All posts by nagaraj11081993

‘ಮಾರ್ಕ್’ ಸಿನಿಮಾ ನೋಡಿದವರು ಹೇಳಿದ್ದೇನು? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ – Kannada News | Sudeep starrer Mark movie twitter review in Kannada

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಇಂದು (ಡಿಸೆಂಬರ್ 25) ಬಿಡುಗಡೆ ಆಗಿದೆ. ಸಿನಿಮಾದ ಶೋಗಳು ಬೆಳಿಗ್ಗೆ 6 ಗಂಟೆಯಿಂದಲೇ ಶುರುವಾಗಿದೆ. ಅಭಿಮಾನಿಗಳು ಬೆಳಿಗ್ಗೆಯಿಂದಲೇ ಚಿತ್ರಮಂದಿರದ ಮುಂದೆ ಸಾಲು ನಿಂತು ಸಿನಿಮಾ ವೀಕ್ಷಿಸಿದ್ದಾರೆ. ಬೆಳ್ಳಂಬೆಳಿಗ್ಗೆ ‘ಮಾರ್ಕ್’ ಸಿನಿಮಾ ವೀಕ್ಷಿಸಿದವರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ ಹಲವರಿಗೆ ಸಿನಿಮಾ ಇಷ್ಟವಾಗಿದೆ. ‘ಮಾರ್ಕ್’ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ…

‘ಮಾರ್ಕ್’ ಸಿನಿಮಾ ಮೊದಲ ಭಾಗದಿಂದಲೇ ಅದ್ಭುತವಾಗಿದೆ. ಮೊದಲಾರ್ಧದಲ್ಲಿ ಬಹು ಕಥಾಹಂದರಗಳು ತೆರೆದುಕೊಳ್ಳುತ್ತವೆ ಮತ್ತು ಎರಡನೇ ಭಾಗದಲ್ಲಿ ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ತೋರಿಸಲಾಗುತ್ತದೆ. ನಮ್ಮ ಬಾದ್‌ಷಾ ಅಲ್ಟ್ರಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಅವರ ಈ ವರೆಗಿನ ಅತ್ಯುತ್ತಮ ಆಕ್ಷನ್ ಸಿನಿಮಾ ಇದೆನಿಸುತ್ತದೆ. ಅಜನೀಶ್ ಅವರ ಹಿನ್ನೆಲೆ ಸಂಗೀತವು ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಎತ್ತಿ ಹಿಡಿದಿದೆ’ ಎಂದಿದ್ದಾರೆ ಆಕಾಶ್ ಆರ್ ಪಾಟೀಲ್.

‘ಮಾರ್ಕ್’ ಸಿನಿಮಾ ಒಂದು ಅದ್ಭುತ ಆಕ್ಷನ್ ಸಿನಿಮಾ ಆಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದೆ. ಆದರೆ ಸುದೀಪ್ ಅವರು ಅದ್ಭುತವಾದ ಪ್ರದರ್ಶನವನ್ನು ಸಿನಿಮಾ ಉದ್ದಕ್ಕೂ ನೀಡಿದ್ದಾರೆ ಎಂದಿರುವುದು ಮಿಸ್ಟರ್ ಬಾಂಡ್ ಹೆಸರಿನ ಟ್ವಿಟ್ಟರ್ ಖಾತೆ ಬಳಕೆದಾರ.

ಅಭಿ ಕಿಚ್ಚ ಎಂಬುವರು ಟ್ವೀಟ್ ಮಾಡಿ, ‘ಕಿಚ್ಚ ಸುದೀಪ್ ಅವರ ಅಭಿಮಾನಿ ಆಗಿ ನನಗೆ ‘ಮಾರ್ಕ್’ ಸಿನಿಮಾ ಅಷ್ಟಾಗಿ ಹಿಡಿಸಲಿಲ್ಲ. ಸಿನಿಮಾ ನಾನು ನಿರೀಕ್ಷಿಸಿದ ಮಟ್ಟಕ್ಕೆ ಇರಲಿಲ್ಲ. ಇನ್ನೂ ಹಲವು ವಿಭಾಗಗಳಲ್ಲಿ ಚೆನ್ನಾಗಿರಬಹುದಿತ್ತು. ಸುದೀಪ್ ಎಂಟ್ರಿ ಸೂಪರ್ ಆಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಸಹ ಸೂಪರ್. ಆದರೆ ಕತೆ ಮತ್ತು ಚಿತ್ರಕತೆ ಸಪ್ಪೆಯಾಗಿದೆ’ ಎಂದಿದ್ದಾರೆ.

ಪುನೀತ್ ಗೌಡ ಎಂಬುವರು ಟ್ವೀಟ್ ಮಾಡಿ, ‘ಮಾರ್ಕ್ ಸಿನಿಮಾಕ್ಕೆ ಐದರಲ್ಲಿ ಎರಡು ಅಂಕ ನೀಡಿದ್ದಾರೆ. ಸಿನಿಮಾದ ಬಿಜಿಎಂ ಬಿಟ್ಟು ಬೇರೆ ಏನು ಇಷ್ಟ ಆಗಲಿಲ್ಲ. ತೀರ ಸಾಮಾನ್ಯ ಕತೆ. ಏನೂ ಹೊಸತನ ಇಲ್ಲ. ಕಾರ್ತಿಕೇಯ ಮತ್ತೆ ಹಳೆ ಸೂತ್ರಕ್ಕೆ ಕಟ್ಟು ಬಿದ್ದಿದ್ದಾರೆ. ಚಿತ್ರಕತೆ ಮೇಲೆ ಅವರಿಗೆ ಹಿಡಿತ ತಪ್ಪಿದೆ. ಸುದೀಪ್ ಅವರು ಇನ್ನೂ ಉತ್ತಮ ಕತೆ ಆಯ್ಕೆ ಮಾಡಿಕೊಳ್ಳಬೇಕಿತ್ತು’ ಎಂದಿದ್ದಾರೆ.

ಆರು ತಿಂಗಳಲ್ಲಿ ನಿರ್ಮಿಸಿದ ಒಳ್ಳೆಯ ಪ್ರಾಡಕ್ಟ್ ‘ಮಾರ್ಕ್’ ಸಿನಿಮಾ. ಆದರೂ ನಿರ್ದೇಶಕ ವಿಜಯ್, ಸುದೀಪ್ ಅವರಿಗೆ ಒಳ್ಳೆಯ ಎಲಿವೇಷನ್ ದೃಶ್ಯಗಳನ್ನು ಕೊಡುವುದರಲ್ಲಿ ಸೋತಿದ್ದಾರೆ. ಅಜನೀಶ್ ಅವರು ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ ಆದರೆ ಇನ್ನೂ ಒಳ್ಳೆಯ ಹಿನ್ನೆಲೆ ಸಂಗೀತ ಕೊಡಬಹುದಿತ್ತು. ಸುದೀಪ್ ಅವರು ತಮ್ಮ ಅಭಿನಯ, ಆಕ್ಷನ್​​ನಿಂದ ಗಮನ ಸೆಳೆಯುತ್ತಾರೆ. ‘ಮ್ಯಾಕ್ಸ್’ ಸಿನಿಮಾ ಸರಳ ಕತೆ, ಒಳ್ಳೆಯ ಪಾತ್ರಗಳ ಮೂಲಕ ಗಮನ ಸೆಳೆಯಿತು, ಆದರೆ ‘ಮಾರ್ಕ್’ ಅದಕ್ಕೆ ಉಲ್ಟಾ ಆಗಿದೆ ಎಂದಿದ್ದಾರೆ ಪವನ್ ಪ್ರಸಾದ್.

ಎಆರ್ ಎಂಬ ಟ್ವೀಟ್ ಖಾತೆಯಿಂದ ಮಾಡಲಾದ ಟ್ವೀಟ್​ನಲ್ಲಿ, ‘ಮೊದಲಾರ್ಧದ ಇಂಟ್ರೊ ಸಾಂಗ್ ಚೆನ್ನಾಗಿದೆ. ಆದರೆ ಉಳಿದಿದ್ದೆಲ್ಲ ತುಸು ಎಳೆದಂತೆ ಅನಿಸಿತು. ಎರಡನೇ ಅರ್ಧದ ಪ್ರಾರಂಭ ಚೆನ್ನಾಗಿ ಆಯ್ತು. ಆದರೆ ಆ ಬಳಿಕ ಕುತೂಹಲವನ್ನು ಉಳಿಸಿಕೊಳ್ಳುವುದಿಲ್ಲ. ಸುದೀಪ್ ಸಿನಿಮಾ ಉಳಿಸಲು ಪ್ರಯತ್ನ ಪಟ್ಟಿದ್ದಾರಾದರೂ ಅವರಿಂದ ಸಾಧ್ಯವಾಗಿಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೋಟೆಲ್, ರೆಸ್ಟೋರೆಂಟ್, ಬೇಕರಿಗಳ ಮೇಲೆ ಅಧಿಕಾರಿಗಳ ದಾಳಿ: 2-3 ದಿನದ ಹಳೆಯ ಮಾಂಸ, ಪನ್ನೀರ್ ಪತ್ತೆ – Kannada News | Karnataka Hotel Raids: Adulterated Food, License Violations in Raichur

ರಾಯಚೂರು, ಡಿ.25: ಕರ್ನಾಟಕದ ಅನೇಕ ಹೋಟೆಲ್ ರೆಸ್ಟೋರೆಂಟ್, ಬೇಕರಿ, ಬಾರ್ & ರೆಸ್ಟೋರೆಂಟ್​​​ಗಳಲ್ಲಿ ಕಳಪೆ ಆಹಾರಗಳು ಪತ್ತೆಯಾಗಿದೆ. ಇದೀಗ ಹೋಟೆಲ್ ರೆಸ್ಟೋರೆಂಟ್, ಬೇಕರಿಗಳಲ್ಲಿ ಸಿಗುವ ವೆರೈಟಿ ಆಹಾರವನ್ನು ಸೇವನೆ ಮಾಡುವ ಮುನ್ನ ಎಚ್ಚರ ಇರಲಿ. ಅಲ್ಲಿ ಸಿಗುವ ಆಹಾರಗಳು ಎಷ್ಟು ಸೇಫ್​​ ಎನ್ನುವುದನ್ನು ಮೊದಲು ತಿಳಿದುಕೊಳ್ಳುವುದು ಒಳ್ಳೆಯದು. ಹೌದು ಇದೀಗ ರಾಯಚೂರಿನಲ್ಲಿ ನಾಲ್ಕು ಇಲಾಖೆ ಅಧಿಕಾರಿಗಳಿಂದ ಹೋಟೆಲ್​​ಗಳ ಮೇಲೆ ದಾಳಿ ಮಾಡಲಾಗಿದೆ. ಎರಡು-ಮೂರು ದಿನದ ಹಳೆಯ ಮಾಂಸ, ಪನ್ನೀರ್ ಫ್ರೀಜರ್ ಗಳಲ್ಲಿ ಪತ್ತೆಯಾಗಿದೆ. ಇದರ ಜತೆಗೆ ಕಲಬೆರಿಕೆ, ಸಂಶಯ ಹುಟ್ಟಿಸೋ ಆಹಾರ-ಪದಾರ್ಥ ಪತ್ತೆಯಾಗಿದೆ. ಇದನ್ನು ನೋಡಿದ ಅಧಿಕಾರಿಗಳು ಶಾಕ್​​ ಆಗಿದ್ದಾರೆ. ರಾಯಚೂರು ಮಹಾನಗರ ಪಾಲಿಕೆ, ಕಂದಾಯ ಇಲಾಖೆ,ಆಹಾರ ಸುರಕ್ಷತಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಈ ದಾಳಿ ನಡೆಸಲಾಗಿದೆ. ಒಟ್ಟು 19 ಕಡೆ ದಾಳಿಯನ್ನು ನಡೆಸಿದ್ದಾರೆ. ಈ ವೇಳೆ ಈ ಹೋಟೆಲ್ ರೆಸ್ಟೋರಂಟ್, ಬೇಕರಿಗಳಿಗೆ ಆಹಾರ ಗುಣಮಟ್ಟ, ಶುಚಿತ್ವ, ಲೈಸೆನ್ಸ್ ಇಲ್ಲದಿರುವುದು ಗೊತ್ತಾಗಿದೆ. ಇನ್ನು ಕೆಲವು ಕಡೆ ಅಪಾಯಕಾರಿ ಎಂದು 27 ಗೃಹಪಯೋಗಿ ಸಿಲಿಂಡರ್ ಗಳು ಜಪ್ತಿ ಮಾಡಲಾಗಿದೆ. ಇನ್ನು ನಿಯಮ ಉಲ್ಲಂಘಿಸಿದ ವ್ಯಾಪಾರಸ್ಥರಿಗೆ ದಂಡ ವಿಧಿಸಿ,ನೋಟಿಸ್ ನೀಡಲಾಗಿದೆ.ಒಟ್ಟು 1 ಲಕ್ಷ 8 ಸಾವಿರ ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿರುವ ವ್ಯಾಪಾರಿಗಳಿಗೆ ಪಾಲಿಕೆ ಆಯುಕ್ತ ಜುಬಿನ್ ಮೋಹಾಪಾತ್ರ ಖಡಕ್ ಎಚ್ಚರಿಕೆ ಕೂಡ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ನೆಲಮಂಗಲ: ಮದುವೆಯಾಗಿ ತಿಂಗಳು ಕಳೆಯುವುದರೊಳಗೆ ನಿಗೂಢವಾಗಿ ನವ ವಿವಾಹಿತೆ ಸಾವು – Kannada News | Nelamangala Newlywed Death, Husband Suspected in Mysterious Case

ನೆಲಮಂಗಲ, ಡಿಸೆಂಬರ್​​ 25: ಮದುವೆಯಾಗಿ ಒಂದು ತಿಂಗಳು ಕಳೆಯುವ ಒಳಗೆ ನವ ವಿವಾಹಿತೆ ನಿಗೂಢವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಐಶ್ವರ್ಯ (26) ಮೃತ ಯುವತಿಯಾಗಿದ್ದು, ಗಂಡನೇ ಆಕೆಯನ್ನು ಕೊಲೆ ಮಾಡಿರೋದಾಗಿ ಪೋಷಕರು ಆರೋಪಿಸಿದ್ದಾರೆ. 27 ದಿನಗಳ ಹಿಂದೆಯಷ್ಟೇ ಲಿಖಿತ್ ಸಿಂಹ ಜೊತೆ ಐಶ್ವರ್ಯ ಮದುವೆ ನಡೆದಿತ್ತು. ಸುಂದರ ಸಂಸಾರದ ಕನಸು ಕಂಡಿದ್ದ ಐಶ್ವರ್ಯ, ಸಾಂಸಾರಿಕ ಬದುಕನ್ನು ಸರಿಯಾಗಿ ಆರಂಭಿಸುವ ಮುನ್ನವೇ ಪ್ರಾಣ ಕಳೆದುಕೊಂಡಿದ್ದಾರೆ.

ಪತ್ನಿಗೆ ಕಿರುಕುಳ ಆರೋಪ

ಮೂಲತಃ ನಾಗಮಂಗಲ ನಿವಾಸಿಗಳಾದ ಮಮತಾ ಹಾಗೂ ಕೃಷ್ಣಮೂರ್ತಿ ದಂಪತಿಯ ಹಿರಿ ಮಗಳು ಐಶ್ವರ್ಯಳನ್ನು ಬಾಗಲಗುಂಟೆ ಪೈಪ್ ಲೈನ್ ಮಲ್ಲಸಂದ್ರ ನಿವಾಸಿ ಲಿಖಿತ್ ಸಿಂಹ ಅವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಮದುವೆ ನಡೆದಿತ್ತಾದರೂ ತಿಂಗಳು ಕಳೆಯುವದರ ಒಳಗೆ ಐಶ್ವರ್ಯಗೆ ಕಿರುಕುಳ ನೀಡಲಾಗಿದೆ. ಇದೇ ವಿಚಾರವಾಗಿ ನಿನ್ನೆ ಬೆಳಿಗ್ಗೆ ಕುಟುಂಬಸ್ಥರು ರಾಜಿ ಪಂಚಾಯ್ತಿ ಮಾಡಿದ್ದರು. ಇಷ್ಟಾದ್ರೂ ಸಂಜೆ ಐಶ್ವರ್ಯಾಳ ಮೇಲೆ ಮತ್ತೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಮೊಮ್ಮಗಳ 40 ದಿನದ ಶಿಶುವನ್ನೇ ಕೊಂದಳೇ ಅಜ್ಜಿ? ಮರ್ಯಾದಾ ಹತ್ಯೆ ಶಂಕೆ

ನಿನ್ನೆ ಸಂಜೆ ವೇಳೆಗೆ ಲಿಖಿತ್​​ ತಮ್ಮ ಕರೆ ಮಾಡಿ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಮನೆಗೆ ಬಂದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಆದರೆ ಬಾಗಿಲು ಒಡೆಯದ ಪರಿಣಾಮ, ಗಂಡನೇ ನೇಣುಹಾಕಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಐಶ್ವರ್ಯ ಪತಿ ಲಿಖಿತ್​​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ ಎಷ್ಟು ಗೊತ್ತಾ? ಅನ್​ಕ್ಲೇಮ್ಡ್ ಡೆಪಾಸಿಟ್ ಮರಳಿಪಡೆಯುವುದು ಹೇಗೆ? – Kannada News | Rs 3,400 crore lies unclaimed in various bank accounts in Karnataka, says RBI officer

ಮಂಗಳೂರು, ಡಿಸೆಂಬರ್ 25: ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಕ್ಲೇಮ್ ಆಗದೇ ಉಳಿದಿರುವ ಹಣ 3,400 ಕೋಟಿ ರೂನಷ್ಟಿದೆಯಂತೆ. ಆರ್​ಬಿಐ (RBI) ಬೆಂಗಳೂರು ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಈ ಮಾಹಿತಿ ನೀಡಿದ್ದಾರೆ. ಜಿಲ್ಲಾ ಸಮಾಲೋಚನ ಸಮಿತಿ (ಡಿಸಿಸಿ) ಮತ್ತು ಜಿಲ್ಲಾ ಮಟ್ಟದ ಪರಾಮರ್ಶೆ ಸಮಿತಿ (ಡಿಎಲ್​ಆರ್​ಸಿ) ಸಭೆಯಲ್ಲಿ ಆರ್​ಬಿಐ ಅಧಿಕಾರಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಹತ್ತಕ್ಕೂ ಹೆಚ್ಚು ವರ್ಷಗಳಿಂದ ಬ್ಯಾಂಕ್ ಖಾತೆಗಳು, ಡೆಪಾಸಿಟ್ ಪ್ಲಾನ್​ಗಳು ಬಳಕೆ ಇಲ್ಲದೇ ನಿಷ್ಕ್ರಿಯವಾಗಿದ್ದರೆ ಅದನ್ನು ಆರ್​ಬಿಐನ ಠೇವಣಿದಾರ ಶಿಕ್ಷಣ ಮತ್ತು ಜಾಗೃತಿ ನಿಧಿ (ಡಿಇಎಎಫ್) ಎನ್ನುವ ವಿಶೇಷ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ. ರಾಷ್ಟ್ರಾದ್ಯಂತ ಎಲ್ಲಾ ಬ್ಯಾಂಕುಗಳ ನಿಷ್ಕ್ರಿಯ ಅಕೌಂಟ್​ಗಳಿಂದ ಆರ್​ಬಿಐನ ಡಿಇಎಎಫ್ ಫಂಡ್​ಗೆ ವರ್ಗಾವಣೆ ಆಗಿರುವುದು ಒಟ್ಟು ಮೊತ್ತ ಸುಮಾರು 75,000 ಕೋಟಿ ರೂ ಆಸುಪಾಸು ಇದೆ. ಈ ಪೈಕಿ ಕರ್ನಾಟಕದ ಬ್ಯಾಂಕುಗಳ ಠೇವಣಿದಾರರ ಅನ್​ಕ್ಲೇಮ್ಡ್ ಡೆಪಾಸಿಟ್​ಗಳ ಮೊತ್ತವೇ 3,400 ಕೋಟಿ ರೂ ಇದೆ.

ಇದನ್ನೂ ಓದಿ: ಬರಲಿವೆ ಹೊಸ ಏರ್ಲೈನ್ಸ್; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್​ಪ್ರೆಸ್​ಗೂ ಸಿಕ್ಕಿತು ಎನ್​ಒಸಿ

ಸಮಾಧಾನದ ಸಂಗತಿ ಎಂದರೆ, ಕ್ಲೇಮ್ ಆಗದ ಶೇ. 80ರಷ್ಟು ಅಕೌಂಟ್​ಗಳಲ್ಲಿ ಇರುವ ಹಣ 10,000 ರೂಗಿಂತ ಕಡಿಮೆ. ಹಲವು ದಶಕಗಳ ಹಿಂದೆಯೇ ಇವು ನಿಷ್ಕ್ರಿಯಗೊಂಡಿವೆ. ಮೊಬೈಲ್ ನಂಬರ್ ಅಪ್​ಡೇಟ್ ಆಗದೇ ಇರುವುದು, ಕೆವೈಸಿ ಅಪ್​ಡೇಟ್ ಆಗದಿರುವುದು, ಖಾತೆದಾರರು ಜೀವಂತ ಇಲ್ಲದಿರುವುದು, ಇತ್ಯಾದಿ ಕಾರಣಕ್ಕೆ ಅಕೌಂಟ್​ಗಳು ಇನಾಪರೇಟಿವ್ ಆಗಿವೆ.

ಗ್ರಾಹಕರಿಗೆ ಹಣ ಮರಳಿಸಲು ಆರ್​ಬಿಐ ಅಭಿಯಾನ

ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣವನ್ನು ಖಾತೆದಾರರಿಗೆ ಅಥವಾ ವಾರಸುದಾರರಿಗೆ ತಲುಪಿಸಲು ಆರ್​ಬಿಐ ಒಂದು ದೊಡ್ಡ ಅಭಿಯಾನವನ್ನೇ ನಡೆಸಿದೆ. ಮೂರು ತಿಂಗಳ ಹಿಂದೆ ಆರಂಭವಾದ ಈ ‘ನಿಮ್ಮ ಹಣ ನಿಮ್ಮ ಹಕ್ಕು’ ಕೆಂಪೇನ್ ಡಿಸೆಂಬರ್ 31ರವರೆಗೂ ಇರಲಿದೆ. ಈ ಅಕೌಂಟ್​ಗಳ ಖಾತೆದಾರರನ್ನು ಗುರುತಿಸಿ, ಅವರು ಜೀವಂತ ಇದ್ದರೆ ಖಾತೆ ಸಕ್ರಿಯಗೊಳಿಸುವುದೋ ಅಥವಾ ಹಣ ಮರಳಿಸುವುದೋ ಮಾಡಲಾಗುತ್ತದೆ. ಜೀವಂತ ಇಲ್ಲದಿದ್ದರೆ ವಾರಸುದಾರರಿಗೆ ಹಣ ಮರಳಿಸುವ ಪ್ರಯತ್ನ ಮಾಡಲಾಗುತ್ತದೆ.

ವಾರಸುದಾರರು ಹಣ ಕ್ಲೇಮ್ ಮಾಡುವುದು ಹೇಗೆ?

ಆರ್​ಬಿಐ ಪ್ರಕಟಿಸಿರುವ ಮಾಹಿತಿ ಪ್ರಕಾರ, ಅನ್​ಕ್ಲೇಮ್ಡ್ ಡೆಪಾಸಿಟ್​ಗಳು ಯಾವುವು ಎಂದು ವೀಕ್ಷಿಸಲು ಪ್ರತ್ಯೇಕ ಪೋರ್ಟಲ್ ರಚಿಸಲಾಗಿದೆ: udgam.rbi.org.in/

ಇದನ್ನೂ ಓದಿ: ಭಾರತದೊಂದಿಗೆ ಇದು ಕೆಟ್ಟ ಒಪ್ಪಂದ: ನ್ಯೂಜಿಲೆಂಡ್ ಸರ್ಕಾರದೊಳಗೆಯೇ ಅಪಸ್ವರ; ಇವರ ತಕರಾರುಗಳೇನು?

ಇಲ್ಲಿಗೆ ಹೋಗಿ ಖಾತೆದಾರ ಹೆಸರು, ಬ್ಯಾಂಕನ್ನು ಆಯ್ಕೆ ಮಾಡಿಕೊಂಡು, ಪ್ಯಾನ್ ಅಥವಾ ವೋಟರ್ ಐಡಿ, ಡಿಎಲ್, ಪಾಸ್ಪೋರ್ಟ್ ನಂಬರ್​ನಿಂದ ಸರ್ಚ್ ಮಾಡಿ ನಿಮ್ಮದೋ ಅಥವಾ ಪೋಷಕರದ್ದೋ ಅನ್​ಕ್ಲೇಮ್ಡ್ ಡೆಪಾಸಿಟ್ ಇದ್ದರೆ ಪತ್ತೆ ಮಾಡಬಹುದು.

ಅಥವಾ, ಕ್ಲೇಮ್ ಆಗದೇ ಯಾವುದಾದರೂ ಖಾತೆ ಇರುವುದು ಗೊತ್ತಾದರೆ, ನೀವೇ ಖುದ್ದಾಗಿ ಆ ಬ್ಯಾಂಕ್ ಕಚೇರಿಗೆ ಹೋಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಿದರೆ ಹಣವನ್ನು ಮರಳಿ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘45’ ಸಿನಿಮಾ ಹೇಗಿದೆ? ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್ – Kannada News | 45 Movie Twitter Review Fans Happy After Watching Shivarajkumar Upendra And Raj Movie

‘45’ ಸಿನಿಮಾ (45 Movie) ಇಂದು (ಡಿಸೆಂಬರ್ 25) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ, ಶಿವರಾಜ್​ಕುಮಾರ್ ನಟಿಸಿದ್ದಾರೆ. ಈ ಸಿನಿಮಾ ನೋಡಿದ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಅನೇಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಟ್ವಿಟರ್​​ನಲ್ಲಿ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಯಾವ ವಿಷಯ ಹೆಚ್ಚು ಇಷ್ಟ ಆಗುತ್ತಿದೆ ಎಂಬುದನ್ನು ಹೇಳಿದ್ದಾರೆ.

ಅರ್ಜುನ್ ಜನ್ಯ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿ ಫೇಮಸ್ ಆದವರು. ಇದೇ ಮೊದಲ ಬಾರಿಗೆ ಅವರು ‘45’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸಾವು ಹಾಗೂ ಬದುಕಿನ ನಡುವಿನ ಕಥೆಯನ್ನು ಹೇಳಲಾಗಿದೆ. ಈ ಚಿತ್ರ ನೋಡಿದ ಅನೇಕರು ಮೆಚ್ಚಿಗೆ ಸೂಚಿಸುತ್ತಿದ್ದಾರೆ. ಸಿನಿಮಾದ ಗ್ರಾಫಿಕ್ಸ್ ತುಂಬಾನೇ ಇಷ್ಟ ಆಯಿತು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಚಿತ್ರದ ಥೀಮ್​​ನ ಇಷ್ಟಪಟ್ಟಿದ್ದಾರೆ.

‘ಶಿವಣ್ಣನ ಶಿವತಾಂಡವ’ ಎಂದು ಕೆಲವರು ಹೇಳಿದ್ದಾರೆ. ‘45’ ಚಿತ್ರದ ಕ್ಲೈಮ್ಯಾಕ್ಸ್ ಇಷ್ಟ ಆಯಿತು ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಶಿವರಾಜ್​​ಕುಮಾರ್, ಉಪೇಂದ್ರ ಹಾಗೂ ರಾಜ್ ಅವರಿಗೆ ಸರಿಯಾದ ರೀತಿಯಲ್ಲಿ ಸ್ಕ್ರೀನ್​ಸ್ಪೇಸ್​ ಸಿಕ್ಕಿದೆ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ಎಲ್ಲೆಲ್ಲೂ ‘45’, ‘ಮಾರ್ಕ್’ ಸಿನಿಮಾ ಸಂಭ್ರಮ; ಎರಡು ದೊಡ್ಡ ಚಿತ್ರಕ್ಕೆ ಅದ್ದೂರಿ ಸ್ವಾಗತ

‘45’ ಸಿನಿಮಾದಲ್ಲಿ ಶಿವರಾಜ್​​ಕುಮಾರ್, ರಾಜ್ ಹಾಗೂ ಉಪ್ಪಿ ಜೊತೆ ಪ್ರಮೋದ್ ಶೆಟ್ಟಿ, ಕೌಸ್ತುಭಾ ಮಣಿ ಮೊದಲಾದವರು ನಟಿಸಿದ್ದಾರೆ. ಗರುಡ ಪುರಾಣದ ಕಥೆಯ ಉಲ್ಲೇಖವನ್ನು ಚಿತ್ರದಲ್ಲಿ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

PM Modi Christmas: ದೆಹಲಿಯ ಚರ್ಚ್‌ನ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಮೋದಿ ಭಾಗಿ; ಕ್ಯಾಥೆಡ್ರಲ್ ಚರ್ಚ್‌ನ ವಿಶೇಷತೆ ಇಲ್ಲಿದೆ – Kannada News | PM Modi’s Christmas Visit to Delhi’s Historic Cathedral Church: History and Architecture

ದೇಶಾದ್ಯಂತ ಇಂದು ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ವಿಶೇಷ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಅತ್ಯಂತ ಹಳೆಯ ಮತ್ತು ಭವ್ಯವಾದ ಚರ್ಚ್‌ಗಳಲ್ಲಿ ಒಂದಾದ ಕ್ಯಾಥೆಡ್ರಲ್ ಚರ್ಚ್‌ಗೆ ಭೇಟಿ ನೀಡಿದ್ದಾರೆ. ಪ್ರಧಾನಿಯವರ ಈ ಭೇಟಿ ಧಾರ್ಮಿಕ ಸಾಮರಸ್ಯದ ಸಂದೇಶ ಮಾತ್ರವಲ್ಲದೆ, ರಾಜಧಾನಿ ದೆಹಲಿಯ ಈ ಐತಿಹಾಸಿಕ ಚರ್ಚ್ ಅನ್ನು ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವನ್ನಾಗಿ ಮಾಡಿದೆ. ಆದ್ದರಿಂದ ಈ ಚರ್ಚೆ ಯಾವಾಗ ಸ್ಥಾಪನೆಯಾಯಿತು, ಅದ್ಭುತ ಇತಿಹಾಸ ಮತ್ತು ವಾಸ್ತುಶಿಲ್ಪದ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ದೆಹಲಿಯಲ್ಲಿರುವ ಅತ್ಯಂತ ಭವ್ಯವಾದ ಚರ್ಚ್:

ರಾಷ್ಟ್ರಪತಿ ಭವನಕ್ಕೆ ಬಹಳ ಹತ್ತಿರದಲ್ಲಿರುವ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್ ದೆಹಲಿಯ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದ್ದು, ಇದನ್ನು ರಾಜಧಾನಿಯ ಅತಿದೊಡ್ಡ ಚರ್ಚ್ ಎಂದೂ ಪರಿಗಣಿಸಲಾಗಿದೆ. ಇದರ ಬೃಹತ್ ಕಟ್ಟಡ, ಎತ್ತರದ ಗುಮ್ಮಟಗಳು ಮತ್ತು ಸುಂದರವಾದ ಬಣ್ಣದ ಗಾಜು ಇದಕ್ಕೆ ವಿಶಿಷ್ಟ ಗುರುತನ್ನು ನೀಡುತ್ತದೆ. ಇಲ್ಲಿ ಕ್ರಿಸ್‌ಮಸ್ ಸಮಯದಲ್ಲಿ ವಿಶೇಷ ಅಲಂಕಾರಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ಇದರ ಭವ್ಯ ರಚನೆ ಮತ್ತು ಪ್ರಶಾಂತ ವಾತಾವರಣವು ಪ್ರವಾಸಿಗರು ಮತ್ತು ಯಾತ್ರಿಕರಲ್ಲಿ ಅತ್ಯಂತ ಜನಪ್ರಿಯವಾಗಿದೆ.

ಇದನ್ನೂ ಓದಿ: ಶಬರಿಮಲೆ ಅಯ್ಯಪ್ಪ ದೇವಾಲಯದ 18 ಪವಿತ್ರ ಮೆಟ್ಟಿಲುಗಳ ಮಹತ್ವವೇನು ಗೊತ್ತಾ?

