All posts by nagaraj11081993

ತುಂಗಭದ್ರಾ ಡ್ಯಾಂಗೆ ಹೊಸ ಕ್ರಸ್ಟ್ ಗೇಟ್ ಭಾಗ್ಯ, 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ – Kannada News | Tungabhadra reservoir New crest gates installation work Going Fast

ಕೊಪ್ಪಳ, (ಡಿಸೆಂಬರ್ 29): ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ (Tungabhadra reservoir )ಒಟ್ಟು 33 ಕ್ರಸ್ಟ್​ ಗೇಟ್​​​ಗಳ ಬದಲಾವಣೆ ಮಾಡಲಾಗುತ್ತಿದೆ. ಹೀಗಾಗಿ ಎರಡನೇ ಬೆಳೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಇನ್ನು 52 ಕೋಟಿ ರೂ. ವೆಚ್ಚದಲ್ಲಿ ಗುಜರಾತ್ ಕಂಪನಿಯಿಂದ 33 ಕ್ರಸ್ಟ್​ ಗೇಟ್ ಬದಲಾವಣೆ ಕಾರ್ಯ ಭರದಿಂದ ಸಾಗಿದ್ದು, 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿಯಾಗಿದೆ. ಇನ್ನು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಟಿಬಿ ಡ್ಯಾಂಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನೀನು ಏನೂ ಕಿತ್ತುಕೊಳ್ಳೋಕೆ ಆಗಲ್ಲ: ಗಿಲ್ಲಿ ಎದುರು ಉಗ್ರ ರೂಪ ತಾಳಿದ ಅಶ್ವಿನಿ ಗೌಡ – Kannada News | Ashwini Gowda and Gilli Nata exchange heated words in Bigg Boss Kannada Season 12

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಈ ವಾರ ಗಿಲ್ಲಿ ನಟ ಅವರು ಕ್ಯಾಪ್ಟನ್ ಆಗಿದ್ದಾರೆ. ಈ ಮೊದಲು ಬೇರೆ ಸ್ಪರ್ಧಿಗಳು ಕ್ಯಾಪ್ಟನ್ ಆದಾಗ ಗಿಲ್ಲಿ ನಟ (Gilli Nata) ಅವರು ಕೆಲಸ ಮಾಡಲು ಸೋಮಾರಿತನ ತೋರಿದ್ದರು. ಆದರೆ ಈಗ ಅವರೇ ಕ್ಯಾಪ್ಟನ್ ಆಗಿದ್ದು, ಬೇರೆಯವರು ಅಸಹಕಾರ ತೋರಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಡುವೆ ಜಗಳ ಆಗಿದೆ. ಅಶ್ವಿನಿ ಗೌಡ (Ashwini Gowda) ಅವರನ್ನು ಗಿಲ್ಲಿ ನಟ ಏಕವಚನದಲ್ಲಿ ಮಾತನಾಡಿಸಿದ್ದಾರೆ. ಇದರಿಂದ ಅಶ್ವಿನಿ ಗೌಡ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ ಅವರಿಗೆ ಬಿಗ್ ಬಾಸ್ ಒಂದು ವಿಶೇಷ ಅಧಿಕಾರ ನೀಡಿದರು. ಈ ವಾರ ನಾಮಿನೇಟ್ ಮಾಡುವ ಅವಕಾಶವನ್ನು ಒಬ್ಬರಿಂದ ಕಿತ್ತುಕೊಳ್ಳಬೇಕು ಮತ್ತು ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕು ಎಂದು ಬಿಗ್ ಬಾಸ್ ಸೂಚಿಸಿದರು. ಆಗ ಗಿಲ್ಲಿ ನಟ ಅವರು ಈ ಅಧಿಕಾರವನ್ನು ಬಳಸಿ ಅಶ್ವಿನಿ ಗೌಡ ಅವರ ಅವಕಾಶವನ್ನು ಕಿತ್ತುಕೊಂಡರು.

‘ನಾನು ಕ್ಯಾಪ್ಟನ್ ಆಗಿ ಕಿಚನ್ ಕೆಲಸ ಹೇಳಿದರೆ ಅಶ್ವಿನಿ ಗೌಡ ಅವರು ಪ್ರತಿಕ್ರಿಯೆ ಕೂಡ ನೀಡಿಲ್ಲ. ಇತ್ತೀಚೆಗೆ ಅವರು ಮಾತಿನಲ್ಲಿ ಬಹಳ ಶುಗರ್ ಕೋಟಿಂಗ್ ಮಾಡುತ್ತಾರೆ. ಆಣೆ ಮಾಡಿಸಿಕೊಳ್ಳುವಂತಿಲ್ಲ ಎಂಬುದು ರೂಲ್​ ಬುಕ್​​ನಲ್ಲಿ ಇದೆ. ಆದರೂ ಹಾಗೆಯೇ ಮಾಡುತ್ತಿದ್ದಾರೆ. ಹಾಗಾಗಿ ನಾಮಿನೇಷನ್ ಮಾಡುವ ಅಧಿಕಾರವನ್ನು ಅವರಿಂದ ಕಸಿದುಕೊಳ್ಳುತ್ತೇನೆ’ ಎಂದು ಗಿಲ್ಲಿ ನಟ ಹೇಳಿದರು.

