All posts by nagaraj11081993

ಎಲ್ಲವೂ ಫಿಫ್ಟಿ-ಫಿಫ್ಟಿ… ಕಾದು ನೋಡಿ ಎಂದ ರಿಷಭ್ ಪಂತ್

ಎಲ್ಲವೂ ಫಿಫ್ಟಿ-ಫಿಫ್ಟಿ… ಕಾದು ನೋಡಿ ಎಂದ ರಿಷಭ್ ಪಂತ್

IPL 2026: ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 18.4 ಓವರ್​​ಗಳಲ್ಲಿ 141 ರನ್​ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17.1 ಓವರ್​​ಗಳಲ್ಲಿ 145 ರನ್​ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಪಂದ್ಯದ ಏರಿಳಿತಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲದೆ ತಂಡದ ತಂತ್ರಗಳು ಮತ್ತು ಮುಂದಿನ ಹಾದಿಯ ಬಗ್ಗೆ ಅವರು ಹೇಳಿದ ಪ್ರಮುಖ ಅಂಶಗಳು ಇಲ್ಲಿವೆ:

ರನ್ ಔಟ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ:

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ತಮ್ಮ ದುರದೃಷ್ಟಕರ ರನ್ ಔಟ್ ಬಗ್ಗೆ ಮಾತನಾಡಿದ ರಿಷಭ್ ಪಂತ್, “ಅದೃಷ್ಟ ಕೈಕೊಟ್ಟಾಗ ಅದನ್ನು ಮರೆತು ಮುಂದೆ ಸಾಗುವುದು ಉತ್ತಮ. ನಿಯಂತ್ರಣವಿಲ್ಲದ ವಿಷಯಗಳ ಬಗ್ಗೆ ಯೋಚಿಸುತ್ತಾ ಕುಳಿತರೆ ಅದು ನಮ್ಮ ಆತ್ಮವಿಶ್ವಾಸವನ್ನು ಕುಂದಿಸುತ್ತದೆ,” ಎಂದಿದ್ದಾರೆ.

ಬದೋನಿಯನ್ನು ಬೇಗ ಕಳುಹಿಸಿದ್ದೇಕೆ?

ನಿಕೋಲಸ್ ಪೂರನ್ ಅವರಿಗಿಂತ ಮುಂಚಿತವಾಗಿ ಆಯುಷ್ ಬದೋನಿಯನ್ನು ಕಳುಹಿಸುವ ನಿರ್ಧಾರದ ಹಿಂದೆ ಒಂದು ಸ್ಪಷ್ಟ ಉದ್ದೇಶವಿತ್ತು. ಅಕ್ಷರ್ ಪಟೇಲ್ ಅವರ ಎಡಗೈ ಸ್ಪಿನ್ ಎದುರಿಸಲು ‘ಲೆಫ್ಟ್-ರೈಟ್’ ಬ್ಯಾಟಿಂಗ್ ಜೋಡಿಯನ್ನು ಕಾಪಾಡಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಸಂಕಷ್ಟದ ಸಮಯದಲ್ಲಿ ಬದೋನಿ ಅಂತಹ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲಿ ಎಂಬುದು ತಂಡದ ಆಶಯವಾಗಿತ್ತು ಎಂದಿದ್ದಾರೆ.

140  ರನ್ ಕಡಿಮೆಯಾಯಿತು:

ಬ್ಯಾಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಿಷಭ್ ಪಂತ್, “ಒಳ್ಳೆಯ ಪಿಚ್‌ನಲ್ಲಿ ಕೇವಲ 140 ರನ್ ಗಳಿಸಿದರೆ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ನಾವು ಬ್ಯಾಟಿಂಗ್‌ನಲ್ಲಿ ದೊಡ್ಡ ಜೊತೆಯಾಟಗಳನ್ನು ಆಡುವಲ್ಲಿ ವಿಫಲವಾದೆವು,” ಎಂದು ಒಪ್ಪಿಕೊಂಡಿದ್ದಾರೆ.

ಎಕ್ಸ್​ಟ್ರಾ ರನ್​:

ಕಡಿಮೆ ಮೊತ್ತವನ್ನು ರಕ್ಷಿಸುವ ಭರದಲ್ಲಿ ಬೌಲರ್‌ಗಳು ಅತಿಯಾದ ಪ್ರಯತ್ನ ಮಾಡಿ 20 ಎಕ್ಸ್​ಟ್ರಾ ರನ್ ನೀಡಿದ್ದು ತಂಡಕ್ಕೆ ಹೊಡೆತ ನೀಡಿತು. ಆದರೂ, ಆರಂಭದಲ್ಲಿ ವಿಕೆಟ್ ಪಡೆಯುವ ಮೂಲಕ ಬೌಲರ್‌ಗಳು ತೋರಿದ ಹೋರಾಟದ ಗುಣದ ಬಗ್ಗೆ ನಾಯಕ ರಿಷಭ್ ಪಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫಿಫ್ಟಿ-ಫಿಫ್ಟಿ ಕಾದು ನೋಡಿ:

ನಿಕೋಲಸ್ ಪೂರನ್ ಅವರನ್ನು ಮಿಡ್ಲ್ ಓವರ್‌ಗಳ ಅಬ್ಬರದ ಆಟಕ್ಕಾಗಿ ಕಾಯ್ದಿರಿಸಿ, ತಾವು ಅಗ್ರ ಕ್ರಮಾಂಕದಲ್ಲೇ ಮುಂದುವರಿಯುವುದಾಗಿ ನಾಯಕ ಸ್ಪಷ್ಟಪಡಿಸಿದ್ದಾರೆ. ಸೀಸನ್‌ನ ಉಳಿದ ಪಂದ್ಯಗಳಲ್ಲಿ ಟಾಪ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಲಿದ್ದೇನೆ. ಆದರೆ ಆರಂಭಿಕನಾಗಿ ಮತ್ತೆ ಕಣಕ್ಕಿಳಿಯುವುದು ಫಿಫ್ಟಿ-ಫಿಫ್ಟಿ ಸಾಧ್ಯತೆ, ಕಾದು ನೋಡಿ ಎಂದಿದ್ದಾರೆ.

ಇದನ್ನೂ ಓದಿ: IPL 2026: ಐಪಿಎಲ್​ನಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಶಮಿ

ಅಂದರೆ ಮುಂದಿನ ಪಂದ್ಯಗಳಲ್ಲೂ ರಿಷಭ್ ಪಂತ್ ಆರಂಭಿಕರಾಗಿಯೇ ಕಣಕ್ಕಿಳಿಯಲಿದ್ದಾರೆ ಎಂಬುದಕ್ಕೆ ಯಾವುದೇ ಖಚಿತತೆ ಇಲ್ಲ. ಇದಾಗ್ಯೂ ಟಾಪ್ ಆರ್ಡರ್​ನಲ್ಲೇ ಬ್ಯಾಟಿಂಗ್ ಮಾಡಲಿದ್ದೇನೆ ಎಂದು ಅವರು ಸ್ಫಷ್ಟಪಡಿಸಿದ್ದಾರೆ. ಒಂದು ವೇಳೆ ರಿಷಭ್ ಪಂತ್ ಮೂರನೇ ಕ್ರಮಾಂಕದಲ್ಲಿ ಆಡಿದರೆ, ಐಡೆನ್ ಮಾರ್ಕ್ರಾಮ್ ಹಾಗೂ ಮಿಚೆಲ್ ಮಾರ್ಷ್ ಲಕ್ನೋ ಸೂಪರ್ ಜೈಂಟ್ಸ್ ಪರ ಇನಿಂಗ್ಸ್ ಆರಂಭಿಸಲಿದ್ದಾರೆ.

 

Source link

ಹೃತಿಕ್ ವಿಚ್ಛೇದನದ ಬಗ್ಗೆ ಮಾತನಾಡಿದ ಸುಸ್ಸಾನೆ ಖಾನ್ ಸಹೋದರ

ಬಾಲಿವುಡ್ ಉದ್ಯಮದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಚ್ಛೇದನವೆಂದರೆ ನಟರಾದ ಹೃತಿಕ್ ರೋಷನ್ ಮತ್ತು ಸುಸ್ಸಾನೆ ಖಾನ್ ಅವರ ವಿಚ್ಛೇದನ. 14 ವರ್ಷಗಳ ದಾಂಪತ್ಯದ ನಂತರ, ಇಬ್ಬರೂ ಬೇರೆಯಾಗಲು ನಿರ್ಧರಿಸಿದರು. ಅವರು ಅತ್ಯಂತ ಜನಪ್ರಿಯ ಸೆಲೆಬ್ರಿಟಿ ದಂಪತಿಗಳಲ್ಲಿ ಒಬ್ಬರಾಗಿದ್ದರು. ಆದ್ದರಿಂದ, ಅವರ ವಿಚ್ಛೇದನದ ಸುದ್ದಿ ಎಲ್ಲರಿಗೂ ದೊಡ್ಡ ಆಶ್ಚರ್ಯವನ್ನುಂಟುಮಾಡಿತು. ಆದರೆ ವಿಚ್ಛೇದನದ ನಂತರವೂ ಅವರ ಸಂಬಂಧದಲ್ಲಿ ಯಾವುದೇ ಕಹಿ ಇರಲಿಲ್ಲ. ವಾಸ್ತವವಾಗಿ, ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ ಮತ್ತು ತಮ್ಮ ಸ್ನೇಹವನ್ನು ಉಳಿಸಿಕೊಂಡಿದ್ದಾರೆ. ಈಗ, ಸುಸ್ಸಾನೆ ಅವರ ಸಹೋದರ ಮತ್ತು ನಟ ಜಾಯೆದ್ ಖಾನ್, ಇತ್ತೀಚಿನ ಸಂದರ್ಶನವೊಂದರಲ್ಲಿ, ಹೃತಿಕ್ ಮತ್ತು ಅವರ ಸಹೋದರಿ ಸುಸ್ಸಾನೆ ಅವರ ವಿಚ್ಛೇದನದ ಬಗ್ಗೆ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.

‘ಇದು ಆಗಬಾರದಿತ್ತು. ಆದರೆ ಒಬ್ಬರಿಗೊಬ್ಬರು ಬೇಡವಾದದ್ದನ್ನು ಹಿಡಿದಿಟ್ಟುಕೊಳ್ಳುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು. ಸಂಬಂಧದಲ್ಲಿ ನಿಮ್ಮಿಬ್ಬರಿಗೂ ನೋವುಂಟಾಗಲು ಪ್ರಾರಂಭಿಸುತ್ತದೆ. ಏಕೆ ತಲೆಕೆಡಿಸಿಕೊಳ್ಳಬೇಕು? ನಿಮಗೆ ಮಕ್ಕಳಿದ್ದಾರೆ, ಅವರ ಭವಿಷ್ಯವನ್ನು ನೀವು ಎದುರು ನೋಡಬಹುದು’ ಜಾಯೆದ್ ಹೇಳಿದರು.

‘ವಿಚ್ಛೇದನ ಮುಗಿದ ವಿಷಯ. ಮುಂದಿನ ಜೀವನದ ಮೇಲೆ ಗಮನಹರಿಸುವುದು ಮತ್ತು ನಿಮ್ಮ ಸ್ವಂತ ಸಂತೋಷವನ್ನು ಕಂಡುಕೊಳ್ಳುವುದು ಮುಖ್ಯ. ನಮ್ಮ ಕುಟುಂಬವು ಸಮಾಜ ಅಥವಾ ಸಮುದಾಯದ ಒತ್ತಡದಲ್ಲಿ ಬದುಕುವ ಕುಟುಂಬವಲ್ಲ. ನಾವು ಅಂತಹ ವಿಷಯಗಳ ಬಗ್ಗೆ ಸ್ವಲ್ಪ ಹೆಚ್ಚು ತಿಳುವಳಿಕೆ ಮತ್ತು ಸ್ವಲ್ಪ ಹೆಚ್ಚು ಶಿಕ್ಷಣ ಪಡೆದಿದ್ದೇವೆ. ಸಾಮಾನ್ಯವಾಗಿ ಜನರು ಇದನ್ನು ತುಂಬಾ ವಿಚಿತ್ರವಾಗಿ ಕಾಣುತ್ತಾರೆ ಎಂದು ನನಗೆ ತಿಳಿದಿದೆ. ಕೆಲವರು ಚಿಕ್ಕವರು, ಕೆಲವರು ಸ್ವತಃ ದುಃಖಿತರು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಚಿತ್ರರಂಗಕ್ಕೆ ಬರಲು ಸಜ್ಜಾದ ಹೃತಿಕ್ ರೋಷನ್ ಮಗ ಹೃದಾನ್ ರೋಷನ್

ವಿಚ್ಛೇದನದ ನಂತರ, ಹೃತಿಕ್ ಮತ್ತು ಸುಸ್ಸಾನೆ ತಮ್ಮ ವೈಯಕ್ತಿಕ ಜೀವನದಲ್ಲಿ ಮುಂದುವರೆದಿದ್ದಾರೆ. ಒಂದೆಡೆ, ಹೃತಿಕ್ ನಟಿ ಸಬಾ ಆಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ಸುಸ್ಸಾನೆ ಅರ್ಸಲನ್ ಗೋನಿಯನ್ನು ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ಜಾಯೆದ್, ‘ಪ್ರೀತಿ ಎಂಬುದು ಬಹಳ ವಿಶಾಲವಾದ ಪದ ಎಂದು ನಾನು ಭಾವಿಸುತ್ತೇನೆ. ಅವರು ಪರಸ್ಪರ ಹೊಂದಿರುವ ಗೌರವ ಮತ್ತು ಕಾಳಜಿ ಇನ್ನೂ ಹೆಚ್ಚು ಅರ್ಥಪೂರ್ಣವಾಗಿದೆ. ಅವರು ತುಂಬಾ ಒಳ್ಳೆಯ ಸಂಗಾತಿಗಳನ್ನು ಕಂಡುಕೊಂಡಿದ್ದಾರೆ. ನಾನು ಸಬಾ ಅವರನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಅವಳು ನನ್ನ ಚಿಕ್ಕ ತಂಗಿಯಂತೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆನೆಗೆ ಗುಲಾಬಿ ಬಣ್ಣ ಹಚ್ಚಿ ಫೋಟೊಶೂಟ್, ಒಂದು ತಿಂಗಳಲ್ಲೇ ಆನೆ ಸಾವು

ಜೈಪುರ, ಏಪ್ರಿಲ್ 02: ವಿದೇಶಿ ಛಾಯಾಗ್ರಾಹಕ ಫೋಟೊಶೂಟ್​ಗೆ ಬಳಸಿಕೊಂಡಿದ್ದ ಆನೆ ‘ಚಂಚಲ್’ ಸಾವನ್ನಪ್ಪಿದೆ. ಅಂದು ಆನೆ(Elephant) ಹಾಗೂ ಮಾಡೆಲ್​ ಇಬ್ಬರಿಗೂ ಗುಲಾಬಿ ಬಣ್ಣವನ್ನು ಬಳಿಯಲಾಗಿತ್ತು ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾಗಿ ಒಂದು ತಿಂಗಳಿಗೆ ಆನೆ ಸಾವನ್ನಪ್ಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚಂಚಲ್ ಎಂಬ ಹೆಸರಿನ ಈ ಆನೆಗೆ 65 ವರ್ಷ ವಯಸ್ಸಾಗಿದ್ದು, ಕಳೆದ ತಿಂಗಳು ಸಾವನ್ನಪ್ಪಿದೆ. ಜೈಪುರ ಆನೆಗಳ ಸಂಘವು ಇದು ಸಹಜ ಸಾವು ಎಂದು ದೃಢಪಡಿಸಿದೆ. ಆನೆ ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಲ್ಲು ಖಾನ್, ಆನೆಗೆ ಗುಲಾಬಿ ಬಣ್ಣ ಬಳಿಯಲಾಗಿತ್ತು, ನಂತರ ಅದನ್ನು ಸ್ವಲ್ಪ ಸಮಯದ ನಂತರ ಅಳಿಸಲಾಗಿತ್ತು.

ಇದು ನೈಸರ್ಗಿಕ ಬಣ್ಣವಾಗಿತ್ತು.ಒಂದು ಫೋಟೋವನ್ನು ಸುಂದರವಾಗಿ ಕಾಣುವಂತೆ ಮಾಡಲು ಆನೆಯನ್ನು ನೋವುಂಟು ಮಾಡುವುದು ತಪ್ಪು, ಇದಕ್ಕಾಗಿ ಎಐ ಬಳಸಬಹುದಿತ್ತು.ಆನೆಗಳ ಚರ್ಮ ಸೂಕ್ಷ್ಮವಾಗಿರುತ್ತದೆ ಎಂದರು.

ಮತ್ತಷ್ಟು ಓದಿ: Video: ಗುಲಾಬಿ ಆನೆಯ ಮೇಲೆ ಗುಲಾಬಿ ಸುಂದರಿ, ಜೈಪುರದಲ್ಲಿ ಯುವತಿಯ ಫೋಟೊಶೂಟ್​ಗೆ ಆಕ್ರೋಶ

ನಾವು ಆನೆಯನ್ನು ಚಿತ್ರಿಸಲು ನೈಸರ್ಗಿಕ ಬಣ್ಣವನ್ನು ಬಳಸಿದ್ದೇವೆ, ಹಬ್ಬಗಳ ಸಮಯದಲ್ಲಿ ಬಳಸಲಾಗುವ ಅದೇ ರೀತಿಯ ಬಣ್ಣ. ಆದ್ದರಿಂದ, ಆ ಬಣ್ಣವು ಪ್ರಾಣಿಗಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಛಾಯಾಗ್ರಾಹಕ ಜೂಲಿಯಾ ಹೇಳಿದ್ದಾರೆ. ಸಾವಯವ ಬಣ್ಣವು ಆನೆಗೆ ಹಾನಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗಣೇಶ ದೇವಸ್ಥಾನದಲ್ಲಿ ಫೋಟೋಶೂಟ್ ಮಾಡಲಾಗಿದೆ
ಫೋಟೋಶೂಟ್ ಸ್ಥಳವನ್ನು ಹುಡುಕುವುದು ಒಂದು ಸವಾಲಿಗಿಂತ ಕಡಿಮೆಯಿಲ್ಲ , ಪಾರಂಪರಿಕ ತಾಣಗಳು, ಅನುಮತಿಗಳು, ಸರ್ಕಾರಿ ಕಾರ್ಯವಿಧಾನಗಳು ಸ್ವಲ್ಪ ಕಷ್ಟವಾಗಿಯೇ ಇತ್ತು.ಭಾರತದಂತಹ ಸಂಪ್ರದಾಯವಾದಿ ಸಮಾಜದಲ್ಲಿ, ಅರೆಬರೆ ಬಟ್ಟೆ ಧರಿಸಿ ಗುಲಾಬಿ ಬಣ್ಣ ಬಳಿದು ಚಿತ್ರೀಕರಣಕ್ಕೆ ಪೋಸ್ ನೀಡುವುದು ಕಷ್ಟಕರವಾಗಿತ್ತು. ಡಜನ್‌ಗಟ್ಟಲೆ ಮಾಡೆಲ್‌ಗಳಿಗೆ ಸಂದೇಶ ಕಳುಹಿಸಿದೆ, ಆದರೆ ಬಹುತೇಕ ಎಲ್ಲರೂ ನಿರಾಕರಿಸಿದರು.ನಂತರ ಯಶಸ್ವಿ ಇದಕ್ಕೆ ಸಿದ್ಧರಾದರು ಎಂದು ವಿವರಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜ್​​ಕುಮಾರ್ ಹಾಗೂ ಪಾರ್ವತಮ್ಮಗೆ ಇಷ್ಟ ಆಗಿತ್ತು ಆ ಒಂದು ಸಿನಿಮಾ

ರಾಜ್​​ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಇದ್ದರು. ಅವರ ಸಿನಿ ಜರ್ನಿಗೆ ಬೆಂಬಲವಾಗಿ ನಿಂತಿದ್ದು ಎಂದರೆ ಅದು ಪಾರ್ವತಮ್ಮ ಅವರು. ಪಾರ್ವತಮ್ಮ ಅವರು ನಿರ್ಮಾಪಕಿ ಆಗಿ ಚಿತ್ರರಂಗದಲ್ಲಿ ಗಮನ ಸೆಳೆದರು. ಈಗ ಪಾರ್ವತಮ್ಮ ಅವರ ಬಗೆಗಿನ ಒಂದು ಅಚ್ಚರಿಯ ವಿಷಯ ಹೇಳಲೇಬೇಕು. ರಾಜ್​​​ಕುಮಾರ್ ಅವರಿಗೆ ಹೆಚ್ಚು ಇಷ್ಟ ಆದ ಸಿನಿಮಾವೇ ಪಾರ್ವತಮ್ಮ ಅವರಿಗೂ ಹೆಚ್ಚು ಇಷ್ಟ ಆಗಿತ್ತು.

ರಾಜ್​​ಕುಮಾರ್ ಅವರ ಸಿನಿಮಾಗಳ ಪೈಕಿ ಯಾವ ಸಿನಿಮಾ ಹೆಚ್ಚು ಇಷ್ಟ ಎಂದು ಅವರಿಗೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ‘ನನಗೆ ರಾಜ್​​​ಕುಮಾರ್ ಅವರ ಎಲ್ಲ ಸಿನಿಮಾಗಳೂ ಇಷ್ಟ. ಆದರೆ, ಅದರಲ್ಲೂ ರಾಘವೇಂದ್ರ ಮಹಾತ್ಮೆ’ ತುಂಬಾನೇ ಇಷ್ಟ ಎಂದು ಪಾರ್ವತಮ್ಮ ಅವರು ಹೇಳಿಕೊಂಡಿದ್ದರು. ಈ ಚಿತ್ರವು 1966ರಲ್ಲಿ ರಿಲೀಸ್ ಆಯಿತು. ರಾಘವೇಂದ್ರ ಸ್ವಾಮಿ ಬಗ್ಗೆ, ಅವರ ಪವಾಡಗಳ ಬಗ್ಗೆ ಸಿನಿಮಾ ಇತ್ತು.

ಇಲ್ಲೊಂದು ಅಚ್ಚರಿಯ ವಿಷಯ ಇದೆ. ರಾಜ್​​ಕುಮಾರ್ ಅವರ ಪ್ರೀತಿಯ ಸಿನಿಮಾಗಳ ಪೈಕಿ ಮೊದಲ ಸ್ಥಾನ ಇದ್ದಿದ್ದು ‘ರಾಘವೇಂದ್ರ ಮಹಾತ್ಮೆ’ ಚಿತ್ರಕ್ಕೆ. ಈ ಮೊದಲು ಈ ಬಗ್ಗೆ ಮಾತನಾಡಿದ್ದ ರಾಜ್​​ಕುಮಾರ್ ಅವರು, ‘ನನಗೆ ನನ್ನ ವೃತ್ತಿ ಜೀವನದಲ್ಲಿ ಅತಿ ಇಷ್ಟವಾದ ಸಿನಿಮಾ ಎಂದರೆ ರಾಘವೇಂದ್ರ ಮಹಾತ್ಮೆ. ಅದನ್ನು ನೋಡುವಂತೆ ನಾನು ಅಭಿಮಾನಿಗಳ ಬಳಿ ಕೋರುತ್ತೇನೆ. ಮತ್ಯಾವ ಸಿನಿಮಾಗಳನ್ನು ನೋಡಿ ಎಂದು ನಾನು ಪ್ರೇಕ್ಷಕರ ಬಳಿ ಹೇಳಲ್ಲ ಎಂದು ರಾಜ್​​ಕುಮಾರ್ ಈ ಮೊದಲು ಹೇಳಿಕೊಂಡಿದ್ದರು.

ಇದನ್ನೂ ಓದಿ: ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ರಾಜ್​​ಕುಮಾರ್​​ ಇಳಿಸಲು ನಡೆದಿತ್ತು ಪ್ಲ್ಯಾನ್

ರಾಜ್​​​ಕುಮಾರ್ ಅವರು ಮಂತ್ರಾಲಯಕ್ಕೆ ತೆರಳಿದ್ದರಂತೆ. ಈ ಸಂದರ್ಭದಲ್ಲಿ ಅಲ್ಲಿ ಅವರು ರಾಯರ ಗುಡಿಯಲ್ಲಿ ಮಲಗಿದ್ದರು. ಬೆಳಿಗ್ಗೆ ನೇರವಾಗಿ ಬೆಂಗಳೂರಿಗೆ ಬಂದ ಅವರಿಗೆ ಸಿನಿಮಾ ಮಾಡಬೇಕು ಎಂಬ ಆಲೋಚನೆ ಬಂತು. ಅದನ್ನು ಮಾಡಿಯೇ ಬಿಟ್ಟರು. ಈ ರೀತಿಯಲ್ಲಿ ‘ರಾಘವೇಂದ್ರ ಮಹಾತ್ಮೆ’ ಸಿನಿಮಾ ಮೂಡಿಬಂತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಕರಗ ವೈಭವ! ಮಲ್ಲಿಗೆ ಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ದ್ರೌಪದಮ್ಮ; ಭಕ್ತಸಾಗರದಲ್ಲಿ ಮೊಳಗಿದ ಗೋವಿಂದ ನಾಮ

Source link

Dreaming About Death: ಸತ್ತಂತೆ ಕನಸು ಬಿದ್ದರೆ ಏನರ್ಥ? ಶಾಸ್ತ್ರಗಳು ಹೇಳುವುದೇನು?

ಮರಣಿಸಿದವರ ಅಥವಾ ನಾವೇ ಮರಣಿಸಿದ ಹಾಗೆ ಕನಸು ಬಿದ್ದರೆ ಅದು ಶುಭವೇ ಅಥವಾ ಅಶುಭವೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಸ್ವಪ್ನಶಾಸ್ತ್ರವು ಈ ಬಗ್ಗೆ ಬಹಳ ವಿಶೇಷವಾದ ವಿಶ್ಲೇಷಣೆಗಳನ್ನು ನೀಡುತ್ತದೆ. ಕನಸು ಬಿದ್ದ ಸ್ಥಳ (ಮನೆ, ಹೋಟೆಲ್, ದೇವಸ್ಥಾನ, ಕಚೇರಿ) ಕೂಡ ವಿಶ್ಲೇಷಣೆಗೆ ಮುಖ್ಯವಾಗುತ್ತದೆ. ಆದರೆ, ಇಂದಿನ ಮುಖ್ಯ ವಿಚಾರವು ಮರಣದ ಬಗ್ಗೆ. ನಾವು ಸತ್ತ ಹಾಗೆ ಅಥವಾ ನಮ್ಮ ಮನೆಯಲ್ಲಿ ಬಂಧುಗಳೆಲ್ಲಾ ಸೇರಿರುವ ಹಾಗೆ, ನಾವು ದೂರ ಹೋಗಿರುವ ಹಾಗೆ ಕನಸುಗಳು ಗೋಚರಿಸುತ್ತವೆ. ಕೆಲವೊಮ್ಮೆ ಶವಸಂಸ್ಕಾರದಲ್ಲಿ ಭಾಗಿಯಾಗುವಂತೆ ಅಥವಾ ಬೇರೆಯವರು ಮರಣಿಸಿದಂತೆ ಕನಸುಗಳು ಬೀಳುತ್ತವೆ.

