All posts by nagaraj11081993

Shubman Gill: ಮಳೆ ಬಂದಿದ್ದರಿಂದ ಪಂದ್ಯ ಸೋತೆವು..!

Shubman Gill: ಮಳೆ ಬಂದಿದ್ದರಿಂದ ಪಂದ್ಯ ಸೋತೆವು..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರೋಚಕ ಜಯ ಸಾಧಿಸಿದೆ. ಮುಲ್ಲನ್​ಪುರ್​ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶುಭ್​ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ 20 ಓವರ್​ಗಳಲ್ಲಿ 162 ರನ್ ಕಲೆಹಾಕಿದ್ದರು. ಈ ಗುರಿಯನ್ನು ಪಂಜಾಬ್ ಕಿಂಗ್ಸ್ 19.1 ಓವರ್​​ಗಳಲ್ಲಿ ಚೇಸ್ ಮಾಡಿ ಮೂರು ವಿಕೆಟ್​ಗಳ ರೋಚಕ ಜಯ ಸಾಧಿಸಿತು.

ಈ ರೋಚಕ ಸೋಲಿನ ಬಳಿಕ ಮಾತನಾಡಿದ ಗುಜರಾತ್ ಟೈಟಾನ್ಸ್​ ತಂಡದ ನಾಯಕ ಶುಭ್​​ಮನ್ ಗಿಲ್, ಮೊದಲು ಬ್ಯಾಟ್ ಮಾಡಿದ ಸಂದರ್ಭದಲ್ಲಿ ಕೊನೆಯ 5-6 ಓವರ್‌ಗಳಲ್ಲಿ ನಿರೀಕ್ಷಿತ ವೇಗದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. “ಇದು 210-220 ರನ್ ಗಳಿಸುವ ಪಿಚ್ ಆಗಿರಲಿಲ್ಲ. ನಾವು ಕನಿಷ್ಠ 175-180 ರನ್ ಗುರಿ ಹೊಂದಿದ್ದೆವು. ಚೆಂಡು ಹಳೆಯದಾದಂತೆ ಮೈದಾನದ ನೇರ ಹೊಡೆತಗಳನ್ನು ಹೊಡೆಯುವುದು ಕಷ್ಟವಾಯಿತು,” ಎಂದು ಅವರು ವಿವರಿಸಿದರು.

ಇನ್ನು  ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ತಡವಾಗಿ ಕಣಕ್ಕಿಳಿಸಿದ ನಿರ್ಧಾರದ ಬಗ್ಗೆ ಮಾತನಾಡಿದ ಗಿಲ್, “ವಿಕೆಟ್ ನಿಧಾನವಾಗಿದ್ದರಿಂದ, ಹೆಚ್ಚು ವೇಗವಿರುವ ಬೌಲರ್ ವಿಕೆಟ್ ತಂದುಕೊಡಬಲ್ಲರು ಎಂದು ನಾವು ಭಾವಿಸಿದ್ದೆವು. ಪ್ರಸಿದ್ಧ್ ಸರಿಯಾದ ಸಮಯಕ್ಕೆ ಬಂದು ವಿಕೆಟ್ ಪಡೆಯುವ ಮೂಲಕ 18ನೇ ಓವರ್‌ವರೆಗೂ ನಮ್ಮನ್ನು ಪಂದ್ಯದಲ್ಲಿ ಜೀವಂತವಾಗಿರಿಸಿದ್ದರು.

ಇದರ ಜೊತೆಗೆ ಯುವ ವೇಗಿ ಅಶೋಕ್ ಶರ್ಮಾ ಕೂಡ ಉತ್ತಮ ದಾಳಿ ಸಂಘಟಿಸಿದ್ದರು.  “ಅಶೋಕ್ ಶ್ರಮಜೀವಿ ಮತ್ತು ಉತ್ತಮ ಫೀಲ್ಡರ್. ಹೊಸ ಚೆಂಡಿನಲ್ಲಿ ಅವರ ಬೌಲಿಂಗ್ ಶೈಲಿ ನನಗೆ ಶಿಬಿರದಲ್ಲೇ ಇಷ್ಟವಾಗಿತ್ತು. ಅನುಭವ ಹೆಚ್ಚಾದಂತೆ ಅವರು ತಂಡದ ಅಮೂಲ್ಯ ಆಸ್ತಿಯಾಗಲಿದ್ದಾರೆ,” ಎಂದು ಶುಭ್​ಮನ್ ಗಿಲ್ ಹೇಳಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸೋಲಿಗೆ ಕಾರಣವಾಗಿದ್ದು ಮಳೆ. ನಾವು ಅಂತಿಮ ಓವರ್​ಗಳ ವೇಳೆ ಕಂಬ್ಯಾಕ್ ಮಾಡಿದರೂ ಮಳೆ ಬಂದಿದ್ದರಿಂದ ಚೆಂಡು ಒದ್ದೆಯಾಗಿತ್ತು. ಇದರಿಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ಬ್ಯಾಟಿಂಗ್ ಸುಲಭವಾಯಿತು ಎಂದು ಶುಭ್​ಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.

