Headlines

nagaraj11081993

ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್ – Kannada News | Sudeep talks about his daughter Instagram post

‘ಮಾರ್ಕ್’ (Mark) ಸಿನಿಮಾದ ಪೈರಸಿ ವಿಚಾರಕ್ಕೆ ಕಿಚ್ಚ ಸುದೀಪ್ ಆಡಿದ ಮಾತು ಆ ನಂತರ ಹಲವು ಕವಲುಗಳಾಗಿ ಒಡೆದು ಏನೇನೋ ಆಗಿದೆ. ಸುದೀಪ್ ಅವರನ್ನು ಟಾರ್ಗೆಟ್ ಮಾಡಿರುವ ದರ್ಶನ್ ಅಭಿಮಾನಿಗಳು, ಅವರ ಪುತ್ರಿಯ ಬಗ್ಗೆಯೂ ಕೆಟ್ಟ ಕಮೆಂಟ್​​ಗಳನ್ನು ಮಾಡಿದ್ದಾರೆ. ಇದನ್ನು ಸುದೀಪ್ ಈಗಾಗಲೇ ಖಂಡಿಸಿದ್ದಾರೆ. ಅಲ್ಲದೆ, ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಸಹ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸುದೀಪ್ ಅವರು, ಸಾನ್ವಿ ಸುದೀಪ್ ಹಂಚಿಕೊಂಡಿರುವ ಪೋಸ್ಟ್ ಬಗ್ಗೆ…

Read More

ಕೃಷ್ಣನೂರಿನಲ್ಲಿ ಸನ್ನಿ ಲಿಯೋನಿ ಶೋಗೆ ವಿರೋಧ: ಕಾರ್ಯಕ್ರಮ ರದ್ದು – Kannada News | Sunny Leone’s new year program canceled at Mathura for religious reasons

ಸನ್ನಿ ಲಿಯೋನಿ  (Sunny Leone), ನೀಲಿ ಚಿತ್ರಗಳ ಲೋಕಕ್ಕೆ ವಿದಾಯ ಹೇಳಿ ವರ್ಷಗಳೇ ಆಗಿದೆ. ಅವರು ಈಗ ಚಿತ್ರರಂಗದಲ್ಲಿ ಸೆಟಲ್ ಆಗಿದ್ದಾರೆ ಆದರೂ ಸಹ ಆಗಾಗ್ಗೆ ಅವರ ಇತಿಹಾಸದ ಕಾರಣಕ್ಕೆ ಆಗಾಗ್ಗೆ ಮುಜುಗರಕ್ಕೆ, ನಿಂದನೆಗೆ ಒಳಗಾಗುತ್ತಲೇ ಇರುತ್ತಾರೆ. ಸನ್ನಿ ಲಿಯೋನಿ, ನೀಲಿ ಚಿತ್ರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿದ್ದರೂ, ಈಗಲೂ ಸಹ ಅವರನ್ನು ಗ್ಲಾಮರ್ ಕ್ವೀನ್ ಆಗಿ, ಪಾರ್ಟಿ ಗರ್ಲ್ ಆಗಿಯೇ ನೋಡಲಾಗುತ್ತದೆ. ಇದೇ ಕಾರಣಕ್ಕೆ ಹಲವು ಪಾರ್ಟಿಗಳಿಗೆ ವಿಶೇಷ ಅತಿಥಿಯಾಗಿ, ವಿಶೇಷ ಗ್ಲಾಮರಸ್ ಲೈವ್ ಶೋಗೆ ಆಹ್ವಾನಿಸಲಾಗುತ್ತದೆ. ಇಂಥಹುದೇ…

Read More

ಕೋವಿಡ್ ಹಗರಣ: ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ – Kannada News | Karnataka COVID scam: Justice D’Cunha submits final report to the government

ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ ಬೆಂಗಳೂರು, ಡಿಸೆಂಬರ್​ 31: ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೋವಿಡ್ ಅವಧಿಯಲ್ಲಿ ನಡೆಸಿದೆ ಎನ್ನಲಾದ ಅವ್ಯವಹಾರದ ತನಿಖೆಯ ಅಂತಿಮ ವರದಿಯನ್ನು ನಿವೃತ್ತ ನ್ಯಾಯಮೂರ್ತಿಗಳಾದ ಮೈಕೆಲ್ ಡಿ ಕುನ್ಹಾ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್​​ಗೆ ರಿಪೋರ್ಟ್​​ ಹಸ್ತಾಂತರಿಸಿದ್ದಾರೆ. ಸಿಎಂ ಕಚೇರಿ ಮಾಹಿತಿ ಕೋವಿಡ್ ಅವಧಿಯಲ್ಲಿ ಸಂಭವಿಸಿದ ಸಾವುಗಳು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿರುವ ನಿವೃತ್ತ…

Read More

Video: ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು – Kannada News | Sakleshpur Miracle: Lost Child Found on Bus, Reunited with Mother by Police

ಹಾಸನ, ಡಿ.31 : ಪೋಷಕರಿಂದ ದೂರವಾಗಿದ್ದ ಮಗುವನ್ನು ತಾಯಿ ಮಡಿಲಿಗೆ ಸೇರಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಬಾಗೆ ಗ್ರಾಮದಲ್ಲಿ ನಡೆದಿದೆ. ಬಾಲಕಿ ನಿನ್ನೆ ರಾತ್ರಿ ತಾಯಿಯಿಂದ ತಪ್ಪಿಸಿಕೊಂಡಿದ್ದಾಳೆ. ತಾಯಿ, ಮಗು ಸೇರಿ ಆರು ಜನರ ತಂಡ ಧರ್ಮಸ್ಥಳದಿಂದ ಕೋಲಾರಕ್ಕೆ ತೆರಳುತ್ತಿದ್ದ ವೇಳೆ ಬಾಗೆ ಗ್ರಾಮದ ಬಳಿ ಸಾರಿಗೆ ಬಸ್ ಕೆಟ್ಟು ನಿಂತಿದೆ. ಈ ವೇಳೆ ಪ್ರಯಾಣಿಕರನ್ನು ಕಂಡಕ್ಟರ್ ಮತ್ತೊಂದು ಬಸ್ಸಿನಲ್ಲಿ ಕಳುಹಿಸಿದ್ದಾನೆ. ಆದರೆ ಬಾಲಕಿ ಗೊಂದಲದಿಂದ ಕೆಟ್ಟು ನಿಂತಿದ್ದ ಬಸ್ಸಿನಲ್ಲೇ ಕುಳಿತಿದ್ದಾಳೆ. ಮತ್ತೊಂದು ಕಡೆ…

Read More

ವರ್ಷಾಂತ್ಯದಲ್ಲಿ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: ಹಲವರಿಗೆ ಬಡ್ತಿ, ಕೆಲವರಿಗೆ ವರ್ಗಾವಣೆ – Kannada News | Karnataka Police Major Changes: IPS Officers Promoted and Transferred by karnataka government

ಬೆಂಗಳೂರು, ಡಿಸೆಂಬರ್​ 31: ಸರ್ಕಾರ ವರ್ಷಾಂತ್ಯದಲ್ಲಿ ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ ಮಾಡಿದೆ. 23 ಐಪಿಎಸ್‌ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ ನೀಡಿದ್ದು, 20 ಐಪಿಎಸ್​ (IPS) ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ (karnataka government) ಬುಧವಾರ ಆದೇಶ ಹೊರಡಿಸಿದೆ. 23 ಐಪಿಎಸ್‌ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ ಭೀಮಾಶಂಕರ್ ಗುಳೇದ್-ಡಿಐಜಿಪಿ, ಸಿಐಡಿ ಆರ್ಥಿಕ ಅಪರಾಧ ಇಲಕ್ಕಿಯ ಕರುಣಾಗರನ್-ಡಿಐಜಿಪಿ, ವೈರ್‌ಲೆಸ್​​ ವೇದಮೂರ್ತಿ-ಡಿಐಜಿಪಿ, ರಾಜ್ಯ ಗುಪ್ತಚರ ಕೆ.ಎಂ.ಶಾಂತರಾಜು-ಡಿಐಜಿಪಿ, ಐಎಸ್‌ಡಿ ಹನುಮಂತರಾಯ-ಡಿಐಜಿಪಿ, ಎಸ್‌ಹೆಚ್‌ಆರ್‌ಸಿ ಡಿ.ದೇವರಾಜು-ಡಿಐಜಿಪಿ, ಪೊಲೀಸ್‌ ತರಬೇತಿ ಡಾ.ಸಿರಿ…

Read More

ಈ ಬಾರಿಯ ಗಣರಾಜ್ಯೋತ್ಸವ ಬಹಳ ಡಿಫರೆಂಟ್; ಸೇನೆಯಿಂದ ಒಂಟೆ, ಭಾರತೀಯ ತಳಿಯ ನಾಯಿಗಳ ಮೆರವಣಿಗೆ – Kannada News | Indian Armys Animal warriors to march On Kartavya Path in Republic Day Parade first time in India

ನವದೆಹಲಿ, ಡಿಸೆಂಬರ್ 31: ಭಾರತವು 2026ರ ಗಣರಾಜ್ಯೋತ್ಸವದಂದು (Republic Day) ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಲಿದೆ. ಈ ಬಾರಿ ಭಾರತೀಯ ಸೇನೆಯ ಪ್ರಾಣಿಗಳು ಕರ್ತವ್ಯ ಪಥದಲ್ಲಿ ಮೆರವಣಿಗೆ ನಡೆಸಲಿವೆ. ಇದು ಸಹಿಷ್ಣುತೆ, ತ್ಯಾಗ ಮತ್ತು ಸೈನ್ಯದ ವಿಶಿಷ್ಟವಾದ ಕಾರ್ಯಾಚರಣೆಯ ಸಾಮರ್ಥ್ಯವನ್ನು ಸಂಕೇತಿಸುತ್ತದೆ. ಇದೇ ಮೊದಲ ಬಾರಿಗೆ, ರಿಮೌಂಟ್ ಮತ್ತು ಪಶುವೈದ್ಯಕೀಯ ದಳದ ಕ್ಯುರೇಟೆಡ್ ಪ್ರಾಣಿ ತುಕಡಿಯು ಮೆರವಣಿಗೆಯಲ್ಲಿ ಭಾಗವಹಿಸುತ್ತದೆ. ಈ ತುಕಡಿಯು ಎರಡು ಬ್ಯಾಕ್ಟ್ರಿಯನ್ ಒಂಟೆಗಳು, 4 ಝನ್ಸ್ಕಾರ್ ಪೋನಿಗಳು, 4 ರಾಪ್ಟರ್‌ಗಳು, 10 ಭಾರತೀಯ ತಳಿಯ ಸೇನಾ…

Read More

10 ನಿಮಿಷದ ಡೆಲಿವರಿ ಆಯ್ಕೆ ರದ್ದುಗೊಳಿಸಿ; ಗಿಗ್ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ – Kannada News | Remove 10 minute delivery option Swiggy, Zomato and other Workers demanding

ನವದೆಹಲಿ, ಡಿಸೆಂಬರ್ 31: ಹೊಸ ವರ್ಷದ ಮುನ್ನಾದಿನವಾದ ಇಂದು ಡೆಲಿವರಿ ಏಜೆಂಟ್​​ಗಳು ಮುಷ್ಕರ ನಡೆಸುತ್ತಿದ್ದಾರೆ. ದೇಶಾದ್ಯಂತ ಮುಷ್ಕರದ ನಡುವೆ ಸ್ವಿಗ್ಗಿ (Swiggy), ಜೊಮಾಟೊ ವಿತರಣಾ ಪ್ರೋತ್ಸಾಹವನ್ನು ಹೆಚ್ಚಿಸಿವೆ. ಫುಡ್, ದಿನಸಿ ಮುಂತಾದ ವಿತರಣಾ ಅಪ್ಲಿಕೇಶನ್‌ಗಳ ಗಿಗ್ ಕಾರ್ಮಿಕರು ಇಂದು ದೇಶಾದ್ಯಂತ ಮುಷ್ಕರ ಘೋಷಿಸಿದ್ದಾರೆ. “10 ನಿಮಿಷದ ಡೆಲಿವರಿ ಆಯ್ಕೆಯನ್ನು ತೆಗೆದುಹಾಕಿ” ಎಂದು ಅವರು ಒತ್ತಾಯಿಸಿದ್ದಾರೆ. ಕಡಿಮೆ ವೇತನ, ಅಸುರಕ್ಷಿತ ಪರಿಸ್ಥಿತಿಗಳು ಮತ್ತು ಕಳಪೆ ಕೆಲಸದ ಭದ್ರತೆಯ ವಿರುದ್ಧ ಗಿಗ್ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. 10 ನಿಮಿಷದಲ್ಲಿ ಡೆಲಿವರಿ…

Read More

ಈ ಅಭ್ಯಾಸಗಳಿರುವವರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಹೆಚ್ಚು; ಈ ಬಗ್ಗೆ ಜಾಗೃತೆ ವಹಿಸಬೇಕು ಎನ್ನುತ್ತಾರೆ ಡಾ. ಸಂತೋಷ್

ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲಿಯೂ ಚಳಿಗಾಲದಲ್ಲಿ ಈ ಸಮಸ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಈ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿದಿರುವುದು ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ನಮ್ಮ ನಿರ್ಲಕ್ಷ್ಯವೇ ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಪಡೆಯಲು ವೈಟ್ ಫೀಲ್ಡ್ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಲಾಜಿಸ್ಟ್ ಆಗಿರುವ ಡಾ. ಸಂತೋಷ್ ಎನ್ ಎಸ್ (Dr. Santhosh N.S) ಅವರನ್ನು…

Read More

‘ಜನ ನಾಯಗನ್’ ಆಡಿಯೋ ಲಾಂಚ್ ಕಾರ್ಯಕ್ರಮ ಒಟಿಟಿಯಲ್ಲಿ: ಎಲ್ಲಿ? ಯಾವಾಗ? – Kannada News | Jana Nayagan movie audio launch function to stream on OTT

ದಳಪತಿ ವಿಜಯ್ (Thalapathy Vijay) ನಟಿಸಿರುವ ‘ಜನ ನಾಯಗನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದೆ. ವಿಜಯ್ ಸಾಮಾನ್ಯವಾಗಿ ಯಾವುದೇ ಸಂದರ್ಶನ ನೀಡಿ ಸಿನಿಮಾ ಪ್ರಚಾರ ಮಾಡುವುದಿಲ್ಲ ಬದಲಿಗೆ ಸಿನಿಮಾ ಬಿಡುಗಡೆಗೆ ಮುಂಚೆ ಒಂದು ಆಡಿಯೋ ಲಾಂಚ್ ಕಾರ್ಯಕ್ರಮ ಆಯೋಜಿಸುತ್ತಾರೆ, ಅಲ್ಲಿಯೇ ಸಿನಿಮಾ ಬಗ್ಗೆ, ಸಹ ನಟರುಗಳು ಬಗ್ಗೆ ಮಾತನಾಡುತ್ತಾರೆ. ಈ ಬಾರಿಯೂ ಸಹ ‘ಜನ ನಾಯಗನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಬಲು ಅದ್ಧೂರಿಯಾಗಿ ಮಲೇಷಿಯಾನಲ್ಲಿ ಆಯೋಜಿಸಲಾಗಿತ್ತು. ದೂರದ ಮಲೇಷಿಯಾನಲ್ಲಿ ಕಾರ್ಯಕ್ರಮ…

Read More

ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ 7 ಜನ ಸಾವು; ಆಸ್ಪತ್ರೆಯಲ್ಲಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ ಸಿಎಂ – Kannada News | Madhya Pradesh CM Mohan Yadav meets the people hospitalised in Indore after drinking contaminated water

ಇಂದೋರ್‌, ಡಿಸೆಂಬರ್ 31: ಮಧ್ಯಪ್ರದೇಶದ ಇಂದೋರ್‌ನಲ್ಲಿ (Indore) ಕಲುಷಿತ ನೀರು ಸೇವನೆಯಿಂದ 7 ಜನರು ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಜನರನ್ನು ಭೇಟಿಯಾದರು. ಮುನ್ನೆಚ್ಚರಿಕಾ ಕ್ರಮವಾಗಿ ಮುನ್ಸಿಪಲ್ ಕಾರ್ಪೊರೇಷನ್ ಮನೆಗಳಿಗೆ ನೀರು ಸರಬರಾಜು ಮಾಡುತ್ತಿದೆ, ಯಾವುದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಇಂದೋರ್‌ನ ಭಾಗೀರಥಪುರ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಕೊಳಕು ನೀರಿನ ಬಗ್ಗೆ ದೂರುಗಳು…

Read More