲ. ನಿಮ್ಮ ಆಹಾರ ಪದ್ಧತಿಯಲ್ಲಿ ಶಿಸ್ತು ತನ್ನಿ, ವಿಶೇಷವಾಗಿ ಹೊರಗಿನ ಆಹಾರ ಸೇವನೆಯಿಂದ ಹೊಟ್ಟೆಯ ಸಮಸ್ಯೆ ಕಾಡಬಹುದು. ಹಳೆಯ ಸಾಲ ವಸೂಲಿಗೆ ಪ್ರಯತ್ನಿಸಿ, ಯಶಸ್ಸು ಸಿಗಲಿದೆ. ನರ್ಸರಿ ನಡೆಸುತ್ತಿರುವವರಿಗೆ ಲಾಭವಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಇಂದಿನ ವಾರದವಾದ ಶುಕ್ರವಾರ ನಿಮ್ಮ ಜನ್ಮ ಸಂಖ್ಯೆಗೆ ಹೆಚ್ಚು ಪೂರಕವಾಗಿದೆ. ಸೌಂದರ್ಯವರ್ಧಕ, ಬಟ್ಟೆ ಅಥವಾ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ‘ಬಂಪರ್’ ದಿನ. ಮನೆಯನ್ನು ನವೀಕರಿಸುವ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸುವಿರಿ. ಐಷಾರಾಮಿ ವಸ್ತುಗಳ ಮೇಲೆ ಅತಿಯಾದ ಖರ್ಚು ಮಾಡುವುದನ್ನು ನಿಯಂತ್ರಿಸಿ, ಇಲ್ಲದಿದ್ದರೆ ತಿಂಗಳ ಅಂತ್ಯಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ಕಚೇರಿಯಲ್ಲಿ ಸ್ತ್ರೀ ಸಹೋದ್ಯೋಗಿಗಳಿಂದ ಸಹಾಯ ಲಭಿಸಲಿದೆ. ಶುಭ್ರವಾದ ಬಿಳಿ ಬಟ್ಟೆ ಧರಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲಿದೆ.

ಲೇಖನ- ಎನ್‌.ಕೆ.ಸ್ವಾತಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 9ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನೀವು ಕೇವಲ ಆದೇಶ ನೀಡುವುದಕ್ಕೆ ಸೀಮಿತವಾಗಬೇಡಿ. ಕಚೇರಿಯಲ್ಲಿ ಅಥವಾ ಮನೆಯಲ್ಲಿ ಕೆಲಸಗಾರರ ಜೊತೆ ಸ್ವತಃ ನೀವೇ ಮೈದಾನಕ್ಕಿಳಿದು ಕೆಲಸ ಮಾಡಿದರೆ ಮಾತ್ರ ಅಂದುಕೊಂಡ ಗುರಿ ತಲುಪಲು ಸಾಧ್ಯ. ಆರ್ಥಿಕವಾಗಿ ಇಂದು “ಹೂಡಿಕೆಗಿಂತ ಉಳಿತಾಯ”ಕ್ಕೆ ಒತ್ತು ನೀಡಿ. ಯಾರೋ ಹೇಳಿದ ಮಾತು ಕೇಳಿ ಷೇರು ಮಾರುಕಟ್ಟೆಯಲ್ಲಿ ಹಣ ಹಾಕಬೇಡಿ. ಸಂಜೆಯ ವೇಳೆ ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೆ ವಾದವಾಗಬಹುದು, ಅಲ್ಲಿ ನಿಮ್ಮ ಅಹಂ ಬಿಟ್ಟು ಮೌನ ತಾಳುವುದು ಪ್ರಾಯೋಗಿಕವಾಗಿ ನಿಮಗೆ ಲಾಭದಾಯಕ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ಬದಲು ಇಂದು ಅಂಕಿ-ಅಂಶಗಳ ಮೇಲೆ ಗಮನಹರಿಸಿ. ಹಣಕಾಸಿನ ವ್ಯವಹಾರದಲ್ಲಿ ಸಹಿ ಮಾಡುವ ಮುನ್ನ ದಾಖಲೆಗಳನ್ನು ಎರಡು ಬಾರಿ ಓದಿ. ಇಂದು ಹಾಲಿನ ಉತ್ಪನ್ನಗಳು ಅಥವಾ ಬಿಳಿ ಬಣ್ಣದ ವಸ್ತುಗಳ ವ್ಯಾಪಾರಸ್ಥರಿಗೆ ಉತ್ತಮ ಲಾಭ ಇದೆ. ಪ್ರಯಾಣದ ಸಂದರ್ಭದಲ್ಲಿ ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರವಿರಲಿ. ಕುಟುಂಬದಲ್ಲಿ ಹಿರಿಯರ ಆರೋಗ್ಯಕ್ಕಾಗಿ ಸ್ವಲ್ಪ ಹಣ ಖರ್ಚಾಗಬಹುದು, ಅದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮ ಜ್ಞಾನವನ್ನು ಪ್ರದರ್ಶಿಸಲು ಇಂದು ಸರಿಯಾದ ವೇದಿಕೆ ಸಿಗಲಿದೆ. ಆದರೆ, “ನನಗೆಲ್ಲಾ ಗೊತ್ತು” ಎಂಬ ಧೋರಣೆ ಬೇಡ. ಕೆಲಸದ ಸ್ಥಳದಲ್ಲಿ ಹೊಸ ತಂತ್ರಜ್ಞಾನ ಅಥವಾ ಹೊಸ ಸಾಫ್ಟ್‌ವೇರ್ ಕಲಿಯಲು ಇಂದು ಹಣ ಹೂಡಿಕೆ ಮಾಡಿ, ಇದು ಭವಿಷ್ಯದಲ್ಲಿ ದೊಡ್ಡ ಲಾಭ ನೀಡಲಿದೆ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವಿರಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಿದ್ದರೂ, ದಿನದ ಅಂತ್ಯಕ್ಕೆ ಸಮಾಧಾನ ಸಿಗಲಿದೆ.

ಲೇಖನ- ಎನ್‌.ಕೆ.ಸ್ವಾತಿ

Source link

Horoscope Today 09 January: ಇಂದು ಈ ರಾಶಿಯವರನ್ನು ಯಾವ ವಿಚಾರಕ್ಕೂ ನಿಯಂತ್ರಿಸಲಾಗದು – Kannada News | Horoscope Today: January 9, 2026 Daily Zodiac Predictions and Lucky Signs

ಮೇಷ ರಾಶಿ:

ಕಾನೂನಿನ ಕ್ರಮದಲ್ಲಿ ನಿಮ್ಮ ಯೋಜನೆ ಇರಲಿ. ಹೂಡಿಕೆಯನ್ನು ಮಾಡಲು ಒತ್ತಡ ಬರಬಹುದು. ದುರಾಸೆ ಪಡದೆ ಬಂದಿದ್ದನ್ನು ಸುಮ್ಮನೇ ಸ್ವೀಕರಿಸಿ. ಜೀವನಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಇದೆ. ನಿಮಗೆ ತಿಳಿದ ವಿಚಾರವನ್ನು ಬೇರೆಯವರಿಗೆ ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಡುವಿರಿ. ದಾಂಪತ್ಯದ ಸುಖವು ನಿಮಗೆ ಹೆಚ್ಚು ಇಷ್ಟವಾದೀತು. ಮನಸ್ಸಿನಲ್ಲಿ ಸಂಯಮವಿರಲಿ. ವಾತಾವಣವು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಅನವಶ್ಯಕ ವಾದ ವಿವಾದವು ಆಗಬಹುದು. ನಿಮ್ಮ ತಪ್ಪಿಗೆ ಬೇರೆಯವರನ್ನು ಬೆರಳು ಮಾಡುವಿರಿ. ತಪ್ಪನ್ನು ಒಪ್ಪಿಕೊಂಡು ಮೆಚ್ಚುಗೆ ಪಡೆಯುವಿರಿ.

ವೃಷಭ ರಾಶಿ:

ಸುಂದರವಾದ ಸ್ಥಳಕ್ಕೆ ಹೋಗಬೇಕು ಎನಿಸುವುದು. ಅನಾರೋಗ್ಯವನ್ನು ನಿರ್ಲಕ್ಷಿಸುವುದು ಬೇಡ. ಭೂಮಿಗೆ ಸಂಬಂಧಿತ ಕೆಲಸವನ್ನು ಪೂರ್ಣಮಾಡಿಕೊಳ್ಳುವಿರಿ. ನೀವು ಹಾಳುಮಾಡಿಕೊಳ್ಳುವಿರಿ. ಇಂದಿನ ನಿಮ್ಮ ನಿರೀಕ್ಷೆಗಳು ಹುಸಿಯಾಗಬಹುದು. ನಿಮಗೆ ಬೇಕಾದುದನ್ನು ಪಡೆಯಲು ನಿಮಗೆ ಇಚ್ಛೆ ಇರುವುದು. ನೀವು ಇಂದು ಅಸಹಜವಾಗಿ ನಡೆದುಕೊಳ್ಳುವಿರಿ. ಆಲಸ್ಯವು ಅಧಿಕವಾಗಬಹುದು. ಬಹಳ ದಿನದಿಂದ ಅಂದುಕೊಂಡ ಸ್ಥಳಕ್ಕೆ ಹೋಗುವಿರಿ. ಸಾಧಿಸಲಾಗದ ಕೆಲಸಕ್ಕೆ ಹೆಚ್ಚು ಶ್ರಮವನ್ನು ಹಾಕುವಿರಿ.‌ ಸ್ನೇಹ ಸಂಬಂಧಗಳನ್ನು ದೂರ ಮಾಡಿಕೊಳ್ಳುವಿರಿ. ಸುಮ್ಮನೆ ಕಾಲಹರಣವಾಗುವುದು ನಿಮಗೆ ಗೊತ್ತಾಗದು.

ಮಿಥುನ ರಾಶಿ:

ನಿಮ್ಮ ಬಗ್ಗೆ ಸ್ಪಷ್ಟತೆ ಇರಲಿ. ಉಸಿರಿಗೆ ಸಂಬಂಧಿಸಿದ ತೊಂದರೆ ಕಾಣಿಸಿಕೊಳ್ಳಬಹುದು. ವಿದ್ಯಾಭ್ಯಾಸದಲ್ಲಿ ಅತಂತ್ರ ಸ್ಥಿತಿಯನ್ನು ನೀವಾಗಿಯೇ ತಂದುಕೊಳ್ಳುವಿರಿ. ಅವಶ್ಯಕತೆ ಇರುವಷ್ಟು ಮಾತ್ರ ಮಾತನಾಡಿ. ನಿಮಗೆ ಅತಿಥಿ ಸತ್ಕಾರವು ನಡೆಯಬಹುದು. ಒಂದೇ ವಿಚಾರಕ್ಕೆ ಮತ್ತೆ ಮತ್ತೆ ಬೇಸರಿಸುವ ಅವಶ್ಯಕತೆ ಇಲ್ಲ. ರಾಜಕೀಯದಿಂದ ಹೊರಬರಲು ಮನಸ್ಸಾಗುವುದು. ಅನಿರೀಕ್ಷಿತ ಅಮೂಲ್ಯ ವಸ್ತುಗಳು ಪ್ರಾಪ್ತವಾಗುವುದು. ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು. ಇಂದಿನ ಅಧಿಕ ಸಮಯದಲ್ಲಿ ಮೌನವಾಗಿಯೇ ಇರುವಿರಿ. ಯಾವುದೋ ಹತ್ತಾರು ವಿಚಾರದಲ್ಲಿ ನೀವು ಒತ್ತಡಕ್ಕೆ ಒಳಗಾಗುವಿರಿ. ವಾಹನ ಸವಾರರು ಜಾಗರೂಕತೆ ಅವಶ್ಯಕ.

ಕಟರ್ಕಾಟ ರಾಶಿ:

ಸಂತೋಷಕ್ಕಾಗಿ ನೀವು ಕೆಲವನ್ನು ತ್ಯಾಗಮಾಡಬೇಕಾದೀತು. ಮಕ್ಕಳ ವಿಚಾರದಲ್ಲಿ ಅಧಿಕ ಬದಲಾವಣೆ ಇರಲಿದೆ. ಪ್ರೀತಿಯು ಸುಖಾಂತ್ಯ ಕಾಣಬಹುದು. ವ್ಯಾಪಾರಸ್ಥರು ಶ್ರಮದಾಯಕ ಲಾಭವನ್ನು ಮಾಡಿಕೊಳ್ಳುವರು. ಹೊಸ ಯಂತ್ರಗಳನ್ನು ಸ್ವೀಕರಿಸುವಿರಿ. ನಿರ್ಲಕ್ಷ್ಯವು ನಿಮ್ಮ ಸ್ವಭಾವವಾದರೂ ಕೆಲವು ಸಂದರ್ಭಗಳಲ್ಲಿ ಅದನ್ನ ಬದಲಿಸಿಕೊಳ್ಳುವುದು ಉತ್ತಮ. ವೃತ್ತಿಯಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ಪ್ರಭಾವಿ ವ್ಯಕ್ತಿಗಳ ಭೇಟಿಯು ಸಂತೋಷವನ್ನು ಕೊಡುವುದು. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಿ ನಗೆಪಾಟಲಿಗೆ ಸಿಕ್ಕಿಕೊಳ್ಳುವಿರಿ. ಸಂಗಾತಿಯಿಂದ ಉಡುಗೊರೆಯು ಅನಿರೀಕ್ಷಿತವಾಗಿ ಸಿಗಬಹುದು.

ಸಿಂಹ ರಾಶಿ:

ಕೊರತೆಯನ್ನು ನೆನೆದು ದುಃಖಿಸುವುದು ಬೇಡ. ಕಾಲಕ್ಕೆ ಸಿಗಬೇಕಾದುದು ಸಿಗಲಿದೆ. ಎಂದಿಗಿಂತ ವ್ಯಾಪಾರದಲ್ಲಿ ಹಿನ್ನಡೆ ಇರಲಿದೆ. ಚಿಂತೆಯು ಕಾಡಬಹುದು. ಪಾಲುದಾರಿಕೆಯಲ್ಲಿ ನಿಮಗೆ ಹೊಂದಾಣಿಕೆಯ ಕೊರತೆ ಆಗಬಹುದು. ಅನಿರೀಕ್ಷಿತ ವೆಚ್ಚವನ್ನು ಮಾಡಬೇಕಾಗಬಹುದು. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ಸಾಕ್ಷಿಯು ಸಿಗದೇಹೋಗಬಹುದು. ಪ್ರಯಾಣದಲ್ಲಿ ತೊಂದರೆಗಳು ಬಂದರೂ ತಲುಪಬೇಕಾದ ಸ್ಥಳಕ್ಕೆ ಹೋಗುವಿರಿ. ಸರ್ಕಾರಿ ನೌಕರರು ಅಧಿಕಾರಿಗಳಿಂದ ಸಮಸ್ಯೆಯನ್ನು ಎದುರಿಸಬೇಕಾದೀತು. ಮಾನಸಿಕ ಒತ್ತಡಗಳು ನಿಮ್ಮ ಕೆಲಸವನ್ನು ಹಾಳುಮಾಡುವುದು. ಕಛೇರಿಯ ಕೆಲಸವನ್ನು ಹಂಚಿಕೊಂಡು ಮಾಡುವಿರಿ.

ಕನ್ಯಾ ರಾಶಿ:

ವಿದ್ಯಾರ್ಥಿಗಳ ಶ್ರಮವು ವ್ಯರ್ಥವಾಗುವುದು. ಅತಿಯಾದ ಚಿಂತೆಯು ನಿಮ್ಮ ಜೊತೆಗಿರುವವರ ಮನಸ್ಸನ್ನೂ ಕೆಡಿಸೀತು. ಉದ್ಯೋಗದ ಬದಲಾವಣೆ ಆಗಲಿದ್ದು ಸರಿಯಾದ ಪ್ರತ್ಯುತ್ತರ ಸಿಗದೇ ಬೇಸರವಾಗುವುದು. ನಿಮ್ಮ ವಸ್ತುಗಳು ಕಳ್ಳತನವಾಗಬಹುದು. ನಿಮ್ಮ ನಿಯಮಗಳನ್ನು ನೀವೇ ಭಂಗ ಮಾಡಿಕೊಳ್ಳುವಿರಿ. ಎಚ್ಚರಿಕೆಯಿಂದ ನಿಮ್ಮ ಹೆಜ್ಜೆಯನ್ನು ಇಡಿ. ಅಳುಕಿನಿಂದ ಇರುವಿರಿ. ಇಂದು ಕೈಗೊಂಡ ಪ್ರವಾಸದಲ್ಲಿ ನಿಮಗೆ ತೃಪ್ತಿ ಸಿಗದು. ನಿಮ್ಮ ಉತ್ಸಾಹಕ್ಕೆ ಯಾರಾದರೂ ಭಂಗಮಾಡಬಹುದು. ಯಾರದ್ದೋ ಮೂಲಕ ನೀವು ಶತ್ರುಗಳ ಯೋಜನೆಯನ್ನು ತಿಳಿಯುವಿರಿ. ಸಹನೆಯಿಂದ ಆಗುವ ಲಾಭವು ಅನುಭವಕ್ಕೆ ಬರಬಹುದು.

