ತಾತ, ಅಪ್ಪನ ಹಾದಿಯಲ್ಲಿ ಅಜಯ್ ದೇವಗನ್ ಪುತ್ರ ಯುಗ್: ಜಿಮ್ ವಿಡಿಯೋ ವೈರಲ್ – Kannada News

ಬಾಲಿವುಡ್‌ನ ಸ್ಟಾರ್ ಜೋಡಿ ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಮುದ್ದಿನ ಮಗ ಯುಗ್ ದೇವಗನ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ತಮ್ಮ ಅದ್ಭುತ ಬಾಡಿ ಟ್ರಾನ್ಸ್‌ಫಾರ್ಮೇಶನ್ ಮೂಲಕ ಯುಗ್ ಎಲ್ಲರ ಗಮನ ಸೆಳೆದಿದ್ದಾರೆ. 15 ವರ್ಷದ ಯುಗ್‌ ಫಿಟ್‌ನೆಸ್ ನೋಡಿದರೆ, ಅವರು ಅಜ್ಜ, ಖ್ಯಾತ ಸಾಹಸ ನಿರ್ದೇಶಕ ವೀರೂ ದೇವಗನ್ ಮತ್ತು ತಂದೆ ಅಜಯ್ ದೇವಗನ್ ಅವರ ಹೆಜ್ಜೆಗಳನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಪ್ರಸ್ತುತ ಯುಗ್ ದೇವಗನ್ ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುಗ್ ಕಠಿಣವಾದ ಪುಷ್-ಅಪ್ಸ್‌ಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಅವನು ಜಿಮ್ ವರ್ಕೌಟ್ ಆರಂಭಿಸಿದ ದಿನಗಳಿಂದ ಹಿಡಿದು, ಪ್ರಸ್ತುತ ಅವರ ದೇಹ ಈಗ ಹೇಗೆ ಬದಲಾಗಿದೆ ಎಂಬ ಸಂಪೂರ್ಣವಾಗಿ ವಿಡಿಯೋದಲ್ಲಿ ತೋರಿಸಲಾಗಿದೆ. ಯುಗ್‌ ಅವರ ಆರಂಭಿಕ ಮತ್ತು ಇಂದಿನ ಬಾಡಿಯನ್ನು ಹೋಲಿಸಿ ನೋಡಿದರೆ, ಅವರ ಕಠಿಣ ಪರಿಶ್ರಮ ಕಾಣುತ್ತದೆ.

ಯುಗ್‌ನ ಅವರ ಅದ್ಭುತ ಬದಲಾವಣೆಯನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಈಗಾಗಲೇ ಫಿಟ್‌ನೆಸ್ ಪ್ರೇಮಿಯಾಗಿರುವ ಯುಗ್‌ನ ಕಠಿಣ ಪರಿಶ್ರಮ, ದೈಹಿಕ ಸಾಮರ್ಥ್ಯ ಮತ್ತು ತ್ರಾಣವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ವಿಡಿಯೋ ಹಂಚಿಕೊಂಡ ಫಿಟ್‌ನೆಸ್ ತರಬೇತುದಾರ ರಾಬಿನ್ ಬಹ್ಲ್

ಖ್ಯಾತ ಕ್ರೀಡಾಪಟು ಮತ್ತು ಫಿಟ್‌ನೆಸ್ ಟ್ರೇನರ್ ರಾಬಿನ್ ಬಹ್ಲ್ ಅವರು ಯುಗ್‌ನ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ ಭಾವುಕ ಸಾಲುಗಳನ್ನು ಬರೆದುಕೊಂಡಿರುವ ಅವರು, ‘ಈ ಜಿಮ್‌ನಲ್ಲಿ ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವ ಹುಡುಗ ಇವನೇ. ಅವನ ಸಮರ್ಪಣಾ ಮನೋಭಾವವನ್ನು ನೋಡುವುದು ನನಗೆ ಸ್ಫೂರ್ತಿ ನೀಡುತ್ತದೆ. ಅವನನ್ನು ಅತ್ಯುತ್ತಮ ಫಿಟ್‌ನೆಸ್ ಶಿಖರಕ್ಕೆ ಕೊಂಡೊಯ್ಯಲು ಮತ್ತು ಈ ಜರ್ನಿಯನ್ನು ಮುಂದುವರಿಸಲು ನನಗೆ ಇದು ಪ್ರೇರಣೆ ನೀಡಿದೆ. ಇದು ಕೇವಲ ಆರಂಭವಷ್ಟೇ’ ಎಂದು ಯುಗ್‌ನನ್ನು ಹೊಗಳಿದ್ದಾರೆ.

ಇದನ್ನೂ ಓದಿ: ಅಜಯ್ ದೇವಗನ್​ಗಿಂತ ಅಕ್ಷಯ್ ಕುಮಾರ್ ಸಂಬಳ ಹೆಚ್ಚು? ಸ್ಪಷ್ಟನೆ ನೀಡಿದ ಚಿತ್ರತಂಡ

ರಾಬಿನ್ ಬಹ್ಲ್ ಅವರ ಈ ಪೋಸ್ಟ್‌ಗೆ ಯುಗ್ ಅವರ ತಾಯಿ, ನಟಿ ಕಾಜೋಲ್ ಕಾಮೆಂಟ್ ಬಾಕ್ಸ್‌ನಲ್ಲಿ ‘ಫೈರ್’ ಎಮೋಜಿಯನ್ನು ಹಾಕುವ ಮೂಲಕ ಮಗನಿಗೆ ಬೆಂಬಲ ನೀಡಿದ್ದಾರೆ.

ಯುಗ್ ಮಾಧ್ಯಮಗಳ ಕ್ಯಾಮೆರಾಗಳಿಂದ ಮತ್ತು ಗ್ಲಾಮರ್ ಪ್ರಪಂಚದಿಂದ ದೂರ ಉಳಿಯಲು ಬಯಸುತ್ತಾರೆ. ಕೆಲವೇ ಕೆಲವು ಕಾರ್ಯಕ್ರಮಗಳಲ್ಲಿ ಮಾತ್ರ ಅವರು ಪೋಷಕರ ಜೊತೆ ಕಾಣಿಸಿಕೊಳ್ಳುತ್ತಾರೆ. ಯುಗ್ ಈಗಾಗಲೇ ಚಿತ್ರರಂಗಕ್ಕೆ ಪರೋಕ್ಷವಾಗಿ ಕಾಲಿಟ್ಟಿರುವುದು ಹಲವರಿಗೆ ತಿಳಿದಿಲ್ಲ. ಹೌದು, ಪ್ರಸಿದ್ಧ ಹಾಲಿವುಡ್ ಚಿತ್ರ ‘ಕರಾಟೆ ಕಿಡ್- ಲೆಜೆಂಡ್ಸ್’ ಸಿನಿಮಾದ ಹಿಂದಿ ಆವೃತ್ತಿಗೆ ಯುಗ್ ಧ್ವನಿ ನೀಡಿದ್ದಾರೆ. ಅಂದರೆ, ಅವರು ಈ ಚಿತ್ರಕ್ಕೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಯುಗ್ ಸಿನಿಮಾ ಕೆಲಸಗಳ ಜೊತೆಗೆ ತನ್ನ ವಿದ್ಯಾಭ್ಯಾಸದ ಕಡೆಯೂ ಸಂಪೂರ್ಣ ಗಮನ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *