All posts by nagaraj11081993

ಮಸ್ತಾನ್​ಸಾಬ್ ದರ್ಗಾದಲ್ಲಿ ಕರಗಕ್ಕೆ ಸಲ್ಲಿಸೋ ಪೂಜೆ ಹೇಗಿರುತ್ತೆ? ಮುಜಾವರ್ ಹೇಳಿದ್ದೇನು ನೋಡಿ

ಮಸ್ತಾನ್​ಸಾಬ್ ದರ್ಗಾದಲ್ಲಿ ಕರಗಕ್ಕೆ ಸಲ್ಲಿಸೋ ಪೂಜೆ ಹೇಗಿರುತ್ತೆ? ಮುಜಾವರ್ ಹೇಳಿದ್ದೇನು ನೋಡಿ

ಬೆಂಗಳೂರು, ಏಪ್ರಿಲ್ 2: ಬೆಂಗಳೂರು ಕರಗ ಮಹೋತ್ಸವದ ಮೆರವಣಿಗೆ ಕರಗವು ಕಾಟನ್‌ಪೇಟೆಯ ಹಜರತ್ ಮಸ್ತಾನ್​ಸಾಬ್ ದರ್ಗಾಗೆ ಭೇಟಿ ನೀಡುತ್ತದೆ. ಇದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಭಾವೈಕ್ಯತೆಯ ಪ್ರತೀಕವಾಗಿದೆ. ದರ್ಗಾದ ಮುಜಾವರ್ ಫರೋಜ ಮೋಶ್ರಫ್ ಅವರು ಈ ಭೇಟಿಯ ಮಹತ್ವ ಮತ್ತು ಆಚರಣೆಯ ಕುರಿತು ಮಾತನಾಡಿದ್ದಾರೆ. ಪ್ರತಿವರ್ಷವೂ ಕರಗವು ದರ್ಗಾಕ್ಕೆ ಆಗಮಿಸಿ, ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತದೆ. ಈ ಸಂದರ್ಭದಲ್ಲಿ ಹೂವಿನ ಹಾರಗಳನ್ನು ಅರ್ಪಿಸಲಾಗುತ್ತದೆ ಮತ್ತು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಆಚರಣೆಯು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಮತ್ತು ದರ್ಗಾದಲ್ಲಿ ಯಾವುದೇ ರೀತಿಯ ಭೇದಭಾವವಿಲ್ಲದೆ ಎರಡೂ ಸಮುದಾಯದ ಜನರು ಒಟ್ಟಾಗಿ ಪಾಲ್ಗೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ಈ ಭೇಟಿಯು ಬೆಂಗಳೂರಿನಲ್ಲಿ ಸಾಮರಸ್ಯದ ಸಂದೇಶವನ್ನು ಸಾರುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿರುಗಾಳಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ತಾಯಿ-ಮಗನಿಗೆ ಗಾಯ

ಬೆಳಗಾವಿ, ಏ. 2: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಭೀಕರ ಬಿರುಗಾಳಿ ಮಳೆಗೆ ಭಾರೀ ಅನಾಹುತ ಸಂಭವಿಸಿದೆ. ಮಳೆಯ ಅಬ್ಬರಕ್ಕೆ ಸಿಲುಕಿ ಮನೆಯೊಂದರ ಮೇಲೆ ತೆಂಗಿನ ಮರ ಮುರಿದು ಬಿದ್ದ ಪರಿಣಾಮ, ಮನೆಯಲ್ಲಿದ್ದ ತಾಯಿ ಮತ್ತು ಮಗ ತೀವ್ರವಾಗಿ ಗಾಯಗೊಂಡಿದ್ದಾರೆ. ಅನಿಗೋಳ ಗ್ರಾಮದ ನಿವಾಸಿ ನೀಲವ್ವ ಯಲ್ಲಯ್ಯನವರ (70) ಮತ್ತು ಅವರ ಮಗ ಉಳವಪ್ಪ (37) ಮನೆಯಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಏಕಾಏಕಿ ಸುರಿದ ಅಕಾಲಿಕ ಮಳೆ ಮತ್ತು ಬಿರುಗಾಳಿಗೆ ಮನೆಯ ಪಕ್ಕದಲ್ಲಿದ್ದ ತೆಂಗಿನ ಮರ ಬುಡಮೇಲಾಗಿ ಮನೆ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಮನೆಯಲ್ಲಿದ್ದ ದಿನಬಳಕೆ ವಸ್ತುಗಳು ನಾಶವಾಗಿವೆ.ಮರ ಬಿದ್ದ ಸದ್ದನ್ನು ಕೇಳಿದ ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ತಾಯಿ ಮತ್ತು ಮಗನನ್ನು ಸ್ಥಳೀಯರು ಸಾಹಸಪಟ್ಟು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಎಂಎಸ್ ಧೋನಿ ಕಮ್​ಕ್ಯಾಕ್: ಸಿಎಸ್​ಕೆ ಅಭಿಮಾನಿಗಳಿಗೆ ಕೊನೆಗೂ ಸಿಕ್ಕಿತು ಗುಡ್​ ನ್ಯೂಸ್

