All posts by nagaraj11081993

National Best Friend Day 2026: ರಕ್ತ ಸಂಬಂಧಕ್ಕೂ ಮಿಗಿಲಾದ ಪವಿತ್ರ ಬಂಧವೇ ಸ್ನೇಹ – Kannada News

ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನImage Credit source: Pinterest

ಸ್ನೇಹ (Friendship) ಸಂಬಂಧ ಎನ್ನುವಂತಹದ್ದು, ಸುಂದರವಾದ, ಪವಿತ್ರವಾದ ಹಾಗೂ ಪರಿಶುದ್ಧವಾದ ಬಂಧ. ಈ ಸ್ನೇಹ ಗಡಿ, ಭಾಷೆ, ಲಿಂಗ, ಜಾತಿ, ಧರ್ಮ ಇವೆಲ್ಲವನ್ನೂ ಮೀರಿ ನಿಲ್ಲುವಂತಹದ್ದಾಗಿದೆ. ಪ್ರತಿಯೊಬ್ಬರಿಗೂ ಸ್ನೇಹಿತರಿರುತ್ತಾರೆ. ಇದರಲ್ಲಿ ಕೆಲವು ಮಂದಿ ಪ್ರಾಣ ಸ್ನೇಹಿತರಾಗಿರುತ್ತಾರೆ. ಇವರು ನಮ್ಮ ಇಡೀ ಜೀವನವನ್ನು ಸುಂದರವಾಗಿಸಬಲ್ಲರು. ಇವರು ನಮ್ಮ ಕಷ್ಟಗಳಿಗೆ ಹೆಗಲಾಗಿ ನಿಲ್ಲುವರು, ಜೀವನಕ್ಕೆ ಧೈರ್ಯವಾಗಿ ನಿಲ್ಲುವರು. ಜೀವಕ್ಕೆ ಜೀವವಾಗಿರುವ ಪ್ರಾಣ ಸ್ನೇಹಿತರಿಗೆ ಥ್ಯಾಂಕ್ಸ್‌ ಹೇಳಲು ಹಾಗೂ ಸ್ನೇಹಿತರು, ಸ್ನೇಹದ ಮಹತ್ವವನ್ನು ತಿಳಿಸಲು ಸ್ನೇಹವೆಂಬ ಅಮೂಲ್ಯ ಸಂಬಂಧವನ್ನು ಗೌರವಿಸಲು ಪ್ರತಿವರ್ಷ ಜೂನ್‌ 8 ರಂದು ರಾಷ್ಟೀಯ ಬೆಸ್ಟ್‌ ಫ್ರೆಂಡ್‌ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನದ ಇತಿಹಾಸವೇನು?

ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನದ ಆಚರಣೆಯು ಅಮೆರಿಕದಲ್ಲಿ ಹುಟ್ಟಿಕೊಂಡಿತು. ವರದಿಗಳ ಪ್ರಕಾರ, ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನವು 1935 ರಲ್ಲಿ ಪ್ರಾರಂಭವಾಯಿತು. 1935 ರಲ್ಲಿ, ಅಮೆರಿಕದ ಕಾಂಗ್ರೆಸ್‌ನ ಲೆನೆ ಕ್ಯಾಲ್ವಿನ್ ಎಂಬವರು ಜೂನ್ 8 ಅನ್ನು ರಾಷ್ಟ್ರೀಯ ಸ್ನೇಹಿತರ ದಿನವೆಂದು ಘೋಷಿಸಲು ಪ್ರಸ್ತಾಪಿಸಿದರು. ನಂತರ 1998 ರಲ್ಲಿ, ಯುಎಸ್ ಕಾಂಗ್ರೆಸ್ ಜೂನ್ 8 ಅನ್ನು ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನವೆಂದು ಗುರುತಿಸಿತು. ಕ್ರಮೇಣ, ಈ ಸಂಪ್ರದಾಯವನ್ನು ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಆಚರಿಸಲು ಪ್ರಾರಂಭಿಸಿತು. ಇಂದು ಭಾರತ ಸೇರಿದಂತೆ ಅನೇಕ ದೇಶಗಳು ರಾಷ್ಟ್ರೀಯ ಬೆಸ್ಟ್‌ ಫ್ರೆಂಡ್‌ ದಿನವನ್ನು ಆಚರಿಸುತ್ತಿವೆ.

ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನದ ಮಹತ್ವವೇನು?

  • ಈ ದಿನವು ಸ್ನೇಹಿತರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು,  ಸ್ನೇಹದ ಅಮೂಲ್ಯ ಬಂಧ ಮತ್ತು ಜೀವನದಲ್ಲಿ ಸ್ನೇಹಿತರ ಮಹತ್ವವನ್ನು ಗೌರವಿಸಲು ಒಂದು ವಿಶೇಷ ಅವಕಾಶವಾಗಿದೆ.
  • ಸ್ನೇಹದ ಮಹತ್ವವನ್ನು ತಿಳಿಸಲು ಸ್ನೇಹವೆಂಬ ಅಮೂಲ್ಯ ಸಂಬಂಧವನ್ನು ಗೌರವಿಸಲು ಪ್ರತಿವರ್ಷ ಜೂನ್‌ 8 ರಂದು ರಾಷ್ಟೀಯ ಬೆಸ್ಟ್‌ ಫ್ರೆಂಡ್‌ ದಿನವನ್ನು ಆಚರಿಸಲಾಗುತ್ತದೆ.
  • ಒಟ್ಟಾರೆಯಾಗಿ ಸ್ನೇಹಿತರೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ಮತ್ತು ಸುಂದರ ನೆನಪುಗಳನ್ನು ಸೃಷ್ಟಿಸಲು ಬೆಸ್ಟ್‌ಫ್ರೆಂಡ್‌ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಸಾಗರಗಳ ಪಾತ್ರ ಅಪಾರ

ಆತ್ಮೀಯ ಸ್ನೇಹಿತರ ದಿನ ನಿಮ್ಮ ಬೆಸ್ಟ್‌ಫ್ರೆಂಡ್‌ಗೆ ಈ ರೀತಿ ಶುಭಾಶಯ ಕೋರಿ:

  • ನಿನ್ನ ಅದ್ಭುತ ಸ್ನೇಹಕ್ಕೆ ನಾನೆಂದು ಚಿರಋಣಿ. ನನ್ನ ನೋವು-ನಲಿವಿನಲ್ಲಿ ಜೊತೆಯಾಗಿ ನಿಂತ ನನ್ನ ಪ್ರಾಣ ಸ್ನೇಹಿತನಿಗೆ ಹ್ಯಾಪಿ ಬೆಸ್ಟ್‌ಫ್ರೆಂಡ್‌ ಡೇ.
  • ನಿಜವಾದ ಸ್ನೇಹಕ್ಕೆ ಅರ್ಥ ನೀನು. ನನ್ನ ನೋವು ನಲಿವುಗಳಲ್ಲಿ ಜೊತೆಯಾಗಿ ನಿಂತ ನನ್ನ ಪ್ರಾಣ ಸ್ನೇಹಿತನಿಗೆ ಆತ್ಮೀಯ ಸ್ನೇಹಿತರ ದಿನದ ಹಾರ್ದಿಕ ಶುಭಾಶಯಗಳು.
  • ನನ್ನ ಜೀವನದ ಸಂತೋಷದ ಕ್ಷಣದಲ್ಲಿ ಮಾತ್ರವಲ್ಲ ನನ್ನ ನೋವು, ಕಷ್ಟದಲ್ಲೂ ನನ್ನ ಬೆನ್ನೆಲುವಾಗಿ ನಿಂತ ನಿನಗೆ ಅನಂತ ಅನಂತ ಧನ್ಯವಾದಗಳು.
  • ನಿನಗೆ ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವಿದೆ. ನಮ್ಮ ಈ ಸುಂದರ ಸ್ನೇಹ ಶಾಶ್ವತವಾಗಿ ಉಳಿಯಲಿ.
  • ನ್ನ ಖುಷಿಯಲ್ಲಿ ಜೊತೆಯಾಗಿ ನಿಲ್ಲುವ, ದುಃಖದಲ್ಲಿದ್ದಾಗ ನನ್ನನ್ನು ಸಂತೈಸಿ ಶಕ್ತಿ ತುಂಬುವ ನನ್ನ ಪ್ರಾಣ ಸ್ನೇಹಿತನಿಗೆ ಬೆಸ್ಟ್‌ ಫ್ರೆಂಡ್ಸ್‌ ದಿನದ ಶುಭಾಶಯಗಳು.
  • ಹ್ಯಾಪಿ ಬೆಸ್ಟ್‌ಫ್ರೆಂಡ್ಸ್‌ ಡೇ ಗೆಳೆಯ, ನನ್ನ ಜೀವನದ ಅತಿ ಅಮೂಲ್ಯವಾದ ಉಡುಗೊರೆ ನೀನು. ನಮ್ಮ ಈ ಸ್ನೇಹ ಸದಾ ಕಾಲ ಹೀಗೆಯೇ ಇರಲಿ.
  • ನಾನು ನನ್ನ ಜೀವನದಲ್ಲಿ  ಹೊಂದಿರುವ ಅತ್ಯಂತ ಅಮೂಲ್ಯವಾದ ವಿಷಯವೆಂದರೆ ನಿನ್ನ ಸ್ನೇಹ. ನಾನು ಅದನ್ನು ಶಾಶ್ವತವಾಗಿ ಪಡೆದುಕೊಳ್ಳಲು ಬಯಸುತ್ತೇನೆ.
  • ನಗುವುದು ಸಹ ಕಷ್ಟವಾದಾಗ ನೀನು ನನ್ನನ್ನ ನಗಿಸಿದೆ ಅಳುವೇ ಜೀವನವಾದಾಗ ನೀ ನನ್ನ ಕಣ್ಣೊರಿಸಿದೆ ಸದಾ ನನ್ನ ಜೊತೆ ನಿಂತಿದ್ದಕ್ಕಾಗಿ ನಾನೆಂದಿಗೂ ನಿನಗೆ ಋಣಿಯಾಗಿರುತ್ತೇನೆ.  ಎಲ್ಲಾ ಜನ್ಮದಲ್ಲಿಯೂ ನನಗೆ ಸ್ನೇಹಿತನಾಗಿ ನೀನೇ ಬೇಕು.  ಹ್ಯಾಪಿ ಬೆಸ್ಟ್‌ಫ್ರೆಂಡ್ಸ್‌ ಡೇ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳಾ ಟಿ20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಬಹುನಿರೀಕ್ಷಿತ ಮಹಿಳಾ ಟಿ20 ವಿಶ್ವಕಪ್​ ಜೂನ್ 12 ರಿಂದ ಶುರುವಾಗಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯಲಿವೆ. ಈ ಹನ್ನೆರಡು ತಂಡಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಗ್ರೂಪ್​ಗಳಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ.

