All posts by nagaraj11081993

ರಶ್ಮಿಕಾ ಮಂದಣ್ಣಗೂ ಸಂಜಯ್​​ ದತ್​​ಗೂ ಇದೆ ಸಾಮ್ಯತೆ ಏನದು? – Kannada News | Sanjay Dutt and Rashmika Mandanna has one similarity among them

ರಶ್ಮಿಕಾ ಮಂದಣ್ಣ (Rashmika Mandanna) ಪ್ಯಾನ್ ಇಂಡಿಯಾ ಸ್ಟಾರ್ ನಟಿ, ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಾ ಸಾಗುತ್ತಿದ್ದಾರೆ. ಇದೀಗ ವಿಜಯ್ ದೇವರಕೊಂಡ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ, ಶೀಘ್ರವೇ ವಿಜಯ್ ದೇವರಕೊಂಡ ಜೊತೆ ಅದ್ಧೂರಿ ವಿವಾಹ ಸಹ ಆಗಲಿದ್ದಾರೆ. ಇನ್ನೊಂದೆಡೆ ಸಂಜಯ್ ದತ್, ಪ್ಯಾನ್ ಇಂಡಿಯಾ ಸ್ಟಾರ್ ವಿಲನ್ ಎನಿಸಿಕೊಂಡಿದ್ದಾರೆ. ಬಾಲಿವುಡ್​ನ ಸ್ಟಾರ್​​ಗಳಲ್ಲಿ ಒಬ್ಬರಾದ ಸಂಜಯ್ ದತ್ ಬಾಲಿವುಡ್​​ನಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಬೇಡಿಕೆಯ ಸ್ಟೈಲಿಷ್ ವಿಲನ್. ಸಂಜಯ್ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದಿಲ್ಲ. ಆದರೆ ಈ ಇಬ್ಬರಿಗೂ ಒಂದು ಸಾಮ್ಯತೆ ಇದೆ, ಏನದು ಗೊತ್ತೆ?

1000 ಕೋಟಿ ಗಳಿಕೆ ಎನ್ನುವುದು ಭಾರತದ ಸಿನಿಮಾಗಳ ಪಾಲಿಗೆ ಅಲ್ಟಿಮೇಟ್ ಯಶಸ್ಸು. ಯಾವುದೇ ಸಿನಿಮಾ 1000 ಕೋಟಿ ಗಳಿಸಿತೆಂದರೆ ಅದು ದಾಖಲೆ ನಿರ್ಮಿಸಿದಂತೆಯೇ ಸರಿ. ಆದರೆ ಈ 1000 ಕೋಟಿ ಸಿನಿಮಾ ಯಾರ ಖಾತೆಯಲ್ಲಿ ಹೆಚ್ಚಿದೆ ಎಂದರೆ ಸಹಜವಾಗಿ ಪ್ರಭಾಸ್, ಶಾರುಖ್ ಖಾನ್, ಅಲ್ಲು ಅರ್ಜುನ್ ಎಂಬ ಉತ್ತರ ಬರಬಹುದು ಆದರೆ ಅತಿ ಹೆಚ್ಚು ಸಾವಿರ ಕೋಟಿ ಗಳಿಸಿರುವ ಸಿನಿಮಾಗಳಲ್ಲಿ ನಟಿಸಿರುವುದು ರಶ್ಮಿಕಾ ಮಂದಣ್ಣ ಮತ್ತು ಸಂಜಯ್ ದತ್. ಇದೇ ಈ ಇಬ್ಬರ ನಡುವೆ ಇರುವ ಸಾಮ್ಯತೆ.

ರಶ್ಮಿಕಾ ಮಂದಣ್ಣ ಮತ್ತು ಸಂಜಯ್ ದತ್ ಇಬ್ಬರೂ ಸಹ ಸಾವಿರ ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ನಟಿಸಿರುವ ‘ಪುಷ್ಪ 2’ 1000 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ರಣ್​​ಬೀರ್ ಕಪೂರ್ ಜೊತೆಗೆ ನಟಿಸಿದ ‘ಅನಿಮಲ್’ ಸಿನಿಮಾ ಸಹ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ಗಳಿಕೆ ಮಾಡಿದೆ. ಬಳಿಕ ವಿಕ್ಕಿ ಕೌಶಲ್ ಜೊತೆಗೆ ನಟಿಸಿದ ‘ಛಾವಾ’ ಸಿನಿಮಾ ಸಹ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1000 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ. ಆ ಮೂಲಕ ಮೂರು, 1000 ಕೋಟಿ ಸಿನಿಮಾಗಳು ರಶ್ಮಿಕಾ ಫಿಲ್ಮಾಗ್ರಫಿ ಸೇರಿಕೊಂಡಿವೆ.

ಇದನ್ನೂ ಓದಿ:ಸಂಜಯ್ ದತ್​ಗೆ ಜೈಲಿನಲ್ಲಿ ಕೆಲಸ ಮಾಡಿದ್ದಕ್ಕೆ ಸಿಕ್ಕ ಹಣ ಎಷ್ಟು?

ಇನ್ನು ಸಂಜಯ್ ದತ್ ಅವರ ಮೊದಲ 1000 ಕೋಟಿ ಸಿನಿಮಾ ಕನ್ನಡದ ‘ಕೆಜಿಎಫ್ 2’. ಈ ಸಿನಿಮಾ ವಿಶ್ವಬಾಕ್ಸ್ ಆಫೀಸ್​​ನಲ್ಲಿ 1250 ಕೋಟಿ ಗಳಿಕೆ ಮಾಡಿದೆ. ಬಳಿಕ ಶಾರುಖ್ ಖಾನ್ ನಾಯಕರಾಗಿ ನಟಿಸಿರುವ ‘ಜವಾನ್’ ಸಿನಿಮಾನಲ್ಲೂ ಸಂಜಯ್ ದತ್ ನಟಿಸಿದ್ದು, ಈ ಸಿನಿಮಾ 1100 ಕೋಟಿ ಹಣ ಗಳಿಕೆ ಮಾಡಿತು. ಇದೀಗ ಸಂಜಯ್ ದತ್, ‘ಧುರಂಧರ್’ ಸಿನಿಮಾನಲ್ಲಿ ನಟಿಸಿದ್ದು, ಈ ಸಿನಿಮಾ ಸಹ 1000 ಕೋಟಿ ಕಲೆಕ್ಷನ್ ಗಡಿಯನ್ನು ದಾಟಿದೆ. 1000 ಕೋಟಿ ಗಳಿಸಿದ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ ಶ್ರೇಯ ಸಂಜಯ್ ದತ್ ಮತ್ತು ರಶ್ಮಿಕಾ ಮಂದಣ್ಣ ಅವರ ಬಳಿ ಇದೆ. ಮುಂದೆ ಇದು ಬದಲಾದರೂ ಆಗಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

