All posts by nagaraj11081993

‘ಟಾಕ್ಸಿಕ್’ ಟೀಸರ್​​​ನಲ್ಲಿ ಮಾಸ್ ಹಾಗೂ ಹಸಿಬಿಸಿ ದೃಶ್ಯ; ಇಲ್ಲಿವೆ ಫೋಟೋಸ್ – Kannada News | Yash Starrer Toxic Movie Teaser Yash Look is So bold Teaser Is full of Bold scenes

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್​ 19ರಂದು ತೆರೆಗೆ ಬರಲಿದೆ. ಇದಕ್ಕಾಗಿ ಅವರ ಫ್ಯಾನ್ಸ್ ಕಾಯುತ್ತಿದ್ದಾರೆ. ಯಶ್ ಜನ್ಮದಿನದ ಪ್ರಯುಕ್ತ ಇಂದು (ಏಪ್ರಿಲ್ 8) ಟೀಸರ್ ರಿಲೀಸ್ ಆಗಿದ್ದು, ಗಮನ ಸೆಳೆಯೋ ರೀತಿಯಲ್ಲಿ ಇದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ವಿವಿಧ ರೀತಿಯ ಗನ್ ಬಳಕೆ ಆಗಿದೆ. ಇಲ್ಲಿ ಬಾಂಬ್ ಸಿಡಿಯುತ್ತೆ. ಯಶ್ ಅವರು ತಮ್ಮ ರಗಡ್ ಲುಕ್ ಮೂಲಕ ಮಿಂಚುತ್ತಾರೆ. ಈ ಟೀಸರ್ ನೋಡಿದ ಎಲ್ಲರೂ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಯಶ್ ಅವರು ಶರ್ಟ್​​ಲೆಸ್ ಆಗಿ ಎಂಟ್ರಿ ಕೊಡುತ್ತಾರೆ. ಈ ಸಿನಿಮಾದಲ್ಲಿ ಅವರ ಪಾತ್ರದ ಹೆಸರು ರಾಯ. ಇದು ಪಕ್ಕಾ ಸ್ಥಳೀಯ ಹೆಸರು. ಸಿನಿಮಾ ಮೇಕಿಂಗ್ ಹಾಲಿವುಡ್ ಸ್ಟೈಲ್​​​​ನಲ್ಲಿ ಇದೆ ಎಂಬುದು ವಿಶೇಷ.

ಹಸಿಬಿಸಿ ದೃಶ್ಯಗಳು ಕೂಡ ಟೀಸರ್​​​ನಲ್ಲಿ ಇವೆ. ಹೀಗಾಗಿ, ಈ ಸಿನಿಮಾ ಎ ಸರ್ಟಿಫಿಕೆಟ್ ಪಡೆಯೋದು ಪಕ್ಕಾ ಎಂದು ಹೇಳಲಾಗುತ್ತಾ ಇದೆ. ಯಶ್ ಫ್ಯಾನ್ಸ್​​ಗೆ ಟೀಸರ್ ಇಷ್ಟ ಆಗಿದೆ.

ಯಶ್ ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಸಿಗಾರ್ ಸೇದುತ್ತಾ ಎಂಟ್ರಿ ಕೊಟ್ಟಿದ್​ದಾರೆ. ಈ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ‘ಧುರಂಧರ್ 2’ ಎದುರು ‘ಟಾಕ್ಸಿಕ್’ ತೆರೆಗೆ ಬರುತ್ತಿದೆ.

Published On – 11:12 am, Thu, 8 January 26

Source link

‘ಟಾಕ್ಸಿಕ್’ ಇದು ನಿಜಕ್ಕೂ ದೊಡ್ಡವರ ಕತೆ, ಸಣ್ಣವರಿಗಲ್ಲ – Kannada News | Yash’s Toxic movie is only for adults not for minors

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಇಂದು (ಜನವರಿ 08) ಬಿಡುಗಡೆ ಆಗಿದೆ. ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ‘ಟಾಕ್ಸಿಕ್’ ಆ ನಿರೀಕ್ಷೆಗೆ ತಕ್ಕಂತೆ ಗುಣಮಟ್ಟದ ಮೇಕಿಂಗ್ ಉಳ್ಳ ಟೀಸರ್ ಅನ್ನೇ ಬಿಡುಗಡೆ ಮಾಡಿದೆ. ಯಶ್, ‘ಕೆಜಿಎಫ್’ ಸಿನಿಮಾಕ್ಕಿಂತಲೂ ಹೆಚ್ಚು ರಗಡ್ ಆಗಿ ಸಿನಿಮಾನಲ್ಲಿ ಕಾಣಿಸಿಕೊಂಡಿರುವುದು ಟೀಸರ್​​ನಿಂದಲೇ ತಿಳಿಯುತ್ತಿದೆ. ಸಿನಿಮಾವನ್ನು ಪಕ್ಕಾ ಹಾಲಿವುಡ್ ‘ಮಾನದಂಡ’ಗಳಿಗೆ ಅನುಗುಣವಾಗಿ ನಿರ್ಮಿಸಿರುವುದು ಟೀಸರ್​​ನಿಂದಲೇ ತಿಳಿಯುತ್ತಿದೆ. ಜೊತೆಗೆ ‘ಟಾಕ್ಸಿಕ್’ ಸಿನಿಮಾ ಪಕ್ಕಾ ‘ದೊಡ್ಡವರ’ ಸಿನಿಮಾ, ಈ ಸಿನಿಮಾ ಕಿರಿಯರಿಗಲ್ಲ ಎಂಬುದನ್ನು ಸಹ ಟೀಸರ್ ಸಾರಿ ಹೇಳುತ್ತಿದೆ.

ಈಗ ಬಿಡುಗಡೆ ಆಗಿರುವ ‘ಟಾಕ್ಸಿಕ್’ ಸಿನಿಮಾದ ಟೀಸರ್​​ನಲ್ಲಿಯೇ ಹಸಿ ಬಿಸಿ ದೃಶ್ಯವಿದೆ. ಯಶ್, ಸ್ಮಶಾನದ ಮುಂದೆ ಕಾರಿನಲ್ಲಿ ಯುವತಿಯೊಟ್ಟಿಗೆ ಲೈಂಗಿಕತೆಯಲ್ಲಿ ತೊಡಗಿರುವ ದೃಶ್ಯವಿದೆ. ಅದನ್ನು ಯಶ್ ಅವರ ರಾಯ ಪಾತ್ರದ ‘ಶಕ್ತಿ’ಯನ್ನು ತೋರ್ಪಡಿಸಲು ನಿರ್ದೇಶಕರು ಬಳಸಿದಂತಿದೆ. ಟೀಸರ್ ನೋಡಿದರೆ ‘ಟಾಕ್ಸಿಕ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ಸಿಗುವುದು ಪಕ್ಕಾ ಎನಿಸುತ್ತಿದೆ. ಈ ದೃಶ್ಯವೊಂದೇ ಅಲ್ಲದೆ ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆ ಆಗಿದ್ದ ಟೀಸರ್​​ನಲ್ಲಿಯೂ ಸಹ ಸಾಕಷ್ಟು ಹಸಿ-ಬಿಸಿ ದೃಶ್ಯಗಳಿದ್ದವು.