ಬೆಂಗಳೂರು (ಏ. 02): ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League) ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್, ಈ ಬಾರಿಯ 19ನೇ ಸೀಸನ್‌ನಲ್ಲಿ ಕಳಪೆ ಆರಂಭವನ್ನು ಪಡೆದುಕೊಂಡಿದೆ. ಸಿಎಸ್‌ಕೆ ತನ್ನ ಸೀಸನ್‌ನ ಆರಂಭಿಕ ಪಂದ್ಯದಲ್ಲೇ ರಾಜಸ್ಥಾನ ರಾಯಲ್ಸ್ ವಿರುದ್ಧ ಎಂಟು ವಿಕೆಟ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಸಿಎಸ್‌ಕೆ ಋತುವಿನ ಆರಂಭಿಕ ಪಂದ್ಯಗಳಲ್ಲಿ ಕೆಲವು ಪ್ರಮುಖ ಆಟಗಾರರಿಲ್ಲದೆ ಕಣಕ್ಕಿಳಿಯುತ್ತಿದೆ. ಮುಖ್ಯವಾಗಿ ತಂಡದ ಸ್ಟಾರ್ ಪ್ಲೇಯರ್, ಮಾಜಿ ನಾಯಕ ಎಂಎಸ್ ಧೋನಿ.

ಧೋನಿ ಐಪಿಎಲ್ 2026 ರ ಸೀಸನ್‌ನ ಮೊದಲ ಎರಡು ವಾರಗಳ ಕಾಲ ಕಣಕ್ಕಿಳಿಯುವುದಿಲ್ಲ. ಅವರು ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಪುನರ್ವಸತಿಗೆ ಒಳಗಾಗಿದ್ದಾರೆ. ಪರಿಣಾಮವಾಗಿ, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕಾಗಿ ಅವರು ಸಿಎಸ್‌ಕೆ ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸಲಿಲ್ಲ. ಇದರಿಂದ ಅವರ ಅಭಿಮಾನಿಗಳು ತೀರ್ವ ಬೇಸರಗೊಂಡಿದ್ದರು. ಆದರೀಗ ಧೋನಿಯ ಫಿಟ್‌ನೆಸ್‌ಗೆ ಸಂಬಂಧಿಸಿದ ವಿಡಿಯೋ ಹೊರಬಂದಿದೆ, ಇದನ್ನು ಕಂಡು ಸಿಎಸ್‌ಕೆ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ.

ನೆಟ್ ಪ್ರಾಕ್ಟೀಸ್ ಶುರು ಮಾಡದ ಧೋನಿ

ಐಪಿಎಲ್ 2026 ರ ಸೀಸನ್ ಆರಂಭಕ್ಕೂ ಮುನ್ನ ಎಂಎಸ್ ಧೋನಿ ಅವರ ಫಿಟ್ನೆಸ್ ಬಗ್ಗೆ ಸಿಎಸ್‌ಕೆ ಬಿಡುಗಡೆ ಮಾಡಿದ ಅಧಿಕೃತ ಮಾಹಿತಿಯಲ್ಲಿ, ಧೋನಿ ಅವರಿಗೆ ಕಾಲಿನ ಸ್ನಾಯು ಸೆಳೆತವಿದ್ದು, ಮೊದಲ ಎರಡು ವಾರಗಳ ಅವರು ಕಣಕ್ಕಿಳಿಯಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಧೋನಿ ಅನುಪಸ್ಥಿತಿ ಸಿಎಸ್‌ಕೆಗೆ ದೊಡ್ಡ ಹೊಡೆತ ಎಂದೇ ಪರಿಗಣಿಸಲಾಗಿತ್ತು. ಅದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಂಡುಬಂತು ಕೂಡ.