ತುಲಾ ರಾಶಿ:

ಸಾಮಾಜಿಕ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ವ್ಯವಹಾರದಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿನ ಲಾಭವು ಸಿಗುವುದು. ಉದರಬಾಧೆಯಿಂದ ಕಷ್ಟಪಡುವಿರಿ. ದುಡುಕಿ ಮಾತನಾಡಿ ಸತ್ಯವನ್ನು ಹೇಳುವಿರಿ. ಆಸ್ತಿಯ ಕಲಹವನ್ನು ನ್ಯಾಯಾಲಯಕ್ಕೆ ತಡಗೆದುಕೊಂಡು ಹೋಗುವಿರಿ. ವಿನಾಕಾರಣ ಯಾರ ಮೇಲಾದರೂ ಅಧಿಕಾರವನ್ನು ಚಲಾಯಿಸುವಿರಿ. ಅಲ್ಪರ ಸಹವಾಸದಿಂದ ಅಭಿಮಾನಕ್ಕೆ ತೊಂದರೆಯಾಗುವುದು. ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿ ಇರಲಿ. ಸಂಗಾತಿಯಿಂದ ನಿಮಗೆ ನೂತನ ವಸ್ತ್ರಗಳು ಬರಬಹುದು. ನಿಮ್ಮ ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಕೆಲಸದಲ್ಲಿ ಪ್ರಾಮಾಣಿಕತೆ ಕಡಿಮೆ ಆದಂತೆ ತೋರಬಹುದು.

ವೃಶ್ಚಿಕ ರಾಶಿ:

ಬಂಧುಗಳು ನಿಮ್ಮ ಸಮಸ್ಯೆಗೆ ಸ್ಪಂದಿಸುವರು. ವ್ಯಾಪಾರವು ಲಾಭಾಂಶವನ್ನು ಹೆಚ್ಚು ಪಡೆಯುವುದು. ನಿಮ್ಮ ಕೆಲಸಗಳಿಗೆ ಆತ್ಮಸಾಕ್ಷಿಯೇ ಮುಖ್ಯವಾಗಿರುವುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಸಂಗಾತಿಯ ಬೆಂಬಲವು ಸಿಗದೇಹೋಗಬಹುದು. ನಿಮ್ಮ ಹಿತೈಷಿಗಳಾದರೂ ಅವರ ಜೊತೆಗಿನ ಒಡನಾಟವು ಮಿತಿಯಲ್ಲಿ ಇರಲಿ. ಇಂದಿನ ಕಾರ್ಯದಲ್ಲಿ ಮುನ್ನಡೆಯಿರಲಿದ್ದು ನಿಮ್ಮ ಬಗ್ಗೆ ಸದಭಿಪ್ರಾಯವು ಇರುವುದು. ಆಪ್ತರ ಜೊತೆ ಮಾಡಿದ‌ ಸಮಾಲೋಚನೆಯಿಂದ ಮನಸ್ಸಿಗೆ ಸಂತೋಷ ಸಿಗುವುದು. ವಾಸಸ್ಥಳದ ಬದಲಾವಣೆಯಿಂದ ಹೊಂದಿಕೊಳ್ಳುವುದು ಕಷ್ಟವಾದೀತು.

ಧನು ರಾಶಿ:

ಇಂದು ಎಲ್ಲರಿಂದ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಮಂಗಲ ಕಾರ್ಯಗಳಿಂದ ನೆಮ್ಮದಿ ಇರುವುದು. ಮಿತ್ರನ ನಂಬಿಕೆಯನ್ನು ಕಳೆದುಕೊಂಡು, ಆದ ನಷ್ಟಕ್ಕೆ ದುಃಖಿಸುವಿರಿ. ಸ್ಥಿರಾಸ್ತಿಯನ್ನು ವ್ಯವಹಾರ‌ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ಮಿತ್ರರ ಮನಸ್ತಾಪವನ್ನು ನೀವು ಬಗೆಹರಿಸಿಕೊಳ್ಳುವಿರಿ. ಬಂಧುಗಳ ನಡುವೆ ಪರಸ್ಪರ ಸೌಹಾರ್ದವು ಬೆಳೆಯಬಹುದು. ಸಹೋದರರ ನಡುವೆ ಆರ್ಥಿಕ ಸಂಬಂಧವು ಉತ್ತಮವಾಗಿ ಇರುವುದಿಲ್ಲ. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ‌ ಇರುಬುದು. ಸಾಹಿತ್ಯದಲ್ಲಿ ಆಸಕ್ತಿ ಮೂಡುವ ಸಾಧ್ಯತೆ ಇದೆ. ಪ್ರೀತಿಯಿಂದ ಕೊಟ್ಟ ವಸ್ತುವನ್ನು ಮತ್ತೆ ಕೊಡುವುದು ಬೇಡ. ಸಂಗಾತಿಯ ಜೊತೆ ಸಣ್ಣ ವಿಚಾರಗಳಿಗೂ ಜಗಳವಾಡುಬಿರಿ.