ಕಳೆದ ವರ್ಷ ಬಿಡುಗಡೆ ಆಗಿದ್ದ ಟೀಸರ್​​ನಲ್ಲಿ ಸಾಕಷ್ಟು ವಿದೇಶಿ ಯುವತಿಯರು ಅರೆನಗ್ನರಾಗಿ, ಮಾದಕ ನೃತ್ಯ ಮಾಡುತ್ತಿರುವ ದೃಶ್ಯಗಳು, ಮಾದಕ ವಸ್ತುವನ್ನು ಬಳಸುತ್ತಿರುವ ದೃಶ್ಯಗಳು, ಅಶ್ಲೀಲ ಸಜ್ಞೆಗಳನ್ನು ಮಾಡುತ್ತಿರುವ ದೃಶ್ಯಗಳನ್ನು ಒಳಗೊಂಡಿತ್ತು. ಇದನ್ನೆಲ್ಲ ನೋಡಿದರೆ ‘ಟಾಕ್ಸಿಕ್’ ಸಿನಿಮಾಕ್ಕೆ ಸಿಬಿಎಫ್​​ಸಿ ‘ಎ’ ಪ್ರಮಾಣ ಪತ್ರ ನೀಡುವುದು ಖಾತ್ರಿ ಎನ್ನಬಹುದು.

ಇದನ್ನೂ ಓದಿ:ಫ್ಯಾನ್ಸ್ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ: ಹುಟ್ಟುಹಬ್ಬಕ್ಕೂ ಮುನ್ನ ಯಶ್ ಸಂದೇಶ

ಅಸಲಿಗೆ ಇದನ್ನು ಮೊದಲೇ ಊಹಿಸಿಯೇ ಚಿತ್ರತಂಡ ಹೆಜ್ಜೆ ಇಟ್ಟಿದೆ ಅನಿಸುತ್ತದೆ. ಇದೇ ಕಾರಣಕ್ಕೆ ‘ಟಾಕ್ಸಿಕ್’ ಸಿನಿಮಾದ ಅಡಿಬರಹದಲ್ಲೇ ಇದು ಮಕ್ಕಳಿಗೆ ಅಥವಾ ಅಪ್ತಾಪ್ತರಿಗಲ್ಲ ಎಂಬ ಸುಳಿವನ್ನು ಚಿತ್ರತಂಡ ನೀಡಿದೆ. ‘ಟಾಕ್ಸಿಕ್’ ಸಿನಿಮಾದ ಅಡಿಬರಹ ಅಥವಾ ಟ್ಯಾಗ್​ಲೈನ್ ‘ಎ ಫೇರಿ ಟೇಲ್ ಆಫ್ ಗ್ರೋನ್ ಅಪ್ಸ್’ (ಒಂದು ದೊಡ್ಡವರ ಕತೆ) ಎಂದಿದೆ. ಹಾಗಾಗಿ ಹೆಚ್ಚು ಹಸಿ-ಬಿಸಿ ದೃಶ್ಯಗಳನ್ನು ಚಿತ್ರೀಕರಿಸಿರುವುದು ಯೋಜಿತ ನಿರ್ಣಯವೇ ಆಗಿದೆ.

ಯಶ್ ತಮ್ಮ ಈ ವರೆಗಿನ ವೃತ್ತಿ ಜೀವನದಲ್ಲಿ ಹಸಿ-ಬಿಸಿ ದೃಶ್ಯಗಳಲ್ಲಿ ನಟಿಸಿದ್ದಿಲ್ಲ. ಆದರೆ ‘ಟಾಕ್ಸಿಕ್’ನಲ್ಲಿ ಮೊದಲ ಬಾರಿಗೆ ಇಂಥಹಾ ದೃಶ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಯಶ್ ಅಭಿಮಾನಿಗಳು, ವಿಶೇಷವಾಗಿ ಅವರ ಮಹಿಳಾ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್​​ದಾಸ್, ಬಂಡವಾಳ ಹೂಡಿರುವುದು ಕೆವಿಎನ್ ಮತ್ತು ಯಶ್ ಅವರ ಮಾನ್​ಸ್ಟರ್ ಮೈಂಡ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:19 am, Thu, 8 January 26

Source link

ಬಳ್ಳಾರಿ ಗಲಭೆ: 30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು – Kannada News | Ballari Unrest: Congress, BJP Leaders Face Notices, Arrests; Cabinet to Discuss