  • ಗ್ರೂಪ್ A: ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ್, ಸೌತ್ ಆಫ್ರಿಕಾ, ಬಾಂಗ್ಲಾದೇಶ್, ನೆದರ್ಲ್ಯಾಂಡ್ಸ್.
  • ಗ್ರೂಪ್ B: ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಝಿಲೆಂಡ್, ಶ್ರೀಲಂಕಾ, ಸ್ಕಾಟ್ಲೆಂಡ್, ಐರ್ಲೆಂಡ್.

ಇದನ್ನೂ ಓದಿ: ನಾನು RCB ತಂಡದ ಕಟ್ಟಾ ಅಭಿಮಾನಿ: ವೈಭವ್ ಅಚ್ಚರಿಯ ಹೇಳಿಕೆ!

ಭಾರತ ತಂಡವು ಗ್ರೂಪ್​ A ನಲ್ಲಿರುವ ಕಾರಣ ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ್, ಸೌತ್ ಆಫ್ರಿಕಾ, ಬಾಂಗ್ಲಾದೇಶ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳನ್ನು ಎದುರಿಸಲಿದೆ.

ಮಹಿಳಾ ಟಿ20 ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ:

ದಿನಾಂಕ

ಮುಖಾಮುಖಿ

ಸ್ಥಳ

12-06-2026

ಇಂಗ್ಲೆಂಡ್ vs ಶ್ರೀಲಂಕಾ

ಎಡ್ಜ್‌ಬಾಸ್ಟನ್

13-06-2026

ಸ್ಕಾಟ್ಲೆಂಡ್ vs ಐರ್ಲೆಂಡ್

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಗ್ರೌಂಡ್

13-06-2026

ಆಸ್ಟ್ರೇಲಿಯಾ vs ಸೌತ್ ಆಫ್ರಿಕಾ,

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಗ್ರೌಂಡ್

13-06-2026

ವೆಸ್ಟ್ ಇಂಡೀಸ್ vs ನ್ಯೂಝಿಲೆಂಡ್

ಹ್ಯಾಂಪ್‌ಶೈರ್ ಬೌಲ್

14-06-2026

ಬಾಂಗ್ಲಾದೇಶ್ vs ನೆದರ್ಲ್ಯಾಂಡ್ಸ್

ಎಡ್ಜ್‌ಬಾಸ್ಟನ್

14-06-2026

ಭಾರತ vs. ಪಾಕಿಸ್ತಾನ್

ಎಡ್ಜ್‌ಬಾಸ್ಟನ್

16-06-2026

ನ್ಯೂಝಿಲೆಂಡ್ vs ಶ್ರೀಲಂಕಾ

ಹ್ಯಾಂಪ್‌ಶೈರ್ ಬೌಲ್

16-06-2026

ಇಂಗ್ಲೆಂಡ್ vs ಐರ್ಲೆಂಡ್

ಹ್ಯಾಂಪ್‌ಶೈರ್ ಬೌಲ್

17-06-2026

ಆಸ್ಟ್ರೇಲಿಯಾ vs ಬಾಂಗ್ಲಾದೇಶ್

ಹೆಡಿಂಗ್ಲೆ

17-06-2026

ಭಾರತ vs ನೆದರ್ಲ್ಯಾಂಡ್ಸ್

ಹೆಡಿಂಗ್ಲೆ

17-06-2026

ಸೌತ್ ಆಫ್ರಿಕಾ vs ಪಾಕಿಸ್ತಾನ್

ಎಡ್ಜ್‌ಬಾಸ್ಟನ್

18-06-2026

ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್

ಹೆಡಿಂಗ್ಲೆ

19-06-2026

ನ್ಯೂಝಿಲೆಂಡ್ vs ಐರ್ಲೆಂಡ್

ಹ್ಯಾಂಪ್‌ಶೈರ್ ಬೌಲ್

20-06-2026

ಆಸ್ಟ್ರೇಲಿಯಾ vs ನೆದರ್ಲ್ಯಾಂಡ್ಸ್

ಹ್ಯಾಂಪ್‌ಶೈರ್ ಬೌಲ್

20-06-2026

ಪಾಕಿಸ್ತಾನ್ vs ಬಾಂಗ್ಲಾದೇಶ್

ಹ್ಯಾಂಪ್‌ಶೈರ್ ಬೌಲ್

20-06-2026

ಇಂಗ್ಲೆಂಡ್ vs ಸ್ಕಾಟ್ಲೆಂಡ್

ಹೆಡಿಂಗ್ಲೆ

21-06-2026

ವೆಸ್ಟ್ ಇಂಡೀಸ್ vs ಶ್ರೀಲಂಕಾ

ಬ್ರಿಸ್ಟಲ್ ಕೌಂಟಿ ಗ್ರೌಂಡ್

21-06-2026

ಸೌತ್ ಆಫ್ರಿಕಾ vs ಭಾರತ

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಗ್ರೌಂಡ್

23-06-2026

ನ್ಯೂಝಿಲೆಂಡ್ vs ಸ್ಕಾಟ್ಲೆಂಡ್

ಬ್ರಿಸ್ಟಲ್ ಕೌಂಟಿ ಗ್ರೌಂಡ್

23-06-2026

ಶ್ರೀಲಂಕಾ vs ಐರ್ಲೆಂಡ್

ಬ್ರಿಸ್ಟಲ್ ಕೌಂಟಿ ಗ್ರೌಂಡ್

23-06-2026

ಆಸ್ಟ್ರೇಲಿಯಾ vs. ಪಾಕಿಸ್ತಾನ್

ಹೆಡಿಂಗ್ಲೆ

24-06-2026

ಇಂಗ್ಲೆಂಡ್ vs ವೆಸ್ಟ್ ಇಂಡೀಸ್

ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್

25-06-2026

ಭಾರತ vs ಬಾಂಗ್ಲಾದೇಶ್

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಗ್ರೌಂಡ್

25-06-2026

ಸೌತ್ ಆಫ್ರಿಕಾ vs ನೆದರ್ಲ್ಯಾಂಡ್ಸ್

ಬ್ರಿಸ್ಟಲ್ ಕೌಂಟಿ ಗ್ರೌಂಡ್

26-06-2026

ಶ್ರೀಲಂಕಾ vs ಸ್ಕಾಟ್ಲೆಂಡ್

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಗ್ರೌಂಡ್

27-06-2026

ಪಾಕಿಸ್ತಾನ್ vs ನೆದರ್ಲ್ಯಾಂಡ್ಸ್

ಬ್ರಿಸ್ಟಲ್ ಕೌಂಟಿ ಗ್ರೌಂಡ್

27-06-2026

ವೆಸ್ಟ್ ಇಂಡೀಸ್ vs ಐರ್ಲೆಂಡ್

ಬ್ರಿಸ್ಟಲ್ ಕೌಂಟಿ ಗ್ರೌಂಡ್

27-06-2026

ಇಂಗ್ಲೆಂಡ್ vs ನ್ಯೂಝಿಲೆಂಡ್

ದಿ ಓವಲ್

28-06-2026

ಸೌತ್ ಆಫ್ರಿಕಾ vs ಬಾಂಗ್ಲಾದೇಶ್

ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್

28-06-2026

ಆಸ್ಟ್ರೇಲಿಯಾ vs ಭಾರತ

ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್

30-06-2026

ಸೆಮಿಫೈನಲ್ 1

ದಿ ಓವಲ್

02-07-2026

ಸೆಮಿಫೈನಲ್ 2

ದಿ ಓವಲ್

05-07-2026

ಫೈನಲ್

ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್

Source link

ಪಶ್ಚಿಮ ಬಂಗಾಳ: 4,800 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು, ಗಡಿ ಭದ್ರತೆ ನಮ್ಮ ಆದ್ಯತೆ ಎಂದ ಸಿಎಂ ಸುವೇಂದು – Kannada News