ಮಕರ ರಾಶಿ:

ಉದ್ಯೋಗಕ್ಕೆ ಸಂಬಂಧಿಸಿದಂತೆ ಕಿರಿಕಿರಿಯನ್ನು ಅನುಭವಿಸಿದರೂ ಅದನ್ನು ವ್ಯಕ್ತ ಮಾಡುವುದು ಬೇಡ. ಸ್ನೇಹಿತರು ನಿಮ್ಮನ್ನು ಅಪಮಾನ ಮಾಡಬಹುದು. ನ್ಯಾಯಾಲಯದ ವಿಷಯದಲ್ಲಿ ನಿಮ್ಮ ಊಹೆಯು ಸರಿಯಾಗದು. ಮನೆಯಲ್ಲಿ ಮಕ್ಕಳು ನಿಮ್ಮನ್ನು ಲೆಕ್ಕಕ್ಕೆ ತೆಗದುಕೊಳ್ಳದೇ ಹೋಗಬಹುದು. ಹಳೆಯ ಮನೆಯ ದುರಸ್ತಿ ಕಾರ್ಯವು ಜರುಗಲಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ. ಇಂದಿನ‌ ಹೆಚ್ಚಿನ ವಿಚಾರಗಳನ್ನು ನಕರಾತ್ಮಕವಾಗಿಯೇ ಚಿಂತಿಸುವಿರಿ. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು. ಬೇಕಾದ ವಸ್ತುವು ಕಣ್ಮರೆಯಾಗಬಹುದು. ಸ್ವಂತ ವಾಹನದಿಂದ ನೀವು ಲಾಭವನ್ನು ಗಳಿಸುವಿರಿ.

ಕುಂಭ ರಾಶಿ:

ನೆಯ ಬಗ್ಗೆಯೇ ಹೆಚ್ಚು ಯೋಚಿಸುವಿರಿ. ಅನಾರೋಗ್ಯವು ಉತ್ಸಾಹವನ್ನು ಕಡಿಮೆ ಮಾಡುವುದು. ಗೌಪ್ಯವಾಗಿ ನಿಮ್ಮ ಅಂತರಂಗವನ್ನು ತಿಳಿದುಕೊಳ್ಳಲು ಶತ್ರುಗಳು ಪ್ರಯತ್ನಿಸಬಹುದು. ಮಾತಿನ ಮೇಲೆ ನೀವು ಹಿಡಿತವನ್ನು ಸಾಧಿಸಬೇಕಾದೀತು. ಕಛೇರಿಯಲ್ಲಿ ಅನಗತ್ಯವಾಗಿ ಮಾತನಾಡಿ ಸುಮ್ಮನೇ ವ್ಯಕ್ತಿತ್ವವನ್ನು ಹಾಳುಮಾಡಿಕೊಳ್ಳುವುದು ಬೇಡ. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವರು. ವೃತ್ತಿಯಲ್ಲಿ ಬಡ್ತಿಯನ್ನು ಅಪೇಕ್ಷಿಸುವಿರಿ. ಮೇಲಧಿಕಾರಿಗಳ ಮಾತುಗಳು ನಿಮ್ಮನ್ನು ಕಾಡಬಹುದು. ಆಪ್ತರ ಮಾತಿನ ಮೇಲೆ ಭರವಸೆ ಇಡಿ. ಅತಿಯಾದ ಒತ್ತಡದಿಂದ ಮಾಡುವ ಕೆಲಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಮೀನ ರಾಶಿ:

