Headlines

ಜೀ ಕನ್ನಡದಲ್ಲಿ ಬರ್ತಿದೆ ‘ಹಳ್ಳಿ ಪವರ್’; ಆಡಿಷನ್ ವಿವರ ಇಲ್ಲಿದೆ – Kannada News | Zee Kannada’s Halli Power Reloaded: Akul Balaji Hosts, Auditions Open in Bengaluru

ಜೀ ಪವರ್ ವಾಹಿನಿಯಲ್ಲಿ ಪ್ರಸಾರವಾಗಿ ಭಾರಿ ಜನಪ್ರಿಯತೆ ಗಳಿಸಿದ್ದ ಹೈ ವೋಲ್ಟೇಜ್ ರಿಯಾಲಿಟಿ ಶೋ ‘ಹಳ್ಳಿ ಪವರ್’ ಈಗ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಈ ಬಾರಿ ಈ ರಿಯಾಲಿಟಿ ಶೋ ‘ಹಳ್ಳಿ ಪವರ್ ರಿಲೋಡೆಡ್’ ಹೆಸರಿನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಂಪೂರ್ಣವಾಗಿ ರೆಡಿಯಾಗಿದೆ. ಕಿರುತೆರೆಯ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಈ ಶೋ ಅನ್ನು ನಡೆಸಿಕೊಡಲಿದ್ದು, ಕಾರ್ಯಕ್ರಮದ ಆಡಿಷನ್ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.

ಮಾಡರ್ನ್ ಸಿಟಿ ಹುಡುಗಿಯರಿಗೆ ಮುಕ್ತ ಅವಕಾಶ:

‘ಮಾಡರ್ನ್ ಸಿಟಿ ಹುಡುಗಿರೆಲ್ಲಾ ಹಳ್ಳಿಗೆ ಬರೋಕೆ ರೆಡಿನಾ?’ ಎಂಬ ಶೀರ್ಷಿಕೆಯಡಿ ಈ ಬಾರಿ ಆಡಿಷನ್ ಕರೆಯಲಾಗಿದೆ. ನಗರ ಪ್ರದೇಶದ ಆಧುನಿಕ ಹುಡುಗಿಯರು ಹಳ್ಳಿಯ ವಾತಾವರಣದಲ್ಲಿ ಹೇಗೆ ಬದುಕುತ್ತಾರೆ ಮತ್ತು ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬುದು ಈ ಶೋನ ಹೈಲೈಟ್ ಆಗಿರಲಿದೆ. ಆಡಿಷನ್‌ನಲ್ಲಿ ಭಾಗವಹಿಸಲು ಇಚ್ಛಿಸುವ ಸ್ಪರ್ಧಿಗಳಿಗೆ 18 ರಿಂದ 28 ವರ್ಷಗಳ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ.

ಆಡಿಷನ್ ದಿನಾಂಕ ಮತ್ತು ಸ್ಥಳದ ವಿವರ:

ದಿನಾಂಕ ಮತ್ತು ಸಮಯ: ಜೂನ್ 27, ಶನಿವಾರದಂದು ಬೆಳಗ್ಗೆ 9 ಗಂಟೆಗೆ ಆಡಿಷನ್ ಪ್ರಕ್ರಿಯೆ ಆರಂಭವಾಗಲಿದೆ. ಬೆಂಗಳೂರಿನ ಚಿಕ್ಕಲ್ಲಸಂದ್ರದಲ್ಲಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಆಡಿಷನ್ ನಡೆಯಲಿದೆ. ಭಾಗವಹಿಸಲು ಬಯಸುವವರು ತಮ್ಮ ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಅಡ್ರೆಸ್ ಪ್ರೂಫ್ ಜೆರಾಕ್ಸ್ ಜೊತೆಗೆ ಬರಬೇಕು. ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಮೂಲಕ 9513134434 ಈ ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡಬಹುದು. ಇನ್ನು ನಿಮ್ಮ ಭಾವಚಿತ್ರ ಹಾಗೂ ಸಂಪೂರ್ಣ ವಿವರಗಳನ್ನು ಮೇಲಿನ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದಾಗಿದೆ. ಈ ಸಂಖ್ಯೆಗೆ ಯಾವುದೇ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಜೀ ವಾಹಿನಿಯಲ್ಲಿ ಈ ಆಡಿಷನ್‌ಗಳಿಗೆ ಯಾವುದೇ ರೀತಿಯ ಶುಲ್ಕವನ್ನು ಕಟ್ಟುವಂತಿಲ್ಲ ಮತ್ತು ವಾಹಿನಿಯ ಹೆಸರಿನಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ‘ಹಳ್ಳಿ ಪವರ್’ ಶೋ ಈ ಮೊದಲು ನಿತ್ಯವೂ ಪ್ರಸಾರ ಆಗಿತ್ತು. ಬೆಳಗಾವಿಯಲ್ಲಿ ಈ ಶೋ ಆಯೋಜನೆಗೊಂಡಿತ್ತು. ಈ ಬಾರಿ ಎಲ್ಲಿ ನಡೆಯಲಿದೆ ಎನ್ನುವ ಕುತೂಹಲ ಮೂಡಿದೆ.

Published On – 11:21 am, Tue, 23 June 26

Source link

Leave a Reply

Your email address will not be published. Required fields are marked *