All posts by nagaraj11081993

ಈ ಅಭ್ಯಾಸಗಳಿರುವವರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಹೆಚ್ಚು; ಈ ಬಗ್ಗೆ ಜಾಗೃತೆ ವಹಿಸಬೇಕು ಎನ್ನುತ್ತಾರೆ ಡಾ. ಸಂತೋಷ್

ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲಿಯೂ ಚಳಿಗಾಲದಲ್ಲಿ ಈ ಸಮಸ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಈ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿದಿರುವುದು ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ನಮ್ಮ ನಿರ್ಲಕ್ಷ್ಯವೇ ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಪಡೆಯಲು ವೈಟ್ ಫೀಲ್ಡ್ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಲಾಜಿಸ್ಟ್ ಆಗಿರುವ ಡಾ. ಸಂತೋಷ್ ಎನ್ ಎಸ್ (Dr. Santhosh N.S) ಅವರನ್ನು ಸಂಪರ್ಕಿಸಿತ್ತು. ಈ ವಿಷಯದ ಕುರಿತಂತೆ ಅವರು ಹೆಚ್ಚಿನ ಮಾಹಿತಿ ನೀಡಿದ್ದು ಸ್ಟ್ರೋಕ್ ಗಳಲ್ಲಿ ಕಂಡು ಬರುವ ವಿಧಗಳು ಮತ್ತು ಅವು ಕಂಡುಬರುವುದಕ್ಕೆ ಕಾರಣಗಳು ಸೇರಿದಂತೆ ಅವುಗಳ ಲಕ್ಷಣಗಳ ಬಗ್ಗೆ ವಿವರಿಸಿದ್ದು ಎಷ್ಟು ಗಂಟೆಯೊಳಗೆ ಸ್ಟ್ರೋಕ್ ಆದವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಬೇಕು ಎನ್ನುವುದರ ಬಗ್ಗೆ ಮಾತನಾಡಿದ್ದು ಮತ್ತಷ್ಟು ಮಾಹಿತಿ ಪಡೆಯಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Source link

‘ಜನ ನಾಯಗನ್’ ಆಡಿಯೋ ಲಾಂಚ್ ಕಾರ್ಯಕ್ರಮ ಒಟಿಟಿಯಲ್ಲಿ: ಎಲ್ಲಿ? ಯಾವಾಗ? – Kannada News | Jana Nayagan movie audio launch function to stream on OTT

ದಳಪತಿ ವಿಜಯ್ (Thalapathy Vijay) ನಟಿಸಿರುವ ‘ಜನ ನಾಯಗನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದೆ. ವಿಜಯ್ ಸಾಮಾನ್ಯವಾಗಿ ಯಾವುದೇ ಸಂದರ್ಶನ ನೀಡಿ ಸಿನಿಮಾ ಪ್ರಚಾರ ಮಾಡುವುದಿಲ್ಲ ಬದಲಿಗೆ ಸಿನಿಮಾ ಬಿಡುಗಡೆಗೆ ಮುಂಚೆ ಒಂದು ಆಡಿಯೋ ಲಾಂಚ್ ಕಾರ್ಯಕ್ರಮ ಆಯೋಜಿಸುತ್ತಾರೆ, ಅಲ್ಲಿಯೇ ಸಿನಿಮಾ ಬಗ್ಗೆ, ಸಹ ನಟರುಗಳು ಬಗ್ಗೆ ಮಾತನಾಡುತ್ತಾರೆ. ಈ ಬಾರಿಯೂ ಸಹ ‘ಜನ ನಾಯಗನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಬಲು ಅದ್ಧೂರಿಯಾಗಿ ಮಲೇಷಿಯಾನಲ್ಲಿ ಆಯೋಜಿಸಲಾಗಿತ್ತು. ದೂರದ ಮಲೇಷಿಯಾನಲ್ಲಿ ಕಾರ್ಯಕ್ರಮ ನಡೆದಿದ್ದರಿಂದ ಕಾರ್ಯಕ್ರಮವನ್ನು ಯೂಟ್ಯೂಬ್​​ನಲ್ಲಿ ಆದರೂ ನೋಡಲು ಅಭಿಮಾನಿಗಳು ಕಾತರರಾಗಿದ್ದರು, ಆದರೆ ಚಿತ್ರತಂಡ ಅಭಿಮಾನಿಗಳಿಗೆ ಶಾಕ್ ನೀಡಿದೆ.

‘ಜನ ನಾಯಗನ್’ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮ ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗುತ್ತಿಲ್ಲ ಬದಲಿಗೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಈ ಹಿಂದೆಲ್ಲ ವಿಜಯ್ ಅವರ ಯಾವುದೇ ಸಿನಿಮಾದ ಆಡಿಯೋ ಲಾಂಚ್ ಅಥವಾ ಪ್ರೀ ರಿಲೀಸ್ ಕಾರ್ಯಕ್ರಮ ಯೂಟ್ಯೂಬ್​​ನಲ್ಲಿ ಲೈವ್ ಮಾಡಲಾಗುತ್ತಿತ್ತು, ಅಥವಾ ಕಾರ್ಯಕ್ರಮ ನಡೆದ ಒಂದೆರಡು ದಿನಗಳ ಬಳಿಕ ಯೂಟ್ಯೂಬ್​​ನಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕಾರ್ಯಕ್ರಮವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆವಿಎನ್​ನವರು ‘ಜನ ನಾಯಗನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ಪ್ರಸಾರ ಹಕ್ಕನ್ನು ಒಟಿಟಿಗೆ ಮಾರಾಟ ಮಾಡಿದ್ದಾರೆ. ಅದೂ ದೊಡ್ಡ ಮೊತ್ತಕ್ಕೆ ಈ ಡೀಲ್ ನಡೆದಿದೆ ಎನ್ನಲಾಗುತ್ತಿದೆ. ಇದೀಗ ‘ಜನ ನಾಯಗನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಜೀ5 ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಜನವರಿ 4 ರಂದು ಜೀ5ನಲ್ಲಿ ಅಭಿಮಾನಿಗಳು ‘ಜನ ನಾಯಗನ್’ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ವಿವರವಾಗಿ ನೋಡಬಹುದಾಗಿದೆ.

ಇದನ್ನೂ ಓದಿ:‘ಜನ ನಾಯಗನ್ ಬಳಿಕ ಸಿನಿಮಾ ಮಾಡ್ತೀರಾ?’; ಉತ್ತರಿಸಿದ ದಳಪತಿ ವಿಜಯ್

ಮಲೇಷಿಯಾನಲ್ಲಿ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಜಯ್, ‘ಜನ ನಾಯಗನ್’ ಸಿನಿಮಾದ ಜೊತೆಗೆ ಅಭಿಮಾನಿಗಳ ಬಗ್ಗೆಯೂ ಭಾವುಕವಾಗಿ ಮಾತನಾಡಿದ್ದರು. ಮರಳಿನಲ್ಲಿ ಮನೆ ಕಟ್ಟಿಕೊಳ್ಳಲು ಬಂದ ನನಗೆ ದೊಡ್ಡ ಕೋಟೆಯನ್ನೇ ಅಭಿಮಾನಿಗಳು ಕಟ್ಟಿದ್ದಾರೆ, ಆದರೆ ಅವರಿಗಾಗಿ ನಾನು ಏನೂ ಕೊಟ್ಟಿಲ್ಲ, ಹಾಗಾಗಿ ಮುಂದಿನ ಮೂವತ್ತು ವರ್ಷ ನಾನು ನನ್ನ ಅಭಿಮಾನಿಗಳಿಗಾಗಿ ದುಡಿಯಲಿದ್ದೇನೆ, ತಮ್ಮ ಎಲ್ಲವನ್ನೂ ನನಗೆ ಕೊಟ್ಟಿರುವ ಅಭಿಮಾನಿಗಳಿಗಾಗಿ ನಾನು ಸಿನಿಮಾವನ್ನೇ ಬಿಟ್ಟುಕೊಟ್ಟಿದ್ದೇನೆ’ ಎಂದಿದ್ದಾರೆ ವಿಜಯ್. ವೇದಿಕೆ ಮೇಲೆ ಹಾಡು ಹಾಡಿ, ಡ್ಯಾನ್ಸ್ ಸಹ ಮಾಡಿದ್ದಾರೆ ವಿಜಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:02 pm, Wed, 31 December 25

Source link

ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ 7 ಜನ ಸಾವು; ಆಸ್ಪತ್ರೆಯಲ್ಲಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ ಸಿಎಂ – Kannada News | Madhya Pradesh CM Mohan Yadav meets the people hospitalised in Indore after drinking contaminated water

ಇಂದೋರ್‌, ಡಿಸೆಂಬರ್ 31: ಮಧ್ಯಪ್ರದೇಶದ ಇಂದೋರ್‌ನಲ್ಲಿ (Indore) ಕಲುಷಿತ ನೀರು ಸೇವನೆಯಿಂದ 7 ಜನರು ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಜನರನ್ನು ಭೇಟಿಯಾದರು. ಮುನ್ನೆಚ್ಚರಿಕಾ ಕ್ರಮವಾಗಿ ಮುನ್ಸಿಪಲ್ ಕಾರ್ಪೊರೇಷನ್ ಮನೆಗಳಿಗೆ ನೀರು ಸರಬರಾಜು ಮಾಡುತ್ತಿದೆ, ಯಾವುದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.

