All posts by nagaraj11081993

ಪ್ರತ್ಯೇಕ ಪ್ರಕರಣ: ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಇಬ್ಬರು ಯುವಕರು ಆತ್ಮಹತ್ಯೆ

ಪ್ರತ್ಯೇಕ ಪ್ರಕರಣ: ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಇಬ್ಬರು ಯುವಕರು ಆತ್ಮಹತ್ಯೆ

ವಿಜಯಪುರ/ಚಿಕ್ಕಮಗಳೂರು, ಏಪ್ರಿಲ್​​ 04: ಹಳ್ಳಿಗಳಲ್ಲಿ ನೆಲೆಸಿರುವವರಿಗೆ ಅದರಲ್ಲೂ ಕೃಷಿಕ ಯುವಕರಿಗೆ ಮದುವೆಗೆ ಹೆಣ್ಣು ಸಿಗೋದೇ ಕಷ್ಟ ಎಂಬ ಸ್ಥಿತಿ ಸದ್ಯ ಸಮಾಜದಲ್ಲಿದೆ. ಇದೇ ಕಾರಣಕ್ಕೆ ಅದೆಷ್ಟೋ ಯುವಕರಿಗೆ ಈವರೆಗೂ ಕಂಕಣ ಭಾಗ್ಯವೇ ಕೂಡಿಬರುತ್ತಿಲ್ಲ. ಈ ನಡುವೆ ವಿವಾಹಕ್ಕೆ ಹುಡುಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಾನಸಿಕವಾಗಿ ತೀವ್ರ ನೊಂದು ಯುವಕರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ರಾಜ್ಯದಲ್ಲಿ ನಡೆದಿವೆ. ವಿಜಯಪುರದಲ್ಲಿ ಕುರಿಗಾಹಿ ನೇಣಿಗೆ ಶರಣಾಗಿದ್ದರೆ ಇತ್ತ ಚಿಕ್ಕಮಗಳೂರಲ್ಲಿ ಕುಡಿದ ಮತ್ತಿನಲ್ಲಿ ಮತ್ತೋರ್ವ ಪ್ರಾಣ ಕಳೆದುಕೊಂಡಿದ್ದಾನೆ.

ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

2 ವರ್ಷದ ಹಿಂದೆ ಮದುವೆ ನಿಶ್ಚಯವಾಗಿ ಮುರಿದು ಬಿದ್ದಬಳಿಕ ಎಷ್ಟೇ ಹುಡುಕಿದ್ರೂ ಹೆಣ್ಣು ಸಿಗದಿದ್ದಕ್ಕೆ ತೀವ್ರವಾಗಿ ನೊಂದಿದ್ದ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ 2 ಗ್ರಾಮದ ಯುವಕ ಶಂಕರ ತಳವಾರ(25) ಮರಕ್ಕೆ ನೇಣುಹಾಕಿಕೊಂಡು ಪ್ರಾಣ ಬಿಟ್ಟಿದ್ದಾನೆ. ಈ ಬಗ್ಗೆ ನಿಡಗುಂದಿ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

ಇತ್ತ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೋರಗಾನಹಳ್ಳಿಯಲ್ಲೂ ಕುಮಾರ್​(26) ಇದೇ ಕಾರಣಕ್ಕೆ ಸೂಸೈಡ್​​ ಮಾಡಿಕೊಂಡಿದ್ದಾನೆ. ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ನಿವಾಸಿಯಾಗಿದ್ದ ಯುವಕ ಕುಡಿದ ಮತ್ತಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಹೆಣ್ಣು ಸಿಗದಿದ್ದಕ್ಕೆ ಮಾನಸಿಕವಾಗಿ ಈತ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದ್ದು, ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ. ಕಡೂರು ತಾಲೂಕಿನ ಬೋರಗಾನಹಳ್ಳಿಯ ಪರಮೇಶ್ವರಪ್ಪ ಎಂಬುವವರ ತೋಟದಲ್ಲಿ ಕುರಿ ಮಂದೆ ಬಿಟ್ಟುಕೊಂಡಿದ್ದ ಕುಮಾರ್, ರಾಮನವಮಿ ಹಬ್ಬಕ್ಕೆ ಊರಿಗೆ ಹೋದಾಗ ಮದುವೆ ಮಾಡುವಂತೆ ಮನೆಯವರನ್ನು ಒತ್ತಾಯಿಸಿದ್ದ. ಆದರೆ ಇಬ್ಬರು ಸಹೋದರರ ಮದುವೆಯಾದ ಬಳಿಕ ವಿವಾಹ ಮಾಡುವುದಾಗಿ‌ ಪೋಷಕರು ಹೇಳಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಶಿರಾ ಬ್ರಹ್ಮಸಂದ್ರ ಗ್ರಾಮಕ್ಕೆ ರವಾನೆ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೈ ಎಲೆಕ್ಷನ್​​: ಅಬ್ಬರದ ಕ್ಯಾಂಪೇನ್​​ ಮಧ್ಯೆ ಜಮೀರ್​​ಗೆ ಸಿಎಂ ತುರ್ತು ಬುಲಾವ್; ನಾಳೆ ಅಖಾಡಕ್ಕೆ ಸಚಿವ ಎಂಟ್ರಿ

ಬೆಂಗಳೂರು, ಏಪ್ರಿಲ್​ 04: ಉಭಯ ಕ್ಷೇತ್ರಗಳಲ್ಲಿ ಉಭಯ ಪಕ್ಷದಿಂದ ಮತ ಶಿಕಾರಿ ನಡೆಯುತ್ತಿದೆ. ಮತದಾನಕ್ಕೆ ಇನ್ನೂ ಐದು ದಿನ ಬಾಕಿ ಇದ್ದು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಅಬ್ಬರದ ಪ್ರಚಾರ ಮಾಡಲಾಗಿದೆ. ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಎರಡನೇ ಸುತ್ತಿನ ಪ್ರಚಾರ ಮಾಡಿದ್ದು, ಅಭ್ಯರ್ಥಿ ಉಮೇಶ್ ಮೇಟಿ ಪರ ಅಬ್ಬರದ ಕ್ಯಾಂಪೇನ್ ಮಾಡಿದ್ದಾರೆ. ವಿವಿಧ ಸಮುದಾಯಗಳ ಮತಗಳ ಮೇಲೂ ಕಣ್ಣಿಡಲಾಗಿದೆ. ಈ ಮಧ್ಯೆ ಸಚಿವ ಜಮೀರ್​​ಗೆ ಸಿದ್ದರಾಮಯ್ಯರಿಂದ ತುರ್ತು ಬುಲಾವ್ ನೀಡಲಾಗಿದೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಚಿವ ಜಮೀರ್​​ಗೆ ಸಿದ್ದರಾಮಯ್ಯರಿಂದ ತುರ್ತು ಬುಲಾವ್

ಇನ್ನು ಅಹಿಂದ ಮತಗಳ ಕ್ರೋಢೀಕರಣಕ್ಕಾಗಿ ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ವಿಶೇಷ ಸಭೆ ಮಾಡಿದ್ದಾರೆ. ಎಂ.ಸಿ.ವೇಣುಗೋಪಾಲ್​, ಡಾ.ಪರಮೇಶ್ವರ್ ಮತ್ತು ಮಹದೇವಪ್ಪ ಜೊತೆ ಸಭೆ ಮಾಡಿದ್ದು, ಈ ವೇಳೆ ಉಪಚುನಾವಣೆ ಪ್ರಚಾರಕ್ಕೆ ಬರುವಂತೆ ಜಮೀರ್​ಗೆ ಕರೆ ಮಾಡುವಂತೆ ಕೆ.ಸಿ.ವೇಣುಗೋಪಾಲ್​ಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಮುಸ್ಲಿಮರನ್ನೆಲ್ಲಾ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಸಿದ್ದರಾಮಯ್ಯ ಹೀಗೆಂದಿದ್ಯಾಕೆ ನೋಡಿ!

ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಸಿಗಲಿಲ್ಲ ಅಂತಾ ಬೇಸರಗೊಂಡಿದ್ದ ಸಚಿವ ಜಮೀರ್ ನಾಳೆ ದಾವಣಗೆರೆ ಎಂಟ್ರಿ ಕೊಡಲಿದ್ದಾರೆ. ಕೇರಳದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಜಮೀರ್, ನಾಳೆ ದಾವಣಗೆರೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಜಮೀರ್‌ಗಾಗಿಯೇ ವಿಶೇಷ ವಿಮಾನ ಬುಕ್ ಮಾಡಿರುವ ಸಿಎಂ, ಕೇರಳದಿಂದ ದಾವಣಗೆರೆಗೆ ಕರೆಸಿಕೊಳ್ಳುತ್ತಿದ್ದಾರೆ. ನಂತರ ಬಾಗಲಕೋಟೆಯಲ್ಲಿ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಈ ಸಂಬಂಧ ಸಭೆ ನಡೆಸಿರುವ ಸಿಎಂ, ಅಹಿಂದ ಮತಗಳನ್ನ ಸೆಳೆಯಲು ತಂತ್ರ ರೂಪಿಸಿದ್ದಾರೆ.

ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ 

ಇನ್ನು ಟಿವಿ9 ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವರಿಗೆ ನನ್ನ ಅಟ್ಯಾಕ್ ಮಾಡುವುದು ಬಿಟ್ಟರೇ ಬೇರೆನಿದೆ ಅಂತಾ ವಾಗ್ದಾಳಿ ಮಾಡಿದ್ದಾರೆ. ಕುಟುಂಬದವರಿಗೆ ಟಿಕೆಟ್ ನೀಡಿರುವ ಬಗ್ಗೆ ಸ್ಫಷ್ಟನೆ ನೀಡಿದ್ದಾರೆ. ಹಾಗೆಯೇ 2028ಕ್ಕೂ ಈ ಚುನಾವಣೆಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ದಾವಣಗೆರೆಯಲ್ಲಿ ಸಮುದಾಯವಾರು ಮತಬೇಟೆ

ಬಿಜೆಪಿ ಕಲಿಗಳು ಕೂಡಾ ಅಖಾಡದಲ್ಲಿ ಅಬ್ಬರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿ ಮಠ ಪರವಾಗಿ ಮತಬೇಟೆಯಾಡಿದ್ದಾರೆ. ಬಿಜೆಪಿ ಲಿಂಗಾಯತ ಮತಗಳ ಕಬ್ಜ ಮಾಡಲು ಕ್ಯಾಂಪೇನ್ ಮಾಡುತ್ತಿದೆ. ಕಾಂಗ್ರೆಸ್‌ ಪರ ಸಚಿವರು, ಶಾಸಕರು ಅಖಾಡಕ್ಕಿಳಿದಿದ್ರೆ, ಬಿಜೆಪಿ ಪರ ಬಿ.ವೈ ವಿಜಯೇಂದ್ರ, ವಿ.ಸೋಮಣ್ಣ, ಹೆಚ್‌.ಡಿ ಕುಮಾರಸ್ವಾಮಿ ಕ್ಯಾಂಪೇನ್ ಮಾಡಿದ್ದಾರೆ. ಗ್ಯಾರಂಟಿಯನ್ನೇ ಅಸ್ತ್ರ ಮಾಡಿಕೊಂಡಿರುವ ಕಾಂಗ್ರೆಸ್‌ಗೆ ತಿವಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

GT vs RR IPL 2026 Live Score: ಟಾಸ್ ಗೆದ್ದರಾಜಸ್ಥಾನ್; ರಶೀದ್​ಗೆ ಗುಜರಾತ್ ನಾಯಕತ್ವ – Kannada News | Gujarat Titans vs Rajasthan Royals IPL 2026 Live Cricket Score GT vs RR Match on 4th April latest news in Kannada

ಐಪಿಎಲ್ 2026 ರ ಒಂಬತ್ತನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಗುಜರಾತ್ ಟೈಟಾನ್ಸ್ ತಂಡವು ತಮ್ಮ ತವರು ಮೈದಾನವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿದ್ದು, ಸೀಸನ್​ನ ಮೊದಲ ಗೆಲುವನ್ನು ಎದುರು ನೋಡುತ್ತಿದೆ. ಇತ್ತ ತನ್ನ ಮೊದಲ ಪಂದ್ಯದಲ್ಲಿನ ಗೆಲುವಿನೊಂದಿಗೆ ಮಿಂಚುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡವು ಅಜೇಯ ಓಟವನ್ನು ಮುಂದುವರೆಸಲು ನೋಡಲಿದೆ.

Source link

ಥೈರಾಯ್ಡ್ ಸಮಸ್ಯೆ ಇದ್ಯಾ? ಚಿಂತೆ ಬೇಡ, ಈ ಸಲಹೆಗಳನ್ನು ಪಾಲಿಸಿ ಸಮಸ್ಯೆಯನ್ನು ನಿಯಂತ್ರಿಸಿ

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ (Thyroid) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಈ ಸಮಸ್ಯೆಯಲ್ಲಿ ಆಹಾರ ಪದ್ಧತಿ ಬಹಳ ಮಹತ್ವದ್ದಾಗಿದ್ದು, ಕೆಟ್ಟ ಆಹಾರ ಸೇವನೆಯಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು. ನಿಮಗೆ ತಿಳಿರಿರಬಹುದು ಥೈರಾಯ್ಡ್ ಒಂದು ಗ್ರಂಥಿಯಾಗಿದ್ದು, ಇದು ಕುತ್ತಿಗೆಯ ಭಾಗದಲ್ಲಿ ಇರುತ್ತದೆ ಮತ್ತು ದೇಹದ ಮೆಟಾಬಾಲಿಸಮ್‌ನ್ನು ನಿಯಂತ್ರಿಸುತ್ತದೆ. ಇದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ದಣಿವು, ಕೂದಲು ಉದುರುವುದು ಮುಂತಾದ ಸಮಸ್ಯೆಗಳು ಕಂಡುಬರಬಹುದು. ಜೀವನಶೈಲಿ, ಒತ್ತಡ, ಹಾರ್ಮೋನ್ ಬದಲಾವಣೆಗಳು ಮತ್ತು ಪೌಷ್ಟಿಕಾಂಶ ಕೊರತೆ ಇದಕ್ಕೆ ಕಾರಣವಾಗಬಹುದು. ಹಾಗಾಗಿ ಥೈರಾಯ್ಡ್ ಸಮಸ್ಯೆ ಬರಬಾರದು ಎಂದರೆ ಅಥವಾ ಈಗಾಗಲೇ ಈ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತವರು ತಮ್ಮ ಆಹಾರಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಉತ್ತಮ. ಹಾಗಾದರೆ ಥೈರಾಯ್ಡ್ ಸಮಸ್ಯೆ ಇದ್ದಾಗ ಯಾವ ರೀತಿಯ ಆಹಾರಗಳ ಸೇವನೆ ಮಾಡಬಾರದು, ಜೀವನಶೈಲಿಯಲ್ಲಿ ಯಾವ ರೀತಿ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಥೈರಾಯ್ಡ್ ಸಮಸ್ಯೆ ಇದ್ದಾಗ ಯಾವ ಆಹಾರಗಳ ಸೇವನೆ ಮಾಡಬಾರದು?

  • ಸೋಯಾ ಮತ್ತು ಸೋಯಾ ಉತ್ಪನ್ನಗಳು ಇವು ಥೈರಾಯ್ಡ್ ಹಾರ್ಮೋನ್ ಕಾರ್ಯಕ್ಕೆ ಅಡ್ಡಿಯಾಗಬಹುದು
  • ಕಚ್ಚಾ ತರಕಾರಿಗಳು (ಗೋಬಿ, ಬ್ರೋಕೊಲಿ) ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡುವುದನ್ನು ತಪ್ಪಿಸಬೇಕು
  • ಪ್ರೊಸೆಸ್ಡ್ ಮತ್ತು ಜಂಕ್ ಫುಡ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ
  • ಹೆಚ್ಚು ಉಪ್ಪು ಮತ್ತು ಸಕ್ಕರೆ ಇರುವ ಆಹಾರಗಳು
  • ಕೆಫೀನ್ ಮತ್ತು ಮದ್ಯಪಾನ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು

ಥೈರಾಯ್ಡ್ ನಿಯಂತ್ರಣಕ್ಕೆ ಯಾವ ರೀತಿಯ ಆಹಾರ ಸೇವನೆ ಮಾಡಬೇಕು?

  • ಐಯೋಡಿನ್ ಇರುವ ಆಹಾರಗಳು (ಉಪ್ಪು, ಹಾಲು ಉತ್ಪನ್ನಗಳು, ಮೀನು)
  • ಸೆಲೆನಿಯಂ ಮತ್ತು ಜಿಂಕ್ ಇರುವ ಆಹಾರಗಳು (ಡ್ರೈಫ್ರೂಟ್ಸ್, ಬೀಜಗಳು, ಸಂಪೂರ್ಣ ಧಾನ್ಯಗಳು)
  • ಹಸಿರು ತರಕಾರಿಗಳು ಮತ್ತು ಹಣ್ಣುಗಳು
  • ಪ್ರೋಟೀನ್ ಆಹಾರಗಳು (ಬೇಳೆ, ಮೊಟ್ಟೆ, ಪನೀರ್)
  • ಸಾಕಷ್ಟು ನೀರು ಕುಡಿಯುವುದು ಮತ್ತು ಸಮತೋಲನ ಆಹಾರ ಸೇವಿಸುವುದು ಕೂಡ ಮುಖ್ಯವಾಗುತ್ತದೆ.

ಇದನ್ನೂ ಓದಿ: ಈ ಮೂರು ಲಕ್ಷಣಗಳು ಕಂಡು ಬಂದ್ರೆ ನಿರ್ಲಕ್ಷ್ಯ ಮಾಡಬೇಡಿ; ಇದು ಥೈರಾಯ್ಡ್ ಸಮಸ್ಯೆ ಬರುವ ಮುನ್ಸೂಚನೆಯಾಗಿರಬಹುದು

ಜೀವನಶೈಲಿ ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು?

  • ನಿಯಮಿತ ವ್ಯಾಯಾಮ ಮತ್ತು ಯೋಗ ಮಾಡುವುದು
  • ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು
  • ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳುವುದು
  • ಸಾಕಷ್ಟು ನಿದ್ರೆ ಮಾಡುವುದು
  • ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು

ಒಟ್ಟಿನಲ್ಲಿ, ಸರಿಯಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಥೈರಾಯ್ಡ್ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಅದರ ಜೊತೆಗೆ ತಜ್ಞರ ಸಲಹೆಯನ್ನು ಪಾಲಿಸುವುದು ಕೂಡ ಬಹಳ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!

ಹೈದರಾಬಾದ್: ಹೋಟೆಲ್ ಒಂದಕ್ಕೆ ಆಹಾರದ ಆಸೆಯಿಂದ ಬಂದ ಭಿಕ್ಷುಕನ ಮೇಲೆ ಹೋಟೆಲ್​​ನ ಸಿಬ್ಬಂದಿ ಬಿಸಿನೀರು ಸುರಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಈ ಅಮಾನವೀಯ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಇಬ್ರಾಹಿಂ ಖಾನ್ ಈ ಕೃತ್ಯವನ್ನು ವಿಡಿಯೋ ಮಾಡಿ ಬಹಿರಂಗಪಡಿಸಿದ ಬೆನ್ನಲ್ಲೇ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಬಿಸಿನೀರಿನಿಂದ ಕಂಗೆಟ್ಟು ನೋವಿನಿಂದ ನರಳುತ್ತಿದ್ದ ಆ ವ್ಯಕ್ತಿಯ ಪರವಾಗಿ ಹೋಟೆಲ್​​ನ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, “ಆತ ಪ್ರತಿದಿನ ಗ್ರಾಹಕರಿಗೆ ತೊಂದರೆ ನೀಡುತ್ತಿದ್ದ” ಎಂಬ ಬೇಜವಾಬ್ದಾರಿಯ ಸಮರ್ಥನೆ ಕೇಳಿಬಂದಿದೆ. “ಒಂದು ವೇಳೆ ತೊಂದರೆ ನೀಡುತ್ತಿದ್ದರೆ ಆತನನ್ನು ಬೆದರಿಸಿ ಕಳುಹಿಸಬೇಕಿತ್ತು ಅಥವಾ ಪೊಲೀಸರಿಗೆ ದೂರು ನೀಡಬೇಕಿತ್ತು, ಅದನ್ನು ಬಿಟ್ಟು ಇಷ್ಟು ಕ್ರೂರವಾಗಿ ವರ್ತಿಸುವುದು ಸರಿಯೇ?” ಎಂದು ಸಾಮಾಜಿಕ ಕಾರ್ಯಕರ್ತ ತರಾಟೆಗೆ ತೆಗೆದುಕೊಂಡಾಗ ಹೋಟೆಲ್ ಸಿಬ್ಬಂದಿ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾರೆ. ಸದ್ಯ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯರು ಯಾರ ಪರ? ಅಮೆರಿಕ- ಇರಾನ್ ಯುದ್ಧದ ಬಗ್ಗೆ ನಡೆದ ಸಮೀಕ್ಷೆಯಲ್ಲೇನಿದೆ?

ನವದೆಹಲಿ, ಏಪ್ರಿಲ್ 4: ನಮೆಲ್ಲರಿಗೂ ಗೊತ್ತಿರುವಂತೆ ಇರಾನ್ (Iran War) ಮೇಲೆ ಇಸ್ರೇಲ್ ಮತ್ತು ಅಮೆರಿಕ ಯುದ್ಧ ಸಾರಿ ತಿಂಗಳೇ ಕಳೆದಿದೆ. ಆದರೂ ಅಲ್ಲಿನ ಪರಿಸ್ಥಿತಿ ಶಾಂತವಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಯುದ್ಧದಲ್ಲಿ ಭಾರತ ತಟಸ್ಥ ನೀತಿಯನ್ನು ತಳೆದಿದ್ದು, ಬಹಿರಂಗವಾಗಿ ಯಾವ ದೇಶಕ್ಕೂ ಬೆಂಬಲ ಘೋಷಿಸಿಲ್ಲ. ಆದರೂ ಯುದ್ಧಪೀಡಿತ ದೇಶಗಳಿಗೆ ವೈದ್ಯಕೀಯ ಕಿಟ್ ಕಳುಹಿಸುವ ಮಾನವೀಯ ಕಾರ್ಯವನ್ನು ಮಾಡಿರುವ ಭಾರತ ಶಾಂತಿಯುತ ಮಾತುಕತೆಯ ಮೂಲಕ ಯುದ್ಧ ನಿಲ್ಲಿಸುವುದರ ಅಗತ್ಯವನ್ನು ಒತ್ತಿ ಹೇಳುತ್ತಲೇ ಇದೆ. ಈ ಯುದ್ಧದ ಬಗ್ಗೆ ಭಾರತೀಯರ ಅಭಿಪ್ರಾಯವೇನು? ಭಾರತದ ಜನರು ಯಾವ ದೇಶದ ಪರವಾಗಿ ನಿಲುವು ತಳೆದಿದ್ದಾರೆ ಎಂಬ ಕುರಿತು ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಆ ಕುರಿತು ಪೂರ್ತಿ ವಿವರ ಇಲ್ಲಿದೆ.

ಯುದ್ಧ ಆರಂಭವಾದ ಮೊದಲ ವಾರದಿಂದ 4ನೇ ವಾರದ ವೇಳೆಗೆ ಭಾರತೀಯರ ಅಭಿಪ್ರಾಯವೂ ಬದಲಾಗಿರುವುದನ್ನು ಈ ಸಮೀಕ್ಷೆಯಲ್ಲಿ ಗಮನಿಸಬಹುದು. ದೇಶಾದ್ಯಂತ 18 ವರ್ಷದ ಮೇಲಿನವರಲ್ಲಿ ನಡೆಸಿದ ಸಿವೋಟರ್ ಸ್ನ್ಯಾಪ್ ಪೋಲ್ CATI ಸಂದರ್ಶನಗಳು (ಕಂಪ್ಯೂಟರ್ ಅಸಿಸ್ಟೆಡ್ ಟೆಲಿಫೋನ್ ಇಂಟರ್ವ್ಯೂಯಿಂಗ್) ಅನ್ನು ಆಧರಿಸಿವೆ (BARC-ALL INDIA). ದೇಶಾದ್ಯಂತ ಸಿವೋಟರ್ ನಡೆಸಿದ ಈ ಸಮೀಕ್ಷೆಯಲ್ಲಿ ಒಟ್ಟು 10,854 ಜನರು ಭಾಗವಹಿಸಿದ್ದರು. ಮಾರ್ಚ್ ಎರಡನೇ ವಾರದಿಂದ ನಾಲ್ಕನೇ ವಾರದವರೆಗೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಫೋನ್ ಮೂಲಕ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಸಮೀಕ್ಷೆಯಲ್ಲಿ ಕೇಳಲಾಗಿದ್ದ ಪ್ರಮುಖ ಪ್ರಶ್ನೆಗಳು ಇಲ್ಲಿವೆ.

1. ಬಿಕ್ಕಟ್ಟಿನ ಸಮಯದಲ್ಲಿ ಭಾರತ ಯಾರನ್ನು ನಂಬಬೇಕು?

ಮಾರ್ಚ್ ಎರಡನೇ ವಾರ:

ಅಮೆರಿಕ – 26%

ಇರಾನ್ – 27%

ಹೇಳಲು ಸಾಧ್ಯವಿಲ್ಲ – 47%

ಮಾರ್ಚ್ ಮೂರನೇ ವಾರ:

ಅಮೆರಿಕ – 26%

ಇರಾನ್ – 38%

ಹೇಳಲು ಸಾಧ್ಯವಿಲ್ಲ – 36%

ಮಾರ್ಚ್ ನಾಲ್ಕನೇ ವಾರ:

ಅಮೆರಿಕ – 15%

ಇರಾನ್ – 58%

ಹೇಳಲು ಸಾಧ್ಯವಿಲ್ಲ – 27%

ಸಮೀಕ್ಷೆ ಪ್ರಕಾರ 3 ವಾರಗಳಲ್ಲಿ ಭಾರತೀಯರ ಅಭಿಪ್ರಾಯದಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂದಿತು. ಇರಾನ್ ಮೇಲಿನ ನಂಬಿಕೆ ವೇಗವಾಗಿ ಬೆಳೆಯಿತು.

2. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ತಟಸ್ಥವಾಗಿರಬೇಕೇ?

ಎರಡನೇ ವಾರ – 58% ಹೌದು

ಮೂರನೇ ವಾರ – 61% ಹೌದು

ನಾಲ್ಕನೇ ವಾರ – 60% ಹೌದು

ಭಾರತ ಯುದ್ಧದಿಂದ ದೂರವಿರಬೇಕು ಎಂದು ಭಾರತದ ಬಹುಪಾಲು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

3. ಭಾರತವು ಒಂದು ನಿಲುವು ತೆಗೆದುಕೊಳ್ಳಬೇಕಾದರೆ ಯಾವ ದೇಶದ ಪರವಾಗಿರಬೇಕು?

ಎರಡನೇ ವಾರ – ಇರಾನ್ 56%, ಅಮೆರಿಕ 44%

ಮೂರನೇ ವಾರ – ಇರಾನ್ 62%, ಅಮೆರಿಕ 38%

ನಾಲ್ಕನೇ ವಾರ – ಇರಾನ್ 74%, ಅಮೆರಿಕ 26%

ಪ್ರತಿ ವಾರ ಇರಾನ್‌ಗೆ ಭಾರತೀಯರ ಬೆಂಬಲ ಹೆಚ್ಚುತ್ತಿರುವುದನ್ನು ನೋಡಬಹುದು.

4. ಅಂತಾರಾಷ್ಟ್ರೀಯವಾಗಿ ಯಾವ ದೇಶವನ್ನು ನಂಬಬೇಕು?

