Headlines

nagaraj11081993

RCB ಇಲ್ಲ, ಪ್ಲೇಆಫ್ ಆಡಲಿರುವ 4 ತಂಡಗಳನ್ನು ಹೆಸರಿಸಿದ ಇರ್ಫಾನ್ ಪಠಾಣ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭದ ಬೆನ್ನಲ್ಲೇ ಪ್ಲೇಆಫ್​ ಪ್ರೆಡಿಕ್ಷನ್ಸ್ ಶುರುವಾಗಿದೆ. ಈಗಾಗಲೇ ಅಂಬಾಟಿ ರಾಯುಡು ಹಾಗೂ ಮೊಹಮ್ಮದ್ ಶಮಿ ಈ ಸಲ ಪ್ಲೇಆಫ್​ಗೇರುವ ತಂಡಗಳನ್ನು ಹೆಸರಿಸಿದ್ದಾರೆ. ಇದೀಗ ಈ ಪಟ್ಟಿಗೆ ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್​ ಇರ್ಫಾನ್ ಪಠಾಣ್ ಕೂಡ ಸೇರಿದ್ದಾರೆ. ಇರ್ಫಾನ್ ಪಠಾಣ್ ಪ್ರಕಾರ ಈ ಸಲ ಪ್ಲೇಆಫ್ ಆಡಲಿರುವ ತಂಡಗಳು ಈ ಕೆಳಗಿನಂತಿವೆ… ಮುಂಬೈ ಇಂಡಿಯನ್ಸ್ (MI): ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಪ್ಲೇಆಫ್​ಗೇರಲಿದೆ ಎಂದು ಇರ್ಫಾನ್ ಪಠಾಣ್ ಭವಿಷ್ಯ…

Read More

ಅಂಜನಾದ್ರಿಯಲ್ಲಿ ಸಂಭ್ರಮದ ಹನುಮ ಜಯಂತಿ: ಹರಿದುಬಂದ ಭಕ್ತಸಾಗರ

ಕೊಪ್ಪಳ, ಏಪ್ರಿಲ್ 2: ಹನುಮ ಜಯಂತಿ ಹಬ್ಬದ ಪ್ರಯುಕ್ತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ. ಆಂಜನೇಯನ ಜನ್ಮಸ್ಥಳವಾದ ಈ ಪುಣ್ಯಕ್ಷೇತ್ರದಲ್ಲಿ ಹನುಮ ಜಯಂತಿಯ ಪ್ರಯುಕ್ತ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಕೇಸರಿ ವರ್ಣಮಯವಾಗಿ ಶೃಂಗಾರಗೊಂಡಿದ್ದ ಆಂಜನೇಯನ ಮೂರ್ತಿಯು ಭಕ್ತರ ಗಮನ ಸೆಳೆಯಿತು. ಹನುಮ ಜಯಂತಿ ಹಿನ್ನಲೆಯಲ್ಲಿ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ಹೊರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಕರ್ನಾಟಕದ…

Read More

Tech Tips: ಈಗ ಬಿಎಸ್ಎನ್ಎಲ್ ಬಳಕೆದಾರರು ನೆಟ್‌ವರ್ಕ್ ಇಲ್ಲದಿದ್ದರೂ ಕರೆ ಮಾಡಬಹುದು: ಹೇಗೆ ನೋಡಿ

ಬೆಂಗಳೂರು (ಏ. 02): ಬಿಎಸ್ಎನ್ಎಲ್ (BSNL) ಬಳಕೆದಾರರು ಈಗ ನೆಟ್‌ವರ್ಕ್ ಸಂಪರ್ಕವಿಲ್ಲದೆಯೂ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಹೊಸ ಫೀಚರ್ ಹೊಸ ಸಿಮ್ ಕಾರ್ಡ್ ಖರೀದಿಸದೆ ಅಥವಾ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸದೆಯೇ ಕರೆಗಳನ್ನು ಮಾಡಲು ಅವರಿಗೆ ಅನುವು ಮಾಡಿಕೊಡುತ್ತದೆ. ಬಿಎಸ್ಎನ್ಎಲ್ ಬಳಕೆದಾರರು ಕಚೇರಿಗಳು, ಮನೆಗಳು ಅಥವಾ ಜನದಟ್ಟಣೆಯ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇದ್ದರೆ ಈ ಆಯ್ಕೆ ಮೂಲಕ ಸುಲಭವಾಗಿ ಕರೆಯಲ್ಲಿ ಮಾತನಾಡಬಹುದು. ಇದಕ್ಕಾಗಿ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಕೆಲವು ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಬಿಎಸ್ಎನ್ಎಲ್ ತನ್ನ ಅಧಿಕೃತ…

Read More

ಹಾವು ಕಡಿತದಿಂದ ಸಾವು: ದೇಶದಲ್ಲೇ ಕರ್ನಾಟಕಕ್ಕೆ ಮೊದಲ ಸ್ಥಾನ; ಮೂರು ವರ್ಷಗಳಲ್ಲಿ 277 ಸಾವು!

ಬೆಂಗಳೂರು, ಏ.2: ದೇಶಾದ್ಯಂತ ಸಂಭವಿಸುತ್ತಿರುವ ಹಾವಿನ ಕಡಿತದ ಸಾವುಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯವು ಅಗ್ರಸ್ಥಾನದಲ್ಲಿದೆ ಎಂದು ಇತ್ತೀಚಿನ ಅಂಕಿಅಂಶಗಳು ಬಹಿರಂಗಪಡಿಸಿವೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 277 ಜನರು ಸರ್ಪದಂಶದಿಂದ ಪ್ರಾಣ ಕಳೆದುಕೊಂಡಿದ್ದಾರೆ. 2023 ರಿಂದ 2026ರ ಅವಧಿಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಸರ್ಪದಂಶ ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿವೆ. ಇದು ಇತರ ರಾಜ್ಯಗಳಿಗಿಂತ ಹೆಚ್ಚಿನ ಸಂಖ್ಯೆಯಾಗಿದೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಭಾಗದ ಜನತೆಯಾಗಿದ್ದಾರೆ. ಜಮೀನುಗಳಲ್ಲಿ ಕೆಲಸ ಮಾಡುವಾಗ ಅಥವಾ ರಾತ್ರಿ…

Read More

ಒಂದಲ್ಲ ಎರಡಲ್ಲ, ಬರೋಬ್ಬರಿ 167 ಕೋಟಿ ರೂ. ಕೊಟ್ಟು ರಾಜಾ ರವಿ ವರ್ಮನ ಚಿತ್ರ ಖರೀದಿಸಿದ ಔಷಧಿ ಕಿಂಗ್​ ಸೈರಸ್ ಪೂನಾವಾಲಾ

ನವದೆಹಲಿ, ಏಪ್ರಿಲ್ 02: ರಾಜಾ ರವಿ ವರ್ಮನ(Raja Ravi Verma) ಕುಂಚದಲ್ಲಿ ಮೂಡಿ ಬಂದಿರುವ ಯಶೋಧ ಮತ್ತು ಕೃಷ್ಣ ಇರುವ ಚಿತ್ರವನ್ನು ಔಷಧಿ ಕಿಂಗ್ ಸೈರಸ್ ಪೂನಾವಾಲಾ ಬರೋಬ್ಬರಿ 167 ಕೋಟಿ ರೂ. ಕೊಟ್ಟು ಖರೀದಿಸಿದ್ದಾರೆ. ಚಿತ್ರಕಲೆ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ  ಭಾರತೀಯ ಕಲಾಕೃತಿಯಾಗಿದೆ. ಕೈಗಾರಿಕೋದ್ಯಮಿ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥಾಪಕ ಸೈರಸ್ ಎಸ್ ಪೂನವಲ್ಲಾ ಈ ಆಯಿಲ್ ಪೇಂಟಿಂಗ್ ಖರೀದಿಸಿದ್ದಾರೆ. ಯುರೋಪಿಯನ್ ತಂತ್ರ ಮತ್ತು ಭಾರತೀಯ ಸಂವೇದನೆಯನ್ನು ತಮ್ಮ ಚಿತ್ರಕಲೆಯಲ್ಲಿ ಮಿಶ್ರಣ…

Read More

ಡಿವೈಡರ್​​ಗೆ ಗುದ್ದಿದ ಸಾರಿಗೆ ಬಸ್​​: ಅಪಘಾತದ ತೀವ್ರತೆಗೆ ಕಿತ್ತು ಬಂದ ಎಂಜಿನ್​​, ಮುಂಬದಿ ಚಕ್ರಗಳು!

ಬೆಂಗಳೂರು, ಏಪ್ರಿಲ್​​ 02: ವೇಗವಾಗಿ ಬಂದ ಆಂಧ್ರ ಸಾರಿಗೆ ಬಸ್ (Bus) ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಶಿವಾನಂದ ಸರ್ಕಲ್ ಬಳಿ ಇಂದು ಮುಂಜಾನೆ ನಡೆದಿದೆ. ಅಧೋನಿಯಿಂದ ಅನಂತಪುರ ಮೂಲಕ ಬೆಂಗಳೂರಿಗೆ ಬರ್ತಿದ್ದ ಬಸ್​​ ಡಿವೈಡರ್​ಗೆ ಡಿಕ್ಕಿಯಾದ ರಭಸಕ್ಕೆ ಮುಂಭಾಗದ ಚಕ್ರ ಮತ್ತು ಇಂಜಿನ್ ಕಿತ್ತು ಬಂದಿದೆ. ಬಸ್​​ನಲ್ಲಿರುವ ಪ್ರಯಾಣಿಕರೆಲ್ಲವೂ ಸುರಕ್ಷಿತವಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಹೈಗ್ರೌಂಡ್ಸ್ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ….

Read More

ನನ್ನ ಬೆಂಬಲ ದಳಪತಿ ವಿಜಯ್ ಪಕ್ಷಕ್ಕೆ, ರಾಜಕೀಯಕ್ಕೆ ಸೇರಲು ರೆಡಿ ಎಂದ ಜನಪ್ರಿಯ ನಟಿ

ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ತಿಂಗಳ 23ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಪ್ರಚಾರದಲ್ಲಿ ನಿರತವಾಗಿವೆ. ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಪ್ರಮುಖ ಪಕ್ಷಗಳ ಜೊತೆಗೆ, ನಾಯಕ ದಳಪತಿ ವಿಜಯ್ ಕೂಡ ಈ ಬಾರಿ ಕಣದಲ್ಲಿದ್ದಾರೆ. ಟಿವಿಕೆ ಪಕ್ಷದ ಪರವಾಗಿ ವಿಜಯ್ ಈಗಾಗಲೇ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಮತ್ತೊಂದೆಡೆ, ಚಲನಚಿತ್ರೋದ್ಯಮದ ಅನೇಕ ಸೆಲೆಬ್ರಿಟಿಗಳು ಸಹ ಈ ಚುನಾವಣೆಗೆ ಕಣದಲ್ಲಿದ್ದಾರೆ. ಈ ಸಂದರ್ಭದಲ್ಲಿ, ಜನಪ್ರಿಯ ನಾಯಕಿ ವಾಣಿ ಭೋಜನ್ ಅವರು ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು…

Read More

Video: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ತಂದೆ ಮಗಳ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಗಳ ಪಾಲಿಗೆ ಅಪ್ಪ (father) ಎಲ್ಲವೂ ಆಗಿರುತ್ತಾನೆ. ಇತ್ತ ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಆಕೆಗಿಂತ ದೊಡ್ಡ ಪ್ರಪಂಚ ಬೇರೆ ಇಲ್ಲ. ಮಗಳ ಖುಷಿಯಲ್ಲೇ ತನ್ನ ಖುಷಿ ಕಾಣುವ ತಂದೆಯ ಹೃದಯ ಸ್ಪರ್ಶಿ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ  ಪುಟಾಣಿಯೊಂದು ನಡುರಸ್ತೆಯಲ್ಲೇ ತಂದೆಯ ಮೇಲೆ ಕೋಪಿಸಿಕೊಂಡಿದೆ. ತಂದೆ ಎಷ್ಟೇ ರಮಿಸಿದ್ರೂ ಈ ಪುಟಾಣಿಯ ಕೋಪ ಮಾತ್ರ ಕಡಿಮೆಯಾಗಿಲ್ಲ. ಈ ಮುದ್ದಾದ ವಿಡಿಯೋ ನೆಟ್ಟಿಗರ ಮೊಗದಲ್ಲಿ ನಗುತರಿಸಿದೆ….

Read More

‘ರಾಮಾಯಣ’ ಟೀಸರ್ ಅಲ್ಲಿ ಯಶ್ ಲುಕ್ ಹೇಗಿದೆ? ಇಲ್ಲಿದೆ ಫೋಟೋಸ್

ರಾಕಿಂಗ್ ಸ್ಟಾರ್ ಯಶ್ ಅವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಇಂದು (ಏಪ್ರಿಲ್ 2) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಅದಕ್ಕೆ ಪೂರ್ಣ ಪ್ರಮಾಣದಲ್ಲಿ ಉತ್ತರ ಸಿಕ್ಕಿಲ್ಲ. ರಾಮನಾಗಿ ರಣಬೀರ್ ಕಪೂರ್ ಅವರು ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಗಮನ ಸೆಳೆದಿದೆ. ರಾಮನ ಪಾತ್ರಕ್ಕೆ ಅವರು ಸೂಕ್ತವಾಗಿ ಹೊಂದಿಕೆ ಆಗಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಅವರ ಪಾತ್ರಕ್ಕೆ 10ಕ್ಕೆ 10 ಅಂಕ ಸಿಕ್ಕಿದೆ. ಸೀತಾ ಮಾತೆಯಾಗಿ…

Read More

ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ: ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು, ಬೇಸರದಿಂದ ತಾಯಿ ಆತ್ಮಹತ್ಯೆ

ಬೆಂಗಳೂರು, ಏಪ್ರಿಲ್ 2: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore) ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಬಕೆಟ್ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದೆ. ಮಗುವಿನ ಸಾವಿಗೆ ನಾನೇ ಕಾರಣ ಎಂಬ ಅಪರಾಧ ಪ್ರಜ್ಞೆಯಿಂದ ಮನನೊಂದ ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದು, ಕೆಲಸ ಮುಗಿಸಿ ಮನೆಗೆ ಬಂದ ಆಕೆಯ ಪತಿಗೆ ಆಘಾತ ಕಾದಿತ್ತು. ಈ ದಾರುಣ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ. ಘಟನೆಯ ವಿವರ ಮೃತರನ್ನು ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ (29) ಮತ್ತು ಅವರ 11 ತಿಂಗಳ…

Read More