PSL 2026: ಪಾಕ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಭಾರೀ ಬಿರುಗಾಳಿ: ಕಂಟ್ರೋಲ್ ತಪ್ಪಿ ಏನೆಲ್ಲ ಆಯಿತು ನೋಡಿ

ಸಿಎಸ್‌ಕೆ ಈಗ ತನ್ನ ಎರಡನೇ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಏಪ್ರಿಲ್ 3 ರಂದು ತನ್ನ ತವರು ಮೈದಾನದಲ್ಲಿ ಆಡಲಿದೆ. ಇದಕ್ಕೂ ಮುನ್ನ ಏಪ್ರಿಲ್ 1 ರಂದು ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್​ಕೆ ಅಭ್ಯಾಸ ನಡೆಸಿತು, ವಿಶೇಷ ಎಂದರೆ ಈ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ಎಂಎಸ್ ಧೋನಿ ಕೂಡ ಭಾಗವಹಿಸಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಅವರು ನೆಟ್ಸ್‌ಗೆ ಮರಳಿರುವುದು ಸಿಎಸ್‌ಕೆ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯಾಗಿದೆ. ಧೋನಿ ಶೀಘ್ರದಲ್ಲೇ ಸಂಪೂರ್ಣವಾಗಿ ಫಿಟ್ ಆಗಿ ಮೈದಾನಕ್ಕೆ ಮರಳಲು ಸಿದ್ಧರಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಧೋನಿ ಅಭ್ಯಾಸಕ್ಕೆ ಆಗಮನಿಸಿದ ವಿಡಿಯೋ:

 

ಲಯ ಕಳೆದುಕೊಂಡ ಚೆನ್ನೈ

ಕಳೆದ ಕೆಲವು ಐಪಿಎಲ್ ಋತುಗಳು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ನೀಡಿಲ್ಲ. ಐಪಿಎಲ್‌ 2026 ರಲ್ಲಿ ಸಿಎಸ್​ಕೆ ತನ್ನ ಮುಂದಿನ ಪಂದ್ಯ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಆದರೆ ಇವರ ವಿರುದ್ಧವೂ ಸಿಎಸ್‌ಕೆ ತಂಡದ ದಾಖಲೆ ಅದ್ಭುತ ಎಂಬಂತಿಲ್ಲ. ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ಒಟ್ಟು 32 ಪಂದ್ಯಗಳು ನಡೆದಿದ್ದು, ಸಿಎಸ್‌ಕೆ 16 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ಕೂಡ 16 ಪಂದ್ಯಗಳಲ್ಲಿ ಗೆದ್ದಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಒಂಬತ್ತು ಪಂದ್ಯಗಳು ನಡೆದಿದ್ದು, ಸಿಎಸ್‌ಕೆ ನಾಲ್ಕು ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ಐದು ಪಂದ್ಯಗಳಲ್ಲಿ ಗೆದ್ದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸೈಜ್ ಎಷ್ಟು’ ಎಂದು ಕೇಳಿದವನಿಗೆ ಚಪ್ಪಲಿ ತೋರಿಸಿ ಉತ್ತರ ಕೊಟ್ಟ ಅದಾ ಶರ್ಮಾ

ನಟಿ ಅದಾ ಶರ್ಮಾ (Adah Sharma) ಅವರು ಕನ್ನಡ ಚಿತ್ರರಂಗದವರಿಗೂ ಪರಿಚಿತರು. ಪುನೀತ್ ರಾಜ್​​ಕುಮಾರ್ ನಟನೆಯ ‘ರಣ ವಿಕ್ರಮ’ ಸಿನಿಮಾದಲ್ಲಿ ಅದಾ ಶರ್ಮಾ ಅವರು ನಟಿಸಿದ್ದರು. ಈ ಸಿನಿಮಾ ಮೆಚ್ಚುಗೆ ಪಡೆಯಿತು. ‘ದಿ ಕೇರಳ ಸ್ಟೋರಿ’ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಸದ್ಯ ಅವರು ಬಾಲಿವುಡ್​​ನಲ್ಲಿ ಬ್ಯುಸಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿರೋ ಅದಾ ಶರ್ಮಾ ಅವರು ಆಗಾಗ ವಿವಿಧ ರೀತಿಯ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಅಶ್ಲೀಲವಾಗಿ ಪ್ರಶ್ನೆ ಕೇಳಿದವರಿಗೆ ಉತ್ತರ ನೀಡಿದ್ದಾರೆ.

ಸೆಲೆಬ್ರಿಟಿಗಳು ಕೆಲವೊಮ್ಮೆ ಬೋಲ್ಡ್ ಆಗಿ ಕಾಣಿಸಿಕೊಂಡು ಫೋಟೋ ಹಾಕುತ್ತಾರೆ. ಈ ಪೋಸ್ಟ್​​ಗಳ ಕಮೆಂಟ್ ಸೆಕ್ಷನ್​​ಗೆ ತೆರಳಿದರೆ ಸಾಕಷ್ಟು ಕೆಟ್ಟ​ ಕಮೆಂಟ್​​​ಗಳನ್ನು ಕಾಣಬಹುದು. ಕೆಲವು ನಟಿಯರು ಇದಕ್ಕೆ ಉತ್ತರ ಕೊಡದೆ ಸುಮ್ಮನೆ ಇದ್ದರೆ ಇನ್ನೂ ಕೆಲವರು ಈ ರೀತಿಯ ಪ್ರಶ್ನೆ ಕೇಳಿದವರಿಗೆ ಖಡಕ್ ಆಗಿ ಉತ್ತರ ನೀಡುತ್ತಾರೆ. ಅದಾ ಶರ್ಮಾ ಕೂಡ ಹಾಗೆಯೇ ಮಾಡಿದ್ದಾರೆ.

ಅದಾ ಶರ್ಮಾ ಅವರು ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸಿದ್ದರು. ಈ ವೇಳೆ ಅದಾ ಶರ್ಮಾ ಅವರಿಗೆ ‘ನಿಮ್ಮ ಸೈಜ್ ಎಷ್ಟು’ ಎಂದು ಕೇಳಲಾಗಿದೆ. ಇದು ಕೆಟ್ಟ ಉದ್ದೇಶದಿಂದ ಕೇಳಿದ ಪ್ರಶ್ನೆ ಎಂಬುದು ಅದಾಗೆ ಗೊತ್ತಾಗಿದೆ. ಹೀಗಾಗಿ, ಅವರು ‘ಸೈಜ್ 9, ನನ್ನ ಚಪ್ಪಲಿಯದ್ದು’ ಎಂದಿದ್ದಾರೆ. ಈ ವೇಳೆ ಅವರು ಪರೋಕ್ಷವಾಗಿ ಮಧ್ಯ ಬೆಟ್ಟನ್ನು ತೋರಿಸಿದ್ದಾರೆ. ಈ ಮೂಲಕ ಪ್ರಶ್ನೆ ಕೇಳಿದವನಿಗೆ ಅದಾ ಮಂಗಳಾರತಿ ಮಾಡಿದ್ದಾರೆ. ಅವರ ಕ್ರಮಕ್ಕೆ ಎಲ್ಲರೂ ಸಂತಸ ಹೊರಹಾಕಿದ್ದಾರೆ.

ಇದನ್ನೂ ಓದಿ: ಪುನೀತ್ ಜೊತೆ ನಟಿಸಿದ ಅದಾ ಶರ್ಮಾ ನಿಜವಾದ ಹೆಸರೇನು ಗೊತ್ತಾ? ಪಕ್ಕಾ ಟ್ರೆಡಿಷನಲ್

ಸಾಮಾನ್ಯವಾಗಿ ಮುಜುಗರ ತರುವ ಪ್ರಶ್ನೆ ಅಥವಾ ಅಶ್ಲೀಲ ಪ್ರಶ್ನೆ ಕೇಳಿದಾಗ ಸೆಲೆಬ್ರಿಟಿಗಳು ಆ ಬಗ್ಗೆ ಉತ್ತರ ನೀಡಲು ಹಿಂದೇಟು ಹಾಕುತ್ತಾರೆ. ಆ ರೀತಿಯ ಪ್ರಶ್ನೆಗಳನ್ನು ಸ್ಕಿಪ್ ಮಾಡುತ್ತಾರೆ. ಆದರೆ, ಅದಾ ಶರ್ಮಾ ಅವರು ಆ ರೀತಿ ಮಾಡಿಲ್ಲ. ಅವರು ಈ ಪ್ರಶ್ನೆಯನ್ನು ಗಂಭೀರವಾಗಿ ಸ್ವೀಕರಿಸಿ, ಅದಕ್ಕೆ ಉತ್ತರ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂತ್ರಾಲಯ ರಾಯರ ಹುಂಡಿಯಲ್ಲಿ ಕೇವಲ 21 ದಿನಗಳಲ್ಲಿ 2.48 ಕೋಟಿ ರೂ. ಸಂಗ್ರಹ

