ಮಸ್ತಾನ್ಸಾಬ್ ದರ್ಗಾದಲ್ಲಿ ಕರಗಕ್ಕೆ ಸಲ್ಲಿಸೋ ಪೂಜೆ ಹೇಗಿರುತ್ತೆ? ಮುಜಾವರ್ ಹೇಳಿದ್ದೇನು ನೋಡಿ
ಬೆಂಗಳೂರು, ಏಪ್ರಿಲ್ 2: ಬೆಂಗಳೂರು ಕರಗ ಮಹೋತ್ಸವದ ಮೆರವಣಿಗೆ ಕರಗವು ಕಾಟನ್‌ಪೇಟೆಯ ಹಜರತ್ ಮಸ್ತಾನ್ಸಾಬ್ ದರ್ಗಾಗೆ ಭೇಟಿ ನೀಡುತ್ತದೆ. ಇದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಭಾವೈಕ್ಯತೆಯ ಪ್ರತೀಕವಾಗಿದೆ. ದರ್ಗಾದ ಮುಜಾವರ್ ಫರೋಜ ಮೋಶ್ರಫ್ ಅವರು ಈ ಭೇಟಿಯ ಮಹತ್ವ ಮತ್ತು ಆಚರಣೆಯ ಕುರಿತು ಮಾತನಾಡಿದ್ದಾರೆ. ಪ್ರತಿವರ್ಷವೂ ಕರಗವು ದರ್ಗಾಕ್ಕೆ ಆಗಮಿಸಿ, ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತದೆ. ಈ ಸಂದರ್ಭದಲ್ಲಿ ಹೂವಿನ ಹಾರಗಳನ್ನು ಅರ್ಪಿಸಲಾಗುತ್ತದೆ ಮತ್ತು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ…