All posts by nagaraj11081993

ಜಿಗಣೆಯಿಂದ ಕಚ್ಚಿಸಿಕೊಳ್ಳುವುದರಿಂದ ಕ್ಯಾನ್ಸರ್ ಅನ್ನು ಗುಣಪಡಿಸಬಹುದೇ? ಇಲ್ಲಿದೆ ತಜ್ಞರ ಅಭಿಪ್ರಾಯ – Kannada News | Exploring Leech Therapy’s Role in Cancer Care

ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಕಾಯಿಲೆಗಳಿಂದ ಜನ ಬಳಲುತ್ತಿದ್ದಾರೆ. ಇದಕ್ಕೆ ಈಗಿನವರ ಜೀವನಶೈಲಿಯೇ ಕಾರಣವಾಗಿರಬಹುದು. ಕೆಲವು ರೋಗಗಳನ್ನು ಮನೆಮದ್ದಿನಿಂದ ಇನ್ನು ಕೆಲವನ್ನು ವೈದ್ಯರ ಸಲಹೆ ಮತ್ತು ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಆದರೆ ಕೆಲವು ರೋಗಗಳ ಇಲಾಜಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲಿಯೂ ಅವುಗಳನ್ನು ಬುಡದಿಂದ ಕಿತ್ತು ಹಾಕುವುದರ ಜೊತೆಗೆ ದೇಹದ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗದಂತೆ ನೋಡಿಕೊಳ್ಳುವುದು ಸಹ ಮುಖ್ಯವಾಗುತ್ತದೆ. ಈ ರೀತಿ ರೋಗಗಳನ್ನು ವಾಸಿ ಮಾಡಲು ಪರಿಣಾಮಕಾರಿ ಉಪಚಾರಗಳಲ್ಲಿ ಜಿಗಣೆ ಚಿಕಿತ್ಸೆಯೂ (Leech Therapy’s) ಒಂದು. ಇದು ಅನೇಕ ರೋಗಗಳಿಂದ ಮುಕ್ತಿ ಪಡೆಯಲು ಸಹಕಾರಿಯಾಗಿದೆ. ಆದರೆ ಇದನ್ನು ಯಾವ ಕಾಯಿಲೆಗಳ ಇಲಾಜಿಗೆ ಬಳಕೆ ಮಾಡಲಾಗುತ್ತದೆ, ಕ್ಯಾನ್ಸರ್ ತಡೆಯಲು ಜಿಗಣೆ ಚಿಕಿತ್ಸೆಯನ್ನು ಬಳಸಬಹುದೇ ಎಂಬ ಅನುಮಾನಗಳಿರುತ್ತದೆ ಅಂತವರು ಈ ಸ್ಟೋರಿ ಮೂಲಕ ಮಾಹಿತಿ ಪಡೆಯಬಹುದು.

ಜಿಗಣೆ ಚಿಕಿತ್ಸೆ ಹೇಗೆ ನಡೆಯುತ್ತದೆ?

ಈ ಜಿಗಣೆ ಥೆರಪಿಯಲ್ಲಿ ಜೀವಂತ ಹುಳವನ್ನು ಬಳಸಲಾಗುತ್ತದೆ. ಚಿಕಿತ್ಸೆಯ ಸಮಯದಲ್ಲಿ, ಇದು ದೇಹಕ್ಕೆ ಅಂಟಿಕೊಳ್ಳುತ್ತದೆ. ಬಳಿಕ ಅವು ರಕ್ತದಿಂದ ಕಲ್ಮಶಗಳನ್ನು ಹೀರಿಕೊಳ್ಳುತ್ತವೆ. ದೇಹದ ಮೇಲೆ 15- 20 ನಿಮಿಷಗಳ ಕಾಲ ಇರಿಸಿ ತೆಗೆಯಲಾಗುತ್ತದೆ. ನರಹುಲಿ, ಮೊಡವೆ ಸೇರಿದಂತೆ ನಾನಾ ರೀತಿಯ ಸಮಸ್ಯೆಗೆ ಇದು ಪರಿಣಾಮಕಾರಿಯಾಗಿದೆ.

ಜಿಗಣೆ ಚಿಕಿತ್ಸೆ ಯಾವ ಕಾಯಿಲೆಗಳಿಗೆ ಪ್ರಯೋಜನಕಾರಿ?

  • ಕೀಲು ನೋವು, ಸಂಧಿವಾತ
  • ಚರ್ಮ ರೋಗಗಳು
  • ರಕ್ತ ಪರಿಚಲನೆ ಸಮಸ್ಯೆ
  • ಮೈಗ್ರೇನ್‌ಗೆ ಸಹಾಯ ಮಾಡುತ್ತದೆ
  • ತಲೆನೋವಿಗೆ ಉಪಯುಕ್ತ
  • ಉರಿಯೂತದಿಂದ ಪರಿಹಾರ ಪಡೆಯಲು ಪ್ರಯೋಜನಕಾರಿ

ಇದನ್ನೂ ಓದಿ: ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ನಿಂಬೆ ನೀರು ಕುಡಿಯುವುದು ಒಳ್ಳೆಯದೇ… ಇಲ್ಲಿದೆ ತಜ್ಞರ ಅಭಿಪ್ರಾಯ

ಜಿಗಣೆ ಚಿಕಿತ್ಸೆಯು ಕ್ಯಾನ್ಸರ್ ಗುಣಪಡಿಸಬಹುದೇ?

ಜಿಗಣೆ ಥೆರಪಿಯಿಂದ ಕ್ಯಾನ್ಸರ್‌ ಗುಣಪಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಉಬ್ಬುವುದು, ನೋವು, ಗಡ್ಡೆಗಳು ಮತ್ತು ಊತದಂತಹ ರೋಗಲಕ್ಷಣಗಳಿಂದ ಪರಿಹಾರ ಪಡೆಯಲು ಇದರ ಬಳಕೆ ಪರಿಣಾಮಕಾರಿಯಾಗಿದೆ. ಅದರಲ್ಲಿಯೂ ಇಲ್ಲಿಯವರೆಗೆ, ಜಿಗಣೆ ಚಿಕಿತ್ಸೆಯು ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸುತ್ತದೆ ಎಂದು ತೋರಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಬೇಕಾದಲ್ಲಿ ನೀವು ಇದನ್ನು ಪ್ರಯತ್ನಿಸಬಹುದು.