ರಾಯಚೂರು, ಏಪ್ರಿಲ್ 2: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮಾರ್ಚ್ ತಿಂಗಳ ಕೇವಲ 21 ದಿನಗಳಲ್ಲಿ ಭಕ್ತರು ದಾಖಲೆ ಪ್ರಮಾಣದ ಕಾಣಿಕೆ ಅರ್ಪಿಸಿದ್ದಾರೆ. ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು 2,48,28,737 ರೂಪಾಯಿ ನಗದು ಸಂಗ್ರಹವಾಗಿದೆ. ಇದರೊಂದಿಗೆ 14 ಗ್ರಾಂ ಚಿನ್ನ ಹಾಗೂ 2.16 ಕೆಜಿ ಬೆಳ್ಳಿಯ ಆಭರಣಗಳನ್ನು ಭಕ್ತರು ರಾಯರ ಪಾದಕ್ಕೆ ಸಮರ್ಪಿಸಿದ್ದಾರೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮಗೆ RCB ಅಂದ್ರೆ ಭಯ… ವ್ಯಂಗ್ಯವಾಡಿದ ಸೆಹ್ವಾಗ್..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-19 ರಂಗೇರುತ್ತಿರುವ ಬೆನ್ನಲ್ಲೇ, ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ನೀಡಿರುವ ಒಂದು ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅದು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ತುಚ್ಛವಾಗಿ ಕಾಣುವ ಮೂಲಕ. ಅಂದರೆ ತಾನು ಐಪಿಎಲ್ ಆಡುತ್ತಿದ್ದ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳನ್ನು  ಹೇಗೆ ನೋಡುತ್ತಿದ್ದೆವು ಎಂಬ ವಿಚಾರವನ್ನು ಸೆಹ್ವಾಗ್ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಸೆಹ್ವಾಗ್ ಅವರ ಪ್ರಕಾರ, ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ವಿರುದ್ಧ ಆಡುವಾಗ ಅವರಿಗೆ ಯಾವುದೇ ಭಯವಿರುತ್ತಿರಲಿಲ್ಲ. “ಸಿಎಸ್‌ಕೆ ಸೋಲಿಸುವುದು ಕಷ್ಟ ಎಂಬುದು ನಮಗೆ ತಿಳಿದಿತ್ತು, ಹಾಗಾಗಿ ಅವರ ವಿರುದ್ಧ ಗೆದ್ದರೆ ಅದು ನಮಗೆ ‘ಬೋನಸ್’ ಎಂದು ಭಾವಿಸುತ್ತಿದ್ದೆವು” ಎಂದಿದ್ದಾರೆ. ಆದರೆ ಅಸಲಿ ಭಯವಿದ್ದುದು ಆರ್‌ಸಿಬಿ ಮತ್ತು ಡೆಲ್ಲಿ ವಿರುದ್ಧ ಆಡುವಾಗವಂತೆ!

‘ಫ್ರೀ ಪಾಯಿಂಟ್ಸ್’

“ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳ ವಿರುದ್ಧದ ಪಂದ್ಯಗಳನ್ನು ನಾವು ‘ಫ್ರೀ ಪಾಯಿಂಟ್ಸ್’ (ಸುಲಭದ ಅಂಕಗಳು) ಎಂದು ಪರಿಗಣಿಸುತ್ತಿದ್ದೆವು. ಈ ಪಂದ್ಯಗಳನ್ನು ನಾವು ಯಾವುದೇ ಕಾರಣಕ್ಕೂ ಸೋಲಬಾರದು ಎಂಬ ದೊಡ್ಡ ಒತ್ತಡ ನಮ್ಮ ಮೇಲಿರುತ್ತಿತ್ತು. ಟೇಬಲ್‌ನಲ್ಲಿ ಮೇಲೆ ಬರಲು ಈ ಎರಡು ಅಂಕಗಳು ಅತ್ಯಂತ ಸುಲಭ ಮತ್ತು ಅನಿವಾರ್ಯವಾಗಿದ್ದವು” ಎಂದು ಸೆಹ್ವಾಗ್ ಹೇಳಿದ್ದಾರೆ.

ನಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ನಮಗೆ ಅಂಕಗಳನ್ನು ನೀಡುವ ತಂಡಗಳೆಂದೇ ನೋಡುತ್ತಿದ್ದೆವು. ಹೀಗಾಗಿಯೇ ಅವರ ವಿರುದ್ಧ ಸೋತು ಬಿಟ್ಟರೆ ಎಂಬ ಭಯ ಕಾಡುತ್ತಿತ್ತು ಎಂದು ವೀರೇಂದ್ರ ಸೆಹ್ವಾಗ್ ವ್ಯಂಗ್ಯವಾಡಿದ್ದಾರೆ.

ಬದಲಾದ ಆರ್​ಸಿಬಿ:

ವೀರೇಂದ್ರ ಸೆಹ್ವಾಗ್ ಅವರ ಈ ಹಳೆಯ ಅನುಭವದ ಮಾತುಗಳು ಇಂದಿನ ಐಪಿಎಲ್ 2026ಕ್ಕೆ ಅನ್ವಯಿಸುವುದಿಲ್ಲ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸ್ತುತ ಐಪಿಎಲ್​ನ ಬಲಿಷ್ಠ ತಂಡ. ಅದರಲ್ಲೂ ಕಳೆದ ಸೀಸನ್‌ನಲ್ಲಿ (2025)  ಚಾಂಪಿಯನ್ ಆಗಿ ಹೊರಹೊಮ್ಮಿರುವ ಆರ್‌ಸಿಬಿ, ಈಗ ‘ಡಿಫೆಂಡಿಂಗ್ ಚಾಂಪಿಯನ್ಸ್’ ಪಟ್ಟದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: IPL 2026: ಮೊದಲ ಪಂದ್ಯಗಳ ಬಳಿಕ ಹೀಗಿದೆ ಪಾಯಿಂಟ್ಸ್ ಟೇಬಲ್

