All posts by nagaraj11081993

ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಪಾರ್ಥಸಾರಥಿ ಸುವರ್ಣ ರಥದ ವಿಶೇಷ ಏನು? ಹೇಗಿದೆ ನೋಡಿ – Kannada News | Golden Chariot Dedicated to Udupi Krishna: Special Features of the Parthasarathi Suvarna Ratha Revealed

ಉಡುಪಿ, ಡಿಸೆಂಬರ್ 26: ಉಡುಪಿಯ ಕಡೆಗೋಲು ಕೃಷ್ಣ ದೇವರನ್ನು ‘ಅನ್ನ ಬ್ರಹ್ಮ’ ಎಂದೂ ಕರೆಯುತ್ತಾರೆ. ಅದೇ ರೀತಿ ‘ಉತ್ಸವ ಬ್ರಹ್ಮ’ ಎಂದೂ ಬಣ್ಣಿಸಲಾಗುತ್ತದೆ. ಪ್ರತಿದಿನ ಕೃಷ್ಣ ದೇವರಿಗೆ ಉತ್ಸವ ನಡೆಯುತ್ತದೆ. ಇನ್ನು ಮುಂದೆ ಕೃಷ್ಣದೇವರ ಉತ್ಸವಕ್ಕೆ ಹೊಸ ಮೆರಗು ಸಿಗಲಿದೆ. ಪರ್ಯಾಯ ಪುತ್ತಿಗೆ ಮಠಾಧೀಶರು ಇದೀಗ ಪಾರ್ಥಸಾರಥಿ ಸುವರ್ಣ ರಥವನ್ನು ಕೃಷ್ಣನಿಗೆ ಅರ್ಪಿಸಲಿದ್ದಾರೆ. ಸನ್ಯಾಸಿಯಾಗಿ 50 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ, ಸುಂದರ ರಥವನ್ನು ನಿರ್ಮಿಸಿ ಕೃಷ್ಣದೇವರಿಗೆ ಅರ್ಪಿಸುತ್ತಿದ್ದಾರೆ. ಉಡುಪಿ ಕೃಷ್ಣ ಮಠದ ಪೂಜಾ ಪರಂಪರೆಯಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಮಳೆಗಾಲದ ಕೆಲವು ದಿನಗಳನ್ನು ಹೊರತುಪಡಿಸಿ ಪ್ರತಿದಿನವೂ ಉಡುಪಿ ಕೃಷ್ಣನಿಗೆ ರಥೋತ್ಸವ ನಡೆಸಲಾಗುತ್ತದೆ. ಈಗಾಗಲೇ ಏಳು ರಥಗಳು ಕೃಷ್ಣನ ಸೇವೆಗೆ ಬಳಕೆಯಾಗುತ್ತಿದ್ದು, ಇದು ಎಂಟನೇ ರಥವಾಗಿದೆ.

ವಿಶ್ವಗೀತಾ ಪರ್ಯಾಯ ವಿಶೇಷ ಈ ಚಿನ್ನದ ರಥ!

ಅಷ್ಟಮಠಗಳು ಅಷ್ಟ ರಥಗಳು ಕೃಷ್ಣ ಸೇವೆಗೆ ಸದಾ ಕಾಲ ಸನ್ನದ್ಧವಾಗಿದೆ. ಪರ್ಯಾಯ ಪುತ್ತಿಗೆ ಶ್ರೀಗಳು ಕೋಟಿಗೀತಾ ಲೇಖನ ಯಜ್ಞದ ಮೂಲಕ ತಮ್ಮ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯ ಎಂದೆ ಹೇಳಿಕೊಂಡು ಬಂದಿದ್ದಾರೆ. ಅವರ ಈ ಚಿಂತನೆಗೆ ಪೂರಕವಾಗಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಭಗವದ್ಗೀತೆ ಪಠಿಸಿ ವಿಶ್ವವೇ ಉಡುಪಿ ಎತ್ತ ತಿರುಗಿ ನೋಡುವಂತೆ ಮಾಡಿದ್ದರು. ಇದೀಗ ಗೀತಾ ಪರ್ಯಾಯ ಭಗವದ್ಗೀತೆಯ ಸಂದೇಶ ಸಾರುವ ರಥದೊಂದಿಗೆ ಸಮಾಪನಗೊಳ್ಳಲಿದೆ.

ಮಠದ ಹೊರ ಭಾಗದ ರಥಬೀದಿಯಲ್ಲಿ ಎಳೆಯುವುದಕ್ಕೆ ಬದಲಾಗಿ ಕೃಷ್ಣಮಠದ ಗರ್ಭಗುಡಿಯ ಸುತ್ತಲೂ ಇರುವ ಪೌಳಿಯಲ್ಲಿ ಎಳೆಯಲಾಗುತ್ತದೆ. ಭಕ್ತರಿಗೆ ಹರಕೆ ಸಲ್ಲಿಸಲು ಈ ಮೂಲಕ ಹೊಸ ಅವಕಾಶ ದೊರಕಿದಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಬಳ್ಳಾಪುರ ದುರಂತ: ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ – Kannada News | Minister Pradeep Eshwar on Fatal Chikkaballapur Accident: Relief Announced, Helmet Safety Stressed

ಚಿಕ್ಕಬಳ್ಳಾಪುರ, ಡಿ.25: ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಜ್ಜವಾರ ಗೇಟ್ ಬಳಿ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾತ್ರಿ 9:30ರ ಸುಮಾರಿಗೆ ನರಸಿಂಹಮೂರ್ತಿ, ಅರುಣ್, ಮನೋಜ್ ಮತ್ತು ನಂದೀಶ್ ಎಂಬ ಯುವಕರು ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಅತಿವೇಗದಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಯುವಕರು ನಿಧಾನವಾಗಿ ಬಲ ತಿರುವು ತೆಗೆದುಕೊಳ್ಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್ ಅವರು, ಟಿಪ್ಪರ್ ಚಾಲಕನ ನಿರ್ಲಕ್ಷ್ಯದಿಂದ ಈ ನಡೆದಿದೆ. ವೇಗವಾಗಿ ಬಂದ ಕಾರಣ ಈ ಘಟನೆ ನಡೆದಿದೆ ಎಂದು ಹೇಳಿದರು. ಅಪಘಾತದ ಮಾಹಿತಿ ಲಭ್ಯವಾದ ಕೂಡಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ಅಲ್ಲದೆ, ಮೃತರ ಕುಟುಂಬದ ಸದಸ್ಯರಿಗೆ ಡಿಸಿ ತಾಲೂಕು ಕಚೇರಿಯಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಪ್ರದೀಪ್ ಈಶ್ವರ್ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆಯೂ ಹೇಳಿದ್ದಾರೆ. ಅಪಘಾತದಲ್ಲಿ ಒಬ್ಬ ಯುವಕ ಮದುವೆಯಾಗಿ 8 ತಿಂಗಳಾಗಿದ್ದು, ಮತ್ತೊಬ್ಬ ಯುವಕನ ಸಹೋದರಿ ದೂರದ ಊರಿನಲ್ಲಿ ಓದುತ್ತಿರುವ ಕಾರಣ ಆಕೆಯನ್ನು ಕರೆಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate Today Bangalore: 14,000 ರೂ ಗಡಿ ದಾಟಿದ ಚಿನ್ನದ ಬೆಲೆ – Kannada News | Gold Price Today on 26th December 2025, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಡಿಸೆಂಬರ್ 26: ಸತತವಾಗಿ ಏರುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೊಸ ಮೈಲಿಗಲ್ಲು ಮುಟ್ಟಿವೆ. ಚಿನ್ನದ ಬೆಲೆ (ಅಪರಂಜಿ) ಗ್ರಾಮ್​ಗೆ 14,000 ರೂ ಗಡಿ ದಾಟಿದೆ. ಬೆಳ್ಳಿ ಬೆಲೆ (Silver rate) 240 ರೂ ಗಡಿ ಮುಟ್ಟಿದೆ. ಆಭರಣ ಚಿನ್ನದ ಬೆಲೆ 13,000 ರೂ ಗಡಿ ಸಮೀಪಕ್ಕೆ ಹೋಗಿದೆ. ನಿನ್ನೆ ಮತ್ತು ಮೊನ್ನೆ ತಲಾ 30 ರೂ ಹೆಚ್ಚಿದ್ದ ಚಿನ್ನದ ಬೆಲೆ ಇವತ್ತು ಒಂದೇ ದಿನದಲ್ಲಿ 70 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,39,250 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,400 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 26ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,002 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,835 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,502 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,002 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,835 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,835 ರೂ
  • ಚೆನ್ನೈ: 12,890 ರೂ
  • ಮುಂಬೈ: 12,835 ರೂ
  • ದೆಹಲಿ: 12,850 ರೂ
  • ಕೋಲ್ಕತಾ: 12,835 ರೂ
  • ಕೇರಳ: 12,835 ರೂ
  • ಅಹ್ಮದಾಬಾದ್: 12,840 ರೂ
  • ಜೈಪುರ್: 12,850 ರೂ
  • ಲಕ್ನೋ: 12,850 ರೂ
  • ಭುವನೇಶ್ವರ್: 12,835 ರೂ

ಇದನ್ನೂ ಓದಿ: ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ ಎಷ್ಟು ಗೊತ್ತಾ? ಅನ್​ಕ್ಲೇಮ್ಡ್ ಡೆಪಾಸಿಟ್ ಮರಳಿಪಡೆಯುವುದು ಹೇಗೆ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 573 ರಿಂಗಿಟ್ (12,744 ರುಪಾಯಿ)
  • ದುಬೈ: 499.75 ಡಿರಾಮ್ (12,223 ರುಪಾಯಿ)
  • ಅಮೆರಿಕ: 139.50 ಡಾಲರ್ (12,531 ರುಪಾಯಿ)
  • ಸಿಂಗಾಪುರ: 180.30 ಸಿಂಗಾಪುರ್ ಡಾಲರ್ (12,609 ರುಪಾಯಿ)
  • ಕತಾರ್: 497.50 ಕತಾರಿ ರಿಯಾಲ್ (12,274 ರೂ)
  • ಸೌದಿ ಅರೇಬಿಯಾ: 507 ಸೌದಿ ರಿಯಾಲ್ (12,143 ರುಪಾಯಿ)
  • ಓಮನ್: 53 ಒಮಾನಿ ರಿಯಾಲ್ (12,374 ರುಪಾಯಿ)
  • ಕುವೇತ್: 40.65 ಕುವೇತಿ ದಿನಾರ್ (11,887 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 254 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 254 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 254 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಯಾಗು ಎಂದಿದ್ದಕ್ಕೆ ಕತ್ತು ಸೀಳಿ ಕೊಂದ ಪ್ರಿಯಕರ: ನರ್ಸ್​ ಮನೆಯಲ್ಲಿ ಹರಿದಿತ್ತು ರಕ್ತದೋಕುಳಿ! – Kannada News | Bengaluru Nurse Murder: Jayadeva Staff Nurse murdered by her lover in Kumaraswamy Layout

ಕುಮಾರಸ್ವಾಮಿ ಲೇಔಟ್‌ನಲ್ಲಿ ಸ್ಟಾಫ್ ನರ್ಸ್ ಕತ್ತು ಸೀಳಿ ಭೀಕರ ಕೊಲೆ!

ಬೆಂಗಳೂರು, ಡಿಸೆಂಬರ್ 26: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ (Kumaraswamy Layout) ಮನೆಯೊಂದರಲ್ಲಿ ಒಂಟಿಯಾಗಿದ್ದ ಸ್ಟಾಫ್ ನರ್ಸ್ ಅನ್ನು ಭೀಕರವಾಗಿ ಹತ್ಯೆಗೈದ ಘಟನೆ ಡಿಸೆಂಬರ್ 24ರ ರಾತ್ರಿ ನಡೆದಿದೆ. ಆಕೆ ಬಾಡಿಗೆ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಮನೆಯೊಳಗೆ ಪ್ರವೇಶಿದ ಆಕೆಯ ಪ್ರಿಯಕರ, ಕತ್ತುಕುಯ್ದು ಆಕೆಯ ಹತ್ಯೆ ಮಾಡಿರುವುದು ತಿಳಿದುಬಂದಿದೆ. ಮಾಹಿತಿ ಸಿಕ್ಕ ಕೂಡಲೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಮದುವೆಯಾಗದೇ ಒಂಟಿಯಾಗಿದ್ದ ಸ್ಟಾಫ್ ನರ್ಸ್

39 ವರ್ಷವಾದರೂ ಮದುವೆಯಾಗದೆ ಒಂಟಿಯಾಗಿದ್ದ ಮಮತಾ, ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕುಮಾರಸ್ವಾಮಿ ಲೇಔಟ್‌ನಲ್ಲಿ ತಮ್ಮ ಸ್ನೇಹಿತೆಯೊಂದಿಗೆ ಬಾಡಿಗೆ ಮನೆ ಮಾಡಿಕೊಂಡಿದ್ದರು. ಡಿಸೆಂಬರ್ 24ರಂದು ಆಕೆಯ ಸ್ನೇಹಿತೆ ಊರಿಗೆ ತೆರಳಿದ್ದರಿಂದ ಆ ದಿನ ರಾತ್ರಿ ಮಮತಾ ಒಬ್ಬರೇ ಮನೆಯಲ್ಲಿದ್ದರು. ಇದೇ ಸಮಯಕ್ಕೆ ಕಾದು ಕುಳಿತಿದ್ದ ಆರೋಪಿ ಸುಧಾಕರ್, ರಾತ್ರೋ ರಾತ್ರಿ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ. ಡಿಸೆಂಬರ್ 25ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರಕರಣ ಬೆಳಕಿಗೆ ಬಂದಿದೆ. ಹತ್ಯೆಯ ಮಾಹಿತಿ ದೊರಕುತ್ತಿದ್ದಂತೆ , ಕುಮಾರಸ್ವಾಮಿ ಲೇಔಟ್ನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಬೆಚ್ಚಿಬೀಳಿಸುವ ಕೃತ್ಯ; ನರ್ಸ್‌ಗಳು ಬಟ್ಟೆ ಬದಲಿಸುವ ವಿಡಿಯೋ ಮಾಡುತ್ತಿದ್ದ ಸೈಕೋ ಅಂದರ್!

ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ

ತನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದಿದ್ದ ಮಮತಾ

ಸುಧಾಕರ್ ಮತ್ತು ಮಮತಾ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಯಲ್ಲಿದ್ದರು. ಮಮತಾ ತನಗಿಂತ ವಯಸ್ಸಿನಲ್ಲಿ  ಹಿರಿಯವರೆಂದು ತಿಳಿಯದ ಸುಧಾಕರ್ ಪ್ರೀತಿಯಲ್ಲಿ ಬಿದ್ದಿದ್ದ. ಆದರೆ ಸುಧಾಕರ್‌ಗೆ ಇತ್ತೀಚೆಗೆ ಕುಟುಂಬಸ್ಥರು ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರು. ಈ ವಿಷಯ ತಿಳಿದ ಮಮತಾ, ಕೋಪಗೊಂಡು ತನ್ನನ್ನೇ ಮದುವೆಯಾಗಬೇಕು ಎಂದು ಒತ್ತಾಯಿಸಿದ್ದರು. ಅಷ್ಟೇ ಅಲ್ಲದೇ ತನ್ನನ್ನು ಬಿಟ್ಟು ಬೇರೆ ಮದುವೆಯಾದರೆ ತಾನು ಆತ್ಮಹತ್ಯೆ ಮಾಡಿಕೊಂಡು ಸುಧಾಕರ್ ಹಾಗೂ ಅವರ ಕುಟುಂಬವನ್ನು ಸಂಕಷ್ಟಕ್ಕೆ ಒಳಪಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಈ ಒತ್ತಡದಿಂದ ಆತಂಕಕ್ಕೊಳಗಾದ ಸುಧಾಕರ್, ಮಮತಾಳನ್ನು ಹತ್ಯೆ ಮಾಡಲು ನಿರ್ಧರಿಸಿದ್ದ. ಡಿಸೆಂಬರ್ 24ರಂದು ಮಮತಾ ಒಬ್ಬರೇ ಇದ್ದ ಸಂದರ್ಭ ಮನೆಗೆ ತೆರಳಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 11:17 am, Fri, 26 December 25

Source link

ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು: ಮೃತರ ಸಂಖ್ಯೆ 7ಕ್ಕೆ ಏರಿಕೆ – Kannada News | Chitradurga Bus Accident: Injured Driver Succumbs to Death in Hubli KIMS Hospital, Toll Rises to 7

ಚಿತ್ರದುರ್ಗ, ಹುಬ್ಬಳ್ಳಿ, ಡಿಸೆಂಬರ್ 26: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಬಸ್ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಬಸ್ ಚಾಲಕ ಮಹ್ಮದ್ ರಫೀಕ್ (38) ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಹುಲಗೂರು ಮೂಲದ ರಫೀಕ್ ಕುಟುಂಬದವರಿಗೆ ಆಧಾರವಾಗಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮನೆಯಲ್ಲಿ ದಂಪತಿ , ರೈಲ್ವೆ ಹಳಿಯಲ್ಲಿ ಇಬ್ಬರು ಪುತ್ರರು ಶವವಾಗಿ ಪತ್ತೆ – Kannada News | Maharashtra Couple Dead At Home, Bodies Of Sons Found On Railway Track In Suspected Mass Suicide

ನಾಂದೇಡ್, ಡಿಸೆಂಬರ್ 26: ಒಂದೇ ಕುಟುಂಬದ ನಾಲ್ವರು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ(Suicide) ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಾಲ್ವರ ಶವ ಪತ್ತೆಯಾಗಿದೆ. ದಂಪತಿ ಮನೆಯಲ್ಲೇ ಸಾವನ್ನಪ್ಪಿದ್ದರೆ, ಇಬ್ಬರು ಪುತ್ರರ ಶವ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಮುದ್ಖೇಡ್ ತಹಸಿಲ್‌ನಲ್ಲಿರುವ ಜವಾಲಾ ಮುರಾರ್ ಗ್ರಾಮದಲ್ಲಿರುವ ರಮೇಶ್ ಸೋನಾಜಿ ಲಾಖೆ (51) ಮತ್ತು ಅವರ ಪತ್ನಿ ರಾಧಾಬಾಯಿ ಲಾಖೆ (45) ಅವರ ಶವಗಳು ಅವರ ಮನೆಯೊಳಗೆ ಪತ್ತೆಯಾಗಿವೆ. ಬೆಳಗ್ಗೆ 8 ಗಂಟೆ ಸುಮಾರಿಗೆ ದಂಪತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ವಲ್ಪ ಸಮಯದ ನಂತರ, ಅವರ ಪುತ್ರರಾದ ಉಮೇಶ್ ಲಾಖೆ (25) ಮತ್ತು ಬಜರಂಗ್ ಲಾಖೆ (23) ಅವರ ಶವಗಳನ್ನು ಹತ್ತಿರದ ರೈಲ್ವೆ ಹಳಿಗಳಿಂದ ಹೊರತೆಗೆಯಲಾಯಿತು.

