Headlines

nagaraj11081993

NASA Artemis Rocket Launch: 54 ವರ್ಷಗಳ ಬಳಿಕ ಚಂದ್ರನೆಡೆಗೆ ಮತ್ತೆ ಮಾನವನ ಹೆಜ್ಜೆ, 4 ಗಗನಯಾತ್ರಿಗಳ ಕಳುಹಿಸಿದ ನಾಸಾ

ವಾಷಿಂಗ್ಟನ್, ಏಪ್ರಿಲ್ 02: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, 54 ವರ್ಷಗಳ ಬಳಿಕ ಚಂದ್ರನೆಡೆಗೆ ಗಗನಯಾತ್ರಿಗಳನ್ನು ಕಳುಹಿಸಿದೆ. ನಾಸಾ ಈ ನಾಲ್ವರು ಗಗನಯಾತ್ರಿಗಳಿಗೆ ಫ್ಲೋರಿಡಾದಲ್ಲಿ ತರಬೇತಿ ನೀಡಿ ನಂತರ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಈ ಗಗನಯಾತ್ರಿಗಳಲ್ಲಿ ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್‌ಗಳಾದ ವಿಕ್ಟರ್ ಗ್ಲೋವರ್ ಮತ್ತು ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಸೇರಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ), ಮುಂದಿನ ಕೆಲವು ವರ್ಷಗಳಲ್ಲಿ ಚಂದ್ರನ ಮೇಲೆ ಶಾಶ್ವತ…

Read More

‘ರಾಮಾಯಣ’ ಟೀಸರ್: ದೃಶ್ಯ ವೈಭವದಲ್ಲಿ ಮಿಂದೆದ್ದ ಹಿಂದೂ ಪುರಾಣ ಪುಣ್ಯ ಕತೆ

ಭಾರತ ಚಿತ್ರರಂಗದ (Indian Film) ಅತ್ಯಂತ ದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ದ (Ramayana) ಟೀಸರ್ ಇಂದು (ಏಪ್ರಿಲ್ 02) ಬಿಡುಗಡೆ ಆಗಿದೆ. ಹನುಮಜಯಂತಿಯಂದು ‘ರಾಮಾಯಣ’ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರೆಗೆ ಹಲವಾರು ಭಾರಿ, ಹಲವಾರು ಭಾಷೆಗಳಲ್ಲಿ ರಾಮಾಯಣ ಕತೆ ಸಿನಿಮಾ ಆಗಿ ಮೂಡಿ ಬಂದಿದೆ. ಪ್ರತಿಬಾರಿಯೂ ಭಿನ್ನ ರೀತಿಯಲ್ಲಿ ಪುರಾಣ ಪುಣ್ಯ ಕತೆಯನ್ನು ಪ್ರಸ್ತುತ ಪಡಿಸಲಾಗಿದೆ. ಇದೀಗ ಬರಲಿರುವ ‘ರಾಮಾಯಣ’ ಈ ವರೆಗೆ ಭಾರತೀಯ ಚಿತ್ರರಂಗ ಮಾಡಿದ ಸಾಹಸಗಳಲ್ಲಿಯೇ…

Read More

ಮಗನ ರೋಗ ಗುಣಪಡಿಸಲು ಮಾಟಗಾತಿಯ ಮಾತು ನಂಬಿ ಮಗಳನ್ನೇ ಬಲಿಕೊಟ್ಟ ತಾಯಿ

ಜಾರ್ಖಂಡ್, ಏಪ್ರಿಲ್ 02: ಮಾಟಗಾತಿಯ ಮಾತು ಕೇಳಿ ಮಹಿಳೆಯೊಬ್ಬಳು ಮಗನ ರೋಗ(Disease) ಗುಣಪಡಿಸಲು ಮಗಳನ್ನೇ ಬಲಿಕೊಟ್ಟಿರುವ ಘಟನೆ ಜಾರ್ಖಂಡ್​​ನಲ್ಲಿ ನಡೆದಿದೆ. ಬಾಲಕಿಯ ತಾಯಿ ಆಕೆಯ ಪ್ರಿಯಕರ ಸೇರಿ ಮೂವರನ್ನು ಬಂಧಿಸಲಾಗಿದೆ. ಮಾರ್ಚ್​ 24ರ ರಾತ್ರಿ ಕುಸುಂಭ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆ ದಿನ ಸಂಜೆ ರಾಮ ನವಮಿ ಮೆರವಣಿಗೆ ನಡೆಯುತ್ತಿತ್ತು ಅಂದು ಬಾಲಕಿ ಕಾಣೆಯಾಗಿದ್ದಳು. ಮರುದಿನ ಬೆಳಗ್ಗೆ 8.30 ರ ಸುಮಾರಿಗೆ ಸ್ಥಳೀಯ ಮಾಧ್ಯಮಿಕ ಶಾಲೆಯ ಹಿಂಭಾಗದ ಬಿದಿರಿನ ತೋಪಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಸಂತ್ರಸ್ತೆಯ…

Read More

Tulasi Puja: ತುಳಸಿ ಗಿಡ ನೆಡುವಾಗ ಈ ತಪ್ಪು ಮಾಡಲೇಬೇಡಿ; ವಾಸ್ತು ತಜ್ಞರ ಸಲಹೆ ಇಲ್ಲಿದೆ

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಈ ಗಿಡವನ್ನು ನೆಡಲು ಗುರುವಾರ ಮತ್ತು ಶುಕ್ರವಾರಗಳು ಅತ್ಯಂತ ಶ್ರೇಷ್ಠವಾದ ದಿನಗಳಾಗಿವೆ. ಗುರುವಾರವು ಜಗತ್ಪಾಲಕನಾದ ವಿಷ್ಣುವಿಗೆ ಹಾಗೂ ಶುಕ್ರವಾರವು ಸಂಪತ್ತಿನ ದೇವತೆಯಾದ ಲಕ್ಷ್ಮಿಗೆ ಸಮರ್ಪಿತವಾಗಿರುವುದರಿಂದ, ಈ ದಿನಗಳಲ್ಲಿ ತುಳಸಿಯನ್ನು ನೆಡುವುದರಿಂದ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ. ಅದರಲ್ಲೂ ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ತುಳಸಿಯನ್ನು ನೆಟ್ಟು ಪೂಜಿಸುವುದು ಅನಂತ ಪುಣ್ಯವನ್ನು ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ನಿಷೇಧಿತ ದಿನಗಳು ಮತ್ತು ಮುನ್ನೆಚ್ಚರಿಕೆ: ವಾಸ್ತು ಶಾಸ್ತ್ರದ ಪ್ರಕಾರ, ಎಲ್ಲಾ ದಿನಗಳಲ್ಲೂ ತುಳಸಿಯನ್ನು…

Read More

ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಸರಿಗಟ್ಟಿದ ಸಾಹಿಬ್​ಝಾದ ಫರ್ಹಾನ್

PSL 2026: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಸಾಹಿಬ್​ಝಾದ ಫರ್ಹಾನ್ (Sahibzada Farhan) ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಶತಕದೊಂದಿಗೆ ಸಾಹಿಬ್​ಝಾದ, ವಿರಾಟ್ ಕೊಹ್ಲಿಯ (Virat Kohli) ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ. ಲಾಹೋರ್​ನಲ್ಲಿ ನಡೆದ ಪಿಎಸ್​ಎಲ್​ನ 8ನೇ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ಸ್ ಹಾಗೂ ಹೈದರಾಬಾದ್ ಕಿಂಗ್ಸ್​ಮೆನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಕಿಂಗ್ಸ್​​ಮೆನ್ ತಂಡವು 20 ಓವರ್​​​ಗಳಲ್ಲಿ 225 ರನ್​ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಮುಲ್ತಾನ್ ಸುಲ್ತಾನ್ಸ್ ಪರ…

Read More

ಜೈಲಿಂದ ಬಂದ್ರೂ ಬುದ್ಧಿ ಬಂದಿಲ್ಲ, ಜಾಮೀನಿನ ಮೇಲೆ ಹೊರ ಬಂದ ದಿನವೇ ಆಭರಣದಂಗಡಿಯಲ್ಲಿ ಕಳವು ಮಾಡಿದ ಮಹಿಳೆ

ಫರಿದಾಬಾದ್, ಏಪ್ರಿಲ್ 02: ಜೈಲಿಂದ ಹೊರಬಂದ ದಿನವೇ ಮಹಿಳೆಯೊಬ್ಬಳು ಆಭರಣದಂಗಡಿ(Jewellery Shop)ಯಲ್ಲಿ ಕಳವು ಮಾಡಿ ಮತ್ತೆ ಜೈಲಿಗೆ ಹೋಗಿರುವ ಘಟನೆ ಫರಿದಾಬಾದ್​ನಲ್ಲಿ ನಡೆದಿದೆ. ಆರೋಪಿ ಮಹಿಳೆ ಕಾಜಲ್ (30) ವಿವಾಹಿತಳಾಗಿದ್ದು, ಅಪರಾಧಿಯಾಗಿದ್ದಾಳೆ. ಮೂರು ತಿಂಗಳ ಹಿಂದೆ ಫರಿದಾಬಾದ್ ಜಿಲ್ಲೆಯ ನೀಮ್ಕಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಆಕೆ ಮತ್ತೆ ಅಪರಾಧ ಎಸಗಿದ್ದಾಳೆ. ಕಾಜಲ್‌ಳನ್ನು ಬುಧವಾರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಫರಿದಾಬಾದ್‌ನ ಭಗತ್ ಸಿಂಗ್ ಕಾಲೋನಿಯ ರಾಜೇಶ್ ಕುಮಾರ್ ಎಂಬವರು ಬಲ್ಲಬ್‌ಗಢ…

Read More

Chaitra Pournami: ಇಂದು ಚೈತ್ರ ಪೌರ್ಣಮಿ; ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿ

ಚೈತ್ರ ಪೌರ್ಣಮಿಯು ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಪ್ರತಿ ತಿಂಗಳು ಹುಣ್ಣಿಮೆ ಮತ್ತು ಅಮಾವಾಸ್ಯೆಗಳು ಬರುತ್ತವೆ, ಆದರೆ ಕೆಲವು ಪರ್ವಕಾಲ ಮತ್ತು ಪರ್ವ ತಿಥಿಗಳಿಗೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಚೈತ್ರ ಪೌರ್ಣಮಿಯು ಅಂತಹ ಒಂದು ಪವಿತ್ರ ದಿನವಾಗಿದೆ. ಕೇವಲ ಒಂದು ಕ್ಷಣದ ಪೂಜೆ ಅಥವಾ ಒಂದು ನಿಮಿಷದ ಪ್ರಾರ್ಥನೆಯಿಂದ ಭಗವಂತನ ಕೃಪೆಯನ್ನು ಪಡೆಯಲು ಇದು ಸೂಕ್ತವಾದ ಸಮಯ. ಇದನ್ನು ದವನದ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ….

Read More

ಮಸ್ತಾನ್​ಸಾಬ್ ದರ್ಗಾದಲ್ಲಿ ಕರಗಕ್ಕೆ ಸಲ್ಲಿಸೋ ಪೂಜೆ ಹೇಗಿರುತ್ತೆ? ಮುಜಾವರ್ ಹೇಳಿದ್ದೇನು ನೋಡಿ

ಬೆಂಗಳೂರು, ಏಪ್ರಿಲ್ 2: ಬೆಂಗಳೂರು ಕರಗ ಮಹೋತ್ಸವದ ಮೆರವಣಿಗೆ ಕರಗವು ಕಾಟನ್‌ಪೇಟೆಯ ಹಜರತ್ ಮಸ್ತಾನ್​ಸಾಬ್ ದರ್ಗಾಗೆ ಭೇಟಿ ನೀಡುತ್ತದೆ. ಇದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಭಾವೈಕ್ಯತೆಯ ಪ್ರತೀಕವಾಗಿದೆ. ದರ್ಗಾದ ಮುಜಾವರ್ ಫರೋಜ ಮೋಶ್ರಫ್ ಅವರು ಈ ಭೇಟಿಯ ಮಹತ್ವ ಮತ್ತು ಆಚರಣೆಯ ಕುರಿತು ಮಾತನಾಡಿದ್ದಾರೆ. ಪ್ರತಿವರ್ಷವೂ ಕರಗವು ದರ್ಗಾಕ್ಕೆ ಆಗಮಿಸಿ, ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತದೆ. ಈ ಸಂದರ್ಭದಲ್ಲಿ ಹೂವಿನ ಹಾರಗಳನ್ನು ಅರ್ಪಿಸಲಾಗುತ್ತದೆ ಮತ್ತು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ…

Read More

ಬಿರುಗಾಳಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ತಾಯಿ-ಮಗನಿಗೆ ಗಾಯ

ಬೆಳಗಾವಿ, ಏ. 2: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಭೀಕರ ಬಿರುಗಾಳಿ ಮಳೆಗೆ ಭಾರೀ ಅನಾಹುತ ಸಂಭವಿಸಿದೆ. ಮಳೆಯ ಅಬ್ಬರಕ್ಕೆ ಸಿಲುಕಿ ಮನೆಯೊಂದರ ಮೇಲೆ ತೆಂಗಿನ ಮರ ಮುರಿದು ಬಿದ್ದ ಪರಿಣಾಮ, ಮನೆಯಲ್ಲಿದ್ದ ತಾಯಿ ಮತ್ತು ಮಗ ತೀವ್ರವಾಗಿ ಗಾಯಗೊಂಡಿದ್ದಾರೆ. ಅನಿಗೋಳ ಗ್ರಾಮದ ನಿವಾಸಿ ನೀಲವ್ವ ಯಲ್ಲಯ್ಯನವರ (70) ಮತ್ತು ಅವರ ಮಗ ಉಳವಪ್ಪ (37) ಮನೆಯಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಏಕಾಏಕಿ ಸುರಿದ ಅಕಾಲಿಕ ಮಳೆ ಮತ್ತು ಬಿರುಗಾಳಿಗೆ…

Read More

IPL 2026: ಎಂಎಸ್ ಧೋನಿ ಕಮ್​ಕ್ಯಾಕ್: ಸಿಎಸ್​ಕೆ ಅಭಿಮಾನಿಗಳಿಗೆ ಕೊನೆಗೂ ಸಿಕ್ಕಿತು ಗುಡ್​ ನ್ಯೂಸ್

ಬೆಂಗಳೂರು (ಏ. 02): ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League) ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್, ಈ ಬಾರಿಯ 19ನೇ ಸೀಸನ್‌ನಲ್ಲಿ ಕಳಪೆ ಆರಂಭವನ್ನು ಪಡೆದುಕೊಂಡಿದೆ. ಸಿಎಸ್‌ಕೆ ತನ್ನ ಸೀಸನ್‌ನ ಆರಂಭಿಕ ಪಂದ್ಯದಲ್ಲೇ ರಾಜಸ್ಥಾನ ರಾಯಲ್ಸ್ ವಿರುದ್ಧ ಎಂಟು ವಿಕೆಟ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಸಿಎಸ್‌ಕೆ ಋತುವಿನ ಆರಂಭಿಕ ಪಂದ್ಯಗಳಲ್ಲಿ ಕೆಲವು ಪ್ರಮುಖ ಆಟಗಾರರಿಲ್ಲದೆ ಕಣಕ್ಕಿಳಿಯುತ್ತಿದೆ. ಮುಖ್ಯವಾಗಿ ತಂಡದ ಸ್ಟಾರ್ ಪ್ಲೇಯರ್, ಮಾಜಿ ನಾಯಕ ಎಂಎಸ್ ಧೋನಿ. ಧೋನಿ ಐಪಿಎಲ್…

Read More