ಬೆಂಗಳೂರಿಗರಿಗೆ ಬಿಡದ ಬಿಸಿಲ ಬೇಗೆ: ಉತ್ತರ ಕರ್ನಾಟಕದಲ್ಲಿ ಕೆಂಡದಂತಹ ಬಿಸಿಲು! ಮಲೆನಾಡಿನಲ್ಲಿ ಹೇಗಿದೆ ತಾಪಮಾನ?
ಬೆಂಗಳೂರು, ಏ.2: ರಾಜಧಾನಿ ಬೆಂಗಳೂರಿನಲ್ಲಿ ಇಂದೂ ಕೂಡ ಒಣ ಹವಾಮಾನ ಮುಂದುವರಿಯಲಿದೆ. ಗರಿಷ್ಠ ಉಷ್ಣಾಂಶವು 35°C ನಿಂದ 37°C ವರೆಗೆ ದಾಖಲಾಗುವ ಸಾಧ್ಯತೆಯಿದೆ. ಸಂಜೆಯ ವೇಳೆಗೆ ಆಕಾಶ ಭಾಗಶಃ ಮೋಡದಿಂದ ಕೂಡಿದ್ದರೂ ಮಳೆಯ ಮುನ್ಸೂಚನೆ ತೀರಾ ಕಡಿಮೆ ಇದೆ. ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲ ಧಗೆ ವಿಪರೀತವಾಗಿರಲಿದೆ. ಇಲ್ಲಿನ ಕೆಲವು ಭಾಗಗಳಲ್ಲಿ ಉಷ್ಣಾಂಶವು 41°C ದಾಟುವ ಸಾಧ್ಯತೆಯಿದ್ದು, ಮಧ್ಯಾಹ್ನದ ವೇಳೆ ಬಿಸಿಗಾಳಿ (Heat Wave) ಬೀಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಂಗಳೂರು,…