All posts by nagaraj11081993

ವಿಜಯ್ ಹಿಟ್ ಸಾಂಗ್​​ನ ಕೆಟ್ಟದಾಗಿ ಹಾಡಿ ಟ್ರೋಲ್ ಆದ ಮಮಿತಾ ಬೈಜು – Kannada News | Mamitha Baiju Trolled for ‘Ella Pugazhum’ Song at Jananaayagan Event; Vijay’s Reaction

ಮಲಯಾಳಂ ನಟಿ ಮಮಿತಾ ಬೈಜು ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅವರು ‘ಪ್ರೇಮುಲು’ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದು ಗೊತ್ತೇ ಇದೆ. ಈಗ ಅವರು ‘ಜನ ನಾಯಗನ್’ ಸಿನಿಮಾದಲ್ಲಿ ವಿಜಯ್ ಅವರ ಸಾಕು ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಅವರು ಹಾಡಿದ್ದು, ಇದನ್ನು ಟ್ರೋಲ್ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.

ಮಮಿತಾ ಅವರು ತಮ್ಮ ಗ್ಲಾಮರ್ ಮೂಲಕ ಗಮನ ಸೆಳೆದವರು. ನಟನೆಯನ್ನು ಕೂಡ ಉತ್ತಮವಾಗಿ ಅವರು ಮಾಡುತ್ತಾರೆ. ಇದಕ್ಕಾಗಿಯೇ ವಿಜಯ್ ಸಿನಿಮಾದಲ್ಲಿ ಆಫರ್ ಸಿಕ್ಕಿತು. ಅವರು ಹಲವು ದಿನ ಸಿನಿಮಾ ಶೂಟ್ ಮಾಡಿದರು ಮತ್ತು ವಿಜಯ್ ಜೊತೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡರು. ಈಗ ವಿಜಯ್ ಅವರನ್ನು ಹಾಗೂ ಅವರನ್ನು ಮೆಚ್ಚಿಸಲು ಮಮಿತಾ ಹಾಡು ಹೇಳಿದ್ದರು. ಆದರೆ, ಇದು ಟ್ರೋಲಿಗರಿಗೆ ಆಹಾರ ಆಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ಚಿತ್ರಕ್ಕೆ ಶಾಕ್; ಸಿನಿಮಾ ರಿಲೀಸ್ ಮುಂದಕ್ಕೆ

ದಳಪತಿ ವಿಜಯ್ ಅಭಿನಯದ ‘ಅಳಗಿಯ ತಮಿಳ ಮಗನ್’ ಸಿನಿಮಾ 2007ರಲ್ಲಿ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ವಿಜಯ್ ಜೊತೆ ಶ್ರಿಯಾ ಶರಣ್, ನಮಿತಾ ಮೊದಲಾದವರು ನಟಿಸಿದ್ದರು. ಈ ಸಿನಿಮಾದಲ್ಲಿ ‘ಎಲ್ಲಾ ಪುಗಳುಮ್’ ಎಂಬ ಹಾಡು ಇದೆ. ಈ ಹಾಡು ಗಮನ ಸೆಳೆದಿತ್ತು. ಎಆರ್ ರೆಹಮಾನ್ ಅವರು ಈ ಹಾಡನ್ನು ಕಂಪೋಸ್ ಮಾಡಿದ್ದರು. ಈ ಹಾಡನ್ನು ಮಮಿತಾ ಹಾಡಿದ್ದರು. ಈ ಸಂದರ್ಭದಲ್ಲಿ ವಿಜಯ್ ಅವರ ಭಾವನೆ ಹೇಗಿತ್ತು ಎಂಬುದನ್ನು ಕ್ಯಾಪ್ಚರ್ ಮಾಡಲಾಗಿದೆ. ಅವರು ಸಿಟ್ಟಿನಿಂದ ಇದ್ದಂತೆ ಕಾಣಿಸಿತ್ತು.

ಈ ವಿಡಿಯೋನ ಟ್ರೋಲ್ ಮಾಡಲಾಗುತ್ತಿದೆ. ನಾವು ದೇವರ ಬಳಿ ಕೇಳಿದ್ದು ಏನು ಎಂದು ಹೇಳಿದಾಗ ಒರಿಜಿನಲ್ ಸಾಂಗ್ ಹಾಕಲಾಗಿದೆ. ದೇವರು ಕೊಟ್ಟಿದ್ದು ಏನು ಎಂದಾಗ ಮಮಿತಾ ಹಾಡನ್ನು ಹಾಕಲಾಗಿದೆ. ಸದ್ಯಕ್ಕೆ ಸೆನ್ಸಾರ್ ಸಮಸ್ಯೆಯಿಂದ ‘ಜನ ನಾಯಗನ್’ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಯಾವಾಗ ಈ ಸಿನಿಮಾ ತೆರೆಗೆ ಬರುತ್ತದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WPL 2026: ಮೂರು ತಂಡಗಳಿಗೆ ಹೊಸ ನಾಯಕಿಯರು

Source link

ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಾಂಗ್ರೆಸ್ ನಾಯಕಿ ಸೇರಿ 9 ಮಂದಿ ವಿರುದ್ಧ ಕೇಸ್ – Kannada News | BJP Worker Assault Case in Hubballi: FIR Against Congress Corporator Suvarna Kalkuntla and 9 Others

ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಹಾಗೂ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣಾ ಕಲಕುಂಟ್ಲಾ

ಹುಬ್ಬಳ್ಳಿ, ಜನವರಿ 8: ಬಿಜೆಪಿ (BJP) ಕಾರ್ಯಕರ್ತೆಯ ಅರೆನಗ್ನಗೊಳಿಸಿ ಹಲ್ಲೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ (Hubballi) ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ (Congress) ಸದಸ್ಯೆ ಸುವರ್ಣಾ ಕಲಕುಂಟ್ಲಾ, ಡೇವಿಡ್ ಸೇರಿದಂತೆ ಒಟ್ಟು 9 ಜನರ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ, ಗಲಭೆ ಸೇರಿ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

