All posts by nagaraj11081993

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಶ್ರೇಯಸ್ ಅಯ್ಯರ್ ಅನುಮಾನ – Kannada News | Shreyas Iyer Injury Update: Fitness Concerns Delay Team India Return, Misses NZ Series

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಪ್ರಾರಂಭವಾಗುವ ಕೇವಲ ಎರಡು ದಿನಗಳ ಮೊದಲು, ಜನವರಿ 9 ರೊಳಗೆ ಶ್ರೇಯಸ್ ಫಿಟ್ನೆಸ್ ಕ್ಲಿಯರೆನ್ಸ್ ಪಡೆಯುವ ನಿರೀಕ್ಷೆಯಿದೆ. ಈಗ, ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡದಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅದ್ಭುತ ಶತಕ ಬಾರಿಸಿದ್ದ ರುತುರಾಜ್ ಗಾಯಕ್ವಾಡ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

Source link

ಪಿಎಸ್‌ಐ ಪ್ರಕರಣ: ನನ್ನ ಗಂಡ ರಾಡ್‌ನಿಂದ ಹೊಡೆದು, ದಿಂಬಿನಿಂದ ಉಸಿರುಗಟ್ಟಿಸಿ ಹಿಂಸೆ ನೀಡುತ್ತಿದ್ದ – Kannada News | Vijayapura PSI Controversy: Anuradha Speaks Out on Domestic Violence and Allegations

ವಿಜಯಪುರ, ಡಿ.30: ವಿಜಯಪುರ ಪಿಎಸ್‌ಐ ಪ್ರಕರಣಕ್ಕೆ ಸಂಬಂಧಿಸಿದಂತೆ, ತನ್ನ ಪತಿ ಭೀಮಶಂಕರ್ ಮತ್ತು ಅತ್ತೆ ಶಾರದಾಬಾಯಿ ಮಾಡಿದ ಆರೋಪಗಳನ್ನು ಅನುರಾಧಾ ಹೋಳಕರ್ ನಿರಾಕರಿಸಿದ್ದಾರೆ. ತಾನು ಪಿಎಸ್‌ಐ ಮನೋಹರ್ ಕಂಚಗಾರ ಅವರೊಂದಿಗೆ ಓಡಿ ಹೋಗಿಲ್ಲ ಎಂದು ಸ್ಪಷ್ಟಪಡಿಸಿರುವ ಅನುರಾಧಾ, ಅಂಚೆಪಾಳ್ಯದಲ್ಲಿ ತನ್ನ ಮಗಳೊಂದಿಗೆ ವಾಸವಾಗಿರುವುದಾಗಿ ತಿಳಿಸಿದ್ದಾರೆ. ತನ್ನ ಪತಿ ಭೀಮಶಂಕರ್ ಐದು ವರ್ಷಗಳ ಕಾಲ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಅನುರಾಧಾ ಆರೋಪಿಸಿದ್ದಾರೆ. ರಾಡ್‌ನಿಂದ ಹೊಡೆಯುವುದು, ದಿಂಬಿನಿಂದ ಉಸಿರುಗಟ್ಟಿಸಲು ಯತ್ನಿಸುವುದು ಮತ್ತು ಕುತ್ತಿಗೆಗೆ ಉರುಳು ಹಾಕಿದಂತಹ ಘಟನೆಗಳು ನಡೆದಿವೆ ಎಂದು ಹೇಳಿದ್ದಾರೆ. ಕುಟುಂಬದಲ್ಲಿ ಗಂಡುಮಕ್ಕಳ ಬೆಂಬಲವಿಲ್ಲದ ಕಾರಣ ಹಾಗೂ ತಾಯಿಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಈ ದೌರ್ಜನ್ಯವನ್ನು ಐದು ವರ್ಷಗಳ ಕಾಲ ಸಹಿಸಿಕೊಂಡಿದ್ದಾಗಿ ಅನುರಾಧಾ ತಿಳಿಸಿದ್ದಾರೆ. ಗಂಡನ ಮದ್ಯಪಾನ ಮತ್ತು ನಿರಂತರ ಕಿರುಕುಳದಿಂದಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾಯಿತು ಎಂದು ಅವರು ವಿವರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಭಾರತದ ಸಚಿವ ಜೈಶಂಕರ್ – Kannada News | Minister S Jaishankar to attend former Bangladesh PM Khaleda Zia funeral tomorrow

ನವದೆಹಲಿ, ಡಿಸೆಂಬರ್ 30: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಅಂತ್ಯಕ್ರಿಯೆ ಡಿಸೆಂಬರ್ 31ರಂದು ಬಾಂಗ್ಲಾದೇಶದ (Bangladesh) ಢಾಕಾದಲ್ಲಿ ನಡೆಯಲಿದೆ. ಬಾಂಗ್ಲಾದೇಶದ ವಿದೇಶಾಂಗ ಸಚಿವ ಎಸ್. ಜೈಶಂಕರ್ ನಾಳೆ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಖಲೀದಾ ಜಿಯಾ ದೀರ್ಘಕಾಲದ ಅನಾರೋಗ್ಯದ ನಂತರ ಇಂದು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.

ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷದ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಬುಧವಾರ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ. ಖಲೀದಾ ಜಿಯಾ ಅವರ ಅಂತ್ಯಕ್ರಿಯೆ ಬುಧವಾರ ನಡೆಯಲಿದ್ದು, ಅವರ ಪತಿ ಮತ್ತು ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಸಮಾಧಿಯ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ: Khaleda Zia Death: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಖಲೀದಾ ಜಿಯಾ ನಿಧನ

ಖಲೀದಾ ಜಿಯಾ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ದೀರ್ಘಕಾಲದ ನಾಯಕಿ ಮತ್ತು ಮೂರು ಬಾರಿ ಪ್ರಧಾನಿಯಾಗಿದ್ದರು. ಖಲೀದಾ ಜಿಯಾ ಅವರ ನಿಧನಕ್ಕೆ ಗೌರವ ಸಲ್ಲಿಸಲು ಬಾಂಗ್ಲಾದೇಶದಲ್ಲಿ 3 ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ. ಜೊತೆಗೆ ಅವರ ಅಂತ್ಯಕ್ರಿಯೆಯ ದಿನವಾದ ನಾಳೆ ದೇಶಾದ್ಯಂತ ರಜೆಯನ್ನು ಘೋಷಿಸಲಾಗಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಹತ್ಯೆ; 2 ವಾರಗಳಲ್ಲಿ ಮೂರನೇ ಘಟನೆ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದು, ನೆರೆಯ ದೇಶದ ಅಭಿವೃದ್ಧಿಗೆ ಹಾಗೂ ಭಾರತ-ಬಾಂಗ್ಲಾದೇಶ ಸಂಬಂಧಗಳಿಗೆ ಅವರು ನೀಡಿದ ಕೊಡುಗೆಗಳು ಸದಾ ಸ್ಮರಣೀಯ ಎಂದು ಹೇಳಿದ್ದಾರೆ. ಖಲೀದಾ ಜಿಯಾ ಅವರ ಕುಟುಂಬ ಮತ್ತು ಬಾಂಗ್ಲಾದೇಶದ ಎಲ್ಲಾ ಜನರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳು. ದೇವರು ಅವರ ಕುಟುಂಬಕ್ಕೆ ಈ ದುಃಖದ ಕ್ಷಣವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭುವನ್‌ ಪೊನ್ನಣ್ಣ ಜನ್ಮದಿನ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ – Kannada News | Bhuvann Ponannaa visits Kateel Durga Parameshwari temple on his Birthday

ನಟ ಭುವನ್ ಪೊನ್ನಣ್ಣ (Bhuvann Ponannaa) ಅವರಿಗೆ ಡಿಸೆಂಬರ್ 30ರಂದು ಹುಟ್ಟುಹಬ್ಬದ ಸಂಭ್ರಮ. ನಟನೆ, ನಿರ್ಮಾಣ, ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಪ್ರತಿ ವರ್ಷ ಅವರು ಹುಟ್ಟುಹಬ್ಬದ ದಿನ ದೇವಸ್ಥಾನಕ್ಕೆ ಹೋಗುವುದನ್ನು ಮರೆಯಲ್ಲ. ಮಾಡರ್ನ್ ಆಗಿ ಕಾಣಿಸಿಕೊಳ್ಳುವ ಅವರು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಪ್ರತಿ ವರ್ಷ ಅವರು ತಪ್ಪದೇ ಕಟೀಲು ದುರ್ಗಾಪರಮೇಶ್ವರಿ (Kateel Durga Parameshwari) ದೇವಸ್ಥಾನಕ್ಕೆ ಭೇಟಿ ನೀಡುವುದೇ ಈ ಮಾತಿಗೆ ಸಾಕ್ಷಿ. ಈ ವರ್ಷ ಕೂಡ ಅವರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಭುವನ್ ಅವರು ಈಗಾಗಲೇ ತಮ್ಮ ಮದುವೆ ಮತ್ತು ಮಗಳ ವಿಚಾರದಲ್ಲಿ ಸಂಸ್ಕೃತಿ ಸಂಪ್ರದಾಯವನ್ನ ಪಾಲಿಸಿ ಗಮನ ಸೆಳೆದಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿ ಕೂಡ ಅವರು ದೇವರನ್ನು ಮರೆಯಲ್ಲ. ಎಲ್ಲೇ ಇರಲಿ, ಹೇಗೆ ಇರಲಿ ಪ್ರತಿ ವರ್ಷ ಹುಟ್ಟುಹಬ್ಬದ ದಿನ ಮಿಸ್‌ ಮಾಡದೇ ಅವರು ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆಯುತ್ತಾರೆ. ದೇವಿಯಿಂದ ತಮ್ಮ ಬದುಕಿನಲ್ಲಿ ಆಗಿರುವ ಒಳ್ಳೆಯ ಬೆಳವಣಿಗೆಯೇ ಇದಕ್ಕೆ ಕಾರಣ ಎಂದು ಭುವನ್ ಹೇಳಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭುವನ್ ಅವರು ಭೇಟಿ ನೀಡುವುದಕ್ಕೆ ಶುರು ಮಾಡಿದ ಬಳಿಕ ಅವರ ಜೀವನದಲ್ಲಿ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ. ಸಿನಿಮಾ ಅವಕಾಶಗಳು ಬರುತ್ತಿವೆ. ಸ್ವತಃ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಇದೆಲ್ಲವೂ ಆಗಿದ್ದು ದೇವಿ ದರ್ಶನದ ನಂತರವೇ ಎಂದು ಭುವನ್ ಪೊನ್ನಣ್ಣ ಅವರು ನಂಬಿದ್ದಾರೆ.

ಮದುವೆ ಆದ ಬಳಿಕ ಕಟೀಲು ದುರ್ಗಾ ಪರಮೇಶ್ವರಿ ಬಳಿ ತಮಗೆ ಮಗಳ ಹುಟ್ಟಬೇಕು ಎಂದು ಭುವನ್ ಪೊನ್ನಣ್ಣ ಬೇಡಿಕೊಂಡಿದ್ದರಂತೆ. ಹಾಗಾಗಿ ಮಗಳನ್ನೂ ಕೂಡ ಮೊದಲು ಕರೆದುಕೂಂಡು ಹೋಗಿದ್ದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ! ಆದ್ದರಿಂದ ಭುವನ್‌ ಪೊನಣ್ಣ ಅವರು ಪ್ರತಿ ವರ್ಷ ತಮ್ಮ ಬರ್ತ್​​ಡೇ ದಿನ ಕುಟುಂಬ ಸಮೇತರಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ತಪ್ಪಿಸಲ್ಲ.

