All posts by nagaraj11081993

ಸರ್ಕಾರದ ಮನೆಗಳ ಕರ್ಮಕಾಂಡ ಬಯಲು: ಭಯದಲ್ಲೇ ಬದುಕುತ್ತಿವೆ ನೂರಾರು ಕುಟುಂಬಗಳು – Kannada News | KHB Kengeri Flats: Bangaluru Residents Suffer from Poor Quality Housing

ಬೆಂಗಳೂರು, ಜನವರಿ 05: ಸದ್ಯ ರಾಜಧಾನಿಯಲ್ಲಿ ಕೋಗಿಲು (Kogilu Layout Row) ನಿವಾಸಿಗಳ ವಸತಿ ಬಗ್ಗೆ ದೊಡ್ಡ ಚರ್ಚೆ ಕೇಳಿ ಬರ್ತಿದೆ. ಕಡಿಮೆ ದುಡ್ಡನಲ್ಲಿ ಸರ್ಕಾರ ಕೊಗಿಲು ನಿವಾಸಿಗಳಿಗೆ ಮನೆ ನೀಡುವುದಕ್ಕೆ ಮುಂದಾಗಿದೆ. ಆದರೆ ಈ ನಡುವೆ ಇದೀಗ ಲಕ್ಷಾಂತರ ರೂ. ಖರ್ಚು ‌ಮಾಡಿ‌ ಮನೆ ಪಡೆದಿರುವ ಕರ್ನಾಟಕ ಹೌಸಿಂಗ್ ಬೋರ್ಡ್ (KHB) ನಿವಾಸಿಗಳು ನಮ್ಮ ಗೋಳು ಕೇಳಿ ಎನ್ನುತ್ತಾರೆ. ಸದ್ಯ ನೂರಾರು ಕುಟುಂಬಗಳು ಭಯದಲ್ಲೇ ಬದುಕುವಂತಾಗಿದೆ.

ಕೋಗಿಲು ಬಡಾವಣೆ ಅನಧಿಕೃತ ಮನೆಗಳ ತೆರವು ವಿಚಾರದಲ್ಲಿ ರಾಜಕೀಯ ಜೋರಾಗಿದೆ. ಉಚಿತ ಮನೆ ನೀಡಲು ಸರ್ಕಾರವು ಜೋಶ್​​ನಲ್ಲಿದೆ. ಆದರೆ ಸರ್ಕಾರದ್ದೆ ಮನೆಗಳು ಬೀಳುವ ಹಂತದಲ್ಲಿ ಇದ್ದರೂ ಇಲ್ಲಿ ವಾಸಿಸುವ ಜನರ ಗೋಳು ಕೇಳೋರಿಲ್ಲ. ಕರ್ನಾಟಕ ಗೃಹ‌ ಮಂಡಳಿಯ 800 ಫ್ಲಾಟ್​​ಗಳ ಸ್ಥಿತಿ ಡೇಂಜರ್​ ಹಂತದಲ್ಲಿವೆ. ಕಳಪೆ ಕಾಮಗಾರಿಗೆ ನಿವಾಸಿಗಳು ಕಂಗಾಲಾಗಿದ್ದು, ನೂರಾರು ಕುಟುಂಬಗಳು ಭಯದಲ್ಲೇ ಬದುಕುತ್ತಿದ್ದಾರೆ.

ಇದನ್ನೂ ಓದಿ: ಕೋಗಿಲು ಕದನ: ಬಿಜೆಪಿ ವಿರುದ್ಧ ಸಚಿವ ಕೃಷ್ಣಭೈರೇಗೌಡ ಸ್ಫೋಟಕ ಆರೋಪ

ಕೆಂಗೇರಿಯಲ್ಲಿ ಕೆಹೆಚ್​​ಬಿ ಫ್ಲಾಟ್​​ನ ಬಹುಮಹಡಿ ವಸತಿ ಯೋಜನೆಯಲ್ಲಿ ಮನೆ ಪಡೆದವರು ಪರದಾಡುವಂತಾಗಿದೆ. ಸರ್ಕಾರದ ಮೇಲೆ ಭರವಸೆ ಇಟ್ಟು‌ 2012ರಲ್ಲಿ ಫ್ಲಾಟ್ ಖರೀದಿಸಿದ್ದ ಜನರಿಗೆ ಈಗ ಸಂಕಷ್ಟ ಶುರುವಾಗಿದೆ. ನಾವು ಸುಮ್ಮನೆ ಭರವಸೆಗಳನ್ನು ಕೊಡುವುದಿಲ್ಲ, ಆದರೆ ಕೊಟ್ಟ ಭರವಸೆಗಳನ್ನು ಖಂಡಿತ ಈಡೇರಿಸುತ್ತೇನೆ ಎಂದು ಸುಳ್ಳು ಪ್ರಚಾರ ನೀಡಿದ್ದ ಕೆಹೆಚ್​​ಬಿ, ಕೆಹೆಚ್​​ಬಿ ಮಾತು ನಂಬಿ 13 ವರ್ಷಗಳ ಹಿಂದೆಯೇ ಸರಾಸರಿ 40 ಲಕ್ಷ ರೂ ಕೊಟ್ಟು ಫ್ಲಾಟ್ ಖರೀದಿಸಿದ್ದ ಜನರು ಈಗ ಪರದಾಡುವಂತಾಗಿದೆ. ಮನೆಯ ಗೋಡೆಗಳ ಸಿಮೆಂಟ್ ಕಿತ್ತು ಬರ್ತಿದೆ. ಮಳೆಗಾದಲ್ಲಿ ಮನೆಗಳು ಸೋರುತ್ತವೆ. ಗೋಡೆಗಳ ಸಿಮೆಂಟ್ ಕಿತ್ತು ಬರುತ್ತಿದೆ. ಗೋಡೆಯೇ ಕಿತ್ತು ಬರುತ್ತದೆಯೋ ಎಂದು ನಾಗರಜ್​​ ಎನ್ನುವವರು ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟು‌ 6 ಎಕರೆ 20 ಗುಂಟೆ ಜಾಗದಲ್ಲಿರುವ 808 ಫ್ಲಾಟ್​ಗಳು, 13 ವರ್ಷಗಳ ಹಿಂದೆ 3,500 ಸಾವಿರ ಚದರ ಅಡಿಗೆ ಹಣ ಕೊಟ್ಟು ಜನರು ಫ್ಲಾಟ್ ಖರೀದಿಸಿದ್ದರು. ಆದರೆ ಒಂದೇ ವರ್ಷದಲ್ಲಿ ಫ್ಲಾಟ್ ಕಳಪೆ ಕಾಮಗಾರಿ ಬಟಬಯಲಾಗಿತ್ತು. ಸರಾಸರಿ 297, 4006, 405 ಕೋಟಿ ರೂ ವೆಚ್ಚದಲ್ಲಿ ನಿವಾಸಿಗಳು 808 ಫ್ಲಾಟ್​ಗಳು ಖರೀದಿ ಮಾಡಿದ್ದರು. ಇಷ್ಟೆಲ್ಲಾ ಖರ್ಚು ಮಾಡಿ‌ ಮನೆ ಖರೀದಿಸಿದರೂ ಇನ್ನು ಕೂಡ ಖಾತೆ ಸಿಕ್ಕಿಲ್ಲ.‌ ಎನ್​​ಓ ಸಿ ಸರ್ಟಿಫಿಕೇಟ್​​ ಕೂಡ ಫೇಕ್ ನೀಡಲಾಗಿದೆಯಂತೆ. ಈ ನಡುವೆ ಇರುವ ಮನೆಗಳ ಗೋಡೆಗಳು ಕೂಡ ಕೈಗೆ ಕಿತ್ತು ಬರುತ್ತಿವೆ. ಸ್ವಿಮ್ಮಿಂಗ್ ಪೂಲ್ ಕೂಡ ಸಂಪೂರ್ಣ ಕಳಪೆಯಾಗಿದ್ದು, ನಮ್ಮ ಗೋಳು ಕೇಳಿ ಅಂತಿದ್ದಾರೆ.

ಇದನ್ನೂ ಓದಿ: ಕೋಗಿಲು ನಿವಾಸಿಗಳ ಪಟ್ಟಿ ಸಿದ್ಧ: ಲೇಔಟ್​ಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ

ಒತ್ತುವರಿ ಮಾಡಿಕೊಂಡು ಕೋಗಿಲು ಲೇಔಟ್​ನಲ್ಲಿ ಮನೆ ನಿರ್ಮಾಣ ಮಾಡಿದ ನಿವಾಸಿಗಳಿಗೆ ಸರ್ಕಾರ ಹಿಂದೆ ಮುಂದೆ ನೋಡದೆ ಕಡಿಮೆ ಬಜೆಟ್​ನಲ್ಲಿ ಮನೆಗಳನ್ನ ನೀಡಲು ಮುಂದಾಗಿದೆ. ಆದರೆ ಲಕ್ಷಾಂತರ ರೂ ಹಣ ನೀಡಿ ಮನೆ ಪಡೆದ ನಿವಾಸಿಗಳಿಗೆ ಸರ್ಕಾರ ಕಳಪೆ ಮನೆ ನೀಡಿದೆ. ಇನ್ನಾದರೂ ಸರ್ಕಾರ ಕೆಹೆಚ್​ಬಿ ಕೊಂಚ ಇತ್ತ ಗಮನ ಹರಿಬೇಕಿದೆ ಅಂತಿದ್ದಾರೆ ನಿವಾಸಿಗಳು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಗ್ ಬಾಸ್ ಮನೆ ಒಳಗೆ ‘ಡೆವಿಲ್’ ಬಗ್ಗೆ ಗಿಲ್ಲಿ ಮಾತಾಡಿದ್ದ: ಅಸಲಿ ವಿಷಯ ತಿಳಿಸಿದ ಸ್ಪಂದನಾ – Kannada News | Spandana Somanna says Gilli Nata talked about The Devil movie in side Bigg Boss Kannada Season 12 house

ಕಿರುತೆರೆ ನಟಿ ಸ್ಪಂದನಾ ಸೋಮಣ್ಣ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಿಂದ ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ಟಿವಿ9 ಜೊತೆ ಮಾತನಾಡಿ ಬಿಗ್ ಬಾಸ್ ಮನೆಯೊಳಗಿನ ಅನೇಕ ವಿಚಾರಗಳನ್ನು ಸ್ಪಂದನಾ (Spandana Somanna) ಅವರು ಹಂಚಿಕೊಂಡಿದ್ದಾರೆ. ಗಿಲ್ಲಿ ನಟ ಜೊತೆ ಸ್ಪಂದನಾ ಉತ್ತಮ ಬಾಂಧವ್ಯ ಹೊಂದಿದ್ದರು. ಈ ಬಾರಿ ಧನುಷ್ ಅಥವಾ ಗಿಲ್ಲಿ ನಟ ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಸ್ಪಂದನಾ ಹೇಳಿದ್ದಾರೆ. ಅಲ್ಲದೇ, ಬಿಗ್ ಬಾಸ್ ಮನೆ ಒಳಗೆ ಗಿಲ್ಲಿ ನಟ (Gilli Nata) ಅವರು ‘ದಿ ಡೆವಿಲ್’ ಸಿನಿಮಾ ಬಗ್ಗೆ ಮಾತನಾಡಿದ್ದನ್ನು ಕೂಡ ಸ್ಪಂದನಾ ಈಗ ನೆನಪಿಸಿಕೊಂಡಿದ್ದಾರೆ.

ದರ್ಶನ್ ಅಭಿನಯದ ಸಿನಿಮಾದಲ್ಲಿ ತಾವು ಕೂಡ ನಟಿಸಬೇಕು ಎಂಬುದು ಬಹುತೇಕ ಎಲ್ಲ ಕಲಾವಿದರ ಆಸೆ ಆಗಿರುತ್ತದೆ. ಗಿಲ್ಲಿ ನಟ ಅವರು ‘ದಿ ಡೆವಿಲ್’ ಸಿನಿಮಾದಲ್ಲಿ ಒಂದು ಪಾತ್ರವನ್ನು ಮಾಡಿದ್ದಾರೆ. ಡಿಸೆಂಬರ್ 11ರಂದು ಆ ಸಿನಿಮಾ ಬಿಡುಗಡೆ ಆಯಿತು. ಆದರೆ ಸಿನಿಮಾಗೆ ಯಾವ ರೀತಿ ಪ್ರತಿಕ್ರಿಯೆ ಸಿಕ್ಕಿದೆ ಎಂಬುದು ಬಿಗ್ ಬಾಸ್ ಮನೆಯ ಒಳಗೆ ಇರುವ ಗಿಲ್ಲಿಗೆ ತಿಳಿಯಲಿಲ್ಲ.

