All posts by nagaraj11081993

ಆತ್ಮನಿರ್ಭರ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆ ಈ ನ್ಯಾನೋ ಗೊಬ್ಬರ ಕಾರ್ಖಾನೆ! – Kannada News | IFFCO Nano Fertilizer Plant Opens in Bengaluru: Boosts Karnataka Agriculture

ಆತ್ಮನಿರ್ಭರ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆ ಈ ನ್ಯಾನೋ ಗೊಬ್ಬರ ಕಾರ್ಖಾನೆ!

ಬೆಂಗಳೂರು, ಡಿಸೆಂಬರ್ 27: ಗೊಬ್ಬರ ಕ್ಷೇತ್ರದಲ್ಲಿನ ಭಾರತದ ಮುಂಚೂಣಿ ಸಹಕಾರಿ ಸಂಸ್ಥೆಯಾದ ಇಂಡಿಯನ್ ಫಾರ್ಮರ್ಸ್​ ಫರ್ಟಿಲೈಸರ್ ಕೂಪರೇಟಿವ್ ಲಿಮಿಟೆಡ್ (ಇಸ್ಕೋ) ಕರ್ನಾಟಕದ ಬೆಂಗಳೂರು (Bengaluru) ಸಮೀಪದ ದೇವನಹಳ್ಳಿಯಲ್ಲಿ ತನ್ನ ಅತ್ಯಾಧುನಿಕ ನ್ಯಾನೋ ಗೊಬ್ಬರ ಕಾರ್ಖಾನೆಯನ್ನು ಉದ್ಘಾಟಿಸಿದೆ. ಈ ಕಾರ್ಖಾನೆಯನ್ನು ಇನ್ನೋ ಮತ್ತು ಎನ್‌ಸಿಯುಐ ಅಧ್ಯಕ್ಷರಾದ ಶ್ರೀ ದಿಲೀಪ್ ಸಂಘಾಣಿ ಅವರು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ವೇಳೆ ಅವರು ಕಾರ್ಖಾನೆಯ ಸಮಗ್ರ ಪರಿಶೀಲನೆ ನಡೆಸಿ, ನ್ಯಾನೋ ಗೊಬ್ಬರದ ಉತ್ಪಾದನೆ, ಗುಣಮಟ್ಟದ ಮಾನದಂಡಗಳು ಹಾಗೂ ತಾಂತ್ರಿಕ ಸಾಮರ್ಥ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ.

12 ಎಕರೆಯಲ್ಲಿ ಸ್ಥಾಪಿತಗೊಂಡಿರುವ ಈ ಅತ್ಯಾಧುನಿಕ ನ್ಯಾನೋ ಗೊಬ್ಬರ ಕಾರ್ಖಾನೆ

ಈ ಸಂದರ್ಭದಲ್ಲಿ ಶ್ರೀ ಸಂಘಾಣಿ ಅವರು ಮಾತನಾಡಿ, ಈ ಕಾರ್ಖಾನೆ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಮಾನ್ಯ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ “ಸಹಕಾರದಿಂದ ಸಮೃದ್ಧಿ” ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

12 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿತಗೊಂಡಿರುವ ಈ ಅತ್ಯಾಧುನಿಕ ನ್ಯಾನೋ ಗೊಬ್ಬರ ಕಾರ್ಖಾನೆ ಪ್ರತಿದಿನ 2 ಲಕ್ಷ ನ್ಯಾನೋ ಯೂರಿಯಾ ಪ್ಲಸ್ ಬಾಟಲಿಗಳ ಉತ್ಪಾದನೆಗೆ ಸಾಮರ್ಥ್ಯ ಹೊಂದಿದೆ. ದೀರ್ಘಾವಧಿಯಲ್ಲಿ ಇದು ದಕ್ಷಿಣ ಭಾರತದಲ್ಲಿ ಸಾಂಪ್ರದಾಯಿಕ ಯೂರಿಯಾದ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ಆಮದು ವೆಚ್ಚವನ್ನು ಇಳಿಸುವುದರ ಜೊತೆಗೆ ನಿಖರ ಕೃಷಿಯನ್ನು (ಪ್ರಿಸಿಷನ್ ಫಾರ್ಮಿಂಗ್) ಉತ್ತೇಜಿಸುತ್ತದೆ. ದೇವನಹಳ್ಳಿಯಲ್ಲಿ ಸ್ಥಾಪಿತಗೊಂಡಿರುವ ಈ ಕಾರ್ಖಾನೆ ತಾಂತ್ರಿಕ ಶ್ರೇಷ್ಠತೆಯ ಪ್ರತೀಕವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಪ್ರಗತಿಶೀಲ ಪ್ರಕ್ರಿಯೆಗಳ ಮೂಲಕ ಗೊಬ್ಬರ ಉತ್ಪಾದನೆ ಮಾಡಲಾಗುತ್ತದೆ.

ವಿಜ್ಞಾನಿಗಳೊಂದಿಗೆ ವಿಶೇಷ ಸಂವಾದ

ಉದ್ಘಾಟನೆ ಮತ್ತು ಕಾರ್ಖಾನೆ ಪರಿಶೀಲನೆಯ ನಂತರ ಶ್ರೀ ಸಂಘಾಣಿ ಅವರು ಕಾರ್ಖಾನೆಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ವಿಶೇಷ ಸಂವಾದ ನಡೆಸಿದರು. ಈ ವೇಳೆ ನ್ಯಾನೋ ಗೊಬ್ಬರಗಳ ಮಹತ್ವ, ಅವುಗಳ ಪಾತ್ರ ಮತ್ತು ಭಾರತದ ಕೃಷಿಯ ಭವಿಷ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ನವೋದ್ಯಮ ಆಧಾರಿತ ಸಹಕಾರಿ ತಂತ್ರಗಳನ್ನು ಬಲಪಡಿಸುವ ಕುರಿತು ಮಾರ್ಗದರ್ಶನ ನೀಡಿದರು.