ಸಾಲದ ಚಿಂತೆಯಲ್ಲಿ ನೀವು ಎಲ್ಲವನ್ನೂ ಮರೆಯುವಿರಿ. ಇಂದು ನಿಮಗೆ ಮಾತಿನಿಂದಾಗಿ ತೊಂದರೆಗಳು ಬರಬಹುದು. ಎಲ್ಲರ ಜೊತೆಗೂ ವಾಗ್ವಾದಕ್ಕೆ ಹೋಗುವುದು ಬೇಡ. ಕುಟುಂಬದ ಸಮಸ್ಯೆಗೆ ಧಾರ್ಮಿಕ ಕಾರ್ಯವನ್ನು ಮಾಡಿ ಪರಿಹಾರವನ್ನು ಮಾಡಿಕೊಳ್ಳಲು ಇಚ್ಛಿಸುವಿರಿ. ಇಂದು ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುವಿರಿ. ವಾಹನ ಖರೀದಿಯ ಆಲೋಚನೆಯನ್ನು ಸದ್ಯ ಕೈ ಬಿಡುವಿರಿ. ವಿದ್ಯಾಭ್ಯಾಸದ ಬಗ್ಗೆ ಅನಾದರ ಬರಬಹುದು. ಯಾರಿಂದಲಾದರೂ ಹಿತವಚನದ ಅವಶ್ಯಕತೆ ಇರುವುದು. ಸ್ತ್ರೀಯರಿಂದ ಇಂದು ಸಹಾಯವನ್ನು ಪಡೆಯುವಿರಿ. ಹಣದ ವಿಚಾರದಲ್ಲಿ ನಿಮಗೆ ಸರಿಯಾದ ಮಾರ್ಗದರ್ಶನ ಬೇಕಾಗುವುದು.

ಜನವರಿ 09,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ ನಿತ್ಯನಕ್ಷತ್ರ : ಉತ್ತರಾಫಲ್ಗುಣೀ ಯೋಗ : ಶೋಭನ, ಕರಣ : ವಣಿಜ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 09 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13-56 – 15:21, ಯಮಗಂಡ ಕಾಲ 06:52 – 08:17, ಗುಳಿಕ ಕಾಲ 09:42 – 11:06

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಕೇಂದ್ರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ಸರ್ಕಾರ: ವಿಶೇಷ ಅಧಿವೇಶನ ಕರೆಯಲು ತೀರ್ಮಾನ – Kannada News | MGNREGA to PBGRY: CM Siddaramaiah Lead Congress MLAs Meeting decides to special session

ಬೆಂಗಳೂರು, (ಜನವರಿ 08): ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ) ರದ್ದುಗೊಳಿಸಿ ಜಿ ರಾಮ್‌ ಜಿ ಎಂದು ಪುನರ್‌ನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಕರ್ನಾಟಕದಲ್ಲಿ ಹೋರಾಟ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ಇಂದಿನ ಸಚಿವ ಸಂಪುಟದಲ್ಲೂ ಸಹ ಚರ್ಚೆ ಮಾಡಿದ್ದು, ವಿಬಿ ಜಿ ರಾಮ್‌ ಜಿ ಕಾಯಿದೆಯ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧಾರ ಮಾಡಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ (Siddaramaiah_ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಕಾಂಗ್ರೆಸ್ ಶಾಸಕರು ಜತೆ ಸಭೆ ಮಾಡಿದ್ದು, ಮನ್ರೇಗಾ ಹೆಸರು ಬದಲಾವಣೆ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದೆ. ಹಾಗೇ ಮಹಾತ್ಮ‌ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ಶೀಘ್ರವೇ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ.

2 ದಿನ ವಿಶೇಷ ಅಧಿವೇಶನ ಕರೆಯಲು ತೀರ್ಮಾನ

ಮನರೇಗಾ ರದ್ದುಗೊಳಿಸಿ ಜಿ ರಾಮ್‌ ಜಿ ಎಂದು ಪುನರ್‌ನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ಹೋರಾಟ ನಡೆಸುವ ಸಂಬಂಧ ಇಂದು (ಜನವರಿ 08) ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಸಭೆ ನಡೆಸಿದ್ದು, ಕೇಂದ್ರದ ವಿರುದ್ಧ ಪ್ರಬಲವಾಗಿ ಹೋರಾಟ ಮಾಡಲು ನಿರ್ಧರಿಸಲಾಗಿದೆ.ಅಲ್ಲದೇ ಮಹಾತ್ಮ‌ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ಎರಡು ದಿನ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಇದು ಬಿಜೆಪಿಯವರ ಹುನ್ನಾರ. ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂತು. ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆ. ದಲಿತರು, ಮಹಿಳೆಯರು, ರೈತರಿಗೆ ಉದ್ಯೋಗ ಒದಗಿಸುವುದು ಯೋಜನೆ ಉದ್ದೇಶ. ವರ್ಷದಲ್ಲಿ ನೂರು ದಿನ ಉದ್ಯೋಗ ಅವಕಾಶ ಈ ಯೋಜನೆಯಲ್ಲಿ ಸಿಗುತ್ತಿತ್ತು. ಈ ಉದ್ಯೋಗವನ್ನೇ ಕಸಿಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ಉದ್ಯೋಗದ ಹಕ್ಕು ಇಲ್ಲವಾಗಿಸಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ʼವಿಬಿಜಿ ರಾಮ್ ಜಿ ಕಾಯ್ದೆʼ ಭ್ರಷ್ಟಾಚಾರಿ ಕಾಂಗ್ರೆಸ್‌ ಮಧ್ಯವರ್ತಿಗಳಿಗೆ ತೊಡಕು: ಜೋಶಿ ತಿರುಗೇಟು

ಗೊಂದಲ ಸೃಷ್ಟಿ ಮಾಡುವ ಹುನ್ನಾರ ಎಂದ ಸಿಎಂ

ಮಹಾತ್ಮ ಗಾಂಧಿಯವರ ಹೆಸರು ತೆಗೆದು ಗೊಂದಲ ಸೃಷ್ಟಿ ಮಾಡುವ ಹುನ್ನಾರ ಇದಾಗಿದೆ. ಈ ಮೂಲಕ ಮತ್ತೆ ಗಾಂಧಿಯವರನ್ನು ಕೊಲೆ ಮಾಡಲಾಗಿದೆ. ಇದು ಸಂಘ ಪರಿವಾರದವರು ಹೇಳಿ ಕೊಟ್ಟಿರುವ ಪಾಠ. 28 ಕೋಟಿ ದಲಿತರಿಗೆ ಇದರಿಂದ ಅನ್ಯಾಯವಾಗಿದೆ. ನಮ್ಮ ಹೋರಾಟ ತೀವ್ರವಾಗಿ ಇರಬೇಕು. ಬಡವರ ಉದ್ಯೋಗದ ಹಕ್ಕು ಕಸಿದುಕೊಂಡವರಿಗೆ ಪಾಠ ಕಲಿಸಬೇಕು. ಬಡವರು ಆರ್ಥಿಕವಾಗಿ ಸಬಲರಾಗುವುದನ್ನು ಸಂಘ ಪರಿವಾರ ಸಹಿಸುವುದಿಲ್ಲ ಎಂದಿದ್ದಾರೆ.

ಶಾಸಕರಿಗೆ ಮಹತ್ವದ ಸೂಚನೆ

ಕಾಂಗ್ರೆಸ್ ಜಾರಿಗೆ ತಂದ ಕಾರ್ಯಕ್ರಮವನ್ನು ರದ್ಧು ಮಾಡಿ ಉದ್ಯೋಗದ ಹಕ್ಕು ಕಸಿದುಕೊಂಡಿರುವುದು ಸಂವಿಧಾನ ಬಾಹಿರ ಕೆಲಸ. ಮನರೇಗಾ ಕಾಯಿದೆ ಮತ್ತೆ ಜಾರಿ ಅಗುವ ರೀತಿ ಜನಾಂದೋಲನ ನಡೆಯಬೇಕು. ಪ್ರತಿ ಗ್ರಾಮ ಪಂಚಾಯಿತಿ ಸದಸ್ಯ ನರೇಗಾದಲ್ಲಿ ಕೆಲಸ ಮಾಡುತ್ತಿರುವವರನ್ನ ತಲುಪಬೇಕು. ಈ ವಿಷಯದ ಬಗ್ಗೆ ಜನರನ್ನೂ ಜಾಗೃತಗೊಳಿಸುವ ಕೆಲಸವನ್ನು ಶಾಸಕರು ಮಾಡಬೇಕು. ನಮ್ಮ ಹೋರಾಟ ಜನಾಂದೋಲನವಾಗಿ ರೂಪುಗೊಳ್ಳುವಂತಹ ವಾತಾವರಣ ನಿರ್ಮಾಣ ಆಗಬೇಕಿದೆ ಎಂದು ಸಿದ್ದರಾಮಯ್ಯ ತಮ್ಮ ಶಾಸಕರಿಗೆ ಕರೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:54 pm, Thu, 8 January 26

Source link