ಎರಡನೇ ವಾರ – ರಷ್ಯಾ 67%, ಅಮೆರಿಕ 10%

ಮೂರನೇ ವಾರ – ರಷ್ಯಾ 73%, ಅಮೆರಿಕ 11%

ನಾಲ್ಕನೇ ವಾರ – ರಷ್ಯಾ 70%, ಅಮೆರಿಕ 14%

ಮೂರು ವಾರಗಳಲ್ಲಿಯೂ ಭಾರತೀಯರಿಗೆ ರಷ್ಯಾದ ಬಗ್ಗೆ ಹೆಚ್ಚು ಅಗಾಧವಾದ ವಿಶ್ವಾಸವಿದೆ.

5. ಭಾರತಕ್ಕೆ ಯಾವ ದೇಶ ಬೆದರಿಕೆಯಾಗಿದೆ?

ಎರಡನೇ ವಾರ – ಚೀನಾ 41%, ಪಾಕಿಸ್ತಾನ 30%

ಮೂರನೇ ವಾರ – ಚೀನಾ 44%, ಪಾಕಿಸ್ತಾನ 31%

ನಾಲ್ಕನೇ ವಾರ – ಚೀನಾ 44%, ಪಾಕಿಸ್ತಾನ 34%

ಜನರು ಪಾಕಿಸ್ತಾನಕ್ಕಿಂತಲೂ ಚೀನಾವನ್ನು ದೇಶಕ್ಕೆ ಪ್ರಮುಖ ಬೆದರಿಕೆಯಾಗಿ ನೋಡುತ್ತಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

6. ಭಾರತದ ವಿದೇಶಾಂಗ ನೀತಿ ಹೇಗಿದೆ?

ಹೆಚ್ಚಾಗಿ ತೃಪ್ತಿಕರವಾಗಿದೆ – 32%

ಸ್ವಲ್ಪ ಮಟ್ಟಿಗೆ ತೃಪ್ತಿಕರ – 21%

ಅತೃಪ್ತಿ – ಸುಮಾರು 42%

ಒಟ್ಟಾರೆಯಾಗಿ ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಯಿತು.

7. ನಮ್ಮ ದೇಶದ ಯಾವ ವಲಯಗಳು ಯುದ್ಧದಿಂದ ಹೆಚ್ಚು ಪರಿಣಾಮ ಬೀರಿವೆ?

ಆರ್ಥಿಕತೆ – 45% ರಿಂದ 50%

ವಿದೇಶಾಂಗ ನೀತಿ – 13% ರಿಂದ 16%

ರಾಜಕೀಯ – 11% ರಿಂದ 13%

ಜನರ ಕಾಳಜಿ ಹೆಚ್ಚಾಗಿ ಆರ್ಥಿಕತೆಯ ಬಗ್ಗೆ ಇದೆ ಎಂದು ಈ ವರದಿ ಸ್ಪಷ್ಟಪಡಿಸುತ್ತದೆ.

8. ಗ್ಯಾಸ್ ಸಮಸ್ಯೆ: ಇದು ಇನ್ನೂ ಪರಿಣಾಮ ಬೀರುತ್ತಿದೆಯೇ?

ಎರಡನೇ ವಾರ – 64% ತೊಂದರೆ ನೀಡುತ್ತಿದೆ

ಮೂರನೇ ವಾರ – 65% ತೊಂದರೆ ನೀಡುತ್ತಿದೆ

ನಾಲ್ಕನೇ ವಾರ – 65% ತೊಂದರೆ ನೀಡುತ್ತಿದೆ

ಮೂರು ವಾರಗಳಲ್ಲಿಯೂ ಪರಿಸ್ಥಿತಿ ಬದಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

9. ಇಂಧನ ಬೆಲೆ ಏರಿಕೆಯ ಬಗ್ಗೆ ನೀವು ಚಿಂತಿತರಾಗಿದ್ದೀರಾ?

82% ಜನರು ಬೆಲೆಗಳು ಹೆಚ್ಚಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೆಚ್ಚಿನವರು 10%ರಿಂದ 50%ರಷ್ಟು ಹೆಚ್ಚಳವನ್ನು ಊಹಿಸಿದ್ದಾರೆ.

ಇಂಧನ ಕೊರತೆಯ ಸಂದರ್ಭದಲ್ಲಿ 66% ಜನರು ಸೌದೆ ಒಲೆಗಳತ್ತ ಮುಖ ಮಾಡಿದ್ದಾರೆ. 16% ಜನ ವಿದ್ಯುತ್ ಉಪಕರಣಗಳನ್ನು ಬಳಸುತ್ತಿದ್ದಾರೆ. 8% ಜನ ಅಡುಗೆ ಮಾಡುವುದನ್ನೇ ನಿಲ್ಲಿಸಿದ್ದಾರೆ.

10. ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶ್ವ ವ್ಯವಸ್ಥೆಯು ಬದಲಾಗುತ್ತದೆಯೇ?

ಸುಮಾರು 52%ರಷ್ಟು ಜನರು ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಈ ಸಮೀಕ್ಷೆಯು ಸ್ಪಷ್ಟ ಸಂದೇಶವನ್ನು ನೀಡುತ್ತದೆ. ಭಾರತದ ಜನರು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ದೂರವಿರಲು ಬಯಸುತ್ತಾರೆ. ಆದರೆ ನಿಲುವು ತೆಗೆದುಕೊಳ್ಳುವ ಅನಿವಾರ್ಯತೆ ಬಂದರೆ ಅವರು ಇರಾನ್ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಸಮೀಕ್ಷೆಯು ಇರಾನ್-ಅಮೆರಿಕ-ಇಸ್ರೇಲ್ ನಡುವಿನ ಯುದ್ಧದ ಪರಿಣಾಮವು ಈಗಾಗಲೇ ಭಾರತದ ಜನರ ಜೀವನವನ್ನು ತಲುಪಿದೆ ಎಂದು ಸ್ಪಷ್ಟಪಡಿಸುತ್ತದೆ. ಈ ಸಮೀಕ್ಷೆಯನ್ನು ದೂರವಾಣಿ ಮೂಲಕ ನಡೆಸಲಾಗಿತ್ತು. ಈ ಸಮೀಕ್ಷೆ ಜಾಗತಿಕ ಯುದ್ಧವನ್ನು ಭಾರತೀಯರು ಯಾವ ದೃಷ್ಟಿಕೋನದಿಂದ ನೋಡುತ್ತಿದ್ದಾರೆ ಎಂಬುದರ ಪ್ರತಿಬಿಂಬವಾಗಿದೆ ಎನ್ನಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಟಿಟಿಯಲ್ಲಿ ಈ ವಾರ ಒಂದಕ್ಕಿಂತ ಒಂದು ಒಳ್ಳೆ ಸಿನಿಮಾ: ಇಲ್ಲಿದೆ ಪಟ್ಟಿ

Source link

DC vs MI: 0,1.. ಮತ್ತೆ ಮೊದಲ ಓವರ್​ನಲ್ಲೇ ಆಟ ಮುಗಿಸಿದ ರಾಹುಲ್

Source link

ಬೈಕ್​​ ಟಚ್​ ನೆಪ: ಚಾಕು ಇರಿದು ವ್ಯಕ್ತಿಯ ಬರ್ಬರ ಕೊಲೆ; ಹುಡುಗಿ ವಿಚಾರಕ್ಕೆ ಹರಿಯಿತಾ ನೆತ್ತರು?

ಬೆಂಗಳೂರು, ಏಪ್ರಿಲ್​​ 04: ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಜೆ.ಸಿ. ನಗರದ ಮುಖ್ಯರಸ್ತೆಯಲ್ಲಿ ನಡೆದಿದೆ. 22 ವರ್ಷದ ವಿಜಯ್ ಕೊಲೆಯಾದ ವ್ಯಕ್ತಿಯಾಗಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಜಯ್​ಗೆ ಚಾಕು ಇರಿದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಆರೋಪಿಗಳಾದ ಕಿರಣ್ ಮತ್ತು ವಿನೋದ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.

ನಿನ್ನೆ ರಾತ್ರಿ ಕುಡಿದು ಹೋಗುವಾಗ ವಿಜಯ್ ಬೈಕ್​​ಗೆ ವಿನೋದ್ ಗಾಡಿ ಟಚ್ ಆಗಿತ್ತು. ಇದೇ ವಿಚಾರವಾಗಿ ಗಲಾಟೆ ಕೂಡ ನಡೆದಿತ್ತು. ವಿಷಯವನ್ನು ಅಲ್ಲಿಗೆ ಬಿಡದೆ ಇಂದು ಬೆಳಗ್ಗೆ ವಿಜಯ್ ಹುಡುಕಿಕೊಂಡು ಆರೋಪಿಗಳಾದ ಕಿರಣ್ ಮತ್ತು ವಿನೋದ್ ಹೋಗಿದ್ದರು. ಮನೆ ಬಳಿ ತೆರಳಿದ್ದಾಗ ವಿಜಯ್ ಸಿಗದಿದ್ದರಿಂದ ಫೋನ್ ಮಾಡಿ ಆತನನ್ನು ಮತ್ತೆ ಬಾರ್ ಬಳಿಗೆ ಕರೆಸಿಕೊಂಡಿದ್ದರು. ವಿಜಯ್​​ ಸ್ಥಳಕ್ಕೆ ಬರುತ್ತಿದ್ದಂತೆ ಗಲಾಟೆ ಶುರುಮಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ವಿಜಯ್ ಹೊಟ್ಟೆಗೆ ಚಾಕು ಇರಿಯಲಾಗಿದ್ದು, ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಜೆ.ಸಿ.ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌; ಯುವತಿಯನ್ನು ಮಾಡೆಲ್ ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ನಾ ಸಮೀರ್?

ಹಿಂದಿನಿಂದಲೂ ಇತ್ತು ದ್ವೇಷ!

ಇನ್ನು ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಬೈಕ್​​ ಟಚ್​​ ಆದ ವಿಚಾರ ಕೊಲೆಗೆ ಕೇವಲ ಪ್ರಚೋದನೆ ಮಾತ್ರ. ಹುಡುಗಿ ವಿಚಾರಕ್ಕೆ ಸಂಬಂಧಿಸಿ ಆರೋಪಿ ಕಿರಣ್​​ ಮತ್ತು ವಿಜಯ್​​ ನಡುವೆ ಹಿಂದಿನಿಂದಲೂ ದ್ವೇಷವಿತ್ತು. ವಿಜಯ್​​ಗೆ ಅದಾಗಲೇ ಮದುವೆಯಾಗಿದ್ದರೂ ಮಾಜಿ ಪ್ರೇಯಸಿಗೆ ಕಾಟ ನೀಡುತ್ತಿದ್ದ. ಆಕೆ ಈಗ ಕಿರಣ್​​ ಲವರ್​​ ಆಗಿದ್ದು, ಇದೇ ಕಾರಣಕ್ಕೆ ವಿಜಯ್​​ ಮೇಲೆ ಕಿರಣ್​​ಗೆ ಕೋಪ ಇತ್ತು. ಹೀಗಾಗಿ ನಿನ್ನೆ ರಾತ್ರಿಯ ಗಲಾಟೆ ನೆಪದಲ್ಲಿ ಇಂದು ಅಟ್ಟಾಡಿಸಿ ವಿಜಯ್​​ನ ಆರೋಪಿಗಳು ಕೊಲೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Easter: ಈಸ್ಟರ್; ಸಾವನ್ನು ಗೆದ್ದ ಯೇಸುವಿನ ಪುನರುತ್ಥಾನದ ಹಬ್ಬ,ಇಲ್ಲಿದೆ ಈ ದಿನದ ಮಹತ್ವ