ಇಂದೋರ್‌ನ ಭಾಗೀರಥಪುರ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಕೊಳಕು ನೀರಿನ ಬಗ್ಗೆ ದೂರುಗಳು ಬರುತ್ತಿದ್ದರೂ ಇನ್ನೂ ಯಾವುದೇ ಪರಿಹಾರ ಕಂಡುಬಂದಿಲ್ಲ. ಈ ಪ್ರದೇಶದಲ್ಲಿ ವಾಂತಿ, ಅತಿಸಾರ, ಹೊಟ್ಟೆ ನೋವು ಮತ್ತು ವೀಕ್​​ನೆಸ್​​ನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಸುಮಾರು 2,000 ಜನರು ಇದರಿಂದ ಬಾಧಿತರಾಗಿದ್ದಾರೆ ಎಂದು ವರದಿಯಾಗಿದೆ. ಇಂದೋರ್‌ನ ವಿವಿಧ ಆಸ್ಪತ್ರೆಗಳಿಗೆ ಅನೇಕ ರೋಗಿಗಳು ದಾಖಲಾಗಿದ್ದಾರೆ. 25 ರಿಂದ 30 ಆರೋಗ್ಯ ಇಲಾಖೆಯ ತಂಡಗಳು ಮನೆ-ಮನೆ ಸಮೀಕ್ಷೆಗಳನ್ನು ನಡೆಸುತ್ತಿವೆ. ಇಲ್ಲಿಯವರೆಗೆ, 1,100 ಕ್ಕೂ ಹೆಚ್ಚು ಮನೆಗಳನ್ನು ಪರಿಶೀಲಿಸಲಾಗಿದೆ ಮತ್ತು ನಿವಾಸಿಗಳು ಕುಡಿಯುವ ಮೊದಲು ತಮ್ಮ ನೀರನ್ನು ಕುದಿಸಿ ಕುಡಿಯಲು ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ – Kannada News | Young man puts his hand on young woman’s chest while she falls asleep on bus

ಕಾರವಾರ, ಡಿ.31: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕಾರವಾರದಿಂದ ಅಂಕೋಲಾ ಕಡೆಗೆ ಹೊಗುತ್ತಿದ್ದ ಬಸ್ಸಿನಲ್ಲಿ ನಡೆದಿದೆ. ಯುವತಿ ಬಸ್​​​​​​ನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಪಕ್ಕದಲ್ಲಿ ಕುಳಿತ ಯುವಕ ಎದೆ ಮೇಲೆ ಕೈ ಇಟ್ಟು ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ನಿದ್ದೆಯಿಂದ ಎಚ್ಚರಗೊಂಡು ನೋಡಿದಾಗ, ಕೈ ಆಕೆಯ ಎದೆ ಮೇಲಿತ್ತು. ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾಳೆ. ಇನ್ನು ಯುವಕನಿಗೆ ಅವಾಚ್ಯ ಶಬ್ದಗಳಿಂದ ಉಗಿದು, ಧರ್ಮದೇಟು ನೀಡಿದ್ದಾಳೆ. ಈ ವಿಡಿಯೋ ಪೊಲೀಸರಿಗೂ ಟ್ಯಾಗ್​ ಮಾಡಿದ್ದಾಳೆ. ಈ ವಿಡಿಯೋ ಮೂಲಕ ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕೆಂದು ಸಂದೇಶ ನೀಡಿದ್ದಾಳೆ. ಇದೀಗ ಅಂಕೋಲಾ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಿಡಿಯೋ ಆಧಾರದ ಮೇಲೆ ದೂರು ದಾಖಲಿಸಿಕೊಂಡು ಯುವಕ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ಎಸ್ಪಿ ದೀಪನ್ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ಹಾಲಿವುಡ್​​ಗೆ ಪೈಪೋಟಿ ಕೊಡುತ್ತಿದೆ ಭಾರತದ ಈ ಕೋತಿ, ಆದಾಯ ಎಷ್ಟು ಗೊತ್ತೆ? – Kannada News | Bandar Apna Dost Youtube Chanel made 38 crore rs just from AI videos

ಸಾಮಾಜಿಕ ಜಾಲತಾಣದ (Social Media) ಈ ಜಮಾನಾನಲ್ಲಿ ಯಾವಾಗ ಯಾವುದು ವೈರಲ್ ಆಗುತ್ತದೆ, ಯಾವ ರೀತಿಯ ಕಂಟೆಂಟ್ ಜನರಿಗೆ ಇಷ್ಟವಾಗುತ್ತದೆ ಎಂದು ಊಹಿಸುವುದೇ ಕಷ್ಟ. ಭಾರತದ ಕೋತಿಯೊಂದು ವಿಶ್ವಮಟ್ಟದಲ್ಲಿ ಟಾಪ್ ಕಂಟೆಂಟ್ ಆಗಿ ಮಿಂಚಿದೆ ಮಾತ್ರವಲ್ಲದೆ ಕೆಲವೇ ತಿಂಗಳುಗಳಲ್ಲಿ 38 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಕೇವಲ ಯೂಟ್ಯೂಬ್ ಒಂದರಿಂದಲೇ ಗಳಿಸಿದೆ. ಆಶ್ಚರ್ಯ ಎನಿಸಿದರೂ ಸಹ ಇದು ನಿಜ. ವಿಶ್ವದಾದ್ಯಂತ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಎಐ ವಿಡಿಯೋಗಳಲ್ಲಿ ಭಾರತದ ಕೋತಿ ಸ್ಥಾನ ಗಳಿಸಿದೆ.

‘ಬಂದರ್ ಅಪ್ನ ದೋಸ್ತ್’ (ಕೋತಿ ನಮ್ಮ ಸ್ನೇಹಿತ) ಹೆಸರಿನ ಯೂಟ್ಯೂಬ್ ಚಾನೆಲ್ ಒಂದಿದೆ. ಈ ಚಾನೆಲ್ ಆರಂಭವಾಗಿ ವರ್ಷ ಸಹ ಇನ್ನೂ ಆಗಿಲ್ಲ. ಯೂಟ್ಯೂಬ್​​ನ ಎಲ್ಲ ವಿಡಿಯೋಗಳು ಎಐ ಬಳಸಿ ಮಾಡಿರುವಂಥಹವು. ಯೂಟ್ಯೂಬ್​​ನಲ್ಲಿ ವಿಡಿಯೋಗಳಲ್ಲಿ ಒಂದು ಕೋತಿ ಇದೆ, ಆಗಾಗ್ಗೆ ಹಲ್ಕ್ ರೀತಿಯ ವ್ಯಕ್ತಿಯೊಬ್ಬ ಬರುತ್ತಾನೆ. ಕೆಂಪು ಸೀರೆ ಉಟ್ಟ ಮಂತ್ರವಾದಿ ಹೆಂಗಸೊಬ್ಬಳು ಕೆಲ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾಳೆ ಅಷ್ಟೆ. ಈ ಖಾತೆಯಲ್ಲಿರುವ ವಿಡಿಯೋಗಳ ಸಂಖ್ಯೆ ಸಹ ಕಡಿಮೆಯೇ ಆದರೆ ಅಷ್ಟರಲ್ಲೇ ಈ ಖಾತೆಯ ಮಾಲೀಕ 38 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದ್ದಾನೆ.

ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಎಐ ವಿಡಿಯೋಗಳಲ್ಲಿ ‘ಬಂದರ್ ಅಪ್ನಾ ದೋಸ್ತ್’ ಯೂಟ್ಯೂಬ್​ ಚಾನೆಲ್ಲು ಸಹ ಒಂದಾಗಿದೆ. ವಿಶೇಷವೆಂದರೆ ಈ ಯೂಟ್ಯೂಬ್ ಚಾನೆಲ್ಲಿನ ಕಂಟೆಂಟ್ ಸಹ ಅದ್ಭುತ ಗುಣಮಟ್ಟವನ್ನೇನೂ ಹೊಂದಿಲ್ಲ. ಬಹಳ ಸಾಧಾರಣ ಗುಣಮಟ್ಟದ ಕಂಟೆಂಟ್ ಅನ್ನು ಒಳಗೊಂಡಿದೆ ಆದರೂ ಸಹ ಇದು ವಿಶ್ವದಲ್ಲೇ ಹೆಚ್ಚು ನೋಡಲಾದ ಎಐ ವಿಡಿಯೋಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:Year Ender 2024: ಈ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದ 10 ವಿಡಿಯೋಗಳು

‘ಬಂದರ್ ಅಪ್ನಾ ದೋಸ್ತ್’ ವಿಡಿಯೋನ ಯಶಸ್ಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಎಐನ ಅಗತ್ಯತೆ ಬಗ್ಗೆ ಮನದಟ್ಟು ಮಾಡಲು ಕೆಲವರು ‘ಬಂದರ್ ಅಪ್ನಾ ದೋಸ್ತ್’ ಯೂಟ್ಯೂಬ್ ಚಾನೆಲ್ಲಿನ ಉದಾಹರಣೆ ಕೊಡುತ್ತಿದ್ದಾರೆ. ಇನ್ನು ಕೆಲವರು ‘ಭಾರತದ ಒಂದು ಕೋತಿ ಅರ್ಧ ಹಾಲಿವುಡ್ ಸಿನಿಮಾಗಳಿಗೂ ಹೆಚ್ಚು ಹಣ ಗಳಿಕೆ ಮಾಡಿದೆ’ ಎಂದಿದ್ದಾರೆ. ಇನ್ನು ಕೆಲವರು ಇದು ಸುಳ್ಳು ಇಷ್ಟು ಹಣ ಬರಲು ಸಾಧ್ಯವಿಲ್ಲ ಎಂದು ಸಹ ವಾದ ಮಾಡಿದ್ದಾರೆ.

ಜೀತ್ ಕರಮ್​​ಕಮ್ ಎಂಬಾತ ಈ ‘ಬಂದರ್ ಅಪ್ನಾ ದೋಸ್ತ್’ ಯೂಟ್ಯೂಬ್ ಚಾನೆಲ್ಲಿನ ಮಾಲೀಕನಾಗಿದ್ದಾನೆ. ಈ ಯೂಟ್ಯೂಬ್ ಚಾನೆಲ್ಲಿಗೆ ಈಗಾಗಲೇ 27 ಲಕ್ಷಕ್ಕೂ ಹೆಚ್ಚು ಸಬ್​​ಸ್ಕ್ರೈಬರ್​​ಗಳಿದ್ದಾರೆ. ಚಾನೆಲ್ಲಿನಲ್ಲಿ ಕೇವಲ ಐದು ಲಾಂಗ್ ಫಾರ್ಮ್ಯಾಟ್ ವಿಡಿಯೋಗಳಷ್ಟೆ ಇವೆ. ಆದರೆ 600 ಕ್ಕೂ ಹೆಚ್ಚು ಶಾರ್ಟ್ ವಿಡಿಯೋಗಳಿವೆ. ಕೇವಲ ಶಾರ್ಟ್ ವಿಡಿಯೋಗಳಿಂದಲೇ ಕೋಟ್ಯಂತರ ಹಣ ಗಳಿಸಿದ್ದಾರೆ ‘ಬಂದರ್ ಅಪ್ನಾ ದೋಸ್ತ್’ ಮಾಲೀಕ ಜೀತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ – Kannada News | Video of the last sunset of the year 2025 from Puri Shree Jagannatha Temple

ಪುರಿ, ಡಿಸೆಂಬರ್ 31: ಹೊಸ ವರ್ಷ ಸಮೀಪಿಸುತ್ತಿರುವುದರಿಂದ ಒಡಿಶಾದ ಪುರಿಯಲ್ಲಿರುವ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಜಗನ್ನಾಥ ಮತ್ತು ಅವರ ಸಹೋದರರ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಹೊಸ ವರ್ಷದ ಮೊದಲ ದಿನವಾದ್ದರಿಂದ ನಾಳೆಯೂ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ನಡುವೆ ಇಂದು ಸಂಜೆ ಪುರಿ ಜಗನ್ನಾಥ ಸ್ವಾಮಿ ದೇವಾಲಯದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಗಮನಸೆಳೆಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷದ ವೇಳೆಯೂ ಮದ್ಯಕ್ಕಿಲ್ಲ ಡಿಮ್ಯಾಂಡ್​​: ದಾಖಲೆ ಮಟ್ಟದಲ್ಲಿ ಬೇಡಿಕೆ ಕುಸಿತ – Kannada News | Chikkaballapur Records a Fifty Eight Percent Drop in Alcohol Sales During New Year Celebrations

ಚಿಕ್ಕಬಳ್ಳಾಪುರ, ಡಿಸೆಂಬರ್​​ 31: ಹೊಸ ವರ್ಷದ ಪಾರ್ಟಿ ಅಂದ್ರೆ ಅಲ್ಲಿ ಮದ್ಯ ಇರಲೇ ಬೇಕು. ಎಣ್ಣೆ ಇಲ್ಲದಿದ್ರೆ ಅದೆಂತಾ ಪಾರ್ಟಿ ಗುರೂ ಎಂದು ಮೂಗು ಮುರಿಯೋರ ನಡುವೆಯೂ ಮದ್ಯದ ಬೇಡಿಕೆ ಕುಸಿದಿದೆ ಎಂಬುದನ್ನು ನೀವು ನಂಬಬೇಕಿದೆ. ನ್ಯೂ ಇಯರ್​ ಸಂಭ್ರಮದ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿಯೇ ಮದ್ಯದ ಬೇಡಿಕೆ ಶೇ.58ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಕಳೆದ ವರ್ಷದ ಅಂಕಿ ಅಂಶಗಳಿಗೆ ಹೋಲಿಸದರೆ ಇದು ಭಾರಿ ಪ್ರಮಾಣದ ಇಳಿಕೆಯಾಗಿದೆ.

ಹೌದು, 2024ರ ಡಿಸೆಂಬರ್​​ 31ಕ್ಕೆ ಹೋಲಿಸಿದರೆ ಈ ವರ್ಷ ಡಿಸೆಂಬರ್​​ 31ರ ಮದ್ಯ ಮಾರಾಟದಲ್ಲಿ ಗಣನೀಯ ವ್ಯತ್ಯಾಸ ಕಂಡುಬಂದಿದೆ. ಮದ್ಯ ಬೇಡಿಕೆಯಲ್ಲಿ ಶೇ. 58.8ರಷ್ಟು ಕಡಿಮೆಯಾಗಿದ್ದರೆ, ಬಿಯರ್ ಬೇಡಿಕೆ ಶೇ. 11.94ರಷ್ಟು ಇಳಿಕೆಯಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಬಲವಂತ ಮಾಡಿ ಬಾರ್​​ಗಳಿಗೆ ಮದ್ಯ ಸರಬರಾಜು ಮಾಡಬೇಕಾದ ಸ್ಥಿತಿ ಉದ್ಭವಿಸಿದ್ದು, ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆ ಪರದಾಟ ನಡೆಸುತ್ತಿದೆ.

ಇದನ್ನೂ ಓದಿ:  ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ; 7 ತಿಂಗಳಾದ್ರೂ ಕಿಕ್‌ ಕೊಡದ ಎಣ್ಣೆ, ಕಾರಣವೇನು?

ಬೇಡಿಕೆ ಇಳಿಕೆಯಾಗಿರೋದೆಷ್ಟು?

