ಜೆಟ್ ಇಂಧನ: ವಿದೇಶೀ ಏರ್ಲೈನ್ಸ್ಗೆ ಡಬಲ್ ಬೆಲೆ ಏರಿಕೆ; ದೇಶೀಯ ಫ್ಲೈಟ್ಗಳಿಗೆ ಶೇ. 8.5 ಏರಿಕೆ
ನವದೆಹಲಿ, ಏಪ್ರಿಲ್ 1: ತೈಲ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ವಿಮಾನಕ್ಕೆ ಬಳಸುವ ಎಟಿಎಫ್ ಅಥವಾ ಜೆಟ್ ಇಂಧನದ ಬೆಲೆ ಏಪ್ರಿಲ್ 1ರಂದು ದುಪ್ಪಟ್ಟಾಗುವ ನಿರೀಕ್ಷೆ ಇತ್ತು. ಇಂದು ಎಟಿಎಫ್ ಬೆಲೆ (ATF price) ಎರಡು ಪಟ್ಟು ಏರಿಕೆ ಮಾಡಲಾಗಿತ್ತು. ದೆಹಲಿಯಲ್ಲಿ ಕಿಲೋಲೀಟರ್ಗೆ ಒಂದು ಲಕ್ಷ ರೂಗಿಂತ ಕಡಿಮೆ ಇದ್ದ ಎಟಿಎಫ್ ಇಂಧನದ ಬೆಲೆಯನ್ನು 2.07 ಲಕ್ಷ ರೂಗೆ ಏರಿಸಲಾಯಿತು. ಬಳಿಕ ಸರ್ಕಾರ ಆ ಬೆಲೆ ಕೂಡಲೇ ಪರಿಷ್ಕರಿಸಿ 1.04 ಲಕ್ಷ ರೂಗೆ ಇಳಿಸಿತು. ಇದರೊಂದಿಗೆ ಜೆಟ್ ಫುಯಲ್ನ…