ಕೋಲ್ಕತ್ತಾ, ಜೂನ್ 08: ಬಾಂಗ್ಲಾದೇಶದ 4,800 ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ(Suvendu Adhikari) ಹೇಳಿದ್ದಾರೆ. ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಸುರಕ್ಷಿತಗೊಳಿಸುವುದು ಮತ್ತು ಅಕ್ರಮ ವಲಸೆಯನ್ನು ತಡೆಗಟ್ಟುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ ಎಂದು ಹೇಳಿದ್ದಾರೆ. ಬಿಜೆಪಿಯ ವಿಶೇಷ ತರಬೇತಿ ಶಿಬಿರದ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಗಡಿ ಜಿಲ್ಲೆಗಳ ವಸತಿ ಕೇಂದ್ರಗಳಿಂದ ಈಗಾಗಲೇ ಸುಮಾರು 4,800 ಅಕ್ರಮ ವಲಸಿಗರನ್ನು ಬಾಂಗ್ಲಾದೇಶಕ್ಕೆ ಯಶಸ್ವಿಯಾಗಿ ಗಡೀಪಾರು ಮಾಡಲಾಗಿದ್ದು, ಇನ್ನುಳಿದ 836 ಜನರ ಸ್ವದೇಶಿ ವಾಪಸಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಗಡಿ ಭದ್ರತೆ ಮತ್ತು ಜನಗಣತಿ ಯೋಜನೆಗಳು
ಗಡಿ ರಕ್ಷಣೆಯನ್ನು ಬಲಪಡಿಸುವುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರವು ಇನ್ನೂ ತಡೆಗೋಡೆ ನಿರ್ಮಾಣ ಬಾಕಿ ಇರುವ 556 ಕಿ.ಮೀ ವ್ಯಾಪ್ತಿಯ ಪೈಕಿ 100 ಕಿ.ಮೀ ಭೂಮಿಯನ್ನು ಈಗಾಗಲೇ ಭದ್ರತಾ ಪಡೆಗೆ ಹಸ್ತಾಂತರಿಸಿದೆ. ಈ ಪೈಕಿ ಉತ್ತರ ಬಂಗಾಳದ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಚಿಕನ್ಸ್​ ನೆಕ್ ವಲಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪಾರದರ್ಶಕ ಆಡಳಿತವನ್ನು ತರಲು ಜನಗಣತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಆಗಸ್ಟ್ 1 ರಿಂದ ಆಗಸ್ಟ್ 15 ರವರೆಗೆ ಮನೆ-ಮನೆ ಸಮೀಕ್ಷೆ ನಡೆಯಲಿದೆ. ಮುಂದಿನ ವರ್ಷದ ಫೆಬ್ರವರಿ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಂಡು, ಗಡಿ ವಿಂಗಡಣೆ ಕಾರ್ಯಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.

ಮತ್ತಷ್ಟು ಓದಿ: ಬಂಗಾಳದಲ್ಲಿ ಕೇಸರಿ ಯುಗಾರಂಭ: ಮೇ 9 ರಂದು ಬಿಜೆಪಿ ಸರ್ಕಾರದ ಪಟ್ಟಾಭಿಷೇಕ, ಸಿಎಂ ರೇಸ್‌ನಲ್ಲಿ ಸುವೇಂದು ಅಧಿಕಾರಿ ಮುಂಚೂಣಿ

ಅನ್ನಪೂರ್ಣ ಯೋಜನೆ ಮತ್ತು ಫಲಾನುಭವಿಗಳ ಪರಿಶೀಲನೆ
ಹಿಂದಿನ ಸರ್ಕಾರದ ‘ಲಕ್ಷ್ಮಿರ್ ಭಂಡಾರ್’ ಯೋಜನೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ, ಅರ್ಹ ಮಹಿಳೆಯರ ಸಬಲೀಕರಣಕ್ಕಾಗಿ ತರಲಾದ ‘ಅನ್ನಪೂರ್ಣ ಯೋಜನೆ’ಯಡಿಯಲ್ಲಿ ಪ್ರಸ್ತುತ 50 ಲಕ್ಷ ಮಹಿಳೆಯರು ತಲಾ 3,000 ರೂ.ಗಳ ಆರ್ಥಿಕ ನೆರವನ್ನು ಪಡೆದಿದ್ದಾರೆ. ಯೋಜನೆ ಜಾರಿಯಾದ ಮೊದಲ ದಿನವೇ 28 ಲಕ್ಷಕ್ಕೂ ಹೆಚ್ಚು ಮಹಿಳೆಯರ ಖಾತೆಗೆ ಹಣ ತಲುಪಿದೆ.

ಹಳೆಯ ಯೋಜನೆಯಲ್ಲಿದ್ದ ಅಪಾಯಕಾರಿ ಆರ್ಥಿಕ ಅಕ್ರಮಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಫಲಾನುಭವಿಗಳ ಪಟ್ಟಿಯಲ್ಲಿದ್ದ ಸುಮಾರು 27 ಲಕ್ಷ ಹೆಸರುಗಳು ಮತದಾರರ ಪಟ್ಟಿಯಲ್ಲೇ ಇರಲಿಲ್ಲ ಮತ್ತು ಮಹಿಳೆಯರಿಗಾಗಿ ಮೀಸಲಾದ ಯೋಜನೆಯಲ್ಲಿ ಸುಮಾರು ಮೂರು ಲಕ್ಷ ಪುರುಷರು ಅಕ್ರಮವಾಗಿ ಸೌಲಭ್ಯ ಪಡೆದಿದ್ದರು ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಜಾರಿಗೆ ತರಲಾದ ಕಟ್ಟುನಿಟ್ಟಾದ ಪರಿಶೀಲನಾ ಪ್ರಕ್ರಿಯೆಯು ಕಲ್ಯಾಣ ವಿತರಣಾ ವ್ಯವಸ್ಥೆಯನ್ನು ದೀರ್ಘಾವಧಿಯಲ್ಲಿ ಬಲಪಡಿಸಲಿದೆ ಎಂದು ಅವರು ಸಮರ್ಥಿಸಿಕೊಂಡರು.

ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಬಜೆಟ್ ಮುನ್ನೋಟ
ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿವಿಧ ವಲಯಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತನಿಖೆಗಳ ಮೂಲಕ ಅಕ್ರಮಗಳು ಬಯಲಾಗುತ್ತಿವೆ. ಸರ್ಕಾರ ಬದಲಾವಣೆಯಾದ ನಂತರ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಭ್ರಷ್ಟಾಚಾರದಲ್ಲಿ ಭಾಗಿಯಾದ ಹಲವು ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳನ್ನು ಬಂಧಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಮುಂದಿನ ಜೂನ್ 22 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಆರೋಗ್ಯ, ಸಾರ್ವಜನಿಕ ಕಲ್ಯಾಣ ಮತ್ತು ಸರ್ಕಾರಿ ನೌಕರರ ತುಟ್ಟಿ ಭತ್ಯೆ (DA) ಕುರಿತಾಗಿ ಹಲವು ಪ್ರಮುಖ ಪ್ರಕಟಣೆಗಳನ್ನು ಹೊರಡಿಸಲಾಗುವುದು ಎಂದು ಸುವೇಂದು ಅಧಿಕಾರಿ ಭರವಸೆ ನೀಡಿದರು. ಇದರ ಜೊತೆಗೆ, ಮುಂಬರುವ ವಾರದಿಂದ ರಾಜ್ಯದ ಜನರಿಗಾಗಿ ಕೇವಲ 5 ರೂಪಾಯಿ ಸಬ್ಸಿಡಿ ದರದಲ್ಲಿ ಮೀನು ಊಟದ ಸೌಲಭ್ಯವನ್ನು ಪರಿಚಯಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗೆದ್ದ ಇಂಗ್ಲೆಂಡ್, ಸೋತ ನ್ಯೂಝಿಲೆಂಡ್, ಜಿಗಿದ ಸೌತ್ ಆಫ್ರಿಕಾ! – Kannada News

ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದೆ. ಲಾರ್ಡ್ಸ್​ ಮೈದಾನದಲ್ಲಿ ನಡೆದ ಈ ಪಂದ್ಯದ ಫಲಿತಾಂಶದೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025-27ರ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದೆ. ಇಲ್ಲಿ ಗೆದ್ದ ಇಂಗ್ಲೆಂಡ್ ತಂಡಕ್ಕಿಂತ ಹೆಚ್ಚಿನ ಲಾಭ ಆಗಿರುವುದು ಸೌತ್ ಆಫ್ರಿಕಾ ತಂಡಕ್ಕೆ ಎಂಬುದು ವಿಶೇಷ.