ಇದಕ್ಕೆ ಅಶ್ವಿನಿ ಗೌಡ ಅವರು ಪ್ರತಿಕ್ರಿಯೆ ನೀಡುವಂತೆ ಬಿಗ್ ಬಾಸ್ ಸೂಚಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆಯಿತು. ‘ಮೂರ್ಖರ ಜೊತೆ ಮಾತಾಡೋದಕ್ಕಿಂತ ಮೌನವೇ ಲೇಸು. ಹಾಗಾಗಿ ನಿನ್ನ ಜೊತೆ ಮಾತನಾಡಿ ನಾನು ನನ್ನ ವ್ಯಕ್ತಿತ್ವವನ್ನು ಕೆಳಗೆ ಇಡಲು ಇಷ್ಟಪಡಲ್ಲ. ಕ್ಯಾಪ್ಟನ್ ಆದವರಿಗೆ 2 ಕೊಂಬು ಇರಲ್ಲ. ಈ ಮನೆಯ ಜವಾಬ್ದಾರಿಯನ್ನು ಎಲ್ಲರೂ ಮಾಡಬೇಕು. ನೀನು ಮೊದಲು ಕೆಲಸ ಮಾಡೋದು ಕಲಿ’ ಎಂದು ಅಶ್ವಿನಿ ಗೌಡ ಕೂಗಾಡಿದರು.

ಇದನ್ನೂ ಓದಿ: ಬಿಗ್ ಬಾಸ್ ಗೆಲ್ಲೋದು ಗಿಲ್ಲಿ ನಟ: ಖಚಿತವಾಗಿ ಹೇಳಿದ ಸೂರಜ್ ಸಿಂಗ್

‘ನಿನ್ನಂತವನು ಕ್ಯಾಪ್ಟನ್ ಆದರೆ ಇದೇ ಆಗೋದು. ನಾಮಿನೇಷನ್ ಅಧಿಕಾರ ಕಿತ್ತುಕೊಂಡಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ. ನೀನು ಅಧಿಕಾರಿಂದ ಹೀಗೆ ಮಾಡಿಲ್ಲ. ಇದು ನಿನ್ನ ದುರಹಂಕಾರ. ಇದು ವ್ಯಕ್ತಿತ್ವದ ಆಟ, ದುರಹಂಕಾರದ ಆಟ ಅಲ್ಲ. ನನ್ನನ್ನು 2.0 ರೀತಿ ಇರಲು ಬಿಡು. ನೀನು ಏನೂ ಕಿತ್ತುಕೊಳ್ಳೋಕೆ ಆಗಲ್ಲ’ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತಕ್ಕೆ ಹೆದರಿದ್ದಾರೆ ಪಾಕ್ ಸೇನಾ ಮುಖ್ಯಸ್ಥ; ವೈರಲ್ ಆಯ್ತು ಅಸಿಮ್ ಮುನೀರ್ ವಿಡಿಯೋ – Kannada News | Pakistan Army chief Asim Munir terrified of India hiding behind bulletproof glass

ಇಸ್ಲಮಾಬಾದ್, ಡಿಸೆಂಬರ್ 29: ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ (Asim Munir) ಭಾರತಕ್ಕೆ ಹೆದರಿದ್ದಾರೆ. ಭಾರತದಿಂದ ಭಯಭೀತರಾಗಿರುವ ಅವರು ಗುಂಡು ನಿರೋಧಕ ಗೇರ್ ಮತ್ತು ಗಾಜಿನ ಬಾಕ್ಸ್​​ನೊಳಗೆ ನಿಂತು ಭಾಷಣ ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಭಾರತದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನಿರಂತರ ಭಯದಲ್ಲಿ ಬದುಕುತ್ತಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದಲ್ಲಿ ವೈರಲ್ ಆಗುತ್ತಿರುವ ಸಾಮಾಜಿಕ ಮಾಧ್ಯಮದ ಪೋಸ್ಟ್​ಗಳ ಪ್ರಕಾರ, ಅಸಿಮ್ ಮುನೀರ್ ತುಂಬಾ ಭಯಗೊಂಡಿದ್ದಾರೆ.

ಇದರಿಂದಲೇ ಅವರು ಮುಂಭಾಗದಿಂದ ಹಿಂದಕ್ಕೆ ಆವರಿಸುವ ಗುಂಡು ನಿರೋಧಕ ಜಾಕೆಟ್ ಧರಿಸದೆ ಯಾರನ್ನೂ ಭೇಟಿಯಾಗುವುದಿಲ್ಲ. ಸೇನಾ ಪ್ರಧಾನ ಕಚೇರಿಯ ಒಳಗೆ ಸಹ, ಅವರು ಸಭೆಗಳ ಸಮಯದಲ್ಲಿ ಗುಂಡು ನಿರೋಧಕ ಗಾಜಿನ ಪರದೆಯ ಹಿಂದೆ ಕುಳಿತುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ತಮ್ಮ ದೇಶದ ಸೇನಾ ಮುಖ್ಯಸ್ಥರು ಅಂತಹ ಭಯದಲ್ಲಿ ವಾಸಿಸುತ್ತಿರುವ ದೃಶ್ಯವು ಪಾಕಿಸ್ತಾನಿ ನಾಗರಿಕರಲ್ಲಿ ಕೋಪ ಮತ್ತು ಅಪಹಾಸ್ಯವನ್ನು ಉಂಟುಮಾಡಿದೆ. ನಮ್ಮ ದೇಶದೊಳಗೇ ಈ ರೀತಿ ಹೆದರುತ್ತಾ ಬದುಕುತ್ತಿರುವ ಇವರು ಭಾರತವನ್ನು ಹೇಗೆ ಎದುರಿಸುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಭಾರತದ ಆಪರೇಷನ್ ಸಿಂಧೂರ್ ವೇಳೆ ನೂರ್ ಖಾನ್ ವಾಯುನೆಲೆಗೆ ಹಾನಿ; ಒಪ್ಪಿಕೊಂಡ ಪಾಕಿಸ್ತಾನ

ಪಾಕಿಸ್ತಾನದ ಸೇನಾ ಪ್ರಧಾನ ಕಚೇರಿಯ ಒಳಗಿನಿಂದ ಅಸಿಮ್ ಮುನೀರ್ ಪಾಕಿಸ್ತಾನಿ ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊ ಪಾಕಿಸ್ತಾನಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಗುಂಡು ನಿರೋಧಕ ಗಾಜಿನ ಶೀಟ್ ಹಿಂದೆ ಕುಳಿತು ಮಾತನಾಡುತ್ತಿರುವುದು ಕಂಡುಬರುತ್ತದೆ. ಪತ್ರಕರ್ತರಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಅನೇಕ ಪಾಕಿಸ್ತಾನಿಗಳು ಈಗ ಮುನೀರ್ ಅವರನ್ನು ಭಯಭೀತ ಫೀಲ್ಡ್ ಮಾರ್ಷಲ್ ಎಂದು ಕರೆಯುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೃಷಿ ಸಂಶೋಧನಾ ಕೇಂದ್ರದಲ್ಲಿನ ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?

ಉಡುಪಿ, ಡಿಸೆಂಬರ್​ 29: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೃಷಿ ಸಂಶೋಧನಾ ಕೇಂದ್ರದಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಮರಗಳಿಗೆ ಅಧಿಕಾರಿಗಳು ಕೊಡಲಿ ಏಟು ನೀಡಿದ್ದಾರೆ. ಗೇರು,ಮಾವು ಮರಗಳ ಗೆಲ್ಲು ಕಟಾವಿನ ಹೆಸರಿನಲ್ಲಿ ಬೆಲೆಬಾಳುವ ಮರಗಳ ಮಾರಣಹೋಮ ನಡೆದಿದೆ. ಕೃಷಿ ಕೇಂದ್ರದ ಅಧಿಕಾರಿಗಳ ಮೇಲೆ ಮರ ಸಾಗಾಣಿಕೆಯ ಆರೋಪ ಕೇಳಿಬಂದಿದೆ. ಕೃಷಿ ಅಧಿಕಾರಿಗಳ ಜೊತೆ ಅರಣ್ಯಾಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಮರ ಮಾರಾಟ ಮಾಡಿದ್ದ ಬಗ್ಗೆ ತನಿಖೆ ಮಾಡುವಂತೆ ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

IPL 2026: ಆರ್​ಸಿಬಿಗೆ ತಲೆನೋವಾದ 7 ಕೋಟಿ ಮೊತ್ತದ ಸ್ಟಾರ್ ಆಲ್‌ರೌಂಡರ್ ಕಳಪೆ ಪ್ರದರ್ಶನ – Kannada News | IPL 2026: Venkatesh Iyer’s Form Worries RCB Amid Vijay Hazare Struggles

ವಾಸ್ತವವಾಗಿ ಮುಂಬರುವ ಐಪಿಎಲ್​​ನಲ್ಲಿ ವೆಂಕಟೇಶ್ ಅಯ್ಯರ್ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡಲಿದ್ದಾರೆ. ಐಪಿಎಲ್ 2026 ರ ಮಿನಿ-ಹರಾಜಿನಲ್ಲಿ ಆರ್‌ಸಿಬಿ, ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿಗೆ ಖರೀದಿಸಿತು.

Source link

ಬದಲಾಗುತ್ತಿದೆ ಭಾರತ; 2025ರಲ್ಲಿ ಮಹಾಪರಿವರ್ತನೆ; ಜಿಎಸ್​ಟಿಯಿಂದ ಹಿಡಿದು ಜಿ ರಾಮ್ ಜಿವರೆಗೆ ಹಲವು ಆರ್ಥಿಕ ಸುಧಾರಣೆಗಳು – Kannada News | India’s 2025 Economic Reforms: Modi Govt’s Silent Revolution in Tax, Labor & FDI