ಗಿಲ್ಲಿ ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿರುವುದರಿಂದ ಬಿಗ್ ಬಾಸ್ ಮನೆಯ ಒಳಗೆ ಆ ಚಿತ್ರದ ಟ್ರೇಲರ್ ಪ್ರಸಾರ ಮಾಡಬೇಕಿತ್ತು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಆದರೆ ಆ ಸಿನಿಮಾ ಬಗ್ಗೆ ಹೆಚ್ಚು ಪ್ರಸ್ತಾಪ ಆಗಲೇ ಇಲ್ಲ. ಆದರೆ ಗಿಲ್ಲಿ ನಟ ಅವರು ಮನೆಮಂದಿಯ ಜೊತೆ ‘ದಿ ಡೆವಿಲ್’ ಸಿನಿಮಾ ಬಗ್ಗೆ ತುಂಬಾ ಮಾತುಗಳನ್ನು ಆಡಿದ್ದರು ಎಂದು ಸ್ಪಂದನಾ ಹೇಳಿದ್ದಾರೆ.

‘ಡೆವಿಲ್ ಸಿನಿಮಾ ಬಗ್ಗೆ ಗಿಲ್ಲಿ ಮಾತನಾಡುತ್ತಿದ್ದ. ಈ ವಾರ ರಿಲೀಸ್ ಆಗಿರಬಹುದು ಎನ್ನುತ್ತಿದ್ದ. ದೊಡ್ಡ ಪಾತ್ರ ಅಲ್ಲ, ಆದರೆ ಇಂಟರ್​ವಲ್​ನಲ್ಲಿ ತಾನೇ ಬರುವುದು ಎಂಬ ವಿಷಯವನ್ನು ಹೇಳಿಕೊಂಡಿದ್ದ. ಅದರ ಬಗ್ಗೆ ಅವನು ಬಹಳ ಖುಷಿಯಾಗಿದ್ದ. ಗೆಸ್ಟ್ ಯಾರೋ ಬಂದಾಗ ಕೂಡ ಡೆವಿಲ್ ಬಗ್ಗೆ ಹೇಳಿದಾದ ಗಿಲ್ಲಿ ತುಂಬಾ ಹೆಮ್ಮೆಪಟ್ಟಿದ್ದ’ ಎಂದು ಸ್ಪಂದನಾ ಸೋಮಣ್ಣ ಅವರು ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಫೀಲಿಂಗ್ಸ್: ಓಪನ್ ಆಗಿ ಹೇಳಿದ ಕಿಚ್ಚ ಸುದೀಪ್

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಹೋಗುವುದಕ್ಕೂ ಮುನ್ನವೇ ಗಿಲ್ಲಿ ನಟ ಅವರು ಫೇಮಸ್ ಆಗಿದ್ದರು. ಯೂಟ್ಯೂಬ್ ವಿಡಿಯೋ ಹಾಗೂ ರಿಯಾಲಿಟಿ ಶೋಗಳ ಮೂಲಕ ಅವರು ಮಿಂಚಿದ್ದರು. ಆಗಲೇ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಬರಲು ಆರಂಭಿಸಿತ್ತು. ಬಿಗ್ ಬಾಸ್ ಶೋಗೆ ಬಂದ ಬಳಿಕ ಅವರು ರಾಜ್ಯಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹುಟ್ಟಿಸಿದ ಮಗನ ಬಲಿ ಪಡೆದ ತಂದೆ: ಅಪ್ಪನ ಚಟಕ್ಕೆ ಹೋಯ್ತು ಪುತ್ರನ ಪ್ರಾಣಪಕ್ಷಿ – Kannada News | Chikkamagaluru: Father Kills Son Over Alcohol Dispute

ಚಿಕ್ಕಮಗಳೂರು, ಜನವರಿ 05: ಕುಡಿತದ ಚಟ ಓರ್ವ ವ್ಯಕ್ತಿಯನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗಬಲ್ಲದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಎಣ್ಣೆ ವಿಚಾರವಾಗಿ ಶುರುವಾದ ಸಣ್ಣ ಗಲಾಟೆ ಕೊನೆಗೆ ತಂದೆಯಿಂದಲೇ (Father) ಮಗನ ಕೊಲೆ (murder) ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ರವಿವಾರ ಘಟನೆ ನಡೆದಿದೆ. ಮಗ ಪ್ರದೀಪ್(40) ನನ್ನ ತಂದೆ ರಮೇಶ್ ಆಚಾರ್(65) ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನಡೆದದ್ದೇನು?

ಅಪ್ಪ ಮತ್ತು ಮಗ ಇಬ್ಬರೂ ಕುಡಿತದ ಚಟಕ್ಕೆ ದಾಸರಾಗಿದ್ದರು. ಅದಷ್ಟೇ ಅಲ್ಲದೆ ನಾ ಮೇಲು, ತಾ ಮೇಲು ಎಂದು ಪೈಪೋಟಿಗೆ ಇಳಿಯುತ್ತಿದ್ದರು. ಹೀಗೆ ಸ್ನೇಹಿತರಂತೆ ಒಟ್ಟೊಟ್ಟಿಗೆ ಕೂತು ನನಗೆ ಜಾಸ್ತಿ, ನನಗೆ ಕಮ್ಮಿ ಅಂತ ಹಠಕ್ಕೆ ಬಿದ್ದು ಕುಡಿಯುತ್ತಿದ್ದರು. ಅಪ್ಪ-ಮಗನ ನಡುವಿನ ಎಣ್ಣೆ ವಿಚಾರವಾಗಿ ಆರಂಭವಾದ ಗಲಾಟೆ ಮಗನ ಕೊಲೆಯಲ್ಲಿ ಅಂತ್ಯವಾಗಿದೆ.‌

ಇದನ್ನೂ ಓದಿ: ಹಿಂದೂ ಯುವತಿಯನ್ನು ಮುಸ್ಲಿಂ ವ್ಯಕ್ತಿ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ

ತಂದೆ ರಮೇಶ್​​, ಎದೆಯೆತ್ತರಕ್ಕೆ ಬೆಳೆದಿದ್ದ ಮಗನಿಗೆ ಬುದ್ಧಿ ಹೇಳಿ ಸರಿ‌ ದಾರಿಗೆ ತರಬೇಕಿತ್ತು. ಆದರೆ ತಾವೇ ಮಗನನ್ನ ಜೊತೆಗೆ ಕೂರಿಸಿಕೊಂಡು ಎಣ್ಣೆ ಕುಡಿಯುತ್ತಿದ್ದರು, ಅಲ್ಲದೆ ಈಗ ಮಗನ ಹೆಣವನ್ನೇ ಉರುಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಆನೆಗುಂಡಿ ಗ್ರಾಮದ ನಿವಾಸಿ ರಮೇಶ್, ಚಿಕ್ಕ ವಯಸ್ಸಿನಿಂದಲೂ ಕೂಡ ಕುಡಿತದ ಚಟಕ್ಕೆ ದಾಸನಾಗಿದ್ದರು. ತಾವು ಮಾತ್ರ ಕುಡಿದಿದ್ದರೆ ಏನೂ ಆಗ್ತಿರಲಿಲ್ಲ, ಆದರೆ ಜೊತೆಗೆ ತಮ್ಮ ಮಗನನ್ನು ಒಟ್ಟಿಗೆ ಕೂರಿಸಿಕೊಂಡು ಕುಡಿಯುವುದಕ್ಕೆ ಆರಂಭಿಸಿದ್ದರು.