ಇದಾಗ್ಯೂ ಕಾಮೆಂಟ್ರಿ ಮಾಡುವಾಗ ಇತರೆ ತಂಡಗಳ ಅಭಿಮಾನಿಗಳನ್ನು ಕೆಣಕುವ ರೀತಿಯಲ್ಲಿ ಮಾತನಾಡುವ ವೀರೇಂದ್ರ ಸೆಹ್ವಾಗ್ ವಿರುದ್ಧ ಇದೀಗ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಫ್ರೀ ಪಾಯಿಂಟ್ಸ್ ಹೇಳಿಕೆ ನೀಡಿರುವ ಸೆಹ್ವಾಗ್ ಎಷ್ಟು ಐಪಿಎಲ್ ಟ್ರೋಫಿ ಗೆದ್ದಿದ್ದಾರೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳನ್ನೆತ್ತಿದ್ದಾರೆ.

 

Source link

ಕೋಲಾರ: ಗಂಡನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ ಪತ್ನಿ

ಕೋಲಾರ, ಏಪ್ರಿಲ್ 2: ಕೋಲಾರ (Kolar) ಜಿಲ್ಲಾ ಕೇಂದ್ರದ ಆಜಾದ್ ನಗರದಲ್ಲಿ ಬುಧವಾರ ರಾತ್ರಿ ಭೀಕರ ಘಟನೆಯೊಂದು ಸಂಭವಿಸಿದೆ. ಅಕ್ರಮ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ನಡೆದ ರಾಜಿ ಸಂಧಾನ ವಿಕೋಪಕ್ಕೆ ತಿರುಗಿ, ಮಹಿಳೆಯೊಬ್ಬಳು ತನ್ನ ಪತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆಯ ಮೇಲೆ ಆಸಿಡ್ ಎರಚಿದ್ದಾಳೆ. ಘಟನೆಯಲ್ಲಿ ಮುಸ್ಕಾನ್ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಆರೋಪಿ ಆಯೇಷಾ ಹಾಗೂ ಗಾಯಾಳು ಮುಸ್ಕಾನ್ ಇಬ್ಬರೂ ಪರಸ್ಪರ ಸಂಬಂಧಿಕರು. ಆಯೇಷಾಳ ಪತಿ ಶಾಬಾಜ್ ಅಹಮದ್‌ನ ತಮ್ಮನ ಪತ್ನಿ ಮುಸ್ಕಾನ್ ಎನ್ನಲಾಗಿದೆ. ಮುಸ್ಕಾನ್ ಪತಿ ಕುಡಿತದ ವ್ಯಸನಿಯಾಗಿದ್ದು, ಸಂಸಾರ ನಿರ್ವಹಣೆಯಲ್ಲಿ ವಿಫಲನಾಗಿದ್ದ. ಈ ಸಂದರ್ಭದಲ್ಲಿ ಶಾಬಾಜ್ ಅಹಮದ್ ಹಣಕಾಸಿನ ನೆರವು ನೀಡುತ್ತಿದ್ದ. ಅಲ್ಲದೆ, ಆ ನೆಪದಲ್ಲಿ ಮುಸ್ಕಾನ್ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದ ಎಂಬ ಆರೋಪವಿದೆ.

ಮೂರು ತಿಂಗಳ ಹಿಂದೆ ಮುಸ್ಕಾನ್ ಮತ್ತು ಶಾಬಾಜ್ ಅಹಮದ್ ಓಡಿಹೋಗಿ ಬೆಂಗಳೂರಿನಲ್ಲಿ ವಾಸವಿದ್ದರು. ಇತ್ತೀಚೆಗಷ್ಟೇ ಸಂಬಂಧಿಕರು ಇವರನ್ನು ಪತ್ತೆಹಚ್ಚಿ ಕೋಲಾರಕ್ಕೆ ಕರೆತಂದಿದ್ದರು.

ರಾಜಿ ಸಂಧಾನದಲ್ಲಿ ಗಲಾಟೆ

ಸಮಸ್ಯೆಯನ್ನು ಬಗೆಹರಿಸಲು ಬುಧವಾರ ರಾತ್ರಿ ಸಂಬಂಧಿಕರ ಮನೆಯೊಂದರಲ್ಲಿ ‘ರಾಜಿ ಪಂಚಾಯ್ತಿ’ ಹಮ್ಮಿಕೊಳ್ಳಲಾಗಿತ್ತು. ಮಾತಿನ ಚಕಮಕಿ ನಡೆಯುತ್ತಿರುವಾಗಲೇ ಆಕ್ರೋಶಗೊಂಡ ಆಯೇಷಾ, ತಾನು ಮೊದಲೇ ಸಿದ್ಧಪಡಿಸಿಕೊಂಡು ತಂದಿದ್ದ ಬಾತ್ ರೂಂ ಕ್ಲೀನಿಂಗ್ ಆಸಿಡ್ ಅನ್ನು ಮುಸ್ಕಾನ್ ಮುಖಕ್ಕೆ ಎರಚಿದ್ದಾಳೆ. ದಾಳಿಯ ಬಳಿಕ ಆಯೇಷಾ ಸ್ಥಳದಿಂದ ಪರಾರಿಯಾಗಿದ್ದಾಳೆ.

ಇದನ್ನೂ ಓದಿ: ತೆಲಂಗಾಣ ಟೆಕ್ಕಿ ದಂಪತಿಯ ಜೀವವನ್ನೇ ತೆಗೆಯಿತು ಎಐ! ಆಗಿದ್ದೇನು ಗೊತ್ತಾ?

ವಿಷಯ ತಿಳಿಯುತ್ತಿದ್ದಂತೆಯೇ ಗಲ್ ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ, ನೋವಿನಿಂದ ನರಳುತ್ತಿದ್ದ ಮುಸ್ಕಾನ್ ಅವರನ್ನು ತಮ್ಮ ಜೀಪ್‌ನಲ್ಲೇ ಕರೆದೊಯ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡಿದ್ದ ಆಯೇಷಾಳನ್ನು ಪೊಲೀಸರು ಸದ್ಯ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಉದ್ಘಾಟನಾ ಪಂದ್ಯ: ‘ಬೆಂಗಳೂರು ಮಾಡೆಲ್’ ಯಶಸ್ಸಿಗೆ ಮುಂಬೈ-ಕೋಲ್ಕತ್ತಾ ಫಿದಾ!

ಬೆಂಗಳೂರು, ಏಪ್ರಿಲ್ 2: ಸಿಲಿಕಾನ್ ಸಿಟಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಈಗ ಕೇವಲ ಕ್ರಿಕೆಟ್ ಪಂದ್ಯಗಳಿಗಷ್ಟೇ ಅಲ್ಲ, ಸುಸಜ್ಜಿತ ಜನಸಂದಣಿ ನಿರ್ವಹಣೆಗೂ (Crowd Management) ಮಾದರಿಯಾಗಿ ಹೊರಹೊಮ್ಮಿದೆ. ಆರ್​ಸಿಬಿ (RCB) ವಿಜಯೋತ್ಸವ ಕಾಲ್ತುಳಿತ ಘಟನೆಯಿಂದ ಇಡೀ ದೇಶದ ಗಮನ ಸೆಳೆದಿದ್ದ, ಜನಸಂದಣಿ ನಿರ್ವಹಣೆಯಲ್ಲಿ ವಿಫಲವಾಗಿದ್ದ ಬೆಂಗಳೂರು ಅದಾಗಿ ಒಂದು ವರ್ಷದ ಒಳಗೇ ದೇಶದ ಇತರ ರಾಜ್ಯಗಳ ಹುಬ್ಬೇರುವಂತೆ ಮಾಡಿದೆ. ಇತ್ತೀಚೆಗೆ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದ ಅದ್ಭುತ ವ್ಯವಸ್ಥೆಯನ್ನು ಕಂಡು ಮುಂಬೈ ಮತ್ತು ಕೋಲ್ಕತ್ತಾದಂತಹ ಮೆಟ್ರೋ ಪಾಲಿಟನ್ ನಗರಗಳ ಕ್ರಿಕೆಟ್ ಆಡಳಿತ ಮಂಡಳಿಗಳು ಬೆಂಗಳೂರು ಮಾದರಿಯ ಮಾಹಿತಿಯನ್ನು ಕೋರಿವೆ.

ಕಳೆದ ವರ್ಷ ಆರ್‌ಸಿಬಿ ಐಪಿಎಲ್ ವಿಜಯೋತ್ಸವ ಕಾರ್ಯಕ್ರಮದ ವೇಳೆ ನಡೆದ ಕಾಲ್ತುಳಿತ ಮತ್ತು ಗೊಂದಲದ ಪರಿಸ್ಥಿತಿಯಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮತ್ತು ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿತ್ತು. ಆ ಕಹಿ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ ಆಡಳಿತ ಮಂಡಳಿ, ಈ ಬಾರಿ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಮೈದಾನದ ಒಳಗೆ ಮತ್ತು ಹೊರಗೆ ಯಾವುದೇ ನೂಕುನುಗ್ಗಲು ಉಂಟಾಗದಂತೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಇದು ಗಮನ ಸೆಳೆದಿದೆ.

