All posts by nagaraj11081993

ಸಕಲೇಶಪುರದಲ್ಲಿ ಕರುಗಳನ್ನು ಬೆನ್ನಟ್ಟಿದ ಆನೆ ಮರಿ: ಇಲ್ಲಿದೆ ನೋಡಿ ಅಪರೂಪದ ದೃಶ್ಯ – Kannada News

ಹಾಸನ, ಜೂ.10: ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಆದರೆ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಬಳಿ ಸಾರ್ವಜನಿಕರನ್ನು ಒಂದೆಡೆ ಆತಂಕಕ್ಕೆ, ಮತ್ತೊಂದೆಡೆ ತಮಾಷೆಯ ಕುತೂಹಲಕ್ಕೆ ಈಡುಮಾಡುವ ಅಪರೂಪದ ಘಟನೆಯೊಂದು ನಡೆದಿದೆ. ಗುಂಪಿನಿಂದ ಬೇರ್ಪಟ್ಟಿರುವ ಕಾಡಾನೆ ಮರಿಯೊಂದು ರಸ್ತೆಯಲ್ಲಿದ್ದ ಹಸುವಿನ ಕರುಗಳನ್ನು ಅಟ್ಟಾಡಿಸಿಕೊಂಡು ಹೋಗಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಲ್ಲಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ದಟ್ಟವಾದ ಕಾಫಿ ತೋಟಗಳಿವೆ. ಈ ಭಾಗದಲ್ಲಿ ಕಾಡಾನೆಗಳ ಸಂಚಾರ ಸಾಮಾನ್ಯವಾಗಿದೆ. ಆನೆಗಳ ಗುಂಪಿನಿಂದ ಬೇರ್ಪಟ್ಟಿದ್ದ ಒಂಟಿ ಕಾಡಾನೆ ಮರಿಯೊಂದು, ಒಂದು ಕಾಫಿ ತೋಟದಿಂದ ರಸ್ತೆ ದಾಟಿ ಮತ್ತೊಂದು ಕಾಫಿ ತೋಟಕ್ಕೆ ಹೋಗಲು ಯತ್ನಿಸುತ್ತಿತ್ತು. ಇದೇ ಸಮಯದಲ್ಲಿ ಕಲ್ಲಹಳ್ಳಿ ಗ್ರಾಮದ ಲಿಂಕ್ ರಸ್ತೆಯಲ್ಲಿ ಕರುಗಳು ಸಾಗುತ್ತಿದ್ದವು. ರಸ್ತೆಯಲ್ಲಿ ಕರುಗಳು ಎದುರಾಗುತ್ತಿದ್ದಂತೆಯೇ ಮರಿಯಾನೆ ಜೋರಾಗಿ ಕೂಗುತ್ತಾ ಅವುಗಳ ಕಡೆಗೆ ನುಗ್ಗಿದೆ. ಮರಿಯಾನೆಯ ಹಠಾತ್ ಆರ್ಭಟ ಹಾಗೂ ಓಟಕ್ಕೆ ಹೆದರಿದ ಕರುಗಳು ಜೀವ ಉಳಿಸಿಕೊಳ್ಳಲು ರಸ್ತೆಯುದ್ದಕ್ಕೂ ಓಡಲಾರಂಭಿಸಿವೆ. ಮರಿಯಾನೆ ಸುಮ್ಮನಾಗದೆ ಸತತ ಎರಡು ಬಾರಿ ಕರುಗಳನ್ನುಅಟ್ಟಾಡಿಸಿದೆ. ಈ ಮರಿಯಾನೆಯ ತುಂಟಾಟ ಹಾಗೂ ಓಡಾಟದ ಸಂಪೂರ್ಣ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

Video: ಕೇರಳದಲ್ಲಿ ಶಿಗೆಲ್ಲ ಮಾರಿಗೆ ಮಗು ಬಲಿ; ಏನಿದು ಶಿಗೆಲ್ಲ, ಇದು ಹರಡುವುದೇಗೆ? – Kannada News

ಕೇರಳದಲ್ಲಿ ಶಿಗೆಲ್ಲ ಮಾರಿ ಸೋಂಕಿನಿಂದ ನಾಲ್ಕು ವರ್ಷದ ಮಗುವೊಂದು ಮೃತಪಟ್ಟಿದ್ದು, ಹಲವು ಜಿಲ್ಲೆಗಳಲ್ಲಿ ಮಕ್ಕಳ ಮೇಲೆ ಈ ಸೋಂಕು ಪರಿಣಾಮ ಬೀರಿದೆ. ಶಿಗೆಲ್ಲ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಶಿ ಎಲ್ಲೋಸಿಸ್ ತೀವ್ರ ಕರುಳುಬೇನೆ ಅಥವಾ ಭೇದಿಗೆ ಕಾರಣವಾಗುತ್ತದೆ. ಕಲುಷಿತ ಆಹಾರ ಮತ್ತು ನೀರಿನ ಸೇವನೆಯಿಂದ ಈ ಸೋಂಕು ಹರಡುತ್ತದೆ. ಈ ಬ್ಯಾಕ್ಟೀರಿಯಾ ಜೀರ್ಣಾಂಗ ವ್ಯವಸ್ಥೆಯ ಮೇಲೆ ದಾಳಿ ಮಾಡಿ, ಹೊಟ್ಟೆಯಲ್ಲಿ ವಿಷ ಉತ್ಪಾದಿಸುತ್ತದೆ.

ಮುನ್ನೆಚ್ಚರಿಕಾ ಕ್ರಮಗಳೆಂದರೆ ಕುದಿಸಿ ಆರಿಸಿದ ನೀರನ್ನು ಕುಡಿಯುವುದು, ಆಹಾರ ಸೇವಿಸುವ ಮೊದಲು ಮತ್ತು ಶೌಚಾಲಯದ ನಂತರ ಕನಿಷ್ಠ 20 ಸೆಕೆಂಡ್‌ಗಳ ಕಾಲ ಕೈಗಳನ್ನು ಸಾಬೂನಿನಿಂದ ತೊಳೆಯುವುದು. ರಸ್ತೆಬದಿ ತೆರೆದಿಟ್ಟಿರುವ ಆಹಾರ, ಹಳಸಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಸದ ಟೆಂಡರ್​​ನಲ್ಲಿ ಅಕ್ರಮ ಆರೋಪ: ರಾಜ್ಯಪಾಲ ಗೆಹ್ಲೋಟ್​ಗೆ ಬಿಜೆಪಿ ನಿಯೋಗದಿಂದ ದೂರು – Kannada News

ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರುImage Credit source: Tv9 Kannada

ಬೆಂಗಳೂರು, ಜೂನ್​​ 10: ಕಸದ ಟೆಂಡರ್​​ನಲ್ಲಿ ಅಕ್ರಮ ನಡೆದ ಆರೋಪ ಸಂಬಂಧ ರಾಜ್ಯಪಾಲ ಗೆಹ್ಲೋಟ್​ಗೆ ಬಿಜೆಪಿ (BJP) ನಿಯೋಗ ದೂರು ಸಲ್ಲಿಕೆ ಮಾಡಿದೆ. ಬೆಂಗಳೂರಿನ ಕಸದ ಟೆಂಡರ್​​ನಲ್ಲಿ ದೊಡ್ಡ ಅಕ್ರಮ ನಡೆದಿದ್ದು, ಸಿಬಿಐ ತನಿಖೆಗೆ ಕೊಡಿ ಎಂದು ರಾಜ್ಯಪಾಲರಿಗೆ ನೀಡಿರುವ ದೂರಲ್ಲಿ ಬಿಜೆಪಿ ಆಗ್ರಹಿಸಿದೆ. ಈ ಬಗ್ಗೆ ಟಿವಿ9ಗೆ ವಿರೋಧ ಪಕ್ಷದ ನಾಯಕ ಆರ್​.ಅಶೋಕ್ ಮಾಹಿತಿ ನೀಡಿದ್ದು, ಬೆಂಗಳೂರಿನ ನಿವಾಸಿಗಳು ಬೆಚ್ಚಿ ಬೀಳುವಂತಹ ಹಗರಣ ಇದಾಗಿದ್ದು, ಇಷ್ಟುದಿನ ಯಾರಿಗೂ ಗೊತ್ತಿರಲಿಲ್ಲ. ದೆಹಲಿ ಮೂಲದ ಕಂಪನಿಗೆ ಟೆಂಡರ್​ ನೀಡುವ ಮೂಲಕ ದೇಶದಲ್ಲಿಯೇ ದೊಡ್ಡ ಗಾರ್ಬೆಜ್​ ಹಗರಣವನ್ನು ಕಾಂಗ್ರೆಸ್​​ ನೆತೃತ್ವದ ಸರ್ಕಾರ ನಡೆಸಿದೆ. ಲೋಕಾಯುಕ್ತ ಕಚೇರಿಗೂ ಭೇಟಿ ನೀಡಿ ಅಫಿಡವಿಟ್ ಸಲ್ಲಿಸುತ್ತೇವೆ ಎಂದವರು ತಿಳಿಸಿದ್ದಾರೆ.

‘ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ಲೂಟಿ’

ಕಾಂಗ್ರೆಸ್ ನಾಯಕ ಕಸ ಹಾಕಿ ಚಿನ್ನ ಪಡೆಯಿರಿ ಎಂದು ಹೇಳಿದ್ದರು. ಅವರ ನಾಯಕ ಹೇಳಿದ್ದನ್ನು ಕಾಂಗ್ರೆಸ್​​ನವರು ಫಾಲೋ ಮಾಡ್ತಿದ್ದಾರೆ. ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ಲೂಟಿ ಮಾಡಲಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಕಾಂಗ್ರೆಸ್ ಇಬ್ಬರ ಕೈವಾಡವೂ ಇದೆ. ಕಸಕ್ಕೆ ಸಂಬಂಧಿಸಿದ ಟೆಂಡರ್ ಅನ್ನು ರದ್ದು ಮಾಡಬೇಕು, ಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಎಂದು ಅಶೋಕ್​ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರಾಜ್ಯಸಭಾ ಟಿಕೆಟ್​​ ಕೈತಪ್ಪಿದ ಬಗ್ಗೆ ಮೌನ ಮುರಿದ ದೇವೇಗೌಡರು; ಯಾರ ಹಂಗಿಲ್ಲದೆ ಮಾತಾಡ್ತೇನೆ ಎಂದ ಹೆಚ್​​ಡಿಡಿ

ಅಲ್ಲದೆ ಟೆಂಡರ್​​ ಪಡೆದ ಕಂಪನಿಯನ್ನು ವರ್ಲ್ಡ್ ಬ್ಯಾಂಕ್ ಡಿಬಾರ್ ಮಾಡಿದೆ. ರಾಜ್ಯದಲ್ಲಿಯೂ ಈ ಹಿಂದೆ ಬಿಬಿಎಂಪಿ ಕಂಪೆನಿಯನ್ನು 2016ರಲ್ಲಿ ಟರ್ಮಿನೇಟ್​​ ಮಾಡಿತ್ತು. ಹೀಗಿದ್ದರೂ ಬ್ಲ್ಯಾಕ್​​ ಲಿಸ್ಟ್​​ ಕಂಪನಿಗೆ ಟೆಂಡರ್ ಕೊಡಲು ದೆಹಲಿಯಿಂದ ಕರೆ ಬರುತ್ತೆ. ಹೈಕಮಾಂಡ್ ಕರೆ ಬಂದ ಹಿನ್ನೆಲೆಯಲ್ಲಿ ಕಳೆದ ತಿಂಗಳ ಸಚಿವ ಸಂಪುಟ ಸಭೆಯಲ್ಲಿ ಕೊನೆಯದಾಗಿ ಅಜೆಂಡಾದಲ್ಲಿ ಸೇರಿಸಿ ಒಪ್ಪಿಗೆ ಪಡೆದಿದ್ದಾರೆ. ಸಭೆ ವೇಳೆ 36 ಸಾವಿರ ಕೋಟಿ ಮೌಲ್ಯದ ಕಸದ ಟೆಂಡರ್ ವಿಷಯ ಕೇಳಿ ಸಚಿವರು ಗರಬಡಿದಂತಾಗಿದ್ದರು. ಆಗ ಸಿದ್ದರಾಮಯ್ಯ ಇದು ಹೈಕಮಾಂಡ್​​ನಿಂದ ಬಂದಿರೋದು ಎಂದ ಬಳಿಕ ಸಂಪುಟದಲ್ಲಿ ಅನುಮೋದನೆ ಸಿಗುತ್ತೆ. ಕಸದ ಟೆಂಡರ್ ಕೊಡುವ ಬಗ್ಗೆ ಸಂಪುಟ ಉಪಸಮಿತಿ ರಚಿಸಲಾಗಿದೆ. ಸಿದ್ದರಾಮಯ್ಯ ರಚಿಸಿದ್ದ ಸಮಿತಿ ರದ್ದು ಮಾಡಿ ಡಿಕೆಶಿ ಬೇರೊಂದು ಸಮಿತಿ ರಚಿಸಿದ್ದಾರೆ. ಒಂದು ವಾರದೊಳಗೆ ವರದಿ ಕೊಡಲು ಹೇಳಿದ್ದಾರೆ. ಇದು ಕಸದಿಂದ ಕಾಸು ಮಾಡುವ ಗೋಲ್ಡನ್ ಸ್ಕೀಂ. ಬೆಂಗಳೂರು ಕಸ ತುಂಬಿಕೊಂಡು ನಾರುತ್ತಿದ್ದರರೆ, ಇವರು ಕಸದ ಟೆಂಡರ್ ಮೂಲಕ ಹೈಕಮಾಂಡ್ ಗೆ ಕಪ್ಪ ಕಾಣಿಕೆ ಕೊಡಲಾಗ್ತಿದೆ ಎಂದು ಅಶೋಕ್​​ ಗಂಭೀರ ಆರೋಪ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.​​

Source link

ದೀರ್ಘಾವಧಿ ಪ್ರಧಾನಿ ದಾಖಲೆ: ಕೈಯಲ್ಲಿ ‘ಮೋದಿ’ ಮೆಹಂದಿ ಹಾಕಿಕೊಂಡು ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಬರ್ತ್‌ಡೇ ಆಚರಣೆ – Kannada News

ಕೈಯಲ್ಲಿ ‘ಮೋದಿ’ ಮೆಹಂದಿ ಹಾಕಿಕೊಂಡು ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಬರ್ತ್‌ಡೇ ಆಚರಣೆ

ಬಳ್ಳಾರಿ, ಜೂನ್ 10: ಸ್ವತಂತ್ರ ಭಾರತದ ಇತಿಹಾಸದಲ್ಲಿ ಸತತವಾಗಿ ಅತಿ ದೀರ್ಘಾವಧಿಗೆ ಚುನಾಯಿತರಾದ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ (Narendra Modi) ಅವರ ಐತಿಹಾಸಿಕ ಸಾಧನೆಯನ್ನು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಕುಟುಂಬ ವಿಶಿಷ್ಟವಾಗಿ ಸಂಭ್ರಮಿಸಿದೆ. ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ತಮ್ಮ ಹುಟ್ಟುಹಬ್ಬದ ಸಂಭ್ರಮದ ಮಧ್ಯೆಯೇ, ಪ್ರಧಾನಿ ಮೋದಿಯವರ ಈ ದಾಖಲೆಯನ್ನು ಗೌರವಿಸುವ ಸಲುವಾಗಿ ತಮ್ಮ ಕೈಯಲ್ಲಿ ನರೇಂದ್ರ ಮೋದಿಯವರ ಭಾವಚಿತ್ರದ ಮೆಹಂದಿ (ಮದರಂಗಿ) ಬಿಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಮುಖ್ಯಾಂಶಗಳು

  • ಹಸ್ತದಲ್ಲಿ ಮೂಡಿದ ಮೋದಿ ಮೆಹಂದಿ ಚಿತ್ರ.
  • ಹುಟ್ಟುಹಬ್ಬದಂದೇ ವಿಶಿಷ್ಟವಾಗಿ ಸಂಭ್ರಮಿಸಿದ ಲಕ್ಷ್ಮಿ.
  • ಮೋದಿಯವರ ಸುದೀರ್ಘ ಆಡಳಿತಕ್ಕೆ ಗೌರವ.

ಮೋದಿ ಭಾವಚಿತ್ರ, ಕಮಲದ ಹೂವು ಮತ್ತು 75ರ ಮದರಂಗಿ ಕಲಾಕೃತಿ

ಬಳ್ಳಾರಿ ನಗರದ ಸ್ವಗೃಹದಲ್ಲಿ ಲಕ್ಷ್ಮಿ ಅರುಣಾ ಈ ಬಾರಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದೇ ಸುಸಂದರ್ಭದಲ್ಲಿ ದೇಶದಲ್ಲಿ ನರೇಂದ್ರ ಮೋದಿಯವರು ಸತತವಾಗಿ ಅತಿ ದೀರ್ಘಾವಧಿಯ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಐತಿಹಾಸಿಕ ಮೈಲಿಗಲ್ಲನ್ನು ತಲುಪಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಅವರು, ಹಸ್ತದ ಮೇಲೆ ಭಾರತೀಯ ಜನತಾ ಪಕ್ಷದ (BJP) ಸಂಕೇತವಾದ ಕಮಲದ ಚಿತ್ರ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ದೇಶದ ಹೆಮ್ಮೆಯ ಸಂಕೇತವಾಗಿ ‘75 ವರ್ಷ’ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಕರ್ಷಕ ಭಾವಚಿತ್ರವನ್ನು ಮೆಹಂದಿ ಮೂಲಕ ಬಿಡಿಸಿಕೊಂಡಿದ್ದಾರೆ.

ಲಕ್ಷ್ಮಿ ಅರುಣಾ ಕೈಯಲ್ಲಿ ಮೂಡಿರುವ ಈ ರಾಜಕೀಯ ಹಾಗೂ ದೇಶಭಕ್ತಿಯ ಮದರಂಗಿ ಚಿತ್ರದ ವಿಡಿಯೋವನ್ನು ಜನಾರ್ದನ ರೆಡ್ಡಿ ಫೇಸ್​​ಬುಕ್​ನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಲಕ್ಷ್ಮಿ ಅರುಣಾ ಕೈಯಲ್ಲಿ ಮೂಡಿರುವ ಮೋದಿ ಚಿತ್ರ

ಪ್ರಧಾನಿ ನರೇಂದ್ರ ಮೋದಿ ಸತತವಾಗಿ ಭಾರತದ ಪ್ರಧಾನ ಮಂತ್ರಿಯಾಗಿ ಅತಿ ದೀರ್ಘಕಾಲ ದೇಶವನ್ನು ಮುನ್ನಡೆಸಿದ ಪ್ರಜಾಸತ್ತಾತ್ಮಕ ನಾಯಕ ಎಂಬ ಅಭೂತಪೂರ್ವ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಸತತ ಸುದೀರ್ಘಾವಧಿಯ ಪ್ರಧಾನಿ ಹುದ್ದೆಯ ದಾಖಲೆಯನ್ನು ಮೋದಿ ಮುರಿದಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸತತ ಆಡಳಿತದ ದಾಖಲೆಯನ್ನು ಹಿಂದಿಕ್ಕಿದ್ದ ಮೋದಿ, ಈಗ ಸಂಪೂರ್ಣವಾಗಿ ಅತ್ಯಧಿಕ ದಿನಗಳ ಕಾಲ ಸತತವಾಗಿ ದೇಶದ ಚುಕ್ಕಾಣಿ ಹಿಡಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆಯನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಶುಭ ಹಾರೈಸಿದ ಗಾಲಿ ಜನಾರ್ದನ ರೆಡ್ಡಿ

ಪ್ರಧಾನಿ ಮೋದಿಯವರ ಈ ಐತಿಹಾಸಿಕ ಸಾಧನೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಧಿಕೃತ ಫೇಸ್‌ಬುಕ್ ಖಾತೆ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ‘ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸತತವಾಗಿ ಅತೀ ದೀರ್ಘಾವಧಿಗೆ ಜನರಿಂದ ಚುನಾಯಿತರಾದ ಪ್ರಧಾನ ಮಂತ್ರಿ ಮಾನ್ಯ ನರೇಂದ್ರ ಮೋದಿಜಿ ಅವರು ರಾಷ್ಟ್ರಸೇವೆಗೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದಾರೆ. ಮೋದಿಜಿಯವರ ಪ್ರತಿಯೊಂದು ಕಾರ್ಯವು ಯಶಸ್ವಿಯಾಗಲಿ ಅವರು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಶಕ್ತಿಯಿಂದ ದೇಶ ಸೇವೆಯನ್ನು ಮುಂದುವರಿಸಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ’ ಎಂದು ರೆಡ್ಡಿ ಫೇಸ್​ಬುಕ್ ಪೋಸ್ಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಟ್ಯಾಂಡ್-ಅಪ್ ಕಾಮಿಡಿ ಶೋ: 370ರೂ. ಬಿರಿಯಾನಿ ಬದಲಾಗಿ ಆಕೆಯಿಂದ ಇನ್ನೇನೋ ಬಯಸಿದ್ದೆ ಎಂದು ಹೇಳಿ ಕೆಲಸ ಕಳೆದುಕೊಂಡ ಯುವಕ – Kannada News

ಕೆಲಸದಿಂದ ವಜಾಗೊಂಡ ವ್ಯಕ್ತಿImage Credit source: NDTV

ಗುರುಗ್ರಾಮ, ಜೂನ್ 10: ಕೆಲವು ಸೆಕೆಂಡುಗಳಲ್ಲಿ ತಾವು ವೈರಲ್ ಆಗಬೇಕು ಪ್ರಸಿದ್ಧಿ ಪಡೆಯಬೇಕು ಎಂದು ಸಾರ್ವಜನಿಕವಾಗಿ ಆಡುವ ಕೆಲವು ಮಾತುಗಳು ಹೇಗೆ ಇಡೀ ವೃತ್ತಿ ಜೀವನವನ್ನೇ ಬಲಿ ಪಡೆಯಬಹುದು ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ಪ್ರಸಿದ್ಧ ಸ್ಟ್ಯಾಂಡ್​-ಅಪ್ ಕಾಮಿಡಿಯನ್ ಪ್ರಣೀತ್ ಮೋರ್ ಅವರ ಲೈವ್ ಸ್ಟ್ಯಾಂಡ್​ ಅಪ್ ಕಾಮಿಡಿ ಶೋ ವೇಳೆ ಮಹಿಳೆಯರ ಘನತೆಗೆ ಕುಂದುಂಟಾಗುವಂತೆ ಅಸಭ್ಯ ಕಮೆಂಟ್ ಮಾಡಿದ್ದ ಯುವಕನನ್ನು ಆತ ಕೆಲಸ ಮಾಡುತ್ತಿದ್ದ ಕಂಪನಿ ವಜಾ ಮಾಡಿರುವ ಘಟನೆ ನಡೆದಿದೆ.

ಕಾರ್ಪೊರೇಟ್ ವಲಯದಲ್ಲಿ ಮಹಿಳಾ ಉದ್ಯೋಗಿಗಳ ಗೌರವ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಂಪನಿ ತೆಗೆದುಕೊಂಡಿರುವ ಈ ಕಟ್ಟುನಿಟ್ಟಿನ ನಿರ್ಧಾರಕ್ಕೆ ಇಂಟರ್ನೆಟ್‌ನಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ಏನಿದು ‘370 ರೂ. ಬಿರಿಯಾನಿ’ ವಿವಾದ?
ಹಾಸ್ಯನಟ ಪ್ರಣೀತ್ ಮೋರ್ ಅವರ ಲೈವ್ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವ ಒಂದು ಭಾಗವಿತ್ತು. ಈ ವೇಳೆ ಮೈಕ್ ಪಡೆದ ಗುರುಗ್ರಾಮದ ಈ ಯುವಕ, ತಾನು ಇತ್ತೀಚೆಗೆ ಒಬ್ಬ ಹುಡುಗಿಯೊಂದಿಗೆ ಡೇಟಿಂಗ್‌ಗೆ ಹೋಗಿದ್ದ ಕಥೆಯನ್ನು ವಿವರಿಸಿದ್ದಾನೆ. ಅಲ್ಲಿ ಚಿಕನ್ ಬಿರಿಯಾನಿಗೆ 370 ರೂ. ಖರ್ಚು ಮಾಡಿದ್ದಾಗಿ ಹೇಳಿದ ಆತ, ಅದಕ್ಕೆ ಪ್ರತಿಯಾಗಿ ಆ ಹುಡುಗಿಯಿಂದ ಲೈಂಗಿಕತೆಯನ್ನು ನಿರೀಕ್ಷಿಸಿದ್ದಾಗಿ ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾನೆ.

ಕಾರ್ಯಕ್ರಮದಲ್ಲಿದ್ದ ಕೆಲವರು ಆ ಕ್ಷಣಕ್ಕೆ ನಕ್ಕರಾದರೂ, ಈ ಕೃತ್ಯದ ವೀಡಿಯೊ ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆ ಇಡೀ ದೇಶಾದ್ಯಂತ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿತು.

ಉದ್ಯೋಗಿ ವಿರುದ್ಧ ಕಂಪನಿಯ ತ್ವರಿತ ಮತ್ತು ಕಠಿಣ ಕ್ರಮ
ವೀಡಿಯೊ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಸಾರ್ವಜನಿಕರು ಯುವಕನ ಉದ್ಯೋಗದ ಪ್ರೊಫೈಲ್ ಅನ್ನು ಪತ್ತೆಹಚ್ಚಿ ಆತ ಕೆಲಸ ಮಾಡುತ್ತಿದ್ದ ಗುರುಗ್ರಾಮದ ಡಿಸೈನಿಂಗ್ ಕಂಪನಿಯನ್ನು ಟ್ಯಾಗ್ ಮಾಡಲು ಆರಂಭಿಸಿದರು. ವಿಷಯದ ಗಂಭೀರತೆಯನ್ನು ಅರಿತ ಕಂಪನಿಯ ಆಡಳಿತ ಮಂಡಳಿ ಮತ್ತು ಮಾಲೀಕರು ತಕ್ಷಣವೇ ಆಂತರಿಕ ಸಭೆ ನಡೆಸಿದರು.

ಕಂಪನಿಯ ಮಾಲೀಕರು ಅಧಿಕೃತ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿ, ಉದ್ಯೋಗಿ ಕಠಿಣ ಪರಿಶ್ರಮಿಯಾಗಿದ್ದರೂ, ಆತ ಸಾರ್ವಜನಿಕ ವೇದಿಕೆಯಲ್ಲಿ ನೀಡಿರುವ ಹೇಳಿಕೆಯು ನಮ್ಮ ಕಂಪನಿಯ ನೈತಿಕತೆ, ಸಂಸ್ಕೃತಿ ಮತ್ತು ಮಹಿಳೆಯರಿಗೆ ನೀಡುವ ಗೌರವದ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಮತ್ತಷ್ಟು ಓದಿ: ‘ಸ್ಟಾಂಡ್​ಅಪ್’ ಕಾಮಿಡಿ; ಟ್ರಂಪ್ ಮುಂದೆ ಶಾಲಾ ಬಾಲಕನಾದ ಪಾಕಿಸ್ತಾನದ ಪ್ರಧಾನಿ

ಇಂತಹ ಪ್ರವೃತ್ತಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಾರಿದ ಕಂಪನಿಯು, ಆತನನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಿ ಸಾರ್ವಜನಿಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.

ಕ್ಷಮೆಯಾಚನೆಯ ನಂತರವೂ ತಪ್ಪದ ಸಾರ್ವಜನಿಕ ಆಕ್ರೋಶ
ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಹಾಸ್ಯನಟ ಪ್ರಣೀತ್ ಮೋರ್ ಮತ್ತು ತಪ್ಪು ಮಾಡಿದ ಯುವಕ ಇಬ್ಬರೂ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಯಾರ ಭಾವನೆಗಳನ್ನೂ ನೋಯಿಸುವ ಉದ್ದೇಶ ತಮಗಿರಲಿಲ್ಲ ಎಂದು ಅವರು ಹೇಳಿಕೊಂಡರೂ ಇಂಟರ್ನೆಟ್ ಬಳಕೆದಾರರ ಕೋಪ ಶಮನವಾಗಲಿಲ್ಲ.

ವಿಶೇಷವೆಂದರೆ, ಕೆಲಸ ಕಳೆದುಕೊಂಡ ನಂತರವೂ ಆ ಯುವಕ ಇದೇ ವಿವಾದದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತಮಾಷೆಯ ರೀಲ್ಸ್‌ಗಳನ್ನು ಮಾಡಲು ಮುಂದಾಗಿದ್ದು ಸಾರ್ವಜನಿಕರನ್ನು ಮತ್ತಷ್ಟು ಕೆರಳಿಸಿದೆ. ಯುವ ಪೀಳಿಗೆಯು ಇಂಟರ್ನೆಟ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡುವಾಗ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂಬುದಕ್ಕೆ ಈ ಘಟನೆ ಪ್ರಮುಖ ಎಚ್ಚರಿಕೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಳೆದ 12 ವರ್ಷದಲ್ಲಿ ಆಡಳಿತ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಸಿದ ಡಿಜಿಟಲ್ ಸೇವೆಗಳು – Kannada News

ನವದೆಹಲಿ, ಜೂನ್ 10: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ 12 ವರ್ಷಗಳ ಆಡಳಿತಾವಧಿಯಲ್ಲಿ ಭಾರತೀಯರ ದೈನಂದಿನ ಜೀವನವನ್ನು ಬದಲಾಯಿಸಿದ ಪ್ರಮುಖ ಡಿಜಿಟಲ್ ಸೇವೆಗಳು ಹಲವಿವೆ. ಹನ್ನೆರಡು ವರ್ಷದ ಹಿಂದೆ ಹಣಕಾಸು ಮೂಲಸೌಕರ್ಯ ವ್ಯವಸ್ಥೆ ಹೇಗಿತ್ತು ಎಂದು ಯಾರು ಬೇಕಾದರೂ ನೆನಪಿಸಿಕೊಳ್ಳಬಹುದು. ಕೈಯಲ್ಲಿ, ಜೀಬಲ್ಲಿ, ಪಾಕೆಟಲ್ಲಿ ಕ್ಯಾಷ್ ಇಟ್ಟುಕೊಳ್ಳಬೇಕಿತ್ತು. ವ್ಯಾಪಾರಿಗೂ ಚಿಲ್ಲರೆ ಸಮಸ್ಯೆ. ಬ್ಯಾಂಕಿಗೆ ಹೋದರೆ ಬೇಕಾದ್ದು ಪಡೆಯಲು ದಿನಹರಣ, ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೆ ಕಾಯುವ ಪಾಡು. ಸರ್ಕಾರಿ ಸೇವೆಗಳನ್ನು ಪಡೆಯಬೇಕೆಂದರೆ ಸಾಕಪ್ಪಾ ಸಾಕು ಎನ್ನುವಂತೆ ಮಾಡುವ ವ್ಯವಸ್ಥೆ. ಇವೆಲ್ಲವೂ ಕಳೆದ 12 ವರ್ಷಗಳಲ್ಲಿ ಹಂತ ಹಂತವಾಗಿ ಬದಲಾಗಿದೆ, ವಾತಾವರಣ ಸುಲಭವಾಗಿದೆ, ಸುಗಮಗೊಂಡಿದೆ.

1. ಯುಪಿಐ ಕ್ರಾಂತಿ

2016ರಲ್ಲಿ ಆರಂಭವಾದ ಯುಪಿಐ (UPI), ಇಂದು ಭಾರತದ ರೀಟೇಲ್ ಎಕನಾಮಿಯ ಬೆನ್ನೆಲುಬಾಗಿದೆ. ಸಣ್ಣ ತರಕಾರಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಮಾಲ್‌ಗಳವರೆಗೆ ಕ್ಯೂಆರ್ (QR) ಕೋಡ್ ಸಾಮಾನ್ಯವಾಗಿದೆ. ಕ್ಯೂಆರ್ ಕೋಡ್, ಮೊಬೈಲ್ ನಂಬರ್, ಯುಪಿಐ ಐಡಿ ಬಳಸಿ ಪೇಮೆಂಟ್ ಮಾಡಲು ಸಾಧ್ಯವಾಗಿದೆ.

2025-26ರ ಆರ್ಥಿಕ ವರ್ಷದಲ್ಲಿ ಯುಪಿಐ ಮೂಲಕ 200 ಬಿಲಿಯನ್‌ಗಿಂತಲೂ (20,000 ಕೋಟಿ) ಹೆಚ್ಚು ವಹಿವಾಟುಗಳು ನಡೆದಿದ್ದು, ಇದರ ಒಟ್ಟು ಮೌಲ್ಯ 314 ಲಕ್ಷ ಕೋಟಿ ರೂ. ದಾಟಿದೆ. ಭಾರತದ ರೀಟೇಲ್ ಡಿಜಿಟಲ್ ಪಾವತಿಯಲ್ಲಿ ಇದರ ಪಾಲು ಶೇ. 85 ರಷ್ಟಿದೆ.

2. ಜನ ಧನ್ ಖಾತೆಗಳು

ಪಿಎಂ ಜನ್ ಧನ್ ಯೋಜನೆ ಅಡಿ ಕೋಟ್ಯಂತರ ಬಡ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಬ್ಯಾಂಕ್ ಖಾತೆಗಳನ್ನು ಒದಗಿಸಲಾಯಿತು. ತಮ್ಮ ಜೀವನದಲ್ಲಿ ಅದೇ ಮೊದಲ ಬಾರಿಗೆ ಬ್ಯಾಂಕ್ ಖಾತೆ ಸೃಷ್ಟಿಸಿಕೊಂಡವರ ಸಂಖ್ಯೆ ಕೋಟ್ಯಂತರ ಇತ್ತು. ಬಹಳಷ್ಟು ಜನರು ಬ್ಯಾಂಕಿಂಗ್ ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು.

ಇದು ಮಾತ್ರವೇ ಅಲ್ಲದೆ, ಜನ ಧನ್, ಆಧಾರ್ ಮತ್ತು ಮೊಬೈಲ್ (JAM) ಜೋಡಣೆಯು ಸರ್ಕಾರದ ಡಿಜಿಟಲ್ ಆಡಳಿತಕ್ಕೆ ಗಟ್ಟಿ ಅಡಿಪಾಯ ಹಾಕಿತು.

ಇದನ್ನೂ ಓದಿ: ನಿರ್ಣಾಯಕ ಆಡಳಿತ, ದೂರದೃಷ್ಟಿ ಕ್ರಮಗಳು, ಕಾನೂನು ಸರಳತೆ, ಉದ್ಯಮಕ್ಕೆ ಪುಷ್ಟಿ; ಮೋದಿ ಸರ್ಕಾರದ 12 ವರ್ಷಗಳ ಸಾಧನೆಯ ಝಲಕ್

3. ನೇರ ನಗದು ವರ್ಗಾವಣೆ

ಜನ್ ಧನ್, ಆಧಾರ್ ಮತ್ತು ಮೊಬೈಲ್ ನಂಬರ್ ಅನ್ನು ಬಳಸಿ ಸರ್ಕಾರ ಡಿಬಿಟಿ (DBT – Direct Benefit Transfer) ವ್ಯವಸ್ಥೆ ಜಾರಿಗೆ ತಂದಿದ್ದು ಕ್ರಾಂತಿಕಾರಿ ಎನಿಸಿದೆ. ಸರ್ಕಾರದ ಸಬ್ಸಿಡಿಗಳು, ಪೆನ್ಷನ್‌ಗಳು ಮತ್ತು ಕಲ್ಯಾಣ ಯೋಜನೆಗಳ ಹಣವು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ.

ವಿವಿಧ ಯೋಜನೆಗಳ ಅಡಿಯಲ್ಲಿ 44 ಲಕ್ಷ ಕೋಟಿಗೂ ಅಧಿಕ ಹಣವನ್ನು ನೇರವಾಗಿ ವರ್ಗಾಯಿಸಲಾಗಿದ್ದು, ನಕಲಿ ಫಲಾನುಭವಿಗಳಿಂದ ಆಗುತ್ತಿದ್ದ ಸೋರಿಕೆಯನ್ನು ತಡೆಗಟ್ಟಲಾಗಿದೆ.

4. ಆಧಾರ್ ಕಾರ್ಡ್

ಆಧಾರ್ ಎನ್ನುವುದು ಭಾರತವೇ ಸ್ವಂತವಾಗಿ ರೂಪಿಸಿದ ಅದ್ಭುತ ವ್ಯವಸ್ಥೆ. ಇದು ವಿಶ್ವದ ಅತಿ ದೊಡ್ಡ ಬಯೋಮೆಟ್ರಿಕ್ ವ್ಯವಸ್ಥೆ. ಇದನ್ನು ಅಷ್ಟಕ್ಕೇ ಸೀಮಿತವಾಗಿಸದೆ ಬೇರೆ ಬೇರೆ ಡಿಜಿಟಲ್ ಸೇವೆಗಳಿಗೆ ಆಧಾರ ಸ್ತಂಭವಾಗಿ ಮಾಡಿಕೊಳ್ಳಲಾಗುತ್ತಿದೆ. 142 ಕೋಟಿಗೂ ಹೆಚ್ಚು ದಾಖಲಾತಿಗಳನ್ನು ಹೊಂದಿರುವ ಆಧಾರ್, ಬ್ಯಾಂಕಿಂಗ್, ಟೆಲಿಕಾಂ ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅತ್ಯಗತ್ಯವಾದ ಡಿಜಿಟಲ್ ಗುರುತಿನ ಚೀಟಿಯಾಗಿದೆ.

5. ಫಾಸ್ಟ್‌ಟ್ಯಾಗ್

ಕೆಲ ವರ್ಷಗಳ ಹಿಂದಿನವರೆಗೆ ಹೆದ್ದಾರಿಯಲ್ಲಿ ಪ್ರಯಾಣಿಸಲು ಬಹಳ ಜನರಿಗೆ ಇದ್ದ ದೊಡ್ಡ ಕಿರಿಕಿರಿಗಳಲ್ಲಿ ಟೋಲ್ ಪ್ಲಾಜಾ ಒಂದು. ಇಲ್ಲಿ ಟೋಲ್ ಪಾವತಿಸಲು ಉದ್​ದುದ್ದ ಕ್ಯೂ ನಿಲ್ಲುವುದೇ ಹಲವು ನಿಮಿಷಗಳನ್ನು ವ್ಯಯಿಸಬೇಕಿತ್ತು. ಇದನ್ನು ತಪ್ಪಿಸಲು ಸರ್ಕಾರ ಫಾಸ್​ಟ್ಯಾಗ್ (FASTag) ವ್ಯವಸ್ಥೆ ತಂದಿತು. ಆರ್‌ಎಫ್‌ಐಡಿ (RFID) ತಂತ್ರಜ್ಞಾನದ ಮೂಲಕ ಟೋಲ್ ಗೇಟ್‌ಗಳಲ್ಲಿ ಸ್ವಯಂಚಾಲಿತವಾಗಿ ಹಣ ಕಡಿತವಾಗುವ ವ್ಯವಸ್ಥೆ ಜಾರಿಗೆ ಬಂದಿತು. ಇದರಿಂದ ವಾಹನಗಳು ಕಾಯುವ ಸಮಯ, ಇಂಧನ ಪೋಲಾಗುವುದು ಮತ್ತು ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಿದೆ.

6. ಆನ್‌ಲೈನ್ ತೆರಿಗೆ ರಿಟರ್ನ್ಸ್ ಸಲ್ಲಿಕೆ

ಆದಾಯ ತೆರಿಗೆ ಸಲ್ಲಿಕೆ (ITR) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. ಆಧಾರ್ ಜೋಡಣೆ ಮತ್ತು ಮುಂಚಿತವಾಗಿ ಭರ್ತಿಯಾದ ಫಾರ್ಮ್‌ಗಳಿಂದಾಗಿ ತೆರಿಗೆದಾರರು ಕಚೇರಿಗಳಿಗೆ ಅಲೆಯುವುದು ತಪ್ಪಿದೆ.

ಇದನ್ನೂ ಓದಿ: 12 ವರ್ಷಗಳ ಅಭಿವೃದ್ಧಿ, ವಿಶ್ವಾಸ ಮತ್ತು ಸಾರ್ವಜನಿಕ ಕಲ್ಯಾಣ: ದೇಶವನ್ನು ಬಲಪಡಿಸುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ: ಪ್ರಧಾನಿ ಮೋದಿ

7. ಕೋವಿನ್ ಆಪ್

ಕೋವಿಡ್ ಸಮಯದಲ್ಲಿ ಜಾರಿಗೆ ತಂದ ‘ಕೋವಿನ್’ (CoWIN) ಪ್ಲಾಟ್‌ಫಾರ್ಮ್ ಜಗತ್ತಿನಲ್ಲೇ ಅತಿ ದೊಡ್ಡ ಡಿಜಿಟಲ್ ಲಸಿಕಾ ನಿರ್ವಹಣಾ ವ್ಯವಸ್ಥೆಯಾಗಿ ಹೊರಹೊಮ್ಮಿತು. ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಅನ್ನು ಬಹಳ ಕ್ಷಿಪ್ರವಾಗಿ ಮತ್ತು ಸಮರ್ಪಕವಾಗಿ ಹೇಗೆ ಬಳಸಬಹುದು ಎಂಬುದಕ್ಕೆ ಕೋವಿನ್ ಅಪ್ಲಿಕೇಶನ್ ಒಂದು ನಿದರ್ಶನವೆನಿಸಿದೆ.

8. ಉಮಂಗ್ ಆಪ್

‘ಉಮಂಗ್’ (UMANG) ಆಪ್ ಮೂಲಕ ನಾಗರಿಕರು ನೂರಾರು ಸರ್ಕಾರಿ ಸೇವೆಗಳನ್ನು ಮೊಬೈಲ್‌ನಲ್ಲೇ ಪಡೆಯುತ್ತಿದ್ದಾರೆ. ಒಂದೇ ಪ್ಲಾಟ್​ಫಾರ್ಮ್​ನಲ್ಲಿ ಹಲವು ಸೇವೆಗಳನ್ನು ಇಲ್ಲಿ ಜೋಡಿಸಲಾಗಿದೆ.

9. ಡಿಜಿಲಾಕರ್

ಆಡಳಿತ ಸೇವೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಡಿಜಿಲಾಕರ್ (DigiLocker) ಸೌಲಭ್ಯದ ಪಾತ್ರವೂ ಇದೆ. ಚಾಲನಾ ಪರವಾನಗಿ (DL), ಅಂಕಪಟ್ಟಿಗಳು, ಪ್ಯಾನ್ ಕಾರ್ಡ್ ಮತ್ತು ವಿಮಾ ಪತ್ರಗಳಂತಹ ಅಧಿಕೃತ ದಾಖಲೆಗಳನ್ನು ಭೌತಿಕವಾಗಿ ಕೊಂಡೊಯ್ಯುವ ಅಗತ್ಯವನ್ನು ಇದು ತಪ್ಪಿಸುತ್ತದೆ. ಪ್ರಸ್ತುತ ಡಿಜಿಲಾಕರ್ 53 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ.

ಮೋದಿ ಸರ್ಕಾರದ ಅತ್ಯಂತ ಪ್ರಮುಖ ಸಾಧನೆ ಎಂದರೆ ಅದು ಕೇವಲ ರಸ್ತೆ ಅಥವಾ ಸೇತುವೆಗಳ ನಿರ್ಮಾಣವಲ್ಲ; ಬದಲಾಗಿ ಭಾರತೀಯರ ವರ್ತನೆಯಲ್ಲಿ ತಂದ ಬದಲಾವಣೆ. 2014ರಲ್ಲಿ ಇಲ್ಲದ “ಎಲ್ಲವೂ ಸ್ಮಾರ್ಟ್‌ಫೋನ್‌ನಲ್ಲೇ ನಿಮಿಷಗಳಲ್ಲಿ ಆಗುತ್ತದೆ” ಎಂಬ ಡಿಜಿಟಲ್ ಭರವಸೆ ಮತ್ತು ನಂಬಿಕೆ ಇಂದು ಪ್ರತಿಯೊಬ್ಬ ಭಾರತೀಯನಲ್ಲೂ ಮೂಡಿದೆ. ಭಾರತದ ಈ ‘ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್’ (DPI) ಮಾದರಿಯನ್ನು ಇಂದು ಜಗತ್ತಿನಾದ್ಯಂತ ಅಧ್ಯಯನ ಮಾಡಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಲ್ ಬಂಕ್ ನೌಕರ ಭಾರತಿರಾಜ್, ತಮಿಳು ಚಿತ್ರರಂಗದಲ್ಲಿ ಕ್ರಾಂತಿ ಮಾಡಿದ್ದು ಹೇಗೆ? – Kannada News

ತಮಿಳು ಚಿತ್ರರಂಗದ (Kollywood) ಹಿರಿಯ ನಿರ್ದೇಶಕ ಭಾರತಿ ರಾಜ ಇಂದು (ಜೂನ್ 10) ನಿಧನ ಹೊಂದಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಸೇರಿದಂತೆ ಹಲವಾರು ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾರತಿ ರಾಜ ಅವರಿಗೆ ಅಂತಿಮ ನಮನಗಳನ್ನು ಸಲ್ಲಸಿದ್ದಾರೆ. ಭಾರತಿರಾಜ, ತಮಿಳು ಸಿನಿಮಾಗಳ ವ್ಯಾಕರಣ ಬದಲಿಸಿದ ನಿರ್ದೇಶಕ. ಅವರ ಮೊದಲ ಸಿನಿಮಾ ‘16 ವಯತಿನಿಲೆ’ ಸಿನಿಮಾ, ಸೂಪರ್ ಹಿಟ್ ಆಗಿದ್ದು, ಮಾತ್ರವಲ್ಲ ಸಿನಿಮಾ ನಿರ್ದೇಶಕರುಗಳಿಗೆ ಹೊಸ ಹಾದಿಯನ್ನೇ ಹಾಕಿಕೊಟ್ಟಿತು. ಅಂದಹಾಗೆ ಭಾರತಿರಾಜ, ಬಹಳ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ದಿವಂಗತ ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಬಲು ಆಪ್ತರಾಗಿದ್ದ ಭಾರತಿರಾಜ ಸಾಧನೆ ಮತ್ತು ವಿಶಾಲ ಹೃದಯದ ಬಗ್ಗೆ ಎಸ್​​ಪಿಬಿ ಹಿಂದೊಮ್ಮೆ ಹೇಳಿದ್ದರು.

ಭಾರತಿರಾಜ ಅವರು ಆಗಿನ್ನೂ ಚಿತ್ರರಂಗಕ್ಕೆ ಕಾಲಿರಿಸಿರಲಿಲ್ಲ ಆದರೆ ನಾಟಕಗಳಲ್ಲಿ ನಟಿಸುತ್ತಿದ್ದರು. ಅದರ ಜೊತೆಗೆ ಜೀವನಕ್ಕಾಗಿ ಸಣ್ಣ ಪುಟ್ಟ ಕೆಲಸಗಳನ್ನು ಸಹ ಮಾಡುತ್ತಿದ್ದರು. ಅವುಗಳಲ್ಲಿ ಪೆಟ್ರೋಲ್ ಬಂಕ್​​ನಲ್ಲಿ ಪೆಟ್ರೋಲ್ ಹಾಕುವ ಕೆಲಸವೂ ಒಂದು. ಬಾಲಸುಬ್ರಹ್ಮಣ್ಯಂ ಸಹ ಸಿನಿಮಾ ಗಾಯಕ ಆಗಿರಲಿಲ್ಲ ಆದರೆ ಸ್ಟೇಜ್​​ಗಳಲ್ಲಿ ಹಾಡುತ್ತಿದ್ದರು. ಆಗಾಗ ಭಾರತಿರಾಜ ಅವರ ನಾಟಕಗಳಿಗೂ ಹಾಡುಗಳನ್ನು ಹಾಡುತ್ತಿದ್ದರು. ಆಗಿನಿಂದಲೇ ಭಾರತಿರಾಜ ಅವರು ಬಾಲಸುಬ್ರಹ್ಮಣ್ಯಂ ಅವರಿಗೆ ಪರಿಚಯ.

ಭಾರತಿರಾಜ ಅವರು ಒಮ್ಮೆ, ಎಸ್​​ಪಿಬಿ ಬಳಿ, ‘ನಮ್ಮ ಪಕ್ಕದ ಊರಿನ ಮೂರು ಮಂದಿ ಸಂಗೀತಗಾರರು ಇಲ್ಲಿಗೆ (ಚೆನ್ನೈ) ಬಂದಿದ್ದಾರೆ. ಅವರನ್ನು ನಿಮ್ಮ ತಂಡದಲ್ಲಿ ಸೇರಿಸಿಕೊ’ ಎಂದರಂತೆ. ಸರಿ ಎಂದು ಎಸ್​​ಪಿ ಬಾಲಸುಬ್ರಹ್ಮಣ್ಯಂ ತಾವು ರಿಹರ್ಸಲ್ ಮಾಡುತ್ತಿದ್ದ ಜಾಗಕ್ಕೆ ಅವರನ್ನು ಕರೆಸಿಕೊಂಡಿದ್ದಾರೆ. ಅವರೇ ಇಳಯರಾಜ ಮತ್ತು ಅವರ ಇಬ್ಬರು ಸಹೋದರರು. ಇಳಯರಾಜ ಆಗ ಹಾರ್ಮೊನಿಯಂ ನುಡಿಸುತ್ತಿದ್ದರಂತೆ. ಇಳಯರಾಜ ಅವರ ಪ್ರತಿಭೆ ಕಂಡು ಬೆರಗಾಗಿದ್ದ ಎಸ್​​ಪಿಬಿಗೆ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಆಸೆ. ಆದರೆ ತಂಡದ ನಾಯಕರಿಗೆ ಇಷ್ಟವಿಲ್ಲ ಏಕೆಂದರೆ ಅದಾಗಲೇ ಅವರ ತಂಡದಲ್ಲಿ ಹಾರ್ಮೊನಿಯಂ ವಾದಕರು ಇದ್ದರಂತೆ. ಕೊನೆಗೆ ಎಸ್​​ಪಿಬಿ ಗುಟ್ಟಾಗಿ ಇಳಯರಾಜಾಗೆ ಈ ವಿಷಯ ಹೇಳಿದಾಗ, ತಾವು ಗಿಟಾರ್ ಸಹ ವಾದಿಸುವುದಾಗಿ ಹೇಳಿದರಂತೆ. ಆಗ ಎಸ್​​ಪಿಬಿ ಅವರ ತಂಡ ಸೇರಿದ ಇಳಯರಾಜ ಬೆಳೆದ ಎತ್ತರ ಯಾರೂ ಊಹಿಸಲಾಗದ್ದು. ಇಂಥಹಾ ಇಳಯರಾಜ ಮುಖ್ಯವಾಹಿನಿಗೆ ಬರಲು ಭಾರತಿರಾಜ ಕಾರಣವಾಗಿದ್ದರು.

ಇದನ್ನೂ ಓದಿ:ಪುಟ್ಟಣ ಕಣಗಾಲ್ ಶಿಷ್ಯ, ಖ್ಯಾತ ನಿರ್ದೇಶಕ ಭಾರತಿ ರಾಜ ನಿಧನ

ಗಾಯಕರಾಗಿ ತುಸು ಜನಪ್ರಿಯರಾದ ಬಳಿಕ ಎಸ್​​ಪಿ ಬಾಲಸುಬ್ರಹ್ಮಣ್ಯಂ ಒಂದು ಮಾರುತಿ 800 ಕಾರು ಖರೀದಿ ಮಾಡಿದರಂತೆ. ಹಾಡು ರೆಕಾರ್ಡಿಂಗ್ ಮಾಡಲು, ಸ್ಟೇಜ್ ಕಾರ್ಯಕ್ರಮಗಳನ್ನು ನೀಡಲು ಕಾರಿನಲ್ಲೇ ಹೋಗುತ್ತಿದ್ದರಂತೆ. ಆಗೆಲ್ಲ ಭಾರತಿರಾಜ ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರಂತೆ ಎಸ್​​ಪಿಬಿ. ಆಗ ದಾರಿಯಲ್ಲಿ ಭಾರತಿರಾಜ ಅವರು ತಾವು ಮಾಡಿಟ್ಟುಕೊಂಡ ಕತೆಗಳನ್ನು ಹೇಳುತ್ತಿದ್ದರಂತೆ. ಅವರು ಹೇಳುತ್ತಿದ್ದ ಕತೆಗಳು ಬಹಳ ಭಿನ್ನವಾಗಿರುತ್ತಿದ್ದವಂತೆ, ಆ ವರೆಗೆ ಯಾರೂ ಯೋಚಿಸದ ರೀತಿಯ ಕತೆಗಳನ್ನು ಭಾರತಿರಾಜ ಹೇಳುತ್ತಿದ್ದರಂತೆ.

ಭಾರತಿರಾಜ ಹೇಳುತ್ತಿದ್ದ ಕತೆಗಳನ್ನು ಕೇಳಿ ಎಸ್​​​ಪಿಬಿಗೆ ತುಸು ಅನುಮಾನವೇ ಆಗುತ್ತಿತ್ತಂತೆ. ಇಷ್ಟು ಭಿನ್ನವಾದ, ರೂಟೆಡ್ ಆದ ಕತೆಗಳನ್ನು ಸಿನಿಮಾ ಮಾಡಿದರೆ ಯಾರು ನೋಡುತ್ತಾರೆ ಎನಿಸುತ್ತಿತ್ತಂತೆ. ಆದರೆ ಎಸ್​​ಪಿಬಿ ಅನುಮಾನ ಸುಳ್ಳಾಯ್ತು. ಭಾರತಿರಾಜ ಅವರ ಆ ಭಿನ್ನ ಮಾದರಿಯ, ಡಿಗ್ಲಾಮರೈಸ್ ಆದ ಸಿನಿಮಾಗಳೇ ಜನರಿಗೆ ಹೆಚ್ಚು ಇಷ್ಟವಾದವು. ಭಾರತಿರಾಜ ಅವರು ನಿಜ ಗ್ರಾಮಗಳನ್ನು, ಗ್ರಾಮಗಳ ನಿಜವಾದ ಪಾತ್ರಗಳನ್ನು ಆರಂಭದಲ್ಲಿ ತಮ್ಮ ಸಿನಿಮಾಗಳಲ್ಲಿ ತೋರಿಸಿದರು. ಅಲ್ಲದೆ, ತಮಿಳು ಚಿತ್ರರಂಗದ ಮೇಲೆ ಸ್ಟುಡಿಯೋಗಳ ಪ್ರಾಬಲ್ಯವನ್ನು ಮುರಿದಿದ್ದು ಸಹ ಭಾರತಿರಾಜ ಅವರೇ. ಈಗ ಅವರು ಇಲ್ಲವಾಗಿದ್ದಾರೆ. ಎಸ್​​ಪಿಬಿ ಕಾಲವಾದಗಲೇ ಅರೆಜೀವವಾಗಿದ್ದ ಭಾರತಿರಾಜ, ಈಗ ತಮ್ಮ ಆಪ್ತ ಗೆಳೆಯನ ಬಳಿ ತೆರಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಸಭಾ ಟಿಕೆಟ್​​ ಕೈತಪ್ಪಿದ ಬಗ್ಗೆ ಮೌನ ಮುರಿದ ದೇವೇಗೌಡರು: ಯಾರ ಹಂಗಿಲ್ಲದೆ ಮಾತಾಡ್ತೇನೆ ಎಂದ ಹೆಚ್​​ಡಿಡಿ – Kannada News

ಹೆಚ್​​.ಡಿ. ದೇವೇಗೌಡ ಮತ್ತು ನರೇಂದ್ರ ಮೋದಿImage Credit source: HD Deve Gowda X Account and PTI

ಬೆಂಗಳೂರು, ಜೂನ್​​ 10: ಮಾಜಿ ಪ್ರಧಾನಿ ದೇವೇಗೌಡರಿಗೆ ಎನ್​​ಡಿಎಯಿಂದ ರಾಜ್ಯಸಭಾ ಟಿಕೆಟ್​​ ನೀಡದಿರೋದು ಭಾರಿ ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ. ಈ ನಡುವೆ ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಹೆಚ್​​ಡಿಡಿ, ವಿರೋಧಿಗಳಿಗೆ ಖಡಕ್​​ ಸಂದೇಶ ರವಾನಿಸಿದ್ದಾರೆ. ನಾನು ಸುಮ್ಮನೆ ಕೂರಲ್ಲ, ನನ್ನ ಶಕ್ತಿ ಮೀರಿ‌ ಕೆಲಸ‌ ಮಾಡುತ್ತೇನೆ. ರಾಜ್ಯ ಮತ್ತು ದೇಶದ ವಿಚಾರವನ್ನ ಯಾರ ಹಂಗಿಲ್ಲದೆ ಮಾತಾಡ್ತೇನೆ ಎಂದವರು ತಿಳಿಸಿದ್ದಾರೆ. ನನ್ನ ಹಾಗೂ ಮೋದಿ ಸಂಬಂಧ ರಾಜ್ಯಸಭಾ ಸದಸ್ಯ ಸ್ಥಾನದಿಂದ ಮುಗೀತು ಎಂದು ಭಾವಿಸಬೇಡಿ ಎಂದಿಯೂ ಅವರು ತಿವಿದಿದ್ದಾರೆ.

ಮುಖ್ಯಾಂಶಗಳು

  • ರಾಜ್ಯಸಭಾ ಟಿಕೆಟ್​​ ಕೈತಪ್ಪಿದ ಬಗ್ಗೆ ದೇವೇಗೌಡರ ಮಾತು
  • ‘ನನ್ನ-ಮೋದಿ ಸಂಬಂಧ ರಾಜ್ಯಸಭಾ ಸ್ಥಾನಕ್ಕೆ ಸೀಮಿತವಲ್ಲ’
  • ವಿರೋಧಿಗಳಿಗೆ ಕೌಂಟರ್​​ ಮೇಲೆ ಕೌಂಟರ್​​ ಕೊಟ್ಟ ಹೆಚ್​​ಡಿಡಿ

‘ನಮ್ಮದು ವೈಯಕ್ತಿಕ ಸಂಬಂಧ’

ನಾನು ರಾಜಕೀಯಕ್ಕೆ ಬಂದು 7 ದಶಕಗಳು ಕಳೆದಿವೆ. ಜನ ಪರ ಸೇವೆ ಸಲ್ಲಿಸಿದ್ದೇನೆ. ರಾಜ್ಯಸಭಾ ಸದಸ್ಯ ಆಗಬೇಕು ಎಂಬ ವ್ಯಾಮೋಹ ಇದ್ದಿದ್ರೆ ಕೇಂದ್ರದ ಮುಖಂಡರನ್ನ ಭೇಟಿ ಮಾಡ್ತಿದ್ದೆ. ಈ ನಡುವೆ ಕುಮಾರಸ್ವಾಮಿ ನಾವು ರಾಜ್ಯಸಭೆಗೆ ಅಪೇಕ್ಷೆ ಮಾಡಲ್ಲ ಎಂದಿದ್ದು, ಬಿಜೆಪಿಗೆ ಒಂದು ಸೀಟ್ ಸಿಗುತ್ತೆ. ನಾವ್ಯಾಕೆ 18 ಜನ ಇದ್ದು ಸೀಟ್ ಕೇಳಬೇಕು ಎಂದಿದ್ದರು. ಮೋದಿ ಮತ್ತು ನನ್ನ ನಡುವಿನ ಸಂಬಂಧ ಒಂದು ರಾಜ್ಯಸಭಾ ಸೀಟಿಂದ ಅಲ್ಲ. ಕಳೆದ 10 ವರ್ಷಗಳಲ್ಲಿ ನಮ್ಮದು ವೈಯಕ್ತಿಕ ಸಂಬಂಧ. ಮೋದಿಯವರ ಬಗ್ಗೆ, ಆಡಳಿತದ ಬಗ್ಗೆ ನನ್ನ ಭಾವನೆಯನ್ನ ನಿರ್ಭಯವಾಗಿ ಹೇಳಿದ್ದೇನೆ. ಮೋದಿ ನಾಯಕತ್ವ ಸಮರ್ಥನೆ ಮಾಡಿದ್ದೇನೆ. ನನ್ನ ಮೋದಿಯವರ ಸಂಬಂಧ ಹೀಗೆ ಮುಂದುವರೆಯುತ್ತದೆ. ರಾಜ್ಯ ಸಭಾ ಸದಸ್ಯ ಸ್ಥಾನ ಇಲ್ಲ ಅಂದರೂ ಮೋದಿಯವರ ಜೊತೆ ನನ್ನ ಪತ್ರ ವ್ಯವಹಾರ ಇರುತ್ತದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ನೆಹರು ದಾಖಲೆ ಮುರಿದ ಪ್ರಧಾನಿ ಮೋದಿ; ಜಗತ್ತಿನಾದ್ಯಂತ ಹರಿದುಬಂದ ಅಭಿನಂದನೆಗಳ ಮಹಾಪೂರ, ವಿಶ್ವ ನಾಯಕರು ಹೇಳಿದ್ದೇನು?

ಜೆಡಿಎಸ್​​ ಪಕ್ಷದ ಬೆಳವಣಿಗೆಗೂ ಶಕ್ತಿ ಮೀರಿ ಕೆಲಸ ಮಾಡ್ತೇನೆ. ಎನ್​ಡಿಎಯಲ್ಲಿ ಇದ್ದೇವೆ, ಆದ್ರೂ ಪಕ್ಷ ಸಂಘಟನೆ ಮಾಡಬೇಕು. ಜಿಬಿಎ ಚುನಾವಣೆಗೆ ಕಮಿಟಿ ಮಾಡಲಾಗಿದೆ. ಜಿಲ್ಲಾ ಪಂಚಾಯತ್​​ ಮತ್ತು ತಾಲೂಕು ಪಂಚಾಯತ್​​ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಮಾಡ್ತೇವೆ. ರಾಜ್ಯಸಭೆ ಆಯ್ಕೆ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡ್ತಿದ್ದಾರೆ. ಸ್ನೇಹಿತರು ದೇವೇಗೌಡರಿಗೆ ಟಿಕೆಟ್ ಕೊಡಬೇಕು ಅಂದಿದ್ದರು. ಆದರೆ ನಾನು ಅವರಿಗೆ ಸಮಾಧಾನ ಮಾಡಿದ್ದೇನೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಚ್ಛೇದನ ವದಂತಿ ಬಗ್ಗೆ ಪೋಸ್ಟ್ ಹಾಕಿದ ನಟಿ ಶುಭಾ ಪೂಂಜಾ – Kannada News

ಕನ್ನಡದ ನಟಿ ಶುಭಾ ಪೂಂಜಾ ಅವರು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಲಿದ್ದಾರೆ ಎಂಬ ವದಂತಿಗಳಿಗೆ ಕೊನೆಗೂ ಅವರೇ ಅಧಿಕೃತವಾಗಿ ಪ್ರತಿಕ್ರಿಯಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಅವರ ವಿಚ್ಛೇದನದ ಸುದ್ದಿ ಸಖತ್ ಸದ್ದು ಮಾಡುತ್ತಿತ್ತು. ಈ ಎಲ್ಲಾ ಚರ್ಚೆಗಳ ನಡುವೆ ನಟಿ ಶುಭಾ ಪೂಂಜಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಮಾಧ್ಯಮ ಮಿತ್ರರಲ್ಲಿ ಮತ್ತು ಅಭಿಮಾನಿಗಳಲ್ಲಿ ಒಂದು ಪ್ರಮುಖ ಮನವಿ ಮಾಡಿದ್ದಾರೆ.

ಶುಭಾ ಪೂಂಜಾ ಅವರು 2022ರಲ್ಲಿ ಬಾಯ್‌ಫ್ರೆಂಡ್ ಸುಮಂತ್ ಬಿಲ್ಲವ್ ಅವರನ್ನು ಮದುವೆಯಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ದಂಪತಿಗಳು ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಹರಡಿದ್ದವು.ಇದೇ ಸಮಯದಲ್ಲಿ ಅವರು ಪತಿ ಜೊತೆಗಿನ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ವಿಚ್ಛೇದನ ಪಡೆಯುತ್ತಿರುವುದನ್ನು ನೇರವಾಗಿ ಹೌದು ಅಥವಾ ಅಲ್ಲ ಎಂದು ಹೇಳದ ಶುಭಾ ಪೂಂಜಾ, ಪ್ರಸ್ತುತ ಪರಿಸ್ಥಿತಿಯಲ್ಲಿ ಖಾಸಗಿತನ ಗೌರವಿಸುವಂತೆ ಕೋರಿದ್ದಾರೆ.

‘ನನ್ನ ಆತ್ಮೀಯ ಮಾಧ್ಯಮ ಮಿತ್ರರೇ, ನನ್ನ ಇಡೀ ಚಿತ್ರಜೀವನದ ಪಯಣದಲ್ಲಿ ನೀವು ನನಗೆ ಅಪಾರವಾದ ಬೆಂಬಲ, ಪ್ರೋತ್ಸಾಹ ಮತ್ತು ಪ್ರೀತಿಯನ್ನು ನೀಡಿದ್ದೀರಿ. ಅದಕ್ಕಾಗಿ ನಾನು ನಿಮಗೆ ಯಾವಾಗಲೂ ಆಭಾರಿಯಾಗಿರುತ್ತೇನೆ. ಇಂದು ನನ್ನದೊಂದು ಸಣ್ಣ ವಿನಂತಿ ಇದೆ. ದಯವಿಟ್ಟು ನನಗೆ, ಸುಮಂತ್‌ಗೆ ಹಾಗೂ ನಮ್ಮ ಕುಟುಂಬದವರಿಗೆ ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಕೊಂಚ ಪ್ರೈವೆಸಿ ನೀಡಿ ಎಂದು ನಾನು ನಿಮ್ಮಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಈ ಕಠಿಣ ಸಮಯದಲ್ಲಿ ನಿಮ್ಮ ತಿಳುವಳಿಕೆ ಮತ್ತು ಗೌರವ ನಮಗೆ ಅತ್ಯಂತ ಮುಖ್ಯವಾಗಿದೆ’ ಎಂದು ಹೇಳಿದ್ದಾರೆ.

‘ಸರಿಯಾದ ಸಮಯ ಬಂದಾಗ, ನಾನೇ ವೈಯಕ್ತಿಕವಾಗಿ ನಿಮ್ಮೆಲ್ಲರೊಂದಿಗೆ ಯಾವುದೇ ಅಪ್‌ಡೇಟ್ ಇದ್ದರೂ ಹಂಚಿಕೊಳ್ಳುತ್ತೇನೆ. ನಿಮ್ಮ ನಿರಂತರ ಪ್ರೀತಿ, ಬೆಂಬಲ ಮತ್ತು ದಯೆಗೆ ಮತ್ತೊಮ್ಮೆ ಧನ್ಯವಾದಗಳು’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಶುಭಾ ಪೂಂಜಾ ಸಂಸಾರದಲ್ಲಿ ಬಿರುಗಾಳಿ; ವಿಚ್ಛೇದನಕ್ಕೆ ಅರ್ಜಿ

ಈಗ ಶುಭಾ ಅವರು ಮಾಡಿರುವ ಈ ಪೋಸ್ಟ್, ಅವರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿರುವುದನ್ನು ಪರೋಕ್ಷವಾಗಿ ಖಚಿತಪಡಿಸಿದಂತಿದೆ. ಆದರೂ, ಸ್ವತಃ ನಟಿಯೇ ಮುಂದಿನ ದಿನಗಳಲ್ಲಿ ಸ್ಪಷ್ಟನೆ ನೀಡುವುದಾಗಿ ಹೇಳಿರುವುದರಿಂದ ಊಹಾಪೋಹಗಳಿಗೆ ಸದ್ಯ ವಿರಾಮ ಬಿದ್ದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:11 pm, Wed, 10 June 26

Source link

ಭಾರತಿರಾಜ ಮೊದಲ ಸಿನಿಮಾ ಕನ್ನಡದ್ದಾಗಬೇಕಿತ್ತು, ತಪ್ಪಿದ್ದು ಹೇಗೆ? – Kannada News

ತಮಿಳು ಚಿತ್ರರಂಗದ (Kollywood) ಲೆಜೆಂಡರಿ ಸಿನಿಮಾ ನಿರ್ದೇಶಕ ಭಾರತಿರಾಜ ಇಂದು (ಜೂನ್ 10) ನಿಧನ ಹೊಂದಿದ್ದಾರೆ. ಹಲವಾರು ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾರತಿರಾಜ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ತಮಿಳು ಚಿತ್ರರಂಗದ ಹಾದಿಯನ್ನು ಬದಲಿಸಿದ ನಿರ್ದೇಶಕ ಎಂದು ಭಾರತಿರಾಜ ಅವರನ್ನು ಕರೆಯಲಾಗುತ್ತದೆ. ಭಾರತಿರಾಜ ಅವರ ಮೊದಲ ಸಿನಿಮಾ ‘16 ವಯದಿನಿಲೆ’ 1977 ರಲ್ಲಿ ಬಿಡುಗಡೆ ಆಗಿತ್ತು. ಆದರೆ ಭಾರತಿರಾಜ ಅವರ ಮೊದಲ ಸಿನಿಮಾ ಕನ್ನಡದ್ದಾಗಬೇಕಿತ್ತು, ಆದರೆ ಅದು ಕೈತಪ್ಪಿದ್ದು ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರಿಂದ!

ಎಸ್​​ಪಿ ಬಾಲಸುಬ್ರಹ್ಮಣ್ಯಂ ಹಾಗೂ ಭಾರತಿರಾಜ ಇಬ್ಬರೂ ಚಿತ್ರರಂಗಕ್ಕೆ ಬರುವ ಮುಂಚಿನಿಂದಲೂ ಆಪ್ತ ಗೆಳೆಯರು. 1970-80ರ ದಶಕದಲ್ಲಿ ಹಲವು ಪರ ಭಾಷೆ ಸಿನಿಮಾ ನಿರ್ದೇಶಕರುಗಳು ಕನ್ನಡದಲ್ಲಿ ಸಿನಿಮಾ ಮಾಡಲು ಗುಂಪು-ಗುಂಪಾಗಿ ಬರುತ್ತಿದ್ದರು. ಅದಕ್ಕೆ ಮುಖ್ಯ ಕಾರಣ, ಕರ್ನಾಟಕ ಸರ್ಕಾರ ನೀಡುತ್ತಿದ್ದ ಸಬ್ಸಿಡಿ. ಮಣಿರತ್ನಂ ಸಹ ತಮ್ಮ ಮೊದಲ ಸಿನಿಮಾ ಕನ್ನಡದಲ್ಲಿ ನಿರ್ದೇಶಿಸಿದ್ದು ಇದೇ ಕಾರಣಕ್ಕೆ. ಈ ಸಬ್ಸಿಡಿಗಾಗಿಯೇ ಭಾರತಿರಾಜ ಅವರು ಕನ್ನಡದಲ್ಲಿ ಸಿನಿಮಾ ಮಾಡಲು ಉದ್ದೇಶಿಸಿದ್ದರು. ಆ ಐಡಿಯಾ ಕೊಟ್ಟಿದ್ದು ಎಸ್​​ಪಿ ಬಾಲಸುಬ್ರಹ್ಮಣ್ಯಂ.

ಇದನ್ನೂ ಓದಿ:ಪೆಟ್ರೋಲ್ ಬಂಕ್ ನೌಕರ ಭಾರತಿರಾಜ್, ತಮಿಳು ಚಿತ್ರರಂಗದಲ್ಲಿ ಕ್ರಾಂತಿ ಮಾಡಿದ್ದು ಹೇಗೆ?

ಬೆಂಗಳೂರಿನಲ್ಲಿ ಎಸ್​​ಪಿಬಿ ಅವರ ಸಂಬಂಧಿಯೊಬ್ಬರ ಮನೆಯನ್ನೇ ಸಿನಿಮಾ ಆಫೀಸ್ ಎಂದು ತೋರಿಸಲಾಗಿತ್ತು. ಅಲ್ಲಿಯೇ ಭಾರತಿರಾಜ ಅವರು ತಮ್ಮ ಹೊಸ ಸಿನಿಮಾದ ಚಿತ್ರಕತೆಯನ್ನು ಬರೆದು ಅಲ್ಲಿಯೇ ಇರಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದಾಗಿ ನಿರ್ಮಾಪಕರು ಸಿಗಲಿಲ್ಲ. ಆದರೆ ಕೆಲ ತಿಂಗಳುಗಾದ ಬಳಿಕ ನಿರ್ಮಾಪಕ ಸಿಕ್ಕು, ಚಿತ್ರಕತೆ ಕೊಡುವಂತೆ ಕೇಳಿದರೆ, ಎಸ್​​ಪಿಬಿ ಅವರ ಸಂಬಂಧಿ ಆ ಚಿತ್ರಕತೆ ಹೊಂದಿದ್ದ ಪುಸ್ತಕವನ್ನು ಕಳೆದುಬಿಟ್ಟಿದ್ದರಂತೆ.

ಎಸ್​​ಪಿಬಿ ಹೇಳಿರುವಂತೆ ಅದಾಗಲೇ ಅವರ ಸಂಬಂಧಿ ಮೂರು ಬಾರಿ ಮನೆ ಚೇಂಜ್ ಮಾಡಿದ್ದನಂತೆ. ಅದರಿಂದಾಗಿ ಚಿತ್ರಕತೆ ಎಲ್ಲೋ ಮಿಸ್ ಆಗಿ ಹೋಗಿತ್ತಂತೆ. ಆ ವಿಷಯ ತಿಳಿದು, ಭಾರತಿರಾಜ, ತೀರ ಕೆಟ್ಟ-ಕೆಟ್ಟದಾಗಿ ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಬೈದಿದ್ದರಂತೆ. ಆದರೆ ಆದದ್ದೆಲ್ಲ ಒಳ್ಳೆಯದಕ್ಕೆ ಎಂದಿರುವ ಎಸ್​​ಪಿಬಿ, ಅದರಿಂದಾಗಿ ‘16 ವಯದಿನಿಲೆ’ ಸಿನಿಮಾ ನಿರ್ಮಾಣ ಆಯ್ತು’ ಎಂದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link