  • ಈ ಪಂದ್ಯದ ದ್ವಿತೀಯ ಇನಿಂಗ್ಸ್​ ವೇಳೆ ತುಂತುರು ಮಳೆಯಾಗಿತ್ತು.
  • ತುಂತುರು ಮಳೆ ಬಂದರೂ ಪಂದ್ಯವನ್ನು ಮುಂದುವರೆಸಲಾಗಿತ್ತು.
  • ಚೆಂಡು ಒದ್ದೆಯಾದರೆ ಬೌಲರ್​ಗಳಿಗೆ ಬಾಲ್​ ಮೇಲೆ ಹೆಚ್ಚಿನ ಗ್ರಿಪ್​ ಸಿಗುವುದಿಲ್ಲ.

ಅಂತಿಮವಾಗಿ ಈ ಸೋಲಿನಿಂದ ಕಂಗೆಡದಂತೆ ತಂಡದ ಸದಸ್ಯರಿಗೆ ಕಿವಿಮಾತು ಹೇಳಿದ ಶುಭ್​ಮನ್ ಗಿಲ್, “ನಾವು ಉತ್ತಮವಾಗಿಯೇ ಆಡಿದ್ದೇವೆ. ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ಇಂಟೆನ್ಸಿಟಿ ಮತ್ತು  ಶ್ರಮದೊಂದಿಗೆ ಮರಳೋಣ. ತಪ್ಪುಗಳಿಂದ ಕಲಿತು ಸಾಗುವುದೇ ಮುಖ್ಯ ಎಂದು ತಂಡದ ಹುಮ್ಮಸ್ಸು ಹೆಚ್ಚಿಸುವ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಈ ಕೂಪರ್ ಕೊನೊಲಿ ಯಾರು ಗೊತ್ತಾ?

ಇನ್ನು ಮೊದಲ ಮ್ಯಾಚ್​ನಲ್ಲಿ ಸೋಲನುಭವಿಸಿರುವ ಗುಜರಾತ್ ಟೈಟಾನ್ಸ್ ತಂಡವು ಏಪ್ರಿಲ್ 4 ರಂದು ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

 

Source link

‘ನಿವೃತ್ತಿ ದಿನ ಹತ್ತಿರ ಬಂತು’; ಪ್ರಭಾಸ್ ಹೊಸ ಲುಕ್ ನೋಡಿ ಬಂತು ಟೀಕೆ

ನಟ ಪ್ರಭಾಸ್ ಅವರು (Prabhas) ಒಮ್ಮೊಮ್ಮೆ ಒಂದೊಂದು ರೀತಿ ಕಾಣಿಸುತ್ತಾರೆ. ಕೆಲವೊಮ್ಮೆ ಅವರು ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಕಾಣಿಸುತ್ತಾರೆ. ಕೆಲವೊಮ್ಮೆ ಅವರು ವಯಸ್ಸಾದವರಂತೆ ಕಾಣಿಸುತ್ತಾರೆ. ಈ ಸಮಯದಲ್ಲಿ ಅವರನ್ನು ಸಾಕಷ್ಟು ಟೀಕೆ ಮಾಡಲಾಗುತ್ತದೆ. ಈಗಲೂ ಹಾಗೆಯೇ ಆಗಿದೆ. ಪ್ರಭಾಸ್ ಅವರನ್ನು ನೋಡಿ ಟೀಕಿಸಲಾಗಿದೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಲುಕ್ ಬದಲಿಸುವಂತೆ ಕೋರಿಕೆ ಇಟ್ಟಿದ್ದಾರೆ.

ಟಾಲಿವುಡ್ ನಟ ಶರ್ವ ಅವರ ಹೊಸ ಸಿನಿಮಾ ‘ಬೈಕರ್’ ಏಪ್ರಿಲ್ 3ರಂದು ತೆರೆಗೆ ಬರುತ್ತಿದೆ. ಏಪ್ರಿಲ್ 2ರಂದು ಪೇಯ್ಡ್ ಪ್ರೀಮಿಯರ್​​ಗಳನ್ನು ಆಯೋಜನೆ ಮಾಡಲಾಗಿದೆ. ಈ ಸಿನಿಮಾದ ಪ್ರಚಾರದಲ್ಲಿ ಪ್ರಭಾಸ್ ಭಾಗಿ ಆಗಿದ್ದಾರೆ. ಇತ್ತೀಚೆಗೆ ಅವರು ಟ್ವೀಟ್ ಮಾಡಿ ಸಿನಿಮಾದ ಟ್ರೇಲರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಈಗ ಪ್ರಮೋಷನ್ ವಿಡಿಯೋದ ಭಾಗ ಆಗಿದ್ದಾರೆ.

