All posts by nagaraj11081993

ರಾಹುಲ್​​ ಗಾಂಧಿಗೆ ಮತ್ತೊಂದು ಪತ್ರ ಬರೆದ ಮಾಜಿ ಸಚಿವ ಕೆ.ಎನ್​​. ರಾಜಣ್ಣ: ಮಹತ್ವದ ವಿಷಯಗಳ ಉಲ್ಲೇಖ – Kannada News | K.N. Rajanna writes to Rahul Gandhi, clarifying his ‘Vote Chori’ statement

ರಾಹುಲ್​​ ಗಾಂಧಿಗೆ ಮತ್ತೊಂದು ಪತ್ರ ಬರೆದ ರಾಜಣ್ಣ

ಬೆಂಗಳೂರು, ಡಿಸೆಂಬರ್​ 23: ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತೊಂದು ಪತ್ರ ಬರೆದಿದ್ದಾರೆ. ವೋಟ್​​ ಚೋರಿ ಅಭಿಯಾನದ ಬಗ್ಗೆ ತಮ್ಮ ಹೇಳಿಕೆಯನ್ನು ಹೇಗೆ ತಪ್ಪಾಗಿ ಅರ್ಥೈಸಲಾಗಿದೆ ಎಂಬುದರ ಬಗ್ಗೆ ಸಂಭಾಷಣೆ ಸಮೇತ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಭೇಟಿಗೂ ಸಮಯ ಕೇಳಿದ್ದಾರೆ. ಈಗಾಗಲೇ ನಾಲ್ಕು ಪತ್ರಗಳನ್ನು ಬರೆದಿರುವ ರಾಜಣ್ಣ, ರಾಜ್ಯದಲ್ಲಿನ ವಿದ್ಯಮಾನದಿಂದ ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಜ್ ಬಗ್ಗೆಯೂ ಅವುಗಳಲ್ಲಿ ಉಲ್ಲೇಖಿಸಿದ್ದರು. ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೈ ಬಿಟ್ಟರೆ ಆಗುವ ಡ್ಯಾಮೇಜ್ ಬಗ್ಗೆಯೂ ಮನವರಿಕೆ ಯತ್ನ ಮಾಡಿದ್ದರು.

ರಾಜಣ್ಣ ಬರೆದ ಪತ್ರದಲ್ಲೇನಿದೆ?

ತಾನು ತುಮಕೂರು ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದ ಪ್ರಸ್ತುತ ಶಾಸಕನಾಗಿದ್ದು, ಕರ್ನಾಟಕ ಸರ್ಕಾರದಲ್ಲಿ ಸಹಕಾರ ಸಚಿವನಾಗಿಯೂ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದೇನೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸಚಿವ ಸಂಪುಟದಿಂದ ತನ್ನನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ, ಕೆಲ ಪ್ರಮುಖ ವಿಷಯಗಳನ್ನು ಗಮನಕ್ಕೆ ತರುತ್ತಿದ್ದೇನೆ ಎಂದು ಪತ್ರದಲ್ಲಿ ರಾಜಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಅಧಿಕಾರ ಹಂಚಿಕೆ; ಖರ್ಗೆ ಜತೆ ರಾಹುಲ್ ಗಾಂಧಿ 25 ನಿಮಿಷ ಮಾತುಕತೆ

ವೋಟ್ ಚೋರಿ ಕಾರ್ಯಕ್ರಮವನ್ನು ತಾನು ಹೃದಯಪೂರ್ವಕವಾಗಿ ಬೆಂಬಲಿಸಿದ್ದು,ಇಂತಹ ಮಹತ್ವದ ವಿಷಯಗಳನ್ನು ದೇಶದ ಮುಂದೆ ಇಡುವ ನಿಮ್ಮ ನಾಯಕತ್ವ ಮತ್ತು ಮುಂದಾಳತ್ವವನ್ನು ಆಳವಾಗಿ ಮೆಚ್ಚುತ್ತೇನೆ. ನಾನು ನೀಡಿದ್ದ ಹೇಳಿಕೆಯ ಉದ್ದೇಶ ಏನೆಂದರೆ, ಕೆಪಿಸಿಸಿ ನೇಮಕ ಮಾಡಿದ ಬಿಎಲ್ಏಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ಸಂಬಂಧಿಸಿದವರು ಈ ಲೋಪಗಳತ್ತ ಸೂಕ್ತ ಗಮನ ನೀಡಿದ್ದರೆ, ಅವುಗಳನ್ನು ತಪ್ಪಿಸಬಹುದಾಗಿತ್ತು. ಹಾಗಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇನ್ನೂ 8 ರಿಂದ 10 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲುವ ಸಾಧ್ಯತೆ ಇತ್ತು. ಇದೇ ರೀತಿಯ ಲೋಪಗಳನ್ನು ಇತರ ರಾಜ್ಯಗಳಲ್ಲಿಯೂ ತಪ್ಪಿಸಿದ್ದರೆ, ಇನ್ನೂ 30 ರಿಂದ 40 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಬಹುದಾಗಿತ್ತು. ಆ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗುತ್ತಿರಲಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು, ನಮ್ಮ ಪ್ರಿಯ ಯುವ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿಯಾಗುತ್ತಿದ್ದರು ಎಂಬುದಾಗಿತ್ತು ಎಂದು ಪತ್ರದಲ್ಲಿ ರಾಜಣ್ಣ ತಿಳಿಸಿದ್ದಾರೆ.

ತಮ್ಮ ರಾಜಕೀಯ ಜೀವನ, ಕಾಂಗ್ರೆಸ್​​ ಪಕ್ಷದ ಮೇಲಿನ ನಿಷ್ಠೆ, ಸಚಿವನಾಗಿ ಮಾಡಿದ ಕೆಲಸಗಳು ಸೇರಿ ತಮ್ಮ ರಾಜಕೀಯ ಸಾಧನೆ ಬಗ್ಗೆಯೂ ಪತ್ರದಲ್ಲಿ ರಾಜಣ್ಣ ಉಲ್ಲೇಖಿಸಿದ್ದು, ಸತ್ಯಾಸತ್ಯತೆಯನ್ನು ನಿಮ್ಮಮುಂದಿಡುವ ಸಲುವಾಗಿ ಈ ಪತ್ರ ಬರೆದಿದ್ದೇನೆ. ಜೊತೆಗೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿ, ತಪ್ಪು ರೀತಿಯಲ್ಲಿ ನಿಮ್ಮ ಗಮನಕ್ಕೆ ತಂದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ. ಈ ವಿಷಯಗಳ ಕುರಿತು ವಿವರವಾಗಿ ಚರ್ಚಿಸಲು, ಭೇಟಿಗೆ ಸಮಯ ನೀಡುವಂತೆಯೂ ಪತ್ರಮುಖೇನ ರಾಹುಲ್​​ ಗಾಂಧಿಗೆ ಅವರು ಮನವಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:42 am, Tue, 23 December 25

Source link

‘ಇದು ಬೆಂಗಳೂರಿನಲ್ಲಿ ಸಹಿಸಲಾಗದ ಕ್ಷಣ’: ಟ್ರಾಫಿಕ್‌ನಲ್ಲಿ ಕಸದ ಲಾರಿಯ ಪಕ್ಕದಲ್ಲಿ ಸಿಲುಕಿಕೊಂಡ ಆಟೋದಲ್ಲಿದ್ದ ಮಹಿಳೆ – Kannada News | Pavitra Kulkarni’s Viral Video: Bangalore Traffic, Garbage Woes and Citizen Frustration

ಬೆಂಗಳೂರು, ಡಿ.23: ಕೆಲವರು ಬೆಂಗಳೂರನ್ನು (Bangalore traffic) ಮೆಚ್ಚಿಕೊಂಡರೆ, ಇನ್ನು ಕೆಲವರು ಇಲ್ಲಿನ ವ್ಯವಸ್ಥೆಯನ್ನು ದೂರುತ್ತಾರೆ. ರಾಜ್ಯ ರಾಜಧಾನಿ ಎಲ್ಲರಿಗೂ ಆಸರೆಯಾಗಿದೆ. ಆದರೆ ಇಲ್ಲಿನ ರಸ್ತೆ, ಟ್ರಾಫಿಕ್​​​​​, ವಾತಾವರಣದ ಬಗ್ಗೆ ಅನೇಕರಿಗೆ ಅಸಮಾಧಾನ ಇದೆ. ಇದೀಗ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಪವಿತ್ರಾ ಕುಲಕರ್ಣಿ ಎಂಬುವವರು, ಹಂಚಿಕೊಂಡಿರುವ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ತಾವು ಅನುಭವಿಸಿದ ಸಂಕಷ್ಟದ ಬಗ್ಗೆ ಹಂಚಿಕೊಂಡಿದ್ದಾರೆ. ಆಟೋದಲ್ಲಿ ಹೋಗುತ್ತಿದ್ದ ವೇಳೆ ನಡೆದ ಘಟನೆಯನ್ನು ಈ ವಿಡಿಯೋ ಮೂಲಕ ವಿವರಿಸಿದ್ದಾರೆ. ನಗರದ ಜನದಟ್ಟಣೆಯ ರಸ್ತೆಗಳಲ್ಲಿ ದೈನಂದಿನ ಜೀವನದ ಕೆಟ್ಟ ಚಿತ್ರಣ ಹೇಗಿದೆ ಎಂಬುದನ್ನು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ವಿಡಿಯೊದಲ್ಲಿ ಹೀಗೆ ಬರೆದುಕೊಂಡಿದ್ದಾರೆ “ಇದು ಬೆಂಗಳೂರಿನ ಸಹಿಸಲಾಗದ ಕ್ಷಣ?” ಗಂಟೆಗಟ್ಟಲೆ ಕಸದ ಲಾರಿಯ ಪಕ್ಕದಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೂ ಏನೂ ಅನಿಸುತ್ತಿಲ್ಲ ಎಂದು ಹೇಳಿದ್ದಾರೆ. ಪವಿತ್ರಾ ಕುಲಕರ್ಣಿ ಟ್ರಾಫಿಕ್​​​ನಲ್ಲಿ ಸಿಲುಕಿಕೊಂಡ ವೇಳೆ ಚಿತ್ರಹಿಂಸೆ ಅನುಭವಿಸಿದ್ದಾರೆ. ತಮ್ಮ ರಿಕ್ಷಾದ ಪಕ್ಕದಲ್ಲೇ ಕಸ ಲಾರಿಯೊಂದು ಬಂದು ನಿಂತಿತ್ತು. ತನ್ನ ಗಮ್ಯಸ್ಥಾನವನ್ನು ತಲುಪಲು 78 ನಿಮಿಷಗಳು ಬೇಕು. ಜತೆಗೆ ಟ್ರಾಫಿಕ್, ಅದರ ನಡುವೆ ಈ ಕಸ ವಾಸನೆ, ಇದು ಪ್ರತಿದಿನದ ನರಕಯಾತನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿದೇಶಿಗರ ಶಾಶ್ವತ ಮನೆ: ಭಾರತದ ಸರಳ ಜೀವನಕ್ಕೆ ರಷ್ಯಾ ಮಹಿಳೆ ಫಿದಾ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇನ್ನು ಈ ವಿಡಿಯೋ ಬಗ್ಗೆ ನೆಟ್ಟಿಗರು ಕೂಡ ಕಮೆಂಟ್​​ ಮಾಡಿದ್ದಾರೆ. ಟ್ರಾಫಿಕ್ ಮತ್ತು ಆ ವಾಸನೆಗಳು, ಇದು ನಿಜವಾಗಿಯೂ ಮುಂದಿನ ಹಂತ ಎಂದು ಒಬ್ಬರು ಟೀಕಿಸಿದ್ದಾರೆ. ಈ ಪರಿಸ್ಥಿತಿಯನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ, ಪ್ರತಿದಿನವೂ ಈ ಸ್ಥಿತಿ ಬೆಂಗಳೂರಿನಲ್ಲಿ ನಡೆಯುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ಒಂದು ಹಾಸ್ಯಮಯ ಕ್ಷಣ, ಬೆಂಗಳೂರು ಮಾತ್ರ ನಿಮಗೆ ಹೀಗೆ ಮಾಡಲು ಸಾಧ್ಯ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ. ಈ ನಗರವು ಪ್ರತಿದಿನ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ ಎಂದು ಇನ್ನೊಬ್ಬರು ಕಮೆಂಟ್​​​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಮನೆಯ ಈ ದಿಕ್ಕಿನಲ್ಲಿ ಎಂದಿಗೂ ಕಸದ ಬುಟ್ಟಿಯನ್ನು ಇಡಬೇಡಿ; ಸಮಸ್ಯೆ ತಪ್ಪಿದ್ದಲ್ಲ! – Kannada News | Vastu for Dustbin Placement: Avoid Financial Loss and Boost Home Positivity

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡಾ ವಾಸ್ತುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮನೆ ಕಟ್ಟುವುದರಿಂದ ಹಿಡಿದು ಮನೆಯೊಳಗಿನ ಅಲಂಕಾರಿಕ ವಸ್ತುವಿನ ತನಕ ವಾಸ್ತುವಿನ ಸಲಹೆಯನ್ನು ಪಾಲಿಸುತ್ತಾರೆ. ಆದರೆ ಅನೇಕ ಜನರು ಕಸದ ಬುಟ್ಟಿ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಅದನ್ನು ಮನೆಯ ಯಾವುದೋ ಮೂಲೆಯಲ್ಲಿ ಇರಿಸಲಾಗುತ್ತದೆ. ಆದರೆ ವಾಸ್ತು ತಜ್ಞರು ಅದನ್ನು ಎಂದಿಗೂ ತಪ್ಪು ದಿಕ್ಕಿನಲ್ಲಿ ಇಡಬಾರದು ಎಂದು ಎಚ್ಚರಿಸುತ್ತಾರೆ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಕಸದ ಬುಟ್ಟಿಯನ್ನು ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಲೇಬಾರದು. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ದಿಕ್ಕುಗಳು ದೇವತೆಗಳಿಗೆ ಸಂಬಂಧಿಸಿವೆ. ಆದ್ದರಿಂದ, ಈ ಎರಡು ದಿಕ್ಕುಗಳಲ್ಲಿ ಕಸದ ಬುಟ್ಟಿಯನ್ನು ಇಡುವುದರಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ.