ಅಪ್ಪ-ಮಗ ಇಬ್ಬರೂ ಎಣ್ಣೆ ಕುಡಿದ ಮೇಲೆ ನಿತ್ಯ ಜಗಳ ಮಾಡಿಕೊಳ್ಳುತ್ತಿದ್ದರು. ಕುಡುಕ ತಂದೆ ಮತ್ತು ಮಗನ ಕಾಟಕ್ಕೆ ತಾಯಿ ಮಂಜುಳಾ ಮನೆ ಬಿಟ್ಟು ಹೋಗಿದ್ದರು. ಹೆಣ್ಣು ದಿಕ್ಕಿಲ್ಲದ ಮನೆಯಲ್ಲಿ ಅಪ್ಪ-ಮಗ ಇಬ್ಬರದ್ದೇ ಕಾರು-ಬಾರು. ಹೇಳೋರು, ಕೇಳೋರು ಯಾರು ಇಲ್ಲದ್ದಿದ್ದರಿಂದ ನಿತ್ಯ ಬೆಳಗ್ಗೆಯಿಂದ ಸಂಜೆವರೆಗೂ ಕುಡಿಯೋದನ್ನೇ ಕಾಯಂ ವೃತ್ತಿ ಮಾಡಿಕೊಂಡಿದ್ದರು. ನನಗೆ ಎಣ್ಣೆ ಕಡಿಮೆ, ನಿನಗೆ ಜಾಸ್ತಿ ಅನ್ನೋ ವಿಚಾರಕ್ಕೆ ರವಿವಾರದಂದು ಗಲಾಟೆ ನಡೆದಿದೆ. ಈ ವೇಳೆ ರಮೇಶ್, ಮಗ ಪ್ರದೀಪನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಮನೆಯಲ್ಲಿ ಅಪ್ಪ-ಮಗ ಇಬ್ಬರೇ ವಾಸವಿದ್ದರು. ಕುಡಿದು ಕ್ಷುಲ್ಲಕ ಕಾರಣಕ್ಕೆ ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಇವರ ನಿರಂತರ ಜಗಳದ ಕಾಟ ತಡೆಯಲಾರದೆ ಪ್ರದೀಪ್ ತಾಯಿ ಈ ಮೊದಲೇ ಮನೆ ಬಿಟ್ಟು ಹೋಗಿದ್ದರು. ನಿನ್ನೆ ಅಡಕೆ ಮಾರಿ ಬಂದಿದ್ದು, ಅದರಿಂದ ಸಿಕ್ಕ ಹಣದಲ್ಲಿ ರಾತ್ರಿ ಜೊಡೆತ್ತಿನಂತಿದ್ದ ಅಪ್ಪ-ಮಗ ಇಬ್ಬರೂ ಕಂಠಪೂರ್ತಿ ಕುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಅಪ್ಪ-ಮಗನ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ, ರಮೇಶ್ ಆಚಾ‌ರ್ ತನ್ನ ಮಗ ಪ್ರದೀಪ್‌ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಪೊಲೀಸ್​ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ತಂದೆ

ಇಡೀ ರಾತ್ರಿ ಪ್ರದೀಪ್ ರಕ್ತದ ಮಡುವಿನಲ್ಲಿ ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಬೆಳಿಗ್ಗೆ ರಮೇಶ್, ಮಗನ ಮೃತದೇಹವನ್ನು ಮನೆಯಿಂದ ಹೊರಕ್ಕೆ ಎಳೆದು ತಂದಿದ್ದಾನೆ. ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ‌ ಸ್ಥಳಕ್ಕೆ ಬಂದ ಬಾಳೂರು ಠಾಣೆಯ ಪೊಲೀಸರೇ ಒಂದು ಕ್ಷಣ‌ ಶಾಕ್​​ ಆಗಿದ್ದರು. ಸ್ಥಳ‌ ಪ‌ರಿಶೀಲನೆ ಮಾಡಿದ ಪೊಲೀಸರು ತಂದೆ  ರಮೇಶ್​​ರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ‌ ಎಣ್ಣೆ ವಿಚಾರಕ್ಕೆ ಮಗನ ಕೊಲೆ ಮಾಡಿರುವುದಾಗಿ ರಮೇಶ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಯಲ್ಲಾಪುರ: ವಿವಾಹಿತ ಮಹಿಳೆ ಜತೆ ಯುವಕನ ಲವ್, ಮದುವೆಯಾಗಲು ಒಪ್ಪದ್ದಕ್ಕೆ ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿ

‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ’ ಎಂಬ ಮಾತಿನಂತೆ ಮಗನನ್ನು ಚೆನ್ನಾಗಿ ಬೆಳೆಸಿ ಬುದ್ಧಿವಂತನನ್ನಾಗಿ ಮಾಡಬೇಕಿದ್ದ ಅಪ್ಪನೇ ತನ್ನ ಜೊತೆಗೆ ಕೂರಿಸಿಕೊಂಡು ಕುಡಿಯೋದನ್ನ ಕಲಿಸಿ, ಇದೀಗ ತಾವೇ ತಮ್ಮ ಮಗನನ್ನ ಕೊಲೆ ಮಾಡಿರುವುದು ಮಾತ್ರ ದುರಂತವೇ ಸರಿ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:20 pm, Mon, 5 January 26

Source link

‘ಧುರಂಧರ್’ ನಿರ್ದೇಶಕ ದೇವರ ಮಗ: ಸಿಕ್ಕಾಪಟ್ಟೆ ಹೊಗಳಿದ ವಿವೇಕ್ ಅಗ್ನಿಹೋತ್ರಿ – Kannada News | Vivek Agnihotri shares his review after watching Dhurandhar movie

ಆದಿತ್ಯ ಧಾರ್ ನಿರ್ದೇಶನ ಮಾಡಿದ ‘ಧುರಂಧರ್’ (Dhurandhar) ಸಿನಿಮಾವನ್ನು ನೋಡಿ ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ವಿಮರ್ಶೆ ತಿಳಿಸುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಈಗ ‘ಧುರಂಧರ್’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಅವರಿಗೆ ಈ ಸಿನಿಮಾ ತುಂಬಾ ಇಷ್ಟ ಆಗಿದೆ. ಆದಿತ್ಯ ಧಾರ್ (Aditya Dhar) ಅವರ ನಿರ್ದೇಶನ, ಕಲಾವಿದರ ನಟನೆ ಹಾಗೂ ತಂತ್ರಜ್ಞರ ಕೆಲಸವನ್ನು ವಿವೇಕ್ ಅಗ್ನಿಹೋತ್ರಿ ಅವರು ಮನಸಾರೆ ಹೊಗಳಿದ್ದಾರೆ.

‘2 ತಿಂಗಳ ಬಳಿಕ ಭಾರತಕ್ಕೆ ವಾಪಸ್ ಬಂದಿದ್ದೇನೆ. ಈಗ ಮಾಡಿದ ಮೊದಲ ಕೆಲಸ ಎಂದರೆ ಧುರಂಧರ್ ಸಿನಿಮಾ ನೋಡಿದ್ದು. ಅದ್ಭುತ ಮತ್ತು ಹೆಮ್ಮೆ – ಈ ಎರಡೇ ಪದಗಳು ನನ್ನ ಮನಸ್ಸಿಗೆ ಬಂದಿದ್ದು. ಈ ರೀತಿಯ ಸಿನಿಮಾ ಮಾಡುವುದು ಎಷ್ಟು ಕಷ್ಟ ಎಂಬುದು ಸಿನಿಮಾ ಮೇಕಿಂಗ್ ಬಲ್ಲವರಿಗೆ ಮಾತ್ರ ಗೊತ್ತು. ಈ ರೀತಿಯ ಸಿನಿಮಾ ತಂತಾನೇ ಆಗುವುದಿಲ್ಲ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದಾರೆ.

‘ಪ್ರೊಡಕ್ಷನ್ ಡಿಸೈನ್ ಬಹಳ ಚೆನ್ನಾಗಿದೆ, ಸಂಗೀತ ಅತ್ಯದ್ಭುತವಾಗಿದೆ. ವೀಕಾಸ್ ನೌಲಂಕಾ ಅವರ ಛಾಯಾಗ್ರಹಣ ಹೊಸ ಛಾಯಾಗ್ರಾಹಕರಿಗೆ ಪಠ್ಯಪುಸ್ತಕದ ರೀತಿ ಇದೆ. ನಟನೆ ಬಗ್ಗೆ ಹೆಚ್ಚು ಹೇಳಲೇಬೇಕು. ಚಿಕ್ಕ ಚಿಕ್ಕ ಪಾತ್ರಧಾರಿಗಳು ಕೂಡ ಅದ್ಭುತವಾಗಿ ಅಭಿನಯಿಸಿದ್ದಾರೆ. ಅದೇ ಧುರಂಧರ್ ಸಿನಿಮಾದ ನಿಜವಾದ ಗೆಲುವು. ಎಲ್ಲ ವಿಭಾಗಗಳು ಚೆನ್ನಾಗಿ ಸಿಂಕ್ ಆಗಿವೆ. ಇದು ಆಕಸ್ಮಿಕವಾಗಿ ಆಗುವುದಿಲ್ಲ’ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.

‘ಇದು ಸಂಪೂರ್ಣವಾಗಿ ನಿರ್ದೇಶಕರ/ಬರಹಗಾರರ ಸಿನಿಮಾ ಎಂಬುದು ಗೊತ್ತಾಗುತ್ತದೆ. ಆದಿತ್ಯ ಧಾರ್ ಅವರೇ, ನಾನು ಯಾವಾಗಲೂ ನಿಮ್ಮ ಕೆಲಸವನ್ನು ಮೆಚ್ಚಿದ್ದೇನೆ. ಮುಖ್ಯವಾಗಿ ನೀವು ಸಿನಿಮಾ ಮಾಡುವ ಸ್ಕೇಲ್ ಮತ್ತು ಡಿಸೈನ್ ದೊಡ್ಡದಾಗಿರುತ್ತದೆ. ಇದು ಇನ್ನೊಂದು ಲೆವೆಲ್​​ನಲ್ಲಿದೆ. ನಾನು ಬಹಳ ಹೆಮ್ಮೆಯಿಂದ ಸಿನಿಮಾ ನೋಡಿದೆ. ಇದು ಭಾರತೀಯ ಚಿತ್ರರಂಗದ ಹೆಮ್ಮೆ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಹೊಗಳಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ‘ಧುರಂಧರ್’ ಬಗ್ಗೆ ಮನಸಾರೆ ಮಾತಾಡಿದ ಶಿವರಾಜ್​ಕುಮಾರ್

‘ನೀವು ಧನ್ಯ. ನಿಜಕ್ಕೂ ನೀವು ದೇವರ ಮಗ. ನಿಮಗೆ ಇನ್ನಷ್ಟು ಶಕ್ತಿ ಸಿಗಲಿ. ಹೀಗೆ ಮುಂದುವರಿಯಿರಿ. ಇನ್ನೂ ಎತ್ತರಕ್ಕೆ ಬೆಳೆಯಿರಿ. ಯುವ ಜನತೆ ಇಂಥ ಕೆಲಸ ಮಾಡಿದಾಗ ಭಾರತೀಯ ಚಿತ್ರರಂಗ ಬೆಳೆಯುತ್ತದೆ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಆದಿತ್ಯ ಧಾರ್​​ಗೆ ಮೆಚ್ಚುಗೆ ಸೂಚಿಸಿದ್ದಾರೆ. ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾಗೆ ಈಗಾಗಲೇ 774 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅರಸು ದಾಖಲೆ ಮುರಿಯಲಿರುವ ಸಿದ್ದರಾಮಯ್ಯ: ಬೆಂಬಲಿಗರಿಂದ ನಾಟಿ ಕೋಳಿ ಔತಣ – Kannada News | Long Term CM: Siddaramaiah fans arrange 2 thousand KG chicken banquet In Bengaluru On Jan 6th

ಬೆಂಗಳೂರು, (ಜನವರಿ 05): ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗುವ ಬಯಕೆಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದರು. ಸದ್ಯ ಆ ಆಸೆ ಈಡೇರಲಿದೆ. ಹೌದು…ಸಿದ್ದರಾಮಯ್ಯ ಅವರು ನಾಳೆ ಅಂದರೆ ಜನವರಿ 6ರಂದು ರಾಜ್ಯದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎನ್ನುವ ದಾಖಲೆ ಬರೆಯಲಿದ್ದಾರೆ. ಇದರೊಂದಿಗೆ ದಿವಂಗತ ದೇವರಾಜ ಅರಸು ಅವರ ಅವರನ್ನು ಹಿಂದಿಕ್ಕಿ ಹೊಸ ದಾಖಲೆ ಬರೆಯಲಿದ್ದಾರೆ. ಈ ಸಂಭ್ರಮವನ್ನು ವಿಭಿನ್ನವಾಗಿ ”ನಾಟಿ ಕೋಳಿ ಔತಣಕೂಟ” ಆಯೋಜಿಸಿ ಸಂಭ್ರಮಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

ಜನವರಿ 6ರಂದು ನೆಲಮಂಗಲದ ಭಕ್ತನ ಪಾಳ್ಯದಲ್ಲಿ ನಾಟಿ ಕೋಳಿ ಔತಣಕೂಟ ನಡೆಯಲಿದ್ದು, ನಾಟಿಕೋಳಿ ಸಾಂಬಾರ್, ಮುದ್ದೆ, ಕಾಳು ಗೊಜ್ಜು, ರೈಸ್, ಪುಲಾವ್ ಮತ್ತು ಸಿಹಿತಿಂಡಿ ನೀಡಲು ತೀರ್ಮಾನಿಸಲಾಗಿದೆ. ಐದರಿಂದ ಹತ್ತು ಸಾವಿರ ಜನರು ಸೇರುವ ನಿರೀಕ್ಷೆ ಇರಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ: ಕಾಂಗ್ರೆಸ್​​ಗೆ ಟಕ್ಕರ್​ ಕೊಡಲು ಕೇಸರಿ ಪಡೆ ರಣತಂತ್ರ – Kannada News | Karnataka BJP Core Committee Meeting: Major Decision

ಬೆಂಗಳೂರು, ಜನವರಿ 05: ಮಲ್ಲೇಶ್ವರಂನ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು, ಮೀಟಿಂಗ್​ನಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಕೋಗಿಲು ಲೇಔಟ್​​ನಲ್ಲಿ ಅಕ್ರಮ ಮನೆಗಳ ತೆರವು, ಬ್ಯಾನರ್​​ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದಿರುವ ಮಾರಾಮಾರಿ, ಪರಿಷತ್​​ ಚುನಾವಣೆ ಮತ್ತು ವಿಧಾನಸಭೆ ಬೈ ಎಲೆಕ್ಷನ್​ ಸೇರಿ ಪ್ರಮುಖ ವಿಚಾರಗಳ ಬಗ್ಗೆ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಪಕ್ಷದ ಮುಂದಿನ ನಡೆ ಬಗ್ಗೆಯೂ ಸಭೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದೆ.

ಸಭೆಯ ತೀರ್ಮಾನಗಳೇನು?

ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಗಲಾಟೆ ವಿಚಾರದಲ್ಲಿ ಬಳ್ಳಾರಿಯಲ್ಲಿ ಹೋರಾಟ ನಡೆಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಕೋಗಿಲು ಲೇಔಟ್​ನಲ್ಲಿ ಅಕ್ರಮ ಮನೆಗಳ ತೆರವು ಸಂಬಂಧ ರಾಜ್ಯವ್ಯಾಪಿ ಹೋರಾಟದ ಜೊತೆಗೆ ಕೋರ್ಟ್​ ಮೊರೆ ಹೋಗಲು ಬಿಜೆಪಿ ತೀರ್ಮಾನಿಸಿದೆ. ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಮೈತ್ರಿ ಪಕ್ಷ JDS ಜತೆ ಚರ್ಚಿಸಿ, ಹೈಕಮಾಂಡ್​ಗೆ ಸಂಭಾವ್ಯ ಪಟ್ಟಿ ಕಳುಹಿಸಲು ನಿರ್ಧರಿಸಲಾಗಿದೆ. ಬಾಗಲಕೋಟೆ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಗಳ ಬೈಎಲೆಕ್ಷನ್​​​ ಕುರಿತು 2 ವೀಕ್ಷಕರ ಸಮಿತಿ ರಚನೆಗೆ ತೀರ್ಮಾನ ಆಗಿದ್ದು, ಬಳ್ಳಾರಿ ಘರ್ಷಣೆ ವಿಚಾರದಲ್ಲಿ ಸಿಬಿಐ ತನಿಖೆಗೆ ಆಗ್ರಹಿಸಲು ಕೂಡ ಕೇಸರಿ ಪಡೆ ನಿರ್ಧರಿಸಿದೆ.

ಇದನ್ನೂ ಓದಿ: ಕೋಗಿಲು ನಿವಾಸಿಗಳ ಪಟ್ಟಿ ಸಿದ್ಧ; ಲೇಔಟ್​ಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ

ಸಭೆಯಲ್ಲಿ ಯಾರೆಲ್ಲ ಭಾಗಿ?

ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಗೋವಿಂದ ಕಾರಜೋಳ, ವಿಪಕ್ಷ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ, ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ಡಾ. ಅಶ್ವತ್ಥ್ ನಾರಾಯಣ, ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್​​ ಕೋರ್​​ ಕಮಿಟಿ ಸಭೆಯಲ್ಲಿ ಭಾಗಿಯಾಗಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:25 pm, Mon, 5 January 26

Source link

ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಗೌಡ ಆಕ್ರೋಶ – Kannada News | Gilli Nata Ashwini Gowda Rashika Shetty Bigg Boss Kannada Season 12 new episode promo