ಇದನ್ನೂ ಓದಿ: ನಿರ್ದೇಶಕ ಯೋಗರಾಜ್ ಭಟ್ ಜತೆ ಭುವನ್ ಪೊನ್ನಣ್ಣ ಹೊಸ ಸಿನಿಮಾ ‘ಹಲೋ 123’

ದೇವರ ಮೇಲೆ ಅಪಾರ ನಂಬಿಕೆ ಹೊಂದಿರುವ ಭುವನ್ ಪೊನ್ನಣ್ಣ ಅವರು ಈ ವರ್ಷ ಕೂಡ ಪತ್ನಿ ಹರ್ಷಿಕಾ ಪೂಣಚ್ಚ, ಮಗಳು ತ್ರಿದೇವಿ ಹಾಗೂ ಫ್ಯಾಮಿಲಿಯ ಇತರೆ ಸದಸ್ಯರ ಜೊತೆಗೆ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಸಿನಿಮಾ ಬಗ್ಗೆ ಹೇಳೋದಾದರೆ, ಭುವನ್‌ ಅವರು ಸದ್ಯ ಯೋಗರಾಜ್‌ ಭಟ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಟ್ರೋ ಹೊಸ ನಿಯಮಗಳು: ಪ್ರಯಾಣಿಕರೇ ಇನ್ಮುಂದೆ ರೀಲ್ಸ್ ನೋಡುವ ಮುನ್ನ ಎಚ್ಚರ – Kannada News | Namma Metro Penalties: 7,429 Cases for Loud Volume, Eating and Tobacco

ಬೆಂಗಳೂರು, ಡಿ.31: ಪ್ರಯಾಣಿಕರು ಇನ್ಮುಂದೆ ಮೆಟ್ರೋದಲ್ಲಿ (Bangalore Metro rules) ಈ ಕೆಲಸಗಳನ್ನು ಮಾಡುವಂತಿಲ್ಲ, ಒಂದು ವೇಳೆ ಮಾಡಿದ್ರೆ ಕೇಸ್​​ ದಾಖಲು ಮಾಡಲಾಗುತ್ತದೆ. ಮೆಟ್ರೋದಲ್ಲಿ ರೀಲ್ಸ್ ನೋಡುವುದು, ಫೋನ್​​ನಲ್ಲಿ ಜೋರಾಗಿ ಮಾತನಾಡುವುದು, ತಿಂಡಿ ಊಟ ಮಾಡಿದ್ರೆ ದಂಡದ ಜತೆಗೆ ಪ್ರಕರಣ ಕೂಡ ದಾಖಲು ಮಾಡಲಾಗುತ್ತದೆ. ಕಳೆದ 20 ದಿನದಲ್ಲಿ ಮೆಟ್ರೋ ಪ್ರಯಾಣಿಕರ ವಿರುದ್ಧ 7,429 ಕೇಸ್ ದಾಖಲಾಗಿದೆ. ಈ ಕ್ರಮವನ್ನು ತರಲು ಒಂದು ಕಾರಣವಿದೆ. ಹೌದು ಮೆಟ್ರೋದಲ್ಲಿ ಇತ್ತೀಚೆಗೆ ಜೋರಾಗಿ ಸೌಂಡ್​​ ಇರುವುದನ್ನು ತಡೆಯಲು ಹಾಗೂ ಇತರ ಸಹ ಪ್ರಯಾಣಿಕರಿಗೆ ತೊಂದರೆ ಆಗುವುದನ್ನು ತಡೆಯಲು ವಿಭಿನ್ನ ಕ್ರಮವನ್ನು ತರಲಾಗಿದೆ. ಒಂದು ವೇಳೆ ಈ ನಿಮಯವನ್ನು ಮೀರಿದ್ರೆ ದಂಡಾಸ್ತ್ರ ಪ್ರಯೋಗ ಮಾಡಲಾಗುವುದು.

ಮೆಟ್ರೋವನ್ನು ಲಕ್ಷಾಂತರ ಜನ ಓಡಾಡುತ್ತಾರೆ. ಒಂದು ಕಡೆಯಿಂದ ಇನ್ನೊಂದು ಕಡೆ ವೇಗವಾಗಿ ಹೋಗಲು ಮೆಟ್ರೋವನ್ನು ಬಳಸುತ್ತಾರೆ. ಈ ಹೊತ್ತಿನಲ್ಲಿ ಸುಮ್ಮನೆ ಕೂರುವ ಬದಲು ಟೈಮ್​​ ಪಾಸ್​​ ಮಾಡಲು ಬಹುತೇಕ ಜನ ಮೊಬೈಲ್ ಬಳಕೆ ಮಾಡುತ್ತಾರೆ. ಹೆರ್​​ ಪೋನ್​​​​ ಹಾಕಿಕೊಳ್ಳದೇ ರಿಲ್ಸ್​​​ ಯೂಟ್ಯೂಬ್​​​ ನೋಡುತ್ತಾರೆ. ಈ ಹಿಂದೆಯೇ ಮೆಟ್ರೋ ಈ ರೀತಿ ಮಾಡಬಾರದು ಎಂಬ ರೂಲ್​ಸ್​​​​ ಮಾಡಿತ್ತು. ಆದರೆ ಇದನ್ನು ಮೀರಿ ಅನೇಕರ ಈ ತಪ್ಪುಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ದಂಡಾಸ್ತ್ರ ಪ್ರಯೋಗ ಚಿಂತನೆ ಮಾಡಲಾಗಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಕೌಂಟ್​ಡೌನ್: ಖಾಕಿ ಅಲರ್ಟ್​​; ಎಣ್ಣೆ ಏಟಲ್ಲಿ ಎಲ್ಲಾದ್ರೂ ಮಲಗಿದ್ರೆ ಪೊಲೀಸರೇ ಮನೆಗೆ ಬಿಡ್ತಾರೆ!

ಮೊಬೈಲ್ ಅಲ್ಲಿ ಗಟ್ಟಿಯಾಗಿ ವಾಲ್ಯೂಮ್ ಜಾಸ್ತಿ ಕೊಡುವುದು, ಬ್ಲೂ ಟೂತ್ ಬಳಕೆ ಮಾಡಿ ಗಟ್ಟಿಯಾಗಿ ಮಾತನಾಡಿ ಇತರೆ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು , ಅಲ್ಲಲ್ಲಿ ಊಟ-ತಿಂಡಿ ಮಾಡುವುದು, ತಂಬಾಕು ಸೇವನೆ ಮಾಡುವ ದೂರುಗಳು ಬರುತ್ತಿದೆ. ಡಿಸೆಂಬರ್ 5 ರಿಂದ 25ರ ವರೆಗಿನ ಡಾಟಾ ಪ್ರಕಾರ 6 ಸಾವಿರದ 520 ಮಂದಿ ವಿರುದ್ಧ ಲೌಡ್ ಸೌಂಡ್ ಕೇಸ್ ದಾಖಲಾಗಿದೆ. ಮೆಟ್ರೋದಲ್ಲಿ ತಿಂಡಿ ತಿಂದವರ ವಿರುದ್ಧ 268 ಕೇಸ್ ದಾಖಲಾಗಿದ್ದು, ತಂಬಾಕು ಸೇವನೆಯ ಅಡಿ 641 ದೂರು ರಿಜಿಸ್ಟರ್ ಆಗಿದೆ. 20 ದಿನದಲ್ಲಿ ಒಟ್ಟು 7,429 ಕೇಸ್ ಗಳು ದಾಖಲು ಮಾಡಲಾಗಿದೆ ಎಂದು ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಮೆಟ್ರೋ ಪ್ರಯಾಣಿಕರು ಅಧಿಕಾರಿಗಳ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಹತ್ಯೆ; 2 ವಾರಗಳಲ್ಲಿ ಮೂರನೇ ಘಟನೆ – Kannada News | Bangladesh Violence again Hindu man Bajendra Biswas killed by coworker amid unrest

ಢಾಕಾ, ಡಿಸೆಂಬರ್ 30: ಬಾಂಗ್ಲಾದೇಶದ (Bangladesh) ಮೈಮೆನ್ಸಿಂಗ್‌ನ ಭಾಲುಕಾ ಉಪ ಜಿಲ್ಲೆಯಲ್ಲಿ 40 ವರ್ಷದ ಹಿಂದೂ ವ್ಯಕ್ತಿ ಬಜೇಂದ್ರ ಬಿಸ್ವಾಸ್ ಅವರನ್ನು ಸಹೋದ್ಯೋಗಿಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ನೋಮನ್ ಮಿಯಾ ಎಂಬಾತನನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಕೊಲೆಯಾದಾತ ಮತ್ತು ಆರೋಪಿ ಇಬ್ಬರೂ ಬಾಂಗ್ಲಾದೇಶದ ಗೃಹ ಸಚಿವಾಲಯದ ಅಧೀನದಲ್ಲಿರುವ ಅರೆಸೈನಿಕ ಪಡೆಯಾದ ಅನ್ಸಾರ್‌ನ ಸದಸ್ಯರಾಗಿದ್ದರು. ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ಇಬ್ಬರು ಹಿಂದೂ ಯುವಕರ ಮೇಲೆ ಗುಂಪು ಹಲ್ಲೆ ನಡೆದ ನಂತರ ಈ ಘಟನೆ ನಡೆದಿದೆ.

ವರದಿಯ ಪ್ರಕಾರ, ಸೋಮವಾರ ಸಂಜೆ 6.30ರ ಸುಮಾರಿಗೆ ಮೆಹ್ರಾಬರಿ ಪ್ರದೇಶದ ಸುಲ್ತಾನ ಸ್ವೆಟರ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಅನ್ಸಾರ್ ಸದಸ್ಯ ಮೃತ ಬಿಸ್ವಾಸ್ ಸಿಲ್ಹೆಟ್ ಸದರ್ ಉಪ ಜಿಲ್ಲೆಯ ಕದಿರ್ಪುರ್ ಗ್ರಾಮದ ಪ್ರೊಬಿತ್ರ ಬಿಸ್ವಾಸ್ ಅವರ ಮಗ. ಆರೋಪಿ ನೋಮನ್ ಮಿಯಾ ಸುನಮ್‌ಗಂಜ್ ಜಿಲ್ಲೆಯ ಬಲುತುರಿ ಬಜಾರ್ ಪ್ರದೇಶದ ಲುಟ್ಫರ್ ರೆಹಮಾನ್ ಅವರ ಮಗ. ಈ ಘಟನೆಯ ಸಮಯದಲ್ಲಿ ನೋಮನ್ ಮಿಯಾ ಮತ್ತು ಬಿಸ್ವಾಸ್ ಒಟ್ಟಿಗೆ ಕುಳಿತಿದ್ದರು. ಈ ವೇಳೆ ನೋಮನ್ ತನ್ನ ಬಳಿಯಿದ್ದ ಶಾಟ್‌ಗನ್‌ನಿಂದ ಗುಂಡು ಹಾರಿಸಿದ್ದಾನೆ. ಇದರಿಂದ ಬಿಸ್ವಾಸ್ ಎಡ ತೊಡೆಗೆ ಗಂಭೀರವಾಗಿ ಗಾಯವಾಯಿತು.

ಇದನ್ನೂ ಓದಿ: ಕಠಿಣ ಶಿಕ್ಷೆಯಾಗಲಿ; ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ಅಲ್ಪಸಂಖ್ಯಾತರ ಹಿಂಸಾಚಾರಕ್ಕೆ ಭಾರತ ಖಂಡನೆ

ತಕ್ಷಣ ಬಿಸ್ವಾಸ್ ಅವರ ಸಹೋದ್ಯೋಗಿಗಳು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಬಿಸ್ವಾಸ್ ಸತ್ತಿದ್ದಾರೆಂದು ಘೋಷಿಸಿದರು. ಗುಂಡು ಹಾರಿಸಿದ ಆರೋಪಿ ನೋಮನ್ ಮಿಯಾ (22)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಸಮಯದಲ್ಲಿ ಸುಮಾರು 20 ಅನ್ಸಾರ್ ಸಿಬ್ಬಂದಿ ಕಾರ್ಖಾನೆಯಲ್ಲಿ ಕರ್ತವ್ಯದಲ್ಲಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಕಳೆದ 10 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಹತ್ಯೆಯಾದ ಮೂರನೇ ಘಟನೆ ಇದಾಗಿದೆ. ಇದಕ್ಕೂ ಮೊದಲು ಬಾಂಗ್ಲಾದೇಶದಲ್ಲಿ ದೀಪು ಚಂದ್ರ ದಾಸ್ ಅವರನ್ನು ಹೊಡೆದು ಕೊಲ್ಲಲಾಯಿತು. ಈ ಘಟನೆ ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು.

ಇದನ್ನೂ ಓದಿ: Khaleda Zia Death: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಖಲೀದಾ ಜಿಯಾ ನಿಧನ

ದೀಪು ಚಂದ್ರ ದಾಸ್ ನಂತರ, 3 ದಿನಗಳ ಹಿಂದೆ ಢಾಕಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯಾದ ಅಮೃತ್ ಮಂಡಲ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರ ಮೇಲೆ ಸುಲಿಗೆ ಆರೋಪ ಹೊರಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ ಮತ್ತು ಅವರ ಮನೆಗಳನ್ನು ಸುಡಲಾಗುತ್ತಿದೆ. ಇದಕ್ಕೆ ಭಾರತವೂ ಆಕ್ಷೇಪ ವ್ಯಕ್ತಪಡಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹೊಸ ವರ್ಷಕ್ಕೆ ಕೌಂಟ್​ಡೌನ್: ಖಾಕಿ ಅಲರ್ಟ್​​; ಎಣ್ಣೆ ಏಟಲ್ಲಿ ಎಲ್ಲಾದ್ರೂ ಮಲಗಿದ್ರೆ ಪೊಲೀಸರೇ ಮನೆಗೆ ಬಿಡ್ತಾರೆ! – Kannada News | New Year 2026 Countdown Begins: Police Security Measures, DCM Warning, and Celebration Guidelines Issued

ಬೆಂಗಳೂರು, ಡಿಸೆಂಬರ್​​ 30: 2025ಕ್ಕೆ ಗುಡ್ ಬೈ ಹೇಳಿ, ಹೊಸ ವರ್ಷ 2026ರನ್ನು (New Year 2026) ಸ್ವಾಗತಿಸೋದಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿವೆ. ನ್ಯೂ ಇಯರ್ ಸಂಭ್ರಮಾಚರಣೆಗೆ ಬೆಂಗಳೂರು (bangaluru) ಸೇರಿ ರಾಜ್ಯಾದ್ಯಂತ ಜನರು ಸಜ್ಜಾಗಿದ್ದಾರೆ. ಪೊಲೀಸ್ ಇಲಾಖೆ ಕೂಡ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮವಹಿಸಿದೆ. ಎಣ್ಣೆ ಏಟಿನಲ್ಲಿ ಎಲ್ಲಾದರೂ ಮಲಗಿದರೆ ಪೊಲೀಸರೇ ಮನೆಗೆ ಬಿಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಎಲ್ಲೆಡೆ ಪೊಲೀಸ್​ ಹದ್ದಿನ ಕಣ್ಣು

ಹೊಸ ವರ್ಷಾಚರಣೆಗೆ ಕೌಂಟ್​ಡೌನ್ ಶುರುವಾಗಿದೆ. ನಾಳೆ ಸಂಜೆಯಿಂದಲೇ ವಿಶ್ವಾದ್ಯಂತ ಸಂಭ್ರಮದ ವಾತಾವರಣ ಮನೆ ಮಾಡಲಿದೆ. ಬೆಂಗಳೂರಿಗರೂ ನ್ಯೂ ಇಯರ್ ಸ್ವಾಗತಿಸೋದಕ್ಕೆ ಕಾತರರಾಗಿದ್ದಾರೆ. ಅತೀ ಹೆಚ್ಚು ಜನರು ಸೇರುವ ಎಂ.ಜಿ.ರೋಡ್, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ ಸೇರಿ ಹಲವೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್‌ ಭದ್ರತಾ ಸಿದ್ಧತೆ: ಸಿಸಿಟಿವಿ​​ ಕಣ್ಗಾವಲು

ಬ್ರಿಗೇಡ್ ರಸ್ತೆಯೊಂದರಲ್ಲೇ 360ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಿದ್ದು, ಬೆಂಗಳೂರು ನಗರದಾದ್ಯಂತ 6ಸಾವಿರ ಹೆಚ್ಚುವರಿ ಕ್ಯಾಮರಾ ಅಳವಡಿಸಲಾಗಿದೆ. ಹಲವೆಡೆ ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಹಾಕಿದ್ದಾರೆ. ಪೊಲೀಸ್ ಹಿರಿಯ ಅಧಿಕಾರಿಗಳು ಭದ್ರತೆ ಬಗ್ಗೆ ಪರಿಶೀಲಿಸಿದ್ದಾರೆ.

ಎಲ್ಲಾದ್ರೂ ಮಲಗಿದ್ರೆ ಮನೆಗೆ ಬಿಡ್ತಾರೆ: ಡಿ.ಕೆ.ಶಿವಕುಮಾರ್

ಇನ್ನು ಗೃಹಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿ, ಇಡೀ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಅಂದರು. ಡಿಸಿಎಂ ಡಿಕೆ ಶಿವಕುಮಾರ್​ ಮಾತನಾಡಿ, ನೀವೇನಾದರೂ ಎಲ್ಲಾದರೂ ಮಲಗಿದರೆ ಪೊಲೀಸರೇ ಮನೆಗೆ ತಲುಪಿಸುತ್ತಾರೆ ಎಂದಿದ್ದಾರೆ.

ಹೋಟೆಲ್​ಗಳೂ ಹೊಸ ವರ್ಷಾಚರಣೆಗೆ ಸಜ್ಜಾಗಿವೆ. ಡಿಸೆಂಬರ್ 31 ಮತ್ತು ಜನವರಿ 1ರಂದು ಬೆಂಗಳೂರಿನ ರೆಸ್ಟೋರೆಂಟ್​ಗಳಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ನಿರೀಕ್ಷೆಯಿದೆ. ಆದರೆ ಎಂಜಿ ರಸ್ತೆ, ರೆಸಿಡೆನ್ಸಿ ರಸ್ತೆ ಸುತ್ತಮುತ್ತಲು ಮಾತ್ರ ವ್ಯಾಪಾರ ವಹಿವಾಟು ಡಲ್ ಹೊಡೆಯುವ ಭೀತಿಯಿದೆ. ಯಾಕಂದರೆ, ವಾಹನಗಳ ಓಡಾಟ ಹಾಗೂ ಪಾರ್ಕಿಂಗ್ ಬಂದ್ ಮಾಡೋದ್ರಿಂದ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಲಿದ್ದು, ರೆಸ್ಟೋರೆಂಟ್​ಗಳಿಗೆ ಸಂಕಷ್ಟ ಎದುರಾಗಲಿದೆ.

ಇದನ್ನೂ ಓದಿ: ಹೊಸ ವರ್ಷ ಸಂಭ್ರಮಾಚರಣೆಗೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತಾ ಕ್ರಮ? ಇಲ್ಲಿದೆ ನೋಡಿ

ನ್ಯೂ ಇಯರ್​ಗೆ ಭರ್ಜರಿ ಆನ್​ಲೈನ್ ಬ್ಯುಸಿನೆಸ್ ಆಗಲಿದೆ. ಆದರೆ ಶೀಘ್ರ ಫುಡ್ ಡೆಲಿವರಿ ಒತ್ತಡಕ್ಕೆ ಸಿಲುಕಿ ಡೆಲಿವರಿ ಬಾಯ್ಸ್ ಹೆಣಗಾಡುವಂತಾಗಿದೆ. ಬೆಂಗಳೂರಿನ ಕೋರಮಂಗಲದ ಪಬ್, ಬಾರ್​ಗಳು ಎಷ್ಟು ಸೇಫ್ ಅನ್ನೋದ್ರ ಬಗ್ಗೆ ಟಿವಿ9 ರಿಯಾಲಿಟಿ ಚೆಕ್ ನಡೆಸಿದೆ.

ಬೆಂಗಳೂರಿನಲ್ಲಷ್ಟೇ ಅಲ್ಲ, ರಾಜ್ಯದ ಮೂಲೆ ಮೂಲೆಯಲ್ಲೂ ಹೊಸ ವರ್ಷಾಚರಣೆ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಡ್ರಗ್ಸ್ ಪಾರ್ಟಿ ಆಯೋಜನೆಗೆ ಸಿದ್ಧತೆ ಮಾಡಿಕೊಂಡ ಶಂಕೆ ಹಿನ್ನೆಲೆ, ಐವರು ಲಾಕ್ ಆಗಿದ್ದಾರೆ. ಇನ್ನು, ಚಿಕ್ಕಬಳ್ಳಾಪುರದ ಸ್ಕಂದಗಿರಿ, ಕೈವಾರ ಬೆಟ್ಟಗಳ ಚಾರಣಕ್ಕೂ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ನಿರ್ಬಂಧ ಹೇರಿದೆ.

ವರದಿ: ಬ್ಯೂರೋ ರಿಪೋರ್ಟ್, ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

21 ದಿನಗಳ ಅವಧಿಗೆ ವಿಶೇಷ ಅಧಿಕಾರ ವಹಿಸಿಕೊಂಡ ಲಸಿತ್ ಮಾಲಿಂಗ – Kannada News | Lasith Malinga Appointed SriLanka Fast Bowling Consultant for 2026 T20 World Cup Prep

2026 ರ ಟಿ 20 ವಿಶ್ವಕಪ್ ಫೆಬ್ರವರಿ 7 ರಂದು ಪ್ರಾರಂಭವಾಗಲಿದೆ. ಈ ಪಂದ್ಯಾವಳಿಯನ್ನು ಭಾರತ ಮತ್ತು ಶ್ರೀಲಂಕಾ ಆಯೋಜಿಸಲಿದ್ದು, ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿವೆ. ಏತನ್ಮಧ್ಯೆ, ಶ್ರೀಲಂಕಾದ ಮಾಜಿ ಕ್ರಿಕೆಟಿಗ ಲಸಿತ್ ಮಾಲಿಂಗ ಅವರಿಗೆ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಆದಾಗ್ಯೂ, ಅವರ ಈ ಅಧಿಕಾರಾವಧಿ ಕೇವಲ 21 ದಿನಗಳವರೆಗೆ ಮಾತ್ರ ಇರಲಿದೆ.

Source link

8ನೇ ವೇತನ ಆಯೋಗ; ಜನವರಿ 1ರಿಂದ ಯಾರಿಗೆಲ್ಲ ಸಂಬಳ ಹೆಚ್ಚಾಗಲಿದೆ? – Kannada News | 8th Pay Commission Who will get the maximum salary hike after 2026 January 1

ನವದೆಹಲಿ, ಡಿಸೆಂಬರ್ 30: ಇನ್ನೇನು ಹೊಸ ವರ್ಷದ (New Year 2026) ಆರಂಭಕ್ಕೆ ಒಂದೇ ದಿನ ಉಳಿದಿದೆ. 2026ರ ಆರಂಭದೊಂದಿಗೆ 8ನೇ ವೇತನ ಆಯೋಗವು (8th Pay Commission) ಜನವರಿ 1ರಿಂದ ಜಾರಿಗೆ ಬರಲಿದೆ ಎನ್ನಲಾಗಿದೆ. ಹೀಗಾಗಿ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ಸಿಪಿಸಿ, 7ನೇ ವೇತನ ಆಯೋಗದ ಸಿಂಧುತ್ವವು ಡಿಸೆಂಬರ್ 31ರಂದು ಮುಕ್ತಾಯಗೊಳ್ಳುತ್ತದೆ. ಜನವರಿ 1ರಿಂದ 8ನೇ ವೇತನ ಆಯೋಗದ ಇನ್ನೂ ಘೋಷಿಸದ ನಿಬಂಧನೆಗಳು ಜಾರಿಗೆ ಬರುತ್ತವೆ.

ಈ ವರ್ಷದ ಜನವರಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 8ನೇ ವೇತನ ಆಯೋಗವನ್ನು ಘೋಷಿಸಿತು. ಅದಾದ ತಿಂಗಳುಗಳ ನಂತರ ಸಿಪಿಸಿಯ ಸದಸ್ಯರನ್ನು ಘೋಷಿಸಲಾಯಿತು. ಈಗ ನಡೆಯುತ್ತಿರುವ 8ನೇ ವೇತನ ಆಯೋಗದ ಬಗ್ಗೆ ದೊಡ್ಡ ಚರ್ಚೆಗಳು ವೇತನ ಹೆಚ್ಚಳ ಮತ್ತು ಫಿಟ್‌ಮೆಂಟ್ ಅಂಶಕ್ಕೆ ಸಂಬಂಧಿಸಿವೆ. ಫಿಟ್​​ಮೆಂಟ್ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪಾವತಿಯನ್ನು ನಿರ್ಧರಿಸಲಾಗುತ್ತದೆ. 7ನೇ ವೇತನ ಆಯೋಗದ ಅಡಿಯಲ್ಲಿ ಫಿಟ್‌ಮೆಂಟ್ ಅಂಶವು 2.57 ಆಗಿದೆ.

8ನೇ ವೇತನ ಆಯೋಗದ ವೇತನ ಹೆಚ್ಚಳವನ್ನು ಯಾವಾಗ ಘೋಷಿಸಲಾಗುತ್ತದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಆದರೆ, ಮೂಲಗಳ ಪ್ರಕಾರ ಹೊಸ ವರ್ಷದಿಂದಲೇ ಇದು ಜಾರಿಗೆ ಬರುವ ಸಾಧ್ಯತೆಯಿದೆ. 8ನೇ ವೇತನ ಆಯೋಗದ ವೇತನ ಹೆಚ್ಚಳವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಸಿಪಿಸಿಯ ಸದಸ್ಯರು ಫಿಟ್‌ಮೆಂಟ್ ಅಂಶವನ್ನು ಸೂಚಿಸುತ್ತಾರೆ. ಇದು ಸಿಪಿಸಿ ಹೊಸ ಮೂಲ ವೇತನವನ್ನು ಲೆಕ್ಕಾಚಾರ ಮಾಡಲು ಬಳಸುವ ಗುಣಕವಾಗಿದೆ. ಫಿಟ್‌ಮೆಂಟ್ ಅಂಶವನ್ನು ನಿರ್ಧರಿಸಲು 8ನೇ ವೇತನ ಆಯೋಗವು ಹಣದುಬ್ಬರ ಸೇರಿದಂತೆ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: SBI PO Salary: 8ನೇ ವೇತನ ಆಯೋಗದ ಪ್ರಕಾರ ಎಷ್ಟಾಗಲಿದೆ SBI ನ ಪಿಓಗಳ ಸಂಬಳ?

8ನೇ ವೇತನ ಆಯೋಗ ಜಾರಿಗೆ ಬಂದ ನಂತರ ಎಲ್ಲಾ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರ ಮೂಲ ವೇತನವು ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಅವರ ವೇತನ ಮಟ್ಟವನ್ನು ಅವಲಂಬಿಸಿ ಇದು ಉದ್ಯೋಗಿಯಿಂದ ಉದ್ಯೋಗಿಗೆ ಭಿನ್ನವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅದರಂತೆ, ಕ್ಯಾಬಿನೆಟ್ ಕಾರ್ಯದರ್ಶಿಯಂತಹ ಉನ್ನತ ಅಧಿಕಾರಿಗಳನ್ನು ಒಳಗೊಂಡ 18ನೇ ಹಂತದ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಜಾರಿಯಿಂದ ಅತಿ ಹೆಚ್ಚು ವೇತನ ಹೆಚ್ಚಳವಾಗಲಿದೆ.

ಎಕ್ಸ್​ನಲ್ಲಿ 8ನೇ ವೇತನ ಆಯೋಗದ ಜಾರಿಯಿಂದ ಆಗುವ ಸಂಬಳದ ಹೆಚ್ಚಳದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಇದು ಜಾರಿಯಾದ ಬಳಿಕ ಪೊಲೀಸ್​ ಕಾನ್​ಸ್ಟೆಬಲ್​ಗೂ ಸಾಫ್ಟ್​ವೇರ್ ಇಂಜಿನಿಯರ್​​ ಸಮವಾಗಿ ಸಂಬಳ ಸಿಗಲಿದೆ ಎನ್ನಲಾಗಿದೆ.

8ನೇ ವೇತನ ಆಯೋಗದ ಅಧಿಕೃತ ಘೋಷಣೆಯ ನಂತರವೇ ನೌಕರರಿಗೆ ವೇತನ ದೊರೆಯುತ್ತದೆಯಾದರೂ, ಜನವರಿಯಿಂದ ಬಾಕಿ ಸಂಗ್ರಹವಾಗಲು ಪ್ರಾರಂಭವಾಗುತ್ತದೆ. 8ನೇ ವೇತನ ಆಯೋಗದ ನಿಬಂಧನೆಗಳನ್ನು ಘೋಷಿಸಿದ ನಂತರ ಅವುಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ; 8ನೇ ವೇತನ ಆಯೋಗ ಜಾರಿಯಾದರೆ ಶೇ. 34ರಷ್ಟು ಸಂಬಳ ಹೆಚ್ಚಳ?

ಸಿಪಿಸಿ ಸದಸ್ಯರು ಸೂಚಿಸುವ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ 8ನೇ ವೇತನ ಆಯೋಗದ ವೇತನ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ. ಈ ಫಿಟ್‌ಮೆಂಟ್ ಅಂಶವನ್ನು 2.15ನಲ್ಲಿ ಇರಿಸಿದರೆ ಅವರ ಮೂಲ ವೇತನ ಎಷ್ಟು ಹೆಚ್ಚಾಗುತ್ತದೆ ಎಂಬುದರ ಲೆಕ್ಕಾಚಾರ ಇಲ್ಲಿದೆ.

ಹಂತ 1 – ಪ್ರಸ್ತುತ ಸಂಬಳ: 18,000 ರೂ.; ಹೆಚ್ಚಿದ ಸಂಬಳ: 38,700 ರೂ.

ಹಂತ 5 – ಪ್ರಸ್ತುತ ಸಂಬಳ: 29,200 ರೂ.; ಹೆಚ್ಚಿದ ಸಂಬಳ: 62,780 ರೂ.

ಹಂತ 10 – ಪ್ರಸ್ತುತ ಸಂಬಳ: 56,100 ರೂ.; ಹೆಚ್ಚಿದ ಸಂಬಳ: 1,20,615 ರೂ.

ಹಂತ 15 – ಪ್ರಸ್ತುತ ಸಂಬಳ: 1,82,200 ರೂ.; ಹೆಚ್ಚಿದ ಸಂಬಳ: 3,91,730 ರೂ.

ಹಂತ 18 – ಪ್ರಸ್ತುತ ಸಂಬಳ: 2,50,000 ರೂ.; ಹೆಚ್ಚಿದ ಸಂಬಳ: 5,37,500 ರೂ.

ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತರ ವೇತನ ರಚನೆ, ಪಿಂಚಣಿಗಳು ಮತ್ತು ಭತ್ಯೆಗಳನ್ನು ಪರಿಶೀಲಿಸುತ್ತದೆ ಮತ್ತು ಪರಿಷ್ಕರಿಸುತ್ತದೆ. 8ನೇ ವೇತನ ಆಯೋಗದ ಜಾರಿಯಿಂದ ಕ್ಯಾಬಿನೆಟ್ ಕಾರ್ಯದರ್ಶಿಯಂತಹ ಉನ್ನತ ಅಧಿಕಾರಿಗಳನ್ನು ಒಳಗೊಂಡಂತೆ ಹಂತ 18ರ ಸರ್ಕಾರಿ ನೌಕರರು ಅತಿಯಾದ ವೇತನದ ಹೆಚ್ಚಳವನ್ನು ಪಡೆಯಲಿದ್ದಾರೆ. ಹಾಗಂತ ಇದು ಅಧಿಕೃತ ಘೋಷಣೆಯಲ್ಲ. ಇದೊಂದು ಅಂದಾಜಿನ ಲೆಕ್ಕಾಚಾರವಷ್ಟೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಂದಿ ಚಿತ್ರರಂಗಕ್ಕೆ ಹೊಸ ಡಾನ್ ಆಗ್ತಾರಾ ಹೃತಿಕ್ ರೋಷನ್? – Kannada News | Farhan Akhtar reportedly in talks with Hrithik Roshan for Don 3 after Ranveer Singh exit

ಈ ಮೊದಲು ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಅವರು ಡಾನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಆ ಬಳಿಕ ಡಾನ್ ಆಗುವ ಅವಕಾಶ ರಣವೀರ್ ಸಿಂಗ್ (Ranveer Singh) ಅವರಿಗೆ ಸಿಕ್ಕಿತ್ತು. ಆದರೆ ಅವರು ಡಾನ್ ಆಗಲು ಮನಸ್ಸು ಮಾಡುತ್ತಿಲ್ಲ. ಹಾಗಾಗಿ ಹೃತಿಕ್ ರೋಷನ್ (Hrithik Roshan) ಅವರು ಮುಂದಿನ ಡಾನ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ಹೃತಿಕ್ ರೋಷನ್ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಆದರೆ ‘ಡಾನ್ 3’ (Don 3) ಚಿತ್ರತಂಡದಿಂದಲೇ ಅಧಿಕೃತ ಮಾಹಿತಿ ಹೊರಬೀಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

‘ಡಾನ್ 3’ ಸಿನಿಮಾಗೆ ಫರ್ಹಾನ್ ಅಖ್ತರ್ ಅವರು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ರಣವೀರ್ ಸಿಂಗ್ ಹೀರೋ ಎಂದು ಘೋಷಿಸಲಾಗಿತ್ತು. ಆದರೆ ‘ಧುರಂಧರ್’ ಸಿನಿಮಾದ ಸೂಪರ್ ಸಕ್ಸಸ್ ನಂತರ ರಣವೀರ್ ಸಿಂಗ್ ಅವರು ‘ಡಾನ್ 3’ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದರು. ‘ಧುರಂಧರ್’ ರೀತಿಯ ಸಿನಿಮಾ ಮಾಡಿದ ಬಳಿಕ ಮತ್ತೆ ಡಾನ್ ಪಾತ್ರ ಮಾಡುವುದು ಅವರಿಗೆ ಸರಿ ಎನಿಸಲಿಲ್ಲ.

ಹಾಗಾದರೆ ಡಾನ್ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂದು ನಿರ್ದೇಶಕ ಫರ್ಹಾನ್ ಅಖ್ತರ್ ಅವರು ತಲೆ ಕೆಡಿಸಿಕೊಂಡಿದ್ದಾರೆ. ಹೃತಿಕ್ ರೋಷನ್ ಜೊತೆ ಫರ್ಹಾನ್ ಅಖ್ತರ್ ಅವರು ಬಹುಕಾಲದ ಸ್ನೇಹ ಹೊಂದಿದ್ದಾರೆ. ಈ ಮೊದಲು ಕೂಡ ಅವರಿಬ್ಬರು ಜೊತೆಯಾಗಿ ಸಿನಿಮಾ ಮಾಡಿದ್ದಾರೆ. ಆ ಕಾರಣದಿಂದಲೇ ಹೃತಿಕ್ ರೋಷನ್ ಅವರು ಡಾನ್ ಪಾತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ.

ಸದ್ಯಕ್ಕೆ ‘ಡಾನ್ 3’ ಸಿನಿಮಾ ಕುರಿತು ಮಾತುಕಥೆ ಆರಂಭಿಕ ಹಂತದಲ್ಲಿ ಇದೆ. ಅಂತಿಮವಾಗಿ ಹೃತಿಕ್ ರೋಷನ್ ಅವರು ಒಪ್ಪಿಕೊಳ್ಳುತ್ತಾರಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ. ‘ಡಾನ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ಡಾನ್ ಪಾತ್ರ ಮಾಡಲು ಅವರೇ ಸೂಕ್ತ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ‘ಧುರಂದರ್’ ಸಿನಿಮಾದ ‘ರಾಜಕೀಯ’ದ ಬಗ್ಗೆ ಹೃತಿಕ್ ರೋಷನ್ ಅಸಮಾಧಾನ

2023ರ ಆಗಸ್ಟ್ ತಿಂಗಳಲ್ಲಿ ‘ಡಾನ್ 3’ ಸಿನಿಮಾಗೆ ರಣವೀರ್ ಸಿಂಗ್ ಹೀರೋ ಎಂದು ಘೋಷಿಸಲಾಗಿತ್ತು. ಆಗ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಅವರು ಮಾಡಿದ್ದ ಡಾನ್ ಪಾತ್ರವನ್ನು ಈಗ ರಣವೀರ್ ಸಿಂಗ್ ಸರಿಯಾಗಿ ನಿಭಾಯಿಸುತ್ತಾರಾ ಎಂಬ ಅನುಮಾನ ಎದುರಾಗಿತ್ತು. ಕಡೆಗೂ ಅವರು ಡಾನ್ ಪಾತ್ರವನ್ನು ಬಿಟ್ಟುಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link