ಸುದೀಪ್ ಅವರು ಪ್ರತಿ ಶನಿವಾರದ ಎಪಿಸೋಡ್ನ ಗಂಭೀರವಾಗಿ ನಡೆಸಿಕೊಡುತ್ತಾರೆ. ಆದರೆ, ಈ ವಾರ ಅವರು ಫನ್ ಮೂಡ್ನಲ್ಲಿ ಇದ್ದಂತೆ ಕಾಣಿಸಿದೆ. ರಕ್ಷಿತಾ ಅವರು ಸೀಕ್ರೇಟ್ ರೂಂ ಅನುಭವ ಬಿಚ್ಚಿಟ್ಟರು.ಧ್ರುವಂತ್ ಸಹವಾಸ ಮಾಡಿ ನನಗೆ ತಲೆ ನೋವು ಬರುತ್ತಿದೆ ಎಂದರು ರಕ್ಷಿತಾ. ಆದರೆ, ನಮಗೆ ಎಲ್ಲಾ ಕಡೆಗಳಲ್ಲೂ ನೋವಾಗುತ್ತಿದೆ ಎಂದರು ಸುದೀಪ್. ಕಲರ್ಸ್ ಕನ್ನಡ ವಾಹಿನಿ ಈ ಪ್ರೋಮೋನ ಹಂಚಿಕೊಂಡಿದೆ. ಆ ಸಂದರ್ಭದ ಫನ್ ವಿಟಿ ಇಲ್ಲಿದೆ.
ಗುವಾಹಟಿ, ಡಿಸೆಂಬರ್ 20: ಇಂದು ಮುಂಜಾನೆ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಾಂಗ್ ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಆನೆ(Elephant)ಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 8 ಆನೆಗಳು ಸಾವನ್ನಪ್ಪಿವೆ. ಹಾಗೆಯೇ ಐದು ಬೋಗಿಗಳು ಹಳಿ ತಪ್ಪಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಬೆಳಗಿನ ಜಾವ 2.17 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೊಜೈ ಜಿಲ್ಲೆಯ ಚಾಂಗ್ಜುರೈ ಪ್ರದೇಶದಲ್ಲಿ ಈ ಡಿಕ್ಕಿ ಸಂಭವಿಸಿದೆ ಎಂದು ನಾಗಾಂವ್ ವಿಭಾಗೀಯ ಅರಣ್ಯ ಅಧಿಕಾರಿ ಸುಹಾಶ್ ಕದಮ್ ಪಿಟಿಐಗೆ ತಿಳಿಸಿದ್ದಾರೆ. ಘಟನೆಯ ನಂತರ ಕದಮ್ ಮತ್ತು ಇತರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಜಮುನಾಮುಖ್ ಕಂಪೂರ್ ವಿಭಾಗದಲ್ಲಿ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾರ್ಗದ ಮೂಲಕ ಹಾದುಹೋಗಬೇಕಾದ ರೈಲುಗಳನ್ನು ಯುಪಿ ಮಾರ್ಗದ ಮೂಲಕ ತಿರುಗಿಸಲಾಗುತ್ತಿದೆ, ಆದರೆ ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ಕದಮ್ ಹೇಳಿದರು.
ಸಾಯಿರಂಗ್ ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಮಿಜೋರಾಂನ ಸಾಯಿರಾಂಗ್ ಅನ್ನು ಐಜ್ವಾಲ್ ಬಳಿ ದೆಹಲಿಯ ಆನಂದ್ ವಿಹಾರ್ ಟರ್ಮಿನಲ್‌ನೊಂದಿಗೆ ಸಂಪರ್ಕಿಸುತ್ತದೆ. ಅಪಘಾತ ಸ್ಥಳವು ಗುವಾಹಟಿಯಿಂದ ಸುಮಾರು 126 ಕಿ.ಮೀ ದೂರದಲ್ಲಿದೆ. ಘಟನೆಯ ನಂತರ, ಅಪಘಾತ ಪರಿಹಾರ ರೈಲುಗಳು ಮತ್ತು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ರೈಲು ಹಳಿತಪ್ಪಿದ್ದರಿಂದ ಮತ್ತು ಆನೆಯ ದೇಹದ ಭಾಗಗಳು ಹಳಿಗಳ ಮೇಲೆ ಚದುರಿಹೋಗಿದ್ದರಿಂದ, ಅಸ್ಸಾಂ ಮತ್ತು ಈಶಾನ್ಯದ ಇತರ ಭಾಗಗಳಿಗೆ ರೈಲು ಸೇವೆಗಳು ಬಾಧಿತವಾಗಿವೆ ಎಂದು ಮೂಲಗಳು ತಿಳಿಸಿವೆ. ಪರಿಣಾಮ ಬೀರಿದ ಬೋಗಿಗಳ ಪ್ರಯಾಣಿಕರನ್ನು ತಾತ್ಕಾಲಿಕವಾಗಿ ರೈಲಿನ ಇತರ ಬೋಗಿಗಳಲ್ಲಿ ಲಭ್ಯವಿರುವ ಖಾಲಿ ಬರ್ತ್‌ಗಳಲ್ಲಿ ಇರಿಸಲಾಯಿತು.
ರೈಲು ಗುವಾಹಟಿ ತಲುಪಿದ ನಂತರ, ಎಲ್ಲಾ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತದೆ, ನಂತರ ರೈಲು ತನ್ನ ಮುಂದಿನ ಪ್ರಯಾಣವನ್ನು ಪುನರಾರಂಭಿಸುತ್ತದೆ. ಈ ಘಟನೆ ಆನೆ ಕಾರಿಡಾರ್ ಅಲ್ಲದ ಸ್ಥಳದಲ್ಲಿ ಸಂಭವಿಸಿದೆ. ಹಳಿಗಳ ಮೇಲೆ ಹಿಂಡು ನಿಂತಿರುವುದನ್ನು ಗಮನಿಸಿದ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದರು. ಇದರ ಹೊರತಾಗಿಯೂ, ಆನೆಗಳಿಗೆ ರೈಲು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
BBL 2025: ಬಿಗ್ ಬ್ಯಾಷ್ ಲೀಗ್ನ 6ನೇ ಪಂದ್ಯವು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಅದು ಕೂಡ ಟಿ20 ಇತಿಹಾಸದಲ್ಲೇ ಚೇಸಿಂಗ್ ವೇಳೆ ಇಬ್ಬರು ಬ್ಯಾಟರ್ಗಳು ಶತಕ ಸಿಡಿಸುವ ಮೂಲಕ. ಇದರೊಂದಿಗೆ ಬಿಗ್ ಬ್ಯಾಷ್ ಲೀಗ್ನ ಹಲವು ದಾಖಲೆಗಳು ಕೂಡ ಧೂಳೀಪಟವಾಗಿದೆ.