ಅಂದರೆ ನ್ಯೂಝಿಲೆಂಡ್ ತಂಡದ ಸೋಲಿನೊಂದಿಗೆ ಸೌತ್ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇದಕ್ಕೂ ಮುನ್ನ ಕಿವೀಸ್ ಪಡೆ ದ್ವಿತೀಯ ಸ್ಥಾನದಲ್ಲಿದ್ದರು. ಆದರೆ ಲಾರ್ಡ್ಸ್ ಟೆಸ್ಟ್​ನಲ್ಲಿನ ಪರಾಜಯವು ನ್ಯೂಝಿಲೆಂಡ್ ತಂಡವನ್ನು ನಾಲ್ಕನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದೆ.

ಲಾರ್ಡ್ಸ್​ನಲ್ಲಿ ಭರ್ಜರಿ ಜಯ:

ಲಾರ್ಡ್ಸ್​ ಟೆಸ್ಟ್ ಪಂದ್ಯದಲ್ಲಿ ಬೌಲರ್​ಗಳು ಪರಾಕ್ರಮ ಮೆರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.

  • ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊದಲ ಇನಿಂಗ್ಸ್​ನಲ್ಲಿ 140 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು.
  • ಮೊದಲ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ 113 ರನ್​ಗಳಿಗೆ ಆಲೌಟ್ ಆಗಿ 27 ರನ್​ಗಳ ಹಿನ್ನಡೆ ಅನುಭವಿಸಿದರು.
  • 27 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡಿದ ಇಂಗ್ಲೆಂಡ್ 226 ರನ್​ ಬಾರಿಸಿ ಆಲೌಟ್ ಆದರು.
  • ಅಂತಿಮ ಇನಿಂಗ್ಸ್​ನಲ್ಲಿ 254 ರನ್​ಗಳ ಗುರಿ ಪಡೆದ ನ್ಯೂಝಿಲೆಂಡ್ 138 ರನ್​ಗಳಿಗೆ ಆಲೌಟ್ ಆಗಿದ್ದಾರೆ.
  • ಈ ಮೂಲಕ ಇಂಗ್ಲೆಂಡ್ ತಂಡವು ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ 115 ರನ್​ಗಳ ಭರ್ಜರಿ ಜಯ ಸಾಧಿಸಿದ್ದಾರೆ.

ಈ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಕಬಳಿಸಿ ಮಿಂಚಿದ್ದ ಇಂಗ್ಲೆಂಡ್ ವೇಗಿ ಒಲೀ ರಾಬಿನ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇತ್ತ ಈ ಹೀನಾಯ ಸೋಲಿನೊಂದಿಗೆ ನ್ಯೂಝಿಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.

ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ:

Rank ತಂಡಗಳು ಪಂದ್ಯ ಗೆಲುವು ಸೋಲು ಡ್ರಾ ಅಂಕಗಳು ಶೇಕಡಾವಾರು
1. ಆಸ್ಟ್ರೇಲಿಯಾ 8 7 1 0 84 87.5
2. ಸೌತ್ ಆಫ್ರಿಕಾ 4 3 1 0 36 75
3. ಶ್ರೀಲಂಕಾ 2 1 0 1 16 66.67
4. ನ್ಯೂಝಿಲೆಂಡ್ 4 2 1 1 28 58.33
5. ಬಾಂಗ್ಲಾದೇಶ್ 4 2 1 1 28 58.33
6. ಭಾರತ 9 4 4 1 52 48.15
7. ಇಂಗ್ಲೆಂಡ್ 11 4 6 1 50 37.88
8. ಪಾಕಿಸ್ತಾನ್ 4 1 3 0 4 8.33
9. ವೆಸ್ಟ್ ಇಂಡೀಸ್ 8 0 7 1 4 4.17

ಪ್ರಸ್ತುತ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವು ಅಗ್ರಸ್ಥಾನದಲ್ಲಿದ್ದರೆ, ಸೌತ್ ಆಫ್ರಿಕಾ ತಂಡ ದ್ವಿತೀಯ ಸ್ಥಾನದಲ್ಲಿದೆ. ಈ ಎರಡು ತಂಡಗಳು ಮುಂಬರುವ ಸರಣಿಗಳಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದರೆ ಈ ಬಾರಿ ಕೂಡ ಫೈನಲ್​ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಇದನ್ನೂ ಓದಿ: ನಾನು RCB ತಂಡದ ಕಟ್ಟಾ ಅಭಿಮಾನಿ: ವೈಭವ್ ಅಚ್ಚರಿಯ ಹೇಳಿಕೆ!

ಅಂದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವ ಎರಡು ತಂಡಗಳು ಫೈನಲ್​ನಲ್ಲಿ ಮುಖಾಮುಖಿಯಾಗಲಿದೆ. ಇದೀಗ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಪಾಯಿಂಟ್ಸ್ ಟೇಬಲ್​​ನಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದು, ಈ ತಂಡಗಳ ವಿರುದ್ಧ ಬೇರೆ ತಂಡಗಳ ಅತ್ಯುತ್ತಮ ಪ್ರದರ್ಶನ ನೀಡಿದರೆ ಮಾತ್ರ ಅಂಕ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದೆ. ಹೀಗಾಗಿ ಮುಂಬರುವ ಸರಣಿಗಳು ಟಾಪ್-5 ತಂಡಗಳಿಗೆ ನಿರ್ಣಾಯಕ ಎಂದೇ ಹೇಳಬಹುದು.

Published On – 9:30 am, Mon, 8 June 26

Source link

ಹೂಳು ತೆಗೆಯುವ ಪರಿಶೀಲನೆ ವೇಳೆ ಮೇಯರ್ ಎದುರು ಚರಂಡಿಗೆ ಹಾರಿದ ಸಾಮಾಜಿಕ ಕಾರ್ಯಕರ್ತ – Kannada News

ಚರಂಡಿ-ಸಾಂದರ್ಭಿಕ ಚಿತ್ರImage Credit source: Free Press Journal

ಥಾಣೆ, ಜೂನ್ 08: ಮೇಯರ್ ಹೂಳು ತೆಗೆಯುವ ಪರಿಶೀಲನೆ ನಡೆಸುತ್ತಿರುವ ವೇಳೆ ಸಾಮಾಜಿಕ ಕಾರ್ಯಕರ್ತನೊಬ್ಬ ಚರಂಡಿಗೆ ಹಾರಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಭಿವಂಡಿಯಲ್ಲಿ ಚರಂಡಿ(Drain) ಸ್ವಚ್ಛತಾ ಕಾರ್ಯದಲ್ಲಿ ಮೇಯರ್ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪ್ರತಿಭಟಿಸಿರುವ ವ್ಯಕ್ತಿ ಚರಂಡಿಗೆ ಹಾರಿದ್ದಾರೆ. ಮೇಯರ್ ನಾರಾಯಣ್ ಚೌಧರಿ ಅವರು ಶನಿವಾರ ಇಡೀ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖುದ್ದಾಗಿ ಪ್ರವಾಸ ಮಾಡಿ, ಮಳೆಗಾಲ ಪೂರ್ವ ಸಿದ್ಧತಾ ಕಾಮಗಾರಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದರು. ಸಾರ್ವಜನಿಕರ ಭಾಗವಹಿಸುವಿಕೆ ಮತ್ತು ಆಡಳಿತದ ತ್ವರಿತ ನಿರ್ಧಾರಗಳಿಂದಾಗಿ ಸದ್ಯಕ್ಕೆ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಭರ್ಜರಿ ವೇಗ ಸಿಕ್ಕಿದೆ.

ವಾರ್ಡ್ ಸಮಿತಿ 1 ರ ಅಡಿಯಲ್ಲಿ ಮೇಯರ್ ನಾರಾಯಣ್ ಚೌಧರಿ ಮತ್ತು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾಗ, ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಚರಂಡಿ ಸ್ವಚ್ಛತಾ ಕಾರ್ಯದ ಕಡೆಗೆ ಅಧಿಕಾರಿಗಳ ಗಮನ ಸೆಳೆಯಲು ಚರಂಡಿಗೆ ಇಳಿದು ಸಾಂಕೇತಿಕವಾಗಿ ಪ್ರತಿಭಟಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಮೇಯರ್ ಮತ್ತು ಪುರಸಭೆ ಅಧಿಕಾರಿಗಳು, ಆ ಕಾರ್ಯಕರ್ತನ ಜಾಗೃತಿಯನ್ನು ಶ್ಲಾಘಿಸಿ, ಅತ್ಯಂತ ಸೌಹಾರ್ದಯುತವಾಗಿ ಮನವೊಲಿಸಿ ಅವರ ಸಲಹೆಗಳನ್ನು ಸ್ವೀಕರಿಸಿದರು.

ನಾಗರಿಕರು ಮತ್ತು ಆಡಳಿತ ಮಂಡಳಿಯ ನಡುವಿನ ಈ ಮುಕ್ತ ಸಂವಹನವು ಸ್ಥಳದಲ್ಲೇ ಸಮಸ್ಯೆ ಬಗೆಹರಿಯಲು ದಾರಿಯಾಯಿತು. ಸದ್ಯಕ್ಕೆ ಕೇವಲ 34% ಕಾಮಗಾರಿ ಪೂರ್ಣಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮೇಯರ್, ಸಾರ್ವಜನಿಕರ ತೆರಿಗೆ ಹಣದ ಪ್ರತಿಯೊಂದು ರೂಪಾಯಿಗೂ ಪಾರದರ್ಶಕತೆ ಇರಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮತ್ತಷ್ಟು ಓದಿ: ಚರಂಡಿಗೊಂದು ‘ನೆಟ್’ ಹಾಕಿದ್ರೆ ಸಾಕು; ಬೆಂಗಳೂರಿನಲ್ಲಿ ಮಳೆಯಿಂದ ಆಗುವ ಸಮಸ್ಯೆ ಸಿಕ್ತು ಸೂಪರ್ ಐಡಿಯಾ!

ಯುದ್ಧೋಪಾದಿಯಲ್ಲಿ ಸ್ವಚ್ಛತೆ: ಆಂತರಿಕ ಮತ್ತು ದ್ವಿತೀಯಕ ಚರಂಡಿಗಳಲ್ಲಿ ಬಾಕಿ ಇರುವ ಎಲ್ಲಾ ಹೂಳು, ಕೆಸರು ಮತ್ತು ಕಸವನ್ನು ಆದ್ಯತೆಯ ಮೇರೆಗೆ ತಕ್ಷಣವೇ ತೆರವುಗೊಳಿಸಲು ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಗುಣಮಟ್ಟದ ಮಾನದಂಡಗಳನ್ನು ಕಾಯ್ದುಕೊಳ್ಳಲು ವಿಫಲರಾಗುವ ಅಥವಾ ವಿಳಂಬ ಮಾಡುವ ಗುತ್ತಿಗೆದಾರರ ಪಾವತಿಗಳನ್ನು ತಡೆಹಿಡಿಯುವುದು ಮತ್ತು ಅವರನ್ನು ಕಪ್ಪುಪಟ್ಟಿಗೆ (Blacklist) ಸೇರಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಭರವಸೆ ನೀಡಿದ್ದಾರೆ.

ಮುಂಗಾರು ಮಳೆ ವೇಗವಾಗಿ ಬರುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ. ನಗರದ ತಗ್ಗು ಪ್ರದೇಶಗಳು ಮತ್ತು ನೀರು ನಿಲ್ಲುವ ಸಾಧ್ಯತೆ ಇರುವ ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ಈಗಾಗಲೇ ಪ್ರಮುಖ ಚರಂಡಿಗಳನ್ನು ಯಶಸ್ವಿಯಾಗಿ ಸ್ವಚ್ಛಗೊಳಿಸಲಾಗಿದೆ. ಉಳಿದ ಆಂತರಿಕ ಕಾಮಗಾರಿಗಳನ್ನೂ ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಮುಗಿಸಲಾಗುವುದು ಎಂದು ಮೇಯರ್ ನಾರಾಯಣ್ ಚೌಧರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾಂಗ್ರೆಸ್‌ನಲ್ಲಿ ಜೋರಾಯ್ತು ಸಚಿವ ಸ್ಥಾನಕ್ಕಾಗಿ ಸರ್ಕಸ್: 20 ಸ್ಥಾನಗಳಿಗಾಗಿ 60ಕ್ಕೂ ಹೆಚ್ಚು ಶಾಸಕರಿಂದ ಮಹಾ ಲಾಬಿ – Kannada News

ಕಾಂಗ್ರೆಸ್‌ನಲ್ಲಿ ಜೋರಾಯ್ತು ಸಚಿವ ಸ್ಥಾನಕ್ಕಾಗಿ ಸರ್ಕಸ್Image Credit source: tv9

ಬೆಂಗಳೂರು, ಜೂನ್ 8: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ನೂತನ ಕಾಂಗ್ರೆಸ್ (Congress) ಸರ್ಕಾರ ರಚನೆಯಾಗಿ, ಮೊದಲ ಹಂತದಲ್ಲಿ 13 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ‘ಕೈ’ ಪಾಳಯದಲ್ಲಿ ಈಗ ಎರಡನೇ ಸುತ್ತಿನ ಸಂಪುಟ ಸರ್ಕಸ್ ಆರಂಭವಾಗಿದೆ. ಇತ್ತೀಚೆಗಷ್ಟೇ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಬೆಂಗಳೂರು ಅಭಿವೃದ್ಧಿ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ವಾಪಸ್ ಪಡೆದಿದ್ದು, ಜಮೀರ್ ಅಹ್ಮದ್ ಬೆಂಬಲಿಗರ ಪ್ರತಿಭಟನೆಯ ಬಿಸಿ ಸದ್ಯ ತಣ್ಣಗಾಗುತ್ತಿದೆ ಎನ್ನುವಷ್ಟರಲ್ಲೇ ಹೈಕಮಾಂಡ್‌ಗೆ ಹೊಸ ತಲೆನೋವು ಶುರುವಾಗಿದೆ. ಸದ್ಯ ಸಂಪುಟದಲ್ಲಿ ಬಾಕಿ ಉಳಿದಿರುವ 20 ಸಚಿವ ಸ್ಥಾನಗಳಿಗಾಗಿ ಬರೋಬ್ಬರಿ 60ಕ್ಕೂ ಹೆಚ್ಚು ಶಾಸಕರು ಭಾರಿ ಪೈಪೋಟಿ ನಡೆಸುತ್ತಿದ್ದು, ದೆಹಲಿ ಮಟ್ಟದಲ್ಲಿ ಲಾಬಿ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಾಂಶಗಳು

  • 20 ಸಚಿವ ಸ್ಥಾನಕ್ಕೆ ಭಾರಿ ಪೈಪೋಟಿ.
  • ಹೈಕಮಾಂಡ್ ಹಂತದಲ್ಲಿ ಮಾಜಿಗಳ ತೀವ್ರ ಲಾಬಿ.
  • ಪರಿಷತ್ ಚುನಾವಣೆ ಬಳಿಕವೇ ಸಂಪುಟ ವಿಸ್ತರಣೆ.

ದೆಹಲಿ ಮಟ್ಟದಲ್ಲಿ ಮಾಜಿ ಸಚಿವರ ಲಾಬಿ

ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಸ್ಥಾನ ವಂಚಿತರಾದ ಹಲವು ಹಿರಿಯ ಹಾಗೂ ಮಾಜಿ ಸಚಿವರು ಇದನ್ನು ತಮಗೆ ಆದ ಅಗೌರವ ಎಂದು ಭಾವಿಸಿ ತೀವ್ರ ಬೇಸರಗೊಂಡಿದ್ದಾರೆ. ಹೀಗಾಗಿ, ಎರಡನೇ ಪಟ್ಟಿಯಲ್ಲಿ ಯಾವುದೇ ಕಾರಣಕ್ಕೂ ಮಂತ್ರಿ ಸ್ಥಾನ ಕೈತಪ್ಪಬಾರದು ಎಂದು ಪಣತೊಟ್ಟಿರುವ ಮಾಜಿಗಳು ಈಗಿನಿಂದಲೇ ದೆಹಲಿ ಮಟ್ಟದಲ್ಲಿ ಗಾಡ್‌ಫಾದರ್‌ಗಳ ಹುಡುಕಾಟ ಆರಂಭಿಸಿದ್ದಾರೆ. ಒಂದೊಂದು ಸಚಿವ ಸ್ಥಾನಕ್ಕೆ ಕನಿಷ್ಠ 3 ರಿಂದ 4 ಮಂದಿ ಶಾಸಕರು ರೇಸ್‌ನಲ್ಲಿದ್ದು, ಆಕಾಂಕ್ಷಿಗಳ ದೀರ್ಘ ಪಟ್ಟಿ ನೋಡಿ ಕಾಂಗ್ರೆಸ್ ಹೈಕಮಾಂಡ್ ತಲೆಕೆಡಿಸಿಕೊಂಡಿದೆ. ಹೀಗಾಗಿ ಜೂನ್ 18ರ ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕವೇ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಜಾತಿ, ಜಿಲ್ಲಾವಾರು ಲೆಕ್ಕಾಚಾರ: ಖರ್ಗೆ, ಸಿದ್ದರಾಮಯ್ಯ ಹಾಗೂ ಡಿಕೆಶಿ ಕದ ತಟ್ಟಿದ ಶಾಸಕರು

ಈ ಬಾರಿ ಸಂಪುಟ ಸೇರಲು ಹೊಸಬರು, ಹಳಬರು, ಹಿರಿಯರು, ವಲಸಿಗರು ಹಾಗೂ ಸಮುದಾಯದ ಮುಂದಾಳುಗಳು ತಮ್ಮದೇ ಆದ ಜಾತಿವಾರು ಲೆಕ್ಕಾಚಾರ, ಜಿಲ್ಲಾವಾರು ಕೋಟಾ ಮತ್ತು ಸಮುದಾಯದ ಪ್ರಾಬಲ್ಯದ ಕಾರ್ಡ್ ಬಳಸುತ್ತಿದ್ದಾರೆ. ಆರೇಳು ಬಾರಿ ಗೆದ್ದಿದ್ದರೂ ಇದುವರೆಗೆ ಒಮ್ಮೆಯೂ ಸಚಿವರಾಗದ ಹಿರಿಯ ಶಾಸಕರು ತಮಗೆ ಮೊದಲ ಆದ್ಯತೆ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ.

ಮತ್ತೊಂದೆಡೆ, ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿರುವುದರಿಂದ ಅವರ ಆಪ್ತ ವಲಯದ ಶಾಸಕರು ತಮಗೆ ಮಂತ್ರಿಗಿರಿ ಪಕ್ಕಾ ಎಂಬ ನಿರೀಕ್ಷೆಯಲ್ಲಿದ್ದಾರೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಭಾವ ಹಾಗೂ ಬೆಂಬಲ ಬಳಸಿ ಸಂಪುಟ ಸೇರಲು ಮತ್ತೊಂದು ಪ್ರಭಾವಿ ಶಾಸಕರ ಗುಂಪು ತೀವ್ರ ಕಸರತ್ತು ನಡೆಸುತ್ತಿದೆ.

ಇದನ್ನೂ ಓದಿ: ಮತ್ತೊಂದು ಸ್ವರೂಪ ಪಡೆದ ಜಮೀರ್ ಅಹ್ಮದ್ ಖಾನ್​ರದ್ದು ಎನ್ನಲಾದ ಆಡಿಯೋ ಪ್ರಕರಣ

ಸದ್ಯಕ್ಕೆ 13 ಸಚಿವರ ಖಾತೆ ಹಂಚಿಕೆ ಅತೃಪ್ತಿಯನ್ನು ನಿಭಾಯಿಸುವುದರಲ್ಲೇ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಗೂ ಸಿಎಂ ಡಿಕೆಶಿ ಸುಸ್ತಾಗಿದ್ದು, ಮುಂಬರುವ ದಿನಗಳಲ್ಲಿ ಈ 20 ಸ್ಥಾನಗಳ ಭರ್ತಿ ಪ್ರಕ್ರಿಯೆ ಕಾಂಗ್ರೆಸ್ ಪಾಲಿಗೆ ಮತ್ತೊಂದು ದೊಡ್ಡ ಸವಾಲಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಲ್ಕನೇ ದಿನ ಭರ್ಜರಿ ಗಳಿಕೆ ಮಾಡಿದ ‘ಪೆದ್ದಿ’; ಮುಂದಿದೆ ಚಾಲೆಂಜ್ – Kannada News

ರಾಮ್ ಚರಣ್ ನಟನೆಯ, ಬುಚ್ಚಿ ಬಾಬು ಸನ ನಿರ್ದೇಶನದ ‘ಪೆದ್ದಿ’ ಚಿತ್ರ ನಾಲ್ಕನೇ ದಿನವಾದ ಭಾನುವಾರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪಾರುಪತ್ಯ ಮುಂದುವರಿಸಿದೆ. ಭಾನುವಾರ ಭಾರತದಲ್ಲೇ ಬರೋಬ್ಬರಿ 31.90 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಗಳಿಕೆ 157.15 ಕೋಟಿ ರೂಪಾಯಿ ಆಗಿದೆ. ಭಾರತದಲ್ಲಿ 187.02 ಕೋಟಿ ಗ್ರಾಸ್ ಕಲೆಕ್ಷನ್ ಆಗಿದೆ.

ಈ ಸಿನಿಮಾ, ವಿದೇಶಿ ಮಾರುಕಟ್ಟೆಯಿಂದ 46 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಜಾಗತಿಕವಾಗಿ ಕೇವಲ ನಾಲ್ಕೇ ದಿನಕ್ಕೆ 233.02 ಕೋಟಿ ಗಳಿಸಿ ದಾಖಲೆ ಬರೆದಿದೆ. ಚಿತ್ರದ ಯಶಸ್ಸಿಗೆ ತೆಲುಗು ವರ್ಷನ್‌ನ ಭರ್ಜರಿ ಪ್ರದರ್ಶನ ಕಾಣುತ್ತಿರುವುದೇ ಕಾರಣ ಎನ್ನಲಾಗಿದೆ.

ನಾಲ್ಕು ದಿನಗಳ ಸುದೀರ್ಘ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ‘ಪೆದ್ದಿ’ ಚಿತ್ರಕ್ಕೆ ಇನ್ನುಳಿದ ವಾರದ ದಿನಗಳು ಅಸಲಿ ಪರೀಕ್ಷೆಯಾಗಿವೆ. ಸಾಮಾನ್ಯವಾಗಿ ವೀಕೆಂಡ್ ಮುಗಿದ ನಂತರ ಸೋಮವಾರದಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕ್ಷೀಣಿಸುವುದು ಸಹಜ. ಸೋಮವಾರದಿಂದ ಗುರುವಾರದವರೆಗೆ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವುದು ಮತ್ತು ಕಲೆಕ್ಷನ್ ಸ್ಥಿರವಾಗಿ ಕಾಯ್ದುಕೊಳ್ಳುವುದು ಚಿತ್ರದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ. ಈ ದಿನಗಳಲ್ಲಿ ಸಿನಿಮಾ ಪ್ರದರ್ಶನ ಹೇಗಿರಲಿದೆ ಎಂಬುದರ ಮೇಲೆ ಚಿತ್ರದ ಒಟ್ಟಾರೆ ಲೈಫ್‌ಟೈಮ್ ಕಲೆಕ್ಷನ್ ನಿರ್ಧಾರವಾಗಲಿದೆ.

ಇದನ್ನೂ ಓದಿ: 200 ಕೋಟಿ ರೂಪಾಯಿ ಕ್ಲಬ್ ಸೇರಿದ ರಾಮ್ ಚರಣ್ ಸಿನಿಮಾ ‘ಪೆದ್ದಿ’; ಆದರೂ ಇದೆ ಸವಾಲು

ವಿವಾದ ಮಾಡಿಕೊಂಡ ಸಿನಿಮಾ

ಒಂದೆಡೆ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದರೆ, ಮತ್ತೊಂದೆಡೆ ಚಿತ್ರದಲ್ಲಿ ಜಾನ್ವಿ ಕಪೂರ್ ಪಾತ್ರವನ್ನು ಬಿಂಬಿಸಿರುವ ರೀತಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿವಾದದ ಕುರಿತು ಖ್ಯಾತ ನಟಿ ನಿತ್ಯಾ ಮೆನನ್ ಪ್ರತಿಕ್ರಿಯಿಸಿದ್ದಾರೆ. ‘ನಾನು ಇನ್ನು ಸಿನಿಮಾ ನೋಡಿಲ್ಲ. ಆದರೆ ಚಿತ್ರರಂಗದಲ್ಲಿ ಮಹಿಳೆಯರನ್ನು ಹೀಗೆ ಬಿಂಬಿಸುವ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ಬೆಂಬಲಿಸುತ್ತೇನೆ. ನಟ-ನಟಿಯರಿಗೆ ತಮ್ಮದೇ ಆದ ಮಿತಿಗಳಿರಬೇಕು. ದೃಶ್ಯವೊಂದರಲ್ಲಿ ನಟಿಸುವಾಗ ತಮಗೆ ಅಸಹಜ ಎನಿಸಿದರೆ ನಟರೇ ಅದನ್ನು ಖಡಾಖಂಡಿತವಾಗಿ ನಿರಾಕರಿಸಬೇಕು. ಯಾವುದೇ ಪರಿಸ್ಥಿತಿಯಲ್ಲೂ ನಾವು ಅಸಹಾಯಕರಾಗಲು ಸಾಧ್ಯವಿಲ್ಲ, ನಮ್ಮ ಆದ್ಯತೆಗಳು ಏನೋ ಅದರಂತೆ ನಾವು ಧ್ವನಿ ಎತ್ತಬಹುದು’ ಎಂದು ನಿತ್ಯಾ ಮೆನನ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಕ್ ಉಗ್ರನ ಜೊತೆ ರಾಜ್ಯದ ಇಬ್ಬರ ಲಿಂಕ್: ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲು! – Kannada News

ಪಾಕ್ ಮೂಲದ ವ್ಯಕ್ತಿ ಜೊತೆ ರಾಜ್ಯದ ಇಬ್ಬರು ನಂಟು

ತುಮಕೂರು, ಜೂನ್ 08: ಪಾಕಿಸ್ತಾನ (Pakistan) ಮೂಲದ ಶಂಕಿತ ಉಗ್ರನೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ತುಮಕೂರು ಮತ್ತು ದಾವಣಗೆರೆ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಅತ್ಯಂತ ಭಯಾನಕ ಸಂಚು ಬಯಲಾಗಿದೆ. ಇನ್‌ಸ್ಟಾಗ್ರಾಮ್ ಮೂಲಕ ಯುವಕರನ್ನು ಸಂಪರ್ಕಿಸಿ, ಬ್ರೈನ್‌ವಾಶ್ ಮಾಡಿ ದೇಶದಲ್ಲಿ ಕುಕೃತ್ಯಕ್ಕೆ ಪಾಕ್ ಉಗ್ರ ರಾಣಾ ಸಂಚು ರೂಪಿಸಿದ್ದ ಕಹಾನಿಯನ್ನು ತನಿಖೆಯ ವೇಳೆ ಹೊರಬಂದಿದೆ.