ಪ್ರಭಾಸ್ ಅವರು ಬೈಕ್ ಏರಿ ಹೋಗುತ್ತಿರುವ ವಿಡಿಯೋ ಇದಾಗಿದೆ. ‘ರೇಸ್​​ಗೆ ರೆಡಿ’ ಆಗಿ ಎಂದು ಅವರು ಕೋರಿಕೊಳ್ಳುತ್ತಾರೆ. ಈ ವಿಡಿಯೋ ವೈರಲ್ ಆಗಿದೆ. ಸಿನಿಮಾ ನಿರ್ಮಾಣ ಮಾಡಿರೋ ‘ಯುವಿ ಕ್ರಿಯೇಷನ್ಸ್’ ಈ ವಿಡಿಯೋನ ಹಂಚಿಕೊಂಡಿದೆ. ಇದಕ್ಕೆ ಅಭಿಮಾನಿಗಳ ಕಡೆಯಿಂದ ವಿವಿಧ ರೀತಿಯ ಕಮೆಂಟ್​​​ಗಳು ಬರುತ್ತಿವೆ. ಅನೇಕರು ಪ್ರಭಾಸ್ ಅವರ ಲುಕ್ ಅನ್ನು ಟೀಕೆ ಮಾಡಿದ್ದಾರೆ. ಅವರಿಗೆ ವಯಸ್ಸಾದಂತೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ‘ನಿವೃತ್ತಿ ದಿನ ಹತ್ತಿರವಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಭಾಸ್ ಸಿನಿಮಾದಿಂದ ಹೊರಬಂದ ಪ್ರಕಾಶ್ ರೈ: ಕಾರಣವೇನು?

ಪ್ರಭಾಸ್ ಅವರು ‘ಸ್ಪಿರಿಟ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ರಾಜಾ ಸಾಬ್’ ಹೀನಾಯವಾಗಿ ಸೋಲು ಕಂಡಿತು. ಈ ಕಾರಣದಿಂದ ಅವರಿಗೆ ಒಂದು ದೊಡ್ಡ ಗೆಲುವಿನ ಅಗತ್ಯವಿದೆ. ಆ ಗೆಲುವು ‘ಸ್ಪಿರಿಟ್’ ಚಿತ್ರದ ಮೂಲಕ ಸಿಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ. ಈ ಸಿನಿಮಾಗೆ ಸಂದೀಪ್ ರೆಡ್ಡಿ ವಂಗ ಅವರು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಲ್ಲರೂ ಆಡಿದ ನಾಟಕಕ್ಕೆ ಮೂರ್ಖನಾದ ಜೆಡಿ; ಫೈನಲ್ ಜಡ್ಜ್​​ಮೆಂಟ್ ಕೊಡೋ ಎಚ್ಚರಿಕೆ

‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhare Serial) ಈಗ ಮಹಾ ತಿರುವು ಎದುರಾಗಿದೆ. ಮಲ್ಲಿಯನ್ನು ಜಯದೇವ್ ಫೂಲ್ ಮಾಡಬೇಕು ಎಂದುಕೊಂಡಿದ್ದ. ಆದರೆ, ಅದು ಸಾಧ್ಯವಾಗಲೇ ಇಲ್ಲ. ಅಲ್ಲಿ ಆಗಿದ್ದೇ ಬೇರೆ. ಮೂರ್ಖರನ್ನಾಗಿ ಮಾಡುತ್ತೇನೆ, ಮೂರ್ಖರನ್ನಾಗಿ ಮಾಡುತ್ತೇನೆ ಎನ್ನುತ್ತಲೇ ಜೆಡಿಯೇ ದೊಡ್ಡ ಫೂಲ್ ಆಗಿದ್ದಾನೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ತನ್ನ ಬಂಟನಾದ ಸುನಿಯನ್ನು ಜೆಡಿಯು ಮಲ್ಲಿ ಹಿಂದೆ ಬಿಟ್ಟಿದ್ದನು. ಪ್ರೀತಿಯ ನಾಟಕ ಆಡುವಂತೆ ಸೂಚನೆ ಕೊಟ್ಟಿದ್ದನು. ಇದನ್ನು ಸುನಿಲ್ ಗಂಭೀರವಾಗಿ ಸ್ವೀಕರಿಸಿದ್ದ. ಆದರೆ, ಅಲ್ಲಾಗಿದ್ದೇ ಬೇರೆ. ಈತ ಆರಂಭದಲ್ಲಿ ಜೆಡಿ ಹೇಳಿದಂತೆ ಕೇಳುತ್ತಿದ್ದ. ಮದುವೆ ಮಂಟಪದಿಂದ ಕೊನೆಯ ಕ್ಷಣದಲ್ಲಿ ಎದ್ದು ಬರೋದಾಗಿ ಸುನಿಗೆ ಜೆಡಿ ಸೂಚನೆ ನೀಡಿದ್ದ. ಇದಕ್ಕೆ ಸುನಿ ಒಪ್ಪಿಗೆ ಕೂಡ ಕೊಟ್ಟಿದ್ದ.

ಆದರೆ, ಕೊನೆಗೆ ಅಲ್ಲಾಗಿದ್ದೇ ಬೇರೆ. ಜೆಡಿಯ ಪ್ಲ್ಯಾನ್ ಸಂಪೂರ್ಣವಾಗಿ ಬದಲಾಗಿದೆ. ಸುನಿಯು ಮಲ್ಲಿಯನ್ನು ಮದುವೆ ಆಗಿ ಬಿಟ್ಟಿದ್ದಾನೆ. ಮಲ್ಲಿ ಎಲ್ಲರಿಂದಲೂ ಅವಮಾನ ಅನುಭವಿಸಬೇಕು ಎಂಬುದು ಜೆಡಿಯ ಪ್ಲ್ಯಾನ್ ಆಗಿತ್ತು. ಆದರೆ, ಈಗ ದೊಡ್ಡ ಪ್ಲ್ಯಾನ್ ಉಲ್ಟಾ ಆದಂತೆ ಆಗಿದೆ. ಇನ್ನು, ಇಷ್ಟಕ್ಕೆ ನಿಂತಿಲ್ಲ. ಜಯದೇವ್, ಗೌತಮ್​​ನಿಂದ ಎಚ್ಚರಿಕೆ ಎದುರಿಸಿದ್ದಾನೆ.

ಇದನ್ನೂ ಓದಿ: ಅಮೃತಧಾರೆ: ಹೆಣ್ಣಿನ ಕಣ್ಣೀರು ಯುದ್ಧದ ಆರಂಭ; ಜೆಡಿಗೆ ಮಲ್ಲಿಯ ಎಚ್ಚರಿಕೆ

ಮಲ್ಲಿ ಎಂದರೆ ಗೌತಮ್​​ಗೆ ಎಲ್ಲಿಲ್ಲದ ಪ್ರೀತಿ. ಆಕೆಯ ಜೀವನ ಸರಿಯಾದ ರೀತಿಯಲ್ಲಿ ಇರಬೇಕು ಎಂದು ಗೌತಮ್ ಹಾಗೂ ಭೂಮಿಕಾ ಕನಸು ಕಾಣುತ್ತಾ ಬರುತ್ತಿದ್ದರು. ಆ ಕನಸು ಈಡೇರಿದೆ. ಮಲ್ಲಿಯನ್ನು ಸುನಿ ವಿವಾಹ ಆಗಿರುವುದು ಧಾರಾವಾಹಿಗೆ ದೊಡ್ಡ ಟ್ವಿಸ್ಟ್ ಆಗಿದೆ. ಇನ್ನು, ಮಲ್ಲಿ ಬಾಳಿಗೆ ಕಲ್ಲು ಬಿದ್ದರೆ ವಾರ್ನಿಂಗ್ ಅಲ್ಲ, ನೇರವಾಗಿ ಜಡ್​ಜ್​​ಮೆಂಟ್ ಕೊಡೋದಾಗಿಯೂ ಜಯದೇವ್ ಅವನಿಗೆ ವಾರ್ನ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬ್ಲೈಂಡ್ ಸ್ಪಾಟ್, ಎಡ ತಿರುವಿನಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ಟ್ರಕ್, ಹೊತ್ತಿಕೊಂಡ ಬೆಂಕಿ, ಒದ್ದಾಡಿದ ಬೈಕ್ ಸವಾರ

ಅಗಲವಾದ ರಸ್ತೆಯಲ್ಲಿ ಎಡ ತಿರುವು ಪಡೆಯುವಾಗ ಟ್ರಕ್ ಒಂದು ಬೈಕ್ ಸವಾರನ ಮೇಲೆ ಹರಿದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ, ಎಡ ತಿರುವು ಪಡೆಯುವಾಗ ಬೈಕ್ ಸವಾರ ಕೂಡ ಏಕಾ ಏಕಿ ಟ್ರಕ್​ನ ಎಡ ಬದಿಗೆ ಬಂದ ಪರಿಣಾಮ ಅದು ಬ್ಲೈಂಡ್​ಸ್ಪಾಟ್ ಆಗಿದ್ದ ಕಾರಣ ಟ್ರಕ್ ಚಾಲಕನಿಗೆ ಕಾಣದೆ ಬೈಕ್ ಮೇಲೆ ಹರಿಸಿದ್ದಾನೆ. ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಆ ಬೆಂಕಿಯಲ್ಲಿ ಬೈಕ್ ಸವಾರ ಸಿಲುಕಿ ಒದ್ದಾಡಿರುವ ವಿಡಿಯೋ ವೈರಲ್ ಆಗಿದೆ. ಇಂಥಾ ಅಪಘಾತಗಳನ್ನು ತಪ್ಪಿಸಲು ದೊಡ್ಡ ವಾಹನಗಳು ಎಡ ಅಥವಾ ಬಲ ತಿರುವು ಪಡೆಯುವಾಗ ಅದರಿಂದ ಅಂತರ ಕಾಯ್ದುಕೊಳ್ಳುವುದು ಒಳಿತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಡಾ. ಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮದಿನೋತ್ಸವ: ಬೆಳ್ಳಂ ಬೆಳಿಗ್ಗೆ ಮಠಕ್ಕೆ ಭಕ್ತರ ದಂಡು

ತುಮಕೂರು, ಏಪ್ರಿಲ್​​ 01: ನಡೆದಾಡುವ ದೇವರು ಎಂದು ಪ್ರಸಿದ್ಧರಾದ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವವನ್ನು ಇಂದು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಗದ್ದುಗೆಯನ್ನು ಫಲಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಬೆಳಗಿನ ಜಾವ 5 ಗಂಟೆಯಿಂದಲೇ ಭಕ್ತಾದಿಗಳು ಆಗಮಿಸಿ ಗದ್ದುಗೆಯ ದರ್ಶನ ಪಡೆಯುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಮಠದ ಆವರಣದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಎಸ್ಎಸ್ಎಲ್‌ಸಿ ಪರೀಕ್ಷೆಗಳು ನಡೆಯುತ್ತಿರುವ ಕಾರಣ ಕಾರ್ಯಕ್ರಮವನ್ನು ಒಂದೂವರೆ ಗಂಟೆಗೆ ಸೀಮಿತಗೊಳಿಸಲಾಗಿದೆ. ರಾಜ್ಯಪಾಲರು ಸೇರಿದಂತೆ ಹಲವು ಗಣ್ಯರು ಸಹ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ಕೂಪರ್ ಕೊನೊಲಿ ಯಾರು ಗೊತ್ತಾ?

Source link

Bengaluru Air Quality: ರಾಜ್ಯದ ಹಲವೆಡೆ ವಾಯು ಗುಣಮಟ್ಟದಲ್ಲಿ ಸುಧಾರಣೆ

ಬೆಂಗಳೂರು, ಏಪ್ರಿಲ್ 01: ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ಬಳ್ಳಾರಿ, ಮಂಗಳೂರಿನ ವಾಯುಗುಣಮಟ್ಟವೂ (Bengaluru Air Quality) ಹದಗೆಟ್ಟಿತ್ತು. ಆದರೆ ಇಂದು ಸ್ವಲ್ಪ ಮಟ್ಟಿಗೆ ಏರ್ ಕ್ವಾಲಿಟಿ ಸುಧಾರಿಸಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಆದರೂ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 133ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –133
  • ಮಂಗಳೂರು-123
  • ಮೈಸೂರು –130
  • ಬೆಳಗಾವಿ – 71
  • ಕಲಬುರ್ಗಿ-99
  • ಶಿವಮೊಗ್ಗ – 104
  • ಬಳ್ಳಾರಿ – 154
  • ಹುಬ್ಬಳ್ಳಿ- 88
  • ಉಡುಪಿ –118
  • ವಿಜಯಪುರ –124

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಕೊನೆ ಆಗುತ್ತಿದೆ ಮಾಯಾ ಪಾತ್ರ?

ಜೀ ಕನ್ನಡದ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಮಾಟ-ಮಂತ್ರದ ಕಥೆಯನ್ನು ಹೊಂದಿರುವ ಈ ಚಿತ್ರವು ಈಗ ಸಾಕಷ್ಟು ತಿರುವುಗಳನ್ನು ಪಡೆದು ಸಾಗುತ್ತಿರುವುದು ಗೊತ್ತೇ ಇದೆ. ಹೀಗಿರುವಾಗಲೇ ಮಾಯಾ ಪಾತ್ರವು ಕೊನೆ ಆಯಿತೇ ಎಂಬ ಪ್ರಶ್ನೆಯೂ ಮೂಡುವಂತೆ ಆಗಿದೆ. ಎಪಿಸೋಡ್​​ ಅಲ್ಲಿ ನಡೆದ ಘಟನೆಗಳು ಆ ರೀತಿಯ ಅನುಮಾನಗಳನ್ನು ಹುಟ್ಟುಹಾಕಿತು. ಆ ಬಗ್ಗೆ ಇಂದು ನಾವು ಹೇಳುತ್ತಿದ್ದೇವೆ.

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಾಳವಿಕಾ ತುಂಬಾನೇ ಕೆಟ್ಟವಳು. ಅವಳು ಮನೆಯಲ್ಲಿ ಹಿರಿಯವಳು ಮತ್ತು ಎಲ್ಲರ ಎದುರು ಒಳ್ಳೆಯವಳಂತೆ ತೋರಿಸಿಕೊಳ್ಳುತ್ತಾ ಬಂದವಳು. ಆದರೆ, ಕೊನೆಯಲ್ಲಿ ಎಲ್ಲವನ್ನೂ ಬದಲಾಯಿಸುವ ಕೆಲಸ ಮಾಡಿದಳು. ಈಗಾಗಲೇ ಅಂಬಿಕಾಳ ಸಾವಿಗೆ ಆಕೆ ಕಾರಣ ಆಗಿದ್ದಾಳೆ. ಅಂಬಿಕಾಳ ಮಗಳು ಹಿತಾಳನ್ನು ಬಲಿ ಪಡೆಯವ ಆಲೋಚನೆಯೂ ಅವಳಿಗೆ ಇದೆ.