ಇಂತಹ ಕನಸುಗಳು ಶುಭವೇ. ಇದು ಶುಭವನ್ನು ತರುತ್ತದೆ ಮತ್ತು ತುಂಬಾ ಒಳ್ಳೆಯದಾಗುತ್ತದೆ. ನಿಮಗೆ ಅದೃಷ್ಟ ಕೂಡಿ ಬರುತ್ತದೆ, ನಿಮ್ಮ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುತ್ತವೆ, ಮತ್ತು ಒಳಿತಾಗುವ ಯೋಗ ಕೂಡಿ ಬರುತ್ತದೆ. ಬೇರೆಯವರು ಸತ್ತ ಕನಸು ಬಂದರೆ ಅವರಿಗೆ ಆಯುಷ್ಯ ವೃದ್ಧಿಯಾಗುತ್ತದೆ. ನಾವೇ ಸತ್ತ ಹಾಗೆ ಕನಸು ಬಂದರೆ, ನಾವು ಕಷ್ಟಗಳಿಂದ ಪಾರಾಗುತ್ತೇವೆ, ಸಂಕಟಗಳು ದೂರವಾಗುತ್ತವೆ, ದೋಷಗಳು ನಿವಾರಣೆಯಾಗುತ್ತವೆ ಮತ್ತು ಅದೃಷ್ಟ ಕೂಡಿ ಬರುತ್ತದೆ ಎಂಬ ಭಾವನೆಗಳು ಮೂಡುತ್ತವೆ. ಯಾರೂ ಸಹ ಇಂತಹ ಕನಸುಗಳಿಂದ ಹೆದರಬೇಕಾಗಿಲ್ಲ ಅಥವಾ ಚಿಂತೆ ಮಾಡಬೇಕಾಗಿಲ್ಲ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಬ್ರಹ್ಮ ವೈವರ್ತ ಪುರಾಣದಲ್ಲಿಯೇ ಇದರ ಬಗ್ಗೆ ಉಲ್ಲೇಖವಿದೆ. ಬ್ರಹ್ಮ ವೈವರ್ತ ಪುರಾಣದಲ್ಲಿ “ಯಪಶ್ಚತಿ ಮೃತಂ ಸ್ವಪ್ನೇಸ ಭವೇಶಚಿರ ಜೀವಿಚ ಆರೋಗೋ ರೋಗಿಣಂ ದುಃಖಿ ಸುಖಿನಂಚ ಸಿಕಿಭವೇತ” ಎಂಬ ಶ್ಲೋಕವನ್ನು ಹೇಳಲಾಗಿದೆ. ಈ ಶ್ಲೋಕದ ಪ್ರಕಾರ, ಕನಸಿನಲ್ಲಿ ಮರಣವನ್ನು ಕಂಡವರು ದೀರ್ಘಾಯುಷಿಗಳಾಗುತ್ತಾರೆ, ರೋಗಿಗಳು ಆರೋಗ್ಯವಂತರಾಗುತ್ತಾರೆ ಮತ್ತು ದುಃಖಿಗಳು ಸುಖಿಗಳಾಗುತ್ತಾರೆ. ಇಂತಹ ಕನಸುಗಳು ಬಂದಾಗ ಬಹಳಷ್ಟು ಶುಭವಾಗುತ್ತದೆ, ತುಂಬಾ ಒಳ್ಳೆಯದಾಗುತ್ತದೆ. ನಿಮ್ಮ ಕುಟುಂಬದಲ್ಲಿ ನಿಮಗೆ ತಿಳಿದಿರುವ ಯಾರಾದರೂ ಸತ್ತಿರುವಂತೆ ಕನಸು ಬಂದರೆ, ಅವರಿಗೆ ಶುಭವಾಗುತ್ತದೆ. ನಮಗೆ ನಮ್ಮದೇ ಕನಸು ಬಂದಾಗ ನಮ್ಮ ಆಯುಷ್ಯ ವೃದ್ಧಿಯಾಗುತ್ತದೆ, ಸಂಕಟಗಳು ದೂರವಾಗುತ್ತವೆ. ಇದರಿಂದ ನಮಗೆ ಯಾವುದೇ ಕೆಟ್ಟದಾಗುವುದಿಲ್ಲ ಅಥವಾ ಮರಣ ಸಂಭವಿಸುವುದಿಲ್ಲ. ಅಂತಹ ನಕಾರಾತ್ಮಕ ಆಲೋಚನೆಗಳು ಬೇಡ.

ಕನಸಿನ ಭಾವನೆಗೆ ತಕ್ಕ ಹಾಗೆ, ಹನುಮನ ದರ್ಶನ ಮಾಡಿಕೊಳ್ಳಿ ಅಥವಾ ಸಾಧ್ಯವಾದರೆ ಶಿವನ ದರ್ಶನ ಮಾಡಿಕೊಳ್ಳಿ. ಶಿವನ ದೇವಸ್ಥಾನದಲ್ಲಿ ಒಂದು ಅರ್ಚನೆ ಮಾಡಿಸಿಕೊಳ್ಳಿ ಮತ್ತು ವಿಭೂತಿಯನ್ನು ಧಾರಣೆ ಮಾಡಿಕೊಳ್ಳಿ. ಇದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Indonesia Earthquake: ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ಇಂಡೋನೇಷ್ಯಾ, ಏಪ್ರಿಲ್ 2: ಪೂರ್ವ ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಮೊಲುಕ್ಕಾ ಸಮುದ್ರದಲ್ಲಿ ಸುಮಾರು 35 ಕಿಲೋಮೀಟರ್ ಆಳದಲ್ಲಿದೆ. ಬಲವಾದ ಕಂಪನಗಳ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದಿಂದ ಆಸ್ತಿ ಮತ್ತು ಜೀವಕ್ಕೆ ಎಷ್ಟು ಹಾನಿಯಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಗುರುವಾರ ಬೆಳಿಗ್ಗೆ ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೇಹ್ ಪ್ರದೇಶದಲ್ಲಿಯೂ ಭೂಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (ಎನ್‌ಸಿಎಸ್) ಮಾಹಿತಿಯ ಪ್ರಕಾರ, ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಉತ್ತರ ಭಾಗದಲ್ಲಿ ಲಘು ಭೂಕಂಪನದ ಅನುಭವವಾಗಿದೆ. ಆದಾಗ್ಯೂ, ಅದರ ತೀವ್ರತೆ ಕಡಿಮೆ ಇತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