2025ರಲ್ಲಿ ಭಾರತದಲ್ಲಿ ಬಹಳ ಮಹತ್ವದ ಆರ್ಥಿಕ ಸುಧಾರಣೆಗಳು ಆಗಿವೆ. ಪ್ರಜಾತಂತ್ರ ದೇಶಗಳಲ್ಲಿ ಇಷ್ಟರ ಪ್ರಮಾಣದಲ್ಲಿ ಮತ್ತು ವೇಗದಲ್ಲಿ ಆರ್ಥಿಕ ಸುಧಾರಣೆಗಳು (economic reforms) ನಡೆಯುವುದನ್ನು ಊಹಿಸಲೂ ಸಾಧ್ಯವಿಲ್ಲ. ಯಾವುದೇ ಸದ್ದಿಲ್ಲದೇ ದೊಡ್ಡ ಸುಧಾರಣೆಗಳನ್ನು ಮಾಡಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ಯುಪಿಎ ಅವಧಿಯಲ್ಲಿ ಘೋಷಣೆಗಳಾಗುತ್ತಿದ್ದವೇ ಹೊರತು ಅದರ ಅನುಷ್ಠಾನ ಅಷ್ಟಕಷ್ಟೇ. ಮೋದಿ ಸರ್ಕಾರ ಸದ್ದಿಲ್ಲದೇ ಕಾರ್ಯಗತಗೊಳಿಸುತ್ತದೆ. ಎರಡು ಸರ್ಕಾರಗಳ ನಡುವೆ ಇರುವ ದೊಡ್ಡ ವ್ಯತ್ಯಾಸ ಇದೆಯೇ. 2014ರಿಂದೀಚೆ ಸರ್ಕಾರ ವಿವಿಧ ಘೋಷಣೆಗಳನ್ನು ಅದೆಷ್ಟು ಅಚ್ಚುಕಟ್ಟಾಗಿ ಜಾರಿಗೆ ತಂದಿತು ಎಂಬುದನ್ನು ನೋಡಿದರೆ ಇದು ಅರಿವಾದೀತು. 2025ರಲ್ಲಿ ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ವಿವಿಧ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಯಿತು.

ಜಿಎಸ್​ಟಿ 2.0

2014ಕ್ಕೆ ಮುಂಚೆ ಭಾರತದಲ್ಲಿ 17 ಪರೋಕ್ಷ ತೆರಿಗೆಗಳಿದ್ದವು. ತೆರಿಗೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ವಿಶ್ವಾಸ ಮತ್ತು ನಂಬಿಕೆಯೇ ಇರಲಿಲ್ಲ. ಯುಪಿಎ ಸರ್ಕಾರ ಜಿಎಸ್​ಟಿ ಪ್ರಸ್ತಾವ ಮಾಡಿತ್ತು. ಆದರೆ, ರಾಜ್ಯಗಳಿಗೆ ಅದರ ಮೇಲೆ ವಿಶ್ವಾಸ ಇರಲಿಲ್ಲ. ಅಂತೆಯೇ, ಜಿಎಸ್​ಟಿ ನೆನೆಗುದಿಗೇ ಉಳಿಯಿತು. ಆದರೆ, ಮೋದಿ ಸರ್ಕಾರ ಬಂದ ಬಳಿಕ 2017ರಲ್ಲಿ ಜಿಎಸ್​ಟಿ ಜಾರಿ ಬಂದಿತು. ಕೇಂದ್ರ ಮತ್ತು ರಾಜ್ಯಗಳ ನಡುವೆ ನ್ಯಾಯಯುತವಾಗಿ ತೆರಿಗೆ ಹಂಚಿಕೆಯ ಮಾದರಿಗೆ ಎಲ್ಲರೂ ಸೈ ಎಂದರು. ಪ್ರಧಾನಿ ಮೋದಿಯಿಂದ ಮಾತ್ರವೇ ಸಾಧ್ಯವಾಗುತ್ತಿದ್ದ ಕಾರ್ಯ ಇದು.

2025ರಲ್ಲಿ ಜಿಎಸ್​ಟಿ 2.0 ಸುಧಾರಣೆ ತರಲಾಯಿತು. ನಾಲ್ಕು ಇರುವ ಟ್ಯಾಕ್ಸ್ ಸ್ಲ್ಯಾಬ್ ಸಂಖ್ಯೆಯನ್ನು ಎರಡಕ್ಕೆ ಇಳಿಸಲಾಯಿತು. ಶೇ. 5 ಮತ್ತು ಶೇ.. 18 ಟ್ಯಾಕ್ಸ್ ಮಾತ್ರ ಇದೆ. ತಂಬಾಕು ಇತ್ಯಾದಿ ಪಾಪದ ಸರಕುಗಳನ್ನು ಬಿಟ್ಟು ಉಳಿದ ಸರಕುಗಳು ಈ ಎರಡು ಸ್ಲ್ಯಾಬ್ ದರಗಳಡಿ ಬರುತ್ತವೆ

12 ಲಕ್ಷ ರೂವರೆಗೆ ಆದಾಯ ತೆರಿಗೆ ಮಾಫಿ

2025ರಲ್ಲಿ ಬಂದ ಮಹತ್ವದ ಕ್ರಮಗಳಲ್ಲಿ ಆದಾಯ ತೆರಿಗೆ ಸುಧಾರಣೆಯೂ ಒಂದು. ಕಳೆದ ಬಾರಿಯ ಬಜೆಟ್​ನಲ್ಲಿ 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಬಾಧ್ಯತೆ ಇಲ್ಲ ಎಂದು ಘೋಷಿಸಲಾಯಿತು. 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿಸಿದರೆ, ಒಟ್ಟು 12.75 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ಬಾಧ್ಯತೆ ಇಲ್ಲ.

ಇದನ್ನೂ ಓದಿ: ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ

ಈ ಒಂದು ಕ್ರಮವು ಮಧ್ಯಮವರ್ಗದ ಬಹುಭಾಗ ತೆರಿಗೆ ಪಾವತಿದಾರರಿಗೆ ಟ್ಯಾಕ್ಸ್ ಬಾಧ್ಯತೆಯೇ ಇಲ್ಲದಂತೆ ಮಾಡಿದೆ. ಜನರ ಜೇಬಿಗೆ ಈಗ ಹೆಚ್ಚು ಹಣ ಸೇರಲು ಸಾಧ್ಯವಾಗಿದೆ. ಹಿಂದೆ ಯುಪಿಎ ಸರ್ಕಾರ ಇದ್ದಾಗ ಎರಡು ಲಕ್ಷ ರೂ ಆದಾಯಕ್ಕೆ ಮಾತ್ರವೇ ಟ್ಯಾಕ್ಸ್ ಎಕ್ಸೆಂಪ್ಷನ್ ಇತ್ತು. ಈಗ 2025ರಲ್ಲಿ ಬಹಳ ಬದಲಾಗಿದೆ.

ಶಾಂತಿ ಬಿಲ್

ದಶಕಗಳ ಕಾಲ ಭಾರತದ ಪರಮಾಣ ವಲಯ ಅಸ್ತಿತ್ವದಲ್ಲೇ ಇಲ್ಲವೇನೋ ಎಂಬಂತಿತ್ತು. ಸರಿಯಾದ ಕಾನೂನು ರಕ್ಷಣೆ ಇರಲಿಲ್ಲ. ಖಾಸಗಿ ಕಂಪನಿಗಳು ಪಾಲ್ಗೊಳ್ಳಲು ಹಿಂದೇಟು ಹಾಕುವಂತಿತ್ತು ಸ್ಥಿತಿ. ಎಲ್ಲಾ ದೇಶಗಳು ಈ ಕ್ಷೇತ್ರದಲ್ಲಿ ಮುಂದೋಡಿದರೆ ಭಾರತ ಹಿಂದುಳಿದಿತ್ತು. ಆದರೆ, ಶಾಂತಿ ಮಸೂದೆ ಈ ಹಿನ್ನಡೆಗೆ ಬ್ರೇಕ್ ಹಾಕಿದೆ. ಖಾಸಗಿ ವಲಯವು ಪರಮಾಣ ವಿದ್ಯುತ್ ಕ್ಷೇತ್ರದಲ್ಲಿ ಭಾಗಿಯಾಗುವಂತೆ ಈ ಮಸೂದೆಯು ಅವಕಾಶ ಕೊಡುತ್ತದೆ. ಇದನ್ನು ಜಾರಿಗೊಳಿಸಲು ಬೇಕಾದ ಇಚ್ಛಾಶಕ್ತಿಯನ್ನು ಮೋದಿ ಸರಕಾರ ತೋರಿದೆ.

ಕಾರ್ಮಿಕ ಕಾನೂನು

ಇಪ್ಪತ್ತನೇ ಶತಮಾನದ ಮೂವತ್ತರ ದಶಕದಲ್ಲಿ ಬರೆದಿದ್ದ ಕಾರ್ಮಿಕ ಕಾನೂನುಗಳನ್ನು ಇಟ್ಟುಕೊಂಡು ಭಾರತ 21ನೇ ಶತಮಾನಕ್ಕೆ ಅಡ್ಡಿ ಇಟ್ಟಿತ್ತು. ರಾಜಕೀಯದ ಬೇಳೆ ಬೇಯಿಸಲು ಬೇಕಾದ ಕಾನೂನುಗಳನ್ನು ಯುಪಿಎ ಉಳಿಸಿಕೊಂಡಿತ್ತು. ಆದರೆ, ಮೋದಿ ಸರ್ಕಾರ 29 ಕಾನೂನುಗಳನ್ನು ಕಿತ್ತೆಸೆದು ನಾಲ್ಕು ಹೊಸ ಕಾರ್ಮಿಕ ಸಂಹಿತೆಯನ್ನು ರೂಪಿಸಿದೆ.

ಒಂದು ವರ್ಷದ ಬಳಿಕ ಗ್ರಾಚುಟಿ; ತಾತ್ಕಾಲಿಕ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ; ಸಮಾನ ವೇತನ, ಕಡ್ಡಾಯ ನೇಮಕಾತಿ ಪತ್ರ; ಸಿಂಗಲ್ ರಿಜಿಸ್ಟ್ರೇಶನ್ ಸಿಂಗಲ್ ರಿಟರ್ನ್. ಈ ಸುಧಾರಣಾ ಕ್ರಮ 2025ರಲ್ಲಿ ರೂಪಿತವಾಗಿದೆ.

ಎಂಎಸ್​ಎಂಇ ಮರುವರ್ಗೀಕರಣ

ಮೊದಲಿದ್ದ ವ್ಯವಸ್ಥೆಯಲ್ಲಿ ಎಂಎಸ್​ಎಂಇಗಳು ದೊಡ್ಡದಾಗಿ ಬೆಳೆದರೆ ಕೆಲ ಅನುಕೂಲಗಳನ್ನು ಕಳೆದುಕೊಳ್ಳಬೇಕಾಗಿತ್ತು. ಆದರೆ, 2025ರಲ್ಲಿ ಸುಧಾರಣೆ ತರಲಾಯಿತು. ಎಂಎಸ್​ಎಂಇಗೆ ಇದ್ದ ಹೂಡಿಕೆ ಮತ್ತು ವಹಿವಾಟು ಮಿತಿಯನ್ನು ಹೆಚ್ಚಿಸಲಾಯಿತು. ಇದರಿಂದ ಸಣ್ಣ ಉದ್ದಿಮೆಗಳು ಹೆಚ್ಚು ಉತ್ಸಾಹದಿಂದ ವ್ಯವಹಾರದಲ್ಲಿ ಗಮನ ಹರಿಸಲು ಸಾಧ್ಯವಾಗಿದೆ.