ಪ್ರಾಥಮಿಕ ವರದಿಗಳ ಪ್ರಕಾರ ಪುತ್ರರು ವೇಗವಾಗಿ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿರಬಹುದು, ಆದರೆ ಅವರ ಸಾವು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬುದನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ. ಪೋಷಕರು ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದರೆ, ಪುತ್ರರು ರೈಲ್ವೆ ಹಳಿಗಳ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮತ್ತಷ್ಟು ಓದಿ: ಹಲೋ ಎಲ್ಲಾ ಕೇಳಿಸ್ಕೊಳ್ಳಿ: ವಿಡಿಯೋ ಮಾಡಿಟ್ಟು ನವ ವಿವಾಹಿತ ಆತ್ಮಹತ್ಯೆ, ಹೆಂಡ್ತಿ ವಿರುದ್ಧ ಗಂಭೀರ ಆರೋಪ

ಸಾಕ್ಷ್ಯಗಳನ್ನು ಸಂಗ್ರಹಿಸಲು ನಾವು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ತಂಡವನ್ನು ಕೇಳಿದ್ದೇವೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ದತ್ತಾತ್ರೇಯ ಮಂಠಳೆ ತಿಳಿಸಿದ್ದಾರೆ. ಸಂಪೂರ್ಣ ತಾಂತ್ರಿಕ ತನಿಖೆ ಮತ್ತು ಶವಪರೀಕ್ಷೆಯ ನಂತರವೇ ಸತ್ಯ ಹೊರಬರುತ್ತದೆ ಎಂದು ಇನ್ಸ್‌ಪೆಕ್ಟರ್ ಹೇಳಿದರು.

ಸಾವುಗಳ ಸ್ವರೂಪವು ಆತ್ಮಹತ್ಯೆಯಂತೆ ಕಂಡುಬರುತ್ತಿದೆ. ನಿಖರವಾದ ಸಂದರ್ಭಗಳು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಒತ್ತಿ ಹೇಳಿದರು. ಆರ್ಥಿಕ ಸಂಕಷ್ಟ ಅಥವಾ ಕುಟುಂಬದ ಸಮಸ್ಯೆ ಇತ್ತೇ ಎಂಬುದು ತಿಳಿದುಬಂದಿಲ್ಲ. ಕೃಷಿಕ ಸಮುದಾಯಕ್ಕೆ ಸೇರಿದ ಕುಟುಂಬವಾಗಿದೆ.

ಸ್ಥಳೀಯರ ಪ್ರಕಾರ, ಕುಟುಂಬವು ತಮ್ಮ ಜಮೀನನ್ನು ಉತ್ತಮವಾಗಿ ನೋಡಿಕೊಳ್ಳುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ನಿರ್ದಿಷ್ಟ ತೊಂದರೆ ಬಂದಿರುವ ಕುರಿತು ವರದಿಯಾಗಿಲ್ಲ. ಘಟನೆಯ ಬಗ್ಗೆ ನಾಂದೇಡ್ ಗ್ರಾಮೀಣ ಪೊಲೀಸರು ವಿವರವಾದ ತನಿಖೆ ಆರಂಭಿಸಿದ್ದಾರೆ.

ಸಂಬಂಧಿಕರು ಮತ್ತು ನೆರೆಹೊರೆಯವರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಮತ್ತು ಈ ದುರಂತ ಹೆಜ್ಜೆಗೆ ಕಾರಣವನ್ನು ವಿವರಿಸುವ ಯಾವುದೇ ಸಂದೇಶಗಳಿಗಾಗಿ ಪೊಲೀಸರು ಕುಟುಂಬದ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Baijnath Mahadev Temple: ಬ್ರಿಟಿಷ್ ದಂಪತಿಯಿಂದ ಪುನರ್ನಿರ್ಮಿಸಲಾದ ಭಾರತದ ಏಕೈಕ ಶಿವ ದೇವಾಲಯ ಎಲ್ಲಿದೆ ಗೊತ್ತಾ? – Kannada News | Baijnath Mahadev Temple: British Miracle and Shiva Devotion in Agar Malwa

ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿರುವ ಬೈಜನಾಥ್ ಮಹಾದೇವ್ ದೇವಾಲಯವು ವಿಶಿಷ್ಟ ಇತಿಹಾಸವನ್ನು ಹೊಂದಿದೆ. 16 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಪ್ರಾಚೀನ ದೇವಾಲಯವನ್ನು 1883 ರಲ್ಲಿ ಬ್ರಿಟಿಷ್ ಸೇನಾಧಿಕಾರಿ ದಂಪತಿ ಪುನರ್ನಿರ್ಮಿಸಿದರು. ಒಂದು ಪವಾಡದ ಘಟನೆಯು ಅವರನ್ನು ಶಿವನ ಭಕ್ತರಾಗುವಂತೆ ಮಾಡಿತು ಎಂದು ಹೇಳಲಾಗುತ್ತದೆ.

