ಸೆಂಧ್ವಾ, ಏ.1: ಮಧ್ಯಪ್ರದೇಶದ ಸೆಂಧ್ವಾ ಜಿಲ್ಲೆಯ ಜಾತ್ರೆಯೊಂದರಲ್ಲಿ ಕೆಲವು ಕಿಡಿಗೇಡಿಗಳು ಯುವತಿಯರಿಗೆ ಬಹಿರಂಗವಾಗಿ ಕಿರುಕುಳ ನೀಡುತ್ತಿರುವ ಭಯಾನಕ ಘಟನೆ ನಡೆದಿದೆ. ಯಾವುದೇ ಭಯವಿಲ್ಲದೆ ಸಾರ್ವಜನಿಕವಾಗಿ ಯುವತಿಯರನ್ನು ಹಿಂಬಾಲಿಸುವುದು, ಅವರನ್ನು ಅಪ್ಪಿಕೊಳ್ಳಲು ಪ್ರಯತ್ನಿಸುವುದು ಮತ್ತು ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಘಟನೆಯ ವೀಡಿಯೋ ಎಕ್ಸ್ (X) ನಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮಧ್ಯಪ್ರದೇಶ ಪೊಲೀಸರನ್ನು (@MPPoliceDeptt) ಟ್ಯಾಗ್ ಮಾಡಿ ಈ “ಛಪ್ರಿ” (Chapris) ಕಿಡಿಗೇಡಿಗಳಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ, ಇಂತಹ ಕಾಮುಕರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವರದಿಗಳ ಪ್ರಕಾರ, ಸ್ಥಳೀಯ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ವೀಡಿಯೋ ಆಧರಿಸಿ ಕಿಡಿಗೇಡಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ಮಹಿಳಾ ಸುರಕ್ಷತೆಯ ದೃಷ್ಟಿಯಿಂದ ಜಾತ್ರಾ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಹುಬ್ಬಳ್ಳಿ, ಏಪ್ರಿಲ್ 01: ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ದದಿಂದಾಗಿ ಈಗಾಗಲೇ ಕಮರ್ಷಿಯಲ್ ಸಿಲಿಂಡರ್ ಅಭಾವ ಉಂಟಾಗಿದೆ. ಆಮದು, ರಫ್ತು ಮೇಲೆ ಬೀರಿದ ಪರಿಣಾಮದಿಂದ ಅನೇಕ ವಸ್ತುಗಳ ಬೆಲೆ ಹೆಚ್ಚಳವಾಗಿವೆ. ಇದೇ ರೀತಿ ಯುದ್ಧ ಮುಂದವರಿದರೆ ವೈದ್ಯಕೀಯ (Medical)ವಸ್ತುಗಳಿಗೆ ಕೂಡ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಬಳಕೆಯಾಗುವ ಇಂಜೆಕ್ಷನ್ ಸಿರಿಂಜ್, ಐವಿ ಕೆನಾಲ್ ಸೇರಿದಂತೆ ಇನ್ನಿತರ ವಸ್ತುಗಳ ಉತ್ಫಾದನೆಗೆ ಕಚ್ಚಾವಸ್ತುವಿನ ಕೊರತೆ ಆರಂಭವಾಗಿದೆ. ಬಹುತೇಕ ಘಟಕಗಳು ಕಚ್ಚಾವಸ್ತುಗಳಿಲ್ಲದೇ ಬಂದ್ ಆಗುವ ಸ್ಥಿತಿಗೆ ತಲುಪಿವೆ.
ಯುದ್ದದಿಂದ ಜಗತ್ತಿನ ಅನೇಕ ದೇಶಗಳು ಹತ್ತಾರು ರೀತಿಯ ತೊಂದರೆ ಅನುಭವಿಸುತ್ತಿವೆ. ಈಗಾಗಲೇ ದೇಶದಲ್ಲಿ ಕಮರ್ಷಿಯಲ್ ಸಿಲಿಂಡರ್ ಅಭಾವ, ಆಟೋ ಗ್ಯಾಸ್ ಸಿಗದೇ ಆಟೋ ಚಾಲಕರ ಪರದಾಟ, ಅನೇಕ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರೆ, ಅನೇಕ ವಸ್ತುಗಳ ಬೆಲೆ ಕಡಿಮೆಯಾಗಿದ್ದರಿಂದ ರೈತರು ಪರದಾಡುತ್ತಿದ್ದಾರೆ. ಆದರೆ ಯುದ್ದ ಹೀಗೆ ಮುಂದವರಿದರೆ ಮತ್ತೊಂದು ದೊಡ್ಡ ಗಂಡಾಂತರ ಉಂಟಾಗುವ ಆತಂಕ ಇದೀಗ ಎದುರಾಗಿದೆ.
ಯುದ್ದ ಮುಂದುವರಿದರೆ ವೈದ್ಯಕೀಯ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡಲಿದ್ದು, ರೋಗಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಕೆಯಾಗುವುದು ಇಂಜೆಕ್ಷನ್ ಸಿರಿಂಜ್ಗಳು, ಡ್ರಿಪ್ಗೆ ಹಾಕುವ ಐವಿ ಕ್ಯಾನಲ್ಗಳು ಸಿಗದಂತಹ ಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತಿದ್ದಾರೆ ಫಾರ್ಮಾ ವಸ್ತುಗಳ ಉತ್ಪಾದನಾ ಕಂಪನಿಗಳು.
ಫಾರ್ಮಾ ಕಂಪನಿಗಳ ಆತಂಕ
ಸಿರಿಂಜ್, ಐವಿ ಕ್ಯಾನಲ್ಗಳ ಉತ್ಪಾದನೆಗೆ ಪೆಟ್ರೋಲಿಯಂ ಉಪ ಉತ್ಪನ್ನವಾಗಿರುವ ಪಾಲಿ ಪ್ರಿಪಲಿನ್ ಕಚ್ಚಾವಸ್ತುವಿನ ಅವಶ್ಯಕತೆ ಇದೆ. ಆದರೆ ಯುದ್ದದಿಂದಾಗಿ ಈ ಕಚ್ಚಾವಸ್ತುವಿನ ಕೊರತೆ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ. ಹುಬಳ್ಳಿ ಹೊರವಲಯದ ರಕ್ಷಂ ಮೆಡಿಕಲ್ ಡಿವೈಸ್ ಕಂಪನಿಗೆ ಪ್ರತಿ ತಿಂಗಳು 150 ಟನ್ ಪಾಲಿ ಪ್ರಿಪಲಿನ್ ಕಚ್ಚಾವಸ್ತುಬೇಕು. ಆದರೆ 20ಟನ್ ಮಾತ್ರ ಪೂರೈಕೆ ಆಗುತ್ತಿದೆ. ಹೀಗಾಗಿ ಪ್ರತಿ ದಿನ 18 ಲಕ್ಷ ಸಿರಿಂಜ್ ಉತ್ಪಾದನೆ ಮಾಡುತ್ತಿದ್ದ ಘಟಕದಲ್ಲಿ ಇದೀಗ ನಾಲ್ಕು ಲಕ್ಷ ಸಿರಿಂಜ್ಗಳ ಉತ್ಪಾದನೆ ಮಾತ್ರ ಆಗುತ್ತಿದೆ. ಯುದ್ಧ ಹೀಗೆ ಮುಂದುವರಿದರೆ ಸಿಗುವ ಕಚ್ಚಾವಸ್ತುಗಳು ಸಿಗದಂತಾಗಬಹುದು ಎನ್ನುವ ಆತಂಕ ಇದೀಗ ಫಾರ್ಮಾ ಕಂಪನಿಗಳಿಗೆ ಎದುರಾಗಿದೆ.
ಸಿರಿಂಜ್ ಬೆಲೆ ಏರಿಕೆ?
ಹುಬ್ಬಳ್ಳಿ ರಕ್ಷಂ ಮೆಡಿಕಲ್ ಡಿವೈಸ್ ಕಂಪನಿಯಲ್ಲಿ ಮೂರು ಶಿಫ್ಟ್ನಲ್ಲಿ 300ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಕಚ್ಚಾವಸ್ತುಗಳ ಪೂರೈಕೆ ಕಡಿಮೆ ಆಗಿದ್ದರಿಂದ ಎರಡು ಶಿಫ್ಟ್ ಕ್ಯಾನ್ಸಲ್ ಮಾಡಿದ್ದು, ಕೇವಲ ಒಂದೇ ಒಂದು ಶಿಫ್ಟ್ನಲ್ಲಿ ಮಾತ್ರ ಕೆಲಸ ನಡೆಯುತ್ತಿದೆ. ಇದೀಗ ಬರುತ್ತಿರುವ ಕಚ್ಚಾವಸ್ತುವು ಬರದೇ ಇದರೆ ಸಿರಿಂಜ್ ತಯಾರಾಗುವ ಘಟಕವನ್ನು ಬಂದ್ ಮಾಡಬೇಕಾಗುತ್ತದಯಂತೆ. ಇದರಿಂದ ಮುಂದಿನ ದಿನಗಳಲ್ಲಿ ಸಿರಿಂಜ್ ಬೆಲೆ ಏರಿಕೆ ಜೊತೆಗೆ ಅವುಗಳು ಸಿಗದಂತಾಗಬಹುದು. ರೋಗಿಗಳಿಗೆ ಇದರಿಂದ ದೊಡ್ಡ ಮಟ್ಟದ ಹೊಡೆತ ಬೀಳಲಿದೆಯಂತೆ.
ಸದ್ಯ ಎಲ್ಲರು ಕೇವಲ ಪೆಟ್ರೋಲ್, ಡಿಸೇಲ್, ಕಮರ್ಷಿಯಲ್ ಸಿಲಿಂಡರ್ ಕೊರತೆ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ. ಆದರೆ ವೈದ್ಯಕೀಯ ಕ್ಷೇತ್ರದ ಮೇಲೆ ಉಂಟಾಗಲಿರುವ ಪರಿಣಾಮದ ಬಗ್ಗೆ ಯಾರು ಗಂಭೀರವಾಗಿಲ್ಲ. ವೈದ್ಯಕೀಯ ವಸ್ತುಗಳು ಸಿಗದಿದ್ದರೆ ಅನೇಕರ ಜೀವಕ್ಕೆ ಅಪಾಯವಾಗುವ ಆತಂಕ ಎದುರಾಗಿದೆ.
ಸದ್ಯ ಕೇಂದ್ರ ಸರ್ಕಾರ ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ವಸ್ತುಗಳು ತಯಾರಾಗಲು ಬೇಕಾದ ಕಚ್ಚಾವಸ್ತುಗಳನ್ನು ಪೂರೈಕೆ ಮಾಡೋದರ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಇಲ್ಲದೇ ಇದರೆ ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಯುದ್ದದ ದುಷ್ಪರಿಣಾಮಗಳು ದೊಡ್ಡಮಟ್ಟದಲ್ಲಿ ಆಗುವ ಸಾಧ್ಯತೆಯಿದೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರ ಹೆಸರಿನಲ್ಲಿ ಒಂದು ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ಅದರಲ್ಲಿ ಜಾನ್ ಅಬ್ರಹಾಂ (John Abraham) ಅವರು ಇತ್ತೀಚಿನ ಸೂಪರ್ ಹಿಟ್ ಸಿನಿಮಾ ‘ಧುರಂಧರ್ 2’ (Dhurandhar 2) ಬಗ್ಗೆ ಟೀಕೆ ಮಾಡಿದ್ದಾರೆ ಎಂದು ಬಿಂಬಿಸಲಾಗಿದೆ. ಆದರೆ, ಈ ಸುದ್ದಿಯನ್ನು ಪರಿಶೀಲಿಸಿದಾಗ ಇದು ಕೇವಲ ಒಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ.
ವೈರಲ್ ಆಗಿರುವ ಮೀಮ್ ಒಂದರಲ್ಲಿ, ‘ಧುರಂಧರ್ ಮತ್ತು ದಿ ಕಾಶ್ಮೀರ್ ಫೈಲ್ಸ್‌ನಂತಹ ಚಿತ್ರಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತವೆ. ಇಂತಹ ಸಿನಿಮಾಗಳನ್ನು ಜನರು ಅದ್ದೂರಿಯಾಗಿ ಸ್ವಾಗತಿಸುತ್ತಿರುವುದು ಭಯ ಹುಟ್ಟಿಸುತ್ತದೆ. ನಾನು ಎಂದಿಗೂ ಇಂತಹ ಸಿನಿಮಾಗಳನ್ನು ನಿರ್ಮಾಣ ಮಾಡುವುದಿಲ್ಲ’ ಎಂದು ಜಾನ್ ಅಬ್ರಹಾಂ ಹೇಳಿದ್ದಾರೆಂದು ಉಲ್ಲೇಖಿಸಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಜಾನ್ ಪರವಾಗಿ ಮತ್ತು ಇನ್ನು ಕೆಲವರು ಅವರ ವಿರುದ್ಧವಾಗಿ ಕಮೆಂಟ್ ಮಾಡುತ್ತಿದ್ದಾರೆ.
ಜಾನ್ ಅಬ್ರಹಾಂ ಅವರು ‘ಧುರಂಧರ್’ ಚಿತ್ರದ ಬಗ್ಗೆ ಸಾರ್ವಜನಿಕವಾಗಿಯಾಗಲಿ ಅಥವಾ ಮಾಧ್ಯಮಗಳ ಮುಂದಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಅಸಲಿಗೆ, ಅವರು 2025ರ ಆಗಸ್ಟ್ ತಿಂಗಳಲ್ಲಿ ‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನವೊಂದರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ಛಾವಾ’ ಚಿತ್ರಗಳ ಬಗ್ಗೆ ಮಾತನಾಡುತ್ತಾ, ಇಂತಹ ಅತಿ-ರಾಷ್ಟ್ರೀಯತೆಯ ಚಿತ್ರಗಳನ್ನು ತಾವು ನಿರ್ಮಿಸುವುದಿಲ್ಲ ಎಂದು ಹೇಳಿದ್ದರು.
ಜಾನ್ ಅಬ್ರಹಾಂ ಈ ಹೇಳಿಕೆ ನೀಡಿದಾಗ ‘ಧುರಂಧರ್’ ಸಿನಿಮಾ ಇನ್ನು ಬಿಡುಗಡೆಯೇ ಆಗಿರಲಿಲ್ಲ. ಸಂದರ್ಶನ ನೀಡಿದ ನಾಲ್ಕು ತಿಂಗಳ ನಂತರ ಈ ಚಿತ್ರ ತೆರೆಕಂಡಿತು. ಹಳೆಯ ಸಂದರ್ಶನದ ಹೇಳಿಕೆಗೆ ಈಗಿನ ‘ಧುರಂಧರ್’ ಚಿತ್ರದ ಹೆಸರನ್ನು ಸೇರಿಸಿ ಕಿಡಿಗೇಡಿಗಳು ಮೀಮ್ ಸೃಷ್ಟಿಸಿದ್ದಾರೆ. ಜಾನ್ ಅಬ್ರಹಾಂ ನಿಜವಾಗಿಯೂ ಇಂತಹ ಹೇಳಿಕೆ ನೀಡಿದ್ದರೆ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ಯಾವುದೇ ಅಧಿಕೃತ ಸುದ್ದಿ ಸಂಸ್ಥೆಗಳು ಇಂತಹ ವರದಿ ಪ್ರಕಟಿಸಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಇಂತಹ ಆಧಾರರಹಿತ ಪೋಸ್ಟ್‌ಗಳನ್ನು ನಂಬುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಒಟ್ಟಾರೆ ಹೇಳುವುದಾದರೆ, ‘ಧುರಂಧರ್’ ಚಿತ್ರದ ಬಗ್ಗೆ ಜಾನ್ ಅಬ್ರಹಾಂ ಯಾವುದೇ ನಕಾರಾತ್ಮಕ ಹೇಳಿಕೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಕುತೂಹಲ ಇದೆ.
ಬೆಂಗಳೂರು, ಏಪ್ರಿಲ್ 01: ರೌಡಿಶೀಟರ್‌ನಿಂದ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿನ ಟ್ರಸ್ಟ್‌ನಡಿ ನೈತಿಕ ಪೊಲೀಸ್‌ಗಿರಿ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ನಕಾರ ಎತ್ತಿರುವ ಕರ್ನಾಟಕ ಹೈಕೋರ್ಟ್ (High Court), ತಡೆ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಿ ಬುಧವಾರ ಆದೇಶ ಹೊರಡಿಸಿದೆ.
ತುಮಕೂರಿನ ತಿಲಕ್‌ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು. ಪ್ರಕರಣ ರದ್ದುಪಡಿಸುವಂತೆ ಕೋರಿ ಮೊಹಮ್ಮದ್ ಖಲಂದರ್, ಗೌಸ್ ಪಾಷಾ ಮತ್ತು ಆಶಿಯಾ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ಮಾಡಿ ರೌಡಿಶೀಟರ್ ಅರ್ಜಿ ವಜಾಗೊಳಿಸಿದೆ.
ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿಡಲು ಅಧಿಕಾರ ಕೊಟ್ಟವರು ಯಾರು? ಈ ಟ್ರಸ್ಟ್‌ಗೆ ನಿಮಗೆ ಅಧಿಕಾರ ನೀಡಿದವರು ಯಾರು? ಈ ಟ್ರಸ್ಟ್‌ಗೆ ತಡೆ ನೀಡುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. ಆ ಮೂಲಕ ಪ್ರಕರಣಕ್ಕೆ ತಡೆ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಲಾಗಿದೆ. ಅರ್ಜಿದಾರರ ಪರ ವಕೀಲ ಜಿ.ಎ ಪ್ರೇಮ್ ಕುಮಾರ್ ಅವರು ವಾದ ಮಂಡಿಸಿದರು.
ಪ್ರಕರಣದ ಹಿನ್ನೆಲೆ
ರೌಡಿಶೀಟರ್ಗಳು ಪೊಲೀಸ್ ಪಬ್ಲಿಕ್ ಪ್ರೆಸ್ ಆರ್ಮಿ ಎಂಬ ಟ್ರಸ್ಟ್ ಆರಂಭಿಸಿದ್ದರು. ಆ ಮೂಲಕ ಅಮಾಯಕ ಯುವಕರಿಗೆ ಪ್ರಚೋದನೆ ನೀಡುವುದು, ಜೊತೆಗೆ ಸದಾಶಿವನಗರದ ಕನ್ನಿಕಾ ಶಾಲೆಯ ಬಳಿ ಎಲ್ಲರನ್ನು ಸೇರಿಸುತ್ತಿದ್ದರು. ನಾವು ಪೊಲೀಸರು ನಿಮ್ಮ ಯಾವುದೇ ದೂರುಗಳನ್ನು ನಮ್ಮ ಸಂಸ್ಥೆಯ ಸದಸ್ಯರಿಗೆ ತಿಳಿಸಿದರೆ ನಾವು ಪರಿಹರಿಸುತ್ತೇವೆ ಎಂದು ಸುಳ್ಳು ಹೇಳುತ್ತಿದ್ದರು.
ಇನ್ನು ಸಂಸ್ಥೆಯ ಸದಸ್ಯರು ತಾವು ಸಾರ್ವಜನಿಕ ನೌಕರರಂತೆ ವರ್ತಿಸುತ್ತಿದ್ದರು. ಪೊಲೀಸ್ ಇಲಾಖೆಯ ಹೆಸರನ್ನು ದುರುಪಯೋಗಪಡಿಸಿಕೊಂಡು, ಇಲಾಖೆಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಅಲ್ಲದೆ, ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ನೈತಿಕ ಪೊಲೀಸ್‌ಗಿರಿ ನಡೆಸುತ್ತಿದ್ದರು ಎಂಬ ಆರೋಪದ ಮೇರೆಗೆ, ತುಮಕೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಬಿಎನ್‌ಎಸ್ ಸೆಕ್ಷನ್ 204, 353(1)(b), 190 ಅಡಿ ಪ್ರಕರಣ ದಾಖಲಿಸಲಾಗಿತ್ತು.
ತಿರುವನಂತಪುರಂ, ಏಪ್ರಿಲ್ 1: ಕೇರಳದಲ್ಲಿ ಕಳ್ಳತನದ ಆರೋಪದ ಮೇಲೆ ಅಸ್ಸಾಂ ಮೂಲದ ವ್ಯಕ್ತಿಯೊಬ್ಬನನ್ನು ಇಂದು ಬೆಳಿಗ್ಗೆ ಪೆರುಂಬವೂರ್ ಬಳಿ ಕೇರಳದ (Kerala) 6 ಸಹೋದ್ಯೋಗಿಗಳು ಥಳಿಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು (ಬುಧವಾರ) ಬೆಳಿಗ್ಗೆ ಪೆರುಂಬವೂರ್ ಬಳಿ ಅದೇ ರಾಜ್ಯದವರಾದ 6 ಜನ ಸೇರಿ ಈ ಕೊಲೆ ಮಾಡಿದ್ದಾರೆ. ಅವರು ಆತ ತಮ್ಮ ಫೋನ್ ಕದಿಯಲು ಪ್ರಯತ್ನಿಸುತ್ತಿದ್ದಾನೆ ಎಂದು ಅನುಮಾನಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
6 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೆರುಂಬವೂರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಅವರನ್ನು ಔಪಚಾರಿಕವಾಗಿ ಬಂಧಿಸಲಾಗಿಲ್ಲ. ಅವರ ವಿರುದ್ಧ ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
“ನಾವು ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ” ಎಂದು ಪೊಲೀಸರು ಹೇಳಿದ್ದಾರೆ. ಮೃತ ವ್ಯಕ್ತಿಗೆ 25 ವರ್ಷ ವಯಸ್ಸಾಗಿತ್ತು. ಆತ ಮತ್ತು ಇತರ 6 ಆರೋಪಿಗಳು ಪೆರುಂಬವೂರ್‌ನ ಪ್ಲೈವುಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಆ ವ್ಯಕ್ತಿಯನ್ನು ಥಳಿಸಿದ ನಂತರ ಆರೋಪಿಗಳು ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆ ಆರಂಭಿಸುವ ಮೊದಲೇ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ತಕ್ಷಣ ಆಸ್ಪತ್ರೆಯ ಸಿಬ್ಬಂದು ನಮಗೆ ಮಾಹಿತಿ ನೀಡಿದರು” ಎಂದು ಪೊಲೀಸರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ (Peddi) ಚಿತ್ರದ ಬಗ್ಗೆ ಇದೀಗ ಹೊಸದೊಂದು ಅಪ್‌ಡೇಟ್ ಹೊರಬಿದ್ದಿದೆ. ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟು ಮಾಡಿದೆ. ಮುಂದಿನ ವಾರದಿಂದ ಈ ಚಿತ್ರದ ಪ್ರಮುಖ ಹಾಡೊಂದರ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರತಂಡ ಅದ್ದೂರಿ ಸಿದ್ಧತೆ ಮಾಡಿಕೊಂಡಿದೆ. ಈ ಹಾಡಿನಲ್ಲಿ ರಾಮ್ ಚರಣ್ (Ram Charan) ಜೊತೆ ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಕೂಡ ಹೆಜ್ಜೆ ಹಾಕಲಿದ್ದಾರೆ.
ಹಳ್ಳಿ ಸೊಗಡಿನ ಕಥಾಹಂದರ ಹೊಂದಿರುವ ‘ಪೆದ್ದಿ’ ಸಿನಿಮಾಗೆ ‘ಉಪ್ಪೆನಾ’ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ಇದರಲ್ಲಿ ಬಾಲಿವುಡ್ ಸುಂದರಿಯರಾದ ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವಾರ ಚಿತ್ರೀಕರಣಗೊಳ್ಳಲಿರುವ ಹಾಡಿನಲ್ಲಿ ಈ ಇಬ್ಬರು ನಟಿಯರು ರಾಮ್ ಚರಣ್ ಜೊತೆ ಹೆಜ್ಜೆ ಹಾಕಲಿದ್ದು, ಇದು ಪ್ರೇಕ್ಷಕರ ಕಣ್ಣಿಗೆ ಹಬ್ಬವಾಗುವುದರಲ್ಲಿ ಅನುಮಾನವಿಲ್ಲ.
ತೆಲುಗು ಚಿತ್ರರಂಗದ ಖ್ಯಾತ ನೃತ್ಯ ಸಂಯೋಜಕ ಶೇಖರ್ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಶೇಖರ್ ಮಾಸ್ಟರ್ ಅವರ ಎನರ್ಜಿಟಿಕ್ ಸ್ಟೆಪ್‌ಗಳಿಗೆ ರಾಮ್ ಚರಣ್ ಅವರ ಡ್ಯಾನ್ಸ್ ಸೇರಿದರೆ ಸಿನಿಮಾ ಮಂದಿರದಲ್ಲಿ ಶಿಳ್ಳೆ-ಚಪ್ಪಾಳೆ ಗ್ಯಾರಂಟಿ. ಈಗಾಗಲೇ ಬಿಡುಗಡೆ ಆಗಿರುವ ‘ಚಿಕಿರಿ ಚಿಕಿರಿ’ ಹಾಡು ಅಭಿಮಾನಿಗಳಿಗೆ ಇಷ್ಟ ಆಗಿದೆ.
ಈ ಮೊದಲು ‘ಪೆದ್ದಿ’ ಚಿತ್ರವನ್ನು ಏಪ್ರಿಲ್ 30ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇರುವುದರಿಂದ ಬಿಡುಗಡೆ ದಿನಾಂಕ ಸ್ವಲ್ಪ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ. ಸ್ಟಾರ್ ಕಲಾವಿದರು ಮತ್ತು ಪ್ರತಿಭಾವಂತ ತಾಂತ್ರಿಕ ವರ್ಗವನ್ನು ಹೊಂದಿರುವ ‘ಪೆದ್ದಿ’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ಚಿತ್ರತಂಡದ ಕಡೆಯಿಂದ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಕೇಳಿಬರುತ್ತಿರುವ ವದಂತಿಗಳಿಗೆ ಚಿತ್ರತಂಡ ಸ್ಪಷ್ಟನೆ ಕೂಡ ನೀಡಿಲ್ಲ. ಹಾಗಾಗಿ ರಿಲೀಸ್ ದಿನಾಂಕದ ಬಗ್ಗೆ ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ.
ಬೆಂಗಳೂರು, ಏಪ್ರಿಲ್ 1: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಸಕಲ ಸಿದ್ಧತೆ ನಡೆಸಿದೆ. ಮಾರ್ಚ್ 31ರಂದು ಪ್ರಥಮ ಪಿಯುಸಿ ಫಲಿತಾಂಶ ಯಶಸ್ವಿಯಾಗಿ ಪ್ರಕಟಗೊಂಡ ಬೆನ್ನಲ್ಲೇ, ಈಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕೌತುಕ ಹೆಚ್ಚಾಗಿದೆ. ಅಧಿಕೃತ ಮೂಲಗಳ ಪ್ರಕಾರ, ಏಪ್ರಿಲ್ ಎರಡನೇ ವಾರದಲ್ಲಿ (ಏಪ್ರಿಲ್ 7 ಅಥವಾ 8) ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಮಂಡಳಿಯು ಮೊದಲು ಸುದ್ದಿಗೋಷ್ಠಿಯ ಮೂಲಕ ಫಲಿತಾಂಶದ ವಿವರಗಳನ್ನು ಹಂಚಿಕೊಂಡು, ನಂತರ ಅಧಿಕೃತ ವೆಬ್‌ಸೈಟ್‌ಗಳಾದ kseab.karnataka.gov.in ಅಥವಾ karresults.nic.in ನಲ್ಲಿ ಫಲಿತಾಂಶ ಪ್ರಕಟಿಸಲಿದೆ.
ಆನ್ಲೈನ್ನಲ್ಲಿ ಸೆಕೆಂಡ್ ಪಿಯುಸಿ ಫಲಿತಾಂಶ ನೋಡುವುದು ಹೇಗೆ?
ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.
ಮುಖಪುಟದಲ್ಲಿರುವ ‘Karnataka 2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ.
ಭವಿಷ್ಯದ ಉಲ್ಲೇಖಕ್ಕಾಗಿ ಇದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಫಲಿತಾಂಶದ ನಂತರ ಅಂಕಗಳ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕೆ (Re-evaluation) ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಏಪ್ರಿಲ್ 25 ರಿಂದ ಮೇ ಮೊದಲ ವಾರದವರೆಗೆ ಪೂರಕ ಪರೀಕ್ಷೆಗಳನ್ನು ನಡೆಸಲು ಮಂಡಳಿ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
2026ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ ರಾಜ್ಯದ 1217 ಕೇಂದ್ರಗಳಲ್ಲಿ ನಡೆದಿದ್ದವು. ಈ ಬಾರಿ 7 ಲಕ್ಷಕ್ಕೂ ಹೆಚ್ಚು ಮಂದಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು.
ಮಾರ್ಚ್ 28 ರಿಂದ ಆರಂಭವಾದ ಐಪಿಎಲ್2026 ರಲ್ಲಿ (IPL 2026) ಇದುವರೆಗೆ ನಾಲ್ಕು ಪಂದ್ಯಗಳು ನಡೆದಿವೆ. ಅಂದರೆ 10 ತಂಡಗಳ ಪೈಕಿ 8 ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಇಂದು ನಡೆಯುವ ಲಕ್ನೋ ಸೂಪರ್ಜೈಂಟ್ಸ್ ಹಾಗೂ ಡೆಲ್ಲಿ ನಡುವಿನ ಪಂದ್ಯದ ಬಳಿಕ ಎಲ್ಲಾ ತಂಡಗಳು ಒಂದೊಂದು ಪಂದ್ಯವನ್ನು ಆಡಿದಂತಾಗುತ್ತದೆ. ಈಗ ಆಡಿರುವ 8 ತಂಡಗಳ ಪೈಕಿ, 4 ತಂಡಗಳು ಗೆಲುವಿನ ಖಾತೆ ತೆರೆದಿದ್ದರೆ, ಇನ್ನ 4 ತಂಡಗಳು ಸೋಲಿಗೆ ಶರಣಾಗಿವೆ. ಹೀಗಾಗಿ ಗೆದ್ದ 4 ತಂಡಗಳಿಗೆ 2 ಅಂಕಗಳು ಸಿಕ್ಕಿದ್ದರೆ, ಸೋತ ತಂಡಗಳು ಅಂಕಗಳ ಖಾತೆ ತೆರೆದಿಲ್ಲ. ಆದಾಗ್ಯೂ ಗೆದ್ದಿರುವ 4 ತಂಡಗಳ ಪೈಕಿ ಯಾವ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ? ಸೋತ ತಂಡಗಳ ಪೈಕಿ ಯಾವ ತಂಡ ಕೊನೆಯ ಸ್ಥಾನದಲ್ಲಿದೆ ಎಂಬುದನ್ನು ನೋಡುವುದಾದರೆ..
ಈಗ ಮುಗಿದಿರುವ 4 ಪಂದ್ಯಗಳ ಪೈಕಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಗೆಲುವಿನ ಖಾತೆ ತೆರೆದಿವೆ. ಹೀಗಾಗಿ ಈ 4 ತಂಡಗಳಿಗೆ ತಲಾ 2 ಅಂಕಗಳು ಸಿಕ್ಕಿವೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಮ್ಮ ಮೊದಲ ಪಂದ್ಯಗಳಲ್ಲಿ ಸೋತಿವೆ. ಹೀಗಾಗಿ ಈ 4 ತಂಡಗಳಿಗೆ ಯಾವುದೇ ಅಂಕ ಸಿಕ್ಕಿಲ್ಲ. ಇನ್ನು ಗೆದ್ದ ತಂಡಗಳ ಪೈಕಿ ಯಾವ ತಂಡ ಯಾವ ಸ್ಥಾನದಲ್ಲಿದೆ? ಯಾವ ತಂಡದ ನೆಟ್ ರನ್ ರೇಟ್ ಚೆನ್ನಾಗಿದೆ ಎಂಬುದನ್ನು ನೋಡುವುದಾದರೆ..
ಅಗ್ರಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್
ಗೆಲುವು ಸಾಧಿಸಿರುವ 4 ತಂಡಗಳ ಪೈಕಿ ರಾಜಸ್ಥಾನ್ ರಾಯಲ್ಸ್ ತಂಡವು ಅಗ್ರಸ್ಥಾನದಲ್ಲಿದೆ. ಇದಕ್ಕೆ ಕಾರಣ ತಂಡದ ನೆಟ್ ರನ್ ರೇಟ್ ಇತರ ತಂಡಗಳಿಗೆ ಹೊಲಿಸಿದರೆ ಅಧಿಕವಾಗಿರುವುದು. ಐಪಿಎಲ್‌ನಂತಹ 10 ತಂಡಗಳ ಲೀಗ್‌ನಲ್ಲಿ, ಕೇವಲ ಗೆಲುವು ಮುಖ್ಯವಲ್ಲ. ಬದಲಿಗೆ ನೀವು ಯಾವ ಅಂತರದಲ್ಲಿ ಗೆಲ್ಲುತ್ತೀರಿ ಎಂಬುದು ಸಹ ನಿರ್ಣಾಯಕವಾಗಿದೆ. ಗೆಲುವಿನ ಅಂತರವು ನೆಟ್ ರನ್ ರೇಟ್ ಅನ್ನು ನಿರ್ಧರಿಸುತ್ತದೆ, ಇದು ಪಾಯಿಂಟ್ ಪಟ್ಟಿಯಲ್ಲಿ ತಂಡದ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ.
ಐಪಿಎಲ್ 2026 ರಲ್ಲಿ ತಲಾ ಒಂದು ಪಂದ್ಯವನ್ನು ಆಡಿ ಗೆದ್ದ ನಂತರ, ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಲಾ ಎರಡು ಅಂಕಗಳನ್ನು ಹೊಂದಿವೆ. ಆದಾಗ್ಯೂ, ರಾಜಸ್ಥಾನ್ ರಾಯಲ್ಸ್ ಇತರ ತಂಡಗಳಿಗಿಂತ ಉತ್ತಮ ನೆಟ್ ರನ್ ರೇಟ್ ಹೊಂದಿರುವುದರಿಂದ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ ತಂಡದ ನೆಟ್ ರನ್ ರೇಟ್ 4.171 ಆಗಿದ್ದರೆ, ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ ನೆಟ್ ರನ್ ರೇಟ್ 2.907 ಆಗಿದೆ. ಇನ್ನ ಮೂರನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ನೆಟ್ ರನ್ ರೇಟ್ 0.687 ಮತ್ತು ಪಂಜಾಬ್ ಕಿಂಗ್ಸ್ ನೆಟ್ ರನ್ ರೇಟ್ 0.509 ಆಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದೇಶಸೇವೆಯ ಕನಸು ಕಾಣುತ್ತಿರುವ ಯುವಕರಿಗೆ ಭಾರತೀಯ ಟೆರಿಟೋರಿಯಲ್ ಆರ್ಮಿ (ಪ್ರಾದೇಶಿಕ ಸೇನೆ) 2026ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಒಟ್ಟು 3,806 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದು ಸೇನೆಗೆ ಸೇರಲು ಬಯಸುವವರಿಗೆ ಒಂದು ಸುವರ್ಣಾವಕಾಶವಾಗಿದೆ. ಈ ನೇಮಕಾತಿಯು ಪ್ರಮುಖವಾಗಿ ನೇರ ರ್ಯಾಲಿಗಳ ಮೂಲಕ ನಡೆಯಲಿದ್ದು, ಮಾರ್ಚ್ 2026 ರಿಂದಲೇ ವಿವಿಧ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಚಾಲನೆ ಪಡೆದಿದೆ.
ಈ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಆಫ್‌ಲೈನ್ ಅರ್ಜಿಗಳ ಮೂಲಕ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ನೇಮಕಾತಿ ರ್ಯಾಲಿಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಅಮೃತಸರ, ಜೈಪುರ, ದೆಹಲಿ ಮತ್ತು ಮೀರತ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ರ್ಯಾಲಿಗಳು ನಡೆಯಲಿದ್ದು, ಆಗಸ್ಟ್ 2026 ರವರೆಗೆ ಮುಂದುವರಿಯಲಿವೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಸೆಪ್ಟೆಂಬರ್ ವರೆಗೂ ರ್ಯಾಲಿಗಳು ವಿಸ್ತರಣೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ, ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳುವುದು ಒಳಿತು.
ಅರ್ಹತೆಯ ವಿಷಯಕ್ಕೆ ಬಂದರೆ, ಇಲ್ಲಿ ವಿವಿಧ ರೀತಿಯ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಅರ್ಜಿ ಸಲ್ಲಿಸುವವರು 10ನೇ ತರಗತಿಯಲ್ಲಿ ಕನಿಷ್ಠ ಶೇ.45 ಅಂಕಗಳನ್ನು ಹೊಂದಿರಬೇಕು. ಸೋಲ್ಜರ್ ಕ್ಲರ್ಕ್ ಹುದ್ದೆಗೆ 12ನೇ ತರಗತಿಯಲ್ಲಿ ಶೇ.60 ಅಂಕಗಳಿರಬೇಕು ಹಾಗೂ ಇಂಗ್ಲಿಷ್ ಮತ್ತು ಗಣಿತ ವಿಷಯಗಳಲ್ಲಿ ಉತ್ತಮ ಹಿಡಿತವಿರಬೇಕು. ಇನ್ನುಳಿದಂತೆ ಟ್ರೇಡ್ಸ್‌ಮನ್ ಹುದ್ದೆಗಳಿಗೆ 8ನೇ ಅಥವಾ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯು 18 ರಿಂದ 42 ವರ್ಷಗಳ ಒಳಗಿರಬೇಕು, ಇದು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತದೆ.
ಆಯ್ಕೆ ಪ್ರಕ್ರಿಯೆಯು ಅತ್ಯಂತ ಕಠಿಣವಾಗಿದ್ದು, ದೈಹಿಕ ಫಿಟ್ನೆಸ್ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳು ಕನಿಷ್ಠ 160 ಸೆಂ.