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನ ಜನವರಿ 4ರ ಸಂಚಿಕೆಯಲ್ಲಿ ಅಶ್ವಿನಿ ಗೌಡ ವಿರುದ್ಧ ಗಿಲ್ಲಿ ನಟ, ರಾಶಿಕಾ ಶೆಟ್ಟಿ ಮುಂತಾದವರು ಹರಿಹಾಯ್ದಿದ್ದರು. ಅದರಿಂದಾಗಿ ಅಶ್ವಿನಿ ಗೌಡ ಅವರು ಯಾರ ಜೊತೆಯೂ ಸೇರದೇ ಕೇವಲ ಧ್ರುವಂತ್ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ರಾಶಿಕಾ ಶೆಟ್ಟಿ ಮತ್ತು ಗಿಲ್ಲಿ ನಟ (Gilli Nata) ಸೇರಿಕೊಂಡು ಅಶ್ವಿನಿಯನ್ನು ಹೀಯಾಳಿಸಿದ್ದಾರೆ. ಅಶ್ವಿನಿಗೆ ಕ್ಯಾಪ್ಟನ್ ಆಗುವ ಸಾಮರ್ಥ್ಯ ಇಲ್ಲ ಎಂದು ಗಿಲ್ಲಿ ಮತ್ತು ರಾಶಿಕಾ ಹೇಳಿದರು. ಅದನ್ನು ಕೇಳಿಸಿಕೊಂಡು ಅಶ್ವಿನಿ ಗೌಡ ಗರಂ ಆದರು. ‘ಹೋದ ತಕ್ಷಣ ಮದುವೆ ಆಗು. ಮೂಳೆ ಬಿದ್ದು ಹೋಗುವಷ್ಟರಲ್ಲಿ ಮದುವೆ ಆಗು. ನೀವೆಲ್ಲ ಕ್ಯಾಪ್ಟನ್ ಆಗಿ ಏನು ದಬಾಕಿದ್ದೀರಿ ಅನ್ನೋದು ಗೊತ್ತಿದೆ’ ಎಂದು ಅಶ್ವಿನಿ ಗೌಡ (Ashwini Gowda) ಅವರು ಹೇಳಿದರು. ಜನವರಿ 5ರ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ. ಶೀಘ್ರದಲ್ಲೇ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಂಧ್ರಪ್ರದೇಶದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ಅವಘಡ; ಸ್ಥಳೀಯ ನಿವಾಸಿಗಳ ಸ್ಥಳಾಂತರ – Kannada News | Major gas leak in Andhra Pradesh Konaseema local residents evacuated

ಕೊನಸೀಮಾ, ಜನವರಿ 5: ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಪೈಪ್‌ಲೈನ್‌ನಿಂದ ಭಾರಿ ಅನಿಲ ಸೋರಿಕೆಯಾಗಿದ್ದು, ಆ ಗ್ಯಾಸ್​​ಗೆ ಬೆಂಕಿ (Fire Accident) ಹೊತ್ತಿಕೊಂಡಿದೆ. ಇದರಿಂದಾಗಿ ಇಡೀ ಹಳ್ಳಿಯಲ್ಲಿ ಬೆಂಕಿಯ ದಟ್ಟ ಹೊಗೆ ತುಂಬಿದೆ. ಮಾಲಿಕಿಪುರಂ ಮಂಡಲದ ಇರುಸಮಂಡದ ಬಳಿ ಅನಿಲ ಸೋರಿಕೆ ಮತ್ತು ಬೆಂಕಿಯಿಂದಾಗಿ ಇಡೀ ಗ್ರಾಮವೇ ಹೊಗೆಯಿಂದ ಆವೃತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಅಧಿಕಾರಿಗಳು ಆ ಗ್ರಾಮದ ಜನರನ್ನು ಅವರ ಮನೆಗಳಿಂದ ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಈ ಘಟನೆಯಲ್ಲಿ ಇಲ್ಲಿಯವರೆಗೆ ಯಾರೂ ಗಾಯಗೊಂಡಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅದ್ಧೂರಿಯಾಗಿ ನಡೆದ ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ ಭಕ್ತರು – Kannada News | Meghalaya Governor Inaugurates Grand Gavisiddheshwara Rathotsava in Koppal

ಕೊಪ್ಪಳ, ಜನವರಿ 05: ಐತಿಹಾಸಿಕ ಗವಿಸಿದ್ದೇಶ್ವರ ಮಹಾರಥೋತ್ಸವವು ಭಕ್ತಿ ಮತ್ತು ಸಡಗರದಿಂದ ಜರುಗಿತು. ರಥೋತ್ಸವಕ್ಕೆ ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅವರು ಚಾಲನೆ ನೀಡಿದ್ದು, ಸುಮಾರು 5 ಲಕ್ಷ ಜನರು ಈ ವೇಳೆ ಭಾಗಿಯಾಗಿದ್ದರು. ರಾಜ್ಯದ ಅನೇಕ ಜನಪ್ರತಿನಿಧಿಗಳು  ಸ್ವ ಇಚ್ಛೆಯಿಂದ ಗವಿಸಿದ್ದೇಶ್ವರನ ಆಶೀರ್ವಾದ ಪಡೆಯಲು ಮತ್ತು ಈ ಪುಣ್ಯ ಕಾರ್ಯಕ್ಕೆ ಸಾಕ್ಷಿಯಾಗಲು ಆಗಮಿಸಿದ್ದರು. ಕೇಂದ್ರ ಸಚಿವ ವಿ.ಸೋಮಣ್ಣ, ಸಚಿವ ಶಿವರಾಜ ತಂಗಡಗಿ, ಸಂಸದರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿ ಹಲವರು ಉಪಸ್ಥಿತರಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚರ್ಮದ ಸಮಸ್ಯೆಗಳನ್ನು ನಿವಾರಿಸಬಲ್ಲುದು ಪತಂಜಲಿಯ ಈ ಆಯುರ್ವೇದ ತೈಲ – Kannada News | Patanjali Divya Kayakalp oil helps in overcoming various skin problems

ಇಂದಿನ ವೇಗದ ಜೀವನದಲ್ಲಿ ಚರ್ಮದ ಸಮಸ್ಯೆಗಳು (skin problems) ಹೆಚ್ಚಾಗಿ ಕಂಡುಬರುತ್ತಿವೆ. ಬದಲಾಗುತ್ತಿರುವ ಜೀವನಶೈಲಿ, ಮಾಲಿನ್ಯ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಒತ್ತಡವು ಚರ್ಮದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ತುರಿಕೆ, ರಿಂಗ್‌ವರ್ಮ್, ಫಂಗಲ್ ಇನ್ಫೆಕ್ಷನ್, ಶುಷ್ಕತೆ ಮತ್ತು ಉರಿಯಂತಹ ಸಮಸ್ಯೆಗಳು ಅನೇಕ ಜನರನ್ನು ಕಾಡುತ್ತವೆ. ಪತಂಜಲಿಯ ದಿವ್ಯ ಕಾಯಕಲ್ಪ್ ತೈಲವು (Patanjali Divya Kayakalp oil) ಚರ್ಮದ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ. ಈ ಎಣ್ಣೆಯನ್ನು ನೈಸರ್ಗಿಕ ಪದಾರ್ಥಗಳಿಂದ ರೂಪಿಸಲಾಗಿದೆ.

ದಿವ್ಯ ಕಾಯಕಲ್ಪ್ ತೈಲವನ್ನು ಪ್ರಾಥಮಿಕವಾಗಿ ಸಾಮಾನ್ಯ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಎಣ್ಣೆ ಆರೋಗ್ಯಕರ ಚರ್ಮವನ್ನು ಶಮನಗೊಳಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ನಿಯಮಿತವಾಗಿ ಮತ್ತು ಸರಿಯಾಗಿ ಬಳಸಿದಾಗ ಮಾತ್ರ ಇದರ ನಿಜವಾದ ಪ್ರಯೋಜನಗಳನ್ನು ಸಾಧಿಸಬಹುದು. ಈ ತೈಲವು ಯಾವ ಚರ್ಮದ ಸ್ಥಿತಿಗಳಿಗೆ ಪ್ರಯೋಜನಕಾರಿಯಾಗಿದೆ ಮತ್ತು ಅದನ್ನು ಹೇಗೆ ಬಳಸುವುದು ಎಂಬುದರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ರಕ್ತದೊಡ್ಡ ಅಪಾಯ ಹೆಚ್ಚು; ಇಲ್ಲಿದೆ ಉಪಯುಕ್ತವಾಗಬಲ್ಲ ಕೆಲ ಯೋಗಾಸನಗಳು

ದಿವ್ಯ ಕಾಯಕಲ್ಪ್ ತೈಲ ಯಾವ ಚರ್ಮದ ಸಮಸ್ಯೆಗಳಿಗೆ ಪ್ರಯೋಜನಕಾರಿ?

ದಿವ್ಯ ಕಾಯಕಲ್ಪ್ ಎಣ್ಣೆಯನ್ನು ಚರ್ಮ ರೋಗ, ತುರಿಕೆ, ಫಂಗಲ್ ಸೋಂಕುಗಳು ಮತ್ತು ಎಸ್ಜಿಮಾ ಮುಂತಾದ ಚರ್ಮದ ಸಮಸ್ಯೆಗಳ ನಿವಾರಣೆಗೆ ಉಪಯುಕ್ತವೆಂದು ಪರಿಗಣಿಸಲಾಗುತ್ತದೆ. ಇದು ಚರ್ಮದ ಕಿರಿಕಿರಿ, ಕೆಂಪು ಮತ್ತು ಶುಷ್ಕತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲರ್ಜಿ ಅಥವಾ ಬೆವರಿನಿಂದಾಗಿ ಆಗುವ ತುರಿಕೆಗೆ ಈ ತೈಲದಿಂದ ಪರಿಹಾರ ಸಿಗುತ್ತದೆ.

ಈ ಆಯುರ್ವೇದ ತೈಲವು ಚರ್ಮವನ್ನು ಪೋಷಿಸುವುದು ಮಾತ್ರವಲ್ಲ, ತ್ವಚೆ ಮೃದುವಾಗಿಡಲು ನೆರವಾಗುತ್ತದೆ. ಇದರ ನಿಯಮಿತ ಬಳಕೆಯು ತ್ವಚೆಯಲ್ಲಿ ಶುಷ್ಕತೆ ನಿವಾರಿಸಿ, ತೇವಾಂಶವನ್ನು ಕಾಪಾಡಿಕೊಳ್ಳಲು ಮತ್ತು ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ದಿವ್ಯ ಕಾಯಕಲ್ಪ ತೈಲದಲ್ಲಿ ಯಾವ್ಯಾವ ಪದಾರ್ಥಗಳಿವೆ?

ದಿವ್ಯ ಕಾಯಕಲ್ಪ ತೈಲದಲ್ಲಿ ಬೇವು, ಅರಿಶಿನ, ಶ್ರೀಗಂಧ ಮತ್ತು ಇತರ ಆಯುರ್ವೇದ ಗಿಡಮೂಲಿಕೆಗಳ ಸಾರ ಇದೆ. ಬೇವು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಅರಿಶಿನವು ಊತ ಮತ್ತು ಉರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶ್ರೀಗಂಧವು ಚರ್ಮವನ್ನು ತಂಪಾಗಿಸುತ್ತದೆ. ಈ ಪದಾರ್ಥಗಳು ಒಟ್ಟಾಗಿ ಚರ್ಮವನ್ನು ಶುದ್ಧೀಕರಿಸಲು ಮತ್ತು ಬಾಹ್ಯ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆಯುರ್ವೇದದ ಪ್ರಕಾರ, ಈ ಪದಾರ್ಥಗಳು ಚರ್ಮದ ನೈಸರ್ಗಿಕ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

ಇದನ್ನೂ ಓದಿ: ಆಯುರ್ವೇದ ಬಳಸಿ, ದುಬಾರಿ ಚಿಕಿತ್ಸೆಗೆ ಮುಕ್ತಿ ಕೊಡಿ; ಕೈಗೆಟುಕುವ ಬೆಲೆಗೆ ಆನ್​ಲೈನ್​ನಲ್ಲೇ ಪತಂಜಲಿ ಔಷಧಗಳು

ಈ ತೈಲ ಹೇಗೆ ಬಳಸುವುದು?

ಪೀಡಿತ ಪ್ರದೇಶವನ್ನು ಸ್ವಚ್ಛಗೊಳಿಸಿ ಒಣಗಿಸಿದ ನಂತರ ದಿವ್ಯ ಕಾಯಕಲ್ಪ್ ತೈಲವನ್ನು ಹಚ್ಚಬೇಕು. ದಿನಕ್ಕೆ ಒಂದು ಅಥವಾ ಎರಡು ಬಾರಿ ನಿಧಾನವಾಗಿ ಮಸಾಜ್ ಮಾಡಿ. ಎಣ್ಣೆಯನ್ನು ಹಚ್ಚಿದ ನಂತರ ಸ್ವಲ್ಪ ಸಮಯದವರೆಗೆ ಆ ಜಾಗವನ್ನು ಮುಕ್ತವಾಗಿರಲು ಬಿಡಿ. ಕಣ್ಣು, ಬಾಯಿ ಅಥವಾ ತೆರೆದ ಗಾಯಗಳಿಗೆ ಈ ತೈಲ ಸೋಂಕದಂತೆ ನೋಡಿಕೊಳ್ಳಿ. ಉರಿ ಅಥವಾ ಅಲರ್ಜಿಯ ರಿಯಾಕ್ಷನ್ ಸಂಭವಿಸಿದಲ್ಲಿ, ಅದರ ಬಳಕೆಯನ್ನು ನಿಲ್ಲಿಸಿ. ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link