ಜಿಗಣೆ ಥೆರಪಿ ಯಾರಿಗೆ ಒಳ್ಳೆಯದಲ್ಲ ?

ರಕ್ತಹೀನತೆ, ರಕ್ತಸ್ರಾವದ ಅಸ್ವಸ್ಥತೆಗಳು ಅಥವಾ ದುರ್ಬಲಗೊಂಡ ರೋಗನಿರೋಧಕ ಶಕ್ತಿ ಇರುವವರಿಗೆ ಇದು ಹಾನಿಕಾರಕವಾಗಬಹುದು. ಜಿಗಣೆ ಚಿಕಿತ್ಸೆಯನ್ನು ನಿರ್ಧರಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಡಿಸೆಂಬರ್ 26ಕ್ಕೆ ಪವರ್ ಕಟ್ – Kannada News | Bangalore Power Cut on December 26: Electricity Outage in These Areas Due to BESCOM Maintenance

ಬೆಂಗಳೂರು, ಡಿಸೆಂಬರ್ 25: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯಲ್ಲಿ ಡಿಸೆಂಬರ್ 26, 2025ರಂದು ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. 66/11 ಕೆವಿ ಕಗ್ಗೇನಹಳ್ಳಿ ಸಬ್‌ಸ್ಟೇಷನ್ ಕೇಬಲ್ ನಿರ್ವಹಣಾ ಕಾರ್ಯ ಹಿನ್ನೆಲೆಯಲ್ಲಿ ಈ ವಿದ್ಯುತ್ ವ್ಯತ್ಯಯ ಸಂಭವಿಸಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಜತೆಗೆ, ಎಕ್ಸ್​ ಸಂದೇಶದ ಮೂಲಕವೂ ಮಾಹಿತಿ ನೀಡಿದೆ.

ಎಷ್ಟು ಗಂಟೆಯಿಂದ ಎಷ್ಟು ಗಂಟೆ ವರೆಗೆ ಪವರ್ ಕಟ್?

ಬೆಸ್ಕಾಂ ಪ್ರಕಟಣೆಯಲ್ಲಿ ನೀಡಿದ ಮಾಹಿತಿ ಪ್ರಕಾರ, ಡಿಸೆಂಬರ್ 26ರಂದು ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಕಗ್ಗೇನಹಳ್ಳಿ ಸಬ್‌ಸ್ಟೇಷನ್‌ನ 9-7 ಫೀಡರ್ ವ್ಯಾಪ್ತಿಯಲ್ಲಿ ಕೇಬಲ್ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿರುವುದರಿಂದ ಈ ಅವಧಿಯಲ್ಲಿ ವಿದ್ಯುತ್ ಪೂರೈಕೆ ಇರದು.

ಯಾವೆಲ್ಲ ಏರಿಯಾಗಳಲ್ಲಿ ಪವರ್ ಕಟ್?

ವಿದ್ಯುತ್ ವ್ಯತ್ಯಯಕ್ಕೆ ಒಳಪಡುವ ಪ್ರದೇಶಗಳಲ್ಲಿ ನಾರ್ಥ್ ಗೇಟ್ 1, 2, 3, ಎಂಬಾಸಿ, ಫೀಲಿಪ್ಸ್ ಕಂಪನಿ, ದ್ವಾರಕನಗರ, ಬಾಬಾನಗರ, ಕಗ್ಗೇನಹಳ್ಳಿ ಸುತ್ತಮುತ್ತಲ ಪ್ರದೇಶಗಳು, ಬಾಗಲೂರು ಕ್ರಾಸ್, ಮಟ್ಟು ಬಾಗಲೂರು ಮುಖ್ಯ ರಸ್ತೆ, ಮಣಿಪಾಲ ಕಾಲೇಜು, BSF, PDMS, ಬಾಗಲೂರು ಕ್ರಾಸ್ ವಿನಾಯಕನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು ಸೇರಿವೆ.

ಇದನ್ನೂ ಓದಿ: Viral: ಪವರ್ ಕಟ್ ನೆಪ ಹೇಳಿ ಕಚೇರಿ ಕೆಲಸದಿಂದ ತಪ್ಪಿಸಿಕೊಂಡ ಉದ್ಯೋಗಿಯನ್ನು ತರಾಟೆಗೆ ತೆಗೆದುಕೊಂಡ ಮ್ಯಾನೇಜರ್

ನಿರ್ವಹಣಾ ಕಾರ್ಯ ಪೂರ್ಣಗೊಂಡ ನಂತರ ವಿದ್ಯುತ್ ಸರಬರಾಜು ಪುನಃ ಆರಂಭಿಸಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ. ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಿ ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಡೆವಿಲ್’ ಬಳಿಕ ರೇಟಿಂಗ್ ಕೊಡದಂತೆ ಕೋರ್ಟ್​​ನಿಂದ ಆರ್ಡರ್ ತಂದ ‘45’, ‘ಮಾರ್ಕ್​​’ – Kannada News | Kannada Films Block BookMyShow Ratings: Mark and 45 Use Court Order to Combat Hate Reviews

ಬುಕ್ ಮೈ ಶೋ ಮೊದಲಾದ ರೇಟಿಂಗ್ ನೋಡಿ ಜನರು ಸಿನಿಮಾ ವೀಕ್ಷಿಸಲು ತೆರಳೋದು ಸಾಮಾನ್ಯ. ಆದರೆ, ಈಗ ಅದಕ್ಕೆ ಬ್ರೇಕ್ ಬೀಳುತ್ತಿದೆ. ಬುಕ್ ಮೈ ಶೋನಲ್ಲಿ ಬರೋ ರೇಟಿಂಗ್ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ದ್ವೇಷದ ಕಾರಣಕ್ಕೆ ಅನೇಕರು ಸುಳ್ಳು ರೇಟಿಂಗ್ ಕೊಟ್ಟ ಉದಾಹರಣೆ ಇದೆ. ಇದೇ ಕಾರಣದಿಂದ ಸಿನಿಮಾ ತಂಡದವರು ಈ ವಿಷಯದಲ್ಲಿ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಈಗ ‘45’ (45 Movie) ಹಾಗೂ ‘ಮಾರ್ಕ್’ ಟೀಂ ಇದೇ ತಂತ್ರ ಉಪಯೋಗಿಸಿದೆ.

ಡಿಸೆಂಬರ್ 11ರಂದು ತೆರೆಗೆ ಬಂದ ‘ಡೆವಿಲ್’ ತಂಡದವರು ನೆಗೆಟಿವ್ ವಿಮರ್ಶೆ ಸಿಗೋ ಭಯದಲ್ಲಿ ಕೋರ್ಟ್​​ನಿಂದ ಆರ್ಡರ್ ತಂದಿದ್ದರು. ಇದನ್ನು ಬುಕ್ ಮೈ ಶೋ ಆ್ಯಪ್​ಗೆ ಸಲ್ಲಿಕೆ ಮಾಡಿದ್ದರು. ಇದರ ಅನುಸಾರ ಬುಕ್ ಮೈ ಶೋನವರು ರೇಟಿಂಗ್ ನೀಡುವ ಆಯ್ಕೆಯನ್ನು ನಿಷ್ಕ್ರಿಯ ಗೊಳಿಸಿದ್ದರು. ಈಗ ‘ಮಾರ್ಕ್’ ಹಾಗೂ ‘45’ ಸಿನಿಮಾ ಕೂಡ ಇದೇ ತಂತ್ರ ಉಪಯೋಗಿಸಿದೆ.

‘ಮಾರ್ಕ್’ ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಪರಭಾಷಾ ಕಲಾವಿದರೂ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು, ‘45’ ಸಿನಿಮಾದಲ್ಲಿ ಉಪೇಂದ್ರ, ಶಿವರಾಜ್​ಕುಮಾರ್, ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ. ಈ ಎರಡೂ ಸಿನಿಮಾಗಳು ದೊಡ್ಡ ಬಜೆಟ್​​ನಲ್ಲಿ ರೆಡಿ ಆಗಿವೆ. ಹೀಗಾಗಿ ಎರಡೂ ಚಿತ್ರಕ್ಕೆ ಗಳಿಕೆ ತುಂಬಾನೇ ಮುಖ್ಯವಾಗಿದೆ.

45- ಮಾರ್ಕ್ ಸಿನಿಮಾಗೆ ಬರಲ್ಲ ರೇಟಿಂಗ್ ಆಪ್ಶನ್

ದ್ವೇಷದ ಕಾರಣಕ್ಕೆ ಸಿನಿಮಾಗೆ ನೆಗೆಟಿವ್ ವಿಮರ್ಶೆ ಹಬ್ಬಿಸೋ ಭಯ ತಂಡವನ್ನು ಕಾಡಿದೆ. ಈ ಕಾರಣದಿಂದ ತಂಡದವರು ಕೋರ್ಟ್​​ನಿಂದ ಆರ್ಡರ್ ತಂದಿದೆ. ಮುಂದಿನ ದಿನಗಳಲ್ಲಿ ದೊಡ್ಡ ಬಜೆಟ್​​ ಸಿನಿಮಾಗಳು ಇದೇ ಟ್ರೆಂಡ್ ಫಾಲೋ ಮಾಡೋ ಸಾಧ್ಯತೆ ಇದೆ.

ಇದನ್ನೂ ಓದಿ: ‘45’ ಸಿನಿಮಾ ಹೇಗಿದೆ? ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್

‘ಮಾರ್ಕ್’ ಹಾಗೂ ‘45’ ಎರಡೂ ಕನ್ನಡದ ಸಿನಿಮಾಗಳು. ಈ ಚಿತ್ರಗಳು ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಸಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಎರಡೂ ಸಿನಿಮಾಗೆ ಉತ್ತಮ ಟಾಕ್ ಪಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:45 pm, Thu, 25 December 25

Source link

Viral: ಕೋವಿಡ್ ತಂದ ಸಂಕಷ್ಟ; ರ‍್ಯಾಪಿಡೋ ಚಾಲಕನಾಗಿ ಬದುಕು ಕಟ್ಟಿಕೊಂಡ ಉದ್ಯಮಿ – Kannada News | Losses in the industry due to Covid; Businessman takes up Rapido driving career

ಜೀವನ ಎಂದ ಮೇಲೆ ಏರಿಳಿತಗಳು ಸಹಜ. ಬದುಕು ಕೆಲವೊಮ್ಮೆ ಒಂದರ ಮೇಲೆ ಒಂದರಂತೆ ಹೊಡೆತಗಳನ್ನು ತಂದೊಡ್ದುತ್ತದೆ. ಎಲ್ಲವನ್ನು ಎದುರಿಸಿ ನಿಲ್ಲಬೇಕು ಅಷ್ಟೇ. ಹೌದು, ಹೋಟೆಲ್ ಮ್ಯಾನೇಜ್ ಮೆಂಟ್ ಪದವಿ ಮಾಡಿ, ಸ್ಟಾರ್ಟ್‌ಅಪ್ (startup) ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದ ಉದ್ಯಮಿಗೆ ಕೋವಿಡ್ ಹೊಡೆತ ತಂದೊಟ್ಟಿತು. ಇದಾದ ಬಳಿಕ ಬದುಕಿಗಾಗಿ ಅವಲಂಬಿಸಿದ್ದು ರ‍್ಯಾಪಿಡೋ ಚಾಲಕ ವೃತ್ತಿ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದ ಚಿರಾಗ್ (Chiraag) ಎಂಬ ವ್ಯಕ್ತಿಗೆ ಈ ಚಾಲಕನ ಬದುಕಿನ ಕಥೆ ಕೇಳಿ ಶಾಕ್‌ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಉದ್ಯಮಿಯಾಗಿದ್ದ ವ್ಯಕ್ತಿ ರ‍್ಯಾಪಿಡೋ ಚಾಲಕನಾಗಿ ಬದುಕು ಕಟ್ಟಿಕೊಂಡದ್ದನ್ನು ಕೇಳಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಿರಾಗ್ (Chiraaag) ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಚಿರಾಗ್ ಚಾಲಕನನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದು ಈ ವೇಳೆ ಚಾಲಕನಾಗಿರುವ ವ್ಯಕ್ತಿಯ ಬದುಕಿನ ಅಸಲಿ ಕಥೆ ಹೊರಬಿದ್ದಿದೆ. ಈ ವ್ಯಕ್ತಿಯೂ ಅಮಿಟಿ ವಿಶ್ವವಿದ್ಯಾಲಯದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಅಧ್ಯಯನ ಮಾಡಿದ್ದು, ಇವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಂತೆ. ನಿವೃತ್ತಿಯ ಬಳಿಕ ಕುಟುಂಬವು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಜೀವನವು ಉತ್ತಮ ರೀತಿಯಲ್ಲಿ ಸಾಗುತ್ತಿತ್ತು. ಹೀಗಿರುವಾಗ ಮಹಾಮಾರಿ ಕೋವಿಡ್ 19 ಈ ವ್ಯಕ್ತಿಯ ಬದುಕನ್ನೇ ಅಲ್ಲೋಲ್ಲ ಕಲ್ಲೋಲವಾಗಿಸಿತ್ತಂತೆ. ಹೀಗಾಗಿ ಕೆಲಸಗಾರರ ಸಂಬಳ, ಬ್ಯಾಂಕ್ ಸಾಲ ಸೇರಿ ಸರಿ ಸುಮಾರು 13-14 ಕೋಟಿ ರೂಪಾಯಿ ನಷ್ಟವಾಯಿತು ಎಂದು ಹೇಳಿಕೊಂಡಿದ್ದಾನೆ.

ವೈರಲ್ ಪೋಸ್ಟ್ ಇಲ್ಲಿದೆ

ಹೀಗಾಗಿ ಮತ್ತೆ ಉದ್ಯಮದಲ್ಲಿ ಚೇತರಿಸಿಕೊಳ್ಳುವುದು ಅಸಾಧ್ಯವಾಯಿತು. ಕೈಯಲ್ಲಿದ್ದ ಐದು ಲಕ್ಷ ರೂಪಾಯಿಯಲ್ಲಿ ನಾಲ್ಕು ಲಕ್ಷ  ರೂ ಗೆಳೆಯನೊಂದಿಗೆ ಹೂಡಿಕೆ ಮಾಡಿ ಮತ್ತೊಮ್ಮೆ ಸ್ಟಾರ್ಟ್‌ಅಪ್ ಆರಂಭಿಸಿದ್ದು, ಆದರೆ ಮತ್ತೆ ನಷ್ಟವಾಯಿತು. ಕೈಯಲ್ಲಿ ಹಣವಿಲ್ಲದೇ ತನ್ನ ಬಳಿ ಒಂದೇ ಒಂದು ಬೈಕ್ ಎಂದು ತನ್ನ ರ‍್ಯಾಪಿಡೋ ಚಾಲಕ ತನ್ನ ಬದುಕಿನ ಬಗ್ಗೆ ಹೇಳಿಕೊಂಡಿದ್ದಾನೆ.

ಈ ಬೈಕ್ ಇಟ್ಟುಕೊಂಡು ರ‍್ಯಾಪಿಡೋ ಚಾಲಕನಾಗಿ ಈ ವೃತ್ತಿಯನ್ನು ಆರಂಭಿಸಿದೆ. ನಾನು ಯಾವುದನ್ನು ಬಿಟ್ಟುಕೊಡುತ್ತಿಲ್ಲ. ನಾನು ಇನ್ನೂ ದೇವರನ್ನು ನಂಬುತ್ತೇನೆ. ಕೊನೆಯ ಬಾರಿಗೆ ಪ್ರಯತ್ನಿಸುತ್ತೇನೆ. ನಾನು ಬಿಟ್ಟುಕೊಡುವ ಮೊದಲು ಇನ್ನೊಂದು ಹೊಡೆತ ಎಂದು ಹೇಳುತ್ತಿದ್ದಂತೆ ಈ ಪ್ರಯಾಣಿಕನ ಕಣ್ಣು ಒದ್ದೆಯಾಗಿದೆ. ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಸುಮ್ಮನೆ ಕುಳಿತೆ, ಆದರೆ ಅವರ ಮಾತು ನನ್ನ ಹೃದಯ ಮುಟ್ಟಿತು. ಜೀವನ ಕೆಲವೊಮ್ಮೆ ಅನ್ಯಾಯ ಮಾಡುತ್ತದೆ ಎಂದು ರ‍್ಯಾಪಿಡೋ ಚಾಲಕನ ಬದುಕಿನ ಕಥೆಯ ಕೇಳಿ ಪ್ರಯಾಣಿಕನು ಬೇಸರ ವ್ಯಕ್ತಪಡಿಸಿದ್ದಾನೆ.

ಇದನ್ನೂ ಓದಿ:ಜೀವನಕ್ಕಾಗಿ ಆಟೋನೇ ಆಧಾರ; ಇದು ದೈಹಿಕ ನ್ಯೂನತೆ ಮೆಟ್ಟಿನಿಂತ ವ್ಯಕ್ತಿಯ ಕಥೆ

ಈ ಪೋಸ್ಟ್ ಇದುವರೆಗೆ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ವ್ಯಕ್ತಿಯ ಕಥೆ ನನಗೂ ತುಂಬಾ ನೋವುಂಟು ಮಾಡಿತು.. ಬದುಕು ನಿಜಕ್ಕೂ ಅನಿಶ್ಚಿತ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬದುಕಿನಲ್ಲಿ ಒಳ್ಳೆಯದಾಗುತ್ತೆ, ತಾಳ್ಮೆ ಇರಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಕೋವಿಡ್ ಅನೇಕ ಕುಟುಂಬಗಳನ್ನು ಆರ್ಥಿಕವಾಗಿ ನಾಶ ಮಾಡಿತು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಾಮರಾಜನಗರದಲ್ಲಿ ಬೋನಿಗೆ ಬಿದ್ದ ಹುಲಿ: ಹುಲಿರಾಯನ ನೋಡಲು ಮುಗಿಬಿದ್ದ ಜನ – Kannada News | Bandipur Tiger Menace Ends: Chamarajanagar Captures Feral Big Cat in Cage

ಚಾಮರಾಜನಗರ, ಡಿ.25: ದಿನ ದಿಂದ ದಿನಕ್ಕೆ ಗಡಿ ನಾಡು ಚಾಮರಾಜನಗರದಲ್ಲಿ ಹುಲಿಯ ಉಪಟಳ ಹೆಚ್ಚಾಗಿದೆ. ಇದೀಗ ಮತ್ತೊಂದು ಹುಲಿ ದೇಪಾಪುರ ಗ್ರಾಮದ ಹೊರ ವಲಯದ ಬೋನಿಗೆ ಬಿದ್ದಿದೆ. ಇನ್ನು ಹುಲಿಯನ್ನು ನೋಡಲು ಕಿಕ್ಕಿರಿದು ಗ್ರಾಮಸ್ಥರು ಸೇರಿದ್ದಾರೆ. ಇನ್ನು ಜನರನ್ನು ನೋಡಿ ಬೋನಿನಲ್ಲಿದ್ದ ಹುಲಿ ಕೂಡ ಘರ್ಜನೆ ಮಾಡಿದೆ. ಈ ಹುಲಿ ಘರ್ಜನೆ ಹಾಗೂ ಹಾರಾಟವನ್ನು ನೋಡಿ ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಕಳೆದ ಎರೆಡು ಮೂರು ತಿಂಗಳಿಂದ ಆಗಾಗ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಹುಲಿ, ಇದೀಗ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಇದೀಗ ಸ್ಥಳಕ್ಕೆ ಧಾವಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Yearly Horoscope 2026 : 2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ – Kannada News | Scorpio 2026 Yearly Horoscope: Dr Basavaraj Gurujis Astrological Predictions

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ವೃಶ್ಚಿಕ ರಾಶಿಯವರಿಗೆ 2026ರ ವಾರ್ಷಿಕ ಫಲಾಫಲಗಳನ್ನು ವಿವರಿಸಿದ್ದಾರೆ. ಈ ವರ್ಷ ಗುರು ಗ್ರಹವು ಎಂಟನೇ ಮನೆಯಿಂದ ಒಂಬತ್ತನೇ ಮನೆಗೆ ಸಂಚಾರ ಮಾಡುವುದರಿಂದ ಅದೃಷ್ಟ ಮತ್ತು ದೈವಬಲ ಹೆಚ್ಚಾಗಲಿದೆ. ಶನಿ ಗ್ರಹವು ವರ್ಷವಿಡೀ ಪಂಚಮದಲ್ಲೇ ಇರಲಿದ್ದು, ರಾಹು ಚತುರ್ಥದಿಂದ ತೃತೀಯಕ್ಕೆ ಮತ್ತು ಕೇತು ದಶಮದಿಂದ ನವಮಕ್ಕೆ ಸಂಚಾರ ಮಾಡಲಿದೆ.

ಆರ್ಥಿಕವಾಗಿ ಈ ವರ್ಷ ಪ್ರಗತಿ ಕಾಣುವ ಸಾಧ್ಯತೆ ಇದೆ. ಆದಾಯವು ಹೆಚ್ಚಾಗಿ, ಕೆಲಸ ಕಾರ್ಯಗಳಲ್ಲಿ ಶುಭ ಫಲಗಳು ದೊರೆಯುತ್ತವೆ. ಮೊದಲಾರ್ಧದಲ್ಲಿ ತೀವ್ರ ಪ್ರಯತ್ನಗಳು ಬೇಕಾದರೂ, ದ್ವಿತೀಯಾರ್ಧದಲ್ಲಿ ಗುರುಬಲದ ಅನುಗ್ರಹದಿಂದ ಹೆಚ್ಚಿನ ಯಶಸ್ಸು ಸಿಗಲಿದೆ. ಮಕ್ಕಳ ಚಿಂತೆ, ಅವರ ಶಿಕ್ಷಣ ಮತ್ತು ವಿವಾಹದ ವಿಚಾರದಲ್ಲಿ ಒಂದಷ್ಟು ಸವಾಲುಗಳು ಎದುರಾಗಬಹುದು. ತಾಯಿಯ ಆರೋಗ್ಯ ಮತ್ತು ಮನೆ ಕಟ್ಟುವ ವಿಚಾರದಲ್ಲಿ ವಿಳಂಬಗಳು ಕಂಡುಬಂದರೂ ಕಾರ್ಯ ಪೂರ್ಣಗೊಳ್ಳಲಿದೆ. ಆಂತರಿಕ ಅಸಂತೃಪ್ತಿ ಮತ್ತು ಆಪ್ತರಿಂದ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಬೇಕು.

ವಾಹನ ಚಾಲನೆ ಮತ್ತು ದೀರ್ಘ ಪ್ರಯಾಣಗಳಲ್ಲಿ ಎಚ್ಚರಿಕೆ ಅಗತ್ಯ. ಅನಾರೋಗ್ಯದ ಸಣ್ಣಪುಟ್ಟ ಸಮಸ್ಯೆಗಳು ಕಾಡಬಹುದು. ಹನುಮನ ಸ್ತೋತ್ರ ಪಠಣೆ, ಕೆಂಪು ಮತ್ತು ಕೇಸರಿ ಬಣ್ಣಗಳ ಬಳಕೆ ಹಾಗೂ 9 ಮತ್ತು 6 ಅದೃಷ್ಟ ಸಂಖ್ಯೆಗಳಾಗಿವೆ ಎಂದು ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ? ತಜ್ಞ ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ ನೋಡಿ – Kannada News | Chitradurga Bus Accident: How Burnt Bodies Are Identified After Tragedy? Expert Doctors Explain the Process

ಚಿತ್ರದುರ್ಗ, ಡಿಸೆಂಬರ್ 25: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಬಸ್ ಅಪಘಾತದಲ್ಲಿ ಅನೇಕ ಮಂದಿ ಮೃತಪಟ್ಟಿದ್ದು, ಹಲವು ಮಂದಿ ಸುಟ್ಟು ಕರಕಲಾಗಿದ್ದಾರೆ. ಅವರ ಮೃತದೇಹಗಳ ಗುರುತು ಪತ್ತೆ ಮಾಡುವುದು ಸವಾಲಾಗಿದೆ. ಪ್ರಸ್ತುತ, ನಾಲ್ಕು ಮೃತದೇಹಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವು ಅತಿ ಹೆಚ್ಚು ಸುಟ್ಟುಹೋಗಿರುವ ಕಾರಣ ನೇರವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ.

ಮೃತದೇಗಳ ಪತ್ತೆ ಕಾರ್ಯದ ಬಗ್ಗೆ ಚಿತ್ರದುರ್ಗದ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ರವೀಂದ್ರ ಅವರು ಮಾಹಿತಿ ನೀಡಿದ್ದಾರೆ. ಮೃತದೇಹಗಳ ಗುರುತು ಪತ್ತೆಗಾಗಿ ಸಂಬಂಧಿಕರು ಮುಂದಾಗಬೇಕಿದ್ದು, ಒಂದು ವೇಳೆ ಗುರುತು ಪತ್ತೆಯಾಗದಿದ್ದಲ್ಲಿ ಡಿಎನ್‌ಎ ಪರೀಕ್ಷೆ ಅನಿವಾರ್ಯವಾಗುತ್ತದೆ. ಡಿಎನ್‌ಎ ಪರೀಕ್ಷೆಗಾಗಿ ಮೋಲಾರ್ ಟೂತ್ ಮತ್ತು ಎದೆಯ ಸ್ಟರ್ನಮ್ ಮೂಳೆಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಈ ಪ್ರಕ್ರಿಯೆ ಸುಮಾರು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೂ ಮೃತದೇಹಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂರಕ್ಷಿಸಿಡಲಾಗುತ್ತದೆ. ವಿಧಿವಿಜ್ಞಾನ ತಜ್ಞರಾದ ಡಾ. ವೇಣು ಮತ್ತು ಡಾ. ಅಜಯ್ ಅವರು ಈ ಗುರುತು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೈಜ್ಞಾನಿಕ ವಿಧಾನದ ಮೂಲಕ ಮೃತದೇಹಗಳ ಗುರುತು ಖಚಿತಪಡಿಸಿ ಸಂಬಂಧಿಕರಿಗೆ ಹಸ್ತಾಂತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಡಾ. ರವೀಂದ್ರ ತಿಳಿಸಿದ್ದಾರೆ. ಅವರ ಮಾತಿನ ವಿಡಿಯೋ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಋಣ ತೀರಿಸಲು ತಮಿಳಿಗೆ ಬರುತ್ತಿದ್ದಾರೆ ಶಾರುಖ್ ಖಾನ್: ಸಿನಿಮಾ ಯಾವುದು? – Kannada News | Shah Rukh Khan acting in Jailer 2 movie with Rajinikanth

ಶಾರುಖ್ ಖಾನ್ (Shah Rukh Khan) ಬಾಲಿವುಡ್​ನ ಸೂಪರ್ ಸ್ಟಾರ್ ನಟ. ‘ಪಠಾಣ್’, ‘ಜವಾನ್’, ‘ಡಂಕಿ’ ಮೂಲಕ ಸತತ ಮೂರು ಹಿಟ್ ಸಿನಿಮಾಗಳನ್ನು ನೀಡಿರುವ ಶಾರುಖ್ ಖಾನ್ ಇದೀಗ ‘ಕಿಂಗ್’ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾಕ್ಕೆ ತಯಾರಿ ನಡೆಸುತ್ತಿದ್ದಾರೆ. ಶಾರುಖ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸುವುದು ಬಹಳ ಅಪರೂಪ. ಅದರಲ್ಲೂ ಪರ ಭಾಷೆಯಲ್ಲಿ ಅತಿಥಿ ಪಾತ್ರಗಳಲ್ಲಿ ಶಾರುಖ್ ಖಾನ್ ನಟಿಸುವುದೆಂದರೆ ಅದಕ್ಕೆ ವಿಶೇಷ ಕಾರಣವೇ ಇರಬೇಕು. ಇದೀಗ ಶಾರುಖ್ ಖಾನ್, ತಮಿಳಿನ ಒಂದು ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಇದಕ್ಕೆ ಕಾರಣ ಋಣಭಾರ.

ರಜನೀಕಾಂತ್ ನಟಿಸುತ್ತಿರುವ ‘ಜೈಲರ್ 2’ ಸಿನಿಮಾನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿಯೇ ಹರಿದಾಡುತ್ತಿದೆ. ‘ಜೈಲರ್’ ಸಿನಿಮಾ ತನ್ನ ವಿಶೇಷ ಕ್ಯಾಮಿಯೋ ಪಾತ್ರಗಳಿಂದಲೇ ದೊಡ್ಡ ಹಿಟ್ ಆಗಿತ್ತು. ಶಿವರಾಜ್ ಕುಮಾರ್, ಮೋಹನ್​​ಲಾಲ್, ಜಾಕಿ ಶ್ರಾಫ್, ತಮನ್ನಾ, ಸುನಿಲ್ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದ ‘ಜೈಲರ್’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ‘ಜೈಲರ್ 2’ ನಿರ್ಮಾಣ ಆಗುತ್ತಿದ್ದು, ಈ ‘ಕ್ಯಾಮಿಯೋ ಗೇಮ್’ ಅನ್ನು ಇನ್ನೂ ದೊಡ್ಡ ಹಂತಕ್ಕೆ ಕೊಂಡೊಯ್ಯುವುದು ನಿರ್ದೇಶಕ ನೆಲ್ಸನ್ ಯೋಜನೆ.

ಇದನ್ನೂ ಓದಿ:ಹೃತಿಕ್ ಆಯ್ತು ಈಗ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ಜೂ ಎನ್​​ಟಿಆರ್?

ಇದೇ ಕಾರಣಕ್ಕೆ ‘ಜೈಲರ್ 2’ ಸಿನಿಮಾಕ್ಕಾಗಿ ಶಾರುಖ್ ಖಾನ್ ಅವರನ್ನೇ ಕರೆತರಲು ನೆಲ್ಸನ್ ಸಜ್ಜಾಗಿದ್ದಾರೆ. ಆದರೆ ಶಾರುಖ್ ಖಾನ್ ಈ ಆಫರ್ ಅನ್ನು ಒಪ್ಪಿಕೊಳ್ಳಲು ಕಾರಣವೂ ಸಹ ಇದೆ. ಈ ಹಿಂದೆ 2011 ರಲ್ಲಿ ಶಾರುಖ್ ಖಾನ್ ‘ರಾ ಒನ್’ ಹೆಸರಿನ ಭಾರಿ ಅದ್ಧೂರಿ ಸಿನಿಮಾ ಮಾಡಿದ್ದರು. ಆ ಸಿನಿಮಾಕ್ಕೆ ಭಾರಿ ದೊಡ್ಡ ಬಂಡವಾಳ ಹಾಕಿ, ಅದ್ಧೂರಿ ಪ್ರಚಾರ ಮಾಡಿದ್ದರು, ಅದ್ಧೂರಿ ಸೆಟ್​​ಗಳು, ಹಾಲಿವುಡ್ ಲೆವೆಲ್ ವಿಎಫ್​​ಎಕ್ಸ್ ಬಳಸಿದ್ದರು. ಆ ಸಿನಿಮಾನಲ್ಲಿ ರಜನೀಕಾಂತ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈಗ ‘ಜೈಲರ್ 2’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಆ ಋಣ ತೀರಿಸುತ್ತಿದ್ದಾರೆ ಶಾರುಖ್ ಖಾನ್.