ಈ ಕಾರ್ಯಕ್ರಮದಲ್ಲಿ ಇಷ್ಟೋ ಉಪಾಧ್ಯಕ್ಷರಾದ ಬಲವೀರಸಿಂಗ್, ಮಾಜಿ ಅಧ್ಯಕ್ಷರಾದ ಕೆ. ಶ್ರೀನಿವಾಸನ್ ಗೌಡ, ವ್ಯವಸ್ಥಾಪಕ ನಿರ್ದೇಶಕರಾದ ಕೆ. ಜೆ. ಪಟೇಲ್, ಪ್ರಲಾದಸಿಂಗ್, ವಿಜಯಶಂಕರ ರೈ, ವಿವೇಕ್ ಕೊಹ್ಲಿ, ಸುಬ್ರಜಿತ್ ಪಾಧಿ, ಮಾರ ಗಂಗಾ ರೆಡ್ಡಿ, ವಾಲ್ಮೀಕಿ ತ್ರಿಪಾಠಿ, ಜಗದೀಪ್ ಸಿಂಗ್ ನಕ್ಕೆ, ಜಯೇಶ್ ರಾಡಾಡಿಯಾ, ಉಮೇಶ್ ತ್ರಿಪಾಠಿ, ಭಾವೇಶ್ ರಾಡಾಡಿಯಾ, ಪ್ರೇಮಚಂದ್ ಮುನ್ನಿ, ಮುಕುಲ್ ಕುಮಾರ್, ನ್ಯಾನೋ ಘಟಕದ ಮುಖ್ಯಸ್ಥ ಸಂಜಯ್ ಕುಲಶ್ರೇಷ್ಠ ಸೇರಿದಂತೆ ನಿರ್ದೇಶಕ ಮಂಡಳಿಯ ಸದಸ್ಯರು ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಮನ್ನಾ ಬೇಡವೇ ಬೇಡ ಎಂದಿದ್ದ ‘ಧುರಂಧರ್’ ನಿರ್ದೇಶಕ ಕಾರಣ ಏನು? – Kannada News | Why Tamannah Bhatia loose chance in Dhurandhar movie

ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಬಿರುಗಾಳಿ ಎಬ್ಬಿಸಿದೆ. ಸಿನಿಮಾ ಬಿಡುಗಡೆ ಆದ ಕೇವಲ 21 ದಿಗಳಲ್ಲಿ 1000 ಕೋಟಿ ಕಲೆಕ್ಷನ್ ದಾಟಿದೆ. ಗಮನಿಸಬೇಕಾದ ಅಂಶವೆಂದರೆ ‘ಧುರಂಧರ್’ ಪ್ಯಾನ್ ಇಂಡಿಯಾ ಸಿನಿಮಾ ಸಹ ಅಲ್ಲ. ಹಿಂದಿ ಹೊರತಾಗಿ ಬೇರೆ ಯಾವ ಭಾಷೆಯಲ್ಲಿಯೂ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಸಹ ಗಳಿಕೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ದಾಟುತ್ತಾ ಸಾಗುತ್ತಿದೆ. ಸಿನಿಮಾನಲ್ಲಿ ನಟಿಸಿರುವ ನಟ-ನಟಿಯರು, ಕೆಲಸ ಮಾಡಿರುವ ತಂತ್ರಜ್ಙರಿಗೆ ಒಳ್ಳೆಯ ಗುರುತು, ಗೌರವ ಸಿಗುತ್ತಿದೆ. ಅಂದಹಾಗೆ ನಟಿ ತಮನ್ನಾ ಭಾಟಿಯಾ ಸಹ ‘ಧುರಂಧರ್’ ಸಿನಿಮಾನಲ್ಲಿ ನಟಿಸಬೇಕಿತ್ತು, ಆದರೆ ನಿರ್ದೇಶಕ ಆದಿತ್ಯ ಧರ್ ಕಡ್ಡಾಯವಾಗಿ ತಮನ್ನಾ ಬೇಡವೇ ಬೇಡ ಎಂದುಬಿಟ್ಟರಂತೆ. ಕಾರಣ ಏನು?

‘ಧುರಂಧರ್’ ಸಿನಿಮಾನಲ್ಲಿ ‘ಶರಾರತ್’ ಹೆಸರಿನ ಹಾಡೊಂದಿದೆ. ಆ ಹಾಡಿಗೆ ವಿಜಯ್ ಗಂಗೂಲಿ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ‘ಶರಾರತ್’ ಹಾಡು ಕೇಳಿದ ಕೂಡಲೇ ಈ ಹಾಡಿಗೆ ತಮನ್ನಾ ಭಾಟಿಯಾ ಡ್ಯಾನ್ಸ್ ಮಾಡಿದರೆ ಬಹಳ ಚೆನ್ನಾಗಿ ಇರುತ್ತದೆ ಎಂದು ವಿಜಯ್ ಗಂಗೂಲಿ ಅವರಿಗೆ ಅನಿಸಿತಂತೆ. ಇದೇ ವಿಷಯವನ್ನು ನಿರ್ದೇಶಕ ಆದಿತ್ಯ ಧರ್ ಬಳಿ ವಿಜಯ್ ಹೇಳಿಕೊಂಡಿದ್ದಾರೆ. ಆದರೆ ಆದಿತ್ಯ ಅವರು ಕೂಡಲೇ ‘ತಮನ್ನಾ ಬೇಡ’ ಎಂದು ಬಿಟ್ಟರಂತೆ.

ಆದಿತ್ಯ ಅವರು ತಮನ್ನಾ ಅವರನ್ನು ನಿರಾಕರಿಸಲು ಯಾವುದೇ ವೈಯಕ್ತಿಕ ಕಾರಣ ಇಲ್ಲ. ಆದಿತ್ಯ ಅವರ ಅಭಿಪ್ರಾಯದಂತೆ, ತಮನ್ನಾ ಭಾಟಿಯಾ ಬಹಳ ಜನಪ್ರಿಯ ನಟಿ, ಅವರು ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡರೆ ಆ ಹಾಡು ಹಿಟ್ ಆಗುತ್ತದೆ, ಆ ಹಾಡಿಗಾಗಿ ಜನ ಸಿನಿಮಾಕ್ಕೆ ಬರುವುದು ಸಹ ಇದೆ, ಆದರೆ ಹಾಗೆ ಆಗುವುದು ಆದಿತ್ಯಗೆ ಇಷ್ಟವಿರಲಿಲ್ಲವಂತೆ. ‘ಶರಾರತ್’ ಹಾಡು ಸಿನಿಮಾದಿಂದ ಪ್ರತ್ಯೇಕವಾಗಿದೆ, ಅದೊಂದು ‘ಸೇರಿಸಲಾಗಿರುವ ಐಟಂ ಹಾಡು’ ಎನಿಸಬಾರದು ಎಂಬುದು ಅವರ ಆಲೋಚನೆ ಆಗಿತ್ತಂತೆ.