ಬಳ್ಳಾರಿ, ಜ.8: ಬಳ್ಳಾರಿ ಗಲಭೆಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರಿಗೂ ನೊಟೀಸ್ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 107 ಜನರಿಗೆ ನೊಟೀಸ್ ಕೊಟ್ಟಿದ್ದರು. ಅದರಲ್ಲಿ 30 ಕಾಂಗ್ರೆಸ್​​​ ಕಾರ್ಯಕರ್ತರು ಎಂದು ಹೇಳಲಾಗಿದೆ. ಇದೀಗ ಈ 107 ಮಂದಿಯಲ್ಲಿ ಬಹುತೇಕರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಗಲಭೆ ಸಂದರ್ಭದಲ್ಲಿ ಸೆರೆಯಾದ ವಿಡಿಯೋ ಆಧಾರಿಸಿ ಪೊಲೀಸರು ಇವರ ಬಂಧನಕ್ಕೆ ಬಲೆ ಬಿಸಿದ್ದಾರೆ. ಕಾಂಗ್ರೆಸ್​​ ಸರ್ಕಾರವೇ ಅಧಿಕಾರದಲ್ಲಿದ್ದರು ತಮ್ಮದೇ ಕಾರ್ಯಕರ್ತರಿಗೆ ನೋಟಿಸ್​​ ನೀಡಿರುವುದು ಅಚ್ಚರಿ ಮೂಡಿಸಿದೆ. ಬಿಜೆಪಿ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಮಾತ್ರ ಈ ಪ್ರಕರಣದಲ್ಲಿ ಟಾರ್ಗೆಟ್​​ ಮಾಡಲಾಗುತ್ತಿದೆ ಎಂಬ ಆರೋಪಗಳು ಬಂದಿತ್ತು. ಆದರೆ ಇದೀಗ ಪೊಲೀಸರು 30ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರಿಗೂ ನೊಟೀಸ್ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೂ ಕೂಡ ನೋಟಿಸ್​​ ನೀಡಲಾಗಿತ್ತು. ಇದೀಗ ಈ ಗಲಾಟೆಗೆ ಬಿಜೆಪಿ ನಾಯಕರಿಗೂ ನೋಟಸ್​​ ನೀಡಲು ಮುಂದಾಗಿದೆ. ಮತ್ತೆ ಬಿಜೆಪಿಯ 33 ಜನರಿಗೆ ನೋಟಿಸ್​​ ನೀಡಲಾಗಿದೆ. ಶಾಸಕ ಜರ್ನಾದನ ರೆಡ್ಡಿ, ಸೋಮಶೇಖರ್​​​​​ ರೆಡ್ಡಿ, ರಾಮುಲು ಸೇರಿದಂತೆ ಒಟ್ಟು 33 ಜನರಿಗೆ ನೋಟಿಸ್​​ ನೀಡಲಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನಷ್ಟು ತನಿಖೆಯನ್ನು ನಡೆಸಿದ್ದಾರೆ. ಈಗಾಗಲೇ 26 ಜನರನ್ನು ಪೊಲೀಸ್​​ ಬಂಧಿಸಿದ್ದಾರೆ. ಇದರ ಜತೆಗೆ ರೆಡ್ಡಿ ಆಪ್ತರಾಗಿರುವ ಸುರೇಶ್​​ ಬಾಬು ಕೂಡ ಪೊಲೀಸರು ಠಾಣೆಗೆ ಬರುವಂತೆ ಸೂಚಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ: ಮಹಾ ದಾಸೋಹದಲ್ಲಿ ಹೊಸ ದಾಖಲೆ, ಲಕ್ಷಲಕ್ಷ ರೊಟ್ಟಿ ಸಂಗ್ರಹ! – Kannada News | Koppal Gavi Mutt Dasoha Sets New Record with Over 18 Lakh Rotis Collected During Jatre

ಕೊಪ್ಪಳ, ಜನವರಿ 8: ಕೊಪ್ಪಳದ ಗವಿ ಮಠದ ಮಹಾದಾಸೋಹ ಈ ಬಾರಿ ಹೊಸ ದಾಖಲೆ ಬರೆದಿದ್ದು, ಅಪಾರ ಪ್ರಮಾಣದ ಅನ್ನದಾನ ಹಾಗೂ ಪ್ರಸಾದ ಸಂಗ್ರಹದೊಂದಿಗೆ ಭಕ್ತರಲ್ಲಿ ಭಾರೀ ಸಂಭ್ರಮ ಮೂಡಿಸಿದೆ. ಗವಿ ಮಠದ ಜಾತ್ರೆಯ ಪ್ರಮುಖ ವೈಶಿಷ್ಟ್ಯವಾಗಿರುವ ದಾಸೋಹವು ಈ ವರ್ಷ ಜನವರಿ 1ರಿಂದ ಆರಂಭವಾಗಿದ್ದು, ಕಳೆದ ಎಂಟು ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ. ಈ ಬಾರಿ ಗವಿ ಮಠದ ದಾಸೋಹದಲ್ಲಿ ದಾಖಲೆ ಪ್ರಮಾಣದ ಆಹಾರ ಸಂಗ್ರಹವಾಗಿದೆ. ಒಟ್ಟು 18 ಲಕ್ಷಕ್ಕೂ ಅಧಿಕ ರೊಟ್ಟಿಗಳು ಸಂಗ್ರಹವಾಗಿದ್ದು, ಇದು ಇತಿಹಾಸದಲ್ಲೇ ಅತ್ಯಧಿಕ ಎನ್ನಲಾಗಿದೆ. ಜೊತೆಗೆ 25 ಕ್ವಿಂಟಾಲ್ ಬುಂದಿ, 175 ಕ್ವಿಂಟಾಲ್ ಮೈಸೂರು ಪಾಕ್, 62 ಕ್ವಿಂಟಾಲ್ ಶೇಂಗಾ ಹೊಳಿಗೆ, 467 ಕ್ವಿಂಟಾಲ್ ಮಾದಲಿ, 5 ಕ್ವಿಂಟಾಲ್ ಜಿಲೇಬಿ ಹಾಗೂ ಸುಮಾರು 6 ಲಕ್ಷ ಮಿರ್ಚಿ ಸೇರಿದಂತೆ ವಿವಿಧ ಖಾದ್ಯಗಳು ದಾಸೋಹಕ್ಕೆ ಹರಿದು ಬಂದಿವೆ.

ಇದುವರೆಗೆ ನಡೆದ ದಾಸೋಹದಲ್ಲಿ ಸುಮಾರು 8 ಲಕ್ಷ ರೊಟ್ಟಿಗಳ ವಿತರಣೆಯಾಗಿದ್ದು, ಪ್ರಸಾದ ತಯಾರಿಗಾಗಿ 650 ಕ್ವಿಂಟಾಲ್ ಅಕ್ಕಿ ಬಳಕೆಯಾಗಿದೆ. ಕಳೆದ ಹಲವು ದಿನಗಳಿಂದ ಸಾವಿರಾರು ಸ್ವಯಂಸೇವಕರು ದಾಸೋಹದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Love and Relationship: ಪ್ರೀತಿಯಲ್ಲಿ ಪದೇ ಪದೇ ನೀವು ಮೋಸ ಹೋಗುತ್ತಿದ್ದೀರಾ? ಜ್ಯೋತಿಷ್ಯ ಕಾರಣ ತಿಳಿಯಿರಿ – Kannada News | Astrology: 5th House and Love Relationships Remedies for Problems

