WPL 2026: ಮೂರು ತಂಡಗಳಿಗೆ ಹೊಸ ನಾಯಕಿಯರು
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ನ ನಾಲ್ಕನೇ ಆವೃತ್ತಿ ಶುಕ್ರವಾರದಿಂದ (ಜ.9) ಶುರುವಾಗಲಿದೆ. 5 ತಂಡಗಳ ನಡುವಣ ಈ ಕದನಕ್ಕಾಗಿ ಎಲ್ಲಾ ತಂಡಗಳು ಸಜ್ಜಾಗಿದೆ. ವಿಶೇಷ ಎಂದರೆ ಈ ಬಾರಿ ಮೂರು ತಂಡಗಳನ್ನು ಹೊಸ ನಾಯಕಿಯರು ಮುನ್ನಡೆಸಲಿದ್ದಾರೆ. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿ ಈ ಬಾರಿ ಜೆಮಿಯಾ ರೊಡ್ರಿಗಸ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಯುಪಿ ವಾರಿಯರ್ಸ್ ತಂಡವನ್ನು ಆಸ್ಟ್ರೇಲಿಯನ್ ಆಟಗಾರ್ತಿ ಮೆಗ್ ಲ್ಯಾನಿಂಗ್ ಮುನ್ನಡೆಸಲಿದ್ದಾರೆ. ಅದೇ ರೀತಿ ಗುಜರಾತ್ ಜೈಂಟ್ಸ್ ತಂಡದ ನಾಯಕಿಯಾಗಿ ಆ್ಯಶ್ಲೀ ಗಾರ್ಡನರ್ ಕಣಕ್ಕಿಳಿಯಲಿದ್ದಾರೆ….