ಇದನ್ನೂ ಓದಿ:‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ

ತಮನ್ನಾ ಆ ಹಾಡಿನಲ್ಲಿ ನಟಿಸಿದರೆ ಜನ ಕತೆಗಿಂತಲೂ ಹಾಡಿಗೆ ಪ್ರತ್ಯೇಕ ಪ್ರಾಮುಖ್ಯತೆ ನೀಡುತ್ತಾರೆ. ಹಾಡಿನ ಸುತ್ತ ನಡೆಯುತ್ತಿರುವ ಕತೆಗೇ ಜನ ಮಹತ್ವ ನೀಡಬೇಕು, ಹಾಡು ಕತೆಯಿಂದ ಪ್ರತ್ಯೇಕವಾಗಬಾರದು ಎಂಬ ಕಾರಣಕ್ಕೆ ತಮನ್ನಾರನ್ನು ಹಾಕಿಕೊಳ್ಳಲಿಲ್ಲವಂತೆ, ಬದಲಿಗೆ ‘ಶರಾರತ್’ ಹಾಡಿನಲ್ಲಿ ಇಬ್ಬರು ನಟಿಯರನ್ನು ಹಾಕಿಕೊಂಡಿದ್ದಾರೆ. ಅದು ಸಹ ಆದಿತ್ಯ ಅವರದ್ದೇ ಐಡಿಯಾ ಅಂತೆ, ಇಬ್ಬರು ನಟಿಯರು ಇದ್ದರೆ ಒಬ್ಬರ ಮೇಲೆ ಪ್ರೇಕ್ಷಕರ ಗಮನ ನಿಲ್ಲುವುದಿಲ್ಲ ಎಂಬುದು ಅವರ ಆಲೋಚನೆ ಆಗಿತ್ತಂತೆ.

‘ಧುರಂಧರ್’ ಸಿನಿಮಾನಲ್ಲಿ ರಣ್ವೀರ್ ಸಿಂಗ್, ಗೂಢಚಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಅಕ್ಷಯ್ ಕುಮಾರ್, ಅರ್ಜುನ್ ರಾಮ್​​ಪಾಲ್, ಸಂಜಯ್ ದತ್, ಮಾಧವನ್ ಅವರುಗಳು ನಟಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಸಾರಾ ಅರ್ಜುನ್ ನಟಿಸಿದ್ದಾರೆ. ಸಿನಿಮಾದ ಸೀಕ್ವೆಲ್ ಮೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.

Source link

‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು? – Kannada News | Sudeep said he and his team removed 9000 piracy links of Mark movie

ಸುದೀಪ್ ನಟನೆಯ ‘ಮಾರ್ಕ್’ (Mark) ಸಿನಿಮಾ ಎರಡು ದಿನದ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಕಾರಣ ಇಂದು (ಡಿಸೆಂಬರ್ 27) ‘ಮಾರ್ಕ್’ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ, ‘ಮಾರ್ಕ್’ ಸಿನಿಮಾ ಗೆಲುವಿಗೆ ಸಹಾಯ ಮಾಡಿದವರಿಗೆ ಧನ್ಯವಾದಗಳನ್ನು ತಿಳಿಸಿತು. ಸುದ್ದಿಗೋಷ್ಠಿಯಲ್ಲಿ ಸಿನಿಮಾಕ್ಕೆ ಕಾಡಿದ ಪೈರಸಿ ಸಮಸ್ಯೆ ಬಗ್ಗೆ ನಟ ಸುದೀಪ್ ಮಾತನಾಡಿದರು. ಕೆಲವೇ ಗಂಟೆಗಳಲ್ಲಿ ತಮ್ಮ ಚಿತ್ರತಂಡ ಎಷ್ಟು ಪೈರಸಿ ಲಿಂಕ್​​ಗಳನ್ನು ತೆಗೆದು ಹಾಕಿದೆ ಎಂಬುದರ ಮಾಹಿತಿಯನ್ನು ನೀಡಿದರು. ಸುದೀಪ್ ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೆದ್ದ ಇಂಗ್ಲೆಂಡ್ 7ನೇ ಸ್ಥಾನದಲ್ಲಿ… ಸೋತ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿ!

Source link

479 ಎಸೆತಗಳನ್ನು ಎದುರಿಸಿ ಹೀನಾಯವಾಗಿ ಸೋತ ಆಸ್ಟ್ರೇಲಿಯಾ – Kannada News | Australia’s embarrassing record after 97 years in Test

ಆಸ್ಟ್ರೇಲಿಯಾದಲ್ಲಿ ಆಸೀಸ್ ಪಡೆಯನ್ನು ಬಗ್ಗು ಬಡಿಯುವಲ್ಲಿ ಕೊನೆಗೂ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ. ಅದು ಕೂಡ ಕೇವಲ 479 ಎಸೆತಗಳಲ್ಲಿ ಕಟ್ಟಿ ಹಾಕುವ ಮೂಲಕ ಎಂಬುದು ವಿಶೇಷ. ಅಂದರೆ ಎರಡೂ ಇನಿಂಗ್ಸ್​​ಗಳ ಮೂಲ ಆಸ್ಟ್ರೇಲಿಯಾ ಬ್ಯಾಟರ್​​ಗಳು ಎದುರಿಸಿದ್ದು ಕೇವಲ 479 ಎಸೆತಗಳನ್ನು ಮಾತ್ರ.

Source link

Yearly Horoscope: 2026 ಕುಂಭ ರಾಶಿಗೆ ಸಾಡೇ ಸಾತಿಯ ಅಂತಿಮ ಘಟ್ಟ; ಆರೋಗ್ಯದ ಬಗ್ಗೆ ನಿರ್ಲಕ್ಷ್ಯಬೇಡ – Kannada News | Aquarius Yearly Horoscope 2026: Dr Basavaraj Gurujis Predictions

ಡಾ. ಬಸವರಾಜ ಗುರೂಜಿಯವರ ಪ್ರಕಾರ, ಕುಂಭ ರಾಶಿಯವರಿಗೆ 2026ರ ವರ್ಷವು ಮಿಶ್ರ ಫಲಗಳನ್ನು ತರಲಿದೆ. ಶನಿಯು ದ್ವಿತೀಯ ಮನೆಯಲ್ಲಿ ಮತ್ತು ಗುರುವು ಪಂಚಮದಿಂದ ಷಷ್ಠ ಸ್ಥಾನಕ್ಕೆ ಸಂಚರಿಸಲಿದೆ. ಇದು ಸಾಡೇ ಸಾತಿಯ ಅಂತಿಮ ಘಟ್ಟವಾಗಿದ್ದು, ಇದನ್ನು ಕಡೆಯ ಪರೀಕ್ಷೆ ಎಂದು ವಿವರಿಸಲಾಗಿದೆ. ಆದರೂ, ಕುಂಭ ರಾಶಿಯವರು ಮಾನಸಿಕವಾಗಿ ದೃಢವಾಗಿರುತ್ತಾರೆ ಮತ್ತು ತಾಳ್ಮೆಯಿಂದ ಕೆಲಸಗಳನ್ನು ಜಯಿಸುತ್ತಾರೆ.