IPL 2026: ಐಪಿಎಲ್​ನಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಶಮಿ

Source link

ಸೋಲಿನ ಬೆನ್ನಲ್ಲೇ ರಿಷಭ್​​ ಪಂತ್​​​ಗೆ ಕ್ಲಾಸ್ ತೆಗೆದುಕೊಂಡ ಸಂಜೀವ್ ಗೋಯೆಂಕಾ

Source link

‘ನಮಗೆ ಹಾಗೆ ಕೆಲಸ ಮಾಡೋಕಾಗಲ್ಲ’; ‘ಡ್ರ್ಯಾಗನ್’ ಚಿತ್ರದ ಟುವಿನೋ ಹೊರಕ್ಕೆ

ಟುವಿನೋ ಥಾಮಸ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ (Toxic) ನಟಿಸಿದ್ದಾರೆ ಎನ್ನಲಾಗುತ್ತಿದೆ. ಅವರು ಮಲಯಾಳಂ ನಟ. ವರ್ಷಕ್ಕೆ 2-3 ಸಿನಿಮಾಗಳನ್ನು ಮಾಡಿ ಅವರಿಗೆ ಅಭ್ಯಾಸ. ಹೀಗಾಗಿ, ದೀರ್ಘ ಕಾಲ ಶೂಟ್ ಆಗುವ ಸಿನಿಮಾಗಳಲ್ಲಿ ನಟಿಸದೇ ಇರಲು ಅವರು ಇಷ್ಟಪಡುತ್ತಾರೆ. ಹೀಗಿರುವಾಗಲೇ, ಟುವಿನೋ ಅವರು ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​​ಟಿಆರ್ ಅವರ ‘ಡ್ರ್ಯಾಗನ್’ ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ.

‘ಡ್ರ್ಯಾಗನ್’ ಸಿನಿಮಾ ಶೂಟಿಂಗ್ ಶುರುವಾಗಿ ಬಹು ಸಮಯ ಕಳೆದಿದೆ. ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಾಕಷ್ಟು ಸಮಯ ತೆಗೆದುಕೊಂಡು ಚಿತ್ರದ ಶೂಟ್ ಮಾಡುತ್ತಿದ್ದಾರೆ. ಹೀಗಾಗಿ, ಟುವಿನೋ ಅವರು ಈ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದ್ದಾರೆ. ‘ನಾವು ಮಲಯಾಳಂನಲ್ಲಿ ಭಿನ್ನವಾಗಿ ಕೆಲಸ ಮಾಡುತ್ತೇವೆ. ತೆಲುಗಿಗಿಂತ ನಾವು ಸಿನಿಮಾ ಶೂಟಿಂಗ್​​​ನ ಬೇಗನೆ ಮುಗಿಸುತ್ತೇವೆ. ನಾವು ವರ್ಷಕ್ಕೆ 4-5 ಚಲನಚಿತ್ರಗಳನ್ನು ಮಾಡುತ್ತೇವೆ. ಡ್ರ್ಯಾಗನ್‌ಗೆ ಡೇಟ್ಸ್ ನೀಡುವುದು 4-5 ಚಲನಚಿತ್ರಗಳಿಗೆ ತೊಂದರೆ ಮಾಡಿದಂತೆ’ ಎಂದಿದ್ದಾರೆ ಅವರು.

ತೆಲುಗು ಚಿತ್ರರಂಗದವರು ಹೆಚ್ಚು ದಿನ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಟುವಿನೋ ಥಾಮಸ್​​ಗೆ ಯಾವುದೇ ಅಸಮಾಧಾನ ಇಲ್ಲ. ಮಲಯಾಳಂ ಸಣ್ಣ ಉದ್ಯಮ. ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡಲಾಗುತ್ತದೆ. ಹೀಗಾಗಿ ಚಿತ್ರವನ್ನು ಬೇಗ ರಿಲೀಸ್ ಮಾಡುವುದು ಅವರಿಗೆ ಮುಖ್ಯವಾಗಿದೆ. ಆದರೆ, ತೆಲುಗು ಚಿತ್ರರಂಗದಲ್ಲಿ ಈ ಮಾಡೆಲ್ ತರೋದು ಕಷ್ಟ. ಸಿನಿಮಾಗಳು ಬಿಗ್ ಬಜೆಟ್​​ನವಾಗಿರುತ್ತವೆ. ದೊಡ್ಡ ದೊಡ್ಡ ಸೆಟ್​​​ಗಳ ನಿರ್ಮಾಣ ಮಾಡಬೇಕಾಗಿರುತ್ತದೆ. ಇದಕ್ಕೆಲ್ಲ ಸಾಕಷ್ಟು ಸಮಯ ಹಿಡಿಯುತ್ತದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರವನ್ನು ಕಿಯಾರಾ ಒಪ್ಪಿಕೊಂಡಿದ್ದೇಕೆ? ಅಸಲಿ ಕಾರಣ ಬಯಲು

‘ಟಾಕ್ಸಿಕ್’ ಸಿನಿಮಾಗೂ ಸಾಕಷ್ಟು ದಿನಗಳ ಕಾಲ ಶೂಟ್ ನಡೆದಿದೆ. ಟುವಿನೋ ಥಾಮಸ್ ಪಾತ್ರ ಹೆಚ್ಚು ಹೊತ್ತು ತೆರೆಮೇಲೆ ಕಾಣಿಸಿಕೊಳ್ಳದಿರಬಹುದು. ಈ ಕಾರಣದಿಂದ ಅವರು ಸಿನಿಮಾದಲ್ಲಿ ನಟಿಸಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಸಿನಿಮಾ ನೋಡಿದ ಬಳಿಕವೇ ಈ ಬಗ್ಗೆ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link