ಅದೇ ರೀತಿ, ಯಾವುದೇ ಸಂದರ್ಭದಲ್ಲಿ ಮುಖ್ಯ ದ್ವಾರದಲ್ಲಿ ಅಥವಾ ಸ್ನಾನಗೃಹದಲ್ಲಿ ಕಸದ ಬುಟ್ಟಿಯನ್ನು ಇಡಬಾರದು. ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಮುಖ್ಯ ದ್ವಾರದಲ್ಲಿ ಅಥವಾ ಸ್ನಾನಗೃಹದಲ್ಲಿ ಕಸದ ಬುಟ್ಟಿಯನ್ನು ಇಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಮನೆಯೊಳಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ವಾಸ್ತು ಶಾಸ್ತ್ರದ ಪ್ರಕಾರ, ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸಬೇಕು, ಆದ್ದರಿಂದ ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಕಸದ ತೊಟ್ಟಿಯನ್ನು ಇಡುವುದು ತುಂಬಾ ಶುಭ. ಇದು ಮನೆಯೊಳಗಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಶಾಂತಿಯನ್ನು ತರುತ್ತದೆ. ಇದು ಕುಟುಂಬದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Dream Home: ಸ್ವಂತ ಮನೆ ನಿರ್ಮಾಣಕ್ಕೆ ಸಾಕಷ್ಟು ಅಡೆತಡೆ ಬರುತ್ತಿದೆಯೇ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Astrological Remedies to Achieve Your Dream of Owning a Home

ಪ್ರತಿಯೊಬ್ಬ ವ್ಯಕ್ತಿಗೂ ಸ್ವಂತ ಮನೆ ಹೊಂದುವ ಆಸೆ ಇರುತ್ತದೆ. “ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು” ಎಂಬ ಗಾದೆಯು ಸ್ವಂತ ಮನೆ ಕಟ್ಟುವುದರ ಶ್ರಮ ಮತ್ತು ಮಹತ್ವವನ್ನು ತಿಳಿಸುತ್ತದೆ. ಸಾಲ ಮಾಡಿ ಮನೆ ಕಟ್ಟಿದರೂ ಅದರಲ್ಲಿ ಶ್ರಮ ಮತ್ತು ಕಷ್ಟ ಇರುತ್ತದೆ. ಅನೇಕರು ಬಾಡಿಗೆ ಮನೆಗಳಲ್ಲಿ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದು, ಸ್ವಂತ ಮನೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ. ಕೆಲವರಿಗೆ ಪೂರ್ವಿಕರ ಆಸ್ತಿ, ಭೂಮಿ ಇದ್ದರೂ ಸಹ ಮನೆ ಕಟ್ಟಲು ಸಾಧ್ಯವಾಗದೆ ಅಪಾರ್ಟ್‌ಮೆಂಟ್‌ಗಳಲ್ಲಿ ಅಥವಾ ಬಾಡಿಗೆ ಮನೆಗಳಲ್ಲಿ ಉಳಿದಿರುವುದನ್ನು ಕಾಣಬಹುದು. ಇನ್ನು ಕೆಲವರಿಗೆ ಹಣ ಕೂಡಿಟ್ಟರೂ ಸಹ ಅದನ್ನು ಮನೆ ನಿರ್ಮಾಣಕ್ಕೆ ಬಳಸಲು ಸಾಧ್ಯವಾಗುವುದಿಲ್ಲ. ಸಿಮೆಂಟ್, ಕಬ್ಬಿಣದ ಬೆಲೆ ಏರಿಕೆಯಂತಹ ಕಾರಣಗಳಿಂದ ನಿರ್ಮಾಣ ಕಾರ್ಯ ಮುಂದೂಡಲ್ಪಟ್ಟು, ಅಂತಿಮವಾಗಿ ಅಪಾರ್ಟ್‌ಮೆಂಟ್ ಖರೀದಿಗೆ ಹೋಗುವ ಸನ್ನಿವೇಶಗಳು ಇರುತ್ತವೆ.

ಈ ಎಲ್ಲಾ ಸವಾಲುಗಳ ನಡುವೆ, ಸ್ವಂತ ಮನೆ ಯೋಗವಿದೆಯೇ ಅಥವಾ ಅದನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ. ಬಸವರಾಜ ಗುರೂಜಿ ತಮ್ಮ ನಿತ್ಯ ಭಕ್ತಿಯಲ್ಲಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಗುರೂಜಿಯವರು ಹೇಳುವಂತೆ, ಜ್ಯೋತಿಷ್ಯದ ಪ್ರಕಾರ, ಒಬ್ಬರ ಜಾತಕದಲ್ಲಿ ಮನೆ ಕಟ್ಟುವುದು ಅಥವಾ ಖರೀದಿಸುವ ಯೋಗವಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಮುಖ್ಯ. ಜಾತಕದಲ್ಲಿ ಮನೆ ಕಟ್ಟುವುದು ಅಥವಾ ಹೊಂದುವುದಕ್ಕೆ ಪ್ರೋತ್ಸಾಹ ನೀಡುವ ಪ್ರಮುಖ ಗ್ರಹಗಳೆಂದರೆ ಕುಜ (ಮಂಗಳ), ಶುಕ್ರ ಮತ್ತು ಬುಧ. ಈ ಮೂರು ಗ್ರಹಗಳ ಅನುಗ್ರಹವು ಸ್ವಂತ ಮನೆ ಕನಸನ್ನು ನನಸಾಗಿಸಲು ಸಹಾಯಕ.

ಕುಜ ಗ್ರಹದ ಅನುಗ್ರಹ ಅತ್ಯಗತ್ಯ. ಕುಜ ಗ್ರಹದ ಅಧಿಪತಿ ಸುಬ್ರಹ್ಮಣ್ಯ ಸ್ವಾಮಿ. ಜಾತಕದಲ್ಲಿ ನಾಲ್ಕನೆಯ ಮನೆಯು ಮನೆ, ಆಸ್ತಿ ಮತ್ತು ವಾಹನಗಳ ಬಗ್ಗೆ ಸೂಚಿಸುತ್ತದೆ. ನಾಲ್ಕನೆಯ ಮನೆಯ ಅಧಿಪತಿ, ನಾಲ್ಕನೆಯ ಮನೆಯಲ್ಲಿರುವ ಗ್ರಹಗಳು, ಅವುಗಳ ಸ್ಥಿತಿಗತಿಗಳು ಮತ್ತು ನಾಲ್ಕನೇ ಮನೆಯ ಮೇಲೆ ಬೀಳುವ ದೃಷ್ಟಿ – ಇವೆಲ್ಲವೂ ಮನೆ ಯೋಗವನ್ನು ನಿರ್ಧರಿಸುತ್ತವೆ. ಮನೆಯನ್ನು ಅಂದವಾಗಿ ನಿರ್ಮಿಸಲು ಶುಕ್ರನ ಅನುಗ್ರಹ ಮತ್ತು ಸರಿಯಾದ ಯೋಜನೆಗೆ ಬುಧನ ಅನುಗ್ರಹ ಬೇಕು.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಮನೆ ಯೋಗ ಪ್ರಾಪ್ತಿಗಾಗಿ ಮಾಡಬೇಕಾದ ಪರಿಹಾರಗಳು:

  • ಮಂಗಳ ಗ್ರಹದ ಆರಾಧನೆ: ಮಂಗಳ ಗ್ರಹವನ್ನು ಸತತವಾಗಿ ಪೂಜಿಸುವುದು ಮುಖ್ಯ. ಮಂಗಳವಾರದಂದು ಮಂಗಳ ಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಬೇಕು.
  • ಸುಬ್ರಹ್ಮಣ್ಯ ಸ್ವಾಮಿ ಪೂಜೆ: ಮಂಗಳ ಗ್ರಹದ ಅಧಿಪತಿಯಾದ ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸುವುದು ಅತಿ ಮುಖ್ಯ. ಪ್ರತಿ ಮಂಗಳವಾರದಂದು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬಹುದು. ನಾಗರಕಲ್ಲು ಪೂಜೆ ಸಹ ಫಲಪ್ರದ. ಕನಿಷ್ಠ 5-10 ನಿಮಿಷಗಳ ಕಾಲ ಸುಬ್ರಹ್ಮಣ್ಯ ಸ್ವಾಮಿಯನ್ನು ಶಿರಬಾಗಿ ಪ್ರಾರ್ಥಿಸುವುದರಿಂದ ಮನೆ ಯೋಗ ಪ್ರಾಪ್ತವಾಗುತ್ತದೆ.
  • ಕೃಷ್ಣ ಪಕ್ಷದ ಚತುರ್ಥಿ ಪೂಜೆ: ಕೃಷ್ಣ ಪಕ್ಷದ ಚತುರ್ಥಿಯಂದು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದರಿಂದ ಮನೆ ಯೋಗ ಆಟೋಮ್ಯಾಟಿಕ್ ಆಗಿ ಪ್ರಾಪ್ತವಾಗುತ್ತದೆ.
  • ಮಂತ್ರ ಜಪ: ಪ್ರತಿನಿತ್ಯ “ಓಂ ಅಂಗಾರಕಾಯ ನಮಃ” ಮಂತ್ರವನ್ನು ಜಪಿಸುವುದರಿಂದ ಕುಜ ಗ್ರಹದ ಅನುಗ್ರಹ ದೊರೆಯುತ್ತದೆ. ಮಂತ್ರ ಜಪಿಸಿದ ನಂತರ ಶುದ್ಧ ಮನಸ್ಸಿನಿಂದ ಮನೆ ಬೇಕೆಂದು ಪ್ರಾರ್ಥಿಸಬೇಕು.
  • ವಿಶೇಷ ಮಂತ್ರಗಳು: ಹೆಚ್ಚು ಪರಿಣಾಮಕಾರಿ ಫಲಿತಾಂಶಗಳಿಗಾಗಿ “ಓಂ ಕ್ರಾಮ್ ಕ್ರೀಮ್ ಕ್ರೌಮ್ ಸಃ ಅಂಗಾರಕಾಯ ನಮಃ” ಅಥವಾ “ಓಂ ಕ್ರಾಮ್ ಕ್ರೀಮ್ ಕ್ರೌಮ್ ಸಃ ಭೌಮಾಯ ನಮಃ” ಮಂತ್ರಗಳನ್ನು ಜಪಿಸಬಹುದು.
  • ಮಂಗಳವಾರ ಉಪವಾಸ: ಮಂಗಳವಾರದಂದು ಉಪವಾಸ ಆಚರಿಸುವುದು ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ.

ಈ ಎಲ್ಲಾ ಪರಿಹಾರಗಳು ನಂಬಿಕೆಯ ಆಧಾರದಲ್ಲಿರುತ್ತವೆ. ಜಾತಕ ಪರಿಶೀಲನೆ ಮಾಡಿಸಿ, ಈ ಕ್ರಮಗಳನ್ನು ಶ್ರದ್ಧೆಯಿಂದ ಅನುಸರಿಸುವುದರಿಂದ ಸ್ವಂತ ಮನೆ ಕನಸು ನನಸಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shanku Sthapana: ಯಾವುದೇ ಕಟ್ಟಡ ಕಟ್ಟುವ ಮುನ್ನ ಶಂಕುಸ್ಥಾಪನೆ ಮಾಡುವುದು ಯಾಕೆ ಗೊತ್ತಾ? – Kannada News | Shanku Sthapana Importance: Foundation Ceremony for Land Purification and Prosperity

ಮನೆ, ದೇವಸ್ಥಾನ ಅಥವಾ ಯಾವುದೇ ಸಾಮಾಜಿಕ ಸೇವಾ ಕಟ್ಟಡ ನಿರ್ಮಿಸುವ ಮೊದಲು ಶಂಕುಸ್ಥಾಪನೆ ಮಾಡುವುದು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಹತ್ವದ ವಿಧಿಯಾಗಿದೆ. ಕೇವಲ ಹೋಗಿ ಪೂಜೆ ಮಾಡಿ ಮನೆ ಕಟ್ಟಲು ಪ್ರಾರಂಭಿಸುವುದಕ್ಕಿಂತ, ಶಾಸ್ತ್ರೋಕ್ತವಾಗಿ ಶಂಕುಸ್ಥಾಪನೆ ಮಾಡುವುದರಿಂದ ಆ ಭೂಮಿಗೆ ಶತಮಾನಗಳ ಕಾಲ ಬಲ ಸಿಗುತ್ತದೆ ಮತ್ತು ಆಸ್ತಿಯು ವಂಶಪಾರಂಪರ್ಯವಾಗಿ ಉಳಿಯುತ್ತದೆ ಎಂಬುದು ಪ್ರಾಚೀನ ನಂಬಿಕೆ. ಉತ್ತಮ ಮುಹೂರ್ತ, ಆಯ ಮತ್ತು ಭೂಮಿಯ ಬಲವನ್ನು ಗಮನಿಸಿ ಮಾಡುವ ಈ ಕ್ರಿಯೆಯು ಕೇವಲ ಧಾರ್ಮಿಕ ವಿಧಿಯಲ್ಲ, ಇದು ಶುಭ ಸಂಕಲ್ಪದ ಪ್ರತೀಕವಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ. ಬಸವರಾಜ ಗುರೂಜಿ ತಮ್ಮ ನಿತ್ಯ ಭಕ್ತಿಯಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಶಂಕುಸ್ಥಾಪನೆ ಎಂದರೆ, ನಾವು ಕಟ್ಟಲು ಉದ್ದೇಶಿಸಿರುವ ಸ್ಥಳದಲ್ಲಿ ನಿರ್ಮಾಣದ ಸದುದ್ದೇಶದಿಂದ ಸಂಕಲ್ಪ ಮಾಡುವುದು. ಇದು ನಿಮ್ಮ ರಾಶಿ, ಜಾತಕಕ್ಕೆ ಅನುಗುಣವಾಗಿ ಶುಭ ಮುಹೂರ್ತದಲ್ಲಿ, ನಿಮ್ಮ ನಾಲ್ಕನೇ ಮನೆಯ ಅಧಿಪತಿಯ ಸ್ಥಾನವನ್ನು ಗಮನಿಸಿ ನಡೆಸುವ ಪೂಜೆ. ಕೈಯಲ್ಲಿ ಹಣವಿಲ್ಲದಿದ್ದರೂ ಅಥವಾ ಸಾಲದ ವ್ಯವಸ್ಥೆ ಇಲ್ಲದಿದ್ದರೂ ಸಹ, ಭೂಮಿಯಲ್ಲಿ ಮನೆ ಕಟ್ಟುವ ಬಲವಾದ ಉದ್ದೇಶದಿಂದ ಮಾಡುವ ಸತ್ಸಂಕಲ್ಪವೇ ಶಂಕುಸ್ಥಾಪನೆ.

ಪ್ರತಿ ಭೂಮಿಗೂ ಮೂರು ಪ್ರಮುಖ ದೋಷಗಳಿರುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ:

  • ಸ್ಪರ್ಶ ದೋಷ: ಭೂಮಿಯಲ್ಲಿ ಓಡಾಡಿರುವ ಹಾವುಗಳು, ಜೀವಜಂತುಗಳು, ಅಥವಾ ಅಲ್ಲಿ ಸತ್ತಿರುವ ಪ್ರಾಣಿಗಳಿಂದ ಉಂಟಾಗುವ ದೋಷ.
  • ದೃಷ್ಟಿ ದೋಷ: ಜಾಗವನ್ನು ನೋಡಿದಾಗ ಜನರಿಗೆ ಉಂಟಾಗುವ ನಕಾರಾತ್ಮಕ ಭಾವನೆಗಳು ಅಥವಾ ಕೆಟ್ಟ ದೃಷ್ಟಿಯಿಂದ ಬರುವ ದೋಷ.
  • ಶಲ್ಯಾ ದೋಷ (ಮೃತ್ಯು ದೋಷ): ಭೂಮಿಯಲ್ಲಿ ಹೂತಿರುವ ಮೃತ ದೇಹಗಳು ಅಥವಾ ಯಾವುದಾದರೂ ಅಶುಭ ವಸ್ತುಗಳಿಂದ ಉಂಟಾಗುವ ದೋಷ. ಅನೇಕ ಜನರು ಸೈಟ್ ಅಥವಾ ಮನೆಯನ್ನು ಕೊಂಡುಕೊಂಡು ನಂತರ ಮಾರಾಟ ಮಾಡುವುದು ಅಥವಾ ಲೋನ್ ಕಟ್ಟಲಾಗದೆ ಹಿಂತಿರುಗಿಸುವುದು ಈ ದೋಷಗಳ ಪರಿಣಾಮವಾಗಿರಬಹುದು.

ಈ ಮೂರು ದೋಷಗಳನ್ನು ನಿವಾರಿಸಲು ಶಂಕುಸ್ಥಾಪನೆ ಅತ್ಯಗತ್ಯ. ಇದನ್ನು ಈಶಾನ್ಯ ದಿಕ್ಕಿನಲ್ಲಿ ಮಾಡಲಾಗುತ್ತದೆ. ಶಂಕುಸ್ಥಾಪನೆಯ ಸಮಯದಲ್ಲಿ, ಬ್ರಾಹ್ಮೀ ಮುಹೂರ್ತದಲ್ಲಿ ಬಿಲ್ವ, ಅತ್ತಿ ಅಥವಾ ತುಳಸಿಯಂತಹ ಸಣ್ಣ ಗಿಡವನ್ನು ನೆಡಲಾಗುತ್ತದೆ. ನಿರ್ಮಾಣದ ಸಮಯದಲ್ಲಿ ಈ ಗಿಡವನ್ನು ತೆಗೆದು ಸುರಕ್ಷಿತ ಸ್ಥಳಕ್ಕೆ ಅಥವಾ ದೇವಸ್ಥಾನಕ್ಕೆ ಸ್ಥಳಾಂತರಿಸಬಹುದು, ಅಥವಾ ಮಡಕೆಯಲ್ಲಿಟ್ಟು ಪೋಷಿಸಬಹುದು. ನವಗ್ರಹ ದೋಷ ನಿವಾರಣೆ ಮತ್ತು ವಾಸ್ತು ಪೂಜೆಗಳನ್ನು ಶಂಕುಸ್ಥಾಪನೆಯೊಂದಿಗೆ ಮಾಡುವುದರಿಂದ ಭೂಶುದ್ಧಿ ಆಗುತ್ತದೆ. ಗಂಗಾಜಲ ಮತ್ತು ಪಂಚಗವ್ಯಗಳನ್ನು ಭೂಮಿಯ ಮೇಲೆ ಸಿಂಪಡಿಸುವುದರಿಂದ ಭೂಮಿಯ ಎಲ್ಲಾ ದೋಷಗಳು ನಿವಾರಣೆಯಾಗಿ ಮನೆ ಕಟ್ಟಿಕೊಳ್ಳಲು ಸುಗಮ ವಾತಾವರಣ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಇತ್ತೀಚಿನ ದಿನಗಳಲ್ಲಿ, ಕಲ್ಲಹಳ್ಳಿಯ ಭೂವರಾಹ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಇಟ್ಟಿಗೆ ಅಥವಾ ಮಣ್ಣನ್ನು ತಂದು ನಮ್ಮ ಭೂಮಿಗೆ ಹಾಕುವುದರಿಂದಲೂ ಭೂಮಿಗೆ ಬಲ ಬರುತ್ತದೆ ಎಂಬ ನಂಬಿಕೆಯಿದೆ. ಗೌತಮ ಮಹರ್ಷಿಗಳು ಸ್ಥಾಪಿಸಿದ ಆ ಜಾಗದ ಮಣ್ಣು ಮನೆ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ. ತಮ್ಮದೇ ಆದ ಸೈಟ್ ಇದ್ದರೂ ಕೂಡ, ಅದರ ಕಡೆಗೆ ಗಮನ ಹರಿಸದೆ ಇರುವುದು ಅಥವಾ ಸೈಟ್ ಅನ್ನು ನೋಡದಿರುವುದು ಆಸ್ತಿಯು ವಂಶಪಾರಂಪರ್ಯವಾಗಿ ಬರದಿರಲು ಕಾರಣವಾಗಬಹುದು.

ಹೀಗಾಗಿ, ಶಂಕುಸ್ಥಾಪನೆಯು ಕೇವಲ ಒಂದು ಸಂಪ್ರದಾಯವಲ್ಲದೆ, ಭೂಮಿಯ ಶುದ್ಧೀಕರಣ, ದೋಷ ನಿವಾರಣೆ ಮತ್ತು ಭವಿಷ್ಯದ ಪೀಳಿಗೆಗೆ ಆಸ್ತಿಯನ್ನು ಸುಭದ್ರವಾಗಿರಿಸುವ ಒಂದು ಆಳವಾದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದು ನಂಬಿಕೆಯ ಆಧಾರದ ಮೇಲೆ ನಡೆಯುವ ಒಂದು ಸತ್ಕಾರ್ಯವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:57 am, Tue, 23 December 25

Source link

Lokayukta Raid: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ, ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಅಧಿಕಾರಿಗಳು – Kannada News | Lokayukta Raids Across Karnataka: Anti Corruption Sleuths Conduct Early Morning Operations in Multiple Districts

ಬೆಂಗಳೂರು, ಡಿಸೆಂಬರ್ 23: ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಮತ್ತು ರಾಯಚೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಈ ದಾಳಿ ನಡೆದಿದೆ. ಭ್ರಷ್ಟ ಅಧಿಕಾರಿಗಳ ಬಂಗಲೆಗಳು, ಮನೆಗಳು ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆ ಜಿ.ಪಂ. ಯೋಜನಾ ನಿರ್ದೇಶಕರು (DRDA) ಹಾಗೂ ಅಧಿಕಾರಿ ಆಗಿರುವ ಶ್ಯಾಂ ಸುಂದರ್ ಕಾಂಬಳೆ ಅವರ ಬಾಗಲಕೋಟೆ ಮತ್ತು ಗದಗ ಜಿಲ್ಲೆಯ ನರಗುಂದದ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. ಇದೇ ಜಿಲ್ಲೆಯ ಬಾಗೇವಾಡಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಪ್ಪ ಅವರ ಮನೆಯ ಮೇಲೆಯೂ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮುಖ್ಯಾಕಾರ್ಯನಿರ್ವಹಣಾ ಅಧಿಕಾರಿ ಮಾರುತಿ ಯಶವಂತ ಮಾಳವಿ ಅವರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಯಿತು. ರಾಯಚೂರು ಜಿಲ್ಲೆಯಲ್ಲಿ ನಿವೃತ್ತ ಸಹಾಯಕ ಇಂಜಿನಿಯರ್ ವಿಜಯಲಕ್ಷ್ಮೀ ಅವರ ಶ್ರೀ ರೇಣುಕಾ ನಿಲಯದ ಮನೆಯಲ್ಲಿ ಪರಿಶೀಲನೆ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ನಟನ ಮಾಸ್ಟರ್​ ಪ್ಲ್ಯಾನ್​​ಗೆ ಶಾಕ್ ಆದ ಇಡೀ ಮನೆ; ರಾಶಿಕಾ ನಾಮಿನೇಟ್ – Kannada News | Bigg Boss Kannada 12: Gilli Nata’s Master Plan Shocks Rashika in Nomination

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ (Gilli Nata) ಅವರು ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಅವರು ಎಲ್ಲರನ್ನು ನಗಿಸುವುದರ ಜೊತೆಗೆ ಒಂದಷ್ಟು ಮಾಸ್ಟರ್ ಪ್ಲ್ಯಾನ್​​ಗಳನ್ನು ಮಾಡುತ್ತಿದ್ದಾರೆ. ಈ ಪ್ಲ್ಯಾನ್​​ಗಳು ಅನೇಕರಿಗೆ ಅಚ್ಚರಿ ತರಿಸುತ್ತಿವೆ. ಈ ವಾರದ ನಾಮಿನೇಷನ್ ಟಾಸ್​ಕ್​ನಲ್ಲಿಯೂ ಅದೇ ರೀತಿ ಆಗಿದೆ. ಅವರ ಮಾಸ್ಟರ್ ಪ್ಲ್ಯಾನ್​​ಗೆ ರಾಶಿಕಾ ಅವರು ನಾಮಿನೇಟ್ ಆದರು.

ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಇಬ್ಬರನ್ನು ಮಾತ್ರ ನಾಮಿನೇಟ್ ಮಾಡಲು ಅವಕಾಶ ಇರುತ್ತದೆ. ಆದರೆ, ಈ ಬಾರಿ ಬಿಗ್ ಬಾಸ್ ಹೊಸ ರೀತಿಯ ಅವಕಾಶ ನೀಡಿದರು. ಎಲ್ಲಾ ಸ್ಪರ್ಧಿಗಳು ಎಷ್ಟು ಜನರನ್ನು ಬೇಕಿದ್ದರೂ ನಾಮಿನೇಟ್ ಮಾಡಬಹುದಿತ್ತು. ಇಲ್ಲಿ ಬಿಗ್ ಬಾಸ್ ಒಂದು ಅವಕಾಶ ಕೂಡ ನೀಡಿದರು.

ಪ್ರತಿ ಸ್ಪರ್ಧಿ ಕನ್​​ಫೆಷನ್ ರೂಂಗೆ ಹೋಗಬೇಕು. ಅಲ್ಲಿ ಹೋದ ಬಳಿಕ ಉಳಿದ ಸ್ಪರ್ಧಿಗಳು ನಾಮಿನೇಟ್ ಮಾಡಬೇಕು. ಎಷ್ಟು ಮಂದಿ ನಾಮಿನೇಟ್ ಮಾಡಿದ್ದಾರೆ ಎಂದು ಬಿಗ್ ಬಾಸ್ ಹೇಳುತ್ತಾರೆ. ಅದು ಯಾರು ಎಂಬದನ್ನು ಸರಿಯಾಗಿ ಊಹಿಸಬೇಕು. ರಾಶಿಕಾ ಊಹೆಯನ್ನು ಗಿಲ್ಲಿ ನಟ ಅವರು ತಪ್ಪು ಮಾಡಿದ್ದಾರೆ.

ಹಲವು ಬಾರಿ ರಾಶಿಕಾ ಅವರನ್ನು ಗಿಲ್ಲಿ ನಾಮಿನೇಟ್ ಮಾಡಿದ್ದು ಇದೆ. ಆದರೆ, ಈ ವಾರ ಗಿಲ್ಲಿ ಅವರು ರಾಶಿಕಾನ ನಾಮಿನೇಟ್ ಮಾಡಿಯೇ ಇಲ್ಲ. ರಾಶಿಕಾ ಲೆಕ್ಕಾಚಾರ ತಪ್ಪಾಗಿದ್ದು ಇಲ್ಲೇ. ಅವರು ಗಿಲ್ಲಿ ಹೆಸರನ್ನು ಕೂಡ ತೆಗೆದುಕೊಂಡರು. ಆದರೆ, ಗಿಲ್ಲಿ ಹೆಸರನ್ನು ತಪ್ಪಾಗಿ ಊಹಿಸಿದ್ದರು. ಹೀಗಾಗಿ ರಾಶಿಕಾ ನಾಮಿನೇಟ್ ಆಗಿದ್ದಾರೆ. ಆ ಬಳಿಕ ಗಿಲ್ಲಿ ಅವರು ನಿಮ್ಮ ಹೆಸರು ತೆಗೆದುಕೊಂಡಿಲ್ಲ ಎಂಬುದನ್ನು ಅನೇಕರು ಹೇಳಿದರು. ಇದನ್ನು ಕೇಳಿ ರಾಶಿಕಾ ಶಾಕ್ ಆದರು.

ಇದನ್ನೂ ಓದಿ: ಗಿಲ್ಲಿ ನಟಿಸಿದ್ರೂ ‘ಡೆವಿಲ್’ ಟ್ರೇಲರ್​​ನ ಬಿಗ್ ಬಾಸ್​​ನಲ್ಲಿ ಏಕೆ ಹಾಕಿಲ್ಲ? ಬೇರೆಯದೇ ಕಾರಣ ಕೊಟ್ಟ ರಜತ್

ಈ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್ ಇರಲಿದೆ. ಸ್ಪರ್ಧಿಗಳ ಮನೆ ಸದಸ್ಯರು ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ – Kannada News | Gilli Nata Stun After Rashika Mother Sharp Talk In Bigg Boss Kannada

ಈ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್. ಸೂರಜ್ ಹಾಗೂ ರಾಶಿಕಾ ಅವರ ಕುಟುಂಬದವರು ಮೊದಲು ದಿನವೇ ಭಾಗಿ ಆಗಿದ್ದಾರೆ. ಇದು ಸಾಕಷ್ಟು ಭಾವುಕ ಕ್ಷಣಕ್ಕೆ ಸಾಕ್ಷಿ ಆಯಿತು. ರಾಶಿಕಾ ಅವರು ಕುಟುಂಬದವರನ್ನು ನೋಡಿ ಕಣ್ಣಿರು ಹಾಕಿದರು. ಸೂರಜ್ ಅವರು ತಾಯಿಗೋಸ್ಕರ ಅಡುಗೆ ಮಾಡಿ ತೆಗೆದುಕೊಂಡು ಹೋದರು. ಆ ಬಗ್ಗೆ ಇಲ್ಲಿದೆ ವಿವರ. ಗಿಲ್ಲಿ ನಟ ಹಾಗೂ ಕಾವ್ಯಾ ಕುಟುಂಬ ಬರೋದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ರೈಲಿನ ಶೌಚಾಲಯದ ಪಕ್ಕ ಕುಳಿತು ಕುಸ್ತಿ ಚಾಂಪಿಯನ್​ಶಿಪ್​ಗೆ ತೆರಳಿದ ಕ್ರೀಡಾ ಪಟುಗಳು – Kannada News | Odisha Wrestlers Allege Poor Travel Conditions En Route to Championship

ಒಡಿಶಾ, ಡಿಸೆಂಬರ್ 23: ಒಡಿಶಾದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. 69ನೇ ರಾಷ್ಟ್ರೀಯ ಶಾಲಾ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಉತ್ತರ ಪ್ರದೇಶಕ್ಕೆ ಪ್ರಯಾಣಿಸಬೇಕಿದ್ದ ಒಡಿಶಾದ 18 ಯುವ ಕುಸ್ತಿಪಟುಗಳು ಟಾಯ್ಲೆಟ್ ಪಕ್ಕ ಕುಳಿತು ಪ್ರಯಾಣಿಸಿದ್ದಾರೆ. ರಾಜ್ಯ ಶಾಲಾ ಮತ್ತು ಸಾಮೂಹಿಕ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ಲೋಪಗಳಿಂದಾಗಿ ಟಾಯ್ಲೆಟ್ ಪಕ್ಕ ಕುಳಿತು ಪ್ರಯಾಣಿಸುವಂತಾಯಿತು. 10 ವಿದ್ಯಾರ್ಥಿಗಳು ಮತ್ತು ಎಂಟು ವಿದ್ಯಾರ್ಥಿನಿಯರನ್ನು ಒಳಗೊಂಡ ತಂಡವನ್ನು ರೈಲ್ವೆ ಟಿಕೆಟ್‌ಗಳಿಲ್ಲದೆ ರಾಷ್ಟ್ರೀಯ ಮಟ್ಟದ ಪಂದ್ಯಕ್ಕೆ ಕಳುಹಿಸಲಾಗಿದ್ದು, ಅವರನ್ನು ಸಾಮಾನ್ಯ ವಿಭಾಗಗಳಲ್ಲಿ ಪ್ರಯಾಣಿಸುವಂತೆ ಒತ್ತಾಯಿಸಲಾಗಿದೆ.

ಆರೋಪಗಳ ಪ್ರಕಾರ, ಚಳಿಗಾಲದ ತೀವ್ರ ಚಳಿಯಲ್ಲಿ ಕ್ರೀಡಾಪಟುಗಳನ್ನು ರೈಲು ಶೌಚಾಲಯಗಳ ಬಳಿ ಕೂರಿಸಲಾಗಿದೆ. ಇದು ಅವರ ಸುರಕ್ಷತೆ, ಆರೋಗ್ಯದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಕೇವಲ ಹೋಗುವಾಗ ಮಾತ್ರವಲ್ಲ ಅಲ್ಲಿಂದ ಬರುವಾಗಲೂ ಇದೇ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಪ್ರಯಾಣದ ಎರಡೂ ಹಂತಗಳಿಗೆ ಯಾವುದೇ ದೃಢೀಕೃತ ಟಿಕೆಟ್‌ಗಳನ್ನು ವ್ಯವಸ್ಥೆ ಮಾಡಲಾಗಿಲ್ಲ. ರೈಲು ಶೌಚಾಲಯಗಳ ಬಳಿ ಕುಳಿತಿರುವ ಕ್ರೀಡಾಪಟುಗಳನ್ನು ತೋರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾಂಗ್ರೆಸ್ ಹೈಕಮಾಂಡೇ ‘ಕೈ’ ಚೆಲ್ಲಿ ಕೂತಿತಾ? ಮಲ್ಲಿಕಾರ್ಜುನ ಖರ್ಗೆ ‘ಲೋಕಲ್ ಸೂತ್ರ’ವನ್ನು ಸುತಾರಂ ಒಪ್ಪದ ಸಿಎಂ ಸಿದ್ದರಾಮಯ್ಯ! – Kannada News | Congress High Command Sidelined? CM Siddaramaiah Firmly Rejects Mallikarjun Kharge’s Local Formula

ಬೆಂಗಳೂರು, ಡಿಸೆಂಬರ್ 23: ಕರ್ನಾಟಕ ಕಾಂಗ್ರೆಸ್ (Congress) ನಾಯಕತ್ವ ಬದಲಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್​​ ನಾಯಕರಲ್ಲಿ ಯಾರನ್ನೇ ಕೇಳಿದರೂ ಎಲ್ಲರ ಬೆರಳು ಸೀದಾ ಹೈಕಮಾಂಡ್ ಕಡೆಗೆ ತಿರುಗುತ್ತದೆ. ಆದರೆ ಗೊಂದಲ ಬಗೆಹರಿಸಿಬೇಕಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಅರ್ಥಾತ್ ಹೈಕಮಾಂಡ್​​ನ ಮುಖ್ಯ ನಾಯಕನೇ ‘ಗೊಂದಲ ಸೃಷ್ಟಿ ಮಾಡಿದ್ದು ಹೈಕಮಾಂಡ್ ಅಲ್ಲ. ಅಲ್ಲಿ ಸ್ಥಳೀಯವಾಗಿ ಏನು ಆಗಿದೆಯೋ ಅಲ್ಲೇ ಸೆಟಲ್ ಮಾಡಿಕೊಳ್ಳಿ’ ಎಂದಿದ್ದಾರೆ.

ಆದರೆ ಖರ್ಗೆ ಅವರ ಲೋಕಲ್ ಸೂತ್ರವನ್ನು ಸಿದ್ದರಾಮಯ್ಯ ಸುತರಾಂ ಒಪ್ಪುವ ಹಾಗೆ ಕಾಣಿಸುತ್ತಿಲ್ಲ. ಡಿಕೆ ಶಿವಕುಮಾರ್ ನಿವಾಸಕ್ಕೆ ಬ್ರೇಕ್​ಫಾಸ್ಟ್ ಮೀಟಿಂಗ್​ಗೆ ಬಂದಂದಿನಿಂದ ಅವರು ಹೈಕಮಾಂಡ್ ನಾಯಕರು, ರಾಹುಲ್ ಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ಬದ್ಧ ಎಂದು ಹೇಳುತ್ತಲೇ ಇದ್ದಾರೆ.

ಅದಾದ ಬಳಿಕ ನಾಯಕತ್ವ ಬದಲಾವಣೆ ವಿಚಾರದಲ್ಲಿ ಏನೆಲ್ಲ ಗೊಂದಲ ಎದ್ದಿದೆ. ಸಿದ್ದರಾಮಯ್ಯ ಬಣ ಹಾಗೂ ಡಿಕೆ ಬಣದ ಆಡಿದ ಮಾತುಗಳೇನು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಹೈಕಮಾಂಡ್​ನ ಭಾಗವೇ ಆಗಿರುವ ಮಲ್ಲಿಕಾರ್ಜುನ ಖರ್ಗೆ ಭಾನುವಾರ, ನೀವು ಸೃಷ್ಟಿಮಾಡಿರುವ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ ಎಂದಿದ್ದಾರೆ. ಆದರೆ, ಸಿದ್ದರಾಮಯ್ಯ ಮತ್ತೆ ಮಾತನಾಡಿ, ರಾಹುಲ್ ಗಾಂಧಿಯೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮತ್ತೊಮ್ಮೆ ದಿಲ್ಲಿಗೆ ತಮ್ಮ ಚೆಂಡು ಎಸೆದಿದ್ದಾರೆ.

ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಹಿಂದೆ ದೆಹಲಿಗೆ ಹೋಗಿದ್ದಾಗ, ‘ನಾನು ಪಕ್ಷ ಕಟ್ಟಿದ್ದೇನೆ, ಬ್ಲ್ಯಾಕ್ ಮೇಲ್ ಮಾಡಲ್ಲ’ ಎಂದಿದ್ದರು. ಇದಕ್ಕೆ ಸೋಮವಾರ ಪ್ರತಿಕ್ರಿಯೆ ನೀಡಿದ್ದ ಖರ್ಗೆ, ನಾನೇ ಪಕ್ಷ ಕಟ್ಟಿದೆ, ಒಬ್ಬರಿಂದ ಪಕ್ಷ ಎಂಬುದನ್ನು ಬಿಡಬೇಕು ಎಂದಿದ್ದಾರೆ. ಖರ್ಗೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ. ಖರ್ಗೆ ಅವರು ಹೇಳಿದ್ದು ‘ಎಲ್ಲರೂ ಒಪ್ಪಬೇಕಿರುವ ವಿಚಾರ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಣ್ಣರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದು ನಾನೇ ಎಂದ ಡಿಕೆ: ಸಿದ್ದರಾಮಯ್ಯ ಕೌಂಟರ್

ಡಿಸಿಎಂ ಡಿಕೆ ಶಿವಕುಮಾರ್ ಶನಿವಾರ ರಾತ್ರಿ ಸಿಎಂ ಆಪ್ತ ಕೆಎನ್ ರಾಜಣ್ಣ ನಿವಾಸಕ್ಕೆ ಹೋಗಿ ಭೇಟಿಯಾಗಿದ್ದರು. ನಂತರ ಸೋಮವಾರ ಡಿಕೆ ಶಿವಕುಮಾರ್ ಇದ್ದ ಕಡೆಗೇ ಬಂದು ರಾಜಣ್ಣ ಭೇಟಿಯಾಗಿದ್ದಾರೆ. ಈ ಮಧ್ಯೆ, ಸೋಮವಾರ ಮಾತನಾಡಿದ ಡಿಕೆ ಶಿವಕುಮಾರ್, ರಾಜಣ್ಣಗೆ ಸಿದ್ದರಾಮಯ್ಯಗಿಂತ ನಾನೇ ಆಪ್ತ. ಅವರನ್ನ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದೇ ನಾನು ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ಸಿದ್ದರಾಮಯ್ಯ, ಅಧ್ಯಕ್ಷ ಮಾಡಿದ್ದು ಅಂದಿನ ಸಿಎಂ ಎಸ್​​ಎಂ ಕೃಷ್ಣ ಎಂದಿದ್ದಾರೆ.

ಇಷ್ಟೇ ಅಲ್ಲದೆ ಸಂಕ್ರಾಂತಿ ಕ್ರಾಂತಿ ವಿಚಾರವಾಗಿಯೂ ಮಾತನಾಡಿರುವ ಸಿಎಂ, ಅದೆಲ್ಲ ಮುಗಿದು ಹೋಗಿದೆ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಪುನರುಚ್ಚರಿಸಿದ್ದಾರೆ. ಆಡಳಿತ ಪಕ್ಷದ ಈ ಗೊಂದಲವೇ ವಿಪಕ್ಷ ನಾಯಕರಿಗೆ ಅಸ್ತ್ರವಾಗಿದೆ.

ಇದನ್ನೂ ಓದಿ: ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ

ಮಲ್ಲಿಕಾರ್ಜುನ ಖರ್ಗೆ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನಾಯಕತ್ವ ಬದಲಾವಣೆಯ ಗೊಂದಲ ರಾಜ್ಯ ನಾಯಕರ ಸೃಷ್ಟಿ ಎಂದಿದ್ದಾರೆ. ಅಂದರೆ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಂದಲೇ ಗೊಂದಲ ಸೃಷ್ಟಿಯಾಗಿದೆ ಎಂಬುದು ಅರ್ಥ. ಆದರೆ ಈ ಗೊಂದಲ ಬಗೆಹರಿಸಲು ಹೈಕಮಾಂಡ್ ಯಾಕೆ ಇನ್ನೂ ಮುಂದಾಗುತ್ತಿಲ್ಲ ಎಂಬ ಅನುಮಾನ ಹುಟ್ಟಿದೆ. ಸಿಎಂ ಸ್ಥಾನದ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೇ ಕೂತು ಬಗೆಹರಿಸಿಕೊಳ್ಳುವ ಪರಿಸ್ಥಿತಿ ಇದೆಯಾ? ಅಲ್ಲಿಗೆ, ಅತ್ತ ಬದಲಾವಣೆಯೂ ಇಲ್ಲ, ಇತ್ತ ಪರಿಹಾರವೂ ಇಲ್ಲ ಎಂಬಂತಾಗಿದೆ. ಗೊಂದಲ ಬಗೆಹರಿಸಬೇಕಿದ್ದ ಹೈಕಮಾಂಡೇ ತಾವು ಆಟಕ್ಕಿಲ್ಲ ಎಂಬಂತೆ ವರ್ತಿಸುತ್ತಿರುವುದು ಸಮಸ್ಯೆಯ ಗಂಭೀರತೆಯನ್ನು ಹೆಚ್ಚಿಸುವ ಸುಳಿವು ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link