ಕಳೆದ ವರ್ಷ ಡಿಸೆಂಬರ್​​ 31ರಂದು 13,191 ಕೇಸ್​​/ಬಾಕ್ಸ್​​ ಮದ್ಯ ಮಾರಾಟವಾಗಿದ್ದರೆ ಈ ವರ್ಷ ಡಿಸೆಂಬರ್​​ 31ರಂದು 5,516 ಕೇಸ್​​/ಬಾಕ್ಸ್​​ ಮಾತ್ರ ಸೇಲ್​​ ಆಗಿದೆ. ಅಂದರೆ ಶೇ. 58.18ರಷ್ಟು ಕುಸಿತವಾಗಿದೆ. ಇದೇ ದಿನಾಂಕಗಳಲ್ಲಿ ಕಳೆದ ವರ್ಷ 5,384 ಕೇಸ್​​/ಬಾಕ್ಸ್​​ ಬಿಯರ್​​ ಮಾರಾಟವಾಗಿದ್ದರೆ, ಈ ಬಾರಿ 4,741 ಕೇಸ್​​/ಬಾಕ್ಸ್​​ ಮಾರಾಟವಾಗಿದೆ. ಆ ಮೂಲಕ ಬೇಡಿಕೆ ಶೇ. 11.94ರಷ್ಟು ಇಳಿಕೆಯಾಗಿದೆ.

ದುಡಿಮೆ ಇಲ್ಲದ ಕಾರಣ ಹಣ ಸಂಪಾದನೆ ಇಲ್ಲ. ಸರಿಯಾಗಿ ಮಳೆ ಆಗದಿರೋದ್ರಿಂದ ಬೆಳೆ ಇಲ್ಲದೆಯೂ ಜನರ ಆದಾಯಕ್ಕೆ ಖೋತಾ ಆಗಿದೆ. ಇದರ ನಡುವೆ ಮದ್ಯದ ಬೆಲೆಯೂ ಏರಿಕೆಯಾಗಿದೆ. ಲಿಕ್ಕರ್​​ಗಳ ಮೇಲೆ 10-15 ರೂಪಾಯಿ ಹೆಚ್ಚಾಗಿರುವ ಆಗಿರುವ ಕಾರಣ ಕುಡಿಯುವರಿಗೆ ಸಮಸ್ಯೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸದರೆ ಹೊಸ ವರ್ಷದ ವೇಳೆ ಮದ್ಯ ಖರೀದಿಸುವವರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಾಗಿದೆ ಎಂದು ಬಾರ್​​ ಮಾಲಕರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ – Kannada News | Koppal: the Last Sunset of 2025: A Mesmerising Sight Captured

ಕೊಪ್ಪಳ, ಡಿಸೆಂಬರ್​ 31: 2025ರ ವರ್ಷದ ಕೊನೆಯ ಸೂರ್ಯಾಸ್ತದ ವಿಹಂಗಮ ದೃಶ್ಯ ಟಿವಿ9 ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಕೊಪ್ಪಳ ತಾಲೂಕಿನ ಗಿಣಗೇರಾ ಗ್ರಾಮದ ಸಮೀಪ ಸೂರ್ಯಾಸ್ತದ ಈ ದೃಶ್ಯ ಕಂಡುಬಂದಿದ್ದು, ನೋಡುಗರ ಕಣ್ಮನ ಸೆಳೆಯಿತು. ಸೂರ್ಯಾಸ್ತದ ನಯನ ಮನೋಹರ ದೃಶ್ಯವನ್ನು ಕ್ಯಾಮರಾಮೆನ್ ಮಾರುತಿ ಕಟ್ಟಿಮನಿ ಅವರು ಸೆರೆ ಹಿಡಿದಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

New Year 2026: ಹೊಸ ವರ್ಷದ ಆಚರಣೆ ಪ್ರಾರಂಭವಾದದ್ದು ಹೇಗೆ? ಇಲ್ಲಿದೆ ಆಸಕ್ತಿದಾಯಕ ಸಂಗತಿ – Kannada News | New Year 2026: How did the custom of celebrating the New Year on January 1st begin?

ಹಳೆಯ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷವನ್ನು (New Year) ಸ್ವಾಗತಿಸುವುದಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಪ್ರತಿವರ್ಷ ಡಿಸೆಂಬರ್‌ 31 ರ ರಾತ್ರಿಯಿಂದಲೇ ಸಂಭ್ರಮಾಚರಣೆ ಶುರುವಾಗುತ್ತದೆ. ಜನರೆಲ್ಲರೂ ಕುಟುಂಬಸ್ಥರು, ಫ್ರೆಂಡ್ಸ್‌ ಜೊತೆ ಸೇರಿ ಮಸ್ತ್‌ ಪಾರ್ಟಿ ಮಾಡುವ ಮೂಲಕ ಉಜ್ವಲ ಮತ್ತು ಸಮೃದ್ಧ ನಾಳೆಯ ಭರವಸೆಯೊಂದಿಗೆ  ಹೊಸ ವರ್ಷವನ್ನು ಭರದಿಂದ ಸ್ವಾಗತಿಸುತ್ತಾರೆ. ಪ್ರತಿ ವರ್ಷ ಜನವರಿ 1 ರಂದು ಪ್ರಪಂಚದಾದ್ಯಂತ ಈ ಸಂಭ್ರಮಾಚರಣೆ ನಡೆದುಕೊಂಡು ಬರುತ್ತಿದೆ. ಜನವರಿ 1 ರಂದೇ ಏಕೆ ಹೊಸ ವರ್ಷವನ್ನು ಆಚರಿಸಲಾಗುತ್ತದೆ, ಈ ಪದ್ಧತಿ ಯಾವಾಗ ಜಾರಿಗೆ ಬಂದಿತು ಎಂಬುದರ ಇಂಟರೆಸ್ಟಿಂಗ್‌ ಸಂಗತಿಯನ್ನು ತಿಳಿಯಿರಿ.

ಹೊಸ ವರ್ಷದ ಆಚರಣೆಯ ಇತಿಹಾಸವೇನು?

ಹೊಸ ವರ್ಷದ ಆರಂಭವನ್ನು ಸಾಂಪ್ರದಾಯಿಕ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಜನವರಿ 1 ನೇ ತಾರೀಖನ್ನು ಹೊಸ ವರ್ಷದ ದಿನವಾಗಿ ಆಚರಿಸುವುದು ಅಕ್ಟೋಬರ್ 15, 1582 ರಂದು ಪ್ರಾರಂಭವಾಯಿತು. ಇದರ ಮೊದಲು ಹೊಸ ವರ್ಷವನ್ನು ಕೆಲವೊಮ್ಮೆ ಮಾರ್ಚ್ 25 ರಂದು ಮತ್ತು ಕೆಲವೊಮ್ಮೆ ಡಿಸೆಂಬರ್ 25 ರಂದು ಆಚರಿಸಲಾಗುತ್ತಿತ್ತು.  ಈ ಮಾರ್ಚ್‌ ತಿಂಗಳನ್ನು  ರೋಮನ್ನರ ಯುದ್ಧ ದೇವರು ಎಂದು ಪರಿಗಣಿಸಲಾಗುತ್ತದೆ. ಆರಂಭಿಕ ಕ್ಯಾಲೆಂಡರ್‌ನಲ್ಲಿ ಕೇವಲ 10 ತಿಂಗಳುಗಳಿದ್ದವು. ಹೀಗಾಗಿ, ಒಂದು ವರ್ಷವು 310 ದಿನಗಳನ್ನು ಮತ್ತು ಒಂದು ವಾರವು 8 ದಿನಗಳನ್ನು ಹೊಂದಿತ್ತು. ಜನರು ಮಾರ್ಚ್‌ನಲ್ಲಿ ಅಕಿಟು ಎಂಬ ಹಬ್ಬವನ್ನು ಆಚರಿಸುತ್ತಿದ್ದರು, ಇದು ವಸಂತಕಾಲದ ಆರಂಭವನ್ನು ಸೂಚಿಸುತ್ತದೆ.

ಜನವರಿ 1 ರಂದು ಹೊಸ ವರ್ಷವನ್ನು ಆಚರಿಸುವ ಸಂಪ್ರದಾಯವು ಪ್ರಾಚೀನ ರೋಮ್‌ನಲ್ಲಿ ಪ್ರಾರಂಭವಾಯಿತು ಮತ್ತು ಕ್ರಿ.ಪೂ 46 ರಲ್ಲಿ, ರೋಮನ್ ಚಕ್ರವರ್ತಿ ಜೂಲಿಯಸ್ ಸೀಸರ್ ‘ಜೂಲಿಯನ್ ಕ್ಯಾಲೆಂಡರ್’ ಅನ್ನು ಜಾರಿಗೆ ತಂದರು. ಜೂಲಿಯನ್ ಕ್ಯಾಲೆಂಡರ್ ಒಂದು ವರ್ಷದಲ್ಲಿ 12 ತಿಂಗಳುಗಳನ್ನು ಒಳಗೊಂಡಿತ್ತು. ಖಗೋಳಶಾಸ್ತ್ರಜ್ಞರನ್ನು ಭೇಟಿಯಾದ ನಂತರ, ಜೂಲಿಯಸ್ ಸೀಸರ್ ಭೂಮಿಯು ಸೂರ್ಯನ ಸುತ್ತ 365 ದಿನಗಳು ಮತ್ತು ಆರು ಗಂಟೆಗಳಲ್ಲಿ ಸುತ್ತುತ್ತದೆ ಎಂದು ತಿಳಿದುಕೊಂಡರು. ಇದನ್ನು ಗಣನೆಗೆ ತೆಗೆದುಕೊಂಡು, ಜೂಲಿಯನ್ ಕ್ಯಾಲೆಂಡರ್ ವರ್ಷವನ್ನು 310 ರಿಂದ 365 ದಿನಗಳಿಗೆ ವಿಸ್ತರಿಸಲಾಯಿತು. ನಂತರ ಅಮೆರಿಕದ ನೇಪಲ್ಸ್‌ನ ವೈದ್ಯ ಅಲೋಶಿಯಸ್ ಲಿಲಿಯಸ್, ರೋಮನ್ ಕ್ಯಾಲೆಂಡರ್ ಅನ್ನು ಮಾರ್ಪಡು ಮಾಡಿ ಜಗತ್ತಿಗೆ ಹೊಸ ಕ್ಯಾಲೆಂಡರ್ ಪರಿಚಯಿಸಿದರು. ಅದುವೇ ಗ್ರೆಗೋರಿಯನ್ ಕ್ಯಾಲೆಂಡರ್, ಇದರಲ್ಲಿ ವರ್ಷದ ಮೊದಲ ದಿನವನ್ನು ಜನವರಿ 1 ರಂದು ಆಚರಿಸಲಾಯಿತು. ಅಂದಿನಿಂದ, ಜನವರಿ 1 ರಂದು ಹೊಸ ವರ್ಷವನ್ನು ಆಚರಿಸುವ ಸಂಪ್ರದಾಯವು ಪ್ರಪಂಚದಾದ್ಯಂತ ಪ್ರಚಲಿತವಾಗಿದೆ.

ಹೊಸ ವರ್ಷದ ಮಹತ್ವವೇನು?

  • ಹೊಸ ವರ್ಷ ಎಂದರೆ ಕೇವಲ ಕ್ಯಾಲೆಂಡರ್‌ ಬದಲಿಸುವ ದಿನವಲ್ಲ. ಅದು ನಮ್ಮನ್ನು ನಾವು ಸುಧಾರಿಸಿಕೊಳ್ಳಲು, ಹಿಂದಿನ ಕಹಿ, ನೋವುಗಳನ್ನು ಮರೆತು ಹೊಸ ಜೀವನವನ್ನು ಆರಂಭಿಸಲಿರುವ ಒಂದು ಅವಕಾಶವಾಗಿದೆ.
  • ಹೊಸ ವರ್ಷವು ನಮಗೆ ಹೊಸ ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತುಂಬುವ ವಿಶೇಷ ದಿನವಾಗಿದ್ದು, ಹೊಸ ವರ್ಷದ ಆರಂಭವು ಪ್ರತಿ ದಿನವನ್ನು ಹೇಗೆ ಉತ್ತಮಗೊಳಿಸಬೇಕೆಂದು ನಮಗೆ ಕಲಿಸುತ್ತದೆ.

ಇದನ್ನೂ ಓದಿ: ಹೊಸ ವರ್ಷದ ದಿನ ನಿಮ್ಮ ಪ್ರೀತಿಪಾತ್ರರಿಗೆ ರೀತಿ ಶುಭಾಶಯಗಳನ್ನು ತಿಳಿಸಿ

ಭಾರತದಲ್ಲಿ ಹೊಸ ವರ್ಷ:

ನಮ್ಮ ದೇಶದಲ್ಲಿ, ಹೊಸ ವರ್ಷದ ಆಚರಣೆಗಳು ಪ್ರದೇಶ ಮತ್ತು ಧರ್ಮದಿಂದ ಬದಲಾಗುತ್ತವೆ. ಪಂಜಾಬ್‌ನ ಜನರು ಏಪ್ರಿಲ್ 13 ರಂದು ಬೈಸಾಖಿಯಂದು ತಮ್ಮ ಹೊಸ ವರ್ಷವನ್ನು ಆಚರಿಸುತ್ತಾರೆ. ನಾನಾಕ್ಷಾಹಿ ಕ್ಯಾಲೆಂಡರ್ ಪ್ರಕಾರ, ಸಿಖ್ಖರು ಮಾರ್ಚ್‌ನಲ್ಲಿ ಹೋಳಿಯ ಎರಡನೇ ದಿನದಂದು ತಮ್ಮ ಹೊಸ ವರ್ಷವನ್ನು ಆಚರಿಸುತ್ತಾರೆ. ಜೈನರು ದೀಪಾವಳಿಯ ಎರಡನೇ ದಿನದಂದು ಹೊಸ ವರ್ಷವನ್ನು ಆಚರಿಸುತ್ತಾರೆ. ಹಿಂದೂ ಧರ್ಮದಲ್ಲಿ ಯುಗಾದಿ ಹಬ್ಬದಂದು ಹೊಸ ವರ್ಷವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

New Year Celebration: ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ; ಸಿಲಿಕಾನ್​​ ಸಿಟಿ ಫುಲ್​​ ಝಗಮಗ – Kannada News | New Year’s Eve in Bengaluru: Crowds gather at pubs and restaurants

ಬೆಂಗಳೂರು, ಡಿಸೆಂಬರ್​​ 31: ನಗರವು ಹೊಸ ವರ್ಷದ ಆಚರಣೆಗೆ ಸಿದ್ಧವಾಗಿದ್ದು, ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ ಹಾಗೂ ಇಂದಿರಾನಗರದಂತಹ ಪ್ರಮುಖ ಪ್ರದೇಶಗಳು ದೀಪಾಲಂಕಾರಗಳಿಂದ ಝಗಮಗಿಸುತ್ತಿವೆ. ಪಾರ್ಟಿಪ್ರಿಯರು ಹಾಗೂ ಯುವಜನತೆ ಈಗಾಗಲೇ ಪಬ್‌ಗಳು ಮತ್ತು ರಸ್ತೆಗಳತ್ತ ಉತ್ಸಾಹದಿಂದ ಆಗಮಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ಪೊಲೀಸರು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ. ನಗರದಾದ್ಯಂತ 20,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಎಂ.ಜಿ. ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ 6,000ಕ್ಕೂ ಹೆಚ್ಚು ಸಿಬ್ಬಂದಿ ಕಣ್ಗಾವಲಿರಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link