ಆಟೋ ಹಿಂಬದಿ ಬರೆದ ಸಾಲುImage Credit source: Instagram
ಆಟೋ (auto) ಹಾಗೂ ಬೈಕ್ ಹಿಂಬದಿ ಮನಮುಟ್ಟುವ ಸಂದೇಶಗಳು, ಕೈ ಕೊಟ್ಟ ಪ್ರೇಯಸಿಯನ್ನು ಹಾಗೂ ತಂದೆ ತಾಯಿಯನ್ನು ನೆನಪಿಸುವಂತಹ ಸಾಲುಗಳು ಕಣ್ಣಿಗೆ ಕಾಣಿಸುತ್ತದೆ. ಇನ್ನು ಕೆಲ ಸಾಲುಗಳನ್ನು ಕಂಡಾಗ ತುಟಿಯಂಚಿನಲ್ಲಿ ನಗುವಿಗೂ ಕಾರಣವಾಗುತ್ತದೆ. ಇದೀಗ ಇಂತಹದ್ದೇ ಸಾಲೊಂದು ವೈರಲ್ ಆಗಿದ್ದು, ಇದು ಪ್ರಪಂಚದಲ್ಲಿ ತಂದೆ-ತಾಯಿಯ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂಬುದನ್ನು ನೆನಪಿಸುವಂತಿದೆ. ಹೌದು, ತನ್ನ ಜೀವನದ ಹೀರೋ ತಂದೆ ಹಾಗೂ ತಾಯಿಯೇ ದೇವರು ಎನ್ನುವ ಅರ್ಥ ನೀಡುವ ಸಾಲು ನೆಟ್ಟಿಗರ ಗಮನ ಸೆಳೆಯುತ್ತಿದೆ.
ಜೀವನ್ ಶೆಟ್ಟಿಗಾರ್ (Jeevan Shettigar) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಟೋ ಹಿಂಬದಿ ಬರೆಯಲಾದ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಆಟೋದಲ್ಲಿ, ಎಷ್ಟೇ ಸಿನಿಮಾ ನೋಡಿದರು ತಂದೆ ತರ ಹೀರೋ ಸಿಗಲ್ಲ ಎಷ್ಟೇ ದೇವಸ್ಥಾನ ಸುತ್ತಿದರು ತಾಯಿ ತರ ದೇವರು ಸಿಗಲ್ಲ ಎಂದು ಬರೆದಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ
ಈ ವಿಡಿಯೋ ಹದಿನೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಜವಾದ ಸಾಲುಗಳು ಎಂದಿದ್ದಾರೆ. ಮತ್ತೊಬ್ಬರು, ಹೃದಯಕ್ಕೆ ಹತ್ತಿರವಾಗುವ ಸಾಲುಗಳು ಎಂದು ಹೇಳಿದ್ದಾರೆ. ಇನ್ನೊಬ್ಬರು, ಎಲ್ಲರ ಅಪ್ಪ ಹೀರೋ ಆಗಿರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