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಜಾತಕದ ಐದನೇ ಮನೆಯು ನಮ್ಮ ಹೃದಯದ ಭಾವನೆಗಳು, ಸೃಜನಶೀಲತೆ ಮತ್ತು ಪ್ರೇಮ ಸಂಬಂಧಗಳನ್ನು ನಿಯಂತ್ರಿಸುತ್ತದೆ. ಈ ಮನೆಯ ಅಧಿಪತಿ, ಐದನೇ ಮನೆ ಬಲಶಾಲಿಯಾಗಿದ್ದರೆ ಮತ್ತು ಶುಭ ಗ್ರಹಗಳಿಂದ ನೋಡಲ್ಪಟ್ಟಿದ್ದರೆ, ಆ ವ್ಯಕ್ತಿಯ ಪ್ರೇಮ ಜೀವನವು ಸಂತೋಷವಾಗಿರುತ್ತದೆ. ಆದಾಗ್ಯೂ, ಈ ಮನೆ ಕ್ರೂರ ಅಥವಾ ದುಷ್ಟ ಗ್ರಹಗಳಿಂದ ಪ್ರಭಾವಿತವಾದಾಗ, ಸಂಬಂಧಗಳು ಮುರಿಯಲು ಪ್ರಾರಂಭಿಸುತ್ತವೆ ಎಂದು ಹೇಳಲಾಗಿದೆ.

ನಿಮ್ಮ ಜಾತಕದ ಐದನೇ ಮನೆಯಲ್ಲಿ ಶನಿ, ಮಂಗಳ ಅಥವಾ ಸೂರ್ಯ ದುರ್ಬಲ ಸ್ಥಾನದಲ್ಲಿದ್ದರೆ, ಅದು ಪ್ರೇಮ ಸಂಬಂಧಗಳಿಗೆ ಒಳ್ಳೆಯ ಸಂಕೇತವಲ್ಲ. ಈ ಸಮಯದಲ್ಲಿ ನೀವು ಪ್ರೀತಿಯಲ್ಲಿ ಬಿದ್ದರೆ ಪದೇ ಪದೇ ನೀವು ಮೋಸಕೊಳಗಾಗುವುದಂತೂ ಖಂಡಿತಾ.

ಐದನೇ ಮನೆಯಲ್ಲಿ ಶನಿ ದುರ್ಬಲ ಸ್ಥಾನದಲ್ಲಿದ್ದರೆ ಇದು ಸಂಬಂಧಗಳು ಬೇರ್ಪಡುವಿಕೆಗೆ ಕಾರಣವಾಗಬಹುದು. ಇದಲ್ಲದೇ ಮಂಗಳ ದುರ್ಬಲ ಸ್ಥಾನದಲ್ಲಿದ್ದರೆ ಪ್ರೀತಿಯಲ್ಲಿ ಕೋಪ, ಹೆಮ್ಮೆ ಮತ್ತು ವಿವಾದಗಳನ್ನು ಸೃಷ್ಟಿಸುತ್ತದೆ. ಸೂರ್ಯ ಕೆಟ್ಟ ಸ್ಥಾನದಲ್ಲಿದ್ದರೆ, ಆ ವ್ಯಕ್ತಿ ತನ್ನ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತಾನೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಜ್ಯೋತಿಷ್ಯ ಪರಿಹಾರಗಳು ಯಾವುವು?

  • ಐದನೇ ಮನೆಯನ್ನು ಬಲಪಡಿಸಿ: ನಿಮ್ಮ ಜಾತಕದ ಪ್ರಕಾರ ಐದನೇ ಮನೆಯನ್ನು ಆಳುವ ಗ್ರಹಕ್ಕೆ ಸಂಬಂಧಿಸಿದ ರತ್ನವನ್ನು ಧರಿಸುವುದರಿಂದ ಶುಭ ಫಲಿತಾಂಶಗಳು ಸಿಗುತ್ತವೆ.
  • ರಾಹುವಿಗೆ ಪರಿಹಾರಗಳು: ರಾಹುವು ಅಡೆತಡೆಗಳನ್ನು ಸೃಷ್ಟಿಸುತ್ತಿದ್ದರೆ, ಶನಿವಾರ ಹರಿಯುವ ನೀರಿನಲ್ಲಿ ತೆಂಗಿನಕಾಯಿಯನ್ನು ಬಿಡುವುದು ಅಥವಾ ರಾಹು ಮಂತ್ರವನ್ನು ನಿಯಮಿತವಾಗಿ ಪಠಿಸುವುದು ಪ್ರಯೋಜನಕಾರಿ.
  • ಶಿವ-ಪಾರ್ವತಿಯರ ಆರಾಧನೆ: ಪ್ರೇಮ ಸಂಬಂಧಗಳಲ್ಲಿ ಯಶಸ್ಸನ್ನು ಸಾಧಿಸಲು ಮತ್ತು ವಿಶ್ವಾಸಾರ್ಹ ಸಂಗಾತಿಯನ್ನು ಪಡೆಯಲು ಶಿವ ಮತ್ತು ಪಾರ್ವತಿ ದೇವಿಯನ್ನು ಒಟ್ಟಿಗೆ ಪೂಜಿಸುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
  • ಶುಕ್ರನನ್ನು ಬಲಪಡಿಸಿ: ಶುಕ್ರನು ಪ್ರೀತಿ ಮತ್ತು ಆಕರ್ಷಣೆಯ ಗ್ರಹ. ಶುಕ್ರವಾರದಂದು ಬಿಳಿ ವಸ್ತುಗಳನ್ನು ದಾನ ಮಾಡುವುದರಿಂದ ಪ್ರೇಮ ಜೀವನದಲ್ಲಿ ಮಾಧುರ್ಯ ಮತ್ತು ಸ್ಥಿರತೆ ಹೆಚ್ಚಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥ್ರಿಲ್ಲರ್ ಸೂಪರ್ ಥ್ರಿಲ್ಲರ್… ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್ – Kannada News | Ollie Peake Stuns Scorchers With Insane Final Ball Finish

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್​ ಲೀಗ್​ನ 26ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಪರ್ತ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಹಾಗೂ ಪರ್ತ್​ ಸ್ಕಾಚರ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾಚರ್ಸ್ ತಂಡವು 19.2 ಓವರ್​ಗಳಲ್ಲಿ 127 ರನ್​ಗಳಿಸಿ ಆಲೌಟ್ ಆಯಿತು.

128 ರನ್​ಗಳ ಸುಲಭ ಗುರಿ ಬೆನ್ನತ್ತಿದ ಮೆಲ್ಬೋರ್ನ್​ ರೆನೆಗೇಡ್ಸ್ ತಂಡವು 72 ರನ್​ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ 19 ವರ್ಷದ ಯುವ ದಾಂಡಿಗ ಒಲಿವರ್ ಪೀಕ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.

ಪರಿಣಾಮ 18 ಓವರ್​ಗಳಾಗುಷ್ಟರಲ್ಲಿ ಮೆಲ್ಬೋರ್ನ್​ ರೆನೆಗೇಡ್ಸ್ ತಂಡವು ಸ್ಕೋರ್ 110 ರನ್​ಗಳ ಗಡಿದಾಟಿತು. ಇದಾಗ್ಯೂ ಕೊನೆಯ ಎರಡು ಓವರ್​ಗಳಲ್ಲಿ 21 ರನ್​ಗಳ ಅವಶ್ಯಕತೆಯಿತ್ತು.

19ನೇ ಓವರ್​ನಲ್ಲಿ ಮೆಲ್ಬೋರ್ನ್​ ಬ್ಯಾಟರ್​ಗಳು 11 ರನ್ ಕಲೆಹಾಕಿದರು. ಅದರಂತೆ ಅಂತಿಮ ಓವರ್​ನಲ್ಲಿ 10 ರನ್​ಗಳು ಬೇಕಿದ್ದರು. ಆರೋನ್ ಹಾರ್ಡಿ ಎಸೆದ 20ನೇ ಓವರ್​ನ ಮೊದಲ ಎಸೆತದಲ್ಲಿ ಒಲಿವರ್ ಪೀಕ್ 2 ರನ್ ಕಲೆಹಾಕಿದರು. 2ನೇ ಎಸೆತದಲ್ಲಿ ಒಂದು ರನ್ ಓಡಿದರು. 3ನೇ ಎಸೆತದಲ್ಲಿ ಸ್ಯಾಮ್ ಎಲಿಯೆಟ್ ಒಂದು ರನ್ ಕಲೆಹಾಕಿದರು. 4ನೇ ಎಸೆತದಲ್ಲಿ ಒಲಿವರ್ ಪೀಕ್ 2 ರನ್ ಗಳಿಸಿದರು. ಆದರೆ ಐದನೇ ಎಸೆತವು ಡಾಟ್ ಆಯಿತು.

ಅಂತಿಮ ಎಸೆತದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ 4 ರನ್​ಗಳು ಬೇಕಿತ್ತು. ಈ ವೇಳೆ ಸಿಕ್ಸ್ ಸಿಡಿಸುವ ಮೂಲಕ ಒಲಿವರ್ ಪೀಕ್ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ 4 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು. ಇನ್ನು ಈ ಪಂದ್ಯದಲ್ಲಿ 30 ಎಸೆತಗಳಲ್ಲಿ ಅಜೇಯ 42 ರನ್ ಬಾರಿಸಿದ ಪೀಕ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.

Source link

Gold Rate Today Bangalore: ಚಿನ್ನ, ಬೆಳ್ಳಿ ಬೆಲೆಗಳ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 8th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 8: ಸತತ ಏರಿಕೆ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ ಕಡಿಮೆಗೊಂಡಿವೆ. ಚಿನ್ನದ ಬೆಲೆ 130 ರೂ ಕಡಿಮೆಗೊಂಡರೆ, ಬೆಳ್ಳಿ ಬೆಲೆ 9 ರೂ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ (Gold rates) ಗ್ರಾಮ್​ಗೆ 13,800 ರೂಗೆ ಇಳಿಕೆಯಾಗಿದೆ. ವಿದೇಶಗಳಲ್ಲೂ ಚಿನ್ನದ ಬೆಲೆಗಳು ತಗ್ಗಿವೆ. ಬೆಳ್ಳಿ ಬೆಲೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇಳಿದಿದೆ. ಗ್ರಾಮ್​ಗೆ 9 ರೂನಷ್ಟು ಬೆಳ್ಳಿ ಬೆಲೆ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,26,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,38,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,26,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,200 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,200 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 8ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,800 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,650 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,350 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 252 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,800 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,650 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 252 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,650 ರೂ
  • ಚೆನ್ನೈ: 12,750 ರೂ
  • ಮುಂಬೈ: 12,650 ರೂ
  • ದೆಹಲಿ: 12,665 ರೂ
  • ಕೋಲ್ಕತಾ: 12,650 ರೂ
  • ಕೇರಳ: 12,650 ರೂ
  • ಅಹ್ಮದಾಬಾದ್: 12,655 ರೂ
  • ಜೈಪುರ್: 12,665 ರೂ
  • ಲಕ್ನೋ: 12,665 ರೂ
  • ಭುವನೇಶ್ವರ್: 12,650 ರೂ

ಇದನ್ನೂ ಓದಿ: ಬರಲಿದೆ ಹೊಸ ಆದಾಯ ತೆರಿಗೆ ಕಾಯ್ದೆ; ಬಜೆಟ್​ನಲ್ಲಿ ಘೋಷಣೆ, ಏ. 1ರಿಂದ ಜಾರಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (12,585 ರುಪಾಯಿ)
  • ದುಬೈ: 496.50 ಡಿರಾಮ್ (12,146 ರುಪಾಯಿ)
  • ಅಮೆರಿಕ: 138.50 ಡಾಲರ್ (12,445 ರುಪಾಯಿ)
  • ಸಿಂಗಾಪುರ: 177.50 ಸಿಂಗಾಪುರ್ ಡಾಲರ್ (12,425 ರುಪಾಯಿ)
  • ಕತಾರ್: 494 ಕತಾರಿ ರಿಯಾಲ್ (12,177 ರೂ)
  • ಸೌದಿ ಅರೇಬಿಯಾ: 503 ಸೌದಿ ರಿಯಾಲ್ (12,052 ರುಪಾಯಿ)
  • ಓಮನ್: 52.60 ಒಮಾನಿ ರಿಯಾಲ್ (12,276 ರುಪಾಯಿ)
  • ಕುವೇತ್: 40.50 ಕುವೇತಿ ದಿನಾರ್ (11,912 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 252 ರೂ
  • ಚೆನ್ನೈ: 272 ರೂ
  • ಮುಂಬೈ: 252 ರೂ
  • ದೆಹಲಿ: 252 ರೂ
  • ಕೋಲ್ಕತಾ: 252 ರೂ
  • ಕೇರಳ: 272 ರೂ
  • ಅಹ್ಮದಾಬಾದ್: 252 ರೂ
  • ಜೈಪುರ್: 252 ರೂ
  • ಲಕ್ನೋ: 252 ರೂ
  • ಭುವನೇಶ್ವರ್: 272 ರೂ
  • ಪುಣೆ: 252

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸೋಮನಾಥ ಸ್ವಾಭಿಮಾನ ಪರ್ವ, ಎಲ್ಲರೂ ಸೋಮನಾಥ ಭೇಟಿಯ ಫೋಟೊಗಳ ಹಂಚಿಕೊಳ್ಳಲು ಪ್ರಧಾನಿ ಮೋದಿ ಕರೆ – Kannada News | Prime Minister Sends Message to Nation as Somnath Swabhiman Parv Begins

ಸೋಮನಾಥ ದೇವಾಲಯದಲ್ಲಿ ವಾಜಪೇಯಿ ಮತ್ತು ಮೋದಿ

ಅಹಮದಾಬಾದ್, ಜನವರಿ 08: ಗುಜರಾತಿನಲ್ಲಿರುವ ಸೋಮನಾಥ ದೇವಾಲಯ(Somnath Temple)ದಲ್ಲಿ ಇಂದಿನಿಂದ ‘ಸೋಮನಾಥ ಸ್ವಾಭಿಮಾನ ಪರ್ವ’ ಕಾರ್ಯಕ್ರಮ ಶುರುವಾಗಲಿದ್ದು, ನೀವೂ ಕೂಡ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರೆ ಆ ಫೋಟೊವನ್ನು ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ಜನವರಿ 11ರಂದು ಸೋಮನಾಥಕ್ಕೆ ಭೇಟಿ ನೀಡಲಿದ್ದಾರೆ.

ಸಾವಿರ ವರ್ಷಗಳ ಹಿಂದೆ, ಜನವರಿ 1026 ರಲ್ಲಿ, ಸೋಮನಾಥ ದೇವಾಲಯವು ಅದರ ಇತಿಹಾಸದಲ್ಲಿ ಮೊದಲ ದಾಳಿಯನ್ನು ಎದುರಿಸಿತು. 1026ರ ದಾಳಿ ಮತ್ತು ನಂತರದ ಅನೇಕ ದಾಳಿಗಳು ನಮ್ಮ ಶಾಶ್ವತ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ. ಬದಲಾಗಿ, ಅವು ಭಾರತದ ಸಾಂಸ್ಕೃತಿಕ ಏಕತೆಯ ಪ್ರಜ್ಞೆಯನ್ನು ಬಲಪಡಿಸಿದವು ಮತ್ತು ಸೋಮನಾಥವನ್ನು ಮತ್ತೆ ಮತ್ತೆ ಕಟ್ಟಿ ನಿಲ್ಲಿಸಲಾಯಿತು ಎಂದು ಪ್ರಧಾನಿ ಮೋದಿ ಪೋಸ್ಟ್​​ನಲ್ಲಿ ಬರೆದಿದ್ದಾರೆ.

ಪ್ರಧಾನಿ ಮೋದಿ ಕೂಡ ಸೋಮನಾಥಕ್ಕೆ ಭೇಟಿ ನೀಡಿದ್ದ ಹಳೆಯ ಫೋಟೊಗಳನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮ ಫೋಟೋಗಳನ್ನು #SomnathSwabhimanParv ನೊಂದಿಗೆ ಹಂಚಿಕೊಳ್ಳಿ ಎಂದು ಮೋದಿ ಬರೆದಿದ್ದಾರೆ.

ಪ್ರಧಾನಿ ಮೋದಿ ಪೋಸ್ಟ್​

ಈ ಸೋಮನಾಥ ಸ್ವಾಭಿಮಾನ ಪರ್ವವು ತಮ್ಮ ತತ್ವಗಳು ಮತ್ತು ಮೌಲ್ಯಗಳಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ಭಾರತ ಮಾತೆಯ ಅಸಂಖ್ಯಾತ ಪುತ್ರರನ್ನು ಸ್ಮರಿಸುವ ಆಚರಣೆಯಾಗಿದೆ. ಎಷ್ಟೇ ಕಠಿಣ ಮತ್ತು ಭಯಾನಕ ಕಾಲ ಬಂದರೂ ಅವರ ಸಂಕಲ್ಪ ಅಚಲವಾಗಿತ್ತು. ನಮ್ಮ ನಾಗರಿಕತೆ ಮತ್ತು ಸಾಂಸ್ಕೃತಿಕ ಪ್ರಜ್ಞೆಗೆ ಅವರ ನಿಷ್ಠೆ ಅಚಲವಾಗಿತ್ತು. ಸಾವಿರ ವರ್ಷಗಳ ಅಚಲ ನಂಬಿಕೆಯ ಈ ಸಂದರ್ಭವು ರಾಷ್ಟ್ರೀಯ ಏಕತೆಗಾಗಿ ಶ್ರಮಿಸುವ ಮನೋಭಾವವು ನಮ್ಮಲ್ಲಿಯೇ ಉಳಿಯುವಂತೆ ಮಾಡುತ್ತದೆ.

ಮೋದಿ ಮತ್ತೊಂದು ಪೋಸ್ಟ್​

ಅಕ್ಟೋಬರ್ 31, 2001 ರಂದು ಸೋಮನಾಥದಲ್ಲಿ ನಡೆದ ಒಂದು ಕಾರ್ಯಕ್ರಮದ ಕೆಲವು ಕ್ಷಣಗಳನ್ನು ಮೋದಿ ಹಂಚಿಕೊಂಡಿದ್ದಾರೆ. 1951 ರಲ್ಲಿ ಸೋಮನಾಥ ದೇವಾಲಯವನ್ನು ಮರು ನಿರ್ಮಿಸಲಾಗಿತ್ತು, ಉದ್ಘಾಟನೆಯ 50 ನೇ ವಾರ್ಷಿಕೋತ್ಸವವನ್ನು ನಾವು ಆಚರಿಸಿದ ವರ್ಷ ಇದು.

ಮತ್ತಷ್ಟು ಓದಿ: ಧ್ವಂಸಗೊಂಡಿದ್ದ ಸೋಮನಾಥ ದೇವಾಲಯವನ್ನು ಮತ್ತೆ ಕಟ್ಟುವುದು ನೆಹರುಗೆ ಇಷ್ಟವಿರಲಿಲ್ಲ: ಸುಧಾಂಶು ತ್ರಿವೇದಿ

ಆ ಐತಿಹಾಸಿಕ ಸಮಾರಂಭವು ಆಗಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ನಡೆಯಿತು. ಸೋಮನಾಥ ದೇವಾಲಯದ ಪುನರ್ನಿರ್ಮಾಣದಲ್ಲಿ ಸರ್ದಾರ್ ಪಟೇಲ್ ಮತ್ತು ಕೆ.ಎಂ. ಮುನ್ಷಿ ಮತ್ತು ಇತರ ಅನೇಕ ಮಹಾನ್ ವ್ಯಕ್ತಿಗಳ ಪ್ರಯತ್ನಗಳು ಹೆಚ್ಚಿತ್ತು. 2001 ರ ಈ ಕಾರ್ಯಕ್ರಮದಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಗೃಹ ಸಚಿವ ಅಡ್ವಾಣಿ ಮತ್ತು ಇತರ ಅನೇಕ ಗಣ್ಯರು ಭಾಗವಹಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಇಂದಿಗೂ ಜೀವಂತವಾಗಿದೆ ಜಾತಿ ಭೂತ: ಮಗಳಿಗೆ ಅಂತರ್ಜಾತಿ ವಿವಾಹ ಮಾಡಿದ ತಪ್ಪಿಗೆ ಊರಿನಿಂದ ಬಹಿಷ್ಕಾರ – Kannada News | Karnataka Casteism: Family Boycotted for Inter Caste Marriage; Justice Sought

ಚಾಮರಾಜನಗರ, ಜ.8: ಕರ್ನಾಟಕದಲ್ಲಿ ಇಂದಿಗೂ ಜಾತಿವಾದ ಜೀವಂತವಾಗಿದೆ ಎಂದರೆ ನಂಬಲು ಅಸಾಧ್ಯ, ಆದರೆ ಕೆಲವೊಂದು ಜಿಲ್ಲೆಗಳಲ್ಲಿ ಇಂದಿಗೂ ಜಾತಿ ಪ್ರೇಮ ಅತಿಯಾಗಿದೆ. ಜಾತಿ ಇರುವುದು ಮನೆಯೊಗಿನ ಸಂಸ್ಕೃತಿಗೆ ಹೊರತು ಸಾರ್ವಜನಿವಾಗಿ ಜಾತಿ ವಿಚಾರಗಳನ್ನು ತರಬಾರದು. ಇದೀಗ ಚಾಮರಾಜನಗರದಲ್ಲಿ ನಡೆದ ಘಟನೆ ಕೂಡ ಇಂತಹದೇ ಜಾತಿ ವಿಚಾರಕ್ಕಾಗಿ ಸಾಮಾಜಿಕ ಬಹಿಷ್ಕಾರ (social boycott) ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮಗಳಿಗೆ ಬೇರೆ ಜಾತಿಯ ಯುವಕನ ಜೊತೆ ಮದುವೆ ಮಾಡಿದ್ದಕ್ಕೆ ಕುಟಂಬವನ್ನೇ ಬಾಹಿಷ್ಕಾರ ಮಾಡಲಾಗಿದೆ. ಬಂಡಿಗೆರೆ ಗ್ರಾಮದ ಕೃಷ್ಣರಾಜು ಎಂಬುವವರ ಕುಟುಂಬವನ್ನು ಸಾಮಾಜಿಕ ಬಹಿಷ್ಕಾರ ಮಾಡಲಾಗಿದೆ. ಸರ್ಕಾರ ಈ ಬಗ್ಗೆ ಕಾಯ್ದೆ ತಂದರೂ, ಸಾಮಾಜಿಕ ಬಹಿಷ್ಕಾರ ಪದ್ಧತಿ ನಿಂತಿಲ್ಲ ಎಂಬುದು ವಿಪರ್ಯಾಸದ ವಿಚಾರವಾಗಿದೆ.

ಇದೀಗ ಈ ಕುಟುಂಬದ ರಕ್ಷಣೆಗೆ ಸರ್ಕಾರ ಬರುತ್ತಾ? ಎಂಬ ಪ್ರಶ್ನೆ ಮೂಡಿದೆ. ಇನ್ನು ಈ ಬಹಿಷ್ಕಾರದಿಂದ ಹೊರಬರಬೇಕೆಂದರೆ 5 ಲಕ್ಷ ರೂ. ತಪ್ಪು ಕಾಣಿಕೆ ಕೊಡಬೇಕು ಎಂದು ಹೇಳಲಾಗಿದೆ. ಕೃಷ್ಣಮೂರ್ತಿ ತಮ್ಮ ಮಗಳಿಗೆ 2023ರಲ್ಲಿ ಬೇರೆ ಜಾತಿ ಯುವಕನ ಜತೆಗೆ ಮದುವೆ ಮಾಡಿದ್ದರು. 2 ವರ್ಷಗಳ ಹಿಂದೆ ಮಗಳು ಆಸೆಯಂತೆ ಆಕೆ ಪ್ರೀತಿಸಿದ ಯುವಕ ಜತೆಗೆ ಮದುವೆ ಮಾಡಿದ್ದಾರೆ. ಇದೀಗ ಮಗಳಿಗೆ ಅಂತರ್ಜಾತಿ ಯುವಕನ ಜೊತೆಗೆ ಮದುವೆ ಮಾಡಿರುವುದೇ ತಪ್ಪಾಗಿದೆ.

ಇದನ್ನೂ ಓದಿ: ವಿಷವಿಕ್ಕಿ ಹುಲಿಗಳ ಕೊಂದು ತುಂಡರಿಸುತ್ತಿದ್ದ ಕ್ರೂರಿ! ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದ್ದ ಮರಿ ವೀರಪ್ಪನ್ ಕೊನೆಗೂ ಬಂಧನ