ಪುರಾಣ ಕಥೆಗಳ ಪ್ರಕಾರ, 19 ನೇ ಶತಮಾನದ ಉತ್ತರಾರ್ಧದಲ್ಲಿ, ಬ್ರಿಟಿಷ್ ಸೇನಾ ಲೆಫ್ಟಿನೆಂಟ್ ಕರ್ನಲ್ ಮಾರ್ಟಿನ್ ಅಫ್ಘಾನ್ ಯುದ್ಧದಲ್ಲಿ ಭಾಗವಹಿಸಲು ಹೋಗಿದ್ದರು. ಆದರೆ ಅವರ ಪತ್ನಿಗೆ ಕೆಲವು ದಿನಗಳವರೆಗೆ ತನ್ನ ಪತಿಯಿಂದ ಯಾವುದೇ ಸುದ್ದಿ ಬಂದಿರಲಿಲ್ಲ. ಇದರಿಂದ ಚಿಂತಿತಳಾದ ಆಕೆ ಶಿಥಿಲಗೊಂಡ ಬೈಜನಾಥ ದೇವಾಲಯದ ಹತ್ತಿರ ಬರುತ್ತಾಳೆ. ಅಲ್ಲಿನ ಆರತಿ ಮತ್ತು ಮಂತ್ರಗಳ ಪಠಣ ಅವಳನ್ನು ಆಕರ್ಷಿಸಿತು. ಅವಳ ಸಂಕಟವನ್ನು ಗಮನಿಸಿದ ಪುರೋಹಿತರು ಅವಳಿಗೆ ‘ಓಂ ನಮಃ ಶಿವಾಯ’ ಮಂತ್ರವನ್ನು 11 ದಿನಗಳ ಕಾಲ ಪಠಿಸಲು ಸಲಹೆ ನೀಡುತ್ತಾರೆ. ತನ್ನ ಪತಿ ಸುರಕ್ಷಿತವಾಗಿ ಹಿಂತಿರುಗಿದರೆ, ದೇವಾಲಯವನ್ನು ದುರಸ್ತಿ ಮಾಡುವುದಾಗಿ ಅವಳು ಪ್ರತಿಜ್ಞೆ ಮಾಡುತ್ತಾಳೆ.

ಈ ಪ್ರಾರ್ಥನೆಯನ್ನು ಪ್ರಾರಂಭಿಸಿದ ಹತ್ತನೇ ದಿನದಂದು, ಮಾರ್ಟಿನ್ ನಿಂದ ಒಂದು ಪತ್ರ ಬರುತ್ತದೆ. ಅದರಲ್ಲಿ, ಆತ ಆಶ್ಚರ್ಯಕರವಾದ ವಿಷಯವನ್ನು ಬರೆದಿದ್ದ, ಶತ್ರುಗಳು ಯುದ್ಧದಲ್ಲಿ ತನ್ನನ್ನು ಸುತ್ತುವರೆದಾಗ, ಹುಲಿ ಚರ್ಮವನ್ನು ಧರಿಸಿ ಕೈಯಲ್ಲಿ ತ್ರಿಶೂಲವನ್ನು ಹಿಡಿದಿದ್ದ ಯೋಗಿಯೊಬ್ಬರು ಕಾಣಿಸಿಕೊಂಡು ಶತ್ರುಗಳನ್ನು ಓಡಿಸಿದರು ಎಂದು ವಿವರಿಸಿದ್ದನು.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ಅದೃಷ್ಟವಶಾತ್, ತನ್ನ ಪತಿ ಸುರಕ್ಷಿತವಾಗಿ ಹಿಂದಿರುಗಿದ ನಂತರ, ಮಾರ್ಟಿನ್ ದಂಪತಿಗಳು 15,000 ರೂ.ಗಳ ಬೃಹತ್ ದೇಣಿಗೆಯೊಂದಿಗೆ ದೇವಾಲಯವನ್ನು ಪುನರ್ನಿರ್ಮಿಸಿದರು. ಇದಕ್ಕೆ ಪುರಾವೆಗಳನ್ನು ಇನ್ನೂ ದೇವಾಲಯದ ಶಾಸನಗಳಲ್ಲಿ ಕಾಣಬಹುದು. ಅದರ ನಂತರ, ಅವರು ಇಂಗ್ಲೆಂಡ್‌ಗೆ ಹೋದರು, ಆದರೆ ಅವರು ತಮ್ಮ ಮನೆಯಲ್ಲಿ ಶಿವಲಿಂಗವನ್ನು ಸ್ಥಾಪಿಸಿ ತಮ್ಮ ಕೊನೆಯ ಉಸಿರಿನವರೆಗೂ ಶಿವನನ್ನು ಪೂಜಿಸಿದರು ಎಂದು ಹೇಳಲಾಗುತ್ತದೆ. 50 ಅಡಿ ಎತ್ತರದ ಶಿಖರವನ್ನು ಹೊಂದಿರುವ ಬಂಗಂಗಾ ನದಿಯ ದಡದಲ್ಲಿರುವ ಈ ದೇವಾಲಯವು ಇಂದು ಜನಪ್ರಿಯ ಪ್ರವಾಸಿ ತಾಣವಾಗಿದೆ.