ಜನವರಿ 2ರಂದು ಹುಬ್ಬಳ್ಳಿಯ ಚಾಲುಕ್ಯ ನಗರದಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿ, ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯ ಸಹೋದರ ಮರಿಯಾದಾಸ್ ನೀಡಿದ ದೂರಿನ ಮೇರೆಗೆ ಕೇಶ್ವಾಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 109, 115(2), 118(1), 189(2), 191(2), 74, 190 ಹಾಗೂ 351ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣಾ ಕಲಕುಂಟ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದ್ದರು. ಮಾಜಿ ಶಾಸಕ ಸೀಮಾ ಮಸೂತಿ, ಮೇಯರ್ ಜ್ಯೋತಿ ಪಾಟೀಲ್, ಉಪ ಮೇಯರ್ ಸಂತೋಷ್ ಚೌಹಾಣ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ಬುಧವಾರ ಸಂಜೆ 7 ಗಂಟೆಯವರೆಗೆ ಮುಂದುವರಿದಿತ್ತು. ಪ್ರತಿಭಟನೆಯ ಒತ್ತಡದ ಬೆನ್ನಲ್ಲೇ ಕೇಶ್ವಾಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಎರಡು ಕುಟುಂಬಗಳ ವೈಯಕ್ತಿಕ ಜಗಳಕ್ಕೆ ರಾಜಕೀಯ ಬಣ್ಣ?

ಈ ಪ್ರಕರಣಕ್ಕೆ ಎರಡು ಕುಟುಂಬಗಳ ನಡುವಿನ ಹಳೆಯ ವೈಯಕ್ತಿಕ ವೈಷಮ್ಯ ಕಾರಣ ಎನ್ನಲಾಗುತ್ತಿದೆ. ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಹಾಗೂ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣಾ ಕಲಕುಂಟ್ಲಾ ನಡುವೆ ಕಳೆದ ಕೆಲ ವರ್ಷಗಳಿಂದ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆಗಳು ನಡೆಯುತ್ತಿದ್ದು, ಏರಿಯಾದಲ್ಲಿ ಹಿಡಿತ ಸಾಧಿಸುವ ಪೈಪೋಟಿ ಇದಕ್ಕೆ ಕಾರಣ ಎನ್ನಲಾಗಿದೆ. ಮೊದಲು ಸುವರ್ಣಾ ಕಲಕುಂಟ್ಲಾ ಜೊತೆಗೆ ಇದ್ದ ಸುಜಾತಾ ಹಂಡಿ, ಎರಡು ವರ್ಷಗಳ ಹಿಂದೆ ಬಿಜೆಪಿ ಸೇರಿಕೊಂಡ ಬಳಿಕ ಇಬ್ಬರ ನಡುವಿನ ವೈಷಮ್ಯ ಮತ್ತಷ್ಟು ತೀವ್ರಗೊಂಡಿದೆ. ಈ ವೈಯಕ್ತಿಕ ಜಗಳವೇ ಇದೀಗ ರಾಜಕೀಯ ಆಯಾಮ ಪಡೆದು ದೊಡ್ಡ ರಾದ್ದಾಂತಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಜೆಪಿ ಕಾರ್ಯಕರ್ತೆಯ ಅರೆನಗ್ನಗೊಳಿಸಿ ಹಲ್ಲೆ ಪ್ರಕರಣದ ಹಿನ್ನೆಲೆ

ಜನವರಿ 5ರಂದು ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ ವೇಳೆ, ಪೊಲೀಸರು ಆಕೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಂಧನದ ಸಮಯದಲ್ಲಿ ಪೊಲೀಸ್ ವಾಹನದಲ್ಲೇ ಸುಜಾತಾ ಅರೆನಗ್ನ ಸ್ಥಿತಿಯಲ್ಲಿ ಇರುವ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ವರ್ತನೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಸಂಬಂಧ ಬಿಜೆಪಿ ಕಾರ್ಯಕರ್ತರು ಠಾಣೆ ಮುಂದೆ ಪ್ರತಿಭಟನೆ ನಡೆಸಿ, ಆರೋಪಿತ ಪೊಲೀಸರ ಅಮಾನತಿಗೆ ಆಗ್ರಹಿಸಿದ್ದರು.

ಇದನ್ನೂ ಓದಿ: BJP ಕಾರ್ಯಕರ್ತೆಯನ್ನ ವಿವಸ್ತ್ರಗೊಳಿಸಿದ್ದು ಯಾರು? ಮಹಿಳೆಯ ಹೈಡ್ರಾಮಾವೋ? ಪೊಲಿಸರ ಕ್ರೌರ್ಯವೋ?

ಆದರೆ ಪೊಲೀಸರು ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಮಹಿಳೆ ತಾನಾಗಿಯೇ ಬಟ್ಟೆ ಬಿಚ್ಚಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಹಲ್ಲೆ ಆರೋಪ ಹಾಗೂ ವಿಡಿಯೋ ವೈರಲ್ ಪ್ರಕರಣದ ಕುರಿತು ತನಿಖೆ ನಡೆಸುವುದಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಇತ್ತ, ಈ ಘಟನೆ ಕಾಂಗ್ರೆಸ್ ಕಾರ್ಪೋರೇಟರ್ ಕುಮ್ಮಕ್ಕಿನಿಂದ ನಡೆದ ದೌರ್ಜನ್ಯ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಪ್ರಕರಣ ರಾಜ್ಯ ರಾಜಕೀಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಳೆದು ಹೋದ ಮೊಬೈಲ್​ನ್ನು ಸ್ನೇಹಿತರ ಸಹಾಯದಿಂದ ಪತ್ತೆ ಹಚ್ಚಿದ ಟೆಕ್ಕಿ, ಪೊಲೀಸ್ ಅಧಿಕಾರಿ ಅಮಾನತು – Kannada News | Mumbai Engineer Recovers Stolen Phone in Varanasi, Police Action Follows

ವಾರಾಣಸಿ, ಜನವರಿ 08: ಮೊಬೈಲ್(Mobile)​​ ಕಳವಾಗುವುದು ಸಾಮಾನ್ಯ, ಆದರೆ ದೂರು ಕೊಡದೆ ಇರಲಾದೀತೆ, ಆ ದೂರನ್ನು ಗಂಭೀರವಾಗಿ ಪರಿಗಣಿಸದೆ ಹಲವು ಪೊಲೀಸರು ಅಸಡ್ಡೆತನ ತೋರುವುದುಂಟು ಅಂಥದ್ದೇ ಘಟನೆ ವಾರಾಣಸಿಯಲ್ಲಿ ನಡೆದಿದೆ. ಟೆಕ್ಕಿ ಅಂಕಿತಾ ಗುಪ್ತ ಮೊಬೈಲ್ ಕಳೆದು ಹೋಗಿತ್ತು ಆಕೆ ಕೂಡಲೇ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದರು, ಆದರೆ ಪೊಲೀಸರು ಈ ವಿಚಾರವನ್ನು ನಿರ್ಲಕ್ಷಿಸಿದ್ದರು. ಆದರೆ ಕೊನೆಗೆ ಆಗಿದ್ದೇ ಬೇರೆ.