ತನ್ನ ದಾರಿಗೆ ಅಡ್ಡಲಾದ ಯಾರೊಬ್ಬರನ್ನೂ ಮಾಳವಿಕಾ ಬಿಡೋದಿಲ್ಲ ಎಂಬುದು ವೀಕ್ಷಕರಿಗೆ ಸ್ಪಷ್ಟವಾಗಿದೆ. ತನ್ನ ದುಷ್ಟ ಶಕ್ತಿಗಳ ಮೂಲಕ ಆಕೆ ಎಲ್ಲವನ್ನೂ ಹಾಳು ಮಾಡುತ್ತಿದ್ದಾಳೆ. ಈಗ ಮಾಯಾಳನ್ನು ಆಕೆ ಕೊಂದಳೇ ಎನ್ನುವ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಉತ್ತರ ಸಿಗುವ ಸಮಯ ಸಮೀಪಿಸಿದೆ. ಇಂದಿನ ಎಪಿಸೋಡ್ ಅಲ್ಲಿ ಅದಕ್ಕೆ ಉತ್ತರ ಸಿಗಲಿದೆ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್; ವಿಲನ್ ಪಾತ್ರದ ಗುಣದಲ್ಲಿ ಬದಲಾವಣೆ?

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಾಯಾಳನ್ನು ದಾಳದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಳು ಮಾಳವಿಕಾ. ಈಗ ಆಕೆಗೆ ಸತ್ಯ ಗೊತ್ತಾಗಿದೆ. ಮಾಳವಿಕಾ ಹೇಗೆ ಮತ್ತು ಆಕೆಯ ಹಿನ್ನೆಲೆ ಏನು ಎಂಬುದು ಸ್ಪಷ್ಟವಾಗಿದೆ. ಈ ವಿಷಯವನ್ನು ದುರ್ಗಾ ಬಳಿ ಹೇಳುವುದಾಗಿ ಮಾಯಾ ನಿರ್ಧರಿಸಿದಳು. ಆಕೆಗೆ ಬೆಟ್ಟ ಒಂದಕ್ಕೆ ಬರುವಂತೆ ಹೇಳಿದ್ದಳು. ಆದರೆ, ದುರ್ಗಾ ಅಲ್ಲಿಗೆ ಹೋಗಿಲ್ಲ. ಅಲ್ಲಿಗೆ ಹೋಗಿದ್ದು ಮಾಳವಿಕಾ. ದುರ್ಗಾಳ ವೇಷದಲ್ಲಿ ಮಾಳವಿಕಾ ಅಲ್ಲಿಗೆ ತೆರಳಿದಳು. ಮಾಯಾ ಎಲ್ಲವನ್ನೂ ವಿವರಿಸುವವರಗೆ ಸುಮ್ಮನೆ ಇದ್ದ ಆಕೆ ನಂತರ ತನ್ನ ಅಸಲಿ ಬಣ್ಣವನ್ನು ತೋರಿಸಿದಳು. ಆ ಬಳಿಕ ಮಾಳವಿಕಾ, ಮಾಯಾನ ಪ್ರಪಾತಕ್ಕೆ ತಳ್ಳಿದ್ದಾಳೆ. ಈ ವೇಳೆ ರಕ್ಷಣೆಗೆ ಅಂಬಿಕಾ ಬರುತ್ತಾಳಾ ಎಂಬುದನ್ನು ಕಾದು ನೀಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಾವಣಗೆರೆ ಬೈ ಎಲೆಕ್ಷನ್​​: ಮುಸ್ಲಿಂ ಸಮುದಾಯದ ಆಕ್ರೋಶವೇ ಕಾಂಗ್ರೆಸ್​​ಗೀಗ ಟೆನ್ಷನ್​!

ದಾವಣಗೆರೆ, ಏಪ್ರಿಲ್ 01: ಉಪ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪಕ್ಷಗಳ ಪ್ರಚಾರವೂ ಭರದಿಂದ ಸಾಗಿದೆ. ಆದರೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿ ಆಡಳಿತಾರೂಢ ಕಾಂಗ್ರೆಸ್​​ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಅಸಮಾಧಾನವೇ ಈಗ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ. ಸಮುದಾಯಕ್ಕೆ ಟಿಕೆಟ್​​ ಕೈ ತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿದ್ದ ಕೆಲ ನಾಯಕರನ್ನು ಸ್ವತಃ ಸಿಎಂ ಮತ್ತು ಡಿಸಿಎಂ ಅವರೇ ಖುದ್ದು ಅಖಾಡಕ್ಕಿಳಿದು ಸಮಾಧಾನಪಡಿಸಿದ್ದರೂ, ಕೆಲ ಮುಖಂಡರ ಆಕ್ರೋಶದ ಕಿಚ್ಚು ಮಾತ್ರ ಇನ್ನೂ ಆರಿಲ್ಲ. ಹೀಗಾಗಿ ಮುಸ್ಲಿಂ ಮುಖಂಡರ ಮನೆಗಳಿಗೆ ಕಾಂಗ್ರೆಸ್ ನಾಯಕರ ಮಾರ್ಚ್ ಫಾಸ್ಟ್ ನಡೆಯುತ್ತಿದೆ.