ದೇವಸ್ಥಾನ ತಲುಪುವ ಮಾರ್ಗಗಳು:

  • ವಿಮಾನ ಮಾರ್ಗ: ಇಂದೋರ್‌ನಲ್ಲಿರುವ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣ (126 ಕಿಮೀ).
  • ರೈಲು ಮಾರ್ಗ: ಉಜ್ಜಯಿನಿ ರೈಲು ನಿಲ್ದಾಣ (68 ಕಿ.ಮೀ).
  • ರಸ್ತೆ ಮಾರ್ಗ: ಉಜ್ಜಯಿನಿ, ಇಂದೋರ್ ಮತ್ತು ಭೋಪಾಲ್ ನಿಂದ ಬಸ್ ಸೌಲಭ್ಯ ಲಭ್ಯವಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:35 am, Fri, 26 December 25

Source link

ತಿರುಪತಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ: ಅಭಿವೃದ್ಧಿ ಕಾಮಗಾರಿ ಪರಿಶೀಲನೆ – Kannada News | Karnataka Minister Ramalinga Reddy Visits Tirumala, Reviews TTD Works

ತಿರುಪತಿ, ಡಿ.26: ತಿರುಪತಿ ತಿರುಮಲಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy )ಭೇಟಿ ನೀಡಿದರು. ಅಲ್ಲಿ ನಡೆಯುತ್ತಿರುವಂತಿ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಪರಿಷತ್ ಸದಸ್ಯ ಶರವಣ ತಿರುಪತಿ ತಿರುಮಲದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ನ್ಯೂನತೆಗಳಿರುವುದಾಗಿ ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಾವೇ ಖುದ್ದು ಭೇಟಿ ನೀಡಿ ಪರಿವೀಕ್ಷಣೆ ನಡೆಸುವುದಾಗಿ ಉತ್ತರಿಸಿದ್ದರು.

ಅದರಂತೆ ನಿನ್ನೆಯ ಮಂಗಳವಾರದಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿರುಮಲಕ್ಕೆ ಭೇಟಿ ನೀಡಿ, ಟಿಟಿಡಿ ಅಧಿಕಾರಿಗಳೊಂದಿಗೆ ತಿರುಮಲದಲ್ಲಿರುವ ಕರ್ನಾಟಕ ಸರ್ಕಾರದ 3 ಅತಿಥಿ ಗೃಹಗಳು ಹಾಗೂ ಛತ್ರದ ಪರಿಶೀಲನೆ ನಡೆಸಿದರು.ಬಾಕಿ ಉಳಿದಿರುವ ಎಲ್ಲಾ ಸಮಸ್ಯೆ ಹಾಗೂ ಕಾಮಗಾರಿಗಳನ್ನು ಮಾರ್ಚ್ 2026ರೊಳಗೆ ಪೂರ್ಣ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರ ಪಾರ್ಕಿಂಗ್ ಸಮಸ್ಯೆಗೆ ಬೀಳಲಿದೆ ಬ್ರೇಕ್

ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಕೆಳಕಂಡ ವಿಷಯಗಳ ಕುರಿತು ಚರ್ಚೆ ನಡೆಸಿದರು.

1. ತಿರುಮಲದಲ್ಲಿನ ಭೂಮಿಯ ಲೀಸ್ ವಿಷಯ

2. ಟಿಟಿಡಿ ವಾಪಸ್ ಪಡೆದ ಭೂಮಿಗೆ ಬದಲಾಗಿ ತಿರುಪತಿಯಲ್ಲಿ 30 ಸೆಂಟ್ಸ್ ಪರ್ಯಾಯ ಭೂಮಿ ಒದಗಿಸುವುದು.

3. ತಿರುಮಲದಲ್ಲಿ ನಮ್ಮ ಪರವಾಗಿ ಟಿಟಿಡಿ ಕೈಗೊಂಡ ನಾಗರಿಕ ಕಾಮಗಾರಿಗಳ ಮೇಲೆ ವಿಧಿಸಲಾಗುವ ಸೆಂಟೇಜ್ ಶುಲ್ಕಕ್ಕೆ ವಿನಾಯಿತಿ ನೀಡುವುದು.

4. ತಿರುಮಲದಲ್ಲಿರುವ ಎಲ್ಲಾ ಅತಿಥಿ ಗೃಹಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಹಸ್ತಾಂತರಿಸುವುದು.

5. ಪ್ರೀಫ್ಯಾಬ್ರಿಕೇಟೆಡ್ ನಾಗರಿಕ ರಚನೆಗಳಿಂದ ಉಂಟಾಗುವ ನೀರು ಸೋರಿಕೆ ಸಮಸ್ಯೆಯನ್ನು ತಡೆಯುವುದು.

6. ಎಕ್ಸ್ಹಾಸ್ಟ್ ಡಕ್ಟ್‌ಗಳಿಗೆ ಸೂಕ್ತ ವಾತಾಯನ ವ್ಯವಸ್ಥೆ ಒದಗಿಸುವುದು.