ಆರ್​ಬಿಐನಿಂದ ಕ್ಲೀನಪ್

ಆರ್​ಬಿಐ ಈ ವರ್ಷ ಸುಮಾರು 9,500 ಅನವಶ್ಯಕ ಸುತ್ತೋಲೆಗಳನ್ನು ಕೈಬಿಟ್ಟಿದೆ. ಇದರಲ್ಲಿ ಕೆಲವು ಎರಡನೇ ವಿಶ್ವಮಹಾಯುದ್ಧದ ಕಾಲದ್ದೂ ಇರುವುದು ವಿಶೇಷ. ಈಗ ಬಹಳ ಸ್ಪಷ್ಟ ಇರುವ 255 ಸುತ್ತೋಲೆಗಳಿವೆ. ಆರ್​ಬಿಐನ ನೀತಿ, ನಿಯಮಗಳು ಈಗ ಹೆಚ್ಚು ಸರಳ, ಸ್ಪಷ್ಟಗೊಂಡಿವೆ.

ಇದನ್ನೂ ಓದಿ: ಭಾರತ 2025: ಹೊಸ ಭದ್ರತಾ ನೀತಿ, ಆಪರೇಷನ್ ಸಿಂದೂರ್ ಶಕ್ತಿ & ಭಯೋತ್ಪಾದನೆಗೆ ಖಡಕ್ ಉತ್ತರ

ಪಿಎಂ ಧನ್ ಧಾನ್ಯ ಯೋಜನೆ

ದಶಕಗಳಿಂದಲೂ ಸರ್ಕಾರಗಳಿಗೆ ಕೃಷಿ ನೀತಿ ಎಂದರೆ ರೈತರ ಸಾಲ ಮನ್ನಾ ಮಾಡುವುದು, ಎಂಎಸ್​ಪಿ ಸಬ್ಸಿಡಿ ಕೊಡುವುದು ಇಷ್ಟೆ ಆಗಿತ್ತು. ಆದರೆ, ಪಿಎಂ ಧನ್ ಧಾನ್ಯ ಯೋಜನೆಯ ಮೂಲಕ ಮೋದಿ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆಯನ್ನೇ ತಂದಿದೆ.

ಜಿ ರಾಮ್ ಜಿ ಬಿಲ್

ಹಳಸಿ ಹೋಗಿರುವ, ಮತ್ತು ಸರ್ಕಾರದ ಹಣವನ್ನು ಲೂಟಿ ಮಾಡಲು ಬಳಕೆಯಾಗುತ್ತಿರುವ ಮನ್​ರೇಗಾ ಯೋಜನೆಯನ್ನು ಸರ್ಕಾರ ಕೈಬಿಟ್ಟು ವಿಕಸಿತ್ ಭಾರತ್ ಜಿ ರಾಮ್ ಜಿ ಮಸೂದೆಯನ್ನು ತಂದಿದೆ. ಉದ್ಯೋಗ ಖಾತ್ರಿ ದಿನಗಳ ಸಂಖ್ಯೆ ಹೆಚ್ಚಿಸಿರುವುದು, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾಗಿರುವುದು ಇತ್ಯಾದಿ ಸುಧಾರಣೆಗಳನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಇನ್ಷೂರೆನ್ಸ್​ನಲ್ಲಿ ವಿದೇಶೀ ಹೂಡಿಕೆ

ಈ ಹಿಂದೆ ಇನ್ಷೂರೆನ್ಸ್ ಒಂದು ಚೌಕಟ್ಟಿನಲ್ಲಿ ಬಂಧಿತವಾಗಿತ್ತು. ಈಗ 2025ರಲ್ಲಿ ಸರ್ಕಾರವು ಈ ಸೆಕ್ಟರ್​ನಲ್ಲಿ ನೂರಕ್ಕೆ ನೂರು ವಿದೇಶೀ ಹೂಡಿಕೆಗಳಿಗೆ ಅವಕಾಶ ಕೊಟ್ಟಿದೆ. ಇದರಿಂದ ಈ ವಲಯಕ್ಕೆ ಬಹಳ ಅಗತ್ಯವಾಗಿರುವ ಬಂಡವಾಳವು ಹರಿದುಬರಲು ಸಾಧ್ಯವಾಗುತ್ತದೆ. ಉತ್ತಮ ಇನ್ಷೂರೆನ್ಸ್ ಉತ್ಪನ್ನಗಳು, ಹೆಚ್ಚೆಚ್ಚು ಕವರೇಜ್, ಜಾಗತಿಕ ಸೌಲಭ್ಯಗಳು ಇನ್ಷೂರೆನ್ಸ್ ಗ್ರಾಹಕರಿಗೆ ಸಿಗಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ – Kannada News | Bengaluru PG Cylinder Blast: One death, Three Injured

ಬೆಂಗಳೂರು, ಡಿಸೆಂಬರ್​ 29: ಪಿಜಿಯಲ್ಲಿ ಸಿಲಿಂಡರ್​ ಸ್ಫೋಟಗೊಂಡು ಓರ್ವ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ನಗರದ ಕುಂದಲಹಳ್ಳಿ ಕಾಲೋನಿಯ ಪಿಜಿಯೊಂದರಲ್ಲಿ ದುರ್ಘಟನೆ ನಡೆದಿದೆ. ಅರವಿಂದ್(23) ಮೃತ ಯುವಕ. ವೆಂಕಟೇಶ್ ಎಂಬುವವರು ಗಂಭೀರಗೊಂಡಿದ್ದು, ದೇವಿ, ವಿಶಾಲ್​​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆಚ್ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IND-W vs SL-W: ವಿಶ್ವ ದಾಖಲೆ ಸೃಷ್ಟಿಸುವ ಹೊಸ್ತಿಲಿನಲ್ಲಿ ಶಫಾಲಿ ವರ್ಮಾ

