ಜೀ ಕನ್ನಡದಲ್ಲಿ ಏಪ್ರಿಲ್ 4ರಂದು ಜೋಡಿ ನಂಬರ್ 1 ಶೋ ಆರಂಭ ಆಗಲಿದೆ. ಈ ಶೋ ನೋಡಲು ಫ್ಯಾನ್ಸ್ ಕಾದಿದ್ದಾರೆ. 10 ಸೆಲೆಬ್ರಿಟಿ ಜೋಡಿಗಳು ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಧನರಾಜ್, ಬಾಳು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಶೋಗೆ ನೆನಪಿರಲಿ ಪ್ರೇಮ್, ಮಾಳವಿಕಾ, ರಾಜೇಶ್ ನಟರಂಗ, ಛಾಯಾ ಸಿಂಗ್ ಜಡ್ಜ್ ಸ್ಥಾನದಲ್ಲಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಇಲ್ಲಿದೆ.
ನವದೆಹಲಿ, ಏಪ್ರಿಲ್ 2: ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ ಎಂದು ಹೇಳುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಅಮರ್ಉಜಾಲಾ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಅದು ಸುಳ್ಳು ಎಂಬುದು ತಿಳಿದುಬಂದಿದೆ. ಸೋನಿಯಾ ಗಾಂಧಿ ಅವರನ್ನು ಮಂಗಳವಾರ ಬೆಳಗ್ಗೆ ರಾಜಧಾನಿ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಜ್ವರ ಕಾಣಿಸಿಕೊಂಡ ನಂತರ ಮಾರ್ಚ್ 24 ರಂದು ಅವರನ್ನು ಅಲ್ಲಿಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ಭೇಟಿ ನೀಡಿರುವಂತೆ ಕಾಣುವ ಫೋಟೊಗಳು ಕೂಡ ಕಾಣಿಸಿಕೊಂಡಿತ್ತು. ಈ ಫೊಟೊವನ್ನು ಎಐ ಮೂಲಕ ಚಿತ್ರಿಸಲಾಗಿದೆ. ತೇಜಸ್ವಿ ಯಾದವ್ ಆರ್‌ಜೆಡಿ ಎಂಬ ಫೇಸ್‌ಬುಕ್ ಬಳಕೆದಾರರು ದೀರ್ಘಕಾಲದಿಂದ ದಾಖಲಾಗಿರುವ ಸೋನಿಯಾ ಗಾಂಧಿ ಅವರನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದರು ಎಂದು ಬರೆದಿದ್ದರು.
ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಎಲ್ಲಾ ಪ್ರಮುಖ ಪಕ್ಷಗಳು ತಮ್ಮ ಕಾರ್ಯತಂತ್ರಗಳನ್ನು ಅಂತಿಮಗೊಳಿಸುವಲ್ಲಿ ನಿರತವಾಗಿವೆ ಮತ್ತು ಚುನಾವಣಾ ಪ್ರಚಾರಗಳು ತಳಮಟ್ಟದಲ್ಲಿ ವೇಗವನ್ನು ಪಡೆದಿವೆ.
ಈ ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ವೇಗವಾಗಿ ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಅದು ಹೇಳುತ್ತದೆ.
ಈ ಫೋಟೋದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದ್ದಾರೆ.
ಇಂದು ನರೇಂದ್ರ ಮೋದಿ ತಮ್ಮ ವಿರೋಧ ಪಕ್ಷದ ನಾಯಕರನ್ನು ಭೇಟಿಯಾದರು ಎನ್ನುವ ಶೀರ್ಷಿಕೆಯಲ್ಲಿ ಫೋಟೊ ವೈರಲ್ ಮಾಡಲಾಗಿತ್ತು. ವೈರಲ್ ಫೋಟೋದಲ್ಲಿ ಸಿಂಥ್‌ಐಡಿ ವಾಟರ್‌ಮಾರ್ಕ್ (AI ವಿಷಯ ಗುರುತಿನ ಸಾಧನ) ಕಂಡುಬಂದಿದೆ. ನೀಲಿ ಬಣ್ಣವು ಎಐ-ರಚಿತ ಭಾಗವನ್ನು ಎತ್ತಿ ತೋರಿಸುತ್ತದೆ.
ಬಾಲಿವುಡ್ನಲ್ಲಿ ಹಲವು ವರ್ಷಗಳ ಕಾಲ ಮಿಂಚಿದವರು ರಾಜೇಶ್ ಖನ್ನಾ. ಅವರು ಮೃತಪಟ್ಟು ಹಲವು ವರ್ಷಗಳೇ ಕಳೆದಿವೆ. ಆದರೆ, ಅವರ ಮೇಲೆ ಇರುವ ಒಂದು ವಿವಾದ ಮಾತ್ರ ಈಗಲೂ ಸುದ್ದಿ ಆಗುತ್ತಿದೆ. ‘ರಾಜೇಶ್ ಖನ್ನಾ ನನ್ನ ಪತಿ’ ಎಂದು ನಟಿ ಅನಿತಾ ಅಡ್ವಾಣಿ ಅವರು ಹೇಳಿಕೊಂಡಿದ್ದರು. ಅದರೆ, ಕೋರ್ಟ್ಅಲ್ಲಿ ಅವರಿಗೆ ಹಿನ್ನಡೆ ಆಗಿದೆ. ಅವರಿಗೆ ಪತ್ನಿಯ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
‘ಕಾನೂನಾತ್ಮಕವಾಗಿ ರಾಜೇಶ್ ಖನ್ನಾ ನಿಮ್ಮ ಪತಿ ಆಗಲು ಸಾಧ್ಯವಿಲ್ಲ’ ಎಂದು ದಿಂಡೋಶಿ ಸೆಷನ್ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಅನಿತಾ ಅಡ್ವಾಣಿ ಬಾಂಬೇ ಹೈಕೋರ್ಟ್ ಅಲ್ಲಿ ಪ್ರಶ್ನೆ ಮಾಡಿದ್ದರು. ಅಲ್ಲಿಯೂ ಅನಿತಾಗೆ ಹಿನ್ನಡೆ ಆಗಿದೆ.
ಅನಿತಾ ಅವರು ಬಾಂಬೇ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ರಾಜೇಶ್ ಪರವಾಗಿ ಅವರ ಮಗಳು ಟ್ವಿಂಕಲ್ ಖನ್ನಾ, ಅಳಿತ ಅಕ್ಷಯ್ ಕುಮಾರ್ ಹಾಗೂ ಪತ್ನಿ ಡಿಂಪಲ್ ಕಪಾಡಿಯಾ ವಕಲೀರೊಬ್ಬರನ್ನು ನೇಮಿಸಿದ್ದರು. ಅನಿತಾ ಅಡ್ವಾಣಿ ಅವರನ್ನು ರಾಜೇಶ್ ಪತ್ನಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ವಾದಿಸಲಾಯಿತು. ಇದನ್ನು ಕೋರ್ಟ್ ಪುರಸ್ಕರಿಸಿದೆ.
‘ನನ್ನ ಹಾಗೂ ರಾಜೇಶ್ ಮಧ್ಯೆ ಪತ್ನಿ ರೀತಿಯ ಸಂಬಂಧ ಇತ್ತು. ಅದು ಮದುವೆ ರೀತಿಯೇ ಆಗಿತ್ತು. ರಾಜೇಶ್ ನಿಧನದ ನಂತರ ನನ್ನನ್ನು ಮನೆಯಿಂದ ಹೊರಕ್ಕೆ ಹಾಕಲಾಯಿತು’ ಎಂದು ಅನಿತಾ ಆರೋಪಿಸಿದ್ದಾರೆ. ಲಿವಿನ್ ರಿಲೇಶನ್ಶಿಪ್ಗೆ ಮದುವೆಯ ಸ್ಥಾನ ಕೊಡಲು ಸಾಧ್ಯವಿಲ್ಲ ಎಂಬುದು ಕೋರ್ಟ್ ಅಭಿಪ್ರಾಯ.
ರಾಜೇಶ್ ಖನ್ನಾ ಭಾರತ ಚಿತ್ರರಂಗದ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಅವರು 1965ರಲ್ಲಿ 1969 ಮತ್ತು 1971 ರ ನಡುವೆ, ಅವರು ಸತತ 15 ಹಿಟ್ ಚಿತ್ರಗಳನ್ನು ನೀಡಿದರು. ಇದು ಹಿಂದಿ ಚಿತ್ರರಂಗದಲ್ಲಿ ದಾಖಲೆಯಾಗಿದೆ. ಅವರು ಮೂರು ಫಿಲ್ಮ್‌ಫೇರ್ (ಅತ್ಯುತ್ತಮ ನಟ) ಪ್ರಶಸ್ತಿಗಳನ್ನು ಗೆದ್ದರು. ಅವರು ಕೆಲ ವರ್ಷ ರಾಜಕೀಯದಲ್ಲೂ ಇದ್ದರು. 1973ರಲ್ಲಿ ಡಿಂಪಲ್ ಕಪಾಡಿಯಾ ಅವರನ್ನು ರಾಜೇಶ್ ವಿವಾಹ ಆದರು.
ಚಿತ್ರದುರ್ಗ, ಏ.2: “ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್” ಎಂಬ ಮಾತಿದೆ. ಕಾಲೇಜು ಜೀವನದಲ್ಲಿ ಎಲ್ಲವೂ ಚಂದ, ಆದರೆ ಅಲ್ಲಿ ಕೆಲವೊಂದು ಅತಿರೇಖದ ವಿಚಾರಗಳು ನಡೆಯುತ್ತದೆ, ವಿದ್ಯಾರ್ಥಿಗಳ ನಡುವೆ ಲವ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಮಿತಿಮೀರಿದ ಸಂಬಂಧಗಳು, ಹೀಗೆ ಹಲವೂ ಘಟನೆಗಳು ನಡೆದಿರುತ್ತದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಇರಬೇಕಾದ ಗುರು ಹಾಗೂ ಶಿಷ್ಯರ ಸಂಬಂಧಕ್ಕೆ ಬೇರೆ ಅರ್ಥವನ್ನು ಕಲ್ಪಿಸುವ ಚಟ ಈಗ ಕಾಲೇಜಿಗಳಲ್ಲಿ ಶುರುವಾಗಿದೆ. ಇದೀಗ ಇಂತಹದೇ ಒಂದು ವಿಚಾರಕ್ಕೆ ವಿದ್ಯಾರ್ಥಿಯೊಬ್ಬಳ ಜೀವ ಕಳೆದುಕೊಂಡಿದ್ದಾಳೆ. ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮಲ್ಲಾಡಿಹಳ್ಳಿಯ ಆಯುರ್ವೇದ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿನಿ ಲಿಖಿತಾ (23), ತನ್ನ ಅಧ್ಯಾಪಕರ ಜೊತೆ ಸಂಬಂಧ ಕಲ್ಪಿಸಿ ನಡೆಸಲಾದ ಅಪಪ್ರಚಾರಕ್ಕೆ ಮನನೊಂದು ನೇಣಿಗೆ ಶರಣಾಗಿದ್ದಾರೆ.
