ಪ್ರತ್ಯೇಕ ಪ್ರಕರಣ: ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಇಬ್ಬರು ಯುವಕರು ಆತ್ಮಹತ್ಯೆ
ವಿಜಯಪುರ/ಚಿಕ್ಕಮಗಳೂರು, ಏಪ್ರಿಲ್ 04: ಹಳ್ಳಿಗಳಲ್ಲಿ ನೆಲೆಸಿರುವವರಿಗೆ ಅದರಲ್ಲೂ ಕೃಷಿಕ ಯುವಕರಿಗೆ ಮದುವೆಗೆ ಹೆಣ್ಣು ಸಿಗೋದೇ ಕಷ್ಟ ಎಂಬ ಸ್ಥಿತಿ ಸದ್ಯ ಸಮಾಜದಲ್ಲಿದೆ. ಇದೇ ಕಾರಣಕ್ಕೆ ಅದೆಷ್ಟೋ ಯುವಕರಿಗೆ ಈವರೆಗೂ ಕಂಕಣ ಭಾಗ್ಯವೇ ಕೂಡಿಬರುತ್ತಿಲ್ಲ. ಈ ನಡುವೆ ವಿವಾಹಕ್ಕೆ ಹುಡುಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಾನಸಿಕವಾಗಿ ತೀವ್ರ ನೊಂದು ಯುವಕರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ರಾಜ್ಯದಲ್ಲಿ ನಡೆದಿವೆ. ವಿಜಯಪುರದಲ್ಲಿ ಕುರಿಗಾಹಿ ನೇಣಿಗೆ ಶರಣಾಗಿದ್ದರೆ ಇತ್ತ ಚಿಕ್ಕಮಗಳೂರಲ್ಲಿ ಕುಡಿದ ಮತ್ತಿನಲ್ಲಿ ಮತ್ತೋರ್ವ ಪ್ರಾಣ ಕಳೆದುಕೊಂಡಿದ್ದಾನೆ. ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ…