ಗ್ಯಾಸ್ ಇಲ್ಲಾ ಅಂತ ಇಂಡಕ್ಷನ್ನಲ್ಲಿ ಅಡುಗೆ ಮಾಡುತ್ತಿದ್ದೀರಾ? ಈ ಅಂಶಗಳು ನಿಮಗೆ ಗೊತ್ತಿರಲೇ ಬೇಕು!
ಬೆಂಗಳೂರು, ಏಪ್ರಿಲ್ 03: ಇರಾನ್, ಇಸ್ರೇಲ್ ಮತ್ತು ಅಮೇರಿಕಾ ಯುದ್ಧದ ಪರಿಣಾಮವಾಗಿ ಎಲ್ಪಿಜಿ ಸಿಲಿಂಡರ್ ಕೊರತೆ ಹೆಚ್ಚಾಗಿದೆ. ವಾಣಿಜ್ಯ ಸಿಲಿಂಡರ್ಗಳ ಕೊರತೆ ಜೊತೆಗೆ ಗ್ರಹಬಳಕೆ ಸಿಲಿಂಡರ್ಗಳನ್ನು ಖರೀದಿಸುವಲ್ಲಿಯೂ ಹಲವರು ಅಡಚಣೆಯನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಇಂಡಕ್ಷನ್ ಸ್ಟೌವ್‌ಗಳ (Induction Stove) ಬೇಡಿಕೆ ಏರಿಕೆಯಾಗಿದ್ದು, ಆನ್ಲೈನ್ ಖರೀದಿ ಪ್ಲಾಟ್ಫಾರ್ಮ್ಗಳಲ್ಲಿ ಸ್ಟೌವ್‌ಗಳ ಮಾರಾಟ 5 ರಿಂದ 10 ಪಟ್ಟು ಹೆಚ್ಚಾಗಿದೆ. ಹೀಗಿರುವಾಗ ಹೊಸ ಇಂಡಕ್ಷನ್ ಸ್ಟವ್ ಖರೀದಿಗೂ ಮುನ್ನ ಗಮನಿಸಬೇಕಾದ ಅಂಶಗಳನ್ನು ಬೆಸ್ಕಾಂ (BESCOM) ತನ್ನ ಎಕ್ಸ್(X) ಖಾತೆಯಲ್ಲಿ ಹಂಚಿಕೊಂಡಿದೆ….