ಕ್ರಿಶ್ಚಿಯನ್ ಧರ್ಮದಲ್ಲಿ ಗುಡ್ ಫ್ರೈಡೇ ಮತ್ತು ಈಸ್ಟರ್ ಭಾನುವಾರ ಅತ್ಯಂತ ಪವಿತ್ರವಾದ ದಿನಗಳು. ಈ ವರ್ಷ ಏಪ್ರಿಲ್ 3 ರಂದು ಶುಭ ಶುಕ್ರವಾರವನ್ನು (Good Friday) ಆಚರಿಸಲಾಗಿದ್ದು, ಅದರ ಎರಡು ದಿನಗಳ ನಂತರ ಅಂದರೆ ನಾಳೆ, ಏಪ್ರಿಲ್ 5 ರಂದು ಈಸ್ಟರ್ ಭಾನುವಾರವನ್ನು ವಿಶ್ವಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದಿನವು ಕೇವಲ ಸಂಪ್ರದಾಯವಲ್ಲ, ಬದಲಿಗೆ ಮನುಕುಲಕ್ಕೆ ಭರವಸೆ ಮತ್ತು ಹೊಸ ಜೀವನದ ಸಂದೇಶವನ್ನು ನೀಡುವ ಪವಾಡದ ದಿನವಾಗಿದೆ.

ಪವಿತ್ರ ಶನಿವಾರದ ಮೌನ:

ಇಂದು ಪವಿತ್ರ ಶನಿವಾರ (Holy Saturday). ಈ ದಿನವನ್ನು ಶೋಕ, ಮೌನ ಮತ್ತು ಕಾಯುವಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ನಂತರದ ಈ ದಿನದಂದು ಕ್ರೈಸ್ತರು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳುತ್ತಾರೆ. ನಾಳೆಯ ಸಂಭ್ರಮಕ್ಕೆ ಸಿದ್ಧವಾಗುವ ಮುನ್ನ ಅನುಭವಿಸುವ ಶಾಂತಿಯುತ ಕಾಯುವಿಕೆ ಈ ದಿನದ ವಿಶೇಷ.

ಪುನರುತ್ಥಾನದ ವಿಜಯ – ಈಸ್ಟರ್ ಮಹತ್ವ:

ಕ್ರಿಶ್ಚಿಯನ್ ನಂಬಿಕೆಗಳ ಪ್ರಕಾರ, ಯೇಸುಕ್ರಿಸ್ತನನ್ನು ಗುಡ್ ಫ್ರೈಡೇ ದಿನದಂದು ಶಿಲುಬೆಗೇರಿಸಲಾಯಿತು. ಆದರೆ, ಸಾವನ್ನು ಜಯಿಸಿದ ಅವರು ಎರಡು ದಿನಗಳ ನಂತರ, ಅಂದರೆ ಭಾನುವಾರದಂದು ಪುನರುತ್ಥಾನಗೊಂಡರು (ಮರಳಿ ಜೀವಂತವಾಗಿ ಬಂದರು). ಈ ಅದ್ಭುತ ಘಟನೆಯ ನೆನಪಿಗಾಗಿ ಈಸ್ಟರ್ ಭಾನುವಾರವನ್ನು ಆಚರಿಸಲಾಗುತ್ತದೆ.

  • ಸಂದೇಶ: ಪ್ರತಿಯೊಂದು ಕತ್ತಲೆಯ ನಂತರ ಬೆಳಕು ಬಂದೇ ಬರುತ್ತದೆ ಎಂಬ ಸತ್ಯವನ್ನು ಯೇಸು ತನ್ನ ಪುನರುತ್ಥಾನದ ಮೂಲಕ ಜಗತ್ತಿಗೆ ತೋರಿಸಿಕೊಟ್ಟನು.
  • ಭೂಮಿಯ ಮೇಲಿನ ವಾಸ: ಬೈಬಲ್ ಪ್ರಕಾರ, ಪುನರುತ್ಥಾನದ ನಂತರ ಯೇಸು ಸುಮಾರು 40 ದಿನಗಳ ಕಾಲ ಭೂಮಿಯ ಮೇಲಿದ್ದು, ತನ್ನ ಅನುಯಾಯಿಗಳಿಗೆ ಪ್ರೀತಿ, ಕ್ಷಮೆ ಮತ್ತು ಕರುಣೆಯ ಮೌಲ್ಯಗಳನ್ನು ಬೋಧಿಸಿದನು.

ಈಸ್ಟರ್ ದಿನಾಂಕವನ್ನು ಹೇಗೆ ನಿರ್ಧರಿಸಲಾಗುತ್ತದೆ?

ಈಸ್ಟರ್ ಹಬ್ಬವನ್ನು ಯಾವಾಗಲೂ ಭಾನುವಾರವೇ ಆಚರಿಸಲಾಗುತ್ತದೆ, ಆದರೆ ಅದರ ದಿನಾಂಕ ಪ್ರತಿ ವರ್ಷ ಬದಲಾಗುತ್ತದೆ. ಇದು ಖಗೋಳಶಾಸ್ತ್ರದ ಲೆಕ್ಕಾಚಾರವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ವಸಂತಕಾಲದ (Spring Equinox) ಮೊದಲ ಹುಣ್ಣಿಮೆಯ ನಂತರ ಬರುವ ಮೊದಲ ಭಾನುವಾರವನ್ನು ಈಸ್ಟರ್ ಎಂದು ಆಚರಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link