All posts by nagaraj11081993

ಸಿರುಗುಪ್ಪ ಬಳಿ ಕಾರು ಪಲ್ಟಿಯಾಗಿ ಭೀಕರ ಅಪಘಾತ: ತಮಿಳುನಾಡಿನ ದೇಗುಲಕ್ಕೆ ಹೋಗಿ ಬರುತ್ತಿದ್ದ ಒಂದೇ ಕುಟುಂಬದ ಮೂವರು ಸಾವು – Kannada News | Fatal Car Crash Near Siruguppa: Three Family Members Killed While Returning From Tamil Nadu Temple Visit

ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿರುವುದು

ಬಳ್ಳಾರಿ, ಡಿಸೆಂಬರ್ 24: ಬಳ್ಳಾರಿ (Ballari) ಜಿಲ್ಲೆ ಸಿರುಗುಪ್ಪ ತಾಲೂಕಿನ ದೇವಿನಗರ ಕ್ಯಾಂಪ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿ–ಸಿರುಗುಪ್ಪ ರಾಜ್ಯ ಹೆದ್ದಾರಿ (ಎನ್‌ಎಚ್-150)ಯಲ್ಲಿ ಬುಧವಾರ ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ. ನಿಟ್ಟೂರು ಗ್ರಾಮದ ಪ್ರಸಾದ್ ರಾವ್ ಸೇರಿದಂತೆ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ತಕ್ಷಣ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಒಂದೇ ಕುಟುಂಬದ ಐವರು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದೆ. ಅತಿವೇಗ ಅಥವಾ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ರಸ್ತೆ ಬದಿಯ ಕಟ್ಟೆಗೆ ಡಿಕ್ಕಿಯಾಗಿ ಪಲ್ಟಿಯಾಗಿರಬಹುದು ಎಂದು ಶಂಕಿಸಲಾಗಿದೆ.

ಅಪಘಾತದ ಮಾಹಿತಿ ತಿಳಿದ ಕೂಡಲೇ ಸಿರುಗುಪ್ಪ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

(ಮಾಹಿತಿ ಅಪ್​ಡೇಟ್ ಆಗಲಿದೆ)

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಮಿಷನ್ ಸರ್ಟಿಫಿಕೇಟ್‌ ಇಲ್ಲ, ಪರ್ಮಿಟ್ ಇಲ್ಲ! ಪರಿವಾಹನ್ ದೋಷದಿಂದ ವಾಹನ ಮಾಲೀಕರ ಪರದಾಟ – Kannada News | Karnataka VAHAN 4 Crisis: Emission Certificate Delays Hit Vehicle Owners Hard

ಪರಿವಾಹನ್ ದೋಷದಿಂದ ವಾಹನ ಮಾಲೀಕರ ಪರದಾಟ

ಬೆಂಗಳೂರು, ಡಿಸೆಂಬರ್ 24: ಕೇಂದ್ರ ಸರ್ಕಾರದ ವಾಹನ್–4 (Parivahan Portal) ಪೋರ್ಟಲ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ರಾಜ್ಯದ ವಾಹನಗಳ ಎಮಿಷನ್ ಸರ್ಟಿಫಿಕೇಟ್‌ಗಳು ಅಪ್ಡೇಟ್ ಆಗುತ್ತಿಲ್ಲ. ಈ ಸಮಸ್ಯೆಯಿಂದ ವೈಟ್ ಬೋರ್ಡ್ (ಖಾಸಗಿ) ಹಾಗೂ ಯೆಲ್ಲೋ ಬೋರ್ಡ್ (ವಾಣಿಜ್ಯ) ವಾಹನ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಎಮಿಷನ್ ಸರ್ಟಿಫಿಕೇಟ್ ಇಲ್ಲದೆ ಬಾಡಿಗೆಗೆ ಹೋಗುವವರ ಪರದಾಟ

ವಾಹನ್–4 ನಲ್ಲಿ ಎಮಿಷನ್ ಸರ್ಟಿಫಿಕೇಟ್ ಅಪ್ಡೇಟ್ ಆಗದ ಕಾರಣ ಸಾವಿರಾರು ಟೂರ್ಸ್ ಅಂಡ್ ಟ್ರಾವೆಲ್ಸ್ ವಾಹನಗಳು ನಿಂತಲ್ಲೇ ನಿಂತಿವೆ. ಶಬರಿಮಲೆ ಯಾತ್ರೆ, ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಬಾಡಿಗೆ ಹೋಗಲು ಸಾಧ್ಯವಾಗದೆ ವಾಹನ ಮಾಲೀಕರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಎಮಿಷನ್ ಸರ್ಟಿಫಿಕೇಟ್ ಇಲ್ಲದೆ ಹೊರ ರಾಜ್ಯಗಳಿಗೆ ತೆರಳಲು ಅಗತ್ಯವಿರುವ ಸ್ಪೆಷಲ್ ಪರ್ಮಿಟ್ ಕೂಡ ದೊರೆಯುತ್ತಿಲ್ಲ. ಅಲ್ಲದೆ, ಅಪಘಾತ ಸಂಭವಿಸಿದರೆ ಇನ್ಶುರೆನ್ಸ್ ಕ್ಲೈಮ್ ಕೂಡ ಆಗುವುದಿಲ್ಲ ಎಂಬ ಆತಂಕ ವ್ಯಕ್ತವಾಗಿದೆ.

ನಮ್ಮ ರಾಜ್ಯದಲ್ಲಿ ಮಾತ್ರ ಈ ಸಮಸ್ಯೆ?

ಅಕ್ಕಪಕ್ಕದ ರಾಜ್ಯಗಳಲ್ಲಿ ಎಮಿಷನ್ ಸರ್ಟಿಫಿಕೇಟ್ ಅಪ್ಡೇಟ್ ಆಗುತ್ತಿದ್ದರೂ, ನಮ್ಮ ರಾಜ್ಯದಲ್ಲಿ ಮಾತ್ರ ಈ ಸಮಸ್ಯೆ ಮುಂದುವರಿದಿದೆ. ಈ ಕುರಿತು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ ಅಸೋಸಿಯೇಷನ್ ಸಾರಿಗೆ ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ. ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ವಾಹನ ಮಾಲೀಕರ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಡೆವಿಲ್​​’ಗೆ ಅಸಲಿ ಚಾಲೆಂಜ್ ಈಗ ಶುರು; ಬಜೆಟ್ ಎಷ್ಟು? ಗಳಿಕೆ ಎಷ್ಟು? – Kannada News | Darshan’s ‘Devil’ Box Office: Faces Stiff Challenge from ‘Mark’ and ’45’ Movies

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಈ ವಾರ ಎರಡು ದೊಡ್ಡ ಚಾಲೆಂಜ್​​ಗಳು ಎದುರಾಗುತ್ತಾ ಇವೆ. ಅದುವೇ ಮಾರ್ಕ್ ಹಾಗೂ ‘45’ ಸಿನಿಮಾಗಳು. ಎರಡೂ ಭಿನ್ನ ಜಾನರ್​ ಚಿತ್ರಗಳು. ಎರಡೂ ಚಿತ್ರಕ್ಕೆ ಅದರದ್ದೇ ಆದ ಆಡಿಯನ್ಸ್ ಇದ್ದಾರೆ. ಈ ಎರಡೂ ಸಿನಿಮಾಗಳು ಡೆವಿಲ್ ಕಲೆಕ್ಷನ್​​ಗೆ ಸಾಕಷ್ಟು ಹೊಡೆತ ಕೊಡೋ ಎಲ್ಲಾ ಸಾಧ್ಯತೆ ಇದೆ. ಈಗೇ ತಗ್ಗಿರೋ ಕಲೆಕ್ಷನ್, ನಂತರ ಪಾತಾಳ ಕಾಣಲಿದೆ.

‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಯಿತು. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆ ತಕ್ಕ ಮಟ್ಟಿಗೆ ರೀಚ್ ಆಗಲು ಸಿನಿಮಾ ಬಳಿ ಸಾಧ್ಯವಾಗಿದೆ. ಈ ಸಿನಿಮಾ ಮೊದಲ ದಿನ 10 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಆ ಬಳಿಕ ನಿಧಾನವಾಗಿ ಸಿನಿಮಾ ಗಳಿಕೆಯಲ್ಲಿ ಕುಸಿತ ಕಂಡಿತು. ಈಗ ಸಿನಿಮಾದ ಒಟ್ಟಾರೆ ಕಲೆಕ್ಷನ್ 33.26 ಕೋಟಿ ರೂಪಾಯಿ (ಗ್ರಾಸ್ ಕಲೆಕ್ಷನ್) ಆಗಿದೆ.

ಚಿತ್ರದ ಬಜೆಟ್ ಸರಿ ಸುಮಾರು 45 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಟಿವಿ ಹಕ್ಕು, ಒಟಿಟಿ ಹಕ್ಕು ಮಾರಾಟ ಸೇರಿದರೂ ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲಿ ಲಾಭ ಆಗೋದು ಅನುಮಾನವೇ. ಮುಂದಿನ ದಿನಗಳಲ್ಲಿ ಚಿತ್ರದ ಲೈಪ್​ಟೈಮ್ ಕಲೆಕ್ಷನ್ ಇನ್ನು ತೀವ್ರವಾಗಿ ಏರಿಕೆ ಕಾಣೊದು ಅನುಮಾನವೇ.

ಇದನ್ನೂ ಓದಿ: ‘ಈ ಹಿಂದೆ ದರ್ಶನ್ ಬಗ್ಗೆ ಕೆಟ್ಟದ್ದು ಮಾತನಾಡಿದ್ರೆ ತೋರಿಸಲಿ’; ಕಿಚ್ಚ ಸುದೀಪ್ ಸವಾಲು

ದರ್ಶನ್ ಅವರು ಸದ್ಯ ಜೈಲಿನಲ್ಲಿ ಇದ್ದಾರೆ. ಹೀಗಿರುವಾಗಲೇ ಅವರ ಚಿತ್ರ ತೆರೆಗೆ ಬಂದಿದೆ. ಈ ಸಿನಿಮಾ ಪ್ರಚಾರ ಜವಾಬ್ದಾರಿಯನ್ನು ಅಭಿಮಾನಿಗಳು ವಹಿಸಿಕೊಂಡಿದ್ದರು. ಅವರು ಒಂದು ಹಂತಕ್ಕೆ ಸಿನಿಮಾನ ಮೇಲಕ್ಕೆ ತೆಗೆದುಕೊಂಡು ಹೋದರು. ಈಗ ‘ಮಾರ್ಕ್’ ಹಾಗೂ ‘45’ ಚಿತ್ರದಿಂದ ಸಿನಿಮಾ ಸಾಕಷ್ಟು ಸ್ಪರ್ಧೆ ಎದುರಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಉದ್ಘಾಟನೆಗೆ ತಡವಾಯ್ತೆಂದು ಓಡೋಡಿ ಬಂದ ಮೇಯರ್, ಕಾಯದೆ ಹೊರಟೇ ಬಿಡ್ತು ರೈಲು – Kannada News | Train Leaves on Time as Mexican Mayor Misses Inaugural Ride

ಮೆಕ್ಸಿಕೋ, ಡಿಸೆಂಬರ್ 24: ಮೇಯರ್ ಉದ್ಘಾಟನೆಗೆ ತಡವಾಗಿ ಬಂದಿದ್ದಕ್ಕೆ ರೈಲು ನಿಲ್ಲಲೇ ಇಲ್ಲ, ಮೇಯರ್​ಗೆ ಕಾಯದೆ ಹೊರಟೇ ಬಿಟ್ಟಿತ್ತು. ಈ ಘಟನೆ ನಡೆದಿದ್ದು ಮೆಕ್ಸಿಕೋದಲ್ಲಿ. ಹೊಸ ರೈಲು ಉದ್ಘಾಟನೆ ಕಾರ್ಯಕ್ರಮ ಅಂದು ನಡೆಯಬೇಕಿತ್ತು. ಸಮಯಕ್ಕೆ ಸರಿಯಾಗಿ ಬರಲಾಗದೆ ಮೇಯರ್ ತಡವಾಗಿ ಓಡುತ್ತಾ ಬಂದಿದ್ದಾರೆ. ಅವರು ಬರುತ್ತಿದ್ದಂತೆ ರೈಲು ಹೊರಟೇ ಬಿಟ್ಟಿತ್ತು. ಅವರಿಗಾಗಿ ಒಂದು ನಿಮಿಷವೂ ಕಾಯಲಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Bengaluru Air Quality: ಬೆಂಗಳೂರಿನಲ್ಲಿ ಉಸಿರಾಟಕ್ಕೆ ಕುತ್ತು ಗಾಳಿಯಲ್ಲಿರುವ ಈ ಅಗೋಚರ ಕಣಗಳು! – Kannada News | Bangalore Air Pollution Crisis: Bengaluru is reminding Delhi in terms of Air quality, hazardous PM level

ಬೆಂಗಳೂರಿನಲ್ಲಿ ಉಸಿರಾಟಕ್ಕೆ ಕುತ್ತು ಗಾಳಿಯಲ್ಲಿರುವ ಈ ಅಗೋಚರ ಕಣಗಳು!

ಬೆಂಗಳೂರು, ಡಿಸೆಂಬರ್ 23: ಕಳೆದ 5 ವರ್ಷಗಳಿಂದ ಬೆಂಗಳೂರಿನ ಗಾಳಿಯ ಗುಣಮಟ್ಟ (Bengaluru Air Quality) ಹದಗೆಡುತ್ತಲೇ ಇದ್ದು, ಗಾಳಿಯ PM (Particulate Matter) ಪ್ರಮಾಣ ಸಹ ಮಿತಿ ಮೀರಿದೆ. ಇಂದಿನ ಬೆಂಗಳೂರಿನಲ್ಲಿ ಗಾರ್ಡನ್ ಸಿಟಿಯ ತಂಪಾದ ಗಾಳಿಗಿಂತ ಹೆಚ್ಚಾಗಿ ‘ಧೂಳಿನ ಕಣಗಳೇ’ ನಮ್ಮನ್ನು ಆವರಿಸಿವೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (AQI) ಇಂದಿನ ಗಾಳಿಯ ಗುಣಮಟ್ಟ 170 ಇದ್ದು, ನಗರದ ಹಲವು ಭಾಗಗಳಲ್ಲಿ ಗಾಳಿಯು ‘ಅಪಾಯಕಾರಿ’ ಮಟ್ಟದಲ್ಲಿದೆ. ಮುಖ್ಯವಾಗಿ ಗಾಳಿಯಲ್ಲಿರುವ PM2.5 ಮತ್ತು PM10 ಪ್ರಮಾಣ ಹೆಚ್ಚಿದ್ದು, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳನ್ನೂ ಹೆಚ್ಚಿಸಿದೆ.

ಏರ್ ಕ್ವಾಲಿಟಿ ಹದಗೆಡಿಸುತ್ತಿದೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ

ಬೆಂಗಳೂರಿನ ಇಂದಿನ ಗಾಳಿಯಲ್ಲಿ PM2.5, 82 µg/m³ ಇದ್ದು, PM10 119 µg/m³ ಇದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ (WHO) ಸುರಕ್ಷಿತ ಮಿತಿಗಿಂತ (15 µg/m³) ಸುಮಾರು 4.2 ಪಟ್ಟು ಹೆಚ್ಚಾಗಿದೆ. PM ಎಂದರೆ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು. PM2.5 ಎಂದರೆ ವಾಯುವಿನಲ್ಲಿರುವ ಸಣ್ಣ ಗಾತ್ರದ ಕಣಗಳಾದರೆ, PM10 ಎಂದರೆ ಸ್ವಲ್ಪ ದೊಡ್ಡ ಗಾತ್ರದ ಕಣಗಳಾಗಿವೆ.

ಬೆಂಗಳೂರಿನಲ್ಲಿ ಈಗ ವಾಹನಗಳ ಸಂಖ್ಯೆ 1.2 ಕೋಟಿ ದಾಟಿದ್ದು, ನಗರದ ಮಾಲಿನ್ಯಕ್ಕೆ 42% ರಷ್ಟು ಕೊಡುಗೆ ನೀಡುತ್ತಿರುವುದು ಈ ವಾಹನಗಳ ಹೊಗೆ. ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ AQI ಮಟ್ಟವು ನಗರದ ಸರಾಸರಿಗಿಂತ 30% ಹೆಚ್ಚು ದಾಖಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಾಳಿಯ ಗುಣಮಟ್ಟ 150 ದಾಟಿದರೆ ಶ್ವಾಸಕೋಶ ಕಾಯಿಲೆಯ ಜೊತೆಗೆ ಹೃದಯ ಸಂಬಂಧಿ ರೋಗಗಳೂ ಬರಬಹುದೆಂದು ತಜ್ಞರು ಹೇಳುತ್ತಾರೆ. ಹೀಗಿರುವಾಗ ಬಳ್ಳಾರಿಯ ಜನ ಮುಂಜಾಗೃತಾ ಕ್ರಮ ವಹಿಸಬೇಕೆಂದು ತಜ್ಞರು ತಿಳಿಸಿದ್ದಾರೆ.

ಯಾಕೀ ಕಣಗಳು ಅಪಾಯಕಾರಿ

PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –170
  • ಮಂಗಳೂರು – 138
  • ಮೈಸೂರು – 123
  • ಬೆಳಗಾವಿ – 168
  • ಕಲಬುರ್ಗಿ – 119
  • ಶಿವಮೊಗ್ಗ – 79
  • ಬಳ್ಳಾರಿ –198,
  • ಹುಬ್ಬಳ್ಳಿ- 108,
  • ಉಡುಪಿ –123
  • ವಿಜಯಪುರ –97

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:28 am, Wed, 24 December 25

Source link

ವಿಷ್ಣುವರ್ಧನ್ ಕೊನೆಯ ವರ್ಷಗಳಲ್ಲಿ ಹಾಗೆ ನಡೆದುಕೊಂಡಿದ್ದೇಕೆ? ವಿವರಿಸಿದ ಕಿಚ್ಚ ಸುದೀಪ್ – Kannada News | Kichcha Sudeep’s Life Lesson: Praised Vishnuvardhan’s Wisdom

ಸುದೀಪ್ (Sudeep) ಅವರು ‘ಮಾರ್ಕ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರಲಿದೆ. ಈ ಮಧ್ಯೆ ಸುದೀಪ್ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ‘ಮಾರ್ಕ್’ ಪ್ರೀರಿಲೀಸ್ ಈವೆಂಟ್​​ನಲ್ಲಿ ಮಾತನಾಡುವಾಗ ಅವರು ಆಡಿದ ಮಾತು ಚರ್ಚೆಗೆ ಕಾರಣ ಆಗಿತ್ತು. ಈ ವಿವಾದ ಮಧ್ಯೆ ಸುದೀಪ್ ಅವರು ಒಂದು ಜೀವನದ ಪಾಠ ಹೇಳಿದ್ದಾರೆ. ‘ನಮ್ಮ ಜೊತೆ ನಿಂತುಕೊಳ್ಳುತ್ತಾರೆ ಎಂಬುದು ಗೊತ್ತಿದ್ದರೆ ಮಾತ್ರ ಯುದ್ಧಕ್ಕೆ ಹೋಗಿ’ ಎಂದು ಕಿವಿ ಮಾತು ಹೇಳಿದ್ದಾರೆ ಸುದೀಪ್.

ವಿಷ್ಣುವರ್ಧನ್ ಅವರಿಗೆ ಸುದೀಪ್ ತುಂಬಾನೇ ಆಪ್ತರಾಗಿದ್ದರು. ವಿಷ್ಣು ಅವರನ್ನು ಸುದೀಪ್ ಯಾವಾಗಲೂ ಪ್ರೀತಿಯಿಂದ ದಾದಾ ಎನ್ನುತ್ತಿದ್ದರು. ಕಿಚ್ಚ ಅವರು ವಿಷ್ಣುವರ್ಧನ್ ಕಂಡ ರೀತಿಯ ಬಗ್ಗೆ ಹೇಳಿದ್ದರು. ಅವರು ತಮ್ಮ ಕೊನೆಯ ವರ್ಷಗಳಲ್ಲಿ ತುಂಬಾನೇ ಸೈಲೆಂಟ್ ಆಗಿಯೇ ಇದ್ದರಂತೆ. ಹೀಗೇಕೆ ಎಂಬ ಪ್ರಶ್ನೆಗೆ ಸುದೀಪ್ ಉತ್ತರಿಸಿದರು.

‘ವಿಷ್ಣುವರ್ಧನ್ ದೊಡ್ಡ ವ್ಯಕ್ತಿ. ಅವರು ಬರ್ತಾ ಬರ್ತಾ ಮನೆಯಲ್ಲಿ ದೇವರು ರೀತಿ ಕೂತಿರುತ್ತಿದ್ದರು. ಅವರಿಗೆ ಇರೋ ತಾಕತ್ತಿಗೆ ಎಲ್ಲವನ್ನೂ ಬಗೆಹರಿಸಬಹುದಿತ್ತು. ಆದರೆ, ನೋಡಿ ನೋಡಿ ಸಾಕಾಗಿತ್ತು. ಅಪ್ಪಾಜಿ ಹೀಗಾಗ್ತಾ ಇದೆ ಎಂದು ಹೇಳಿದರೆ ಕಾಫಿ ಕುಡಿಯಿರಿ ಆರಾಮಾಗಿ ಇರಿ ಎನ್ನುತ್ತಿದ್ದರು. ನೀವು ಗಲಾಟೆಗೆ ಹೋದರೆ ನಿಮ್ಮ ಜೊತೆ ಇದ್ದವರು ಇರುತ್ತಲೇ ಇರಲಿಲ್ಲ’ ಎನ್ನುತ್ತಿದ್ದರು ಸುದೀಪ್.

ಇದನ್ನೂ ಓದಿ: ‘ಈ ಹಿಂದೆ ದರ್ಶನ್ ಬಗ್ಗೆ ಕೆಟ್ಟದ್ದು ಮಾತನಾಡಿದ್ರೆ ತೋರಿಸಲಿ’; ಕಿಚ್ಚ ಸುದೀಪ್ ಸವಾಲು

‘ಅದು ಅವರ ಅನುಭವ. ನಾವು ಹೇಗೆ ಇರಬೇಕು ಎಂಬುದನ್ನು ನೋಡಿಕೊಂಡರೆ ಸೊಸೈಟಿ ಇನ್ನೂ ಚೆನ್ನಾಗಿ ಆಗುತ್ತದೆ. ನಮ್ಮನೆ ಸ್ವಚ್ಛವಾಗಿಟ್ಟುಕೊಂಡರೆ ಅದರಿಂದ ಸ್ಫೂರ್ತಿ ಪಡೆದು ಪಕ್ಕದ ಮನೆಯವರು ಕ್ಲೀನ್ ಆಗಿ ಇಟ್ಟುಕೊಳ್ಳಬಹುದು. ಹೀಗೆ ಮುಂದುವರಿದು ಇಡೀ ದೇಶ ಕ್ಲೀನ್ ಆಗುತ್ತದೆ’ ಎನ್ನುತ್ತಾರೆ ಸುದೀಪ್.
‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿಜಯ್ ಕಾರ್ತಿಕೇಯನ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:34 am, Wed, 24 December 25

Source link

ಬೆಂಗಳೂರಿನ ಗೌರಿಯಿಂದ ಆಮೀರ್ ಮನಸ್ಸಿಗೆ ಸಿಕ್ಕಿತು ಶಾಂತಿ 

ಬಾಲಿವುಡ್‌ನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಆಮಿರ್ ಖಾನ್ ತಮ್ಮ ವೃತ್ತಿಪರ ಜೀವನದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಅನೇಕ ತಿರುವುಗಳನ್ನು ಕಂಡಿದ್ದಾರೆ. ಎರಡು ವಿವಾಹಗಳು ಮತ್ತು ಎರಡು ವಿಚ್ಛೇದನಗಳು ಅವರ ಜೀವನದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿವೆ. ಅವರ ಮೊದಲ ಪತ್ನಿ ರೀನಾ ದತ್ತಾ ಮತ್ತು ನಂತರ ಕಿರಣ್ ರಾವ್ ಅವರೊಂದಿಗೆ ವಿಚ್ಛೇದನ ಪಡೆದರೂ, ಅವರು ಇಬ್ಬರೊಂದಿಗೂ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿದ್ದಾರೆ ಎಂಬುದು ಅವರ ಶ್ರೇಷ್ಠ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಆದಾಗ್ಯೂ, ಇತ್ತೀಚೆಗೆ, ಗೌರಿ ಸ್ಪ್ರಾಟ್ ಎಂಬ ಬೆಂಗಳೂರು ಮಹಿಳೆ ಜೊತೆ ಅವರು ಸುತ್ತುತ್ತಿದ್ದಾರೆ. ಗೌರಿ ಅವರ ಜೀವನಕ್ಕೆ ಶಾಂತಿ ತಂದಿದ್ದಾರೆ ಎಂದು ಆಮಿರ್ ಹೇಳಿಕೊಂಡಿದ್ದಾರೆ.

ಆಮಿರ್ ಖಾನ್ ತಮ್ಮ ವೈಫಲ್ಯಗಳನ್ನು ಎಂದಿಗೂ ಮರೆಮಾಡಲು ಪ್ರಯತ್ನಿಸಲಿಲ್ಲ. ಅವರು ತಮ್ಮ ಜೀವನದಲ್ಲಿ ಮೂವರು ಮಹಿಳೆಯರ ಕೊಡುಗೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆಮಿರ್ ಪ್ರಕಾರ, ಅವರ ಮೊದಲ ಇಬ್ಬರು ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್, ಅವರ ವೃತ್ತಿಪರ ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರ ಸಹಾಯ ಮತ್ತು ಬೆಂಬಲದಿಂದಾಗಿ ಅವರು ಇಂದು ಈ ಸ್ಥಾನದಲ್ಲಿದ್ದಾರೆ ಎಂದು ಅವರು ಒಪ್ಪಿಕೊಳ್ಳುತ್ತಾರೆ. ಅವರ ವಿಚ್ಛೇದನದ ನಂತರವೂ ಅವರು ಸ್ನೇಹ ಉಳಿಸಿಕೊಳ್ಳಲು ಇದುವೇ ಕಾರಣ.

ತಮ್ಮ ಪ್ರಸ್ತುತ ಸಂಗಾತಿ ಗೌರಿ ಸ್ಪ್ರಾಟ್ ಬಗ್ಗೆ ಮಾತನಾಡುತ್ತಾ, ‘ಅವರು ನನ್ನ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ತಂದಿದ್ದಾರೆ. ಗೌರಿಯ ಶಾಂತ ಸ್ವಭಾವ ಮತ್ತು ಸೌಮ್ಯ ವರ್ತನೆ ನನಗೆ ಸಾಂತ್ವನ ನೀಡುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ:  ‘ಕೂಲಿ’ಯಲ್ಲಿ ಆಮಿರ್ ಖಾನ್, ‘ಜೈಲರ್ 2’ನಲ್ಲಿ ಶಾರುಖ್ ಖಾನ್?

ಆಮಿರ್ ಖಾನ್ ಅವರು ಇತ್ತೀಚೆಗೆ ಸಿನಿಮಾ ಮಾಡುವ ಕೆಲಸಗಳಲ್ಲಿ ನಿಧಾನತೆ ತೋರಿಸುತ್ತಿದ್ದಾರೆ. ಮೊದಲಿನಷ್ಟು ವೇಗದಲ್ಲಿ ಅವರು ಸಿನಿಮಾಗಳನ್ನು ಮಾಡುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದು ಅವರು ವಿವರಿಸಿದ್ದಾರೆ. ಚಿತ್ರರಂಗ ತೊರೆಯೋ ಆಲೋಚನೆ ಅವರಿಗೆ ಮೊದಲು ಬಂದಿತ್ತು. ಬಳಿಕ ನಿಧಾನವಾಗಿ ಸಿನಿಮಾ ಮಾಡುವ ಆಯ್ಕೆಯನ್ನು ಅವರು ತೆಗೆದುಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಕೆಳಗಿಳಿಯಲು ಮೆಟ್ಟಿಲುಗಳೇ ಇಲ್ಲದೆ ವಿಮಾನದಿಂದ ಜಂಪ್ ಮಾಡಿದ ಪ್ರಯಾಣಿಕರು – Kannada News | Air Congo Passengers Forced to Exit Aircraft Without Stairs at Kindu Airport

ಕಿಂದು, ಡಿಸೆಂಬರ್ 24: ಕೆಳಗಿಳಿಯಲು ಮೆಟ್ಟಿಲುಗಳೇ ಇಲ್ಲದೆ ಪ್ರಯಾಣಿಕರು ವಿಮಾನದಿಂದ ಜಂಪ್ ಮಾಡಿರುವ ಘಟನೆ ಕಿಂದು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕಿಂದು ವಿಮಾನ ನಿಲ್ದಾಣದಲ್ಲಿ ಏರ್ ಕಾಂಗೋ ವಿಮಾನದ ಪ್ರಯಾಣಿಕರು ಗಂಟೆಗಟ್ಟಲೆ ವಿಮಾನದೊಳಗೆ ಕಾಯುವಂತಾಗಿತ್ತು. ಪ್ರಯಾಣಿಕರು ಮೆಟ್ಟಿಲುಗಳಿಲ್ಲದೆ ಬೇಸರಗೊಂಡು ಬಾಗಿಲಿನಿಂದ ಸುಮಾರು 5-6 ಅಡಿಯಷ್ಟು ಕೆಳಗೆ ಹಾರಿದ್ದಾರೆ. ಮಣಿಮಾ ಪ್ರಾಂತ್ಯದಲ್ಲಿರುವ ಕಿಂದು ವಿಮಾನ ನಿಲ್ದಾಣವು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ವಿಮಾನಯಾನ ಸಂಸ್ಥೆಯು ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದರೂ, ಈ ರೀತಿಯ ಘಟನೆಗಳು ಸಣ್ಣ ವಿಮಾನ ನಿಲ್ದಾಣಗಳಲ್ಲಿನ ಕೊರತೆಯನ್ನು ಒತ್ತಿ ಹೇಳುತ್ತವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

15 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಎಲ್ಲಿ? – Kannada News | Delhi take on Andhra at the BCCI’s Centre of Excellence ground in Bengaluru

ವಿಜಯ ಹಝಾರೆ ಟೂರ್ನಿಗೆ ಇಂದಿನಿಂದ ಚಾಲನೆ ದೊರೆಯಲಿದೆ. ಮೊದಲ ದಿನವೇ 32 ತಂಡಗಳು ಕೂಡ ಕಣಕ್ಕಿಳಿಯಲಿವೆ. ಈ ಮೂವತ್ತೆರಡು ತಂಡಗಳಲ್ಲಿ ಎಲ್ಲರ ಕಣ್ಣು ನೆಟ್ಟಿರುವುದು ದೆಹಲಿ ಮತ್ತು ಆಂಧ್ರ ನಡುವಣ ಪಂದ್ಯದ ಮೇಲೆ. ಏಕೆಂದರೆ ಈ ಮ್ಯಾಚ್ ಮೂಲಕ ವಿರಾಟ್ ಕೊಹ್ಲಿ (Virat Kohli) ವಿಜಯ ಹಝಾರೆ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಕೂಡ ಬರೋಬ್ಬರಿ 15 ವರ್ಷಗಳ ಬಳಿಕ.

Source link

ಬೆಂಗಳೂರಿಗೆ ಬ್ರೆಡ್​ನಲ್ಲಿ ಬರುತ್ತಿತ್ತು ಡ್ರಗ್ಸ್! ನೈಜಿರಿಯಾ ಮಹಿಳೆಯ ಬಂಧನ – Kannada News | Cocaine Hidden Inside Bread, Professor Turned Thief and Daylight Burglar Nabbed: Bengaluru Police Crack Major Crime Cases