ಮೀ ಎತ್ತರ ಮತ್ತು 50 ಕೆಜಿ ತೂಕವನ್ನು ಹೊಂದಿರಬೇಕು. ದೈಹಿಕ ಪರೀಕ್ಷೆಯಲ್ಲಿ ಒಂದು ಮೈಲಿ ಓಟ ಮತ್ತು ಪುಲ್-ಅಪ್‌ಗಳನ್ನು ಒಳಗೊಂಡಿದ್ದು, ಇದಕ್ಕೆ ಒಟ್ಟು 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಓಟವನ್ನು 5 ನಿಮಿಷ 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಯುವಕರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ದೈಹಿಕ ಪರೀಕ್ಷೆಯ ನಂತರ ಲಿಖಿತ ಮತ್ತು ವೈದ್ಯಕೀಯ ಪರೀಕ್ಷೆಗಳು ನಡೆಯಲಿದ್ದು, ಅಂತಿಮವಾಗಿ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಶ್ರೇಣಿಯನ್ನು ನೀಡಲಾಗುತ್ತದೆ. ಮಾಸಿಕ 15,500 ರಿಂದ 69,400ರೂ. ವರೆಗೆ ಸಂಬಳದ ಜೊತೆಗೆ ಡಿಎ, ಎಚ್‌ಆರ್‌ಎ ಮತ್ತು ಪಿಎಫ್ ಸೇರಿದಂತೆ ಸರ್ಕಾರದ ಎಲ್ಲಾ ಭತ್ಯೆಗಳು ಲಭ್ಯವಿರುತ್ತವೆ. ಅರ್ಜಿ ಸಲ್ಲಿಸಲು ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದವರಿಗೆ 100ರೂ. ಶುಲ್ಕವಿದ್ದು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ದೇಶದ ರಕ್ಷಣೆಗಾಗಿ ಹೋರಾಡಲು ಸಿದ್ಧರಿರುವವರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಹವಾ ಹೆಚ್ಚಾದ ಬಳಿಕ, ದಕ್ಷಿಣದವರ ಮೇಲೆ ಬಾಲಿವುಡ್‌ಗೆ ಪ್ರೀತಿ, ಗೌರವ ಉಕ್ಕಿ ಹರಿಯುತ್ತಿದೆ. ಎದುರೇ ಇಲ್ಲದಂತಿದ್ದ ಖಾನ್ ತ್ರಯರೂ ಸಹ ಸತತ ಸೋಲಿನ ಬಳಿಕ ಗೆಲುವಿಗಾಗಿ ದಕ್ಷಿಣದ ನಿರ್ದೇಶಕರು, ನಟರ ಜೊತೆಗೆ ಕೈಜೋಡಿಸುತ್ತಿದ್ದಾರೆ. ಸಲ್ಮಾನ್ ಖಾನ್ ಕಳೆದ ಕೆಲ ವರ್ಷಗಳಿಂದಲೂ ಸತತ ಸೋಲಿನಲ್ಲೇ ಇದ್ದಾರೆ. ಅವರ ಇತ್ತೀಚೆಗಿನ ಕೆಲ ಸಿನಿಮಾಗಳಂತೂ ಧಾರುಣ ಸೋಲು ಕಂಡಿವೆ. ಇದೀಗ ಮತ್ತೊಮ್ಮೆ ಅವರು ದಕ್ಷಿಣದ ನಿರ್ದೇಶಕನ ಕೈ ಹಿಡಿದಿದ್ದು, ಈ ಸಿನಿಮಾನಲ್ಲಿ ನಿರ್ದೇಶಕ ಮಾತ್ರವಲ್ಲದೆ, ನಿರ್ಮಾಪಕ, ನಾಯಕಿ, ಮುಖ್ಯ ಪೋಷಕ ನಟ, ವಿಲನ್ ಸಹ ದಕ್ಷಿಣದವರೇ ಆಗಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮುಂಬರುವ ಸಿನಿಮಾವನ್ನು ಟಾಲಿವುಡ್ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾನಲ್ಲಿ ನಾಯಕಿಯಾಗಿ ದಕ್ಷಿಣದ ಸ್ಟಾರ್ ನಟಿ ನಯನತಾರಾ ನಟಿಸಲಿದ್ದಾರೆ. ನಯನತಾರಾ ಪಾಲಿಗೆ ಇದು ಅವರ ಎರಡನೇ ಹಿಂದಿ ಸಿನಿಮಾ ಆಗಿರಲಿದೆ. ಈ ಹಿಂದೆ ಅವರು ಶಾರುಖ್ ಖಾನ್ ಜೊತೆಗೆ ‘ಜವಾನ್’ ಸಿನಿಮಾನಲ್ಲಿ ನಟಿಸಿದ್ದರು. ಈಗ ಸಲ್ಮಾನ್ ಖಾನ್ ಜೊತೆಗೆ ನಟಿಸುತ್ತಿದ್ದಾರೆ.
ಇದೀಗ ಈ ಸಿನಿಮಾಕ್ಕೆ ದಕ್ಷಿಣದ ಮತ್ತೊಬ್ಬ ಜನಪ್ರಿಯ ನಟ ಅರವಿಂದ ಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ. ‘ರೋಜಾ’, ‘ಬಾಂಬೆ’ ಸೇರಿದಂತೆ ತಮಿಳಿನ ಹಲವು ಕಲ್ಟ್ ಸಿನಿಮಾಗಳಲ್ಲಿ ನಟಿಸಿರುವ ಕ್ಲಾಸ್ ನಟ ಅರವಿಂದ ಸ್ವಾಮಿ, ಇತ್ತೀಚೆಗೆ ಸಹ ‘ಮೇಯಳಗನ್’, ‘ಚೆಕ್ಕ ಚಿವಂತ ವಾನಂ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಅರವಿಂದ ಸ್ವಾಮಿ ಅವರು ಸಲ್ಮಾನ್ ಖಾನ್ ಸಿನಿಮಾನಲ್ಲಿ ನಟಿಸಲಿದ್ದಾರೆ. ಇವರದ್ದು ವಿಲನ್ ಪಾತ್ರ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಆ ಬಗ್ಗೆ ಖಾತ್ರಿ ಇಲ್ಲ. ಇನ್ನು ಇದೇ ಸಿನಿಮಾಕ್ಕೆ ಅನಿಲ್ ಕಪೂರ್ ಸಹ ಎಂಟ್ರಿ ಕೊಟ್ಟಿದ್ದು, ಅನಿಲ್ ಅವರದ್ದು ಪ್ರಧಾನ ಪೋಷಕ ಪಾತ್ರವಂತೆ.
ತೆಲುಗಿನ ‘ಮಹರ್ಷಿ’ ತಮಿಳಿನ ‘ವಾರಿಸು’ ಅಂತಹ ಹಿಟ್ ಚಿತ್ರಗಳನ್ನು ನೀಡಿರುವ ವಂಶಿ ಪೈಡಿಪಲ್ಲಿ, ಸಾಮಾಜಿಕ ಸಂದೇಶವುಳ್ಳ ಕಮರ್ಶಿಯಲ್ ಸಿನಿಮಾ ನಿರ್ದೇಶನಕ್ಕೆ ಜನಪ್ರಿಯರು. ಇದೀಗ ಸಲ್ಮಾನ್ ಖಾನ್ ಸಿನಿಮಾ ಮೂಲಕ ಬಾಲಿವುಡ್‌ಗೆ ದೊಡ್ಡ ಮಟ್ಟದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದು ದಕ್ಷಿಣದ ಬಲು ಜನಪ್ರಿಯ ನಿರ್ಮಾಪಕ ದಿಲ್ ರಾಜು. ಹಲವಾರು ಬಹುಕೋಟಿ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ದಿಲ್ ರಾಜು ಅವರು ಇದೀಗ ಸಲ್ಮಾನ್ ಖಾನ್ ಸಿನಿಮಾದ ಮೇಲೆ ಬಂಡವಾಳ ಹೂಡಿದ್ದಾರೆ.