ಬೆಂಗಳೂರು: ಬಯೋಕಾನ್ ಕಂಪನಿಯ 3ನೇ ಮಹಡಿಯಿಂದ ಜಿಗಿದು ಉದ್ಯೋಗಿ ಆತ್ಮಹತ್ಯೆ – Kannada News | Bengaluru: Biocon Employee Dies by Suicide After Jumping From Third Floor
ಬೆಂಗಳೂರು, ಡಿಸೆಂಬರ್ 30: ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದಲ್ಲಿರುವ ಬಯೋಕಾನ್ ಕಂಪನಿಯ (biocon company) ಉದ್ಯೋಗಿ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಅನಂತ್ ಭಟ್(35) ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಸದ್ಯ ಅನಂತ್ ಮೃತದೇಹವನ್ನು ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅನಾರೋಗ್ಯ: ಮನನೊಂದು ಆಟೋ ಡ್ರೈವರ್ ಆತ್ಮಹತ್ಯೆ ಅನಾರೋಗ್ಯದ ಹಿನ್ನೆಲೆ ಮನನೊಂದು ಆಟೋ…