ಐಪಿಎಲ್ ಟಿಕೆಟ್​​ನಲ್ಲಿ ಮೆಟ್ರೋ ಕ್ಯೂಆರ್ ಕೋಡ್: ದೇಶಾದ್ಯಂತ ಮೆಚ್ಚುಗೆ

ಬೆಂಗಳೂರಿನ ಈ ಯಶಸ್ಸಿನ ಹಿಂದೆ ಇದ್ದ ಪ್ರಮುಖ ಸೂತ್ರವೆಂದರೆ ‘ಮ್ಯಾಚ್ ಟಿಕೆಟ್ ಜೊತೆಯೇ ಮೆಟ್ರೋ ಟಿಕೆಟ್’ ಸೌಲಭ್ಯ. ಕ್ರಿಕೆಟ್ ಟಿಕೆಟ್ ಖರೀದಿಸಿದವರಿಗೇ ಮೆಟ್ರೋ ಪ್ರಯಾಣದ ಕ್ಯೂಆರ್ ಕೋಡ್ (QR Code) ನೀಡಿದ ವ್ಯವಸ್ಥೆಗೆ ಮುಂಬೈ ಮತ್ತು ಕೋಲ್ಕತ್ತಾ ಕ್ರಿಕೆಟ್ ಮಂಡಳಿಗಳು ಮಾರುಹೋಗಿವೆ. ಇದರಿಂದ ಸ್ಟೇಡಿಯಂ ಸುತ್ತಮುತ್ತ ಖಾಸಗಿ ವಾಹನಗಳ ಹಾವಳಿ ಕಡಿಮೆಯಾಗಿ, ಟ್ರಾಫಿಕ್ ಸಮಸ್ಯೆ ಗಣನೀಯವಾಗಿ ತಗ್ಗಿದೆ.

ಐಪಿಎಲ್ ಪಂದ್ಯಗಳಿಗಾಗಿ ಮುಂದಿನ ಯೋಜನೆಗಳೇನು?

ಮೆಟ್ರೋ ಯಶಸ್ಸಿನ ಬೆನ್ನಲ್ಲೇ, ಮುಂದಿನ ಪಂದ್ಯಗಳ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಿಂದ ನೇರವಾಗಿ ಮೆಜೆಸ್ಟಿಕ್‌ಗೆ ವಿಶೇಷ ಬಸ್ ವ್ಯವಸ್ಥೆ ಮಾಡಲು ಬಿಎಂಟಿಸಿ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಮತ್ತೊಂದೆಡೆ, ನಕಲಿ ಟಿಕೆಟ್ ಹಾವಳಿಗೆ ಬ್ರೇಕ್ ಹಾಕಲೂ ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್! ಅಭಿಮಾನಿಗಳೇ ಈ ವಿಚಾರ ತಿಳಿದಿರಿ

1,500 ರೂಪಾಯಿ ಮುಖಬೆಲೆಯ ಟಿಕೆಟ್‌ಗಳಲ್ಲಿ ನಕಲಿ ಹಾವಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಇನ್ನು ಮುಂದೆ ಕಡಿಮೆ ಬೆಲೆಯ ಟಿಕೆಟ್‌ಗಳನ್ನು ಕೇವಲ ಆನ್‌ಲೈನ್‌ನಲ್ಲಿ ಮಾತ್ರ ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ. ಆಫ್‌ಲೈನ್ ಕೌಂಟರ್‌ಗಳಲ್ಲಿ ಉಂಟಾಗುವ ಜನಸಂದಣಿ ತಪ್ಪಿಸಲು ಇದು ಸಹಕಾರಿಯಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮೊದಲ ಪಂದ್ಯಗಳ ಬಳಿಕ ಹೀಗಿದೆ ಪಾಯಿಂಟ್ಸ್ ಟೇಬಲ್

Source link

ತಮ್ಮ ನೋವಿನ ಕಥೆ ಹೇಳಿದ ‘ಜೋಡಿ ನಂಬರ್ 1’ ಸ್ಪರ್ಧಿಗಳು

ಜೀ ಕನ್ನಡದಲ್ಲಿ ಏಪ್ರಿಲ್ 4ರಂದು ಜೋಡಿ ನಂಬರ್ 1 ಶೋ ಆರಂಭ ಆಗಲಿದೆ. ಈ ಶೋ ನೋಡಲು ಫ್ಯಾನ್ಸ್ ಕಾದಿದ್ದಾರೆ. 10 ಸೆಲೆಬ್ರಿಟಿ ಜೋಡಿಗಳು ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಧನರಾಜ್, ಬಾಳು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಶೋಗೆ ನೆನಪಿರಲಿ ಪ್ರೇಮ್, ಮಾಳವಿಕಾ, ರಾಜೇಶ್ ನಟರಂಗ, ಛಾಯಾ ಸಿಂಗ್ ಜಡ್ಜ್ ಸ್ಥಾನದಲ್ಲಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link