Source link

ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಟೀಸರ್: ಮತ್ತೊಂದು ಹಿಟ್ ಗ್ಯಾರಂಟಿ – Kannada News | Raj B Shetty starrer Rakkasapuradhol Kannada Movie Official Teaser Released

ನಟ ರಾಜ್ ಬಿ. ಶೆಟ್ಟಿ (Raj B Shetty) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 2025ರಲ್ಲಿ ಅವರು ‘ಸು ಫ್ರಮ್ ಸೋ’ ಸಿನಿಮಾದಿಂದ ಭರ್ಜರಿ ಗೆಲವು ಕಂಡರು. ಅವರ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘45’ ಸಿನಿಮಾದಲ್ಲಿ ಕೂಡ ರಾಜ್ ಬಿ. ಶೆಟ್ಟಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈಗ ಅವರ ಹೊಸ ಸಿನಿಮಾ ‘ರಕ್ಕಸಪುರದೋಳ್’ (Rakkasapuradhol) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜ್ ಬಿ. ಶೆಟ್ಟಿ ಅವರ ಪಾತ್ರದ ಝಲಕ್ ನೋಡಿ ಅಭಿಮಾನಿಗಳಿಗೆ ಸಿನಿಮಾ ಮೇಲಿನ ಕೌತುಕ ಡಬಲ್ ಆಗಿದೆ.

ನಿರ್ದೇಶಕ ‘ಜೋಗಿ’ ಪ್ರೇಮ್ ಶಿಷ್ಯ ರವಿ ಸಾರಂಗ ಅವರು ‘ರಕ್ಕಸಪುರದೋಳ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖಗಳು ಇರುತ್ತವೆ. ಒಂದು ಒಳ್ಳೆಯದು ಮತ್ತು ಇನ್ನೊಂದು ಕೆಟ್ಟದ್ದು. ಆ ಥೀಮ್​​ನ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುವುದು. ಒಟ್ಟಾರೆ ಸಿನಿಮಾ ಹೇಗಿರಲಿದೆ ಎಂಬುದರ ಝಜಲ್ ಈ ಟೀಸರ್​ನಲ್ಲಿ ಕಾಣಿಸಿದೆ.

ಹಲವು ಕಾರಣಗಳಿಂದ ನಿರೀಕ್ಷೆ ಮೂಡಿಸಿರುವ ‘ರಕ್ಕಸಪುರದೋಳ್’ ಸಿನಿಮಾ 2026ರ ಫೆಬ್ರವರಿ 6ರಂದು ಬಿಡುಗಡೆ ಆಗಲಿದೆ. ಟೀಸರ್ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಿನಿಮಾದಲ್ಲಿ ಮನರಂಜನೆಯ ಸಾಕಷ್ಟು ಅಂಶಗಳು ಇವೆ ಎಂಬ ಭರವಸೆ ಪ್ರೇಕ್ಷಕರಿಗೆ ಮೂಡಿದೆ. ‘ಈ ಸಿನಿಮಾದ ಮೂಲಕ ರಾಜ್ ಬಿ. ಶೆಟ್ಟಿ ಅವರಿಗೆ ಮತ್ತೊಂದು ಹಿಟ್ ಗ್ಯಾರಂಟಿ’ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

‘ರಕ್ಕಸಪುರದೋಳ್’ ಸಿನಿಮಾ ಟೀಸರ್:

‘ರಕ್ಕಸಪುರದೋಳ್’ ಸಿನಿಮಾಗೆ ಖ್ಯಾತ ಸಾಹಸ ನಿರ್ದೇಶಕ ರವಿವರ್ಮಾ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ದಟ್ಟ ಕಾನನ, ಮಾಟ ಮಂತ್ರ, ಸರಣಿ ಸಾವು ಮುಂತಾದ ಅಂಶಗಳು ಈ ಟೀಸರ್​ನಲ್ಲಿ ಹೈಲೈಟ್ ಆಗಿವೆ. ರಾಜ್ ಬಿ. ಶೆಟ್ಟಿ ಜೊತೆ ಬಿ. ಸುರೇಶ, ಸ್ವಾದಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ್ದಕ್ಕೆ ಸ್ಪಷ್ಟನೆ ನೀಡಿದ ರಾಜ್ ಬಿ. ಶೆಟ್ಟಿ

ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿಲಿಯನ್ ಡೇವಿಡ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಮೋಹನ್ ಬಿ. ಕೆರೆ ಅವರು ಕಲಾ ನಿರ್ದೇಶನ ಮಾಡಿದ್ದಾರೆ. ಟೀಸರ್​ನಲ್ಲಿ ಎಲ್ಲ ತಂತ್ರಜ್ಞರ ಕೆಲಸ ಎದ್ದು ಕಾಣುತ್ತಿದೆ. ಸದ್ಯ ಈ ಟೀಸರ್ ವೈರಲ್ ಆಗುತ್ತಿದೆ. ರಾಜ್ ಬಿ. ಶೆಟ್ಟಿ ಅವರ ವೃತ್ತಿ ಜೀವನದಲ್ಲಿ ಇದು ಒಂದು ಡಿಫರೆಂಟ್ ಸಿನಿಮಾ ಆಗಲಿದೆ ಎಂಬ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND-W vs SL-W: ಈ ವರ್ಷದ ಕೊನೆಯ ಪಂದ್ಯವನ್ನಾಡಲಿದೆ ಟೀಂ ಇಂಡಿಯಾ; ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News | India vs Sri Lanka Women’s 5th T20: India Aims for 5 0 Sweep; Match Details and Teams

