All posts by nagaraj11081993

ಇರಾನ್​ನಿಂದ ಅಮೆರಿಕದ ಎರಡನೇ ಎಫ್-35 ಫೈಟರ್ ಜೆಟ್ ಪತನ; ಪೈಲಟ್ ಬದುಕುಳಿದ ಸಾಧ್ಯತೆ ಕಡಿಮೆ

ಇರಾನ್​ನಿಂದ ಅಮೆರಿಕದ ಎರಡನೇ ಎಫ್-35 ಫೈಟರ್ ಜೆಟ್ ಪತನ; ಪೈಲಟ್ ಬದುಕುಳಿದ ಸಾಧ್ಯತೆ ಕಡಿಮೆ

ಟೆಹ್ರಾನ್, ಏಪ್ರಿಲ್ 3: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ಎರಡನೇ F-35 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂದು ಇರಾನಿನ (Iran War) ರಾಜ್ಯ ಮಾಧ್ಯಮ ಇಂದು ತಿಳಿಸಿದೆ. ಅಮೆರಿಕದ ಮತ್ತೊಂದು ಯುದ್ಧ ವಿಮಾನ ಪತನವಾಗಿ ಸಂಪೂರ್ಣವಾಗಿ ನಾಶವಾಗಿದೆ. ವಿಮಾನಕ್ಕೆ ತೀವ್ರ ಹಾನಿಯಾಗಿದ್ದರಿಂದ ಪೈಲಟ್ ಬದುಕಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಐಆರ್‌ಜಿಸಿ ತಿಳಿಸಿದೆ.

ಆದರೆ, ಅಮೆರಿಕದಿಂದ ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ದೃಢೀಕರಣ ಬಂದಿಲ್ಲ. F-35 ಯುಎಸ್‌ನ ಅತ್ಯಂತ ಮುಂದುವರಿದ ಸ್ಟೆಲ್ತ್ ಫೈಟರ್ ಜೆಟ್‌ಗಳಲ್ಲಿ ಒಂದಾಗಿದ್ದು, ರಾಡಾರ್ ಪತ್ತೆಹಚ್ಚುವಿಕೆಯನ್ನು ತಪ್ಪಿಸುವ ಮತ್ತು ಹೆಚ್ಚು ರಕ್ಷಿಸಲ್ಪಟ್ಟ ವಾಯುಪ್ರದೇಶದೊಳಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಆ ಯುದ್ಧ ವಿಮಾನವನ್ನು ಕೂಡ ಪತನಗೊಳಿಸಿರುವುದಾಗಿ ಇರಾನ್ ಘೋಷಿಸಿದೆ.

ಇದನ್ನೂ ಓದಿ: ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ

ಇರಾನ್ ಅಮೆರಿಕದ ಅತ್ಯಂತ ಅಮೂಲ್ಯವಾದ ವಿಮಾನಗಳಲ್ಲಿ ಒಂದಾದ ಮತ್ತು ಅಮೆರಿಕದ ಐದನೇ ತಲೆಮಾರಿನ ಯುದ್ಧ ಹೋರಾಟದ ಸಾಮರ್ಥ್ಯದ ಬೆನ್ನೆಲುಬಾದ US F-35 ಲೈಟ್ನಿಂಗ್ 2 ಅನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡ ಸುಮಾರು 2 ವಾರಗಳ ನಂತರ ಈ ದಾಳಿ ಸಂಭವಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹುಬ್ಬಳ್ಳಿಯಲ್ಲೊಂದು ಲವ್ ಜಿಹಾದ್: ಜಿಮ್ ಟ್ರೈನರ್​ನ​​​​​​​​​ ಕಾಮುಕ ಮುಖ ಬಿಚ್ಚಿಟ್ಟ ಯುವತಿ

ಹುಬ್ಬಳ್ಳಿ, (ಏಪ್ರಿಲ್ .03): ನಗರದಲ್ಲಿ ಲವ್ ಜಿಹಾದ್ (love jihad) ಆರೋಪದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಹಳೆ ಹುಬ್ಬಳ್ಳಿ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳಿಯ (Hubballi) ವಿಜಯನಗರದ ನಿವಾಸಿ ಸಮೀರ್ ಎನ್ನುವಾತ ಜಿಮ್​​ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡು ಬಳಿಕ ಆಕೆಯೊಂದಿಗೆ ಸಲುಗೆ ಬೆಳೆಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಮನೆಗೆ ಹೋಗಿ ಸಮೀರ್​​​ ನನ್ನು ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹುಬ್ಬಳ್ಳಿ ನಗರದ ವಿಜಯನಗರ ನಿವಾಸಿಯಾಗಿರುವ ಸಮೀರ್ ಮತ್ತು ಹಿಂದೂ ಯುವತಿ ಜಿಮ್‌ನಲ್ಲಿ ಪರಿಚಯವಾಗಿತ್ತು. ಬಳಿಕ ಸಮೀರ್ ಯುವತಿಯೊಂದಿಗೆ ಸಲುಗೆ ಬೆಳೆಸಿದ್ದಾನೆ. ಬಳಿಕ ಯುವತಿಯನ್ನು ಮನೆಗೆ ಕರೆಯಿಸಿಕೊಂಡು ಜ್ಯೂಸ್​​ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನು ಸಮೀರ್ ಕುಟುಂಬದವರು ವಿಕಾಸನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ಗಲಾಟೆ ನಡೆಸಿದರೆಂಬ ಆರೋಪ ಕೇಳಿಬಂದಿದೆ.

ಇದನ್ನೂ ನೋಡಿ: ಹಿಂದೂ ಯುವತಿಯನ್ನ ಮತಾಂತರಕ್ಕೆ ಯತ್ನ: ಸಮೀರ್ ನನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಸಂಘಟನೆಗಳು

ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್

ಕೆಲ ದಿನ ನಂತರ ಯುವತಿ ಜೊತೆ ಖಾಸಗಿಯಾಗಿ ಕಳೆದ ಕ್ಷಣಗಳಿದ್ದ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದು, ಅನೇಕ ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನಂತೆ. ಆದರೂ ಇದೆಲ್ಲವನ್ನು ಯುವತಿ ಮನೆಯವರಿಗೆ ಹೇಳಿರಲಿಲ್ಲ. ಆದ್ರೆ ನಿನ್ನೆ (ಏಪ್ರಿಲ್ 02) ಸಂಜೆ ಈ ವಿಚಾರ ಯುವತಿ ಮನೆಯವರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ಗೊತ್ತಾಗಿದ್ದು, ಬಳಿಕ ದೊಡ್ಡ ಹೈಡ್ರಾಮಾವೇ ನಡೆದಿದೆ.  ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂ ಕಾರ್ಯಕರ್ತರು, ಹೋಗಿ ಸಮೀರ್ ನನ್ನು ಥಳಿಸಿ ಬಳಿಕಪೊಲೀಸರ ವಶಕ್ಕೊಪ್ಪಿಸಿದ್ದಾರೆ.ಇದಾದ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.

ಯುವತಿ ಮನೆಯವರ ಮೇಲೆ ಸಮೀರ್ ಕುಟುಂಬಸ್ಥರಿಂದ ಹಲ್ಲೆ

ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಸಮೀರ್ ಮುಲ್ಲಾ ಮನೆಗೆ ಹೋಗಿ ಆತನನ್ನು ಹಿಡಿದುಕೊಂಡು ಥಳಿಸಿ ಆತನನ್ನು ಹಳೆ ಹುಬ್ಬಳ್ಳಿ ಠಾಣೆಗೆ ಒಪ್ಪಿಸಿದ್ದರು. ಇತ್ತ ಸಮೀರ್ ಮುಲ್ಲಾ ನನ್ನು ಯುವತಿ ಮನೆಯವರೇ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದು ಸಮೀರ್ ಮುಲ್ಲಾ ಮನೆಯವರು ಯುವತಿ ಮನೆಗೆ ನುಗ್ಗಿ ಗಲಾಟೆ ಮಾಡಿ ಅನೇಕರ ಮೇಲೆ ಹಲ್ಲೆ ಮಾಡಿದ್ದರು. ಇತ್ತ ಪೊಲೀಸರು ಬರುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದ್ದರು. ಇನ್ನು ಇದಾದ ನಂತರ ಹಳೆ ಹುಬ್ಬಳ್ಳಿ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮತ್ತು ವಿವಿಧ ಸಮಾಜದವರು, ಪ್ರತಿಭಟನೆ ನಡೆಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಜಿಮ್‌ಗಳು ಲವ್ ಜಿಹಾದ್ ಕೇಂದ್ರಗಳಾಗುತ್ತಿವೆ ಎಂದು ಹಿಂದೂ ಸಂಘಟನೆಗಳು ವ್ಯಕ್ತಪಡಿಸಿದ್ದು,  ಸಮೀರ್ ಜಿಮ್‌ನಲ್ಲಿ ಹಿಂದೂ ಹುಡುಗಿಯನ್ನು ಪರಿಚಯ ಮಾಡಿಕೊಂಡು ಲವ್ ಜಿಹಾದ್ ಮಾಡುತ್ತಿದ್ದ. ಹೀಗಾಗಿ ಸಮೀರ್‌ಗೆ ತಕ್ಕ ಶಿಕ್ಷೆ ಆಗಬೇಕು. ಅಲ್ಲದೇ ಜಿಮ್ ಬಂದ್ ಮಾಡಿಸಬೇಕೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಅವರಿಬ್ಬರು ಪರಿಚಿತರು ಎಂದ ಪೋಷಕರು

ಮತ್ತೊಂದಡೆ ಗಾಯಳು ಸಮೀರ್ ಮುಲ್ಲಾನನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಿ, ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಮೀರ್ ಪೋಷಕರು, ನಮ್ಮ ಮಗ ಯಾವುದೇ ಲವ್ ಜಿಹಾದ್ ಮಾಡಿಲ್ಲ. ಅವರಿಬ್ಬರು ಪರಿಚಿತರು, ಓಡಾಡಿಕೊಂಡಿದ್ದರು. ಆದ್ರೆ ಇದನ್ನೇ ತಪ್ಪಾಗಿ ತಿಳಿದುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸಮೀರ್ ವಿರುದ್ಧ ಸಂತ್ರಸ್ತೆ ಸ್ಫೋಟಕ ಹೇಳಿಕೆ

ಇನ್ನು ಈ ಬಗ್ಗೆ ಸಂತ್ರಸ್ತೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಈ ವಿಡಿಯೋನಲ್ಲಿ ಸಮೀರ್ ಜತೆ ಹೇಗೆ ಪರಿಯವಾಯ್ತು ? ಬಳಿಕ ಏನೆಲ್ಲಾ ಆಯ್ತು ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಮೀರ್​ ಸೋದರಿ ತೈಸೀಮ್ ಮುಲ್ಲಾ ನನ್ನ ಸ್ನೇಹಿತೆ. ಆಕೆಯಿಂದ ನನಗೆ ಸಮೀರ್ ಪರಿಚಯವಾಗಿತ್ತು. ಆತ ಚೆನ್ನಾಗಿ ಜಿಮ್ ಮಾಡಿಸುತ್ತಾನೆಂದು ಹೇಳಿದ್ದಳು. ಹೀಗಾಗಿ ಜಿಮ್​​ನಲ್ಲಿ ಪರಿಚಯವಾಗಿದ್ದು, ಬಳಿಕ ಬರ್ತಡೇ ಪಾರ್ಟಿ, ವಿಕೇಂಡ್ ಪಾರ್ಟಿಗೆ ಹೋಗಿದ್ವಿ. ನಮ್ಮ ಬರ್ತಡೇ ಪಾರ್ಟಿಗೆ ಸಮೀರ್ ಸಹ ಬಂದಿದ್ದ. ಇದಾದ ಮೇಲೆ ಸಮೀರ್ ನನಗೆ ಆತ್ಮೀಯನಾಗಿದ್ದ ಎಂದಿದ್ದಾರೆ.