ವಾರಾಣಸಿಯ ಅಸ್ಸಿ ಘಾಟ್​ನಲ್ಲಿ ಯುವತಿಯ ಮೊಬೈಲ್ ಕಳುವಾಗಿತ್ತು, ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಾಗಲಿಲ್ಲ, ಬಳಿಕ ಸ್ನೇಹಿತರ ಸಹಾಯ ಪಡೆದು ತನ್ನ ಮೊಬೈಲ್ ಪತ್ತೆ ಹಚ್ಚುವಲ್ಲಿ ಆಕೆ ಯಶಸ್ವಿಯಾಗಿದ್ದಾರೆ. ನಂತರ ನಿರ್ಲಕ್ಷ್ಯದ ಆರೋಪದ ಮೇಲೆ ಸ್ಥಳೀಯ ಪೊಲೀಸ್ ಔಟ್‌ಪೋಸ್ಟ್ ಇನ್‌ಚಾರ್ಜ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರ ಮುಂಬೈನ ಘಾಟ್ಕೋಪರ್ ಪ್ರದೇಶದ ನಿವಾಸಿ ಅಂಕಿತಾ ಗುಪ್ತಾ ತಮ್ಮ ಕುಟುಂಬದೊಂದಿಗೆ ವಾರಾಣಸಿಗೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ. ಅಸ್ಸಿ ಘಾಟ್‌ನಲ್ಲಿ ಭಾರೀ ಜನದಟ್ಟಣೆಯ ನಡುವೆ, ಯಾರೋ ಆಕೆಯ ಮೊಬೈಲ್ ಅನ್ನು ಕಸಿದು ಪರಾರಿಯಾಗಿದ್ದರು. ಗುಪ್ತಾ ನಂತರ ಪೊಲೀಸ್ ದೂರು ದಾಖಲಿಸಿದರು.

ಗುಪ್ತಾ ತನ್ನ ಸ್ನೇಹಿತರ ಸಹಾಯದಿಂದ ಫೋನ್ ಇರುವ ಸ್ಥಳವನ್ನು ಪತ್ತೆಹಚ್ಚಿ ಮಂಡುದಿಹ್ ಪ್ರದೇಶದಲ್ಲಿ ಒಂದು ಮನೆಯನ್ನು ಗುರುತಿಸಿದ್ದರು. ನಂತರ ಅವರು ಪೊಲೀಸರಿಗೆ ವಿವರಗಳೊಂದಿಗೆ ತಿಳಿಸಿದ್ದರು. ಮಾಹಿತಿಯ ಮೇರೆಗೆ ಪೊಲೀಸ್ ತಂಡ ದಾಳಿ ನಡೆಸಿ ಗುಪ್ತಾ ಅವರ ಫೋನ್ ವಶಪಡಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೋಧ ಕಾರ್ಯದಲ್ಲಿ ಕದ್ದ ಇತರ 12 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತಷ್ಟು ಓದಿ: ಆಟವಾಡಲು ಮಕ್ಕಳ ಕೈಗೆ ಮೊಬೈಲ್ ಕೊಟ್ಟು, ಕೆರೆಗೆ ಹಾರಿದ ಮಹಿಳೆ

ಪ್ರಕರಣದ ತನಿಖೆಯ ನಂತರ, ಉಪ ಪೊಲೀಸ್ ಆಯುಕ್ತ ಗೌರವ್ ಕುಮಾರ್ ಆಂತರಿಕ ತನಿಖೆಗೆ ಆದೇಶಿಸಿದರು. ಜನವರಿ 4 ರಂದು ಅಮಾನತುಗೊಂಡಿದ್ದ ಅಸ್ಸಿ ಪೊಲೀಸ್ ಔಟ್‌ಪೋಸ್ಟ್ ಇನ್‌ಚಾರ್ಜ್ ಅವರ ನಿರ್ಲಕ್ಷ್ಯವು ತನಿಖೆಯಲ್ಲಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಕಿಂಗ್ ಸ್ಟಾರ್ ಯಶ್ ಜನ್ಮದಿನ; ಇಂದು ಆಗುತ್ತಾ ಆ ವಿಶೇಷ ಘೋಷಣೆ? – Kannada News | Yash’s 40th Birthday: Will KGF 3 Announcement Surprise Fans Today

ನಟ ಯಶ್ (Yash) ಅವರಿಗೆ ಇಂದು (ಜನವರಿ 8) ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರ್ತ್​​ಡೇ ದಿನವನ್ನು ಸಂಭ್ರಮಿಸುತ್ತಿದ್ದಾರೆ. ವಿವಿಧ ಕಡೆಗಳಿಂದ ಅವರಿಗೆ ಬರ್ತ್​​ಡೇ ವಿಶ್​​ಗಳು ಬರುತ್ತಿವೆ. ಹಿಗಿರುವಾಗಲೇ ಯಶ್ ಅವರ ಬರ್ತ್​ಡೇ ದಿನ ಒಂದು ವಿಶೇಷ ಘೋಷಣೆ ಆಗುತ್ತದೆಯೇ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅಷ್ಟಕ್ಕೂ ಏನದು ಆ ಘೋಷಣೆ? ಆ ಬಗ್ಗೆ ಇಲ್ಲಿದೆ ವಿವರ.