ಮಗಳು ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ಗಂಡನನ್ನು ಕಳೆದುಕೊಂಡಿದ್ದಾಳೆ. ಅಳಿಯ ತಿರಿಕೊಂಡ ನಂತರ ಮಗುಳು ಒಬ್ಬಂಟಿಯಾಗಿದ್ದಾಳೆ. ಈ ಕಾರಣಕ್ಕೆ ಕೃಷ್ಣಮೂರ್ತಿ ದಂಪತಿ ಪತಿಯ ಸಾವಿನ ಬಳಿಕ ಮಗಳನ್ನ ಬಂಡಿಗೆರೆ ಗ್ರಾಮಕ್ಕೆ ಕರೆಕೊಂಡು ಬಂದಿದ್ದಾರೆ. ಈ ವಿಚಾರ ತಿಳಿದು ಉಪ್ಪಾರ ಸಮಾಜದ ನಾಯಕರು ಕೆಂಡಮಂಡಲ ಆಗಿದ್ದಾರೆ. ನಿಮ್ಮನ್ನು ಮತ್ತು ನಿಮ್ಮ ಮಗಳನ್ನು ಯಾವುದೇ ಕಾರಣಕ್ಕೂ ಊರಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಊರಿನಿಂದ ಹೊರ ಹಾಕಿದ್ದಾರೆ. ಉಪ್ಪಾರ ಸಮಾಜದ ಯಜಮಾನರು ಕೃಷ್ಣಮೂರ್ತಿ ಕುಟುಂಬವನ್ನು ಊರಿನಿಂದ ಬಹಿಷ್ಕಾರ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ರೂ ಯಾವುದೇ ಪ್ರಯೋಜ ಆಗಿಲ್ಲ ಎಂದು ಕುಟುಂಬ ಹೇಳಿದೆ. ತಮ್ಮದೆ ಉಪ್ಪಾರ ಸಮುದಾಯದವರು ನಮ್ಮನ್ನು ಬಹಿಷ್ಕಾರ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಇನ್ನು ಈ ಕುಟುಂಬಕ್ಕೆ ಪೊಲೀಸ್​​, ಕೋರ್ಟ್ ಕಚೇರಿ ಎಂದು ಹೋದ್ರೆ ಸರಿ ಇರಲ್ಲ ಎಂದು ಬೆದರಿಕೆ ಕೂಡ ಹಾಕಿದ್ದಾರೆ. ಇದೀಗ ನ್ಯಾಯಕ್ಕಾಗಿ ಕೃಷ್ಣಮೂರ್ತಿ ಕುಟುಂಬ ಹೋರಾಡುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೋಟೆಲ್​ಗೆ ಕರೆಸಿಕೊಂಡು 17 ವರ್ಷದ ಮಹಿಳಾ ಶೂಟರ್ ಮೇಲೆ ಅತ್ಯಾಚಾರ, ನ್ಯಾಷನಲ್ ಕೋಚ್ ಅಮಾನತು – Kannada News | Haryana Police Probe Allegations Against National Coach Involving in Teen Shooter Physical Assault Charges

ಫರೀದಾಬಾದ್, ಜನವರಿ 08: ಹೋಟೆಲ್​ಗೆ ಕರೆಸಿಕೊಂಡು ಹದಿನೇಳು ವರ್ಷದ ಮಹಿಳಾ ಶೂಟರ್(Shooter)​ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ರಾಷ್ಟ್ರೀಯ ತರಬೇತುದಾರ(National Coach) ಅಂಕುಶ್ ಭಾರದ್ವಾಜ್​ನನ್ನು ಅಮಾನತುಗೊಳಿಸಲಾಗಿದೆ. ಹೋಟೆಲ್​ಗೆ ಕರೆಸಿ, ಆಕೆಯ ಕೆರಿಯರ್ ಹಾಳು ಮಾಡುವುದಾಗಿ ಬೆದರಿಕೆ ಹಾಕಿ ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಕುರಿತು ಬಾಲಕಿಯ ಪೋಷಕರು ಎಫ್​ಐಆರ್ ದಾಖಲಿಸಿದ್ದಾರೆ. ದೂರಿನ ಪ್ರಕಾರ, ಕಳೆದ ವರ್ಷ ಡಿಸೆಂಬರ್ 16 ರಂದು, ದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ಅಕಾಡೆಮಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಯಿಂದ ಕ್ರೀಡಾಪಟು ಹಿಂದಿರುಗುವ ಒಂದು ದಿನ ಮೊದಲು ಈ ಘಟನೆ ನಡೆದಿದೆ.

ಆರೋಪಿ ತರಬೇತುದಾರ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಎನ್‌ಆರ್‌ಎಐ) ನೇಮಿಸಿಕೊಂಡಿರುವ 13 ರಾಷ್ಟ್ರೀಯ ಪಿಸ್ತೂಲ್ ತರಬೇತುದಾರರಲ್ಲಿ ಒಬ್ಬರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ತರಬೇತುದಾರನನ್ನು ಅಮಾನತುಗೊಳಿಸಲಾಗಿದೆ. ಫರಿದಾಬಾದ್‌ನ ಸೂರಜ್‌ಕುಂಡ್‌ನಲ್ಲಿರುವ ಹೋಟೆಲ್‌ನ ಲಾಬಿಯಲ್ಲಿ ತರಬೇತುದಾರ ಶೂಟರ್‌ಳನ್ನು ಆಹ್ವಾನಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ .

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಉದ್ಯಮಿ ಮೇಲೆ ಫೈರಿಂಗ್​: ಕೂದಲೆಳೆ ಅಂತರದಲ್ಲಿ ಬಚಾವ್​!

ಆಕೆಯ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುವುದಾಗಿ ಮತ್ತು ಆಕೆಯ ಶೂಟಿಂಗ್ ಬಗ್ಗೆ ವಿವರವಾಗಿ ಚರ್ಚಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ನೆಪದಲ್ಲಿ ಅವರು ಕ್ರೀಡಾಪಟುವನ್ನು ತಮ್ಮ ಕೋಣೆಗೆ ಹೋಗುವಂತೆ ಒತ್ತಡ ಹೇರಿದ್ದರು. ಚರ್ಚೆ ಹೆಚ್ಚು ಆಳವಾಗಿರುತ್ತದೆ ಎಂದು ಹೇಳಿದ್ದರು. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ, ಆಕೆಯ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಮತ್ತು ಆಕೆಯ ಕುಟುಂಬಕ್ಕೆ ಹಾನಿ ಮಾಡುವುದಾಗಿ ತರಬೇತುದಾರ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ನಂತರ ಸಂತ್ರಸ್ತೆ ಆಘಾತದಿಂದ ಹೋಟೆಲ್‌ನಿಂದ ಹೊರಬಂದಳು ಮತ್ತು ನಂತರ ತನ್ನ ಕುಟುಂಬದವರಿಗೆ ತನ್ನ ಅನುಭವವನ್ನು ವಿವರಿಸಿದಳು, ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆಯ ದಿನದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ತಕ್ಷಣ ಹಂಚಿಕೊಳ್ಳುವಂತೆ ಪೊಲೀಸರು ಹೋಟೆಲ್ ಸಿಬ್ಬಂದಿಯನ್ನು ಕೇಳಿಕೊಂಡಿದ್ದಾರೆ.

ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ ಅಥವಾ ಅವನಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ದೂರಿನ ಆಧಾರದ ಮೇಲೆ, ಪೊಲೀಸರು ಪೋಕ್ಸೊ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ .

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link