ಮತ್ತು ಬರುವ ಜ್ಯೂಸ್​ ಕೊಟ್ಟು ಅತ್ಯಾಚಾರ

ಒಂದು ದಿನ ಸಮೀರ್ ತನ್ನ ಮನೆಗೆ ಕರೆದೊಯ್ದಿದ್ದ. ಬಳಿಕ ಮನೆಯಲ್ಲಿ ಮತ್ತು ಬರುವ ಜ್ಯೂಸ್​ ಕೊಟ್ಟು ಅತ್ಯಾಚಾರ ​ ಮಾಡಿದ್ದ. ಅಲ್ಲದೇ ಅತ್ಯಾಚಾರ ಮಾಡಿರುವುದನ್ನು ವಿಡಿಯೋ ಮಾಡಿದ್ದು, ಅದನ್ನು ನನಗೆ ತೋರಿಸಿದ್ದ. ಅಲ್ಲದೇ ಆ ವಿಡಿಯೋ ಇಟ್ಟುಕೊಂಡು ಬ್ಲಾಕ್​ಮೇಲ್ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ದೂರು ಪ್ರತಿದೂರು

ಈ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ. ಸಮೀರ್ ಮುಲ್ಲಾನನ್ನು ಕರೆದುಕೊಂಡು ಹೋಗಿ ಥಳಿಸಿದ ಬಗ್ಗೆ ಯುವಕನ ಮನೆಯವರು ಅಶೋಕ್ ನಗರ ಠಾಣೆಗೆ ದೂರು ನೀಡಿದ್ರೆ, ಇತ್ತ ಯುವತಿ ಮನೆಯವರ ಮೇಲೆ ಹಲ್ಲೆ ಸೇರಿದಂತೆ ಯುವತಿ ಮೇಲೆ ಲೈಂಗಿಕ ಕಿರುಕುಳ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಎರಡು ಕಡೆಯವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಮುಂದೆ ಈ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರಿಗೆ ಬ್ಯಾಡ್​​ ನ್ಯೂಸ್​: ಸದ್ಯ ಸಾರ್ವಜನಿಕ ಸೇವೆಗೆ ಲಭ್ಯವಾಗಲ್ಲ ಬಹುನಿರೀಕ್ಷಿತ ಈ ಫ್ಲೈಓವರ್​

ಬೆಂಗಳೂರು, ಏಪ್ರಿಲ್​​ 03: ನಾನಾ ಕಾರಣಗಳಿಂದಾಗಿ ಕುಂಟುತ್ತಾ ಸಾಗಿರುವ ಬೆಂಗಳೂರಿನ (Bengaluru) ಬಹು ನಿರೀಕ್ಷಿತ ಈಜಿಪುರ ಫ್ಲೈಓವರ್ ಸಾರ್ವಜನಿಕ ಬಳಕೆಗೆ ಲಭ್ಯವಾಗುವುದು ಮತ್ತಷ್ಟು ವಿಳಂಬವಾಗಲಿದೆ. ಈಗಿನ ಮಾಹಿತಿಯ ಪ್ರಕಾರ ಜೂನ್​​ ಒಳಗೆ ಮುಗಿಯಬೇಕಿದ್ದ ಮೇಲ್ಸೇತುವೆಯ ಕೆಲಸ ಆಗಸ್ಟ್ ವೇಳೆಗೆ ಕಂಪ್ಲೀಟ್​​ ಆಗಬಹುದು ಎನ್ನಲಾಗ್ತಿದೆ. ಮಾರ್ಚ್ ಗಡುವನ್ನು ಹೊಂದಿದ್ದ ಈ ಕಾಮಗಾರಿ ಭೂಸ್ವಾಧೀನ ಹಾಗೂ ಇಂಜಿನಿಯರ್ ವರ್ಗಾವಣೆ ಸಮಸ್ಯೆಗಳ ಕಾರಣದಿಂದ ಅದಾಗಲೇ ವಿಳಂಬವಾಗಿತ್ತು ಎನ್ನುವುದಿಲ್ಲಿ ಗಮನಾರ್ಹ.

2017ರಲ್ಲಿ ಸಿಂಪ್ಲೆಕ್ಸ್​​ ಇನ್ಫ್ರಾಸ್ಟ್ರಕ್ಚರ್​​ ಸಂಸ್ಥೆ ಈ ಫ್ಲೈಓವರ್ ಕಾಮಗಾರಿ ಆರಂಭಿಸಿತ್ತು. ಆದರೆ ನಂತರ ಸಂಸ್ಥೆ ಯೋಜನೆಯನ್ನು ಅರ್ಧದಲ್ಲೇ ಬಿಟ್ಟಿತ್ತು. ಬಳಿಕ ಹೈದರಾಬಾದ್ ಮೂಲದ ಬೊಳ್ಳಿನೇನಿ ಸೀನಯ್ಯ ಕಂಪನಿ ಪ್ರೈವೇಟ್ ಲಿಮಿಟೆಡ್(BSCPL) ಸಂಸ್ಥೆಗೆ 2024ರಲ್ಲಿ 15 ತಿಂಗಳ ಗಡುವಿನೊಂದಿಗೆ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನೀಡಲಾಗಿತ್ತು. ಈಜಿಪುರ ಮುಖ್ಯ ರಸ್ತೆಯ ಮೇಲೆ ನಿರ್ಮಾಣವಾಗುತ್ತಿರುವ 2.38 ಕಿಮೀ ಉದ್ದದ ಫ್ಲೈಓವರ್‌ನಲ್ಲಿ ಒಟ್ಟು 762 ಸೆಗ್ಮೆಂಟ್‌ಗಳು ಬರಲಿದ್ದು, ಆ ಪೈಕಿ ಇನ್ನೂ ಸುಮಾರು 20 ಸೆಗ್ಮೆಂಟ್‌ಗಳನ್ನು ಅಳವಡಿಸೋದು ಬಾಕಿ ಇದೆ. ಸೇಂಟ್ ಜಾನ್ಸ್ ಜಂಕ್ಷನ್ ಬಳಿ ಪಿಯರ್ ಕೆಲಸ ಈಗಷ್ಟೇ ಆರಂಭವಾಗಿರುವುದರಿಂದ ಕೆಲವು ವಾರಗಳು ಬೇಕಾಗುತ್ತದೆ ಎಂದು ಇಂಜಿನಿಯರ್ ತಿಳಿಸಿದ್ದಾರೆ. ಡೊಮ್ಲೂರ್ ಭಾಗ ಹಾಗೂ ಕೇಂದ್ರಿಯ ಸದನ್ ಭಾಗದಲ್ಲಿ ಅಪ್ ರ್ಯಾಂಪ್ ಮತ್ತು ಡೌನ್ ರ್ಯಾಂಪ್ ಕೆಲಸಗಳು ಕೂಡ ಪ್ರಾರಂಭವಾಗಿವೆ. ಮಣ್ಣಿನ ಸ್ಥಿರೀಕರಣ, ಸೈಡ್‌ವಾಲ್ ನಿರ್ಮಾಣ ಹಾಗೂ ನಂತರ ಬಿಟುಮಿನ್ ಹಾಸುವ ಕೆಲಸಗಳಿಗೆ ಸಮಯ ಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೆ.ಆರ್. ಮಾರುಕಟ್ಟೆಗೆ ಸಿಗಲಿದೆ ಹೈಟೆಕ್ ಸ್ಪರ್ಶ; ಒಂದು ವಾರದೊಳಗೆ ಅಭಿವೃದ್ಧಿ ರಿಪೋರ್ಟ್ ನೀಡಲು ಮಹೇಶ್ವರ ರಾವ್ ಸೂಚನೆ

ಇನ್ನು ಕಾಮಗಾರಿ ವಿಳಂಬದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ಕಾರಣಗಳಿಗೂ ಕೆಲಸ ವಿಳಂಬವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ. ಈ ಫ್ಲೈಓವರ್ ಪೂರ್ಣಗೊಂಡರೆ ಈಜಿಪುರ ಜಂಕ್ಷನ್, ಸೋನಿ ವರ್ಲ್ಡ್ ಸಿಗ್ನಲ್ ಮತ್ತು ಕೇಂದ್ರೀಯ ಸದನ ಸೇರಿದಂತೆ ಕೋರಮಂಗಲದ ಒಟ್ಟು 7 ಪ್ರಮುಖ ಜಂಕ್ಷನ್‌ಗಳನ್ನು ಬೈಪಾಸ್ ಮಾಡಬಹುದು. ಇದರಿಂದ ಪ್ರಯಾಣದ ಅವಧಿ ಸುಮಾರು 30 ನಿಮಿಷಗಳ ಉಳಿತಾಯವಾಗಲಿದೆ. ಹೀಗಾಗಿ ಆದಷ್ಟು ಶೀಘ್ರ ಮೇಲ್ಸೇತುವೆ ಸಾರ್ವಜನಿಕ ಸೇವೆಗೆ ಮುಕ್ತವಾಗಬೇಕೆಂಬ ಆಗ್ರಹವೂ ಕೆಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಎಲ್ಲವನ್ನು ಸರಿಪಡಿಸಿಕೊಳ್ಳೋಣ’; ಬಿಸಿಸಿಐಗೆ ಪತ್ರ ಬರೆದ ಬಾಂಗ್ಲಾ ಕ್ರಿಕೆಟ್ ಮಂಡಳಿ

ಬಿಸಿಸಿಐ (BCCI) ಎದುರು ತೊಡೆ ತಟ್ಟಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಇದೀಗ ಸೋತು ಶರಣಾದಂತೆ ತೋರುತ್ತಿದೆ. ಬಿಸಿಸಿಐ ಜೊತೆ ಜಿದ್ದಿಗೆ ಬಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇದರ ಪರಿಣಾಮವಾಗಿ ತನ್ನ ತಂಡದ ಆಟಗಾರರು ಐಪಿಎಲ್ ಆಡದಂತ್ತಾಯಿತು. ಇದರ ಜೊತೆಗೆ ತನ್ನ ತಂಡ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸದಂತ್ತಾಯಿತು. ಇದೀಗ ಮುಂಬರುವ ಉಭಯ ದೇಶಗಳ ಸರಣಿಯೂ ರದ್ದಾಗುವ ಸಾಧ್ಯತೆಯಿದೆ. ಹಾಗೆಯೇ ಮುಂದಿನ ಆವೃತ್ತಿಯ ಏಷ್ಯಾಕಪ್ ಕೂಡ ಕೈಜಾರುವ ಸ್ಥಿತಿಯಲ್ಲಿದೆ. ಈಗಾಗಲೇ ನಷ್ಟದ ಸುಳಿಯಲ್ಲಿ ಸಿಲುಕಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಬಿಸಿಸಿಐನೊಂದಿಗೆ ಸಂಬಂಧ ಮತ್ತಷ್ಟು ಹಳಸಿದರೆ, ಪಾತಾಳಕ್ಕೆ ಕುಸಿಯಲಿದೆ. ಹೀಗಾಗಿ ಅದಗೆಟ್ಟಿರುವ ಸಂಬಂಧವನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಬಿಸಿಸಿಐಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ.

ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಬಿಸಿಸಿಐಗೆ ಪತ್ರ ಬರೆದಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ . ಭಾರತ ಮತ್ತು ಬಾಂಗ್ಲಾದೇಶ ನಡುವಿನ ದೀರ್ಘಕಾಲದ ಕ್ರಿಕೆಟ್ ಸಂಬಂಧಗಳನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಎರಡು ಮಂಡಳಿಗಳ ನಡುವಿನ ಸಂಬಂಧವನ್ನು ಪುನಃಸ್ಥಾಪಿಸುವ ಬಯಕೆಯನ್ನು ವ್ಯಕ್ತಪಡಿಸಲಾಗಿದೆ ಎಂದು ಬಿಸಿಸಿಐ ಮತ್ತು ಬಿಸಿಬಿಯ ಮೂಲಗಳು ತಿಳಿಸಿವೆ.

ಬಾಂಗ್ಲಾ ಮಂಡಳಿಗೆ ಸಾಲು ಸಾಲು ಸಂಕಷ್ಟ

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿಲುವು ಬದಲಾವಣೆಗೆ ಪ್ರಮುಖ ಕಾರಣ ಮುಂಬರುವ ಪ್ರಮುಖ ಟೂರ್ನಮೆಂಟ್ ಮತ್ತು ಸರಣಿ. ಭಾರತ ಮತ್ತು ಬಾಂಗ್ಲಾದೇಶ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿವೆ, ಇದಕ್ಕಾಗಿ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಮಾಡಬೇಕಾಗಿದೆ. ಈ ಸರಣಿಯನ್ನು ಮೂಲತಃ ಕಳೆದ ವರ್ಷ ಆಡಲು ನಿರ್ಧರಿಸಲಾಗಿತ್ತು, ಆದರೆ ಬಾಂಗ್ಲಾದೇಶದ ಪರಿಸ್ಥಿತಿಯಿಂದಾಗಿ, ಅದನ್ನು ಸೆಪ್ಟೆಂಬರ್ 2026 ಕ್ಕೆ ಮುಂದೂಡಲು ನಿರ್ಧರಿಸಲಾಯಿತು. ಆದಾಗ್ಯೂ, ಐಪಿಎಲ್ ಮತ್ತು ಟಿ20 ವಿಶ್ವಕಪ್ ಸುತ್ತಲಿನ ವಿವಾದವು ಈ ಸರಣಿಯನ್ನು ಅಪಾಯಕ್ಕೆ ಸಿಲುಕಿಸಿದೆ.

ಏಷ್ಯಾಕಪ್ ಸ್ಥಳಾಂತರವಾಗಬಹುದು

ಈ ಸರಣಿ ಮಾತ್ರವಲ್ಲ, ಮುಂದಿನ ವರ್ಷದ ಏಷ್ಯಾಕಪ್ ಕೂಡ ಈ ಪ್ರಯತ್ನಕ್ಕೆ ಪ್ರಮುಖ ಕಾರಣವಾಗಿದೆ. ಬಾಂಗ್ಲಾದೇಶದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಆದ್ದರಿಂದ, ಬಿಸಿಸಿಐ ಜೊತೆಗಿನ ಸಂಬಂಧಗಳು ಸುಧಾರಿಸದಿದ್ದರೆ, ಟೀಂ ಇಂಡಿಯಾ ಈ ಪಂದ್ಯಾವಳಿಗಾಗಿ ಬಾಂಗ್ಲಾದೇಶಕ್ಕೆ ಪ್ರಯಾಣಿಸಲು ನಿರಾಕರಿಸಬಹುದು, ಇದರಿಂದಾಗಿ ಅದನ್ನು ಬಾಂಗ್ಲಾದೇಶದ ಹೊರಗೆ ಸ್ಥಳಾಂತರಿಸಬೇಕಾಗುತ್ತದೆ. ಒಂದು ವೇಳೆ, ಟೀಂ ಇಂಡಿಯಾ ದ್ವಿಪಕ್ಷೀಯ ಸರಣಿ ಮತ್ತು ಏಷ್ಯಾಕಪ್‌ಗಾಗಿ ಬಾಂಗ್ಲಾದೇಶಕ್ಕೆ ಪ್ರಯಾಣಿಸದಿದ್ದರೆ, ಅದು ಬಿಸಿಬಿಗೆ ಗಮನಾರ್ಹ ನಷ್ಟವನ್ನುಂಟು ಮಾಡುತ್ತದೆ. ಹೀಗಾಗಿ ಇದನ್ನು ತಪ್ಪಿಸಲು, ಪರಿಸ್ಥಿತಿಯನ್ನು ಸರಿಪಡಿಸುವ ಬಯಕೆಯನ್ನು ಮಂಡಳಿ ವ್ಯಕ್ತಪಡಿಸುತ್ತಿದೆ.

IPL 2026: 12 ಸ್ಥಳ, 50 ಪಂದ್ಯಗಳು; ಐಪಿಎಲ್​ನ ಎರಡನೇ ಹಂತದ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಬದಲಾವಣೆಗೆ ಮುಂದಾದ ಹೊಸ ಸರ್ಕಾರ

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಉರುಳಿಸಿದ ನಂತರ, ಕಳೆದ ಒಂದೂವರೆ ವರ್ಷದಿಂದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ಹದಗೆಡುತ್ತಿವೆ. ಅಂದಿನಿಂದ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಹತ್ಯೆಗಳು ನಡೆಯುತ್ತಿವೆ. ಇದಲ್ಲದೆ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದೆ. ಜನವರಿ 2026 ರಲ್ಲಿ, ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರಗಿಡಲು ಬಿಸಿಸಿಐ ಆದೇಶಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಮಧ್ಯಂತರ ಸರ್ಕಾರದ ಕ್ರೀಡಾ ಸಚಿವರು ಮತ್ತು ಆ ಸಮಯದಲ್ಲಿ ಮಂಡಳಿಯ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳು ಭಾರತದಲ್ಲಿ ಟಿ20 ವಿಶ್ವಕಪ್ ಆಡಲು ನಿರಾಕರಿಸಿದರು.

ಐಸಿಸಿ ಪದೇ ಪದೇ ಒತ್ತಾಯಿಸಿದರೂ ಬಾಂಗ್ಲಾದೇಶ ಮಣಿಯಲು ನಿರಾಕರಿಸಿದಾಗ, ಅದನ್ನು ಪಂದ್ಯಾವಳಿಯಿಂದ ಹೊರಹಾಕಲಾಯಿತು. ಇದೀಗ ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು ಅಂದಿನಿಂದ, ಬಾಂಗ್ಲಾದೇಶ ಸರ್ಕಾರ ಮತ್ತು ಅದರ ಮಂಡಳಿಯು ಭಾರತದೊಂದಿಗೆ ಸಂಬಂಧವನ್ನು ಸುಧಾರಿಸಲು ಕೆಲಸ ಮಾಡುತ್ತಿದೆ. ಇದರ ಪರಿಣಾಮವು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರವೇ ಬಿಸಿಸಿಐ ಈ ವಿಷಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಐದೂ ಪಾಲಿಕೆಗಳಿಗೆ ಲೋಗೋ ಭಾಗ್ಯ: ಲಾಂಛನಗಳ ವಿಶೇಷತೆ ತಿಳಿಯಿರಿ

Source link

‘ದಿ ಕೇರಳ ಸ್ಟೋರಿ’ ಬಗ್ಗೆ ಮಲಯಾಳಂ ಸ್ಟಾರ್ ನಟ ಟೊವಿನೊ ಥಾಮಸ್ ಹೇಳಿದ್ದೇನು?