ಆದಾಯದಲ್ಲಿ ಏರಿಕೆ, ಕೆಲಸದಲ್ಲಿ ಶುಭ ಮತ್ತು ವೃತ್ತಿ ವಿಸ್ತರಣೆಯ ಯೋಗವಿದೆ. ಮಕ್ಕಳಿಂದ ಶುಭ ಕಾರ್ಯಗಳು, ವಿವಾಹ ಯೋಗ ಮತ್ತು ರಾಜಕೀಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಆದರೆ, ಗುರು ಸಂಚಾರದಿಂದಾಗಿ ಕೆಲವು ಆರೋಗ್ಯ ಸಮಸ್ಯೆಗಳು ಮತ್ತು ಆಪ್ತರಿಂದ ನಂಬಿಕೆ ದ್ರೋಹದ ಸಾಧ್ಯತೆ ಇದೆ. ವೈಯಕ್ತಿಕ ವಿಷಯಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಸೂಕ್ತ. ಅಂತರರಾಷ್ಟ್ರೀಯ ಮನ್ನಣೆ, ಪ್ರಶಸ್ತಿ ಮತ್ತು ಗೌರವಕ್ಕೆ ಪಾತ್ರರಾಗುವ ಯೋಗವೂ ಇದೆ. ವಿದ್ಯಾರ್ಥಿಗಳು, ರೈತರು, ಡಾಕ್ಟರ್‌ಗಳು ಮತ್ತು ಮಹಿಳಾ ವೃತ್ತಿಪರರಿಗೆ ಈ ವರ್ಷ ಶುಭವಾಗಿದೆ. ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವುದು ಮತ್ತು ಬೆಟ್ಟಿಂಗ್‌ಗಳಿಂದ ದೂರವಿರುವುದು ಒಳಿತನ್ನು ತರುತ್ತದೆ. ಹಳದಿ ಮತ್ತು ನೀಲಿ ಬಣ್ಣಗಳು, ನಾಲ್ಕು ಮತ್ತು ಎಂಟು ಅದೃಷ್ಟ ಸಂಖ್ಯೆಗಳು ಹಾಗೂ ತಿರುಪತಿ ದರ್ಶನ ಮತ್ತು ಓಂ ಗೋವಿಂದಾಯ ನಮಃ ಜಪವು ಶುಭ ಫಲವನ್ನು ನೀಡುತ್ತದೆ.

Source link

ಶ್ರೀನಗರ: ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಖ್ಯಾತ ಸಿಬಿಐ ವಕೀಲ – Kannada News | Tragic Death: CBI Lawyer Sheikh Adil Nabi Dies in Banihal Road Accident

ಬನಿಹಾಲ್, ಡಿ.27: ರಾಂಬನ್ ಜಿಲ್ಲೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ವಕೀಲರೊಬ್ಬರ (CBI lawyer death) ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 35 ವರ್ಷದ ಸಿಬಿಐ ವಕೀಲರೊಬ್ಬರು ಸಾವನ್ನಪ್ಪಿದ್ದಾರೆ. ಬನಿಹಾಲ್ ಬಳಿ ವಕೀಲರ ಕಾರಿಗೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ನು ಸಾವನ್ನಪ್ಪಿರುವ ವಕೀಲರನ್ನು ಶೇಖ್ ಆದಿಲ್ ನಬಿ ಎಂದು ಹೇಳಲಾಗಿದೆ. ಇವರು ಇತ್ತೀಚಿಗೆ ಕೇಂದ್ರ ತನಿಖಾ ದಳದಲ್ಲಿ ಪ್ರಾಸಿಕ್ಯೂಟಿಂಗ್ ಅಧಿಕಾರಿಯಾಗಿ ನೇಮಿಸಲಾಯಿತು.

ಇನ್ನು ಅಪಘಾತದಲ್ಲಿ ಆದಿಲ್ ಗಂಭೀರ ಗಾಯಗೊಂಡಿದ್ದರು, ಅವರನ್ನು ತಕ್ಷಣ ಬನಿಹಾಲ್‌ನ ಉಪ-ಜಿಲ್ಲಾ ಆಸ್ಪತ್ರೆಗೆ (SDH) ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ಫಲಿಸದ ಕಾರಣ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸುಮಾರು ಎರಡು ತಿಂಗಳ ಹಿಂದೆ ಚಂಡೀಗಢದ ಸಿಬಿಐನಲ್ಲಿ ನೇಮಕಗೊಂಡಿದ್ದ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಆದಿಲ್ ಶೇಖ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಹೊಸ ವರ್ಷಾಚರಣೆ: ಆಪರೇಷನ್ ಆಘಾಟ್ 3.0 ಅಡಿಯಲ್ಲಿ 500ಕ್ಕೂ ಹೆಚ್ಚು ಜನರ ಬಂಧನ

ಇಲ್ಲಿದೆ ನೋಡಿ ಎಕ್ಸ್​​​ ವಿಡಿಯೋ:

ಡಿಕ್ಕಿ ಹೊಡೆದ ಮಹೀಂದ್ರಾ ಸ್ಕಾರ್ಪಿಯೋ ಚಾಲಕ ಮೊಹಮ್ಮದ್ ಶಫಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದಿಲ್ ಅವರು ಇತ್ತೀಚೆಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಚಂಡೀಗಢದ ಉನ್ನತ ತನಿಖಾ ಸಂಸ್ಥೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿದ್ದರು. ಇದೀಗ ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Employment Predictions: ಈ ರಾಶಿಯ ನಿರುದ್ಯೋಗಿಗಳಿಗೆ ಈ ವಾರ ಪ್ರಭಾವಿ ವ್ಯಕ್ತಿಗಳಿಂದ ಉದ್ಯೋಗಕ್ಕೆ ಸಹಾಯವಾಗಲಿದೆ – Kannada News | Weekly Employment Predictions 2026: Zodiac Job Opportunities and Challenges

28-12-2025ರಿಂದ 03-01-2026ರವರಗೆ ಉದ್ಯೋಗದಲ್ಲಿ ಹಲವು ಬದಲಾವಣೆ ಹಾಗೂ ಎಚ್ಚರಿಕೆ ಎಲ್ಲವೂ ಬರಲಿದ್ದು, ಅದಕ್ಕೂ ಮೊದಲೇ ಸಿದ್ಧತೆಯಲ್ಲಿದ್ದರೆ ಒಳ್ಳೆಯದು. ಉದ್ಯೋಗದಲ್ಲಿ ಅನ್ಯರ ಹಸ್ತಕ್ಷೇಪವೂ ಆಗಲಿದೆ. ಎದುರಿಸುವ ಚಾಕಚಕ್ಯತೆ ಇರಲಿ. ಬುದ್ಧಿ ಮನಸ್ಸುಗಳು ದೃಢವಾಗಿದ್ದರೆ ಎಂತಹ ಆಟವನ್ನೂ ಗೆಲ್ಲಬಹುದು. ಸೋತರೂ ಗೆಲುವಿನಂತೆ ಬಿಗಬಹುದು.

ಮೇಷ ರಾಶಿ:

ಡಿಸೆಂಬರ್ ಕೊನೆಯ ವಾರ ಮಂಗಳ‌ ಮತ್ತು ಗುರು ಪ್ರಭಾವದಿಂದ ಉದ್ಯೋಗದಲ್ಲಿ ಚಟುವಟಿಕೆ ಹೆಚ್ಚಾಗುತ್ತದೆ. ಹೊಸ ಜವಾಬ್ದಾರಿ ಅಥವಾ ಹುದ್ದೆ ಬದಲಾವಣೆ ಸಾಧ್ಯ. ಅವಿರತ ಶ್ರಮಕ್ಕೆ ಫಲ ಸಿಗುತ್ತದೆ. ನಿರುದ್ಯೋಗಿಗಳಿಗೆ ಸಂದರ್ಶನಕ್ಕೆ ಅವಕಾಶ. ಈ ವಾರದ ಆತುರದ ನಿರ್ಧಾರ ಅವನತಿಗೆ ಕಾರಣವಾಗಬಹುದು. ಸಹನೆ ಮತ್ತು ಯೋಜನೆ ಅಗತ್ಯ.

ವೃಷಭ ರಾಶಿ:

ಈ ವಾರ ನಿಮಗೆ ಶುಕ್ರ ಹಾಗೂ ಶನಿ ಪ್ರಭಾವದಿಂದ ಉದ್ಯೋಗದಲ್ಲಿ ಸ್ಥಿರತೆ ಇರುತ್ತದೆ. ಉನ್ನತಿಯೂ ನಿಧಾನವಾಗಿ ಬರಲಿದೆ. ಈ ವಾರದಲ್ಲಿ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಅಥವಾ ಒಪ್ಪಂದ ಕೆಲಸ ಸಿಗಬಹುದು. ಹಣಕಾಸು ವಿಚಾರದಲ್ಲಿ ಜಾಗ್ರತೆ ಇದ್ದಷ್ಟು ಸಾಲದು. ಸೋಮಾರಿತನ ಸ್ಥಾನ ಕುಸಿತಕ್ಕೆ ಕಾರಣವಾಗುವುದು.

ಮಿಥುನ ರಾಶಿ:

ಮೂರನೇ ರಾಶಿಯವರಿಗೆ ಈ ವಾರ ಸಪ್ತಮದ ಬುಧನ ಅನುಗ್ರಹದಿಂದ ಬುದ್ಧಿಶಕ್ತಿ, ಸಂವಹನ ಕೌಶಲ್ಯದಿಂದ ಉದ್ಯೋಗದಲ್ಲಿ ಏರಿಕೆ ಸಾಧ್ಯ. ಹೊಸ ವಿಭಾಗಕ್ಕೆ ಸೇರಿಕೊಳ್ಳುವಿರಿ. ನಿರುದ್ಯೋಗಿಗಳಿಗೆ ಸಣ್ಣ ತರಬೇತಿ ಸಿಗಲಿದ್ದು, ಅನಂತರ ಅವಕಾಶ ಕಲ್ಪಿತವಾಗಲಿದೆ. ಮಾತಿನ ಅಜಾಗರೂಕತೆ ಅವನತಿಗೆ ಕಾರಣವಾಗಬಹುದು.

ಕರ್ಕಾಟಕ ರಾಶಿ:

ಈ ರಾಶಿಯವರಿಗೆ ಕೊನೆಯ ವಾರ ಚಂದ್ರ, ಶನಿಯರ ಪ್ರಭಾವದಿಂದ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಜೊತೆಗೆ ಕೆಲಸದ ಹೊಣೆಗಾರಿಕೆ ಹೆಚ್ಚಾದರೂ ಮೆಚ್ಚುಗೆ ಕಡಿಮೆ. ನಿರುದ್ಯೋಗಿಗಳಿಗೆ ವಿಳಂಬವಾಗಿ ಕೆಲಸಕ್ಕೆ ಕರೆ ಬರಲಿದೆ. ವಾರದಲ್ಲಿ ಸಹನೆ, ಶಿಸ್ತು ಇದ್ದರೆ ಸ್ಥಾನ ಉಳಿಯುತ್ತದೆ. ಈ ವಾರ ಭಾವನಾತ್ಮಕತೆಗೆ ಹೋಗದೇ ವಾಸ್ತವಿಕತೆಯಿಂದ ಇರಿ.

ಸಿಂಹ ರಾಶಿ:

ಈ ವಾರ ಪಂಚಮದಲ್ಲಿರುವ ಸೂರ್ಯ ಬಲದಿಂದ ಅಧಿಕಾರ, ನಾಯಕತ್ವ ಅವಕಾಶಗಳು ಹೆಚ್ಚಾಗುತ್ತವೆ. ಗುರುವಿನ ದೃಷ್ಟಿಯು ತನ್ನ ರಾಶಿಯ ಮೇಲಿದ್ದು ಉನ್ನತ ಹುದ್ದೆ ಅಥವಾ ಗೌರವ ಬರುವ ಸಾಧ್ಯತೆ ಇದೆ. ನಿರುದ್ಯೋಗದ ಚಿಂತೆ ಇರುವವರಿಗೆ ಪ್ರಭಾವಿ ವ್ಯಕ್ತಿಗಳ ಸಹಾಯ. ಅಹಂಕಾರ ಮತ್ತು ಅಧಿಕಾರದ ದುರುಪಯೋಗದಿಂದ ಸ್ಥಾನದಿಂದ ಕುಸಿತ ಬರಬಹುದು.

ಕನ್ಯಾ ರಾಶಿ:

ಆರನೇ ರಾಶಿಯವರಿಗೆ ಚತುರ್ಥದಲ್ಲಿರುವ ಬುಧ ಹಾಗೂ ಷಷ್ಠದ ರಾಹು ಪ್ರಭಾವದಿಂದ ತಾಂತ್ರಿಕ ಮತ್ತು ವಿಶ್ಲೇಷಣೆಯ ಕೆಲಸಗಳಲ್ಲಿ ಅಭಿವೃದ್ಧಿ ಇರಲಿದೆ. ಉದ್ಯೋಗ ಬದಲಾವಣೆ ಸಾಧ್ಯ. ಈ ವಾರ ಯಾರಿಗೋ ಬಂದ ಅವಕಾಶವನ್ನು ನಿರುದ್ಯೋಗಿಗಳು ಪಡೆಯುವರು. ನಿಮ್ಮ ಅತಿಯಾದ ವಿಮರ್ಶೆ ಮತ್ತು ಸಂಶಯದಿಂದ ಅವನತಿ ಸಂಭವಿಸಬಹುದು.

ತುಲಾ ರಾಶಿ:

ರಾಶಿಯ ಅಧಿಪತಿಯಾದ ಶುಕ್ರನು ತೃತೀಯದಲ್ಲಿ ಇದ್ದು ಅವನ ಪ್ರಭಾವವಿದ್ದರೂ ನಿಮಗೆ ಉದ್ಯೋಗದಲ್ಲಿ ಸಮತೋಲನದಿಂದ ಇರಲು ಆಗದು. ನಿಧಾನ ಉನ್ನತಿಯಿಂದ ಗೌರವ ಉಳಿಯುತ್ತದೆ. ನಿರುದ್ಯೋಗಿಗಳಿಗೆ ಒಪ್ಪಂದ ಮೇಲೆ ಸಹಾಯಕ ಕೆಲಸ ಸಿಗಲಿದೆ. ಸಂಬಂಧದ ಗೊಂದಲ ಕೆಲಸದ ಮೇಲೆ ಪರಿಣಾಮ ಬೀರಿ ಸ್ಥಾನ ಕುಸಿತಕ್ಕೆ ಕಾರಣವಾಗಲಿದೆ.

ವೃಶ್ಚಿಕ ರಾಶಿ:

ರಾಶಿಯ ಅಧಿಪತಿ ಮಂಗಳ, ಕೇತು ಪ್ರಭಾವದಿಂದ ಉದ್ಯೋಗದಲ್ಲಿ ತೀವ್ರ ಬದಲಾವಣೆ. ಸಮಸ್ಯೆಗಳು ಅಧಿಕವಿರುವ ಕ್ಷೇತ್ರದಲ್ಲಿ ಅವಕಾಶ. ನಿರುದ್ಯೋಗಿಗಳಿಗೆ ಶ್ರಮದ ಮಾನದಂಡದ ಮೇಲೆ ಸಂಪತ್ತು ಸಿಗಲಿದೆ. ಕೋಪ, ಹಠವನ್ನು ಸಹೋದ್ಯೋಗಿಗಳ‌ ಜೊತೆ ಮಾಡುವಿರಿ. ಸಂಯಮದಿಂದ ನಡೆದುಕೊಳ್ಳಲಾಗದು.

ಧನು ರಾಶಿ:

ಒಂಭತ್ತನೇ ರಾಶಿಯವರಿಗೆ ಈ ವಾರ ಗುರುವಿನ ಅನುಗ್ರಹದಿಂದ ಉದ್ಯೋಗದಲ್ಲಿ ಮಾರ್ಗದರ್ಶನ ಹಾಗೂ ಪ್ರಗತಿಯ ವಿಶ್ವಾಸ ಎರಡೂ ಸಿಗಲಿದೆ. ಶಿಕ್ಷಣ, ಸಲಹೆ, ಕಾನೂನು ಕ್ಷೇತ್ರದಲ್ಲಿ ಇರುವವರಿಗೆ ಒತ್ತಡ. ಆದಾಯದ ಹೆಚ್ಳಕ್ಕೆ ಅವಕಾಶ. ನಿರುದ್ಯೋಗಿಗಳಿಗೆ ಶುಭ ಸುದ್ದಿ. ಸ್ಥಾನದಿಂದ‌ ಚ್ಯುತನಾಗುವ ಭೀತಿ ಕಾಣಿಸುವುದು.

ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಈ ವಾರದ ಪ್ರೇಮ – ಪ್ರೀತಿ ಭವಿಷ್ಯ ತಿಳಿಯಿರಿ

ಮಕರ ರಾಶಿ:

ಈ ವಾರ ನಿಮಗೆ ಶನಿ ಪ್ರಭಾವದಿಂದ ಶ್ರಮ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಸ್ಥಾನ ಸ್ಥಿರವೆನ್ನುವ ಕನಸು ನಿಮ್ಮಲ್ಲಿರುವುದು. ಉನ್ನತಿಗೆ ಆತುರ ತಂದುಕೊಳ್ಳುವುದು ಬೇಡ. ನಿರುದ್ಯೋಗಿಗಳಿಗೆ ದೀರ್ಘ ಪ್ರಯತ್ನದ ಅನಂತರ ಕೊನೆಗೂ ನೆಮ್ಮದಿ. ನಿಯಮ ಉಲ್ಲಂಘನೆಯಿಂದ ನಿಮಗೇ ನಿರಾಶೆಯಾಗಲಿದೆ.

ಕುಂಭ ರಾಶಿ:

ಡಿಸಂಬರ್ ನ ಕೊನೆಯ ವಾರದಲ್ಲಿ ಶನಿ ಹಾಗೂ ಕುಜನ ಪ್ರಭಾವದಿಂದ ತಂತ್ರಜ್ಞಾನ, ಹೊಸ ಆಲೋಚನೆ ಹಾಗೂ ಪ್ರಯತ್ನಕ್ಕೆ ಅವಕಾಶ ಲಭ್ಯ. ಉದ್ಯೋಗವನ್ನು ಬೇರೆ ದೃಷ್ಟಿಕೋನದಿಂದ ಲಾಭಕರ. ನಿರುದ್ಯೋಗಿಗಳಿಗೆ ಮನೆಯಲ್ಲಿಯೇ ಕುಳಿತು ದುಡಿಯುವ ಅವಕಾಶ. ಆದಾಯದ ಬಗ್ಗೆ ಹೇಳಿಕೊಳ್ಳಲಾರಿರಿ.

ಮೀನ ರಾಶಿ:

ಗುರು ಮತ್ತು ಶನಿಯ ಪ್ರಾಬಲ್ಯದಿಂದ ಸೃಜನಾತ್ಮಕತೆ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಉನ್ನತಿ. ಉದ್ಯೋಗದಲ್ಲಿ ಮಾನಸಿಕ ತೃಪ್ತಿ. ಕ್ಲೇಶಕ್ಕೆ ಯಾವುದೇ ವಿಕಾರವಿರದು. ನಿರುದ್ಯೋಗಿಗಳಿಗೆ ಪ್ರಭಾವಿಗಳಿಂದ ಶಿಫಾರಸು ಮೂಲಕ ಕೆಲಸ. ಬೇರೆಯವರ ಮೇಲೆ ಇಡುವ ನಂಬಿಕೆಗಿಂತ ನಿಮ್ಮ ಮೇಲಿಟ್ಟರೆ ಒಳ್ಳೆಯದು.

– ಲೋಹಿತ ಹೆಬ್ಬಾರ್ – 8762924271 (what’s app only)

Source link

ಅಕ್ರಮವಾಗಿ ವಾಸಿಸುತ್ತಿದ್ದವರು ಮುಸ್ಲಿಮರೆಂಬ ಪ್ರಶ್ನೆ ಬರಲ್ಲ: ಪಿಣರಾಯಿಗೆ ಡಿಕೆ ಶಿವಕುಮಾರ್ ಖಡಕ್ ತಿರುಗೇಟು – Kannada News | Bengaluru Kogilu Eviction Row: DyCM DK Shivakumar Hits Back at Kerala CM Pinarayi Vijayan, what he said? Know here

ಬೆಂಗಳೂರು, ಡಿಸೆಂಬರ್ 27: ಬೆಂಗಳೂರು ಉತ್ತರದ ಕೋಗಿಲು ಲೇಔಟ್ ಬಳಿ ನಡೆದ ಮನೆಗಳ ತೆರವು ಪ್ರಕರಣದ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ವಾಸ್ತವ ಅರಿಯದೆ ಪ್ರತಿಕ್ರಿಯಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಪಿಣರಾಯಿ ವಿಜಯನ್ ಅವರ ‘ಬುಲ್ಡೋಜರ್ ರಾಜ್’ ಎಕ್ಸ್ ಸಂದೇಶಕ್ಕೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ಪಿಣರಾಯಿ ವಿಜಯನ್ ಹಿರಿಯ ನಾಯಕರು. ಆದರೆ ಸ್ಥಳೀಯ ವಿಚಾರಗಳನ್ನು, ಸತ್ಯ ಸಂಗತಿಯನ್ನು ತಿಳಿಯದೇ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕೋಗಿಲು ಲೇಔಟ್ ಬಳಿ ಕೆಲವು ಜನರು ಬಿಬಿಎಂಪಿಗೆ ಸೇರಿದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಜಾಗವನ್ನು ಕಸದ ವಿಲೇವಾರಿಗೆ ಮೀಸಲಿಟ್ಟ 5 ಎಕರೆ ಪ್ರದೇಶವಾಗಿದ್ದು, ಅಕ್ರಮ ಒತ್ತುವರಿಯನ್ನು ಕಾನೂನುಬದ್ಧವಾಗಿ ತೆರವುಗೊಳಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮನೆ ಕಳೆದುಕೊಂಡವರಿಗೆ ವಸತಿ ನಿಗಮದಿಂದ ಹಂಚಿಕೆ ಮಾಡಲಾಗುತ್ತಿದೆ: ಡಿಕೆಶಿ

ಯಾರನ್ನೂ ಮನೆ ಕಳೆದುಕೊಳ್ಳುವಂತೆ ಮಾಡಿಲ್ಲ. ಮನೆ ಕಳೆದುಕೊಂಡವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಹಂಚಿಕೆ ಮಾಡಲಾಗುತ್ತಿದೆ. ನಾವು ಬುಲ್ಡೋಜರ್ ರಾಜಕಾರಣವನ್ನು ಪಾಲಿಸುವುದಿಲ್ಲ. ಕಾನೂನುಬದ್ಧ ಪ್ರಕ್ರಿಯೆಯಲ್ಲೇ ತೆರವು ಕಾರ್ಯ ನಡೆದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ವಿಷಯವನ್ನು ನಮ್ಮ ಪಕ್ಷದ ನಾಯಕರಿಗೂ ತಿಳಿಸಲಾಗಿದೆ. ಇಲ್ಲಿನ ಸ್ಥಿತಿಗತಿಗಳನ್ನು ಅರಿಯದೇ ಆರೋಪ ಮಾಡುವುದು ಸರಿಯಲ್ಲ ಎಂದು ಪಿಣರಾಯಿ ವಿಜಯನ್ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಸರ್ಕಾರಿ ಜಾಗ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ


ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂತಹ ಪ್ರತಿಕ್ರಿಯೆ ಮೂಡಿ ಬಂದಿರುವುದು ರಾಜಕೀಯ ಗಿಮಿಕ್ ಆಗಿರಬಹುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸರ್ಕಾರದ ಜಾಗದಲ್ಲಿ ಅಕ್ರಮ ಸ್ಲಂ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್​ಗೆ ಡಿಕೆಶಿ ವರದಿ

ಮನೆ ತೆರವು ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ಡಿಕೆ ಶಿವಕುಮಾರ್ ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ. ವರದಿಯಲ್ಲಿ ಕೋಗಿಲು ಲೇಔಟ್‌ನಲ್ಲಿ ಬಿಬಿಎಂಪಿಗೆ ಸೇರಿದ 5 ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಈ ಅಕ್ರಮ ತೆರವು ಕಾನೂನುಬದ್ಧವಾಗಿ ನಡೆದಿದೆ. ಅಕ್ರಮವಾಗಿ ವಾಸಿಸುತ್ತಿದ್ದವರಲ್ಲಿ ಬಹುತೇಕರು ಅಲ್ಪಸಂಖ್ಯಾತ ಸಮುದಾಯದವರು ಎಂಬ ಮಾಹಿತಿಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಏನು ಹೇಳಿದ್ದರು ಪಿಣರಾಯಿ ವಿಜಯನ್?