ಅಲ್ಲದೆ ಶಾರುಖ್ ಖಾನ್ ಅವರಿಗೆ ತಮಿಳು ಚಿತ್ರರಂಗದೊಂದಿಗೆ ಆಪ್ತ ನಂಟಿದೆ. 2000 ರಲ್ಲಿ ಬಿಡುಗಡೆ ಆದ ತಮಿಳು ಸಿನಿಮಾ ‘ಹೇ ರಾಮ್’ನಲ್ಲಿ ಕಮಲ್ ಹಾಸನ್ ಜೊತೆಗೆ ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಅವರ ‘ಚೆನ್ನೈ ಎಕ್ಸ್​ಪ್ರೆಸ್’ ಸಿನಿಮಾನಲ್ಲಿ ತಮಿಳು ಚಿತ್ರರಂಗಕ್ಕೆ ವಿಶೇಷ ಉಲ್ಲೇಖಗಳನ್ನು ಮಾಡಿದ್ದರು. ಸಾಕಷ್ಟು ತಮಿಳು ನಟರು ಅದರಲ್ಲಿ ನಟಿಸಿದ್ದರು. ಶಾರುಖ್ ಖಾನ್ ಅವರ ‘ಜವಾನ್’ ಸಿನಿಮಾ ನಿರ್ದೇಶಿಸಿದ್ದು ಸಹ ತಮಿಳು ನಿರ್ದೇಶಕ ಅಟ್ಲಿ. ಈಗ ಮತ್ತೊಮ್ಮೆ ತಮಿಳು ಸಿನಿಮಾನಲ್ಲಿ ನಟಿಸಲು ಬರುತ್ತಿದ್ದಾರೆ ಶಾರುಖ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗ್ರಾಮಸ್ಥರ ಬೆಚ್ಚಿಬೀಳಿಸಿದ ಗಜಪಡೆ: ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು! – Kannada News | Wild Elephant Herd Strays Into Farmlands Near Hosur–Anekal Border, Watch Viral video of 40 Jumbos crossing road

ಆನೇಕಲ್, ಡಿಸೆಂಬರ್ 25: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ತಮಿಳುನಾಡು ಗಡಿ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದೆ. ಕಾಡಿನಿಂದ ನಾಡಿಗೆ ದಾಗುಂಡಿ ಇಟ್ಟ ಕಾಡಾನೆಗಳ ದೊಡ್ಡ ಹಿಂಡು ರೈತರ ಬೆಳೆಗಳನ್ನು ನಾಶಪಡಿಸಿ ಆತಂಕ ಮೂಡಿಸಿದೆ. ತಮಿಳುನಾಡಿನ ಹೊಸೂರು ಸಮೀಪದ ಶಾನಮಾವು ಪ್ರದೇಶದಲ್ಲಿ ಸುಮಾರು ನಲ್ವತ್ತಕ್ಕೂ ಹೆಚ್ಚು ಕಾಡಾನೆಗಳಿರುವ ಹಿಂಡು ಕಾಣಿಸಿಕೊಂಡಿದ್ದು, ಕಳೆದ ಎರಡು ದಿನಗಳಿಂದ ಶಾನಮಾವು, ಪಿರ್ಜೆಹಳ್ಳಿ ಹಾಗೂ ನಾಯಕನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿವೆ. ಈ ಹಾವಳಿಯಿಂದಾಗಿ ರೈತರು ಬೆಳೆದ ರಾಗಿ ಸೇರಿದಂತೆ ಇತರೆ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.

ರಾತ್ರಿ ವೇಳೆಯಲ್ಲಿ ಕೃಷಿ ಭೂಮಿಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು ಹೊಲಗಳಲ್ಲಿ ಬೆಳೆದ ಬೆಳೆಗಳನ್ನು ತುಳಿದು ನಾಶಪಡಿಸುತ್ತಿದ್ದು, ರೈತರು ತೀವ್ರ ಕಂಗಾಲಾಗಿದ್ದಾರೆ. ಕಾಡಾನೆಗಳ ಭಯದಿಂದಾಗಿ ರೈತರು ಹೊಲಗಳಿಗೆ ಹೋಗಲು ಕೂಡ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಾರ್ಕ್’ ಸಿನಿಮಾ ನೋಡಿದವರು ಹೇಳಿದ್ದೇನು? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ – Kannada News | Sudeep starrer Mark movie twitter review in Kannada

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಇಂದು (ಡಿಸೆಂಬರ್ 25) ಬಿಡುಗಡೆ ಆಗಿದೆ. ಸಿನಿಮಾದ ಶೋಗಳು ಬೆಳಿಗ್ಗೆ 6 ಗಂಟೆಯಿಂದಲೇ ಶುರುವಾಗಿದೆ. ಅಭಿಮಾನಿಗಳು ಬೆಳಿಗ್ಗೆಯಿಂದಲೇ ಚಿತ್ರಮಂದಿರದ ಮುಂದೆ ಸಾಲು ನಿಂತು ಸಿನಿಮಾ ವೀಕ್ಷಿಸಿದ್ದಾರೆ. ಬೆಳ್ಳಂಬೆಳಿಗ್ಗೆ ‘ಮಾರ್ಕ್’ ಸಿನಿಮಾ ವೀಕ್ಷಿಸಿದವರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ ಹಲವರಿಗೆ ಸಿನಿಮಾ ಇಷ್ಟವಾಗಿದೆ. ‘ಮಾರ್ಕ್’ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ…

‘ಮಾರ್ಕ್’ ಸಿನಿಮಾ ಮೊದಲ ಭಾಗದಿಂದಲೇ ಅದ್ಭುತವಾಗಿದೆ. ಮೊದಲಾರ್ಧದಲ್ಲಿ ಬಹು ಕಥಾಹಂದರಗಳು ತೆರೆದುಕೊಳ್ಳುತ್ತವೆ ಮತ್ತು ಎರಡನೇ ಭಾಗದಲ್ಲಿ ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ತೋರಿಸಲಾಗುತ್ತದೆ. ನಮ್ಮ ಬಾದ್‌ಷಾ ಅಲ್ಟ್ರಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಅವರ ಈ ವರೆಗಿನ ಅತ್ಯುತ್ತಮ ಆಕ್ಷನ್ ಸಿನಿಮಾ ಇದೆನಿಸುತ್ತದೆ. ಅಜನೀಶ್ ಅವರ ಹಿನ್ನೆಲೆ ಸಂಗೀತವು ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಎತ್ತಿ ಹಿಡಿದಿದೆ’ ಎಂದಿದ್ದಾರೆ ಆಕಾಶ್ ಆರ್ ಪಾಟೀಲ್.

‘ಮಾರ್ಕ್’ ಸಿನಿಮಾ ಒಂದು ಅದ್ಭುತ ಆಕ್ಷನ್ ಸಿನಿಮಾ ಆಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದೆ. ಆದರೆ ಸುದೀಪ್ ಅವರು ಅದ್ಭುತವಾದ ಪ್ರದರ್ಶನವನ್ನು ಸಿನಿಮಾ ಉದ್ದಕ್ಕೂ ನೀಡಿದ್ದಾರೆ ಎಂದಿರುವುದು ಮಿಸ್ಟರ್ ಬಾಂಡ್ ಹೆಸರಿನ ಟ್ವಿಟ್ಟರ್ ಖಾತೆ ಬಳಕೆದಾರ.

ಅಭಿ ಕಿಚ್ಚ ಎಂಬುವರು ಟ್ವೀಟ್ ಮಾಡಿ, ‘ಕಿಚ್ಚ ಸುದೀಪ್ ಅವರ ಅಭಿಮಾನಿ ಆಗಿ ನನಗೆ ‘ಮಾರ್ಕ್’ ಸಿನಿಮಾ ಅಷ್ಟಾಗಿ ಹಿಡಿಸಲಿಲ್ಲ. ಸಿನಿಮಾ ನಾನು ನಿರೀಕ್ಷಿಸಿದ ಮಟ್ಟಕ್ಕೆ ಇರಲಿಲ್ಲ. ಇನ್ನೂ ಹಲವು ವಿಭಾಗಗಳಲ್ಲಿ ಚೆನ್ನಾಗಿರಬಹುದಿತ್ತು. ಸುದೀಪ್ ಎಂಟ್ರಿ ಸೂಪರ್ ಆಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಸಹ ಸೂಪರ್. ಆದರೆ ಕತೆ ಮತ್ತು ಚಿತ್ರಕತೆ ಸಪ್ಪೆಯಾಗಿದೆ’ ಎಂದಿದ್ದಾರೆ.

ಪುನೀತ್ ಗೌಡ ಎಂಬುವರು ಟ್ವೀಟ್ ಮಾಡಿ, ‘ಮಾರ್ಕ್ ಸಿನಿಮಾಕ್ಕೆ ಐದರಲ್ಲಿ ಎರಡು ಅಂಕ ನೀಡಿದ್ದಾರೆ. ಸಿನಿಮಾದ ಬಿಜಿಎಂ ಬಿಟ್ಟು ಬೇರೆ ಏನು ಇಷ್ಟ ಆಗಲಿಲ್ಲ. ತೀರ ಸಾಮಾನ್ಯ ಕತೆ. ಏನೂ ಹೊಸತನ ಇಲ್ಲ. ಕಾರ್ತಿಕೇಯ ಮತ್ತೆ ಹಳೆ ಸೂತ್ರಕ್ಕೆ ಕಟ್ಟು ಬಿದ್ದಿದ್ದಾರೆ. ಚಿತ್ರಕತೆ ಮೇಲೆ ಅವರಿಗೆ ಹಿಡಿತ ತಪ್ಪಿದೆ. ಸುದೀಪ್ ಅವರು ಇನ್ನೂ ಉತ್ತಮ ಕತೆ ಆಯ್ಕೆ ಮಾಡಿಕೊಳ್ಳಬೇಕಿತ್ತು’ ಎಂದಿದ್ದಾರೆ.

ಆರು ತಿಂಗಳಲ್ಲಿ ನಿರ್ಮಿಸಿದ ಒಳ್ಳೆಯ ಪ್ರಾಡಕ್ಟ್ ‘ಮಾರ್ಕ್’ ಸಿನಿಮಾ. ಆದರೂ ನಿರ್ದೇಶಕ ವಿಜಯ್, ಸುದೀಪ್ ಅವರಿಗೆ ಒಳ್ಳೆಯ ಎಲಿವೇಷನ್ ದೃಶ್ಯಗಳನ್ನು ಕೊಡುವುದರಲ್ಲಿ ಸೋತಿದ್ದಾರೆ. ಅಜನೀಶ್ ಅವರು ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ ಆದರೆ ಇನ್ನೂ ಒಳ್ಳೆಯ ಹಿನ್ನೆಲೆ ಸಂಗೀತ ಕೊಡಬಹುದಿತ್ತು. ಸುದೀಪ್ ಅವರು ತಮ್ಮ ಅಭಿನಯ, ಆಕ್ಷನ್​​ನಿಂದ ಗಮನ ಸೆಳೆಯುತ್ತಾರೆ. ‘ಮ್ಯಾಕ್ಸ್’ ಸಿನಿಮಾ ಸರಳ ಕತೆ, ಒಳ್ಳೆಯ ಪಾತ್ರಗಳ ಮೂಲಕ ಗಮನ ಸೆಳೆಯಿತು, ಆದರೆ ‘ಮಾರ್ಕ್’ ಅದಕ್ಕೆ ಉಲ್ಟಾ ಆಗಿದೆ ಎಂದಿದ್ದಾರೆ ಪವನ್ ಪ್ರಸಾದ್.

ಎಆರ್ ಎಂಬ ಟ್ವೀಟ್ ಖಾತೆಯಿಂದ ಮಾಡಲಾದ ಟ್ವೀಟ್​ನಲ್ಲಿ, ‘ಮೊದಲಾರ್ಧದ ಇಂಟ್ರೊ ಸಾಂಗ್ ಚೆನ್ನಾಗಿದೆ. ಆದರೆ ಉಳಿದಿದ್ದೆಲ್ಲ ತುಸು ಎಳೆದಂತೆ ಅನಿಸಿತು. ಎರಡನೇ ಅರ್ಧದ ಪ್ರಾರಂಭ ಚೆನ್ನಾಗಿ ಆಯ್ತು. ಆದರೆ ಆ ಬಳಿಕ ಕುತೂಹಲವನ್ನು ಉಳಿಸಿಕೊಳ್ಳುವುದಿಲ್ಲ. ಸುದೀಪ್ ಸಿನಿಮಾ ಉಳಿಸಲು ಪ್ರಯತ್ನ ಪಟ್ಟಿದ್ದಾರಾದರೂ ಅವರಿಂದ ಸಾಧ್ಯವಾಗಿಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link