ಕೊನೆಗೂ ನನಸಾದ ಝ್ವೇರೆಫ್ ಗ್ರಾಂಡ್ ಸ್ಲ್ಯಾಮ್ ಕನಸು
ರೊಲ್ಯಾಂಡ್ ಗ್ಯಾರೋಸ್ ಅಂಗಳದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೇರೆಫ್ ಇತಿಹಾಸ ನಿರ್ಮಿಸಿದ್ದಾರೆ. ಭಾನುವಾರ ನಡೆದ 2026ರ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಇಟಲಿಯ ಫ್ಲಾವಿಯೊ ಕೊಬೊಲ್ಲಿ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಝ್ವೇರೆಫ್ ತಮ್ಮ ಚೊಚ್ಚಲ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಅವರ ಜೀವಮಾನದ ಮಹದಾಸೆ ಕೊನೆಗೂ ಈಡೇರಿದೆ. ನಾಲ್ಕು ಗಂಟೆಗಳ ಮಹಾಸಮರ: ಕೋರ್ಟ್ ಫಿಲಿಪ್-ಚ್ಯಾಟ್ರಿಯರ್‌ನಲ್ಲಿ ನಡೆದ ಈ ಹಣಾಹಣಿ ಬರೋಬ್ಬರಿ 4 ಗಂಟೆ ಹಾಗೂ 16 ನಿಮಿಷಗಳ ಕಾಲ ಜಿದ್ದಾಜಿದ್ದಿನಿಂದ ಕೂಡಿತ್ತು….