ಇತ್ತೀಚೆಗಷ್ಟೆ ‘ದಿ ಕೇರಳ ಸ್ಟೋರಿ 2’ (The Kerala story 2) ಸಿನಿಮಾ ಬಿಡುಗಡೆ ಆಯ್ತು. ಮೊದಲ ಭಾಗದಷ್ಟು ದೊಡ್ಡ ಹಿಟ್ ಆಗದಿದ್ದರೂ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಸೋಲನ್ನೇನೂ ಕಾಣಲಿಲ್ಲ. ಆದರೆ ಸಿನಿಮಾದ ಮೊದಲ ಭಾಗಕ್ಕೆ ಬಂದಷ್ಟು ವಿರೋಧ ವಿಶೇಷವಾಗಿ ಕೇರಳದಿಂದ ಈ ಬಾರಿ ವ್ಯಕ್ತವಾಗಲಿಲ್ಲ. ಮೊದಲ ಭಾಗ ಬಿಡುಗಡೆ ಆಗುವಾಗ ಖುದ್ದು ಸರ್ಕಾರವೇ ಸಿನಿಮಾದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿತ್ತು. ಕೆಲವಾರು ಸೆಲೆಬ್ರಿಟಿಗಳು ಸಹ ಸಿನಿಮಾದ ವಿರುದ್ಧ ಮಾತನಾಡಿದ್ದರು. ಆದರೆ ಈ ಬಾರಿ ಅಂಥಹದ್ದೇನೂ ಹೆಚ್ಚಿಗೆ ಕಂಡು ಬರಲಿಲ್ಲ. ಮಲಯಾಳಂನ ಸ್ಟಾರ್ ನಟರುಗಳಲ್ಲಿ ಒಬ್ಬರಾದ ಟೊವಿನೊ ಥಾಮಸ್ ಈ ಬಗ್ಗೆ ಮಾತನಾಡಿದ್ದಾರೆ.

ಟೊವಿನೊ ಥಾಮಸ್ ಅವರು ತಮ್ಮ ಹೊಸ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಈ ವೇಳೆ ಅವರಿಗೆ ‘ದಿ ಕೇರಳ ಸ್ಟೋರಿ 2’ ಸಿನಿಮಾದ ಬಗ್ಗೆ ಪ್ರಶ್ನೆ ಎದುರಾಗಿದೆ. ನೀವೇಕೆ ಸಿನಿಮಾದ ವಿರುದ್ಧ ಮಾತನಾಡಲಿಲ್ಲ ಅಥವಾ ಸಾಮಾಜಿಕ ಜಾಲತಾಣದಲ್ಲಿ ಯಾವ ಸಂದೇಶವನ್ನೂ ಸಹ ಹಂಚಿಕೊಂಡಿಲ್ಲ ಎಂಬ ಪ್ರಶ್ನೆ ಕೇಳಲಾಯ್ತು. ಇದಕ್ಕೆ ಜಾಣತನದ ಉತ್ತರವನ್ನು ಟೊವಿನೋ ಥಾಮಸ್ ನೀಡಿದ್ದಾರೆ ಅಲ್ಲದೆ, ಆ ಸಿನಿಮಾದ ಬಗ್ಗೆ ತಮ್ಮ ಸ್ಪಷ್ಟ ನಿಲವು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮುಗಿಯಿತು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಆಟ: ಅಂತಿಮವಾಗಿ ಆದ ಕಲೆಕ್ಷನ್ ಎಷ್ಟು?

‘ನಾನು ‘ಕೇರಳ ಸ್ಟೋರಿ’ ಮೊದಲ ಭಾಗ ನೋಡಿದೆ. ಎರಡನೇ ಭಾಗ ನಾನು ನೋಡಿಲ್ಲ. ನಾನು ಮಾತ್ರವಲ್ಲ ಕೇರಳದಲ್ಲಿ ಯಾರೂ ನೋಡಿದಂತಿಲ್ಲ. ಸುಮ್ಮನೆ ಮಾತನಾಡಿ, ಅದಕ್ಕೆ ಪ್ರಚಾರ ನೀಡುವ ಬದಲಿಗೆ ಸುಮ್ಮನಿರುವುದು ಒಳ್ಳೆಯದು ಎನಿಸಿ ನಾನು ಆ ಸಿನಿಮಾದ ಬಗ್ಗೆ ಏನೂ ಮಾತನಾಡಲಿಲ್ಲ. ಪೋಸ್ಟ್ ಸಹ ಮಾಡಲಿಲ್ಲ. ನಾವು ಅದನ್ನು ವಿರೋಧಿಸಿದ್ದರೂ ಸಹ ಅದಕ್ಕೆ ಪ್ರಚಾರ ನೀಡಿದಂತಾಗುತ್ತಿತ್ತು’ ಎಂದಿದ್ದಾರೆ ಟೊವಿನೊ ಥಾಮಸ್.

‘ಮೊದಲ ಭಾಗ ಬಿಡುಗಡೆ ಆದಾಗ ನಾನು ಅದನ್ನು ವಿರೋಧಿಸಿ ಪೋಸ್ಟ್ ಹಾಕಿದ್ದೆ, ಅದು ಒಂದು ರೀತಿಯಲ್ಲಿ ಆ ಸಿನಿಮಾಕ್ಕೆ ಪ್ರಚಾರವೇ ಆಗಿಬಿಟ್ಟಿತು. ಅದನ್ನು ಗಮನಿಸಿದ್ದೆ ಹಾಗಾಗಿ ಈ ಬಾರಿ ಹಾಗೇನೂ ಮಾಡಲಿಲ್ಲ. ಕೇರಳದಲ್ಲಿ ಕೋಟ್ಯಂತರ ಮಂದಿ ಮಹಿಳೆಯರಿದ್ದಾರೆ. ಯಾವುದೋ 3 ಘಟನೆಗಳನ್ನು ಇರಿಸಿಕೊಂಡು ಇಡೀ ಕೇರಳದಲ್ಲಿ ಇಂಥಹುದ್ದೇ ನಡೆಯುತ್ತಿದೆ ಎಂದು ಬಿಂಬಿಸುವುದು ಕೆಟ್ಟದು. ಅದು ಸರಿಯಲ್ಲ’ ಎಂದಿದ್ದಾರೆ ಟೊವಿನೊ ಥಾಮಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇವರೇ ಅಲ್ವಾ ‘ಬೆಸ್ಟ್ ಬಾಸ್’ ಅಂದ್ರೆ!: ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ

ದೆಹಲಿ, ಏಪ್ರಿಲ್ 03: ಸಾಮಾನ್ಯವಾಗಿ ಹಣಕಾಸು ವರ್ಷದ ಅಂತ್ಯ ಎಂದರೆ ಉದ್ಯೋಗಿಗಳಿಗೆ ಟಾರ್ಗೆಟ್ ಮುಗಿಸುವ ಒತ್ತಡವಿರುತ್ತದೆ. ಆದರೆ ದೆಹಲಿಯ ಈ ಏಜೆನ್ಸಿ ಬಾಸ್ ಮಾತ್ರ ತನ್ನ ಉದ್ಯೋಗಿಗಳಿಗೆ ಅಚ್ಚರಿಯ ಮತ್ತು ಖುಷಿಯ ಸುದ್ದಿಯೊಂದನ್ನು ನೀಡಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಕಂಪನಿಯು ಅದ್ಭುತ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ, ಎಲ್ಲಾ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸವನ್ನು ಉಡುಗೊರೆಯಾಗಿ ಘೋಷಿಸಿದ್ದಾರೆ. “ಕಳೆದ ಹಣಕಾಸು ವರ್ಷ ನಮಗೆ ಅದ್ಭುತವಾಗಿತ್ತು. ನಮ್ಮ ತಂಡದ ಕಠಿಣ ಪರಿಶ್ರಮಕ್ಕೆ ಪ್ರತಿಫಲವಾಗಿ ಎಲ್ಲರಿಗೂ 4 ದಿನಗಳ ಗೋವಾ ಪ್ರವಾಸವನ್ನು ಆಯೋಜಿಸಲಾಗಿದೆ. ಅಲ್ಲಿ ಎಲ್ಲರೂ ರಿಲ್ಯಾಕ್ಸ್ ಆಗಿ, ಮನಸ್ಸನ್ನು ರಿಸೆಟ್ ಮಾಡಿಕೊಂಡು ಮತ್ತೆ ಹೊಸ ಹುರುಪಿನಿಂದ ಕೆಲಸ ಮುಂದುವರಿಸೋಣ” ಎಂದು ಏಜೆನ್ಸಿ ಮುಖ್ಯಸ್ಥರು ಘೋಷಿಸಿದ್ದಾರೆ. ಕಂಪನಿಯ ಈ ನಿರ್ಧಾರಕ್ಕೆ ಉದ್ಯೋಗಿಗಳು ಫಿದಾ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಈಗ ಭಾರಿ ವೈರಲ್ ಆಗುತ್ತಿದೆ. “ಇಂತಹ ಬಾಸ್ ಎಲ್ಲರಿಗೂ ಸಿಗಲಿ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮೊದಲ ಗೆಲುವಿನ ಹುಡುಕಾಟದಲ್ಲಿ ಸಿಎಸ್​ಕೆ; ತಂಡದಲ್ಲಿ ಏನೆಲ್ಲಾ ಬದಲಾವಣೆ?

ಐಪಿಎಲ್ 2026 (IPL 2026) ರ ಏಳನೇ ಪಂದ್ಯವು ಏಪ್ರಿಲ್ 3 ರ ಶುಕ್ರವಾರದಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ (CSK vs PBKS) ನಡುವೆ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಆರಂಭವಾಗಲಿದೆ. ಕಳೆದ ಆವೃತ್ತಿಯಲ್ಲಿ ಈ ಎರಡೂ ತಂಡಗಳ ನಡುವೆ ನಡೆದ 2 ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಗೆದ್ದುಕೊಂಡಿದೆ. ಹೀಗಾಗಿ ಹಿಂದಿನ ಸೋಲುಗಳಿಗೆ ಸೇಡು ತೀರಿಸಿಕೊಳ್ಳಲು ಸಿಎಸ್​ಕೆ ಸಿದ್ಧವಾಗಿದೆ. ಆದಾಗ್ಯೂ ಈ ಆವೃತ್ತಿಯಲ್ಲಿ ಸಿಎಸ್​ಕೆ ತಂಡಕ್ಕೆ ಗೆಲುವಿನ ಆರಂಭ ಸಿಕ್ಕಿಲ್ಲ ಎಂಬುದು ತಂಡವನ್ನು ಒತ್ತಡಕ್ಕೆ ಸಿಲುಕಿಸಿದೆ. ಇತ್ತ ಪಂಜಾಬ್ ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲಲು ಸಿಎಸ್​ಕೆ ಸಾಕಷ್ಟು ಬೆವರು ಹರಿಸಬೇಕಾಗಿದೆ.

ಚಿದಂಬರಂ ಪಿಚ್ ವರದಿ

ಐಪಿಎಲ್ 2026 ರ 7 ನೇ ಪಂದ್ಯವು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಇಲ್ಲಿ ಮೇಲುಗೈ. ಈ ಕ್ರೀಡಾಂಗಣದಲ್ಲಿ ಆಡಿದ ಕಳೆದ 5 ಟಿ20 ಪಂದ್ಯಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ತಂಡವು ನಾಲ್ಕು ಪಂದ್ಯಗಳಲ್ಲಿ ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

ಹೆಡ್-ಟು-ಹೆಡ್ ದಾಖಲೆ

ಉಭಯ ತಂಡಗಳ ನಡುವೆ ಇದುವರೆಗೆ 32 ಪಂದ್ಯಗಳು ನಡೆದಿವೆ. ಈ ಮುಖಾಮುಖಿಯಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿವೆ. ಅಂದರೆ ಚೆನ್ನೈ ಸೂಪರ್ ಕಿಂಗ್ಸ್ 16 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ಕೂಡ 16 ಪಂದ್ಯಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಮುನ್ನಡೆ ಸಾಧಿಸಲಿದೆ.

ಸಂಭಾವ್ಯ ಪ್ಲೇಯಿಂಗ್ 11

ಸಿಎಸ್​ಕೆ ತಂಡದಲ್ಲಿ 2 ಬದಲಾವಣೆ?

ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಸಿಎಸ್​ಕೆ ಇಂದಿನ ಪಂದ್ಯಕ್ಕೆ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಗಾಯದಿಂದಾಗಿ ಮೊದಲ ಪಂದ್ಯದಿಂದ ಹಿಂದೆ ಸರಿದಿದ್ದ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಈ ಪಂದ್ಯದಲ್ಲಿ ಆಡಬಹುದು. ಹಾಗೆಯೇ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಆಯುಷ್ ಮ್ಹಾತ್ರೆ ಬದಲಿಗೆ ಆಲ್‌ರೌಂಡರ್ ಪ್ರಶಾಂತ್ ವೀರ್ ಅವರನ್ನು ಆಡಿಸಬಹುದು.

ಐಪಿಎಲ್​ನಿಂದ ಬ್ಯಾನ್ ಆಗಿರುವ ಹ್ಯಾರಿ ಬ್ರೂಕ್​ಗೆ ಪಿಎಸ್​ಎಲ್​ನಿಂದ ಆಹ್ವಾನ

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ಕ್ಯಾಚರ್), ಆಯುಷ್ ಮ್ಹಾತ್ರೆ/ ಪ್ರಶಾಂತ್ ವೀರ್, ಮ್ಯಾಟ್ ಶಾರ್ಟ್/ ಡೆವಾಲ್ಡ್ ಬ್ರೆವಿಸ್, ಕಾರ್ತಿಕ್ ಶರ್ಮಾ, ಶಿವಂ ದುಬೆ, ಜೇಮಿ ಓವರ್ಟನ್, ನೂರ್ ಅಹ್ಮದ್, ಮ್ಯಾಟ್ ಹೆನ್ರಿ, ಅನ್ಶುಲ್ ಕಾಂಬೋಜ್, ಖಲೀಲ್ ಅಹ್ಮದ್.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಪ್ರಬ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸನ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್

ನವದೆಹಲಿ, ಏಪ್ರಿಲ್ 03: ಭಾರತ ಸರ್ಕಾರವು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಭಾರತವು ಅಮೆರಿಕದ ಆದೇಶ ಪಾಲಿಸುವ ದೇಶವಲ್ಲ ಎಂದಿರುವ ವಿಶ್ವಸಂಸ್ಥೆಯ ಮಾಜಿ ಭಾರತೀಯ ರಾಯಭಾರಿ ಸೈಯದ್ ಅಕ್ಬರುದ್ದೀನ್ ಈ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿ ಹಾಕಿದ್ದಾರೆ. ಭಾರತವು ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಅವಿಧೇಯತೆ ತೋರಿದ ನಿದರ್ಶನಗಳ ದೀರ್ಘ ಪಟ್ಟಿಯೇ ಇದೆ ಎಂದು ಅವರು ಹೇಳಿದರು.

ಭಾರತ ಅಮೆರಿಕವನ್ನು ಅನುಸರಿಸುತ್ತಿದೆ ಎನ್ನುವ ಆರೋಪಗಳು ಕೂಡ ಆಧಾರ ರಹಿತ, ಡೊನಾಲ್ಡ್ ಟ್ರಂಪ್ ಶಾಂತಿ ಮಂಡಳಿಯನ್ನು ರಚಿಸಿದ್ದಾರೆ, ಪಾಕಿಸ್ತಾನ ಸೇರಿಕೊಂಡಿದೆ, ಭಾರತ ಸೇರಿಕೊಂಡಿಲ್ಲ ಯಾಕೆಂದರೆ ಅದು ನಿಜವಾದ ಅಂತಾರಾಷ್ಟ್ರೀಯ ಸಂಘಟನೆಯಲ್ಲ ಎಂದು ನಮಗೆ ತಿಳಿದಿದೆ ಎಂದರು.ಭಾರತದಲ್ಲಿನ ವಿರೋಧ ಪಕ್ಷವು ಆಗಾಗ ಸರ್ಕಾರವನ್ನು ಟೀಕಿಸಿದೆ ಮತ್ತು ಅದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಆರೋಪಿಸಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಹಲವಾರು ಸಂದರ್ಭಗಳಲ್ಲಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು.ಭಾರತವು ತಮ್ಮ ಮೂಲಕ ಇರಾನ್ ಜೊತೆ ಮಾತುಕತೆ ನಡೆಸಬೇಕೆಂದು ಅಮೆರಿಕ ಬಯಸಿತ್ತು, ನಾವು ಮಾಡಲಿಲ್ಲ, ಉಕ್ರೇನ್ ಸಮಯದಲ್ಲಿ ಭಾರತವು ಅಮೆರಿಕದ ಪರವಾಗಿ ಮತ ಚಲಾಯಿಸಬೇಕೆಂದು ಅಮೆರಿಕ ಬಯಸಿತ್ತು . ನಾವು ಮಾಡಲಿಲ್ಲ. ಭಾರತವು ಅಮೆರಿಕದ ಆದೇಶಗಳನ್ನು ಪಾಲಿಸುವ ದೇಶವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳಿಯ ಕೃತ್ಯ!

ಅಯೋಧ್ಯೆ, ಏ.3: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಗ್ರಾಹಕಿಯ ಸೋಗಿನಲ್ಲಿ ಬಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ನಡೆದಿದೆ. ಅಯೋಧ್ಯೆಯ ಜನನಿಬಿಡ ಪ್ರದೇಶದಲ್ಲಿರುವ ಆಭರಣದ ಅಂಗಡಿಯೊಂದಕ್ಕೆ ಬಂದ ಮಹಿಳೆ, ಆಭರಣಗಳನ್ನು ಖರೀದಿಸುವ ನೆಪದಲ್ಲಿ ಒಳಬಂದಿದ್ದಾಳೆ. ಅಂಗಡಿಯವರು ಆಭರಣಗಳನ್ನು ತೋರಿಸುತ್ತಿದ್ದಾಗ ಸಮಯ ಸಾಧಿಸಿದ ಆಕೆ, ಸುಮಾರು 26 ಗ್ರಾಂ ತೂಕದ ಚಿನ್ನದ ಸರ ಮತ್ತು ನೆಕ್ಲೇಸ್‌ ಅನ್ನು ತನ್ನೊಂದಿಗೆ ತಂದಿದ್ದ ಬಟ್ಟೆಯೊಳಗೆ ಅಡಗಿಸಿಟ್ಟುಕೊಂಡಿದ್ದಾಳೆ. ಕಳುವಾದ ಈ ಆಭರಣಗಳ ಮೌಲ್ಯ ಸುಮಾರು 3,80,000 ರೂಪಾಯಿಗಳಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಅಂಗಡಿಯಿಂದ ಹೊರಬಂದ ತಕ್ಷಣವೇ ಹತ್ತಿರದಲ್ಲೇ ಬೈಕ್‌ನೊಂದಿಗೆ ಕಾಯುತ್ತಿದ್ದ ತನ್ನ ಸಹಚರನ ಜೊತೆಗೂಡಿ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾಳೆ. ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಕೃತ್ಯದ ದೃಶ್ಯಗಳು ಸೆರೆಯಾಗಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link