ಯಶ್ ಅವರಿಗೆ ಇದು 40ನೇ ವರ್ಷದ ಹುಟ್ಟುಹಬ್ಬ. ಮೈಸೂರಿನಲ್ಲಿ ಜನಿಸಿದ ಅವರು ಬೆಂಗಳೂರಿಗೆ ಬಂದು ನಟನೆ ಆರಂಭಿಸಿದರು. ಮೊದಲು ಧಾರಾವಾಹಿಗಳಲ್ಲಿ ನಟಿಸಿದ ಅವರು ನಂತರ ಸಿನಿಮಾಗಳನ್ನು ಮಾಡಿದರು. ಈಗ ಸೂಪರ್ ಸ್ಟಾರ್ ಆಗಿದ್ದಾರೆ. ಝೀರೋದಿಂದ ಆರಂಭಿಸಿ ಇಂದು ಹೀರೋ ಆಗಿದ್ದಾರೆ. ಈ ಕಾರಣದಿಂದಲೇ ಅವರ ಅಭಿಮಾನಿ ಬಳಗ ಸ್ವಲ್ಪ ಹಿರಿದಾಗಿಯೇ ಇದೆ. ಈಗ ಯಶ್​​ಗೆ ಎಲ್ಲ ಕಡೆಗಳಿಂದ ಜನ್ಮದಿನದ ವಿಶ್ ಬರುತ್ತಿದೆ. ಇದರ ಜೊತೆ ಒಂದು ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅದುವೇ ‘ಕೆಜಿಎಫ್ 3’.

ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ‘ಕೆಜಿಎಫ್’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಬಂದ ‘ಕೆಜಿಎಫ್ 2’ ಕೂಡ ಗಮನ ಸೆಳೆಯಿತು. ಈ ಸಿನಿಮಾದ ಕೊನೆಯಲ್ಲಿ ‘ಕೆಜಿಎಫ್ 3’ ಬಗ್ಗೆ ಘೋಷಣೆ ಮಾಡಲಾಯಿತು. ಇದಕ್ಕಾಗಿ ಅಭಿಮಾನಿಗಳು ಕಾದು ಕುಳಿತುಕೊಳ್ಳುವಂತೆ ಆಯಿತು. ಆದರೆ, ಈವರೆಗೆ ಸಿನಿಮಾದ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: ‘ಹೂವಿನ ಬಾಣದಂತೆ’ ಹುಡುಗಿಗೆ ಜೀ ಕನ್ನಡ ಅವಕಾಶ; ಟ್ರೋಲ್ ಮಾಡಿದವರಿಗೆ ನಿತ್ಯಶ್ರೀ ತಿರುಗೇಟು 

‘ಕೆಜಿಎಫ್ 2’ ರಿಲೀಸ್ ಆಗಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದಿವೆ. ಆದಾಗ್ಯೂ ಇದರ ಬಗ್ಗೆ ಮಾಹಿತಿ ಇಲ್ಲ. ‘ಕೆಜಿಎಫ್ 3’ ಘೋಷಣೆ ಬಗ್ಗೆ ಮಾಹಿತಿ ನೀಡುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿತ್ತು. ಆದರೆ, ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ಇಂದು ಯಶ್ ಬರ್ತ್​​ಡೇ ದಿನ ಈ ಬಗ್ಗೆ ಘೋಷಣೆ ಆಗಬಹುದೇ ಎಂಬ ಕೌತುಕದಲ್ಲಿ ಫ್ಯಾನ್ಸ್ ಇದ್ದಾರೆ. ‘ಟಾಕ್ಸಿಕ್’ ಸಿನಿಮಾದ ಟೀಸರ್ ಇಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Air Quality: ಬೆಂಗಳೂರು, ಮಂಗಳೂರು, ಮೈಸೂರು ಜನರೇ ಎಚ್ಚರ, ಗಾಳಿಯ ಗುಣಮಟ್ಟದಲ್ಲಿ ಭಾರೀ ಇಳಿಕೆ – Kannada News | Bengaluru AQI Update: Pollution High in Hebbal, Peenya; Know Karnataka City Levels

ಬೆಂಗಳೂರು, ಜ.8: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಂದು (ಜನವರಿ 8, 2026) ವಾಯು ಗುಣಮಟ್ಟದ ಸೂಚ್ಯಂಕವು (AQI) ವಿವಿಧ ನಗರಗಳಲ್ಲಿ ವಿಭಿನ್ನವಾಗಿ ದಾಖಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಚಳಿಗಾಲದ ಪ್ರಭಾವ ಮತ್ತು ವಾಹನ ಸಂಚಾರದ ಒತ್ತಡದಿಂದಾಗಿ ಕೆಲವು ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಮಟ್ಟ ಸ್ವಲ್ಪ ಏರಿಕೆಯಾಗಿದೆ. ಸಿಲಿಕಾನ್ ಸಿಟಿಯ ಕೆಲವು ಪ್ರದೇಶಗಳಾದ ಹೆಬ್ಬಾಳ, ಬಿಟಿಎಂ ಲೇಔಟ್ ಮತ್ತು ಪೀಣ್ಯದಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಿದೆ. ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ವಾಹನಗಳ ದಟ್ಟಣೆಯಿಂದಾಗಿ ಮಾಲಿನ್ಯದ ಮಟ್ಟ 170 ದಾಟುವ ಸಾಧ್ಯತೆಯಿದೆ. ರಸ್ತೆ ಧೂಳು ಮತ್ತು ಹಳೆಯ ವಾಹನಗಳ ಹೊಗೆ ಈ ಮಾಲಿನ್ಯಕ್ಕೆ ಮುಖ್ಯ ಕಾರಣಗಳಾಗಿವೆ. ಉಸಿರಾಟದ ತೊಂದರೆ ಇರುವವರು, ಮಕ್ಕಳು ಮತ್ತು ಹಿರಿಯ ನಾಗರಿಕರು ಹೊರಗೆ ಓಡಾಡುವುದನ್ನು ಕಡಿಮೆ ಮಾಡಬೇಕು ಎಂದು ತಜ್ಞರು ಹೇಳಿದ್ದಾರೆ.

ಬೆಂಗಳೂರಿನಂತಹ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಎನ್-95 (N95) ಮಾಸ್ಕ್ ಧರಿಸುವುದು ಸೂಕ್ತ ಎಂದು ಹೇಳಲಾಗಿದೆ. ವಾಯು ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಮುಂಜಾನೆ ವಾಕಿಂಗ್ ಹೋಗುವುದನ್ನು ತಪ್ಪಿಸಿ. ಗಾಳಿಯನ್ನು ಶುದ್ಧವಾಗಿಡಲು ಗಿಡಗಳನ್ನು ಬೆಳೆಸಿ ಅಥವಾ ಸಾಧ್ಯವಾದರೆ ಏರ್ ಪ್ಯೂರಿಫೈಯರ್ ಬಳಸಿ. ಇಂದು ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ‘ಅನಾರೋಗ್ಯಕರ’ ಮಟ್ಟಕ್ಕೆ ತಲುಪಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ನಗರದ ವಿವಿಧ ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಗಮನಾರ್ಹವಾಗಿ ಏರಿಕೆಯಾಗಿದೆ. ಸಾಮಾನ್ಯವಾಗಿ ಮಂಗಳೂರಿನಲ್ಲಿ ಗಾಳಿಯು ಉತ್ತಮವಾಗಿರುತ್ತದೆ, ಆದರೆ ಪ್ರಸ್ತುತ ಚಳಿಗಾಲದ ಹವಾಮಾನ ಮತ್ತು ಸ್ಥಳೀಯ ನಿರ್ಮಾಣ ಕಾಮಗಾರಿಗಳು/ವಾಹನ ಸಂಚಾರದಿಂದಾಗಿ ಮಾಲಿನ್ಯದ ಮಟ್ಟ 150ರ ಗಡಿ ದಾಟಿದೆ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ಹಲವು ಕಡೆ ಭಾಗಶಃ ಮೋಡ ಕವಿದ ವಾತಾವರಣ, ವಾಹನ ಸವಾರರಿಗೆ ಎಚ್ಚರಿಕೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಾಳಿಯ ಗುಣಮಟ್ಟ ಇಂದು ಸ್ವಲ್ಪ ಹದಗೆಟ್ಟಿದೆ. ವಿಶೇಷವಾಗಿ ಹೆಬ್ಬಾಳ ಮತ್ತು ವಿವೇಕಾನಂದ ನಗರದ ಭಾಗಗಳಲ್ಲಿ AQI 150 ದಾಟಿದ್ದು, ಇದು ಉಸಿರಾಟದ ಸಮಸ್ಯೆ ಇರುವವರಿಗೆ ಹಾನಿಕಾರಕವಾಗಬಹುದು. ಬಳ್ಳಾರಿಯಲ್ಲಿ ಗಾಳಿಯ ಗುಣಮಟ್ಟ ಸದ್ಯಕ್ಕೆ ‘ಸಾಧಾರಣ’ ಸ್ಥಿತಿಯಲ್ಲಿದೆ. ಆದರೆ ಗಣಿ ಮತ್ತು ಕೈಗಾರಿಕಾ ಚಟುವಟಿಕೆಗಳ ಸಮೀಪವಿರುವ ಪ್ರದೇಶಗಳಲ್ಲಿ ಧೂಳಿನ ಕಣಗಳ (PM10) ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿದೆ. ಬೆಳಗಾವಿಯಲ್ಲಿ ಇಲ್ಲಿನ ಗಾಳಿಯು ಸಾಧಾರಣ ಗುಣಮಟ್ಟವನ್ನು ಹೊಂದಿದೆ (AQI ಸುಮಾರು 82). ಮುಂಜಾನೆ ಮಂಜು ಹೆಚ್ಚಿರುವುದರಿಂದ ವೃದ್ಧರು ಮತ್ತು ಮಕ್ಕಳು ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಎಂದು ಹೇಳಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಗಾಳಿಯ ಗುಣಮಟ್ಟವು 70 ರಿಂದ 110 ರ ನಡುವೆ ಬದಲಾಗುತ್ತಿದೆ. ಮುಖ್ಯ ರಸ್ತೆಗಳಲ್ಲಿ ವಾಹನಗಳ ಹೊಗೆಯಿಂದಾಗಿ ಗಾಳಿ ಸ್ವಲ್ಪ ಕಲುಷಿತಗೊಂಡಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಗೆಲ್ಲಬೇಕು ಎಂದು ಪ್ರಸಾದ ಕೇಳಿದ ಫ್ಯಾನ್ಸ್; ಹೂವು ಯಾವ ಕಡೆ ಬಿತ್ತು? – Kannada News | Big Boss Gilli Victory: Fans Seek Divine Blessing as Flower Falls for Trophy

ಬಿಗ್ ಬಾಸ್ (Bigg Boss) ಮನೆಯಲ್ಲಿರೋ ಗಿಲ್ಲಿ ನಟನ ಅಭಿಮಾನಿ ವರ್ಗ ತುಂಬಾನೇ ಹಿರಿದಾಗುತ್ತಿದೆ. ಎಲ್ಲಾ ವರ್ಗದ ಜನರು ಅವರಿಗೆ ಅಭಿಮಾನಿಗಳು. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಗಿಲ್ಲಿಗೆ ಬೆಂಬಲ ಕೊಡುತ್ತಿದ್ದಾರೆ. ಅವರು ಕಪ್ ಗೆಲ್ಲಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಈಗ ಈ ವಿಷಯದಲ್ಲಿ ಪ್ರಸಾದ ಕೇಳಲಾಗಿದೆ. ಹೂವು ಯಾವ ಕಡೆ ಬಿತ್ತು, ದೇವರ ಸೂಚನೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಗಿಲ್ಲಿ ನಟ ಅವರು ಹಾಸ್ಯ ಶೋಗಳ ಮೂಲಕ ಗಮನ ಸೆಳೆದವರು. ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಪ್ರಾಪರ್ಟಿ ಕಾಮಿಡಿ ಮೂಲಕ ಎಲ್ಲರ ನಗಿಸುತ್ತಿದ್ದ ಅವರು ಬಿಗ್ ಬಾಸ್​​ಗೆ ಬಂದು ಬೇರೆಯದೇ ರೀತಿಯಲ್ಲಿ ಜನಪ್ರಿಯತೆ ಪಡೆದರು. ಇನ್​​ಸ್ಟಾಗ್ರಾಮ್​​​ನಲ್ಲಿ ಕೇವಲ ಒಂದೂವರೆ ಲಕ್ಷ ಇದ್ದ ಅವರ ಹಿಂಬಾಲಕರ ಸಂಖ್ಯೆ ಈಗ ಮಿಲಿಯನ್ ಸಮೀಪಿಸುತ್ತಿದೆ. ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ಈಗ ಗಿಲ್ಲಿ ಗೆಲ್ಲಲಿ ಎಂದು ಪ್ರಸಾದ ಕೇಳಲಾಗಿದೆ.

ಇದನ್ನೂ ಓದಿ: ಗಿಲ್ಲಿ ಮನಸ್ಸು ಒಳ್ಳೇದು, ನಾನೇ ತಪ್ಪು ತಿಳಿದುಕೊಂಡಿದ್ದೆ; ಮರುಗಿದ ರಘು

ಕೋಟಹಳ್ಳಿಯ ಶನಿಕ್ಷೇತ್ರದಲ್ಲಿ ಅಭಿಮಾನಿಗಳು ಪ್ರಸಾದ ಕೇಳಿದ್ದಾರೆ. ‘ಗಿಲ್ಲಿ ಗೆಲ್ಲಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಅವರು ಗೆಲ್ಲಲಿ ಎಂದು ಅಭಿಮಾನಿಗಳು ಸಾಕಷ್ಟು ಆಸೆ ಇಟ್ಟುಕೊಂಡಿದ್ದಾರೆ. ಅದನ್ನು ನಡೆಸಿಕೊಡಮ್ಮ’ ಎಂದು ಅರ್ಚಕರು ದೇವರ ಬಳಿ ಕೇಳುತ್ತಿದ್ದಂತೆ ಬಲಭಾಗದಿಂದ ಹೂವು ಬಿದ್ದಿದೆ. ಇದು ಶುಭ ಸೂಚನೆ ಎಂದು ಫ್ಯಾನ್ಸ್ ಹಿಗ್ಗುತ್ತಿದ್ದಾರೆ.

ಗಿಲ್ಲಿ ಅವರು ಹೆಚ್ಚು ಗಮನ ಸೆಳೆಯಲು ಅಶ್ವಿನಿ ಹಾಗೂ ಜಾನ್ವಿ ಕೂಡ ಕಾರಣ. ಅವರು ಸುಖಾಸುಮ್ಮನೆ ರಕ್ಷಿತಾನ ಕೆಣಕಿದರು. ಆ ಬಳಿಕ ಗಿಲ್ಲಿ ನಟ ಅವರಿಗೆ ತಿರುಗೇಟು ಕೊಟ್ಟರು. ಇದರಿಂದ ಅವರ ಹೆಸರು ಗಮನ ಸೆಳೆಯಿತು. ಏಟಿಗೆ ತಿರುಗೇಟು ಕೊಡಲು ಗಿಲ್ಲಿ ಎತ್ತಿದ ಕೈ. ಇಷ್ಟೇ ಅಲ್ಲ, ಗಿಲ್ಲಿ ಅವರು ತಮ್ಮ ಹಾಸ್ಯದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಅವರು ಗೆಲ್ಲಬೇಕು ಎಂದು ಫ್ಯಾನ್ಸ್ ಹರಕೆ ಹೊರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ಹಲವು ಕಡೆ ಭಾಗಶಃ ಮೋಡ ಕವಿದ ವಾತಾವರಣ, ವಾಹನ ಸವಾರರಿಗೆ ಎಚ್ಚರಿಕೆ – Kannada News | Karnataka Weather Update: Bengaluru Cold, Coastal Warmth, North Shivers

ಬೆಂಗಳೂರು, ಜ.8: ಇಂದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ (Karnataka Weather Update) ವಾತಾವರಣ ಸಾಮಾನ್ಯವಾಗಿ ಶುಷ್ಕ, ಬಿಸಿಲಿನ ವಾತಾವರಣವಿದ್ದು, ತುಂಬಾ ಪ್ರಶಾಂತವಾಗಿರಲಿದೆ. ಇಂದು ರಾತ್ರಿ ಚಳಿಯ ಮಟ್ಟ ಹೆಚ್ಚಾಗಬಹುದು. ತಾಪಮಾನವು ಸ್ವಲ್ಪ ಮಟ್ಟಿಗೆ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ. ಹಗಲು ಬಿಸಿಲಿನಿಂದ ಕೂಡಿದ್ದು, ರಾತ್ರಿ ಗರಿಷ್ಠ ತಾಪಮಾನ 26°C ಮತ್ತು ಕನಿಷ್ಠ ತಾಪಮಾನ 14°C ಇರುತ್ತದೆ. ಇಂದು ಬೆಳಗಿನ ಜಾವ ಮಂಜು ಮತ್ತು ಮಬ್ಬು ಆವರಿಸಿದ್ದು, ಇದು ವಾಹನ ಸವಾರರ ಮೇಲೆ ಪರಿಣಾಮ ಬೀರಲಿದೆ.

ಇನ್ನು ಕರಾವಳಿ ಪ್ರದೇಶಗಳಾದ ಮಂಗಳೂರು, ಉಡುಪಿ ಭಾಗದಲ್ಲಿ ತಾಪಮಾನವು ಬೆಚ್ಚಗಿರುತ್ತದೆ, ಗರಿಷ್ಠ 28°C ಮತ್ತು 33°C ನಡುವೆ ಮತ್ತು ರಾತ್ರಿಯ ಕನಿಷ್ಠ 20°C ನಿಂದ 22°C ವರೆಗೆ ಇರುತ್ತದೆ . ಉತ್ತರ ಕರ್ನಾಟಕದ ಕಲಬುರ್ಗಿ, ಬೆಳಗಾವಿ ಭಾಗದಲ್ಲಿ ಸಾಮಾನ್ಯವಾಗಿ ವಾತಾವರಣವೂ ಶುಭ್ರವಾಗಿರುತ್ತದೆ, ಹಗಲಿನಲ್ಲಿ ಗರಿಷ್ಠ ತಾಪಮಾನ 19°C ನಿಂದ 20°C ವರೆಗೆ ಇರುತ್ತದೆ ಮತ್ತು ರಾತ್ರಿಗಳು ತಂಪಾಗಿರುತ್ತವೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

ರಾಜ್ಯದ ಬಯಲು ಪ್ರದೇಶಗಳಲ್ಲೇ ಧಾರವಾಡ, ಗದಗ ಮತ್ತು ಬೀದರ್‌ನಲ್ಲಿ ಕನಿಷ್ಠ ತಾಪಮಾನ 11.6°C ದಾಖಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಮುಂದಿನ 48 ಗಂಟೆಗಳಲ್ಲಿ ಇದೇ ರೀತಿಯ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ, ತಾಪಮಾನವು ಇದೇ ರೀತಿ ಇರುತ್ತದೆ ಮತ್ತು ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ.

ಇದನ್ನೂ ಓದಿ: ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್

ಉತ್ತರ ಒಳನಾಡಿನಲ್ಲಿ ಶೀತಗಾಳಿ ಸಕ್ರಿಯವಾಗಿದೆ. ಬೀದರ್, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಗದಗ ಸೇರಿದಂತೆ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-5°C ಕಡಿಮೆ ಇರಲಿದೆ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಗಿಲು ಲೇಔಟ್: ಅಕ್ರಮ ಮನೆಗೆ 1 ರಿಂದ 2 ಲಕ್ಷ ರೂ. ವಸೂಲಿ, ಸರ್ಕಾರಿ ಭೂಮಿ ಕಬಳಿಸಿ ತನ್ನದೇ ಹೆಸರಿಟ್ಟಿದ್ದ ಆರೋಪಿ! – Kannada News | Kogilu Layout Land Scam: Accused Collected Rs 1–2 Lakh per Illegal House After Encroaching Government Land in Bengaluru

ಬೆಂಗಳೂರು, ಜನವರಿ 8: ಕೋಗಿಲು ಲೇಔಟ್​ನಲ್ಲಿ (Kogilu Layout) ಬೀದಿಗೆ ಬಿದ್ದವರು ಮನೆಗಾಗಿ ಎದುರು ನೋಡುತ್ತಿದ್ದಾರೆ. ಪರ-ವಿರೋಧದ ಮಧ್ಯೆಯೇ ಕಾಂಗ್ರೆಸ್ ಸರ್ಕಾರ ನಿರಾಶ್ರಿತರಿಗೆ ಮನೆ ಕೊಡುವುದಕ್ಕೆ ಮುಂದಾಗಿದೆ. ಅರ್ಹತೆ ಹೊಂದಿರುವವರಿಗೆ ಮಾತ್ರವೇ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಕೊಡಲುನಿರ್ಧರಿಸಿದೆ. ಪ್ರಾಥಮಿಕ ಹಂತದಲ್ಲಿ ಅಂದಾಜು 37 ಅರ್ಜಿಗಳು ಮಾತ್ರ ಅರ್ಹತೆ ಹೊಂದಿವೆ. 5 ವರ್ಷಗಳಿಗಿಂತ ಹಳೆಯ ದಾಖಲೆಗಳು ಇದ್ದು, ಅವರು ಇಲ್ಲೇ ನೆಲೆಸಿದ್ದಾರೆ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ. ಆದರೆ ಈಗ ಅಕ್ರಮ ಒತ್ತುವರಿ ಪ್ರಕರಣದಲ್ಲಿ ಒಂದೊಂದೇ ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡವರು ತಲಾ ಒಂದರಿಂದ 2 ಲಕ್ಷ ರೂಪಾಯಿ ನೀಡಿರುವ ವಿಚಾರವೂ ಬಹಿರಂಗವಾಗಿದೆ.

ಭೂ ಕಬಳಿಕೆಯಲ್ಲಿ ಭಾಗಿಯಾಗಿದ್ದ ನಾಲ್ವರ ವಿರುದ್ಧ ಎಫ್​ಐಆರ್

ಅಕ್ರಮವಾಗಿ ಮನೆ ನಿರ್ಮಿಸಲು ಹಣ ಪಡೆದವರಿಗೀಗ ಸಂಕಷ್ಟ ಎದುರಾಗಿದೆ. ಆರೋಪಿಗಳಾದ ವಿಜಯ್, ವಸೀಂ, ಮುನಿ ಆಂಜಿನಪ್ಪ, ರಾಬಿನ್ ಹೀಗೆ ನಾಲ್ವರ ವಿರುದ್ಧ ಜನರಿಂದ ಹಣ ಪಡೆದು, ಸರ್ಕಾರ ಜಾಗ ಅತಿಕ್ರಮಣ ಮಾಡಿದ ಆರೋಪದಡಿ ಕೇಸ್ ದಾಖಲಾಗಿದೆ. ಅದರಲ್ಲೂ A2 ವಾಸೀಂ, ಸರ್ಕಾರಿ ಜಾಗ ಅತಿಕ್ರಮ ಮಾಡಿದ್ದು ಅಲ್ಲದೇ, ಆ ಜಾಗಕ್ಕೆ ವಾಸೀಂ ಲೇಔಟ್ ಅಂತಾ ಹೆಸರಿಟ್ಟಿದ್ದ. ಕೇಸ್ ದಾಖಲಾಗುತ್ತಿದ್ದಂತೆಯೇ ಆರೋಪಿಗಳಾದ ವಾಸಿಮ್ ಬೇಗ್ ಮತ್ತು ವಿಜಯ್‌ಕುಮಾರ್‌ನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಕೋರ್ಟ್‌ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ.

ಸರ್ಕಾರಿ ಜಾಗ ಕಬಳಿಸಿ ಆ ಜಾಗಕ್ಕೆ ತಮ್ಮದೇ ಹೆಸರಿಟ್ಟಿದ ಆರೋಪಿಗಳು!

2023ರಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಆ ಪ್ರಕಾರ 14 ಎಕರೆ 36 ಗುಂಟೆ ಜಮೀನಿನಲ್ಲಿ ಘಟಕ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿತ್ತು. BSWML ವತಿಯಿಂದ 2023 ರಲ್ಲಿ ಬಯೋಮೆಥನೈಸೇಷನ್ ಘಟಕ, ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಟೆಂಡರ್ ಆಹ್ವಾನಿಸಲಾಗಿತ್ತು ಆದರೆ ಘಟಕ ನಿರ್ಮಾಣಕ್ಕೂ ಮೊದಲೇ 4 ಎಕರೆ ಪ್ರದೇಶ ಒತ್ತುವರಿ ಮಾಡಿದ್ದು ಗೊತ್ತಾಗಿದೆ. ಆ ಬಳಿಕ 167 ಕಚ್ಚಾ ಮನೆಗಳನ್ನು ಒತ್ತುವರಿ ತೆರವು ಮಾಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ವೇಳೆ ಮನೆ ಕಟ್ಟಿಕೊಳ್ಳಲು ಹಣ ಪಡೆದು ಅವಕಾಶ ನೀಡಿದ್ದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕೋಗಿಲು ಲೇಔಟ್:​ ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ

ಹೈಕೋರ್ಟ್‌ನಲ್ಲಿ ಕೋಗಿಲು ವಿಚಾರವಾಗಿ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ಬುಧವಾರ ನಡೆದಿದೆ. ಮನೆ ತೆರವಿನಿಂದ ವಸತಿ ರಹಿರತರಾಗಿದ್ದಾರೆ, ಅವರಿಗೆ ಪುನರ್ವಸತಿ ಕಲ್ಪಿಸಬೇಕು ಪರಿಹಾರ ನೀಡಬೇಕು ಎಂದು ಅರ್ಜಿದಾರರ ವಾದಿಸಿದರು. ಇದಕ್ಕೆ ಆಕ್ಷೇಪವೆತ್ತಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, 28 ವರ್ಷಗಳಿಂದ ವಾಸಿಸುತ್ತಿದ್ದಾರೆಂಬುದು ಸುಳ್ಳು ಎಂದರು. ಸರ್ಕಾರದಿಂದ ಊಟ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರತಿವಾದ ಮಂಡಿಸಿದರು. ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶವನ್ನು ಸರ್ಕಾರ ಕೋರಿದ್ದರಿಂದ ವಿಚಾರಣೆಯನ್ನು ಜನವರಿ 22ಕ್ಕೆ ಮುಂದೂಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಚಿತ್ರಕ್ಕೆ ಶಾಕ್; ಸಿನಿಮಾ ರಿಲೀಸ್ ಮುಂದಕ್ಕೆ – Kannada News | Thalapathy Vijay’s ‘Jan Nayagan’ Release Postponed due to Censor issue KVN Announced

ದಳಪತಿ ವಿಜಯ್ (Thalapathy Vijay) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದವರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈಗ ರಾಜಕೀಯಕ್ಕೆ ಬರಲು ಅವರು ಅಡಿಯಾಗುತ್ತಿದ್ದಾರೆ. ಅವರ ಕೊನೆಯ ಚಿತ್ರ ‘ಜನ ನಾಯಗನ್’ಗಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಆದರೆ, ಈಗ ಸಿನಿಮಾ ರಿಲೀಸ್ ತಾತ್ಕಲಿಕವಾಗಿ ಮುಂದಕ್ಕೆ ಹೋಗಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಇದರ ಹಿಂದೆ ರಾಜಕೀಯದ ಕೆಸರೆರೆಚಾಟ ಇರಬಹುದು ಎಂದು ಕೂಡ ಊಹಿಸಲಾಗುತ್ತಿದೆ.

ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್ ಮಾಡಿಸಲು ‘ಕೆವಿಎನ್’ ಸಂಸ್ಥೆ ಡಿಸೆಂಬರ್ 18ರಂದೇ ಸಿನಿಮಾ ಸಲ್ಲಿಕೆ ಮಾಡಿತ್ತು. ಸಿನಿಮಾ ನೋಡಿದ ಮಂಡಳಿ 27 ಕಡೆ ಬದಲವಾಣೆ/ಕಟ್​ಗೆ ಸೂಚನೆ ನೀಡಿತ್ತು. ಇದನ್ನು ಸಿನಿಮಾ ಪಾಲಿಸಿತ್ತು. ನಂತರ ಸಿನಿಮಾನ ಮರು ಸಲ್ಲಿಕೆ ಮಾಡಿತ್ತು. ಆದರೆ, ಇದನ್ನು ಮಂಡಳಿ ಒಪ್ಪಿಲ್ಲ. ವಿಶೇಷ ಮಂಡಳಿಗೆ ಸಿನಿಮಾ ವೀಕ್ಷಿಸಲು ಶಿಫಾರಸು ಮಾಡಲು ಸೂಚನೆ ನೀಡಿತ್ತು. ಸೆನ್ಸಾರ್ ಮಂಡಳಿಯಿಂದ ಸರಿಯಾದ ರೆಸ್ಪಾನ್ಸ್ ಇಲ್ಲ ಆರೋಪವನ್ನೂ ತಂಡ ಮಾಡಿದೆ. ಈ ಎಲ್ಲಾ ಕಾರಣದಿಂದ ಸಿನಿಮಾ ತಂಡ ಆಕ್ರೋಶ ಹೊರಹಾಕಿತ್ತು.

ಈ ವಿಷಯವಾಗಿ ಕೆವಿಎನ್ ನಿರ್ಮಾಣ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ಸಿನಿಮಾ ತಂಡ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದು, ಜನವರಿ 9ಕ್ಕೆ ನೀಡುವ ಸಾಧ್ಯತೆ ಇದೆ. ಸೆನ್ಸಾರ್ ಪ್ರಮಾಣಪತ್ರ ಸಿಗದ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ.ಈ ಬಗ್ಗೆ ಕೆವಿಎನ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಕಾಲ್ತುಳಿತ ದುರಂತದ ಬಳಿಕವೂ ಮತ್ತೆ ದಾಖಲೆ ಪ್ರಮಾಣದಲ್ಲಿ ಜನ ಸೇರಿಸಲು ಸಜ್ಜಾದ ದಳಪತಿ ವಿಜಯ್

ದಳಪತಿ ವಿಜಯ್ ಕೊನೆಯ ಸಿನಿಮಾ ಎಂಬ ಕಾರಣದಿಂದ ‘ಜನ ನಾಯಗನ್’ ಮೇಲಿನ ನಿರೀಕ್ಷೆ ಹೆಚ್ಚಿತ್ತು. ರಿಲೀಸ್​​ಗೂ ಮೊದಲೇ ಮುಂಗಡ ಟಿಕೆಟ್ ಬುಕಿಂಗ್​​ನಿಂದ ಸಿನಿಮಾ ಕೋಟಿ ಕೋಟಿ ಬಿಸ್ನೆಸ್ ಮಾಡಿತ್ತು. ಆದರೆ, ಈಗ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿರುವುದರಿಂದ ಆ ಹಣವನ್ನು ಪ್ರೇಕ್ಷಕನಿಗೆ ಮರಳಿ ನೀಡಬೇಕಾದ ಸವಾಲು ಇದೆ. ಒಂದೊಮ್ಮೆ ವಾರದ ಒಳಗೆ ಎಲ್ಲವೂ ಕ್ಲಿಯರ್ ಆದರೆ, ಜನವರಿ 14ರಂದೇ ಸಿನಿಮಾ ರಿಲೀಸ್ ಆಗಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 6:55 am, Thu, 8 January 26

Source link