1.31 ಕೋಟಿ ರೂ. ಸಂಬಳಕ್ಕಿಂತ ಬೆಂಗಳೂರಿನ 45 ಲಕ್ಷ ರೂ. ಹೆಚ್ಚು ಲಾಭದಾಯಕ ಎಂದ ಟೆಕ್ಕಿ, ಯಾಕೆ ಗೊತ್ತಾ? – Kannada News | Bangalore vs. London: Engineer Compares Life Quality and Salary Differences

ಬೆಂಗಳೂರು, ಜ.7: ಬೆಂಗಳೂರು ಹೆಚ್ಚು ಆದಾಯ ನೀಡುವ ನಗರ, ಇಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭ, ಎಲ್ಲದಕ್ಕೂ ಅವಕಾಶ ಇದೆ. ಹಾಗಾಗಿ ಬೇರೆ ಊರಿನ ಜನ ಇಲ್ಲಿ ಕೆಲಸಕ್ಕಾಗಿ ಬರುತ್ತಾರೆ. ಇದೀಗ ಇಲ್ಲೊಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡಲು ಹಾಗೂ ಜೀವನಶೈಲಿಗೆ ತುಂಬಾ ಬೆಸ್ಟ್​​ ನಗರ ಎಂದು ಹೇಳಿದ್ದಾರೆ. ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಲಿಂಕ್ಡ್‌ಇನ್​​ನಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (Bangalore vs London) ನಡುವಿನ ಜೀವನಶೈಲಿ, ಆದಾಯ ವ್ಯತ್ಯಾಸದ ಬಗ್ಗೆ ಹೇಳಿದ್ದಾರೆ. ವೈಭವ್ ಅಗರ್ವಾಲ್ ಎಂಬುವವರು ಈ ಪೋಸ್ಟ್​​ನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 45 ಲಕ್ಷ ರೂ. ವಾರ್ಷಿಕ ಪ್ಯಾಕೇಜ್ ಅನ್ನು ಲಂಡನ್‌ನ £ 108,000 (1.31 ಕೋಟಿ ರೂ.)ಸಂಬಳಕ್ಕೆ ಹೋಲಿಸಿದ್ದಾರೆ. ಇದು ನಿಜವಾದ ಜೀವನದ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದ್ದಾರೆ.

45 ಲಕ್ಷ ರೂ. ಅನ್ನು £108 ಹೋಲಿಸಿದ್ದರೆ ಲಂಡನ್‌ ಪ್ಯಾಕೆಜ್​​​​ ಹೆಚ್ಚು, ಆದರೆ ಇದು ಕಾಗದ ಮೌಲ್ಯ, ಆದರೆ ಜೀವನಶೈಲಿಯಲ್ಲಿ ಬೆಂಗಳೂರು ಉತ್ತಮ, ಶ್ರೀಮಂತರ ಬದುಕಬೇಕಾದರೆ ಇದು ಉತ್ತಮ ಎಂದು ಹೇಳಿದ್ದಾರೆ. ಇಲ್ಲಿ ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ. ಬೆಂಗಳೂರು ಹಾಗೂ ಲಂಡನ್​​​​ ಜೀವನಶೈಲಿಯನ್ನು ಅದ್ಭುತವಾಗಿ ವಿವರಿಸಿದ್ದಾರೆ. ಬೆಂಗಳೂರಿನ ಖರ್ಚು ವೆಚ್ಚ ಹೇಗೆ? ಇಲ್ಲಿ ವಾರ್ಷಿಕ ಸಂಬಳ 45 ಲಕ್ಷ ರೂ. ಅದರಲ್ಲಿ ನಿವ್ವಳ ಆದಾಯ: 2.7 ಲಕ್ಷ ರೂ/ತಿಂಗಳು. ವಸತಿ: ಗೇಟೆಡ್ ಸೊಸೈಟಿಯಲ್ಲಿ ಐಷಾರಾಮಿ 2BHK (50 ಸಾವಿರ ರೂ.) ಅಡುಗೆಯವರಿಗೆ ( 5 ಸಾವಿರ ರೂ.), ಮನೆ ಕೆಲಸದವರಿಗೆ (3 ಸಾವಿರ ರೂ.) ಪ್ರಯಾಣಕ್ಕಾಗಿ ಉಬರ್, ದಿನಸಿಗಾಗಿ ಬ್ಲಿಂಕಿಟ್, ಇತರ ಖರ್ಚುಗಳು.

ಇಲ್ಲಿದೆ ನೋಡಿ ಪೋಸ್ಟ್​:

ಇನ್ನು ಲಂಡನ್​​ನಲ್ಲಿ ಇದಕ್ಕಿಂತ ವಿಭಿನ್ನವಾಗಿದೆ. ನಿವ್ವಳ ಆದಾಯ: £6,100/ತಿಂಗಳು (40% ತೆರಿಗೆ ಎಲ್ಲ ಸೇರಿ 7,40,839 ರೂ.) 1BHK ಮನೆ (ನಗರವಲ್ಲದ ಪ್ರದೇಶದಲ್ಲಿ 2.4 ಲಕ್ಷ ರೂ.), ಇನ್ನು ಸಾರ್ವಜನಿಕ ವಾಹನಗಳನ್ನು ಬಳಸಿಕೊಳ್ಳುವುದು, ಅಡುಗೆ ನಾವೇ ಮಾಡಿಕೊಳ್ಳಬೇಕು. ಶೌಚಾಲಯ, ಪಾತ್ರೆ ಎಲ್ಲವನ್ನು ನಾವೇ ಸ್ವಚ್ಛ ಮಾಡಬೇಕು. ನೀವು ಐಷಾರಾಮಿ ಮತ್ತು ಸೌಕರ್ಯವನ್ನು ಬಯಸಿದರೆ, ಬೆಂಗಳೂರನ್ನು ಆರಿಸಿ. ನೀವು ಜಾಗತಿಕ ಮಾನ್ಯತೆ, ಶುದ್ಧ ಗಾಳಿ ಮತ್ತು ಹೆಚ್ಚು ಆದಾಯ ಗಳಿಸಬೇಕಾದರೆ ಲಂಡನ್​​​ನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಹಣಕ್ಕಿಂತ ನೆಮ್ಮದಿ ಹೆಚ್ಚು ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದರೆ ಬೆಂಗಳೂರು ಉತ್ತಮ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2025ರಲ್ಲಿ 47 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ದಂಪತಿ

\ಈ ಲಿಂಕ್ಡ್‌ಇನ್​​ ಪೋಸ್ಟ್​​ಗೆ ನೆಟ್ಟಿಗರು ಕೂಡ ಕಮೆಂಟ್​​ ಮಾಡಿದ್ದಾರೆ. ಆದಾಯ ಹೊಂದಿರುವ ಜನರು ಕೇವಲ ಸಂಬಳದ ಕಾರಣದಿಂದಾಗಿ ಹೋಗುವುದಿಲ್ಲ, ಅವರು ಬಹುಸಂಸ್ಕೃತಿಯ ಮಾನ್ಯತೆ, ಕಲಿಕೆ, ಆತ್ಮವಿಶ್ವಾಸ, ಕಲಿಕೆ, ಜೀವನದ ಗುಣಮಟ್ಟ, ಉತ್ತಮ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ, ಶುದ್ಧ ಗಾಳಿ, ನೀರು, ಕಡಿಮೆ ಅಪರಾಧ, ಹೆಚ್ಚು ಮಾನವೀಯ ಮೌಲ್ಯಗಳನ್ನು ತಿಳಿದುಕೊಳ್ಳ ಉದ್ದೇಶದಿಂದಲ್ಲೂ ಹೋಗುಬಹುದು. ನಮ್ಮದೇ ಆದ ಕೋಣೆಯನ್ನು ಸ್ವಚ್ಛಗೊಳಿಸುವುದು, ನಮ್ಮ ಆಹಾರವನ್ನು ಬೇಯಿಸುವುದು ನಮ್ಮ ವೈಯಕ್ತಿಕ ಆಯ್ಕೆಯಾಗಿದೆ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ,

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:17 pm, Wed, 7 January 26

Source link

Gold Rate Today Bangalore: ಚಿನ್ನದ ಬೆಲೆ ಬುಧವಾರವೂ ಏರಿಕೆ; ಬೆಳ್ಳಿಯೂ ಜಿಗಿತ – Kannada News | Gold Price Today on 7th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 7: ಅಮೂಲ್ಯ ಲೋಹಗಳ ಬೆಲೆ ಏರಿಕೆ ಮುಂದುವರಿದಿದೆ. ಚಿನ್ನದ ಬೆಲೆ (Gold Rates) ಗ್ರಾಮ್​ಗೆ 60 ರೂ ಹೆಚ್ಚಿದೆ. ಭಾರತದಲ್ಲಿ ಮಾತ್ರವಲ್ಲ, ಹೆಚ್ಚಿನ ದೇಶಗಳಲ್ಲೂ ಈ ಹಳದಿ ಲೋಹದ ದರ ಏರಿದೆ. ಈ ವಾರದ ಮೊದಲ ಮೂರು ದಿನದಲ್ಲಿ ಚಿನ್ನದ ಬೆಲೆಯಲ್ಲಿ 300 ರೂಗೂ ಅಧಿಕ ಪ್ರಮಾಣದಲ್ಲಿ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಬುಧವಾರ ಭರ್ಜರಿ ಜಿಗಿತ ಕಂಡಿದೆ. ಒಂದೇ ದಿನದಲ್ಲಿ 10 ರೂ ಜಂಪ್ ಆಗಿದೆ. ಮೂರು ದಿನದಲ್ಲಿ ಬೆಳ್ಳಿ ಬೆಲೆ 22 ರೂನಷ್ಟು ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,39,480 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 7ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,948 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,785 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,461 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 263 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,948 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,785 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 263 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,785 ರೂ
  • ಚೆನ್ನೈ: 12,870 ರೂ
  • ಮುಂಬೈ: 12,785 ರೂ
  • ದೆಹಲಿ: 12,800 ರೂ
  • ಕೋಲ್ಕತಾ: 12,785 ರೂ
  • ಕೇರಳ: 12,785 ರೂ
  • ಅಹ್ಮದಾಬಾದ್: 12,790 ರೂ
  • ಜೈಪುರ್: 12,800 ರೂ
  • ಲಕ್ನೋ: 12,800 ರೂ
  • ಭುವನೇಶ್ವರ್: 12,785 ರೂ

ಇದನ್ನೂ ಓದಿ: ಈ ಎಸ್​ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (12,634 ರುಪಾಯಿ)
  • ದುಬೈ: 498.50 ಡಿರಾಮ್ (12,206 ರುಪಾಯಿ)
  • ಅಮೆರಿಕ: 139 ಡಾಲರ್ (12,502 ರುಪಾಯಿ)
  • ಸಿಂಗಾಪುರ: 178.80 ಸಿಂಗಾಪುರ್ ಡಾಲರ್ (12,554 ರುಪಾಯಿ)
  • ಕತಾರ್: 498.50 ಕತಾರಿ ರಿಯಾಲ್ (12,298 ರೂ)
  • ಸೌದಿ ಅರೇಬಿಯಾ: 507 ಸೌದಿ ರಿಯಾಲ್ (12,159 ರುಪಾಯಿ)
  • ಓಮನ್: 53.05 ಒಮಾನಿ ರಿಯಾಲ್ (12,392 ರುಪಾಯಿ)
  • ಕುವೇತ್: 40.86 ಕುವೇತಿ ದಿನಾರ್ (12,028 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 263 ರೂ
  • ಚೆನ್ನೈ: 283 ರೂ
  • ಮುಂಬೈ: 263 ರೂ
  • ದೆಹಲಿ: 263 ರೂ
  • ಕೋಲ್ಕತಾ: 263 ರೂ
  • ಕೇರಳ: 283 ರೂ
  • ಅಹ್ಮದಾಬಾದ್: 263 ರೂ
  • ಜೈಪುರ್: 263 ರೂ
  • ಲಕ್ನೋ: 263 ರೂ
  • ಭುವನೇಶ್ವರ್: 283 ರೂ
  • ಪುಣೆ: 263

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಮನಸ್ಸು ಒಳ್ಳೇದು, ನಾನೇ ತಪ್ಪು ತಿಳಿದುಕೊಂಡಿದ್ದೆ; ಮರುಗಿದ ರಘು – Kannada News | Raghu Opinion changed on Gilli Nata Ahead of Bigg Boss Kannada Season 12 Finale

ರಘು ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ನಂತರ ಇಬ್ಬರ ಮಧ್ಯೆ ಕಿರಿಕ್ ಆಯಿತು. ಗಿಲ್ಲಿಯ ವರ್ತನೆ ರಘು ಅವರಿಗೆ ಇಷ್ಟ ಆಗಲೇ ಇಲ್ಲ. ಅಂದಿನಿಂದ ಗಿಲ್ಲಿಯನ್ನು ರಘು ದ್ವೇಷಿಸಲು ಆರಂಭಿಸಿದರು. ಆದರೆ, ಈಗ ಅವರು ಏಕಾಏಕಿ ಬದಲಾಗಿದ್ದಾರೆ. ಫಿನಾಲೆ ಸಮೀಪಿಸುವಾಗ ಗಿಲ್ಲಿಯ ನಿಜವಾದ ವ್ಯಕ್ತಿತ್ವ ಗೊತ್ತಾಗಿದೆ. ‘ಗಿಲ್ಲಿ ಮನಸ್ಸು ಒಳ್ಳೆಯದು. ನಾನು ಮೊದಲು ತಪ್ಪು ತಿಳಿದುಕೊಂಡಿದ್ದೆ’ ಎಂದು ರಘು ಅವರು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Hanuman Photo Vastu: ಮನೆಯಲ್ಲಿ ತಪ್ಪಿಯೂ ಈ ಕೋಣೆಯಲ್ಲಿ ಹನುಮಂತನ ಫೋಟೋ ಇಡಬೇಡಿ – Kannada News | Hanuman Photo Vastu: Best Placement and Forms for Home Peace and Prosperity

ಸಾಕಷ್ಟು ಜನರು ತಮ್ಮ ಮನೆಗಳಲ್ಲಿ ಹನುಮಂತನ ಫೋಟೋವನ್ನು ಇಟ್ಟುಕೊಂಡು ಪ್ರತಿ ಮಂಗಳವಾರ ಅಥವಾ ಶನಿವಾರ ಪೂಜಿಸುತ್ತಾರೆ. ಆದಾಗ್ಯೂ, ಹನುಮಂತನ ಹಲವು ರೂಪಗಳಿವೆ. ಉಗ್ರ ರೂಪ, ಪರ್ವತವನ್ನು ಎತ್ತುವವನು, ಐದು ಮುಖಗಳನ್ನು ಹೊಂದಿರುವವನು, ರಾಮನ ಮೇಲಿನ ಭಕ್ತಿ, ಗದೆಯನ್ನು ಹಿಡಿದಿರುವುದು, ಲಂಕೆಯನ್ನು ಸುಡುವುದು ಮತ್ತು ಬಾಲ ಹನುಮಂತ ಸೇರಿದಂತೆ ಹನುಮನ ಹಲವು ರೂಪಗಳಿವೆ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಹನುಮಂತನು ಸಂಜೀವಿನಿ ಪರ್ವತವನ್ನು ಎತ್ತುತ್ತಿರುವ ಫೋಟೋ ಇರುವುದು ಒಳ್ಳೆಯದು. ಇದು ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಸಂಕೇತಿಸುತ್ತದೆ. ಯಾವುದೇ ಸಂದರ್ಭದಲ್ಲಿ ಮನೆಯೊಳಗೆ ಕೋಪಗೊಂಡ ರೂಪದಲ್ಲಿ ಹನುಮಂತನ ಫೋಟೋ ಇರಬಾರದು. ಇದು ಮನೆಯಲ್ಲಿ ಉದ್ವಿಗ್ನ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಶಾಂತಿಯುತ, ಶಾಂತ ಸ್ಥಿತಿಯಲ್ಲಿರುವ ಹನುಮಂತನ ಫೋಟೋವನ್ನು ಮಾತ್ರ ಮನೆಯಲ್ಲಿ ಇಡಬೇಕು.

ಅದೇ ರೀತಿ, ಮನೆಯಲ್ಲಿ ಹನುಮಂತನ ಫೋಟೋ ಇಡುವಾಗ, ವಾಸ್ತು ನಿಯಮಗಳನ್ನು ಪಾಲಿಸಬೇಕು. ವಿಶೇಷವಾಗಿ, ದಿಕ್ಕಿನ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಹನುಮಂತನ ಚಿತ್ರವು ದಕ್ಷಿಣಕ್ಕೆ ಮುಖ ಮಾಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ದಕ್ಷಿಣದಿಂದ ಬರುವ ನಕಾರಾತ್ಮಕ ಶಕ್ತಿಗಳು ಹನುಮಂತನ ಪ್ರಭಾವದಿಂದ ನಾಶವಾಗುತ್ತವೆ ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಅಲ್ಲದೆ, ಯಾವುದೇ ಸಂದರ್ಭದಲ್ಲಿ ಮಲಗುವ ಕೋಣೆಯಲ್ಲಿ ಹನುಮಂತನ ಫೋಟೋ ಇಡಬಾರದು. ಹನುಮಂತನು ಬ್ರಹ್ಮಚಾರಿಯಾಗಿರುವುದರಿಂದ, ಫೋಟೋವನ್ನು ಮಲಗುವ ಕೋಣೆಯಲ್ಲಿ ಇಡುವುದು ಅಶುಭ. ಹನುಮಂತನ ಫೋಟೋವನ್ನು ಲಿವಿಂಗ್ ರೂಮಿನಲ್ಲಿ ಅಥವಾ ಪೂಜಾ ಕೊಠಡಿಯಲ್ಲಿ ಇಡುವುದು ಶುಭ ಎಂದು ವಾಸ್ತು ತಜ್ಞರು ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

20 ದಿನ ಸಾವು ಬದುಕಿನ ನಡುವೆ ಹೋರಾಡಿದರೂ ಉಳಿಯಲಿಲ್ಲ ಜೀವ! ಚಿಕಿತ್ಸೆ ಫಲಿಸದೆ ಸಾವು – Kannada News | Bengaluru Petrol Attack: A man set a mother on fire for not getting her daughter married to him, mother dies

ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ್ದ ಕೇಸ್; ಚಿಕಿತ್ಸೆ ಫಲಿಸದೆ ತಾಯಿ ಗೀತಾ ಸಾವು

ಬೆಂಗಳೂರು, ಜನವರಿ 07: ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಯುವತಿಯ ತಾಯಿ ಗೀತಾಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೀಕರ ಘಟನೆ ಬೆಂಗಳೂರಿನ ಬಸವೇಶ್ವರನಗರದ ಭೋವಿ ಕಾಲೋನಿಯಲ್ಲಿ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಗೀತಾ ಕೊನೆಯುಸಿರೆಳೆದಿದ್ದಾರೆ.

20 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ

ಗೀತಾ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದು, ಅದೇ ಪ್ರದೇಶದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದ ಮುತ್ತು ಎಂಬ ಯುವಕನೊಂದಿಗೆ ಸಲುಗೆಯಿಂದಿದ್ದರು. ಒಬ್ಬರಿಗೊಬ್ಬರು ಪರಿಚಯವಾದ ಬಳಿಕ, ಗೀತಾ, ಆಕೆಯ 19 ವರ್ಷದ ಮಗಳು ಹಾಗೂ ಮುತ್ತು ಒಂದೇ ಮನೆಯಲ್ಲಿ ವಾಸವಿದ್ದರು. ಈ ವೇಳೆ ಯುವತಿಯನ್ನು ಮದುವೆ ಮಾಡಿಕೊಡುವಂತೆ ಮುತ್ತು ಗೀತಾಳ ಮೇಲೆ ಒತ್ತಡ ಹೇರುತ್ತಿದ್ದ ಎಂದು ಆರೋಪಿಸಲಾಗಿತ್ತು. ಆದರೆ ಗೀತಾ ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವಕ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಘಟನೆ ನಂತರ ಆರೋಪಿ ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡ ಗೀತಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಇದನ್ನೂ ಓದಿ ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!

ಈ ಕುರಿತು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿತ್ತು. ಅತ್ತ ಶೇ.50ಕ್ಕಿಂತ ಹೆಚ್ಚು ಸುಟ್ಟಗಾಯಗಳಿಂದ ಬಳಲುತ್ತಿದ್ದ ಗೀತಾ, 20 ದಿನಗಳ ಕಾಲ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರು. ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಕೊಲೆಯತ್ನ ಪ್ರಕರಣವನ್ನು ಕೊಲೆ ಕೇಸ್ ಆಗಿ ಪರಿವರ್ತಿಸಿ ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶತಕದ ಖಾತೆ ತೆರೆದ ಜೇಕಬ್ ಬೆಥೆಲ್ – Kannada News | England’s Jacob Bethell slams his maiden Test Century

ಇಂಗ್ಲೆಂಡ್ ತಂಡದ ಯಂಗ್ ಸೆನ್ಸೇಷನ್ ಜೇಕಬ್ ಬೆಥೆಲ್ ಟೆಸ್ಟ್ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದಾರೆ. ಅದು ಸಹ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಎಂಬುದು ವಿಶೇಷ. ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 5ನೇ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬೆಥೆಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.

ಈ ಬ್ಯಾಟಿಂಗ್​ನೊಂದಿಗೆ ಬೆಥೆಲ್ 162 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಜೇಕಬ್ ಬೆಥೆಲ್ ಅವರ ಮೊದಲ ಟೆಸ್ಟ್ ಸೆಂಚುರಿ ಎಂಬುದು ವಿಶೇಷ. ಈ ಶತಕದೊಂದಿಗೆ ಆಸ್ಟ್ರೇಲಿಯಾದಲ್ಲಿ ಸೆಂಚುರಿ ಸಿಡಿಸಿದ ಹದಿ ಹರೆಯದ ಬ್ಯಾಟರ್​ಗಳ ಪಟ್ಟಿಯಲ್ಲೂ ಬೆಥೆಲ್ ಹೆಸರು ಸೇರ್ಪಡೆಯಾಗಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್​​ನಲ್ಲಿ 384 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡವು 567 ರನ್​​ ಕಲೆಹಾಕಿದ್ದರು. 183 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡವು 53 ಓವರ್​ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿದೆ.

 

Source link

ಸೂರ್ಯನ ಬೆಳಕಿನಿಂದ ವಿಟಮಿನ್‌ ಡಿ ಪಡೆಯುವ ಸರಿಯಾದ ಮಾರ್ಗ ಯಾವುದು? 90% ಜನರಿಗೆ ಇದು ಗೊತ್ತೇ ಇಲ್ಲ – Kannada News | You can get vitamin D from sunlight only if you follow these steps

ವಿಟಮಿನ್ ಡಿ (vitamin D) ನಮ್ಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದಂತಹ ಪ್ರಮುಖ ಪೋಷಕಾಂಶವಾಗಿದ್ದು, ಇದು ಮೂಳೆಗಳನ್ನು ಬಲಪಡಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸ್ನಾಯುಗಳನ್ನು ಆರೋಗ್ಯವನ್ನು ವೃದ್ಧಿಸಲು ಮಾತ್ರವಲ್ಲದೆ ಇದು ಕ್ಯಾಲ್ಸಿಯಂ ಮತ್ತು ರಂಜಕದಂತಹ ಅಂಶಗಳನ್ನು ಹೀರಿಕೊಳ್ಳಲು ನಮ್ಮ ದೇಹಕ್ಕೆ ಸಹಾಯ ಮಾಡುತ್ತದೆ. ಸೂರ್ಯನ ಬೆಳಕು ವಿಟಮಿನ್‌ ಡಿ ಯ ನೈಸರ್ಗಿಕ ಮೂಲವಾಗಿದ್ದು, ಇದರ ಪ್ರಯೋಜನವನ್ನು ಪಡೆಯಲು ಬಹುತೇಕರು ಬೆಳಗ್ಗಿನ ಸಮಯದಲ್ಲಿ ಸೂರ್ಯನ ಬೆಳಕಿಗೆ ಮೈಯನ್ನು ಒಡ್ಡಿಕೊಳ್ಳುತ್ತಾರೆ. ಆದರೆ 90% ಜನರಿಗೆ ಸೂರ್ಯನಿಂದ ವಿಟಮಿನ್‌ ಡಿ ಪಡೆಯುವ ಸರಿಯಾದ ವಿಧಾನ ಯಾವುದೆಂದು ಗೊತ್ತಿಲ್ಲವಂತೆ. ಹಾಗಿದ್ರೆ ವಿಟಮಿನ್‌ ಡಿ ಪಡೆಯುವ ಸರಿಯಾದ ಮಾರ್ಗ ಯಾವುದೆಂದು ನೋಡೋಣ ಬನ್ನಿ.

ಸೂರ್ಯನಿಂದ ವಿಟಮಿನ್ ಡಿ ಪಡೆಯುವ ಸರಿಯಾದ ಮಾರ್ಗ ಯಾವುದು?

ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಪಡೆಯಲು ಪ್ರತಿದಿನ 15 ರಿಂದ 30 ನಿಮಿಷಗಳ ಕಾಲ ಸೂರ್ಯನ ಕಿರಣಗಳಿಗೆ ಮೈಯನ್ನು ಒಡ್ಡಿಕೊಂಡರೆ ಸಾಕು. ಈ ಸಮಯದಲ್ಲಿ ಮುಖ, ಕೈ ಮತ್ತು ಪಾದಗಳು ಬಿಸಿಲಿಗೆ ಒಡ್ಡಿಕೊಳ್ಳಬೇಕು. ಬಟ್ಟೆಯಿಂದ ಸಂಪೂರ್ಣ ದೇಹವನ್ನು ಮುಚ್ಚಿಕೊಳ್ಳುವುದರಿಂದ ವಿಟಮಿನ್‌ ಡಿ ಉತ್ಪಾದನೆಯಾಗುವುದಿಲ್ಲ. ವಿಟಮಿನ್ ಡಿ ಪಡೆಯಲು ಉತ್ತಮ ಸಮಯವೆಂದರೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ. ಈ ಸಮಯದಲ್ಲಿ, ಸೂರ್ಯನ UVB ಕಿರಣಗಳು ಚರ್ಮವನ್ನು ತಗುಲಿ ವಿಟಮಿನ್ ಡಿ ಉತ್ಪಾದಿಸಲು ಸಹಾಯ ಮಾಡುತ್ತದೆ.

ಸೂರ್ಯನ ಬೆಳಕು ನಮ್ಮ ಚರ್ಮಕ್ಕೆ ನೇರವಾಗಿ ತಾಗಿದಾಗ ನಮಗೆ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಸಿಗುತ್ತದೆ. ಗಾಜಿನ ಹಿಂದೆ, ನೆರಳಿನಲ್ಲಿ ಕುಳಿತುಕೊಳ್ಳುವುದರಿಂದ ಅಥವಾ ಸನ್‌ಸ್ಕ್ರೀನ್ ಹಚ್ಚಿ ಸೂರ್ಯನ ಬೆಳಕಿಗೆ ಮೈ ಒಡ್ಡುವುದರಿಂದ ವಿಟಮಿನ್ ಡಿ ಉತ್ಪಾದನೆ ನಿಲ್ಲುತ್ತದೆ. ಅಲ್ಲದೆ UVB ಕಿರಣಗಳು ಗಾಜಿನ ಮೂಲಕ ಭೇದಿಸುವುದಿಲ್ಲ. ಆದ್ದರಿಂದ, ನಿಮಗೆ ವಿಟಮಿನ್ ಡಿ ಅಗತ್ಯವಿದ್ದರೆ, ನೀವು ಸ್ವಲ್ಪ ಸಮಯದವರೆಗೆ ಸೂರ್ಯನ ಬೆಳಕಿಗೆ ನೇರವಾಗಿ ದೇಹವನ್ನು ಒಡ್ಡಿಕೊಳ್ಳಬೇಕು.

ಯಾವ ಸಮಯದಲ್ಲಿ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಬಿಡುಗಡೆಯಾಗುತ್ತದೆ?

ಹೆಚ್ಚಿನವರು ಬೆಳಿಗ್ಗೆ 7 ರಿಂದ 8 ಗಂಟೆಯ ಸಮಯದಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಉತ್ತಮ ಎಂದು ಭಾವಿಸುತ್ತಾರೆ. ಆದರೆ ಈ ಸಮಯದಲ್ಲಿ  ಸೂರ್ಯನ ಬೆಳಕು ತುಂಬಾ ದುರ್ಬಲವಾಗಿರುತ್ತದೆ, ಇದರ ಪರಿಣಾಮವಾಗಿ ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆಯೇ ಇರುವುದಿಲ್ಲ. ವಾಸ್ತವವಾಗಿ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ರಚನೆಯ ಪ್ರಕ್ರಿಯೆಯು ಬೆಳಿಗ್ಗೆ 10 ಗಂಟೆಯ ನಂತರ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 2 ಗಂಟೆಯವರೆಗೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮುಖ್ಯ. ತಪ್ಪಾದ ವಿಧಾನವು ಚರ್ಮಕ್ಕೆ ಹಾನಿ ಮಾಡಬಹುದು.

ಇದನ್ನೂ ಓದಿ: ದಿನಕ್ಕೆ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡಿದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಗೊತ್ತಾ?

ಸೂರ್ಯನಿಂದ ವಿಟಮಿನ್ ಡಿ ಪಡೆಯುವಾಗ ಈ ತಪ್ಪುಗಳನ್ನು ಮಾಡಬಾರದು:

  • ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದು.
  • ಸಂಪೂರ್ಣ ದೇಹಕ್ಕೆ ಸನ್‌ ಸ್ಕ್ರೀನ್‌ ಹಚ್ಚುವುದು.
  • ಕೈ ಕಾಲು ಮುಚ್ಚುವಂತಹ ಸಂಪೂರ್ಣ ಬಟ್ಟೆ ಧರಿಸುವುದು

ಈ ಎಲ್ಲಾ ತಪ್ಪುಗಳು ವಿಟಮಿನ್ ಡಿ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಗಂಟೆಗಟ್ಟಲೆ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳುವುದರಿಂದ ಚರ್ಮದ ಕಪ್ಪಾಗುವಿಕೆ, ಸುಕ್ಕುಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಬೆನ್ನಲ್ಲೆ ಕೋಲಾರದಲ್ಲೂ ಬ್ಯಾನರ್​​ ಗಲಾಟೆ: ಬಿಜೆಪಿಗರ ನಡೆಗೆ ಕಾಂಗ್ರೆಸ್​​ ಕೆಂಡ – Kannada News | Kolar Banner Row: Congress BJP Clash Over Ex MLA Manjunath Gowdas Poster

ಕೋಲಾರ, ಜನವರಿ 07: ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರ ಮಅಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ಸದ್ದುಮಾಡಿದೆ. ಕೋಲಾರದ ಮಾಲೂರು ತಾಲೂಕಿನ ಕಾಂಗ್ರೆಸ್ ಹಾಗೂ BJP ಕಾರ್ಯಕರ್ತರ ನಡುವೆ ಬ್ಯಾನರ್ ಗಲಾಟೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರ ನಡುವೆ ಟಾಕ್ ಫೈಟ್​​ ನಡೆದಿದೆ. ಮಾಜಿ ಶಾಸಕ ಮಂಜುನಾಥ್ ಗೌಡ ಹುಟ್ಟುಹಬ್ಬದ ಹಿನ್ನೆಲೆ ಬೆಂಬಲಿಗರು ಪಟ್ಟಣದಲ್ಲಿ ಬ್ಯಾನರ್ ಅಳವಡಿಸಿದ್ದು, ನಮ್ಮ ಶಾಸಕರು ಎಂದು ಸಂಬೋಧಿಸಿ ಅದರಲ್ಲಿ ಶುಭಾಶಯ ಕೋರಿದ್ದಾರೆ. ಇದಕ್ಕೆ ಹಾಲಿ ಶಾಸಕ ನಂಜೇಗೌಡ ಬೆಂಬಲಿಗರು ಕೆಂಡಾಮಂಡಲರಾಗಿದ್ದು, BJP ಕಾರ್ಯಕರ್ತರು ಹಾಕಿದ್ದ ಬ್ಯಾನರ್​​ನ ಮಾಲೂರು ನಗರಸಭೆ ತೆರವುಗೊಳಿಸಿದೆ. ಇದಾದ ಬಳಿಕ ನಗರಸಭೆ ಪೌರಾಯುಕ್ತ ಪ್ರದೀಪ್ ಎದುರು ಕಚೇರಿಯಲ್ಲಿ ಹೈಡ್ರಾಮ ನಡೆದಿದ್ದು, ಪೌರಾಯುಕ್ತರನ್ನು ಬಿಜೆಪಿ ಮುಖಂಡರು ಏಕವಚನದ್ದಲಿ ತರಾಟೆಗೆ ಪಡೆದ ಪ್ರಸಂಗ ಕೂಡ ನಡೆದಿದೆ. ಬಳ್ಳಾರಿ ರೀತಿ ಅವಘಡ ಆಗದಿರಲಿ ಎಂಬ ಕಾರಣಕ್ಕೆ ಬ್ಯಾನರ್​​ ತೆರವು ಮಾಡಿದ್ದೇವೆ ಎಂದು ಪೌರಾಯುಕ್ತರು ಕೂಡ ಈ ವೇಳೆ ತಿರುಗೇಟು ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಜನ ನಾಯಗನ್’ ಬಳಿಕ ನ್ಯಾಯಾಲಯದ ಮೆಟ್ಟಿಲೇರಿದ ‘ರಾಜಾ ಸಾಬ್’ ಮತ್ತು ‘ಶಂಕರ ವರ ಪ್ರಸಾದ್’ – Kannada News | The Raja Saab and Mana Shankara Vara Prasad Garu movie teams approach Telangana High Court

ಸಂಕ್ರಾಂತಿ (Sankranthi) ಹಬ್ಬಕ್ಕೆ ಪ್ರತಿ ಬಾರಿಯಂತೆ ಈ ಬಾರಿಯೂ ತೆಲುಗು ಚಿತ್ರರಂಗದ ದೊಡ್ಡ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’, ರವಿತೇಜ ನಟನೆಯ ‘ಭರ್ತ ಪ್ರಜಲಕು ವಿಜ್ಞಪ್ತಿ’, ನವೀನ್ ಪೋಲಿಶೆಟ್ಟಿ ನಟನೆಯ ‘ಅನಗನಗಾ ಒಕ ರಾಜು’, ಶರವಣ ನಟನೆಯ ‘ನಾರಿ ನಡುಮ ಮುರಾರಿ’ ಸಿನಿಮಾಗಳು ತೆರೆಗೆ ಬರುತ್ತಿವೆ. ಇವುಗಳ ಜೊತೆಗೆ ತಮಿಳಿನ ‘ಜನ ನಾಯಗನ್’ ಮತ್ತು ‘ಪರಾಶಕ್ತಿ’ ಸಿನಿಮಾಗಳು ಸಹ ಬಿಡುಗಡೆ ಆಗುತ್ತಿವೆ.

ಆದರೆ ಇದೀಗ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಮತ್ತು ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾಗಳು ಹಠಾತ್ತನೆ ಕೋರ್ಟ್ ಮೆಟ್ಟಿಲೇರಿವೆ. ತೆಲಂಗಾಣ ಹೈಕೋರ್ಟ್​​ಗೆ ಎರಡೂ ಸಿನಿಮಾಗಳು ಪಿಟಿಷನ್ ಸಲ್ಲಿಸಿದ್ದು, ತಮ್ಮ ಸಿನಿಮಾಗಳ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿವೆ.

ದೊಡ್ಡ ಸಿನಿಮಾಗಳು ಬಿಡುಗಡೆ ಆದಾಗೆಲ್ಲ ಚಿತ್ರತಂಡಗಳು ಆಂಧ್ರ ಮತ್ತು ತೆಲಂಗಾಣಗಳಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ ನಿರ್ದಿಷ್ಟ ದಿನಗಳ ವರೆಗೆ ಟಿಕೆಟ್ ದರ ಹೆಚ್ಚಳ ಮತ್ತು ಹೆಚ್ಚುವರಿ ಶೋಗಳನ್ನು ಪ್ರದರ್ಶಿಸಲು ಅನುಮತಿ ಪಡೆದುಕೊಳ್ಳುತ್ತವೆ. ಆದರೆ ಇತ್ತೀಚೆಗೆ ತೆಲಂಗಾಣ ಹೈಕೋರ್ಟ್, ಈ ಟಿಕೆಟ್ ದರ ಹೆಚ್ಚಳದ ಕುರಿತಂತೆ ಸಲ್ಲಿಕೆ ಆಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿ, ಟಿಕೆಟ್ ದರ ಹೆಚ್ಚಳ ಮಾಡದಂತೆ ಆದೇಶ ನೀಡಿದೆ. ಇದೇ ಕಾರಣಕ್ಕೆ ಇದೀಗ ‘ದಿ ರಾಜಾ ಸಾಬ್’ ಮತ್ತು ‘ಮನ ಶಂಕರ ವರ ಪ್ರಸಾದ್’ ಚಿತ್ರತಂಡಗಳು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿವೆ.

ಇದನ್ನೂ ಓದಿ:ಇನ್ಮುಂದೆ ಸೆಟ್​ಬ್ಯಾಕ್ ಬಿಡದೆ ಮನೆ ನಿರ್ಮಾಣಕ್ಕೆ ಅವಕಾಶ: ಸಂಕ್ರಾಂತಿ ಗಿಫ್ಟ್ ನೀಡಿದ ಸರ್ಕಾರ

ಆದರೆ ಆಂಧ್ರ ಪ್ರದೇಶದಲ್ಲಿ ಈ ಸಮಸ್ಯೆ ಇಲ್ಲ. ಎರಡೂ ಸಿನಿಮಾಗಳಿಗೆ ಆಂಧ್ರದಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಸುಲಭವಾಗಿ ಅನುಮತಿ ದೊರೆತಿದೆ. ಆದರೆ ತೆಲಂಗಾಣದಲ್ಲಿ ಹೈಕೋರ್ಟ್ ಆದೇಶ ಇರುವ ಕಾರಣ ಅನುಮತಿ ನೀಡಲಾಗಿಲ್ಲ. ಇದೀಗ ‘ದಿ ರಾಜಾ ಸಾಬ್’ ಮತ್ತು ‘ಮನ ಶಂಕರ ವರ ಪ್ರಸಾದ್’ ಅವರುಗಳು ಈಗ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಬುಧವಾರ ವಿಚಾರಣೆಗೆ ತೆಗೆದುಕೊಳ್ಳೂವುದಾಗಿ ಹೇಳಲಾಗಿದೆ.

ಈ ಹಿಂದೆ ‘ಅಖಂಡ 2’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ತೆಲಂಗಾಣದಲ್ಲಿ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಆದರೆ ಅದೇ ಸಮಯದಲ್ಲಿ ತೆಲಂಗಾಣ ಹೈಕೋರ್ಟ್ ಆದೇಶ ಹೊರಡಿಸಿ, ಟಿಕೆಟ್ ದರ ಹೆಚ್ಚಳ ಮಾಡುವಂತಿಲ್ಲ ಎಂದಿತ್ತು. ಅಲ್ಲದೆ ತಮ್ಮ ಆದೇಶ ಉಲ್ಲಂಘನೆ ಮಾಡಿದ್ದಕ್ಕೆ ಚಿತ್ರತಂಡಕ್ಕೆ ಛೀಮಾರಿ ಸಹ ಹಾಕಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link