Headlines

nagaraj11081993

ಪೆಟ್ರೋಲ್ ಬಂಕ್ ನೌಕರ ಭಾರತಿರಾಜ್, ತಮಿಳು ಚಿತ್ರರಂಗದಲ್ಲಿ ಕ್ರಾಂತಿ ಮಾಡಿದ್ದು ಹೇಗೆ? – Kannada News

ತಮಿಳು ಚಿತ್ರರಂಗದ (Kollywood) ಹಿರಿಯ ನಿರ್ದೇಶಕ ಭಾರತಿ ರಾಜ ಇಂದು (ಜೂನ್ 10) ನಿಧನ ಹೊಂದಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಸೇರಿದಂತೆ ಹಲವಾರು ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾರತಿ ರಾಜ ಅವರಿಗೆ ಅಂತಿಮ ನಮನಗಳನ್ನು ಸಲ್ಲಸಿದ್ದಾರೆ. ಭಾರತಿರಾಜ, ತಮಿಳು ಸಿನಿಮಾಗಳ ವ್ಯಾಕರಣ ಬದಲಿಸಿದ ನಿರ್ದೇಶಕ. ಅವರ ಮೊದಲ ಸಿನಿಮಾ ‘16 ವಯತಿನಿಲೆ’ ಸಿನಿಮಾ, ಸೂಪರ್ ಹಿಟ್ ಆಗಿದ್ದು, ಮಾತ್ರವಲ್ಲ ಸಿನಿಮಾ ನಿರ್ದೇಶಕರುಗಳಿಗೆ ಹೊಸ ಹಾದಿಯನ್ನೇ ಹಾಕಿಕೊಟ್ಟಿತು. ಅಂದಹಾಗೆ ಭಾರತಿರಾಜ, ಬಹಳ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ….

Read More

ರಾಜ್ಯಸಭಾ ಟಿಕೆಟ್​​ ಕೈತಪ್ಪಿದ ಬಗ್ಗೆ ಮೌನ ಮುರಿದ ದೇವೇಗೌಡರು: ಯಾರ ಹಂಗಿಲ್ಲದೆ ಮಾತಾಡ್ತೇನೆ ಎಂದ ಹೆಚ್​​ಡಿಡಿ – Kannada News

ಹೆಚ್​​.ಡಿ. ದೇವೇಗೌಡ ಮತ್ತು ನರೇಂದ್ರ ಮೋದಿImage Credit source: HD Deve Gowda X Account and PTI ಬೆಂಗಳೂರು, ಜೂನ್​​ 10: ಮಾಜಿ ಪ್ರಧಾನಿ ದೇವೇಗೌಡರಿಗೆ ಎನ್​​ಡಿಎಯಿಂದ ರಾಜ್ಯಸಭಾ ಟಿಕೆಟ್​​ ನೀಡದಿರೋದು ಭಾರಿ ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ. ಈ ನಡುವೆ ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಹೆಚ್​​ಡಿಡಿ, ವಿರೋಧಿಗಳಿಗೆ ಖಡಕ್​​ ಸಂದೇಶ ರವಾನಿಸಿದ್ದಾರೆ. ನಾನು ಸುಮ್ಮನೆ ಕೂರಲ್ಲ, ನನ್ನ ಶಕ್ತಿ ಮೀರಿ‌ ಕೆಲಸ‌ ಮಾಡುತ್ತೇನೆ. ರಾಜ್ಯ ಮತ್ತು ದೇಶದ ವಿಚಾರವನ್ನ…

Read More

ವಿಚ್ಛೇದನ ವದಂತಿ ಬಗ್ಗೆ ಪೋಸ್ಟ್ ಹಾಕಿದ ನಟಿ ಶುಭಾ ಪೂಂಜಾ – Kannada News

ಕನ್ನಡದ ನಟಿ ಶುಭಾ ಪೂಂಜಾ ಅವರು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಲಿದ್ದಾರೆ ಎಂಬ ವದಂತಿಗಳಿಗೆ ಕೊನೆಗೂ ಅವರೇ ಅಧಿಕೃತವಾಗಿ ಪ್ರತಿಕ್ರಿಯಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಅವರ ವಿಚ್ಛೇದನದ ಸುದ್ದಿ ಸಖತ್ ಸದ್ದು ಮಾಡುತ್ತಿತ್ತು. ಈ ಎಲ್ಲಾ ಚರ್ಚೆಗಳ ನಡುವೆ ನಟಿ ಶುಭಾ ಪೂಂಜಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಮಾಧ್ಯಮ ಮಿತ್ರರಲ್ಲಿ ಮತ್ತು ಅಭಿಮಾನಿಗಳಲ್ಲಿ ಒಂದು ಪ್ರಮುಖ ಮನವಿ ಮಾಡಿದ್ದಾರೆ. ಶುಭಾ ಪೂಂಜಾ ಅವರು 2022ರಲ್ಲಿ…

Read More

ಭಾರತಿರಾಜ ಮೊದಲ ಸಿನಿಮಾ ಕನ್ನಡದ್ದಾಗಬೇಕಿತ್ತು, ತಪ್ಪಿದ್ದು ಹೇಗೆ? – Kannada News

ತಮಿಳು ಚಿತ್ರರಂಗದ (Kollywood) ಲೆಜೆಂಡರಿ ಸಿನಿಮಾ ನಿರ್ದೇಶಕ ಭಾರತಿರಾಜ ಇಂದು (ಜೂನ್ 10) ನಿಧನ ಹೊಂದಿದ್ದಾರೆ. ಹಲವಾರು ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾರತಿರಾಜ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ತಮಿಳು ಚಿತ್ರರಂಗದ ಹಾದಿಯನ್ನು ಬದಲಿಸಿದ ನಿರ್ದೇಶಕ ಎಂದು ಭಾರತಿರಾಜ ಅವರನ್ನು ಕರೆಯಲಾಗುತ್ತದೆ. ಭಾರತಿರಾಜ ಅವರ ಮೊದಲ ಸಿನಿಮಾ ‘16 ವಯದಿನಿಲೆ’ 1977 ರಲ್ಲಿ ಬಿಡುಗಡೆ ಆಗಿತ್ತು. ಆದರೆ ಭಾರತಿರಾಜ ಅವರ ಮೊದಲ ಸಿನಿಮಾ ಕನ್ನಡದ್ದಾಗಬೇಕಿತ್ತು, ಆದರೆ ಅದು ಕೈತಪ್ಪಿದ್ದು ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರಿಂದ! ಎಸ್​​ಪಿ ಬಾಲಸುಬ್ರಹ್ಮಣ್ಯಂ ಹಾಗೂ…

Read More

Flight Safety Secret: ವಿಮಾನಗಳಲ್ಲಿ ಧೂಮಪಾನ ನಿಷಿದ್ಧವಾಗಿದ್ದರೂ, ಟಾಯ್ಲೆಟ್‌ನಲ್ಲಿ ಆ್ಯಶ್ ಟ್ರೇ ಇಡುವುದೇಕೆ ಗೊತ್ತಾ? – Kannada News

ವಿಮಾನಗಳಲ್ಲಿ ಸ್ಮೋಕಿಂಗ್ ಬ್ಯಾನ್Image Credit source: popsci.com ನೀವು ಎಂದಾದರೂ ವಿಮಾನದಲ್ಲಿ ಪ್ರಯಾಣಿಸುವಾಗ ಶೌಚಾಲಯಕ್ಕೆಹೋಗಿದ್ದರೆ, ಅಲ್ಲಿನ ಬಾಗಿಲು ಅಥವಾ ಸಿಂಕ್ ಬಳಿ ಸಣ್ಣದೊಂದು ಬೂದಿಯನ್ನು ಉದುರಿಸುವ ತಟ್ಟೆ (Ashtray) ಇರುವುದನ್ನು ಖಂಡಿತ ಗಮನಿಸಿರುತ್ತೀರಿ. ಇದನ್ನು ನೋಡಿದಾಗ “ವಿಮಾನದೊಳಗೆ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆಯಲ್ಲ, ಹಾಗಿದ್ದರೂ ಇಲ್ಲಿ ಏಕೆ ಇಟ್ಟಿದ್ದಾರೆ?” ಎಂಬ ಪ್ರಶ್ನೆ ಮತ್ತು ಆಶ್ಚರ್ಯ ಎಲ್ಲರ ಮನಸ್ಸಿನಲ್ಲೂ ಮೂಡುವುದು ಸಹಜ. ಮೇಲ್ನೋಟಕ್ಕೆ ಇದು ವಿಮಾನಯಾನ ಸಂಸ್ಥೆಗಳ ಮೂರ್ಖತನದಂತೆ ಕಂಡರೂ, ಇದರ ಹಿಂದೆ ಪ್ರಯಾಣಿಕರ ಪ್ರಾಣ ಉಳಿಸುವ ಅತ್ಯಂತ…

Read More

ಭಾರತಿರಾಜಾ ಮತ್ತು ರಜನಿಕಾಂತ್ ಮಧ್ಯೆ ಇದ್ದ ವಿವಾದವೇನು?

ಲೆಜೆಂಡರಿ ನಿರ್ದೇಶಕ ಭಾರತೀರಾಜಾ (Bharathiraja) ಅವರು ಇಂದು (ಜೂನ್ 10) ಮುಂಜಾನೆ ನಿಧನ ಹೊಂದಿದ್ದಾರೆ. ಚಿತ್ರರಂಗದ ಹಾಗೂ ರಾಜಕೀಯ ಗಣ್ಯರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಭಾರತಿರಾಜಾ ಅವರ ನಿಧನವು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಆವೇದನೆ ವ್ಯಕ್ತಪಡಿಸುತ್ತಿದ್ದಾರೆ. ಹಲವು ಗಣ್ಯರು, ಭಾರತಿರಾಜಾ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡುತ್ತಿದ್ದಾರೆ. ಭಾರತಿರಾಜ ಅದ್ಭುತ ನಿರ್ದೇಶಕ ಮತ್ತು ನಟ ಆಗಿದ್ದ ಜೊತೆಗೆ ಸಿನಿಮಾ, ರಾಜಕೀಯ ವಿಮರ್ಶಕರೂ ಆಗಿದ್ದರು. ನಿರ್ದೇಶಕ ಭಾರತಿರಾಜಾ ಅವರಿಗೆ ಚಿತ್ರರಂಗದ ಎಲ್ಲರೊಟ್ಟಿಗೆ ಆಪ್ತ ಬಂಧವಿತ್ತು, ಆದರೆ ಸೂಪರ್…

Read More

ಅಪ್ರಾಪ್ತನಿಗೆ ಸಿಗರೇಟ್ ಕಲಿಸಿ, ಬ್ಲಾಕ್‌ಮೇಲ್ ಮಾಡಿ 120 ಗ್ರಾಂ ಬಂಗಾರ ದೋಚಿದ ಖದೀಮರ ಬಂಧನ! – Kannada News

ಕೊಪ್ಪಳ, ಜೂನ್ 10: ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಸೇದುವ ದುಶ್ಚಟ ಹಿಡಿಸಿ ಬರೋಬ್ಬರಿ 120 ಗ್ರಾಂ ಬಂಗಾರ ದೋಚಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ. ಈ ಹಿನ್ನೆಲೆ ಬಸವರಾಜ್ ಅಂಗಡಿ ಮತ್ತು ನವೀನ್ ಎಂಬುವವರನ್ನು ಬಂಧಿಸಲಾಗಿದ್ದು, ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮೊದಲು ಬಾಲಕನಿಗೆ ಸಿಗರೇಟ್ ಅಭ್ಯಾಸ ಮಾಡಿಸಿ, ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ನಂತರ, ಈ ವೀಡಿಯೊವನ್ನು ನಿನ್ನ ತಂದೆಗೆ ತೋರಿಸುತ್ತೇವೆ ಎಂದು ಬೆದರಿಸಿ ಹಣಕ್ಕಾಗಿ ಪೀಡಿಸಿದ್ದರು. ಬ್ಲಾಕ್‌ಮೇಲ್‌ಗೆ ಹೆದರಿದ ಬಾಲಕ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು…

Read More

ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ – Kannada News

ಝೆಪ್ಟೋ ಸಹ-ಸ್ಥಾಪಕ ಆದಿತ್ ಪಲಿಚಾImage Credit source: Moneycontrol ನವದೆಹಲಿ, ಜೂನ್ 10: ಕ್ವಿಕ್ ಕಾಮರ್ಸ್ ಕ್ಷೇತ್ರದ ದೈತ್ಯನೆನಿರುವ ಝೆಪ್ಟೋ (Zepto) ಸಂಸ್ಥೆಯ ಸಹ-ಸ್ಥಾಪಕ ಆದಿತ್ ಪಲಿಚಾ (Aadit Palicha) ಅವರು ಷೇರುಮಾರುಕಟ್ಟೆಯಲ್ಲಿ ಲಿಸ್ಟೆಡ್ ಆಗಿರುವ (Publicly Listed) ಕಂಪನಿಯ ಅತಿ ಕಿರಿಯ ಎಂಡಿ (MD) ಮತ್ತು ಸಿಇಒ (CEO) ಎನಿಸಲಿದ್ದಾರೆ. 23 ವರ್ಷದ ಆದಿತ್ ಪಲಿಚಾ ಅವರು ಪ್ರಸಕ್ತ ಝೆಪ್ಟೋದ ಎಂಡಿ ಮತ್ತು ಸಿಇಒ ಆಗಿದ್ದಾರೆ. ಈ ಸಂಸ್ಥೆ ಐಪಿಒಗೆ ಮುಂದಾಗಿದ್ದು, ಅದು ಯಶಸ್ವಿಯಾಗಿ ಮಾರುಕಟ್ಟೆಯಲ್ಲಿ…

Read More

9 ಸ್ಟಾರ್ ಆಟಗಾರರು ಔಟ್: ಏಷ್ಯನ್ ಗೇಮ್ಸ್​ಗೆ ಪಾಕಿಸ್ತಾನ್ ತಂಡ ಪ್ರಕಟ – Kannada News

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಟೂರ್ನಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದ ನಾಯಕನಾಗಿ ಸಾಹಿಬ್​ಝಾದ ಫರ್ಹಾನ್ ಆಯ್ಕೆಯಾಗಿದ್ದಾರೆ. ಹಾಗೆಯೇ ಯುವ ಬ್ಯಾಟರ್ ಅಬ್ದುಲ್ ಸಮದ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಪಾಕಿಸ್ತಾನ್ ತಂಡದ ನಾಯಕನಾಗಿ ಸಲ್ಮಾನ್ ಅಲಿ ಅಘಾ ಕಣಕ್ಕಿಳಿಯುತ್ತಿದ್ದರು. ಆದರೆ ಇದೀಗ ಪಾಕಿಸ್ತಾನ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ಅದರಂತೆ ಏಷ್ಯಾಡ್ ಟೂರ್ನಿಯಲ್ಲಿ ಸಾಹಿಬ್​ಝಾದ ಫರ್ಹಾನ್ ಮುಂದಾಳತ್ವದಲ್ಲಿ ಪಾಕ್ ಪಡೆ ಕಣಕ್ಕಿಳಿಯಲಿವೆ. ಸ್ಟಾರ್ ಆಟಗಾರರಿಗೆ ಗೇಟ್ ಪಾಸ್:…

Read More

ನಾಯಿ ಮರಿಯನ್ನು ಎತ್ತಿಕೊಂಡು ಮರದ ಮೇಲೆ ಹೋಗಿ ಕುಳಿತ ಕೋತಿ – Kannada News

ಮಂಡಿ, ಜೂನ್ 10: ಪ್ರಕೃತಿಯ ಮಡಿಲಲ್ಲಿ ಪ್ರಾಣಿ(Animal)ಗಳ ಜಗತ್ತು ಕೆಲವು ಬಾರಿ ಮನುಷ್ಯರೇ ಬೆರಗಾಗುವಂತಹ ಅದ್ಭುತ ಪ್ರೀತಿ ಮತ್ತು ಕಾರುಣ್ಯದ ಕಥೆಗಳನ್ನು ನಮಗೆ ಉಣಬಡಿಸುತ್ತದೆ. ಅಂತಹದೇ ಒಂದು ಹೃದಯಸ್ಪರ್ಶಿ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ರೆವಾಲ್ಸರ್ ಪ್ರದೇಶದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಕೋತಿಯೊಂದು ತನ್ನ ಮರಿಯೇ ಎಂಬಂತೆ ನಾಯಿ ಮರಿಯನ್ನು ಎತ್ತಿಕೊಂಡು ಹೋಗಿ ಮರದ ಮೇಲೆ ಕುಳಿತಿರುವ ಘಟನೆ ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಡೆದಿದೆ. ಮಂಡಿಯ ರೆವಾಲ್ಸರ್…

Read More