ಕ್ಯಾಥೆಡ್ರಲ್ ಚರ್ಚ್‌ನ ಅದ್ಭುತ ಇತಿಹಾಸ:

ದೆಹಲಿಯ ಮುಖ್ಯ ಕ್ಯಾಥೆಡ್ರಲ್ ಚರ್ಚ್, ಇದನ್ನು ವೈಸ್ರಾಯ್ ಚರ್ಚ್ ಎಂದೂ ಕರೆಯುತ್ತಾರೆ, ಇದರ ನಿರ್ಮಾಣವು 1927 ರಲ್ಲಿ ಪ್ರಾರಂಭವಾಯಿತು ಮತ್ತು 1935 ರಲ್ಲಿ ಪೂರ್ಣಗೊಂಡಿತು ಮತ್ತು ಜನವರಿ 18, 1931 ರಂದು ಸಾರ್ವಜನಿಕರಿಗೆ ತೆರೆಯಲಾಯಿತು. ಇದನ್ನು ರೋಮನ್ ಕ್ಯಾಥೋಲಿಕ್ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರವೆಂದು ಪರಿಗಣಿಸಲಾಗಿದೆ. ಬ್ರಿಟಿಷ್ ಅವಧಿಯಲ್ಲಿ ನಿರ್ಮಿಸಲಾದ ಈ ಚರ್ಚ್‌ನ ವಾಸ್ತುಶಿಲ್ಪವು ಯುರೋಪಿಯನ್ ಶೈಲಿಗಳಿಂದ ಪ್ರಭಾವಿತವಾಗಿದೆ, ಎತ್ತರದ ಕಮಾನುಗಳು, ವಿಶಾಲವಾದ ಪ್ರಾರ್ಥನಾ ಮಂದಿರವನ್ನು ಹೊಂದಿದೆ. ಬ್ರಿಟಿಷ್ ಅವಧಿಯಲ್ಲಿ, ಭಾರತದ ವೈಸ್ರಾಯ್ ಲಾರ್ಡ್ ಇರ್ವಿನ್ ಪ್ರಾರ್ಥನೆ ಸಲ್ಲಿಸಲು ಈ ಚರ್ಚ್‌ಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು ಎಂದು ಹೇಳಲಾಗುತ್ತದೆ. ಆ ಯುಗದ ಅನೇಕ ಐತಿಹಾಸಿಕ ನೆನಪುಗಳನ್ನು ಚರ್ಚ್ ಇನ್ನೂ ಹೊಂದಿದೆ.

ಕ್ಯಾಥೆಡ್ರಲ್ ಚರ್ಚ್‌ನ ಅದ್ಭುತ ವಾಸ್ತುಶಿಲ್ಪ:

ಕ್ಯಾಥೆಡ್ರಲ್ ಚರ್ಚ್‌ನ ವಿನ್ಯಾಸವನ್ನು ಪ್ರಸಿದ್ಧ ಬ್ರಿಟಿಷ್ ವಾಸ್ತುಶಿಲ್ಪಿ ಹೆನ್ರಿ ಮೆಡ್ಲ್ ಸಿದ್ಧಪಡಿಸಿದ್ದಾರೆ. ಚರ್ಚ್‌ನ ವಾಸ್ತುಶಿಲ್ಪವು ಇಟಾಲಿಯನ್ ಪ್ರಭಾವಗಳನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಇದರ ಛಾವಣಿಗಳು ಮತ್ತು ಕಮಾನುಗಳನ್ನು ಬೇಸಿಗೆಯಲ್ಲಿಯೂ ಸಹ ಒಳಗಿನ ತಾಪಮಾನವು ಹೊರಗಿನದಕ್ಕಿಂತ ಕಡಿಮೆ ಇರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರ ಕಿಟಕಿಗಳನ್ನು ಹಗಲಿನಲ್ಲಿ ನೈಸರ್ಗಿಕ ಬೆಳಕು ಚರ್ಚ್‌ನ ಒಳಭಾಗವನ್ನು ಬೆಳಗಿಸುವ ರೀತಿಯಲ್ಲಿ ಕೆತ್ತಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:40 pm, Thu, 25 December 25

Source link

ಬಾಕ್ಸಿಂಗ್ ಡೇ ಟೆಸ್ಟ್​ಗೆ 12 ಆಟಗಾರರನ್ನು ಹೆಸರಿಸಿದ ಆಸ್ಟ್ರೇಲಿಯಾ – Kannada News | Ashes 2025: Australia possible XI named for Boxing Day Test

ಡಿಸೆಂಬರ್ 26 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ 12 ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಹನ್ನೆರಡು ಆಟಗಾರರಲ್ಲಿ 11 ಮಂದಿ ಕಣಕ್ಕಿಳಿಯುವುದು ಖಚಿತ. ಅದರಂತೆ ಈ ಬಾರಿ ಕೂಡ ಇನಿಂಗ್ಸ್ ಆರಂಭಿಕರಾಗಿ ಟ್ರಾವಿಸ್ ಹೆಡ್ ಹಾಗೂ ಜೇಕ್​ ವೆದರಾಲ್ಡ್​ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಮಾರ್ನಸ್ ಲಾಬುಶೇನ್ ಬ್ಯಾಟ್ ಬೀಸಲಿದ್ದಾರೆ.

ಇನ್ನು ಪ್ಯಾಟ್ ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ನಾಯಕನಾಗಿ ಸ್ಟೀವ್ ಸ್ಮಿತ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಉಸ್ಮಾನ್ ಖ್ವಾಜಾ ಕಾಣಿಸಿಕೊಂಡರೆ, ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಆರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಹಾಗೆಯೇ ಆಲ್​ರೌಂಡರ್ ಕ್ಯಾಮರೋನ್ ಗ್ರೀನ್ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.

ವೇಗಿಗಳಾಗಿ ಮಿಚೆಲ್ ಸ್ಟಾರ್ಕ್​ ಹಾಗೂ ಸ್ಕಾಟ್ ಬೋಲ್ಯಾಂಡ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಇನ್ನು ಮತ್ತೋರ್ವ ವೇಗಿಯಾಗಿ ಬ್ರೆಂಡನ್ ಡಾಗೆಟ್​ಗೆ ಸ್ಥಾನ ಸಿಗುವ ನಿರೀಕ್ಷೆಯಿದೆ. ಆದರೆ ಹನ್ನೊಂದನೇ ಆಟಗಾರನ ಸ್ಥಾನಕ್ಕೆ ಮೈಕೆಲ್ ನೇಸರ್ ಹಾಗೂ ಜ್ಯೆ ರಿಚರ್ಡ್ಸನ್ ನಡುವೆ ನೇರ ಪೈಪೋಟಿ ಇದೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಪ್ಲೇಯಿಂಗ್ ಇಲೆವೆನ್​ನ ಭಾಗವಾಗಲಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್​​ಗೆ ಆಸ್ಟ್ರೇಲಿಯಾದ 12 ಆಟಗಾರರು: ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ (ನಾಯಕ), ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ಬ್ರೆಂಡನ್ ಡಾಗೆಟ್, ಮೈಕೆಲ್ ನೇಸರ್, ಜ್ಯೆ ರಿಚರ್ಡ್ಸನ್.

