Headlines

nagaraj11081993

ಬ್ಯಾಟ್ ಲಾಕ್ ಮಾಡಿದ ಕೀಪರ್: ಟೀಮ್ ಇಂಡಿಯಾ ಆಟಗಾರ ರನೌಟ್! – Kannada News

ಕ್ರಿಕೆಟ್ ಮೈದಾನದಲ್ಲಿ ರನೌಟ್​ಗಳು ಸಾಮಾನ್ಯ. ಆದರೆ ಶ್ರೀಲಂಕಾ ‘ಎ’ ವಿರುದ್ಧದ ಪಂದ್ಯದಲ್ಲಿ ಭಾರತ ‘ಎ’ ತಂಡದ ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ ಔಟ್ ಆದ ರೀತಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿಕೆಟ್ ಕೀಪರ್ ಕಾಲಿನ ಕೆಳಗೆ ಬ್ಯಾಟ್ ಸಿಲುಕಿಕೊಂಡ ಕಾರಣ, ಕ್ರೀಸ್ ತಲುಪಲು ಸಾಧ್ಯವಾಗದೆ ಅವರು ವಿಚಿತ್ರವಾಗಿ ವಿಕೆಟ್ ಕೈಚೆಲ್ಲಿದ್ದಾರೆ. ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಈ ಅನಿರೀಕ್ಷಿತ ಹಾಗೂ ವಿವಾದಾತ್ಮಕ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ…

Read More

Kottiyoor Temple Incident: ಕನ್ನಡಿಗರಿಗಾಗಿ ಕನ್ನಡದಲ್ಲೇ ಮಾತನಾಡಿದ ಕೇರಳಂ ಡಿಐಜಿ ಯತೀಶ್ ಚಂದ್ರ! – Kannada News

ಕಣ್ಣೂರು ರೇಂಜ್ ಡಿಐಜಿ ಯತೀಶ್ ಚಂದ್ರImage Credit source: Yathish Chandra instagram account ಬೆಂಗಳೂರು, ಜೂನ್ 10: ಕೇರಳಂನ ಕೊಟ್ಟಿಯೂರು ದೇವಾಲಯಕ್ಕೆ (Kottiyoor Temple) ಹೋಗಿದ್ದ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯವಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಯಾರೂ ಈ ದೇವಾಲಯಕ್ಕೆ ಭೇಟಿ ನೀಡಬೇಡಿ ಎಂದು ನೊಂದ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲಿನ ವ್ಯವಸ್ಥೆ, ನಿರ್ವಹಣೆಯ ಕುರಿತು ಆಕ್ಷೇಪಿಸಿದ್ದರು. ಇದರ ಬೆನ್ನಲ್ಲೇ ದೇವಾಲಯದ ಸೆಕ್ಯೂರಿಟಿಯ ಕುರಿತಾದಂತೆ ಮಾಹಿತಿ ನೀಡಿರುವ ಕಣ್ಣೂರು ವಲಯದ ಡಿಐಜಿ ಯತೀಶ್ ಚಂದ್ರ,…

Read More

Rudraksha: ಮಹಿಳೆಯರು ರುದ್ರಾಕ್ಷಿ ಧರಿಸಬಾರದೇ? ಶಾಸ್ತ್ರಗಳು ಹೇಳುವುದೇನು ಗೊತ್ತಾ? – Kannada News

ಮಹಿಳೆಯರು ರುದ್ರಾಕ್ಷಿ ಧರಿಸಬಹುದೇ? Image Credit source: Pinterest ರುದ್ರಾಕ್ಷಿಯನ್ನು ಸಾಕ್ಷಾತ್ ಶಿವನ ಆಶೀರ್ವಾದ ಎಂದು ಪರಿಗಣಿಸಲಾಗುತ್ತದೆ. ಶತಮಾನಗಳಿಂದಲೂ ಸಾಧು-ಸಂತರು, ಯೋಗಿಗಳು ಮತ್ತು ಸಾಮಾನ್ಯ ಜನರು ಧ್ಯಾನ, ಮಾನಸಿಕ ಶಾಂತಿ ಹಾಗೂ ಆಧ್ಯಾತ್ಮಿಕ ಉನ್ನತಿಗಾಗಿ ಇದನ್ನು ಬಳಸುತ್ತಾ ಬಂದಿದ್ದಾರೆ. ಆದರೆ ಇಂದಿಗೂ ಸಮಾಜದಲ್ಲಿ ಒಂದು ದೊಡ್ಡ ಪ್ರಶ್ನೆ ಉಳಿದುಕೊಂಡಿದೆ, ಅದೇನೆಂದರೆ, ಮಹಿಳೆಯರು ರುದ್ರಾಕ್ಷಿಯನ್ನು ಧರಿಸಬಹುದೇ ಅಥವಾ ಇಲ್ಲವೇ? ಧರಿಸಬಾರದು ಎಂಬ ಕಟ್ಟುಕತೆಗಳನ್ನು ಕೇಳಿ ಬೆಳೆದಿರುವ ಅನೇಕ ಮಹಿಳೆಯರು ಇದನ್ನು ಧರಿಸಲು ಇಂದಿಗೂ ಹಿಂಜರಿಯುತ್ತಾರೆ. ರುದ್ರಾಕ್ಷಿಯ ರಹಸ್ಯ ಮತ್ತು…

Read More

ಪ್ರಧಾನಿ ಮೋದಿ ಒಳಿತಿಗಾಗಿ ಅರಳಿಕಟ್ಟೆ ಮುನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ವಿಪಕ್ಷ ನಾಯಕ ಅಶೋಕ್​ – Kannada News

ಬೆಂಗಳೂರು, ಜೂನ್​​ 10: ವಿಧಾನಸೌಧದ ಅರಳಿಕಟ್ಟೆ ಮುನೇಶ್ವರ ದೇವಾಲಯದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಚನ್ನಬಸಪ್ಪ ಸೇರಿದಂತೆ ಹಲವು ನಾಯಕರು ಮತ್ತು ಬೆಂಬಲಿಗರು ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ನೆಹರು ಅವರ ದಾಖಲೆ ಮುರಿದ ಹಿನ್ನೆಲೆಯಲ್ಲಿ ಈ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ದೇವರ ಮುಂದೆ ಇಟ್ಟು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮೋದಿ…

Read More

ಅಧ್ಯಕ್ಷರಾಗಿ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಬಿಕೆ ಹರಿಪ್ರಸಾದ್ ಆಗಮನ: ಅದ್ದೂರಿ ಸ್ವಾಗತ, ಜಿಬಿಎ ಚುನಾವಣೆ ಕುರಿತು ಮಹತ್ವದ ಸಭೆ – Kannada News

ಬೆಂಗಳೂರು, ಜೂನ್ 10: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿಕೆ ಹರಿಪ್ರಸಾದ್ ಬುಧವಾರ ಮೊದಲ ಬಾರಿಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ. ಪಕ್ಷದ ಸಾರಥ್ಯ ವಹಿಸಿಕೊಂಡ ಬಳಿಕ ಮೊದಲ ಬಾರಿ ಕಚೇರಿಗೆ ಆಗಮಿಸಿದ ನೂತನ ಸಾರಥಿಗೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಅತ್ಯಂತ ಅದ್ದೂರಿ ಮತ್ತು ಸಡಗರದ ಸ್ವಾಗತ ಕೋರಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು ಹಾಗೂ ಹಿರಿಯ ಎಂಎಲ್‌ಸಿಗಳು ಹೂಗುಚ್ಛ ನೀಡಿ ಹರಿಪ್ರಸಾದ್ ಅವರನ್ನು…

Read More

ವಿವಾಹದ ಬಳಿಕ ಬ್ರೇಕ್​​ಲೆಸ್ ಆಗಿ ಶೂಟ್ ಮಾಡಿದ ರಶ್ಮಿಕಾ; ಬಿಗ್ ಅಪ್​​ಡೇಟ್ – Kannada News

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿ ಸಿಗುತ್ತಿದೆ. ಇತ್ತೀಚೆಗಷ್ಟೇ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದ ಕೊಡಗಿನ ಬೆಡಗಿ, ಮದುವೆಯ ನಂತರವೂ ಯಾವುದೇ ಬ್ರೇಕ್ ತೆಗೆದುಕೊಳ್ಳದೆ ಸಖತ್ ಸ್ಪೀಡ್ ಆಗಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯ ಸಂಭ್ರಮ ಮುಗಿಯುತ್ತಿದ್ದಂತೆ ಮಗದೊಮ್ಮೆ ಕ್ಯಾಮೆರಾ ಮುಂದೆ ನಿಂತಿರುವ ರಶ್ಮಿಕಾ, ತಮ್ಮ ಬಹುನಿರೀಕ್ಷಿತ ಸಿನಿಮಾದ ಶೂಟಿಂಗ್ ಅನ್ನು ವೇಗವಾಗಿ ಮುಗಿಸುತ್ತಿದ್ದಾರೆ. ಖ್ಯಾತ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ನಲ್ಲಿ ರಶ್ಮಿಕಾ ನಟಿಸಲಿದ್ದಾರೆ ಎಂಬ…

Read More

Ganesha Shlokas for Kids: ಮಕ್ಕಳ ಏಕಾಗ್ರತೆ ಮತ್ತು ಜ್ಞಾಪಕಶಕ್ತಿ ಹೆಚ್ಚಿಸುವ 4 ಸರಳ ಗಣೇಶ ಶ್ಲೋಕಗಳು! – Kannada News

ಸನಾತನ ಸಂಸ್ಕೃತಿಯಲ್ಲಿ ಯಾವುದೇ ಶುಭ ಕಾರ್ಯ, ಪೂಜೆ ಅಥವಾ ಹೊಸ ಕೆಲಸವನ್ನು ಆರಂಭಿಸುವ ಮುನ್ನ ವಿಘ್ನನಿವಾರಕನಾದ ಗಣೇಶನನ್ನು ಆರಾಧಿಸುವುದು ಅನಾದಿ ಕಾಲದಿಂದಲೂ ನಡೆದುಬಂದಿರುವ ಸಂಪ್ರದಾಯವಾಗಿದೆ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿಗೆ ಮುಂಜಾನೆ ಹಾಗೂ ಓದಲು ಕುಳಿತುಕೊಳ್ಳುವ ಮುನ್ನ ಗಣೇಶನ ಶ್ಲೋಕಗಳನ್ನು ಹೇಳಿಕೊಡುವುದು ಅವರ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂಜಾನೆಯ ಸಮಯದಲ್ಲಿ ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಈ ಪವಿತ್ರ ಮುಹೂರ್ತದಲ್ಲಿ ದೈವಿಕ ಶ್ಲೋಕಗಳನ್ನು…

Read More

ಮಧ್ಯರಾತ್ರಿ ಹುಡುಗಿಯರ ಹಾಸ್ಟೆಲ್​​ಗೆ ನುಗ್ಗಿದ ಯುವಕ: ಕಳ್ಳತನಕ್ಕೆಂದು ಹೋದವನೀಗ ಖಾಕಿ ಅತಿಥಿ! – Kannada News

ಮಧ್ಯರಾತ್ರಿ ಹುಡುಗಿಯರ ಹಾಸ್ಟೆಲ್​​ಗೆ ನುಗ್ಗಿದ ಯುವಕ ಅರೆಸ್ಟ್​​Image Credit source: Tv9 Kannada ಚಿಕ್ಕಮಗಳೂರು, ಜೂನ್​​ 10: ಸರ್ಕಾರಿ ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್​​ಗೆ ಮಧ್ಯರಾತ್ರಿ ನುಗ್ಗಿ ಯುವಕಮೋರ್ವ ಓಡಾಟ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ನಡೆದಿದೆ. ಹುಡುಗಿಯ ಹಾಸ್ಟೆಲ್​​ನಲ್ಲಿ ಮಧ್ಯರಾತ್ರಿ ಯುವಕನ ಕಂಡು ವಿದ್ಯಾರ್ಥಿನಿಯರು ಗಾಬರಿಗೊಂಡಿದ್ದು, ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪ್ರಕರಣ ಸಂಬಂಧ ಆರೋಪಿ ಉತ್ತರ ಪ್ರದೇಶ ಮೂಲದ ರಾಕೇಶ್ (30) ಎಂಬಾತನನ್ನು ಬಂಧಿಸಲಾಗಿದೆ. ಕಾಲೇಜು ಆಡಳಿತ…

Read More

ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆ: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದಾಗಿದ್ದೇಕೆ? ಇಲ್ಲಿದೆ ಮಾಹಿತಿ – Kannada News

ಭೋಪಾಲ್, ಜೂನ್ 10: ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆ(Rajya Sabha Election)ಯಲ್ಲಿ ಭಾರಿ ರಾಜಕೀಯ ಹೈಡ್ರಾಮಾ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ಕೊನೆಯ ಕ್ಷಣದಲ್ಲಿ ತಿರಸ್ಕರಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಭಾರಿ ಆಘಾತ ನೀಡಿದ್ದು, ಬಿಜೆಪಿ ಅಭ್ಯರ್ಥಿ ಮಹೇಶ್ ಅವರ ಅವಿರೋಧ ಆಯ್ಕೆಗೆ ಹಾದಿ ಸುಗಮಗೊಳಿಸಿದೆ. ನಾಮಪತ್ರ ರದ್ದಾಗಲು ಕಾರಣವೇನು? ಬಿಜೆಪಿ ಅಭ್ಯರ್ಥಿ ಮಹೇಶ್ ಕೇವತ್ ಅವರು ಚುನಾವಣಾಧಿಕಾರಿಗಳಿಗೆ ಅಧಿಕೃತ ದೂರು ನೀಡಿದ್ದರು. ಅದರ ಪ್ರಕಾರ: ಮೀನಾಕ್ಷಿ ನಟರಾಜನ್ ಅವರು…

Read More

ಫಿಫಾ ವಿಶ್ವಕಪ್ ಅಂಗಳದಲ್ಲಿ ನಾಲ್ವರು ಭಾರತೀಯ ಮೂಲದವರು! – Kannada News

ಫುಟ್‌ಬಾಲ್ ಜಗತ್ತಿನ ಮಹಾಸಮರ ‘ಫಿಫಾ ವಿಶ್ವಕಪ್ 2026‘ ಕ್ಷಣಗಣನೆ ಶುರುವಾಗಿದೆ.  ಭಾರತ ಫುಟ್‌ಬಾಲ್ ತಂಡವು 2026ರ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯದಿದ್ದರೂ, ಜಾಗತಿಕ ಫುಟ್‌ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ನಾಲ್ವರು ಆಟಗಾರರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅದು ಸಹ ಮೂರು ವಿಭಿನ್ನ ಖಂಡಗಳ ನಾಲ್ಕು ಪ್ರಮುಖ ರಾಷ್ಟ್ರಗಳ ಪರವಾಗಿ ಎಂಬುದು ವಿಶೇಷ. ಆ ಆಟಗಾರರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ… ಸರ್​ಪ್ರೀತ್ ಸಿಂಗ್ (ನ್ಯೂಝಿಲೆಂಡ್): ಆಕ್ಲೆಂಡ್‌ನಲ್ಲಿ ಜನಿಸಿದ 27 ವರ್ಷದ ಸರ್​ಪ್ರೀತ್ ಸಿಂಗ್ ಅವರ ಪೋಷಕರು…

Read More