ಹೊಳಲ್ಕೆರೆ ಪಟ್ಟಣದ ಬಸವ ಲೇಔಟ್‌ನ ಮನೆಯಲ್ಲಿ ಲಿಖಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಧ್ಯಾಪಕ ಡಾ. ರಾಜು ಅವರೊಂದಿಗೆ ಸಂಬಂಧವಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ, ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದರಿಂದ ನೊಂದಿದ್ದ ವಿದ್ಯಾರ್ಥಿನಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ಲಿಖಿತಾ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಪ್ರಾಧ್ಯಾಪಕ ಡಾ. ರಾಜು, ಅವರ ಪತ್ನಿ ನಿಶಾ ಹಾಗೂ ಕೆಲವು ವಿದ್ಯಾರ್ಥಿನಿಯರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇವರ ಕಿರುಕುಳ ಮತ್ತು ಅಪಪ್ರಚಾರವೇ ನನ್ನ ಸಾವಿಗೆ ಕಾರಣ ಎಂದು ಅವರು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಧ್ಯಾಪಕ ರಾಜು, ಪತ್ನಿ ನಿಶಾ ಮತ್ತು ಡೆತ್ ನೋಟ್‌ನಲ್ಲಿ ಹೆಸರಿಸಲಾದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
IPL 2026: ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 18.4 ಓವರ್ಗಳಲ್ಲಿ 141 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17.1 ಓವರ್ಗಳಲ್ಲಿ 145 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಸೋಲಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಪಂದ್ಯದ ಏರಿಳಿತಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲದೆ ತಂಡದ ತಂತ್ರಗಳು ಮತ್ತು ಮುಂದಿನ ಹಾದಿಯ ಬಗ್ಗೆ ಅವರು ಹೇಳಿದ ಪ್ರಮುಖ ಅಂಶಗಳು ಇಲ್ಲಿವೆ:
ರನ್ ಔಟ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ:
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ತಮ್ಮ ದುರದೃಷ್ಟಕರ ರನ್ ಔಟ್ ಬಗ್ಗೆ ಮಾತನಾಡಿದ ರಿಷಭ್ ಪಂತ್, “ಅದೃಷ್ಟ ಕೈಕೊಟ್ಟಾಗ ಅದನ್ನು ಮರೆತು ಮುಂದೆ ಸಾಗುವುದು ಉತ್ತಮ. ನಿಯಂತ್ರಣವಿಲ್ಲದ ವಿಷಯಗಳ ಬಗ್ಗೆ ಯೋಚಿಸುತ್ತಾ ಕುಳಿತರೆ ಅದು ನಮ್ಮ ಆತ್ಮವಿಶ್ವಾಸವನ್ನು ಕುಂದಿಸುತ್ತದೆ,” ಎಂದಿದ್ದಾರೆ.
ಬದೋನಿಯನ್ನು ಬೇಗ ಕಳುಹಿಸಿದ್ದೇಕೆ?
ನಿಕೋಲಸ್ ಪೂರನ್ ಅವರಿಗಿಂತ ಮುಂಚಿತವಾಗಿ ಆಯುಷ್ ಬದೋನಿಯನ್ನು ಕಳುಹಿಸುವ ನಿರ್ಧಾರದ ಹಿಂದೆ ಒಂದು ಸ್ಪಷ್ಟ ಉದ್ದೇಶವಿತ್ತು. ಅಕ್ಷರ್ ಪಟೇಲ್ ಅವರ ಎಡಗೈ ಸ್ಪಿನ್ ಎದುರಿಸಲು ‘ಲೆಫ್ಟ್-ರೈಟ್’ ಬ್ಯಾಟಿಂಗ್ ಜೋಡಿಯನ್ನು ಕಾಪಾಡಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಸಂಕಷ್ಟದ ಸಮಯದಲ್ಲಿ ಬದೋನಿ ಅಂತಹ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲಿ ಎಂಬುದು ತಂಡದ ಆಶಯವಾಗಿತ್ತು ಎಂದಿದ್ದಾರೆ.
140 ರನ್ ಕಡಿಮೆಯಾಯಿತು:
ಬ್ಯಾಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಿಷಭ್ ಪಂತ್, “ಒಳ್ಳೆಯ ಪಿಚ್‌ನಲ್ಲಿ ಕೇವಲ 140 ರನ್ ಗಳಿಸಿದರೆ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ನಾವು ಬ್ಯಾಟಿಂಗ್‌ನಲ್ಲಿ ದೊಡ್ಡ ಜೊತೆಯಾಟಗಳನ್ನು ಆಡುವಲ್ಲಿ ವಿಫಲವಾದೆವು,” ಎಂದು ಒಪ್ಪಿಕೊಂಡಿದ್ದಾರೆ.
ಎಕ್ಸ್ಟ್ರಾ ರನ್:
ಕಡಿಮೆ ಮೊತ್ತವನ್ನು ರಕ್ಷಿಸುವ ಭರದಲ್ಲಿ ಬೌಲರ್‌ಗಳು ಅತಿಯಾದ ಪ್ರಯತ್ನ ಮಾಡಿ 20 ಎಕ್ಸ್ಟ್ರಾ ರನ್ ನೀಡಿದ್ದು ತಂಡಕ್ಕೆ ಹೊಡೆತ ನೀಡಿತು. ಆದರೂ, ಆರಂಭದಲ್ಲಿ ವಿಕೆಟ್ ಪಡೆಯುವ ಮೂಲಕ ಬೌಲರ್‌ಗಳು ತೋರಿದ ಹೋರಾಟದ ಗುಣದ ಬಗ್ಗೆ ನಾಯಕ ರಿಷಭ್ ಪಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫಿಫ್ಟಿ-ಫಿಫ್ಟಿ ಕಾದು ನೋಡಿ:
ನಿಕೋಲಸ್ ಪೂರನ್ ಅವರನ್ನು ಮಿಡ್ಲ್ ಓವರ್‌ಗಳ ಅಬ್ಬರದ ಆಟಕ್ಕಾಗಿ ಕಾಯ್ದಿರಿಸಿ, ತಾವು ಅಗ್ರ ಕ್ರಮಾಂಕದಲ್ಲೇ ಮುಂದುವರಿಯುವುದಾಗಿ ನಾಯಕ ಸ್ಪಷ್ಟಪಡಿಸಿದ್ದಾರೆ. ಸೀಸನ್‌ನ ಉಳಿದ ಪಂದ್ಯಗಳಲ್ಲಿ ಟಾಪ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಲಿದ್ದೇನೆ. ಆದರೆ ಆರಂಭಿಕನಾಗಿ ಮತ್ತೆ ಕಣಕ್ಕಿಳಿಯುವುದು ಫಿಫ್ಟಿ-ಫಿಫ್ಟಿ ಸಾಧ್ಯತೆ, ಕಾದು ನೋಡಿ ಎಂದಿದ್ದಾರೆ.
ಅಂದರೆ ಮುಂದಿನ ಪಂದ್ಯಗಳಲ್ಲೂ ರಿಷಭ್ ಪಂತ್ ಆರಂಭಿಕರಾಗಿಯೇ ಕಣಕ್ಕಿಳಿಯಲಿದ್ದಾರೆ ಎಂಬುದಕ್ಕೆ ಯಾವುದೇ ಖಚಿತತೆ ಇಲ್ಲ. ಇದಾಗ್ಯೂ ಟಾಪ್ ಆರ್ಡರ್ನಲ್ಲೇ ಬ್ಯಾಟಿಂಗ್ ಮಾಡಲಿದ್ದೇನೆ ಎಂದು ಅವರು ಸ್ಫಷ್ಟಪಡಿಸಿದ್ದಾರೆ. ಒಂದು ವೇಳೆ ರಿಷಭ್ ಪಂತ್ ಮೂರನೇ ಕ್ರಮಾಂಕದಲ್ಲಿ ಆಡಿದರೆ, ಐಡೆನ್ ಮಾರ್ಕ್ರಾಮ್ ಹಾಗೂ ಮಿಚೆಲ್ ಮಾರ್ಷ್ ಲಕ್ನೋ ಸೂಪರ್ ಜೈಂಟ್ಸ್ ಪರ ಇನಿಂಗ್ಸ್ ಆರಂಭಿಸಲಿದ್ದಾರೆ.
ಬಾಲಿವುಡ್ ಉದ್ಯಮದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಚ್ಛೇದನವೆಂದರೆ ನಟರಾದ ಹೃತಿಕ್ ರೋಷನ್ ಮತ್ತು ಸುಸ್ಸಾನೆ ಖಾನ್ ಅವರ ವಿಚ್ಛೇದನ. 14 ವರ್ಷಗಳ ದಾಂಪತ್ಯದ ನಂತರ, ಇಬ್ಬರೂ ಬೇರೆಯಾಗಲು ನಿರ್ಧರಿಸಿದರು. ಅವರು ಅತ್ಯಂತ ಜನಪ್ರಿಯ ಸೆಲೆಬ್ರಿಟಿ ದಂಪತಿಗಳಲ್ಲಿ ಒಬ್ಬರಾಗಿದ್ದರು. ಆದ್ದರಿಂದ, ಅವರ ವಿಚ್ಛೇದನದ ಸುದ್ದಿ ಎಲ್ಲರಿಗೂ ದೊಡ್ಡ ಆಶ್ಚರ್ಯವನ್ನುಂಟುಮಾಡಿತು. ಆದರೆ ವಿಚ್ಛೇದನದ ನಂತರವೂ ಅವರ ಸಂಬಂಧದಲ್ಲಿ ಯಾವುದೇ ಕಹಿ ಇರಲಿಲ್ಲ. ವಾಸ್ತವವಾಗಿ, ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ ಮತ್ತು ತಮ್ಮ ಸ್ನೇಹವನ್ನು ಉಳಿಸಿಕೊಂಡಿದ್ದಾರೆ. ಈಗ, ಸುಸ್ಸಾನೆ ಅವರ ಸಹೋದರ ಮತ್ತು ನಟ ಜಾಯೆದ್ ಖಾನ್, ಇತ್ತೀಚಿನ ಸಂದರ್ಶನವೊಂದರಲ್ಲಿ, ಹೃತಿಕ್ ಮತ್ತು ಅವರ ಸಹೋದರಿ ಸುಸ್ಸಾನೆ ಅವರ ವಿಚ್ಛೇದನದ ಬಗ್ಗೆ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.
‘ಇದು ಆಗಬಾರದಿತ್ತು. ಆದರೆ ಒಬ್ಬರಿಗೊಬ್ಬರು ಬೇಡವಾದದ್ದನ್ನು ಹಿಡಿದಿಟ್ಟುಕೊಳ್ಳುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು. ಸಂಬಂಧದಲ್ಲಿ ನಿಮ್ಮಿಬ್ಬರಿಗೂ ನೋವುಂಟಾಗಲು ಪ್ರಾರಂಭಿಸುತ್ತದೆ. ಏಕೆ ತಲೆಕೆಡಿಸಿಕೊಳ್ಳಬೇಕು? ನಿಮಗೆ ಮಕ್ಕಳಿದ್ದಾರೆ, ಅವರ ಭವಿಷ್ಯವನ್ನು ನೀವು ಎದುರು ನೋಡಬಹುದು’ ಜಾಯೆದ್ ಹೇಳಿದರು.
