ಪತ್ನಿ ಜತೆ ಜಗಳವಾಡಿ ಆಕೆಯ ಮೂಗು, ಕೆನ್ನೆ ಕಚ್ಚಿ ಮಾಂಸವನ್ನೇ ಕಿತ್ತ ಗಂಡ, ಮುಖಕ್ಕೆ 10 ಹೊಲಿಗೆ
ಹಮೀರ್ಪುರ, ಏಪ್ರಿಲ್ 03: ಪತ್ನಿ(Wife) ಜತೆ ಜಗಳವಾಡಿ ಕೋಪದ ಭರದಲ್ಲಿ ಆಕೆಯ ಮೂಗು, ಕೆನ್ನೆ ಕಚ್ಚಿರುವ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖಕ್ಕೆ 10 ಹೊಲಿಗೆಗಳನ್ನು ಹಾಕಲಾಗಿದೆ. ಈ ದಾಳಿಯಲ್ಲಿ ಮೂಗಿನ ಮಾಂಸವೆಲ್ಲಾ ಕಿತ್ತು ಬಂದಿದೆ, ಕೆನ್ನೆಗಳ ಮೇಲೂ ಕೂಡ ಆಳವಾದ ಗಾಯಗಳಾಗಿವೆ. ಆರಂಭದಲ್ಲಿ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆಯ ಮುಖದ ಮೇಲೆ ಹತ್ತು ಗಾಯಗಳನ್ನು ಹೊಲಿಗೆ ಹಾಕಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಝಾನ್ಸಿಯ…