7. ಎಲ್ಲಾ ಸ್ನಾನಗೃಹಗಳಲ್ಲಿ ಇರುವ PoP ಮೇಲ್ಚಾವಣಿಯನ್ನು PVC ಮೇಲ್ಚಾವಣಿಯಿಂದ ಬದಲಿಸುವುದು.

8. ಛತ್ರಕ್ಕೆ ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣಪತ್ರ ಪಡೆಯುವುದು.

9. HT ಲೈನ್ ಅನುಮತಿ ಪಡೆಯಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು.

10. ಹೊರಾಂಗಣ ಪೋರ್ಟಿಕೋದಲ್ಲಿರುವ PoP ಮೇಲ್ಚಾವಣಿಯನ್ನು PVC ಮೇಲ್ಚಾವಣಿಯಿಂದ ಬದಲಿಸುವುದು.

11. ಕರ್ನಾಟಕದ ಭಕ್ತರಿಗೆ ದರ್ಶನ ಸೌಲಭ್ಯ ಒದಗಿಸುವುದು.

ಈ‌ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಆಯುಕ್ತರಾದ ಶರತ್, ಟಿಟಿಡಿ ಟ್ರಸ್ಟ್ ಸದಸ್ಯ ದರ್ಶನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Source link

ಗಿಲ್ಲಿ ಬಿಟ್ಟುಕೊಡಬೇಡ; ಕಾವ್ಯಾಗೆ ತಾಯಿಯ ಕಿವಿಮಾತು – Kannada News | Kavya Gowda Mother Ask her daughter To Keep continue Friendship of Gilli

ಗಿಲ್ಲಿ ನಟ ಅವರು ಯಾವಾಗಲೂ ಕಾವ್ಯಾ ಪರ ಬೆಂಬಲಕ್ಕೆ ನಿಂತಿದ್ದು ಗೊತ್ತೇ ಇದೆ. ಇದನ್ನು ಅವರ ತಾಯಿ ಕೂಡ ಗಮನಿಸಿದ್ದಾರೆ. ‘ಗಿಲ್ಲಿನ ಎಂದಿಗೂ ಬಿಟ್ಟುಕೊಡಬೇಡ. ಆತ ನಿನ್ನನ್ನು ಯಾವಾಗಲೂ ಬಿಟ್ಟುಕೊಟ್ಟಿಲ್ಲ. ಮೊಟ್ಟೆ ಕೇಳಿದರೆ ಕೊಡು’ ಎಂದು ಕಾವ್ಯಾಗೆ ಅವರ ತಾಯಿ ಕಿವಿಮಾತು ಹೇಳಿದ್ದಾರೆ. ಈ ವಾರ ಫ್ಯಾಮಿಲಿ ವೀಕ್ ಆಗಿತ್ತು ಮತ್ತು ಕಾವ್ಯಾ ತಾಯಿ ಬಂದಿದ್ದರು. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಉಡುಪಿ ನೇಮೋತ್ಸವದಲ್ಲಿ ವೃದ್ಧೆಯ ಚಿನ್ನದ ಸರ ಕಳ್ಳತನ, ಸಿಸಿಟಿವಿಯಲ್ಲಿ ಸೆರೆ – Kannada News | Hejamadi Temple Theft: 2 Lakh Gold Chain Snatched from Woman During Nemotsava

ಉಡುಪಿ, ಡಿ.26: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ವೇಳೆ ವೃದ್ದೆಯ ಚಿನ್ನದ ಸರವನ್ನು ಕಳ್ಳಿಯರು ಎಗರಿಸಿದ್ದಾರೆ. ಮೂವರು ಕಳ್ಳಿಯರ ಕರಾಮತ್ತು ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೃದ್ಧೆಯನ್ನು ಮೂರು ಕಡೆಯಿಂದ ಸುತ್ತುವರಿದು ಚಿನ್ನದ ಸರ ಕದ್ದಿದ್ದಾರೆ. ಹೆಜಮಾಡಿ ನಿವಾಸಿ ಕಮಲ ಎಂಬುವವರ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಪೂಜೆಯ ವೇಳೆ ಮೂರು ಕಡೆಯಿಂದ ಸುತ್ತುವರಿದ ಕಳ್ಳಿಯರು ಗಂಟೆ ಹೊಡೆಯುವ ನೆಪದಲ್ಲಿ ಚಿನ್ನದ ಸರ ಎಗರಿಸಿದ್ದಾರೆ. 2 ಲಕ್ಷ ಮೌಲ್ಯದ ಚಿನ್ನದ ಸರ ಎಂದು ಹೇಳಲಾಗಿದೆ. ಇದೀಗ ಆ ಮೂರು ಕಳ್ಳಿಯರ ಪತ್ತೆಗಾಗಿ ಪಡುಬಿದ್ರಿ ಪೊಲೀಸರು ಬಲೆ ಬಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link