ಹೌದು, ಉಪ ಚುನಾವಣೆಯ ಪ್ರಚಾರದ ಭರಾಟೆಯ ನಡುವೆಯೂ ಅಲ್ಪಸಂಖ್ಯಾತರ ಮುಖಂಡರನ್ನು ಸಮಾಧಾನ ಪಡಿಸುವ ಕೆಲಸಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ದಾವಣಗೆರೆಗೆ ಪ್ರಚಾರಕ್ಕೆ ಬಂದ ನಾಯಕರೆಲ್ಲ ಅಲ್ಪಸಂಖ್ಯಾತರ ಮನೆಗೆ ತೆರಳಿ ಮಾತುಕತೆ ನಡೆಸುತ್ತಿದ್ದಾರೆ. ಒಂದೊಮ್ಮೆ ಮುಸ್ಲಿಂ ಸಮುದಾಯ ನಮಗೆ ಕೈಕೊಟ್ಟರೆ ಎಂಬ ಆತಂಕ ನಾಯಕರಿಗೆ ಶುರುವಾಗಿದ್ದು, ಸಚಿವ ಜಮೀರ್​​ ಕೂಡ ಇತ್ತ ಮುಖ ಮಾಡದಿರೋದು ಟೆನ್ಷನ್​​ ಹೆಚ್ಚಿಸಿದೆ. ಕ್ಷೇತ್ರಕ್ಕೆ ಜಮೀರ್​​ ಪ್ರಚಾರಕ್ಕೆ ಬರಬೇಕೆಂಬ ಬಗ್ಗೆ ಹೆಚ್ಚಿನ ಬೇಡಿಕೆ ಇದ್ದರೂ, ಸಚಿವರು ಮಾತ್ರ ಕೇರಳಕ್ಕೆ ಹೋಗಿ ಕುಳಿತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್​​ ಟಿಕೆಟ್​​ ಕೊಡಿಸುವ ಬಗ್ಗೆ ಜಮೀರ್​​ ಶಪಥ ಮಾಡಿದ್ದರು. ಆದರೆ ಕೊನೇ ಕ್ಷಣದಲ್ಲಿ ಟಿಕೆಟ್​​ ಕೈತಪ್ಪಿದ ಕಾರಣ ಅವರು ಬೇಸರಗೊಂಡಿದ್ದಾರಾ ಎಂಬ ಅನುಮಾನವೂ ಮೂಡಿದೆ. ಇದೇ ಕಾರಣಕ್ಕೆ ಅವರು ದಾವಣಗೆರೆಯತ್ತ ಮುಖ ಮಾಡುತ್ತಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ.

ಇದನ್ನೂ ಓದಿ: ದಾವಣಗರೆ ದಕ್ಷಿಣ ಬೈ ಎಲೆಕ್ಷನ್​​ನಿಂದ ಜಮೀರ್ ದೂರವಾಗಿದ್ಯಾಕೆ? ಅಸಲಿಗೆ ಆಗಿದ್ದೇನು?

ಇಂದು ಸಿಎಂ ಸಿದ್ದರಾಮಯ್ಯರಿಂದ ಪ್ರಚಾರ

ಕಾಂಗ್ರೆಸ್​​ಗೆ ಪ್ರತಿಷ್ಠೆಯ ಕಣವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಮತಬೇಟೆ ನಡೆಸಲಿದ್ದಾರೆ. ಅಹಿಂದಾ ಮತಗಳೇ ಅಧಿಕವಾಗಿರುವ ಗ್ರಾಮೀಣ ಪ್ರದೇಶಗಳ ಮೇಲೆ ಸಿಎಂ ಕಣ್ಣಿಟ್ಟಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದ ನಾಗನೂರು, ಶಿರಮ ಗೊಂಡನಹಳ್ಳಿ, ಆರನೇ ಮೈಲು ಕಲ್ಲು, ಹೊಸ ಬೆಳವನುರು, ತುರ್ಚಘಟ್ಟ, ಹೊಸ ನಾಯಕನಹಳ್ಳಿ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ ಹದಡಿ ಗ್ರಾಮದಲ್ಲಿನ ಸಾರ್ವಜನಿಕ ಸಭೆಯಲ್ಲಿಯೂ ಅವರು ಭಾಗಿಯಾಗಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರ ಪರ ಮತಯಾಚನೆ ಮಾಡಲಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Black Cat omen: ಶುಭ ಕಾರ್ಯಗಳಿಗೆ ಹೊರಟಾಗ ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅಶುಭವೇ?