ಬ್ರೆಡ್​ನಲ್ಲಿ ಡ್ರಗ್ಸ್, ಒಳಚಿತ್ರದಲ್ಲಿ ಆರೋಪಿ ಒಲಾಜಿಡೆ ಎಸ್ತಾರ್

ಬೆಂಗಳೂರು, ಡಿಸೆಂಬರ್ 24: ಬೆಂಗಳೂರು (Bangalore) ನಗರದಲ್ಲಿ ಮಾದಕ ವಸ್ತು ಸಾಗಣೆ ಹಾಗೂ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಒಂದೇ ದಿನ ಮೂರು ವಿಭಿನ್ನ ಪ್ರಕರಣಗಳನ್ನು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿ ಅಪಾರ ಪ್ರಮಾಣದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಪ್ರಕರಣವೊಂದರಲ್ಲಿ, ತಿನ್ನುವ ಬ್ರೆಡ್‌ನೊಳಗೆ ಕೊಕೇನ್ ಮರೆಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ನೈಜೀರಿಯನ್ ಮೂಲದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಒಲಾಜಿಡೆ ಎಸ್ತಾರ್, ಬ್ರೆಡ್ ಪೀಸ್‌ಗಳನ್ನು ಕಟ್ ಮಾಡಿ ಅದರೊಳಗೆ ಕೊಕೇನ್ ಇಟ್ಟು ಮುಂಬೈಯಿಂದ ಬೆಂಗಳೂರಿಗೆ ಖಾಸಗಿ ಬಸ್ ಮೂಲಕ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದಳು. ಆ ಸಂದರ್ಭದಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಕಾರ್ಯಾಚರಣೆ ವೇಳೆ ಸುಮಾರು 65 ಲಕ್ಷ ರೂ. ಮೌಲ್ಯದ 120 ಗ್ರಾಂ ಕೊಕೇನ್ ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣದಲ್ಲಿ, ಮಾದಕ ವಸ್ತುಗಳನ್ನು ಆಹಾರ ಪದಾರ್ಥಗಳ ಮೂಲಕ ಸಾಗಿಸುವ ಹೊಸ ತಂತ್ರ ಬಳಕೆಯಾಗಿರುವುದು ಪೊಲೀಸರಿಗೂ ಅಚ್ಚರಿ ಮೂಡಿಸಿದೆ.

ವಾರದ ದಿನಗಳಲ್ಲಿ ಪ್ರೊಫೆಸರ್, ವಾರಾಂತ್ಯದಲ್ಲಿ ಕಳ್ಳಿ!

ಇನ್ನೊಂದು ಪ್ರಕರಣದಲ್ಲಿ, ವಾರದ ದಿನಗಳಲ್ಲಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ರೇವತಿ ಎಂಬ ಮಹಿಳೆಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ರೇವತಿ ವಾರಾಂತ್ಯದಲ್ಲಿ ಮದುವೆ ನಡೆಯುವ ಕಲ್ಯಾಣಮಂಟಪಗಳಿಗೆ ಸಂಬಂಧಿಕಳಂತೆ ಪ್ರವೇಶಿಸಿ, ಅನುಮಾನ ಬಾರದಂತೆ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದಳು. ಕಳೆದ ನವೆಂಬರ್ 25ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣಮಂಟಪದಲ್ಲಿ ನಡೆದ ಕಳ್ಳತನದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಕೆ.ಆರ್.ಪುರಂನಲ್ಲಿ ವಾಸವಾಗಿದ್ದ ರೇವತಿಯನ್ನು ಬಂಧಿಸಿ, 32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಇರುಳುಗಣ್ಣೆಂದು ಹಗಲಲ್ಲೇ ಕಳ್ಳತನ ಮಾಡುತ್ತಿದ್ದವ ಅರೆಸ್ಟ್

ಇನ್ನೊಂದೆಡೆ, ‘ಇರುಳು ಕುರುಡು’ ಸಮಸ್ಯೆ ಎಂದು ಹೇಳಿಕೊಂಡು ಹಗಲಲ್ಲೇ ಮನೆ ಕಳ್ಳತನ ಮಾಡುತ್ತಿದ್ದ ಮೊಹಮ್ಮದ್ ಖಾನ್ ಎಂಬಾತನನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಖಾನ್, ಇತ್ತೀಚೆಗೆ ಕಿರುತೆರೆ ನಟ ಪ್ರವೀಣ್ ಅವರ ಮನೆಯಲ್ಲಿ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ. ತನಿಖೆ ವೇಳೆ ಖಾನ್ ವಿರುದ್ಧ ಏಳು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಬಂಧಿತನಿಂದ 65.28 ಲಕ್ಷ ರೂ. ಮೌಲ್ಯದ 470 ಗ್ರಾಂ ಚಿನ್ನಾಭರಣ, 1.5 ಕೆಜಿ ಬೆಳ್ಳಿ ಹಾಗೂ 4.60 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಇರುಳು ಕುರುಡು ಸಮಸ್ಯೆ ಎಂದು ಹಗಲಿನಲ್ಲೇ ಕಿರುತೆರೆ ನಟನ ಮನೆಗೆ ಕನ್ನ ಹಾಕಿದ ಅಂತಾರಾಜ್ಯ ಕಳ್ಳ!

ಈ ಅಪರಾಧ ಪ್ರಕರಣಗಳ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದು, ನಗರದಲ್ಲಿ ಅಪರಾಧ ನಿಯಂತ್ರಣಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link