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಗಸ್ ಅಟ್ಕಿನ್ಸನ್, ಬ್ರೈಡನ್ ಕಾರ್ಸ್, ಜೋಶ್ ಟಂಗ್.

ಆಸ್ಟ್ರೇಲಿಯಾ ಟೆಸ್ಟ್ತಂಡ: ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ , ಬ್ರೆಂಡನ್ ಡಾಗೆಟ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ , ಮಾರ್ನಸ್ ಲ್ಯಾಬುಶೇನ್, ಟಾಡ್ ಮರ್ಫಿ, ಮೈಕೆಲ್ ನೇಸರ್, ಜ್ಯೆ ರಿಚರ್ಡ್ಸನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.

ಇದನ್ನೂ ಓದಿ: ಒಂದೇ ಒಂದು ರನ್​​ನೊಂದಿಗೆ ವರ್ಲ್ಡ್​ ರೆಕಾರ್ಡ್ ಮುರಿದ ವಿರಾಟ್ ಕೊಹ್ಲಿ

ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಂಗ್.

Source link

ಚಿತ್ರದುರ್ಗದಲ್ಲಿ ಬಸ್​​ ಭಸ್ಮ: ಮೂವರು ನಾಪತ್ತೆ, ಸಾವಿನ ಸಂಖ್ಯೆಯಲ್ಲಿ ಗೊಂದಲ – Kannada News | Chitradurga Bus Tragedy: Confusion Over Death Toll as Software Engineers Navya, Manasa Go Missing

ಚಿತ್ರದುರ್ಗ, ಡಿಸೆಂಬರ್​​ 25: ಗೊರ್ಲತ್ತು ಬಳಿ ಸಂಭವಿಸಿರುವ ಖಾಸಗಿ ಬಸ್ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಕುರಿತು ಅಧಿಕಾರಿಗಳು ಮತ್ತು ಸಚಿವರ ನಡುವೆ ಗೊಂದಲ ಉಂಟಾಗಿದೆ. ಆರಂಭದಲ್ಲಿ, ಐಜಿಪಿ ರವಿಕಾಂತೇಗೌಡ ಅವರು ಒಂಭತ್ತು ಮಂದಿ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದರು. ಆದರೆ, ಸಾರಿಗೆ ಸಚಿವರು ಐವರು ಪ್ರಯಾಣಿಕರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ ಬಸ್​​ನಲ್ಲಿದ್ದ ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದು, ಅವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿಯ ನವ್ಯಾ ಹಾಗೂ ಚನ್ನರಾಯಪಟ್ಟಣದ ಮಾನಸ ಸೇರಿ ಮತ್ತೊಬ್ಬರು ನಾಪತ್ತೆಯಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಶ್ವ ಬಾಕ್ಸ್ ಆಫೀಸ್​​​ನಲ್ಲಿ ‘ಕಾಂತಾರ: ಚಾಪ್ಟರ್ 1’ ಗಳಿಕೆ ಹಿಂದಿಕ್ಕಿದ ‘ಧುರಂಧರ್’ – Kannada News | Dhurandhar Box Office: Ranveer Singh Film Surpasses Kantara, Nears 1000 Cr Global

ರಣವೀರ್ ಸಿಂಗ್ ನಟನೆಯ ‘ಧುರಂದರ್’ (Dhurandhar) 2025ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಗಿ ಹೊರ ಹೊಮ್ಮಿದೆ. ಈ ಚಿತ್ರದ ವಿಶ್ವ ಮಟ್ಟದ ಕಲೆಕ್ಷನ್ 935 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಮೂಲಕ ‘ಕಾಂತಾರ: ಚಾಪ್ಟರ್ 1’ ಚಿತ್ರದ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಿಬಿಟ್ಟಿದೆ. ಈ ಚಿತ್ರ ಸುಲಭದಲ್ಲಿ ಶೀಘ್ರವೇ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ಎಲ್ಲಾ ಸಾಧ್ಯತೆ ಇದೆ. ಚಿತ್ರ ತಂಡಕ್ಕೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಯಿತು. ರಿಷಬ್ ಅವರೇ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿತ್ತು. ಈ ಚಿತ್ರದ ದಾಖಲೆಯನ್ನು ಈಗ ‘ಧುರಂಧರ್’ ಮುರಿದು ಹಾಕಿದೆ.

‘ಕಾಂತಾರ: ಚಾಪ್ಟರ್ 1’ ಚಿತ್ರದ ಒಟ್ಟಾರೆ ಕಲೆಕ್ಷನ್ 850 ಕೋಟಿ ರೂಪಾಯಿ ಆಗಿತ್ತು. ‘ಧುರಂಧರ್’ ಕಲೆಕ್ಷನ್ 900 ಕೋಟಿ ರೂಪಾಯಿ ದಾಟಿದೆ. ಹಲವು ದೇಶಗಳಲ್ಲಿ ಸಿನಿಮಾ ‘ಧುರಂಧರ್’ ಬ್ಯಾನ್ ಆಗಿದೆ. ಆದಾಗ್ಯೂ ಸಿನಿಮಾ ಕಲೆಕ್ಷನ್ ತಗ್ಗಿಲ್ಲ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್​​ನಲ್ಲಿ 600 ಕೋಟಿ ರೂಪಾಯಿ ಗಳಿಸಿದೆ.

20ನೇ ದಿನವೂ ‘ಧುರಂಧರ್’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ 17 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ವೀಕೆಂಡ್ ಒಳಗೆ ಚಿತ್ರ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಸೋ ಸಾಧ್ಯತೆ ಇದೆ. ಈ ಮೂಲಕ ಈ ವರ್ಷದ ಮೊದಲ ಸಾವಿರ ಕೋಟಿ ರೂಪಾಯಿ ಕ್ಲಬ್ ಸಿನಿಮಾ ಇದಾಗೋ ಸಾಧ್ಯತೆ ಇದೆ.

ಇದನ್ನೂ ಓದಿ: ‘ಧುರಂಧರ್’ ಯಶಸ್ಸಿನ ಬಳಿಕ ‘ದೃಶ್ಯಂ 3’ ಚಿತ್ರದಿಂದ ಹೊರಬಂದ ಅಕ್ಷಯ್ ಖನ್ನಾ?

‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಆದಿತ್ಯ ಧಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸಾಕಷ್ಟು ನೆಗೆಟಿವ್ ಟಾಕ್ ಪಡೆದಿತ್ತು. ಆದಾಗ್ಯೂ ‘ಧುರಂಧರ್’ ಗೆದ್ದು ಬೀಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Garuda Purana: ಅವಿವಾಹಿತ ವ್ಯಕ್ತಿಯ ಶ್ರಾದ್ಧವನ್ನು ಯಾರು ಮಾಡಬಹುದು? ಈ ಬಗ್ಗೆ ಗರುಡ ಪುರಾಣ ಹೇಳುವುದೇನು? – Kannada News | Garuda Purana: Shradh for Unmarried; Hindu Death Rituals Explained

ಹಿಂದೂ ಧರ್ಮದಲ್ಲಿ, ಮರಣದ ನಂತರ ನಡೆಸುವ ಆಚರಣೆಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ನಂಬಿಕೆಗಳ ಪ್ರಕಾರ, ಶ್ರಾದ್ಧ ಮತ್ತು ತರ್ಪಣ ಮಾಡಿದ ನಂತರವೇ ಆತ್ಮವು ಶಾಂತಿಯನ್ನು ಪಡೆಯುತ್ತದೆ. ಆದಾಗ್ಯೂ ಒಬ್ಬ ವ್ಯಕ್ತಿಯು ಅವಿವಾಹಿತನಾಗಿ ಮರಣಹೊಂದಿದರೆ, ಶ್ರಾದ್ಧ ಮಾಡುವ ಹಕ್ಕು ಯಾರಿಗೆ ಇದೆ? ಈ ಬಗ್ಗೆ ಗರುಡ ಪುರಾಣ ಹೇಳುವುದೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಗರುಡ ಪುರಾಣವು ಹಿಂದೂ ಧರ್ಮದ 18 ಮಹಾಪುರಾಣಗಳಲ್ಲಿ ಒಂದಾಗಿದೆ. ಗರುಡ ಪುರಾಣವು ಅವಿವಾಹಿತರು ಮರಣಹೊಂದಿದರೆ, ಶ್ರಾದ್ಧ ಮಾಡುವ ಹಕ್ಕಿನ ಬಗ್ಗೆ ಸ್ಪಷ್ಟವಾಗಿ ಮತ್ತು ವಿವರವಾಗಿ ವಿವರಿಸುತ್ತದೆ.

ತಂದೆಯಿಂದ ಶ್ರಾದ್ಧ ವಿಧಿ:

ಶಾಸ್ತ್ರಗಳಲ್ಲಿ ಮಗನು ತನ್ನ ತಂದೆಗೆ ಶ್ರಾದ್ಧ ಸಂಸ್ಕಾರವನ್ನು ಮಾಡುತ್ತಾನೆ, ಅದು ಅವನಿಗೆ ಮೋಕ್ಷವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಆದಾಗ್ಯೂ, ಒಬ್ಬ ಮಗ ಅವಿವಾಹಿತನಾಗಿದ್ದು ಅಕಾಲಿಕ ಮರಣ ಹೊಂದಿದಲ್ಲಿ, ಅವನಿಗೆ ಹೆಂಡತಿಯಾಗಲಿ ಅಥವಾ ಮಕ್ಕಳಾಗಲಿ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ತಂದೆಯು ತನ್ನ ಮಗನಿಗೆ ಶ್ರಾದ್ಧ ಸಂಸ್ಕಾರವನ್ನು ಮಾಡುವ ಜವಾಬ್ದಾರಿ ಮತ್ತು ಅಧಿಕಾರವನ್ನು ಹೊಂದಿರುತ್ತಾನೆ. ತನ್ನ ಮಗನ ಆತ್ಮವು ಶಾಂತಿ ಮತ್ತು ಮೋಕ್ಷವನ್ನು ಪಡೆಯುವಂತೆ ತಂದೆಯು ಪ್ರಾಥಮಿಕ ಕರ್ತನ ಪಾತ್ರವನ್ನು ವಹಿಸುತ್ತಾನೆ.

ಮೃತರ ತಂದೆ ಈಗ ಜೀವಂತವಾಗಿಲ್ಲದಿದ್ದರೆ ಅಥವಾ ಆರೋಗ್ಯ ಕಾರಣಗಳಿಂದ ಶ್ರಾದ್ಧ ವಿಧಿಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಶ್ರಾದ್ಧ ವಿಧಿಗಳನ್ನು ನಿರ್ವಹಿಸುವ ಜವಾಬ್ದಾರಿ ಕಿರಿಯ ಸಹೋದರ ಅಥವಾ ಹಿರಿಯ ಸಹೋದರನ ಮೇಲಿರುತ್ತದೆ. ಮೃತರಿಗೆ ಸಹೋದರರು ಇಲ್ಲದಿದ್ದರೆ, ತಂದೆಯ ಸಹೋದರ, ಅಂದರೆ ಅವರ ಚಿಕ್ಕಪ್ಪ, ಶ್ರಾದ್ಧ ವಿಧಿಗಳನ್ನು ಮಾಡಬಹುದು. ಅವರಿಗೆ ಬೇರೆ ಯಾರೂ ಹತ್ತಿರವಿಲ್ಲದಿದ್ದರೆ, ಕುಟುಂಬದ ಯಾವುದೇ ಸದಸ್ಯರು ಆಚರಣೆಗಳನ್ನು ಮಾಡಬಹುದು.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ವಿವಾಹವಿಲ್ಲದೆ ಮರಣ ಹೊಂದುವುದನ್ನು ಅಪೂರ್ಣ ಜೀವನವೆಂದು ಪರಿಗಣಿಸಲಾಗುತ್ತದೆ. ಗರುಡ ಪುರಾಣದ ಪ್ರಕಾರ, ಅಂತಹ ಆತ್ಮಗಳಿಗೆ ಸಾಮಾನ್ಯ ಶ್ರಾದ್ಧ ವಿಧಿಗಳನ್ನು ನಡೆಸಲಾಗುತ್ತದೆಯಾದರೂ, ಅಂತಹ ಆತ್ಮಗಳ ಶಾಂತಿಗಾಗಿ ವಿಶೇಷ ನಿಯಮಗಳನ್ನು ಸಹ ಸೂಚಿಸಲಾಗುತ್ತದೆ. ಅಕಾಲಿಕ ಮರಣದ ಸಂದರ್ಭದಲ್ಲಿ, ನಾರಾಯಣ ಬಲಿ ಆಚರಣೆಯನ್ನು ಮಾಡಬೇಕು. ಇದು ಆತ್ಮವನ್ನು ಪ್ರೇತ ಲೋಕದಿಂದ ಮುಕ್ತಗೊಳಿಸುತ್ತದೆ ಮತ್ತು ಪೂರ್ವಜರ ಲೋಕದಲ್ಲಿ ಅದಕ್ಕೆ ಸ್ಥಾನ ನೀಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link