ಭಾರತ ಮತ್ತು ಶ್ರೀಲಂಕಾ (India vs Sri Lanka) ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಮಂಗಳವಾರ ತಿರುವನಂತಪುರದಲ್ಲಿ ನಡೆಯಲಿದೆ. ಭಾರತ ತಂಡ ಈಗಾಗಲೇ ಸರಣಿಯನ್ನು ಗೆದ್ದಿದ್ದು, ಐದನೇ ಟಿ20ಪಂದ್ಯವನ್ನು ಗೆಲ್ಲುವ ಮೂಲಕ ಶ್ರೀಲಂಕಾವನ್ನು 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನು ಹೊಂದಿದೆ. ಇದು ಭಾರತೀಯ ತಂಡದ ವರ್ಷದ ಕೊನೆಯ ಪಂದ್ಯವಾಗಿದ್ದು, ತಂಡವು ವರ್ಷವನ್ನು ಗೆಲುವಿನೊಂದಿಗೆ ಕೊನೆಗೊಳಿಸುವ ಗುರಿಯನ್ನು ಹೊಂದಿದೆ. ಇತ್ತ ಸರಣಿಯ ಕೊನೆಯ ಪಂದ್ಯವನ್ನಾದರೂ ಗೆದ್ದು, ಈ ಪ್ರವಾಸವನ್ನು ಗೆಲುವಿನೊಂದಿಗೆ ಅಂತ್ಯಗೊಳಿಸುವ ಇರಾದೆಯಲ್ಲಿ ಲಂಕಾ ತಂಡವಿದೆ.

ವಿಶ್ವಕಪ್​ ತಯಾರಿಗೆ ಅತ್ಯವಶ್ಯಕ

ಭಾರತ ಮತ್ತು ಶ್ರೀಲಂಕಾ ನಡುವಿನ ಈ ಸರಣಿಯು ಮುಂದಿನ ವರ್ಷ ಜೂನ್-ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ ಸಿದ್ಧತೆಯ ಪ್ರಮುಖ ಭಾಗವಾಗಿದೆ. ಶ್ರೀಲಂಕಾ ವಿರುದ್ಧದ ಪ್ರಸ್ತುತ ಸರಣಿಯ ನಂತರ, ಭಾರತ ತಂಡವು ವಿಶ್ವಕಪ್‌ಗೆ ಮೊದಲು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ತಲಾ ಮೂರು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯ ಡಿಸೆಂಬರ್ 30 ರಂದು ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ಐದನೇ ಟಿ20 ಪಂದ್ಯ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯ ಸಂಜೆ 7:00 ಗಂಟೆಗೆ ಆರಂಭವಾಗಲಿದ್ದು, ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯವನ್ನು ಟಿವಿಯಲ್ಲಿ ಎಲ್ಲಿ ನೋಡಬಹುದು?

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ಐದನೇ ಟಿ20 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ಐದನೇ ಟಿ20 ಪಂದ್ಯವನ್ನು ಮೊಬೈಲ್‌ನಲ್ಲಿ ಎಲ್ಲಿ ವೀಕ್ಷಿಸಬಹುದು?

ಜಿಯೋ-ಹಾಟ್‌ಸ್ಟಾರ್ ಅಪ್ಲಿಕೇಶನ್ ಬಳಸಿ ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯವನ್ನು ನಿಮ್ಮ ಮೊಬೈಲ್ ಫೋನ್‌ನಲ್ಲಿ ವೀಕ್ಷಿಸಬಹುದು.

ಉಭಯ ತಂಡಗಳು

ಭಾರತ ತಂಡ: ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅಮಂಜೋತ್ ಕೌರ್, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ರೇಣುಕಾ ಸಿಂಗ್ ಠಾಕೂರ್, ಶ್ರೀ ಚರಣಿ, ಜಿ ಕಮಲಿನಿ, ಹರ್ಲೀನ್ ಡಿಯೋಲ್, ಅರುಂಧಾ ರೆಡ್ಡಿ, ಸ್ನೇಹ್ ರೆಡ್ಡಿ.

ಶ್ರೀಲಂಕಾ ತಂಡ: ಚಾಮರಿ ಅಟಪಟ್ಟು (ನಾಯಕಿ), ಹಾಸಿನಿ ಪೆರೇರಾ, ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ನೀಲಾಕ್ಷಿಕಾ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಇಮೇಶಾ ದುಲಾನಿ, ಕೌಶಿನಿ ನುತ್ಯಾಂಗನಾ, ಮಲ್ಶಾ ಶೆಹಾನಿ, ಇನೋಕಾ ರಣವೀರ, ಶಶಿನಿ ಗಿಮ್ಹಾನಿ, ನಿಮೇಶ್ ಮದುಶಾನಿ, ಕಾವ್ಯಾ ಕವಿಂದಿ, ರಶ್ಮಿಕಾ ಸೆವ್ವಂದಿ, ಮಾಲ್ಕಿ ಮಾದರ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link