ಏನಿದು ಕಸದಿಂದ ಕಾಸು? ಬಹುದೊಡ್ಡ ಹಗರಣವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟ ಆರ್ ಅಶೋಕ್ – Kannada News
ಬೆಂಗಳೂರು, (ಜೂನ್ 10): ಬೆಂಗಳೂರಿನಲ್ಲಿ ಕಸದ (bengaluru garbage) ಟೆಂಡರ್ನಲ್ಲಿ ಬಾರೀ ಅಕ್ರಮ ನಡೆದಿದೆ ಎಂದು ವಿಪಕ್ಷ ಬಿಜೆಪಿ (BJP) ಗಂಭೀರ ಆರೋಪ ಮಾಡಿದ್ದು, ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ರಾಜ್ಯಪಾಲರಿಗೆ ದೂರು ನೀಡಿದೆ. ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ಇಂದು (ಜೂನ್ 10) ಲೋಕಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದು, ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸುವಂತೆ ಮನವಿ ಮಾಡಿದ್ದಾರೆ. 36 ಸಾವಿರ ಕೋಟಿ…