ಕಪ್ಪು ಬಣ್ಣವನ್ನು ಶನಿಯ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಇದು ನಿಧಾನಗತಿ, ಅಜ್ಞಾನ ಮತ್ತು ಅಂಧಕಾರವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಯಾವುದೇ ಬೆಕ್ಕು ದಾರಿಗೆ ಅಡ್ಡ ಬಂದರೆ, ಎಡಕ್ಕೆ ಹೋಗಲಿ ಅಥವಾ ಬಲಕ್ಕೆ ಹೋಗಲಿ, ನಮ್ಮ ಹಿರಿಯರು ವಾಹನವನ್ನು ನಿಲ್ಲಿಸಿ ಸ್ವಲ್ಪ ಸಮಯದ ನಂತರ ಮುಂದೆ ಸಾಗಲು ಸೂಚಿಸುತ್ತಾರೆ. ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅದು ಅದೃಷ್ಟವೋ ದುರದೃಷ್ಟವೋ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಶುಭ ಕಾರ್ಯಗಳಿಗೆ, ಹೊಸ ಕೆಲಸಗಳಿಗೆ, ಹೊಸ ವಾಹನ ಖರೀದಿಗೆ ಅಥವಾ ವಿವಾಹದ ವಿಷಯಗಳಿಗೆ ಹೊರಟಾಗ ಕಪ್ಪು ಬೆಕ್ಕು ಅಡ್ಡ ಬಂದರೆ, ಅದು ಕಲಹಗಳು, ಗಲಾಟೆಗಳು ಮತ್ತು ಮನಸ್ಸಿನಲ್ಲಿ ವಿಕೃತ ಭಾವನೆಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ. ಇದು ಪ್ರಾಣಹಾನಿಯ ಸೂಚನೆಯಲ್ಲ, ಆದರೆ ಮಾನಸಿಕ ಒತ್ತಡ ಮತ್ತು ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸಬಹುದು. ಕಪ್ಪು ಬೆಕ್ಕು ರಾಹು ಗ್ರಹದ ಸಂಕೇತವಾಗಿದೆ. ಕಪ್ಪು ಬೆಕ್ಕಿನ ಕಣ್ಣುಗಳು ಕೇತು ಗ್ರಹದ ಸಂಕೇತವೆಂದು ಹೇಳಲಾಗುತ್ತದೆ, ಇದರಿಂದಾಗಿ ರಾಹು ಮತ್ತು ಕೇತು ಎರಡೂ ಅಂಶಗಳು ಕಪ್ಪು ಬೆಕ್ಕಿನಲ್ಲಿ ಇರುತ್ತವೆ ಎಂಬ ನಂಬಿಕೆಯಿದೆ. ಪುರಾಣಗಳ ಪ್ರಕಾರ, ಬೆಕ್ಕು ರಾಹು ಗ್ರಹದ ವಾಹನವೂ ಹೌದು.

ಹಾವೋ ಅಡ್ಡ ಬಂದರೆ ಕೆಲವೊಮ್ಮೆ ಶುಭವೆಂದು ಪರಿಗಣಿಸಿದರೆ, ಗೋವು ಅಡ್ಡ ಬರುವುದು ಬಹಳ ಶುಭವೆಂದು ಹೇಳಲಾಗುತ್ತದೆ. ಆದರೆ, ನಾಯಿ ಗೋಳಾಡುವುದು ಅಥವಾ ಅಳುವುದು ಯಾವುದೋ ಪ್ರಾಣಹಾನಿಯ ಸೂಚನೆ ಎಂದು ಹಿರಿಯರು ಹೇಳುತ್ತಾರೆ. ಅದೇ ರೀತಿ, ಕಪ್ಪು ಬೆಕ್ಕು ಅಡ್ಡ ಬರುವುದು ಅಪಾಯದ ಸೂಚನೆ. ಇದು ನಿಮ್ಮ ಮೇಲೆ ದಾಳಿ, ಗಲಾಟೆ, ಅಥವಾ ಕಲಹಗಳಿಗೆ ದಾರಿ ಮಾಡಿಕೊಡಬಹುದು. ಅಲ್ಲದೆ, ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು, ವಿಳಂಬಗಳು ಮತ್ತು ಅಪೂರ್ಣ ಕೆಲಸಗಳಿಗೆ ಕಾರಣವಾಗಬಹುದು. ಮನಸ್ಸಿನ ಸ್ಮೃತಿ ಪಟಲದ ಮೇಲೆ ಇದರ ಪ್ರಭಾವ ನೇರವಾಗಿ ಬೀಳುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಯಾವುದೇ ದಿನ, ವಾರ, ಅಥವಾ ಕಾಲ ಎಂದು ಪರಿಗಣಿಸದೆ, ಒಳ್ಳೆಯ ಮನಸ್ಸಿನಿಂದ ಹೊರಟಾಗ ಕಪ್ಪು ಬೆಕ್ಕು ಅಡ್ಡ ಬಂದರೆ, ತಕ್ಷಣಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಇದರ ಪರಿಹಾರವಾಗಿ, ಸ್ವಲ್ಪ ಸಮಯ ಕಾಯುವುದು ಉತ್ತಮ. ನಿಮ್ಮ ಕಾರಿನಲ್ಲಿ ನೀರಿದ್ದರೆ, ನೀರನ್ನು ಕುಡಿಯಿರಿ. ಒಂದೆರಡು ನಿಮಿಷ ಇಳಿದು ಓಡಾಡಿ ಅಥವಾ ಟ್ರಾಫಿಕ್‌ನಲ್ಲಿ ಸಿಲುಕಿದ್ದರೆ ರಸ್ತೆಯ ಬದಿಯಲ್ಲಿ ನಿಲ್ಲಿಸಿ. ಈ ರೀತಿಯಾಗಿ ಸ್ವಲ್ಪ ವಿರಾಮ ತೆಗೆದುಕೊಂಡು ಮುಂದೆ ಸಾಗುವುದು ಒಳ್ಳೆಯದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link