ಮುಖ್ಯಾಂಶಗಳು

  • ತುಮಕೂರಿನಲ್ಲಿ ಪಾಕ್ ಉಗ್ರನ ಜೊತೆ ನಂಟು ಹೊಂದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
  • ಇನ್‌ಸ್ಟಾಗ್ರಾಮ್ ಚಾಟಿಂಗ್ ಮೂಲಕ ಯುವಕರ ಬ್ರೈನ್‌ವಾಶ್ ಮಾಡಿರುವುದು ವಿಚಾರಣೆಯಲ್ಲಿ ಬಯಲಾಗಿದೆ.
  • ಕುಕೃತ್ಯಕ್ಕಾಗಿ 50 ರಿಂದ 60 ಜನರನ್ನು ಸಿದ್ಧಪಡಿಸಲು ಸಂಚು ರೂಪಿಸಲಾಗಿತ್ತು.

ಕಳೆದ ಒಂದು ತಿಂಗಳ ಹಿಂದೆಯಷ್ಟೇ ಇನ್‌ಸ್ಟಾಗ್ರಾಮ್ ಮೂಲಕ ಯುವಕರಿಗೆ ಪರಿಚಯವಾಗಿದ್ದ ಪಾಕಿಸ್ತಾನದ ರಾಣಾ ಎಂಬಾತ, ಆರಂಭದಲ್ಲಿ ಧರ್ಮದ ಆಚರಣೆ ಹಾಗೂ ಧರ್ಮಗುರುಗಳ ಪ್ರವಚನಗಳನ್ನು ಹಂಚಿಕೊಳ್ಳುತ್ತಿದ್ದನು. ಆ ನಂತರ ಧರ್ಮಕ್ಕಾಗಿ ಕೆಲಸ ಮಾಡಬೇಕು ಎಂದು ಬಂಧಿತ ಅಲ್ಲಾಬಕ್ಷು ತಲೆಯಲ್ಲಿ ವಿಷ ತುಂಬಿ ಬ್ರೈನ್‌ವಾಶ್ ಮಾಡಿದ್ದ ಎನ್ನಲಾಗಿದೆ. ಅಲ್ಲಾಬಕ್ಷು ಮೊಬೈಲ್‌ನಲ್ಲಿ ಪಾಕಿಸ್ತಾನದ ಕೋಡ್ ಹೊಂದಿರುವ ನಂಬರ್ ಪತ್ತೆಯಾಗಿದ್ದು, ಅದನ್ನು ‘Rana bhi bhi’ ಎಂದು ಆತ ಸೇವ್ ಮಾಡಿಕೊಂಡಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ಆರೋಪಿಗಳ ಎಕ್ಸ್‌ಕ್ಲೂಸಿವ್ ಚಾಟ್ ಬಯಲು

ಪಾಕ್ ಉಗ್ರ ರಾಣಾ ಸಂಪರ್ಕಕ್ಕೆ ಸಿಕ್ಕ ಬಳಿಕ ಅಲ್ಲಾಬಕ್ಷು ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದಿ ಭಾಷೆಯಲ್ಲಿ ನಡೆಸಿದ ಚರ್ಚೆಯ ಇನ್‌ಸೈಡ್ ಮಾಹಿತಿ ಲಭ್ಯವಾಗಿದೆ. ರಾಣಾ ಪ್ರಚೋದನೆಗೆ ಮಾರುಹೋಗಿದ್ದ ಅಲ್ಲಾಬಕ್ಷು ಆತನಿಗೆ, “ಇನ್ಷಾ ಅಲ್ಲಾ, ಯಾವುದೇ ಕೆಲಸ ಇರಲಿ, ಯಾವುದೇ ರೀತಿಯ ಕೆಲಸ ಇರಲಿ, ನಿನ್ನ ತಮ್ಮನನ್ನು ನೆನಪಿಸಿಕೊ. ನಾನು ಖಂಡಿತವಾಗಲೂ ಮಾಡುತ್ತೇನೆ” ಎಂದು ಭರವಸೆ ನೀಡಿದ್ದನು. ಅಷ್ಟೇ ಅಲ್ಲದೆ, “ಇನ್ಷಾ ಅಲ್ಲಾ ಈಗ ನಾವಿಬ್ಬರು ಜೊತೆಯಾಗಿದ್ದೇವೆ. ನಮ್ಮ ಕೋಮಿಗೋಸ್ಕರ ಜೊತೆಯಾಗಿ ಕೆಲಸ ಮಾಡೋಣ” ಎಂದು ಹೇಳಿರುವುದು ಪತ್ತೆಯಾಗಿದೆ.

50 ರಿಂದ 60 ಮಂದಿಯನ್ನು ತಯಾರು ಮಾಡು ಎಂದಿದ್ದ ರಾಣಾ

“ದೇವರ ಕೆಲಸ ನಾವೆಲ್ಲಾ ಒಟ್ಟಾಗಿ ಮಾಡೋಣ” ಎಂದು ಹೇಳುತ್ತಿದ್ದ ರಾಣಾ, ಅಲ್ಲಾಬಕ್ಷುಗೆ ದ್ವೇಷದ ತರಬೇತಿ ನೀಡಿದ್ದ. “ನಮ್ಮ ಧರ್ಮದವರನ್ನು ದ್ವೇಷಿಸುವವರನ್ನು ಹಂತ ಹಂತವಾಗಿ ನಾಶ ಮಾಡಬೇಕು. ಅದಕ್ಕಾಗಿ 50 ರಿಂದ 60 ಮಂದಿಯನ್ನು ತಯಾರು ಮಾಡು. ನಾನು ಹೇಳಿದ ಹಾಗೆ ಅವರಿಗೆ ತರಬೇತಿ ನೀಡು, ನಿನಗೆ ಎಷ್ಟು ಹಣ ಬೇಕೋ ಅಷ್ಟು ನಾನು ಕೊಡುತ್ತೇನೆ” ಎಂದು ಆಮಿಷ ಒಡ್ಡಿದ್ದ.

ಇದೇ ವೇಳೆ ಅಲ್ಲಾಬಕ್ಷು, “ನೀನು ಭಾರತದಲ್ಲಿ ಬೇರೆ ಯಾರನ್ನಾದರೂ ಸಂಪರ್ಕಿಸಿದ್ದೀಯಾ?” ಎಂದು ಪ್ರಶ್ನಿಸಿದಾಗ, ರಾಣಾನೇ ಆತನಿಗೆ ಜಮೀರ್ ಖಾನ್ ಎಂಬ ಮತ್ತೊಬ್ಬನನ್ನು ಪರಿಚಯಿಸಿದ್ದ. ಈ ಇಬ್ಬರು ಜೊತೆಯಾಗಿ ದೇಶ ವಿರೋಧಿ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆಗೆ ಮಹತ್ವದ ಸುಳಿವು ಲಭ್ಯವಾಗಿದೆ.

ಇದನ್ನೂ ಓದಿ ಪಾಕ್ ಉಗ್ರನ ಜತೆ ಸಂಪರ್ಕ ಹೊಂದಿದ್ದ ಇಬ್ಬರ ಬಂಧನ: ಕರ್ನಾಟಕದಲ್ಲಿ ಬೇರೂರುತ್ತಿವೆ ಉಗ್ರರ ಸ್ಲೀಪರ್ ಸೆಲ್!