‘ವಿಚ್ಛೇದನ ಮುಗಿದ ವಿಷಯ. ಮುಂದಿನ ಜೀವನದ ಮೇಲೆ ಗಮನಹರಿಸುವುದು ಮತ್ತು ನಿಮ್ಮ ಸ್ವಂತ ಸಂತೋಷವನ್ನು ಕಂಡುಕೊಳ್ಳುವುದು ಮುಖ್ಯ. ನಮ್ಮ ಕುಟುಂಬವು ಸಮಾಜ ಅಥವಾ ಸಮುದಾಯದ ಒತ್ತಡದಲ್ಲಿ ಬದುಕುವ ಕುಟುಂಬವಲ್ಲ. ನಾವು ಅಂತಹ ವಿಷಯಗಳ ಬಗ್ಗೆ ಸ್ವಲ್ಪ ಹೆಚ್ಚು ತಿಳುವಳಿಕೆ ಮತ್ತು ಸ್ವಲ್ಪ ಹೆಚ್ಚು ಶಿಕ್ಷಣ ಪಡೆದಿದ್ದೇವೆ. ಸಾಮಾನ್ಯವಾಗಿ ಜನರು ಇದನ್ನು ತುಂಬಾ ವಿಚಿತ್ರವಾಗಿ ಕಾಣುತ್ತಾರೆ ಎಂದು ನನಗೆ ತಿಳಿದಿದೆ. ಕೆಲವರು ಚಿಕ್ಕವರು, ಕೆಲವರು ಸ್ವತಃ ದುಃಖಿತರು’ ಎಂದಿದ್ದಾರೆ ಅವರು.
ವಿಚ್ಛೇದನದ ನಂತರ, ಹೃತಿಕ್ ಮತ್ತು ಸುಸ್ಸಾನೆ ತಮ್ಮ ವೈಯಕ್ತಿಕ ಜೀವನದಲ್ಲಿ ಮುಂದುವರೆದಿದ್ದಾರೆ. ಒಂದೆಡೆ, ಹೃತಿಕ್ ನಟಿ ಸಬಾ ಆಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ಸುಸ್ಸಾನೆ ಅರ್ಸಲನ್ ಗೋನಿಯನ್ನು ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ಜಾಯೆದ್, ‘ಪ್ರೀತಿ ಎಂಬುದು ಬಹಳ ವಿಶಾಲವಾದ ಪದ ಎಂದು ನಾನು ಭಾವಿಸುತ್ತೇನೆ. ಅವರು ಪರಸ್ಪರ ಹೊಂದಿರುವ ಗೌರವ ಮತ್ತು ಕಾಳಜಿ ಇನ್ನೂ ಹೆಚ್ಚು ಅರ್ಥಪೂರ್ಣವಾಗಿದೆ. ಅವರು ತುಂಬಾ ಒಳ್ಳೆಯ ಸಂಗಾತಿಗಳನ್ನು ಕಂಡುಕೊಂಡಿದ್ದಾರೆ. ನಾನು ಸಬಾ ಅವರನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಅವಳು ನನ್ನ ಚಿಕ್ಕ ತಂಗಿಯಂತೆ’ ಎಂದಿದ್ದಾರೆ ಅವರು.
ಜೈಪುರ, ಏಪ್ರಿಲ್ 02: ವಿದೇಶಿ ಛಾಯಾಗ್ರಾಹಕ ಫೋಟೊಶೂಟ್ಗೆ ಬಳಸಿಕೊಂಡಿದ್ದ ಆನೆ ‘ಚಂಚಲ್’ ಸಾವನ್ನಪ್ಪಿದೆ. ಅಂದು ಆನೆ(Elephant) ಹಾಗೂ ಮಾಡೆಲ್ ಇಬ್ಬರಿಗೂ ಗುಲಾಬಿ ಬಣ್ಣವನ್ನು ಬಳಿಯಲಾಗಿತ್ತು ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾಗಿ ಒಂದು ತಿಂಗಳಿಗೆ ಆನೆ ಸಾವನ್ನಪ್ಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಂಚಲ್ ಎಂಬ ಹೆಸರಿನ ಈ ಆನೆಗೆ 65 ವರ್ಷ ವಯಸ್ಸಾಗಿದ್ದು, ಕಳೆದ ತಿಂಗಳು ಸಾವನ್ನಪ್ಪಿದೆ. ಜೈಪುರ ಆನೆಗಳ ಸಂಘವು ಇದು ಸಹಜ ಸಾವು ಎಂದು ದೃಢಪಡಿಸಿದೆ. ಆನೆ ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಲ್ಲು ಖಾನ್, ಆನೆಗೆ ಗುಲಾಬಿ ಬಣ್ಣ ಬಳಿಯಲಾಗಿತ್ತು, ನಂತರ ಅದನ್ನು ಸ್ವಲ್ಪ ಸಮಯದ ನಂತರ ಅಳಿಸಲಾಗಿತ್ತು.
ಇದು ನೈಸರ್ಗಿಕ ಬಣ್ಣವಾಗಿತ್ತು.ಒಂದು ಫೋಟೋವನ್ನು ಸುಂದರವಾಗಿ ಕಾಣುವಂತೆ ಮಾಡಲು ಆನೆಯನ್ನು ನೋವುಂಟು ಮಾಡುವುದು ತಪ್ಪು, ಇದಕ್ಕಾಗಿ ಎಐ ಬಳಸಬಹುದಿತ್ತು.ಆನೆಗಳ ಚರ್ಮ ಸೂಕ್ಷ್ಮವಾಗಿರುತ್ತದೆ ಎಂದರು.