ಬೆಂಗಳೂರಿನ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ಬೀದಿಗೆ ಹಾಕಿ ‘ಬುಲ್ಡೋಜರ್ ರಾಜ್’ ಕ್ರಮವನ್ನು ಕರ್ನಾಟಕ ಕಾಂಗ್ರೆಸ್​​ ಸರ್ಕಾರ ಅನುಸರಿಸುತ್ತಿದೆ ಎಂದು ಪಿಣರಾಯಿ ವಿಜಯನ್ ಎಕ್ಸ್​​​ನಲ್ಲಿ ಬರೆದುಕೊಂಡಿದ್ದರು. ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಮಾಡುತ್ತಿದೆ ಎಂದು ಅವರು ಉಲ್ಲೇಖಿಸಿದ್ದರು.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಬುಲ್ಡೋಜರ್ ರಾಜ್’ ನೀತಿಯಿಂದ ಬೀದಿಗೆ ಬಂದ ಮುಸ್ಲಿಂ ಕುಟುಂಬ: ಪಿಣರಾಯಿ ವಿಜಯನ್ ಆಕ್ರೋಶ

ಈ ವಿಚಾರ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:53 pm, Sat, 27 December 25

Source link

‘ಆಪರೇಷನ್ ಡ್ರೀಮ್ ಥಿಯೇಟರ್’ ಸೇರಿದ ನಟಿ ಪ್ರಿಯಾಂಕಾ – Kannada News | Priyanka Mohan joins 666 Operation Dream theater movie team

ಸಪ್ತ ಸಾಗರದಾಚೆ ಎಲ್ಲೊ’ (Sapta Sagaradache Ello) ಸಿನಿಮಾ ಮೂಲಕ ಭಾರಿ ಭರವಸೆ ಮೂಡಿರುವ ನಿರ್ದೇಶಕ ಹೇಮಂತ್ ರಾವ್ ಅವರು ಇದೀಗ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದ್ಬುತ ಪ್ರೇಮಕತೆ ನೀಡಿದ ಬಳಿಕ ಒಮ್ಮೆಲೆ ಜಾನರ್ ಬದಲಾಯಿಸಿರುವ ಹೇಮಂತ್ ರಾವ್, ಈಗ ಥ್ರಿಲ್ಲರ್ ಕತೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ಸಿನಿಮಾದ ಕೆಲವು ಪೊಸ್ಟರ್​​ಗಳು ಈಗಾಗಲೇ ಬಿಡುಗಡೆ ಆಗಿದ್ದು, ಪೋಸ್ಟರ್ ಮೂಲಕವೇ ಸಾಕಷ್ಟು ನಿರೀಕ್ಷೆಯನ್ನು ಸಿನಿಮಾ ಮೂಡಿಸಿದೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಸಿನಿಮಾ ತಂಡಕ್ಕೆ ನಾಯಕಿಯ ಎಂಟ್ರಿ ಆಗಿದೆ.

‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾಕ್ಕೆ ನಾಯಕಿಯಾಗಿ ಪ್ರಿಯಾಂಕಾ ಮೋಹನ್ ಎಂಟ್ರಿ ನೀಡಿದ್ದಾರೆ. ನಿರ್ದೇಶಕ ಹೇಮಂತ್ ರಾವ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಮೋಹನ್ ಅವರ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ಅವ್ಯವಸ್ಥೆಯ ನಡುವೆ ಹಾರುವ ಚಿಟ್ಟೆ’ ಎಂದು ನಟಿ ಪ್ರಿಯಾಂಕಾ ಪಾತ್ರವನ್ನು ಹೇಮಂತ್ ರಾವ್ ಬಣ್ಣಿಸಿದ್ದಾರೆ. ಈಗ ಬಿಡುಗಡೆ ಮಾಡಲಾಗಿರುವ ಪೋಸ್ಟರ್​​ನಲ್ಲಿ ಪ್ರಿಯಾಂಕಾ ಮೋಹನ್ ಬಲು ಸುಂದರವಾಗಿ ಕಾಣುತ್ತಿದ್ದಾರೆ. ಅವರ ಪೋಷಾಕು, ಸ್ಟೈಲ್ ಎಲ್ಲವೂ 80ರ ದಶಕದ ಯುವತಿಯನ್ನು ನೆನಪಿಸುತ್ತಿದೆ.

ಅಂದಹಾಗೆ ‘‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಕತೆ ನಡೆಯುವುದೇ 70-80ರ ದಶಕದಲ್ಲಿ. ಡಾಲಿ ಧನಂಜಯ್ ಹಾಗೂ ಶಿವಣ್ಣ ಅವರ ಪೋಸ್ಟರ್​​ಗಳು ಇದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಇದೀಗ ಪ್ರಿಯಾಂಕಾ ಮೋಹನ್ ಪೋಸ್ಟರ್ ಸಹ ಇದನ್ನೇ ಧ್ವನಿಸುತ್ತಿದೆ. ಸಿನಿಮಾನಲ್ಲಿ ಪ್ರಿಯಾಂಕಾ ಮೋಹನ್, ಡಾಲಿ ಧನಂಜಯ್ ಪಾತ್ರದ ಜೋಡಿ ಎಂದು ಊಹಿಸಬಹುದಾಗಿದೆ.

ಇದನ್ನೂ ಓದಿ:ಹೇಮಂತ್ ರಾವ್ ಸಿನಿಮಾನಲ್ಲಿ ಡಾಲಿ ಧನಂಜಯ್, ಭೈರವನ ಪಾಠ ಏನಾಯ್ತು?

ಪ್ರಿಯಾಂಕಾ ಮೋಹನ್ ಬೆಂಗಳೂರಿನ ಯುವತಿ. ಕನ್ನಡದ ‘ಒಂದು ಕಥೆ ಹೇಳ್ಲಾ’ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ಬಳಿಕ ತೆಲುಗು ಮತ್ತು ತಮಿಳಿನಲ್ಲಿ ಸಾಕಷ್ಟು ಅವಕಾಶಗಳು ಅವರನ್ನು ಅರಸಿ ಬಂದವು. ನಾನಿ ಜೊತೆ ‘ನಾನಿಸ್ ಗ್ಯಾಂಗ್ ಲೀಡರ್’, ‘ಸರಿಪೋದಾ ಶನಿವಾರಂ’, ಧನುಶ್ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಪವನ್ ಕಲ್ಯಾಣ್ ಜೊತೆಗೆ ‘ಓಜಿ’ ಇನ್ನೂ ಹಲವಾರು ಪರಭಾಷೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಿಯಾಂಕಾ ಮೋಹನ್ ನಟಿಸಿದ್ದಾರೆ.

2019 ರಲ್ಲಿ ಕನ್ನಡ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಪ್ರಿಯಾಂಕಾ ಮರಳುತ್ತಿರುವುದು ‘ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಮೂಲಕವೇ. ಈ ನಡುವೆ ಅವರು ಯಾವ ಕನ್ನಡ ಸಿನಿಮಾನಲ್ಲಿಯೂ ನಟಿಸಿರಲಿಲ್ಲ. ಸಿನಿಮಾದ ಶೂಟಿಂಗ್ ಭರದಿಂದ ಸಾಗಿದ್ದು, ಸಿನಿಮಾದ ಬಿಡುಗಡೆ ದಿನಾಂಕವನ್ನು ಇನ್ನಷ್ಟೆ ಘೋಷಿಸಬೇಕಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:59 pm, Sat, 27 December 25

Source link