ಕೂಡಲೇ ಅಲರ್ಟ್ ಆದ ಗುಪ್ತಚರ ಇಲಾಖೆ ನೀಡಿದ ನಿಖರ ಮಾಹಿತಿ ಆಧರಿಸಿ ತುಮಕೂರು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಖಾಕಿ ಪಡೆ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಭಯೋತ್ಪಾದನಾ ಸಂಚಿನ ಮತ್ತಷ್ಟು ಆಳವಾದ ಸಂಗತಿಗಳನ್ನು ಕೆದಕುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:55 am, Mon, 8 June 26

Source link

ನಾನು RCB ತಂಡದ ಕಟ್ಟಾ ಅಭಿಮಾನಿ: ವೈಭವ್ ಅಚ್ಚರಿಯ ಹೇಳಿಕೆ! – Kannada News

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಸಂಚಲನ ಸೃಷ್ಟಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ (Vaibhav Sooryavanshi) ತಾನು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾಭಿಮಾನಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅದು ಸಹ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವಾಗ ಎಂಬುದು ವಿಶೇಷ.

ಆರ್​​ಆರ್ ತಂಡದ ಸಂದರ್ಶನದಲ್ಲಿ ಮಾತನಾಡಿದ ವೈಭವ್, “ನಾನು ಮೊದಲಿನಿಂದಲೂ ಆರ್‌ಸಿಬಿ ತಂಡದ ದೊಡ್ಡ ಅಭಿಮಾನಿ. ಅದಕ್ಕೆ ಏಕೈಕ ಕಾರಣ ವಿರಾಟ್ ಕೊಹ್ಲಿ ಭೈಯ್ಯಾ ” ಎಂದಿದ್ದಾರೆ.

“ಮೊದಲಿಂದಲೂ ನಾನು ವಿರಾಟ್ ಕೊಹ್ಲಿ ಫ್ಯಾನ್. ಹಾಗೆಯೇ ಆರ್​ಸಿಬಿ ತಂಡದ ಅಭಿಮಾನಿ. ಆರ್​ಆರ್​-ಆರ್​ಸಿಬಿ ಪಂದ್ಯ ಮುಗಿದ ನಂತರ ಕೊಹ್ಲಿ ನನ್ನ ಬಳಿ ಬಂದು ಹೆಗಲ ಮೇಲೆ ಕೈಹಾಕಿ ಮಾತನಾಡಿಸಿದಾಗ, ನಾನು ಒಬ್ಬ ಜಾಗತಿಕ ಸೂಪರ್‌ಸ್ಟಾರ್ ಜೊತೆ ಮಾತನಾಡುತ್ತಿದ್ದೇನೆ ಅನಿಸಲೇ ಇಲ್ಲ ” ಎಂದು ವೈಭವ್ ಸೂರ್ಯವಂಶಿ ತಿಳಿಸಿದ್ದಾರೆ.

“ವಿರಾಟ್ ಕೊಹ್ಲಿ ಅವರು ನನ್ನ ಸ್ವಂತ ಅಣ್ಣನಂತೆ. ಪಂದ್ಯದ ಬಳಿಕ ನನಗೆ ಅತ್ಯಂತ ಪ್ರೀತಿಯಿಂದ ಮಾರ್ಗದರ್ಶನ ನೀಡಿದರು. ಅವರು ಎಲ್ಲೂ ಸಹ ನನ್ನೊಂದಿಗೆ ಸೂಪರ್ ಸ್ಟಾರ್ ರೀತಿ ವರ್ತಿಸಿರಲಿಲ್ಲ. ಅವರು ನನ್ನ ಜೊತೆ ಮಾತನಾಡುವಾಗ ನನಗೂ ಕೂಡ ಅವರು ಜಾಗತಿಕ ಸೂಪರ್ ಸ್ಟಾರ್ ಎಂದು ಅನಿಸಿರಲಿಲ್ಲ” ಎಂದು ವೈಭವ್ ಕಿಂಗ್ ಕೊಹ್ಲಿಯ ಸರಳತೆ ಮತ್ತು ದೊಡ್ಡ ಗುಣವನ್ನು ಕೊಂಡಾಡಿದ್ದಾರೆ.

ವಿಶೇಷವೆಂದರೆ, ಟೂರ್ನಿಯ ಆರಂಭಿಕ ಪಂದ್ಯವೊಂದರಲ್ಲಿ ಆರ್‌ಸಿಬಿ ವಿರುದ್ಧ ವೈಭವ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದಾಗ, ವಿರಾಟ್ ಕೊಹ್ಲಿ ಖುದ್ದಾಗಿ ಅವರಿಗೆ ಆಟೋಗ್ರಾಫ್ ಇರುವ ವಿಶೇಷ ಕ್ಯಾಪ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಆರೆಂಜ್ ಕ್ಯಾಪ್ ಕೈಯಲ್ಲಿಲ್ಲದ ದಿನಗಳಲ್ಲೆಲ್ಲಾ ತಾವು ಕೊಹ್ಲಿ ನೀಡಿದ ಆ ಕ್ಯಾಪ್ ಅನ್ನೇ ಧರಿಸುತ್ತಿದ್ದಾಗಿ ವೈಭವ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದೀಗ ಐಪಿಎಲ್ ಸೀಸನ್​-19ರ ಆರೆಂಜ್ ಕ್ಯಾಪ್ ಹುಡುಗ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಮುಂಬರುವ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಇದರೊಂದಿಗೆ ಜಾಗತಿಕ ಕ್ರಿಕೆಟ್​ನಲ್ಲಿ ಹೊಸ ಯುಗ ಆರಂಭವಾಗುವುದನ್ನು ನಿರೀಕ್ಷಿಸಬಹುದು.

ಏಕೆಂದರೆ ವಿರಾಟ್ ಕೊಹ್ಲಿ ಸದ್ಯ ತಮ್ಮ ವೃತ್ತಿಜೀವನದ ನಿವೃತ್ತಿಯ ಅಂಚಿನಲ್ಲಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು ದಶಕಗಳ ಕಾಲ ಮುನ್ನಡೆಸಿದ ‘ಕಿಂಗ್’ ಯುಗ ಮುಗಿಯುವ ಸಮಯ ಹತ್ತಿರವಾಗುತ್ತಿದೆ. ಇಂತಹ ಸಂದರ್ಭದಲ್ಲಿ, ಅವರ ಜಾಗವನ್ನು ತುಂಬಬಲ್ಲ ಸಶಕ್ತ ಆಟಗಾರ ಯಾರು ಎಂಬ ಪ್ರಶ್ನೆಗೆ ಐಪಿಎಲ್ 2026ರಲ್ಲೇ ಉತ್ತರ ಸಿಕ್ಕಿದೆ. ಆ ಉತ್ತರವೇ ವೈಭವ್ ಸೂರ್ಯವಂಶಿ.

ಇದನ್ನೂ ಓದಿ: ಏಷ್ಯಾಡ್ ಕ್ರಿಕೆಟ್ ಟೂರ್ನಿ ವೇಳಾಪಟ್ಟಿ ಪ್ರಕಟ

ಕೇವಲ 15ರ ಹರೆಯದಲ್ಲೇ ಜಾಗತಿಕ ಬೌಲರ್‌ಗಳನ್ನು ಧೂಳೀಪಟ ಮಾಡಿದ ವೈಭವ್, ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮುವುದು ಗ್ಯಾರಂಟಿ. ಹೀಗಾಗಿಯೇ, ಮುಂಬರುವ ಟಿ20 ಸರಣಿಗಳ ಮೂಲಕ ಕ್ರಿಕೆಟ್ ಅಂಗಳದ ಹೊಸ ಯುಗದ ಆರಂಭವನ್ನು ನಿರೀಕ್ಷಿಸಬಹುದು.

Published On – 8:31 am, Mon, 8 June 26

Source link

ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು – Kannada News

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ’ ವೇದಿಕೆಯಲ್ಲಿ ಅಗಲಿದ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ ಅವರಿಗೆ ವಿಶೇಷ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ‘ಪಾರು’ ಧಾರಾವಾಹಿಯ ಮುಖ್ಯ ನಟಿ ಮೋಕ್ಷಿತಾ ಪೈ ಮತ್ತು ನಟ ಶರತ್, ದಿಲೀಪ್ ರಾಜ್ ತಮಗೆ ನೀಡಿದ ಬೆಂಬಲವನ್ನು ನೆನೆದು ಕಣ್ಣೀರಿಟ್ಟರು. ‘ಆರಂಭದ ದಿನಗಳಲ್ಲಿ ಶೂಟಿಂಗ್ ಕಷ್ಟವೆನಿಸಿದಾಗ ದಿಲೀಪ್ ಸರ್ ಮತ್ತು ವಿದ್ಯಾ ಮ್ಯಾಮ್ ತಮಗೆ ಧೈರ್ಯ ತುಂಬಿ, ನಟನೆಯನ್ನು ಪ್ರತಿಯೊಂದು ಹಂತದಲ್ಲೂ ಹೇಳಿಕೊಟ್ಟು ಬೆಳೆಸಿದರು ಎಂದು’ ಮೋಕ್ಷಿತಾ ಭಾವುಕರಾಗಿ ನುಡಿದರು. ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಇಡೀ ಕಿರುತೆರೆ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಅಗಲಿಕೆಯ ನೋವು ಇಡೀ ವೇದಿಕೆಯನ್ನು ಮೌನವಾಗಿಸಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link