ನಾವು ಆನೆಯನ್ನು ಚಿತ್ರಿಸಲು ನೈಸರ್ಗಿಕ ಬಣ್ಣವನ್ನು ಬಳಸಿದ್ದೇವೆ, ಹಬ್ಬಗಳ ಸಮಯದಲ್ಲಿ ಬಳಸಲಾಗುವ ಅದೇ ರೀತಿಯ ಬಣ್ಣ. ಆದ್ದರಿಂದ, ಆ ಬಣ್ಣವು ಪ್ರಾಣಿಗಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಛಾಯಾಗ್ರಾಹಕ ಜೂಲಿಯಾ ಹೇಳಿದ್ದಾರೆ. ಸಾವಯವ ಬಣ್ಣವು ಆನೆಗೆ ಹಾನಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗಣೇಶ ದೇವಸ್ಥಾನದಲ್ಲಿ ಫೋಟೋಶೂಟ್ ಮಾಡಲಾಗಿದೆ
ಫೋಟೋಶೂಟ್ ಸ್ಥಳವನ್ನು ಹುಡುಕುವುದು ಒಂದು ಸವಾಲಿಗಿಂತ ಕಡಿಮೆಯಿಲ್ಲ , ಪಾರಂಪರಿಕ ತಾಣಗಳು, ಅನುಮತಿಗಳು, ಸರ್ಕಾರಿ ಕಾರ್ಯವಿಧಾನಗಳು ಸ್ವಲ್ಪ ಕಷ್ಟವಾಗಿಯೇ ಇತ್ತು.ಭಾರತದಂತಹ ಸಂಪ್ರದಾಯವಾದಿ ಸಮಾಜದಲ್ಲಿ, ಅರೆಬರೆ ಬಟ್ಟೆ ಧರಿಸಿ ಗುಲಾಬಿ ಬಣ್ಣ ಬಳಿದು ಚಿತ್ರೀಕರಣಕ್ಕೆ ಪೋಸ್ ನೀಡುವುದು ಕಷ್ಟಕರವಾಗಿತ್ತು. ಡಜನ್‌ಗಟ್ಟಲೆ ಮಾಡೆಲ್‌ಗಳಿಗೆ ಸಂದೇಶ ಕಳುಹಿಸಿದೆ, ಆದರೆ ಬಹುತೇಕ ಎಲ್ಲರೂ ನಿರಾಕರಿಸಿದರು.ನಂತರ ಯಶಸ್ವಿ ಇದಕ್ಕೆ ಸಿದ್ಧರಾದರು ಎಂದು ವಿವರಿಸಿದ್ದಾರೆ.
ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಇದ್ದರು. ಅವರ ಸಿನಿ ಜರ್ನಿಗೆ ಬೆಂಬಲವಾಗಿ ನಿಂತಿದ್ದು ಎಂದರೆ ಅದು ಪಾರ್ವತಮ್ಮ ಅವರು. ಪಾರ್ವತಮ್ಮ ಅವರು ನಿರ್ಮಾಪಕಿ ಆಗಿ ಚಿತ್ರರಂಗದಲ್ಲಿ ಗಮನ ಸೆಳೆದರು. ಈಗ ಪಾರ್ವತಮ್ಮ ಅವರ ಬಗೆಗಿನ ಒಂದು ಅಚ್ಚರಿಯ ವಿಷಯ ಹೇಳಲೇಬೇಕು. ರಾಜ್ಕುಮಾರ್ ಅವರಿಗೆ ಹೆಚ್ಚು ಇಷ್ಟ ಆದ ಸಿನಿಮಾವೇ ಪಾರ್ವತಮ್ಮ ಅವರಿಗೂ ಹೆಚ್ಚು ಇಷ್ಟ ಆಗಿತ್ತು.
ರಾಜ್ಕುಮಾರ್ ಅವರ ಸಿನಿಮಾಗಳ ಪೈಕಿ ಯಾವ ಸಿನಿಮಾ ಹೆಚ್ಚು ಇಷ್ಟ ಎಂದು ಅವರಿಗೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ‘ನನಗೆ ರಾಜ್ಕುಮಾರ್ ಅವರ ಎಲ್ಲ ಸಿನಿಮಾಗಳೂ ಇಷ್ಟ. ಆದರೆ, ಅದರಲ್ಲೂ ರಾಘವೇಂದ್ರ ಮಹಾತ್ಮೆ’ ತುಂಬಾನೇ ಇಷ್ಟ ಎಂದು ಪಾರ್ವತಮ್ಮ ಅವರು ಹೇಳಿಕೊಂಡಿದ್ದರು. ಈ ಚಿತ್ರವು 1966ರಲ್ಲಿ ರಿಲೀಸ್ ಆಯಿತು. ರಾಘವೇಂದ್ರ ಸ್ವಾಮಿ ಬಗ್ಗೆ, ಅವರ ಪವಾಡಗಳ ಬಗ್ಗೆ ಸಿನಿಮಾ ಇತ್ತು.
ಇಲ್ಲೊಂದು ಅಚ್ಚರಿಯ ವಿಷಯ ಇದೆ. ರಾಜ್ಕುಮಾರ್ ಅವರ ಪ್ರೀತಿಯ ಸಿನಿಮಾಗಳ ಪೈಕಿ ಮೊದಲ ಸ್ಥಾನ ಇದ್ದಿದ್ದು ‘ರಾಘವೇಂದ್ರ ಮಹಾತ್ಮೆ’ ಚಿತ್ರಕ್ಕೆ. ಈ ಮೊದಲು ಈ ಬಗ್ಗೆ ಮಾತನಾಡಿದ್ದ ರಾಜ್ಕುಮಾರ್ ಅವರು, ‘ನನಗೆ ನನ್ನ ವೃತ್ತಿ ಜೀವನದಲ್ಲಿ ಅತಿ ಇಷ್ಟವಾದ ಸಿನಿಮಾ ಎಂದರೆ ರಾಘವೇಂದ್ರ ಮಹಾತ್ಮೆ. ಅದನ್ನು ನೋಡುವಂತೆ ನಾನು ಅಭಿಮಾನಿಗಳ ಬಳಿ ಕೋರುತ್ತೇನೆ. ಮತ್ಯಾವ ಸಿನಿಮಾಗಳನ್ನು ನೋಡಿ ಎಂದು ನಾನು ಪ್ರೇಕ್ಷಕರ ಬಳಿ ಹೇಳಲ್ಲ ಎಂದು ರಾಜ್ಕುಮಾರ್ ಈ ಮೊದಲು ಹೇಳಿಕೊಂಡಿದ್ದರು.
ರಾಜ್ಕುಮಾರ್ ಅವರು ಮಂತ್ರಾಲಯಕ್ಕೆ ತೆರಳಿದ್ದರಂತೆ. ಈ ಸಂದರ್ಭದಲ್ಲಿ ಅಲ್ಲಿ ಅವರು ರಾಯರ ಗುಡಿಯಲ್ಲಿ ಮಲಗಿದ್ದರು. ಬೆಳಿಗ್ಗೆ ನೇರವಾಗಿ ಬೆಂಗಳೂರಿಗೆ ಬಂದ ಅವರಿಗೆ ಸಿನಿಮಾ ಮಾಡಬೇಕು ಎಂಬ ಆಲೋಚನೆ ಬಂತು. ಅದನ್ನು ಮಾಡಿಯೇ ಬಿಟ್ಟರು. ಈ ರೀತಿಯಲ್ಲಿ ‘ರಾಘವೇಂದ್ರ ಮಹಾತ್ಮೆ’ ಸಿನಿಮಾ ಮೂಡಿಬಂತು.
ಬೆಂಗಳೂರಿನ ಧಾರ್ಮಿಕ ವೈಭವದ ಪ್ರತೀಕವಾದ 'ಬೆಂಗಳೂರು ಕರಗ' ಉತ್ಸವವು ತಡರಾತ್ರಿ ಅತ್ಯಂತ ಅದ್ಧೂರಿಯಾಗಿ ಮತ್ತು ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿದೆ. ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಈ ಶಕ್ತ್ಯೋತ್ಸವವನ್ನು ಕಣ್ಣುಂಬಿಕೊಳ್ಳಲು ಭಕ್ತಸಾಗರವೇ ಹರಿದುಬಂದಿತ್ತು.
ಅರ್ಚಕ ಎ. ಜ್ಞಾನೇಂದ್ರ ಅವರು ಸತತ 16ನೇ ಬಾರಿಗೆ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡ ದ್ರೌಪದಮ್ಮನ ಕರಗವನ್ನು ಹೊತ್ತು ಸಾಗಿದರು. ಧಾರ್ಮಿಕ ವಿಧಿವಿಧಾನಗಳ ನಂತರ ಹಸಿ ಕರಗ ದೇವಸ್ಥಾನದಿಂದ ಹೊರಬರುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.
ಕೈಯಲ್ಲಿ ಖಡ್ಗ ಹಿಡಿದು 'ಗೋವಿಂದ.. ಗೋವಿಂದ..' ಎಂದು ನಾಮಸ್ಮರಣೆ ಮಾಡುತ್ತಿದ್ದ ವೀರಕುಮಾರರ ಸಾಹಸ ಮೆರವಣಿಗೆಗೆ ವಿಶೇಷ ಕಳೆ ನೀಡಿತ್ತು. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಗರುಡಾಚಾರ್ ಮತ್ತು ಎನ್.ಎ. ಹ್ಯಾರಿಸ್ ಸೇರಿದಂತೆ ಹಲವು ಗಣ್ಯರು ದ್ರೌಪದಮ್ಮನ ದರ್ಶನ ಪಡೆದರು.
ಪ್ರತಿಬಾರಿಯಂತೆ ಈ ಬಾರಿಯೂ ಕರಗವು ಚಿಕ್ಕಪೇಟೆಯ ಹಜ್ರತ್ ತವಕ್ಕಲ್ ಶಾ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿತು. ಮುಸ್ಲಿಂ ಬಾಂಧವರು ಸಾಂಪ್ರದಾಯಿಕವಾಗಿ ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದರು.
ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ಕರಗವು ದೊಡ್ಡಪೇಟೆ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕೆ.ಆರ್. ಮಾರುಕಟ್ಟೆಯ ಉದ್ಭವ ಗಣಪತಿ, ಅರಳೇಪೇಟೆಯ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನ, ಅಣ್ಣಮ್ಮ ದೇವಿ ದೇವಸ್ಥಾನ ಮತ್ತು ಯಲಹಂಕ ಗೇಟ್ ಆಂಜನೇಯಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸ್ವೀಕರಿಸಿತು.
“ಬೆಂಗಳೂರು ಕರಗ ಕೇವಲ ಒಂದು ಉತ್ಸವವಲ್ಲ, ಇದು ನಮ್ಮ ಸಂಸ್ಕೃತಿಯ ಬೇರು. ಭಕ್ತರ ಸಂಭ್ರಮ ಮತ್ತು ವ್ಯವಸ್ಥಿತ ಆಚರಣೆ ನಮಗೆ ಹೆಮ್ಮೆ ತಂದಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಮರಣಿಸಿದವರ ಅಥವಾ ನಾವೇ ಮರಣಿಸಿದ ಹಾಗೆ ಕನಸು ಬಿದ್ದರೆ ಅದು ಶುಭವೇ ಅಥವಾ ಅಶುಭವೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಸ್ವಪ್ನಶಾಸ್ತ್ರವು ಈ ಬಗ್ಗೆ ಬಹಳ ವಿಶೇಷವಾದ ವಿಶ್ಲೇಷಣೆಗಳನ್ನು ನೀಡುತ್ತದೆ. ಕನಸು ಬಿದ್ದ ಸ್ಥಳ (ಮನೆ, ಹೋಟೆಲ್, ದೇವಸ್ಥಾನ, ಕಚೇರಿ) ಕೂಡ ವಿಶ್ಲೇಷಣೆಗೆ ಮುಖ್ಯವಾಗುತ್ತದೆ. ಆದರೆ, ಇಂದಿನ ಮುಖ್ಯ ವಿಚಾರವು ಮರಣದ ಬಗ್ಗೆ. ನಾವು ಸತ್ತ ಹಾಗೆ ಅಥವಾ ನಮ್ಮ ಮನೆಯಲ್ಲಿ ಬಂಧುಗಳೆಲ್ಲಾ ಸೇರಿರುವ ಹಾಗೆ, ನಾವು ದೂರ ಹೋಗಿರುವ ಹಾಗೆ ಕನಸುಗಳು ಗೋಚರಿಸುತ್ತವೆ. ಕೆಲವೊಮ್ಮೆ ಶವಸಂಸ್ಕಾರದಲ್ಲಿ ಭಾಗಿಯಾಗುವಂತೆ ಅಥವಾ ಬೇರೆಯವರು ಮರಣಿಸಿದಂತೆ ಕನಸುಗಳು ಬೀಳುತ್ತವೆ.
ಇಂತಹ ಕನಸುಗಳು ಶುಭವೇ. ಇದು ಶುಭವನ್ನು ತರುತ್ತದೆ ಮತ್ತು ತುಂಬಾ ಒಳ್ಳೆಯದಾಗುತ್ತದೆ. ನಿಮಗೆ ಅದೃಷ್ಟ ಕೂಡಿ ಬರುತ್ತದೆ, ನಿಮ್ಮ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುತ್ತವೆ, ಮತ್ತು ಒಳಿತಾಗುವ ಯೋಗ ಕೂಡಿ ಬರುತ್ತದೆ. ಬೇರೆಯವರು ಸತ್ತ ಕನಸು ಬಂದರೆ ಅವರಿಗೆ ಆಯುಷ್ಯ ವೃದ್ಧಿಯಾಗುತ್ತದೆ. ನಾವೇ ಸತ್ತ ಹಾಗೆ ಕನಸು ಬಂದರೆ, ನಾವು ಕಷ್ಟಗಳಿಂದ ಪಾರಾಗುತ್ತೇವೆ, ಸಂಕಟಗಳು ದೂರವಾಗುತ್ತವೆ, ದೋಷಗಳು ನಿವಾರಣೆಯಾಗುತ್ತವೆ ಮತ್ತು ಅದೃಷ್ಟ ಕೂಡಿ ಬರುತ್ತದೆ ಎಂಬ ಭಾವನೆಗಳು ಮೂಡುತ್ತವೆ. ಯಾರೂ ಸಹ ಇಂತಹ ಕನಸುಗಳಿಂದ ಹೆದರಬೇಕಾಗಿಲ್ಲ ಅಥವಾ ಚಿಂತೆ ಮಾಡಬೇಕಾಗಿಲ್ಲ.
ಬ್ರಹ್ಮ ವೈವರ್ತ ಪುರಾಣದಲ್ಲಿಯೇ ಇದರ ಬಗ್ಗೆ ಉಲ್ಲೇಖವಿದೆ. ಬ್ರಹ್ಮ ವೈವರ್ತ ಪುರಾಣದಲ್ಲಿ “ಯಪಶ್ಚತಿ ಮೃತಂ ಸ್ವಪ್ನೇಸ ಭವೇಶಚಿರ ಜೀವಿಚ ಆರೋಗೋ ರೋಗಿಣಂ ದುಃಖಿ ಸುಖಿನಂಚ ಸಿಕಿಭವೇತ” ಎಂಬ ಶ್ಲೋಕವನ್ನು ಹೇಳಲಾಗಿದೆ. ಈ ಶ್ಲೋಕದ ಪ್ರಕಾರ, ಕನಸಿನಲ್ಲಿ ಮರಣವನ್ನು ಕಂಡವರು ದೀರ್ಘಾಯುಷಿಗಳಾಗುತ್ತಾರೆ, ರೋಗಿಗಳು ಆರೋಗ್ಯವಂತರಾಗುತ್ತಾರೆ ಮತ್ತು ದುಃಖಿಗಳು ಸುಖಿಗಳಾಗುತ್ತಾರೆ. ಇಂತಹ ಕನಸುಗಳು ಬಂದಾಗ ಬಹಳಷ್ಟು ಶುಭವಾಗುತ್ತದೆ, ತುಂಬಾ ಒಳ್ಳೆಯದಾಗುತ್ತದೆ. ನಿಮ್ಮ ಕುಟುಂಬದಲ್ಲಿ ನಿಮಗೆ ತಿಳಿದಿರುವ ಯಾರಾದರೂ ಸತ್ತಿರುವಂತೆ ಕನಸು ಬಂದರೆ, ಅವರಿಗೆ ಶುಭವಾಗುತ್ತದೆ. ನಮಗೆ ನಮ್ಮದೇ ಕನಸು ಬಂದಾಗ ನಮ್ಮ ಆಯುಷ್ಯ ವೃದ್ಧಿಯಾಗುತ್ತದೆ, ಸಂಕಟಗಳು ದೂರವಾಗುತ್ತವೆ. ಇದರಿಂದ ನಮಗೆ ಯಾವುದೇ ಕೆಟ್ಟದಾಗುವುದಿಲ್ಲ ಅಥವಾ ಮರಣ ಸಂಭವಿಸುವುದಿಲ್ಲ. ಅಂತಹ ನಕಾರಾತ್ಮಕ ಆಲೋಚನೆಗಳು ಬೇಡ.
ಕನಸಿನ ಭಾವನೆಗೆ ತಕ್ಕ ಹಾಗೆ, ಹನುಮನ ದರ್ಶನ ಮಾಡಿಕೊಳ್ಳಿ ಅಥವಾ ಸಾಧ್ಯವಾದರೆ ಶಿವನ ದರ್ಶನ ಮಾಡಿಕೊಳ್ಳಿ. ಶಿವನ ದೇವಸ್ಥಾನದಲ್ಲಿ ಒಂದು ಅರ್ಚನೆ ಮಾಡಿಸಿಕೊಳ್ಳಿ ಮತ್ತು ವಿಭೂತಿಯನ್ನು ಧಾರಣೆ ಮಾಡಿಕೊಳ್ಳಿ. ಇದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