ಬೆಂಗಳೂರು, ಡಿಸೆಂಬರ್ 20: ಬೆಂಗಳೂರಿನ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಭಾನುವಾರ (ಡಿಸೆಂಬರ್ 21) ಮೆಟ್ರೋ ರೈಲು ಸಂಚಾರ ವಿಳಂಬವಾಗಿ ಶುರುವಾಗಲಿದೆ. ನವೀಕರಣ ಕಾರ್ಯದ ಹಿನ್ನೆಲೆಯಲ್ಲಿ ಬೆಳಗ್ಗೆ ಮೆಟ್ರೋ ಸೇವೆಗಳು ಒಂದು ಗಂಟೆ ತಡವಾಗಿ ಆರಂಭವಾಗಲಿವೆ. ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುವ ಬದಲಾಗಿ, ಯೆಲ್ಲೋ ಲೈನ್ ರೈಲುಗಳು 8 ಗಂಟೆಗೆ ಸಂಚಾರವನ್ನು ಪ್ರಾರಂಭಿಸುತ್ತವೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮಾಹಿತಿ ನೀಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಡಿಸೆಂಬರ್ 20: ದಿನೇ ದಿನೇ ಹಡಗೆಡುತ್ತಿರುವ ಬೆಂಗಳೂರಿನ ಗಾಳಿಯ ಗುಣಮಟ್ಟ (Bengaluru Air Quality), ಸಾರ್ವಜನಿಕರಿಗೆ ಸಂಕಷ್ಟ ತಂದೊಡ್ಡಿದೆ. ಕಳೆದ ಹಲವು ದಿನಗಳಿಂದ 170 ರಿಂದ 200ರವೆಗೂ ಏರಿಳಿತ ಕಾಣುತ್ತಿರುವ ಗುಣಮಟ್ಟ ವಾಯು ಮಾಲಿನ್ಯ, ಇಂದೂ ಸಹ 196ಕ್ಕೆ ತಲುಪಿದೆ. ನಗರದ ಈ ವಾತಾರಣ ದೆಹಲಿಯನ್ನು ನೆನಪಿಸುತ್ತಿದ್ದು, ಇದು ಹೀಗೆ ಮುಂದುವರೆದರೆ ಜನರ ಜೀವಕ್ಕೇ ಕುತ್ತು ಬರುವ ಸಂಭವವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕಳಪೆ ಗುಣಮಟ್ಟದ ಗಾಳಿಯಿಂದ ಶ್ವಾಸಕೋಶ ಸಂಬಂಧಿ ಕಾಯಿಲೆ
ರಾಜ್ಯದೆಲ್ಲೆಡೆ ಉಂಟಾಗುತ್ತಿರುವ ಶೀತದಲೆಯ ಪರಿಣಾಮ ಈಗಾಗಲೇ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿವೆ. ಅದರೊಂದಿಗೆ ವಾಯು ಮಾಲಿನ್ಯ ಮತ್ತು ಹದಗೆಟ್ಟ ಗಾಳಿಯೂ ಸೇರಿ ಅನಾರೊಗ್ಯ ಉಂಟುಮಾಡಬಹುದೆಂದು ತಜ್ಞರು ಹೇಳುತ್ತಾರೆ. ಇಂದೂ ಬೆಂಗಳೂರಿನಲ್ಲಿ PM2.5 ಪ್ರಮಾಣ 121ಕ್ಕೆ ತಲುಪಿದ್ದು, PM10 ಪ್ರಮಾಣ 167ಕ್ಕೆ ಇಳಿದಿದೆ.
ಇದರಿಂದಾಗಿ ಅಸ್ತಮಾ, ಅಲರ್ಜಿ ಸೇರಿದಂತೆ ಹೃದಯ ಸಂಬಂಧಿ ಖಾಯಿಲೆಗಳೂ ಎದುರಾಗಬಹುದು. 150ಕ್ಕಿಂತ ಹೆಚ್ಚಿನ ಗಾಳಿಯ ಗುಣಮಟ್ಟ ಜನರಲ್ಲಿ ಅಸ್ತಮಾ ತಂದೊಡ್ಡಬಹುದಾಗಿದ್ದು, ಈ ಸಮಸ್ಯೆಯಿಂದ ಬಚಾವಾಗಲು ಏರ್ ಪ್ಯೂರಿಫೈಯರ್ ಬಳಸುವುದರ ಜೊತೆಗೆ ಆದಷ್ಟು ಮನೆಯಿಂದ ಹೊರಹೋಗದಿರೊ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಗಿಂತ ಈ ವರ್ಷವೇ ಗಾಳಿಯ ಗುಣಮಟ್ಟ ಹೆಚ್ಚು ಹದಗೆಟ್ಟಿದೆ. 2025ರಲ್ಲಿ ಸುಮಾರು 90ಕ್ಕೂ ಹೆಚ್ಚು ದಿನಗಳ ಕಾಲ ಬೆಂಗಳೂರಿನ ಏರ್ ಕ್ವಾಲಿಟಿ ಅನಾರೋಗ್ಯಕರವಾಗಿತ್ತು ಎಂದು AQI ತಿಳಿಸಿದೆ. ಉಳಿದಂತೆ 2 ದಿನ ಉತ್ತಮ ಗಾಳಿಯ ಗುಣಮಟ್ಟವಿದ್ದರೆ, 253 ದಿನ ಸಾಧಾರಣ ಏರ್ ಕ್ವಾಲಿಟಿ ಕಂಡು ಬಂದಿದೆ. ಇಂದಿನ ದಿನಗಳಲ್ಲಿ ಶೀತದಲೆಯ ಜೊತೆಗೆ ಕಳಪೆ ಗುಣಮಟ್ಟದ ಗಾಳಿಯೂ ಸೇರಿ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index):
ಚೈತ್ರಾ ಕುಂದಾಪುರ ಅವರ ತಂದೆ ಕೋರ್ಟ್ ಹೋಗಿದ್ದರು ಮತ್ತು ಮಗಳಿಂದ ಕಿರುಕುಳ ಆಗುತ್ತದೆ ಎಂದಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಈಗ ಚೈತ್ರಾ ತಂದೆ ಮಾತನಾಡಿದ್ದು, ‘ನನಗೆ ಚೈತ್ರಾ ಪತಿ ಶ್ರೀಕಾಂತ್ ಅವರಿಂದಲೂ ಕಿರುಕುಳ ಆಗುತ್ತಿದೆ’ ಎಂದು ಹೇಳಿದನ್ನು ಕಾಣಬಹುದು.
ಡಿಸೆಂಬರ್ 24 ರಿಂದ ಶುರುವಾಗಲಿರುವ ವಿಜಯ ಹಝಾರೆ ಟೂರ್ನಿಗಾಗಿ ಮುಂಬೈ ಹಾಗೂ ದೆಹಲಿ ತಂಡಗಳನ್ನು ಪ್ರಕಟಿಸಲಾಗಿದೆ. ಈ ಎರಡು ತಂಡಗಳಲ್ಲಿ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಂಡಿರುವುದು ವಿಶೇಷ.
ವಿರಾಟ್ ಕೊಹ್ಲಿ ದೆಹಲಿ ತಂಡದಲ್ಲಿದ್ದರೆ, ರೋಹಿತ್ ಶರ್ಮಾ ಮುಂಬೈ ಪರ ಕಣಕ್ಕಿಳಿಯಲಿದ್ದಾರೆ. ಇಲ್ಲಿ ದೆಹಲಿ ತಂಡದ ನಾಯಕನಾಗಿ ರಿಷಭ್ ಪಂತ್ ಕಾಣಿಸಿಕೊಳ್ಳಲಿದ್ದಾರೆ. ಅತ್ತ ಹಿಟ್ಮ್ಯಾನ್ನ ಒಳಗೊಂಡಿರುವ ಮುಂಬೈ ತಂಡವನ್ನು ಮುನ್ನಡೆಸಲಿರುವುದು ಶಾರ್ದೂಲ್ ಠಾಕೂರ್ ಎಂಬುದು ವಿಶೇಷ.
ಇನ್ನು ವಿರಾಟ್ ಕೊಹ್ಲಿ ಕೊನೆಯ ಬಾರಿ ವಿಜಯ ಹಝಾರೆ ಟೂರ್ನಿ ಆಡಿದ್ದು 2010 ರಲ್ಲಿ. ಅಂದು ದೆಹಲಿ ಪರ ಐದು ಮ್ಯಾಚ್ಗಳಲ್ಲಿ ಬ್ಯಾಟ್ ಬೀಸಿದ್ದ ಕೊಹ್ಲಿ 45.80 ಸರಾಸರಿಯಲ್ಲಿ 229 ರನ್ ಗಳಿಸಿದ್ದರು. ಈ ವೇಳೆ ಎರಡು ಅರ್ಧಶತಕಗಳನ್ನು ಸಹ ಬಾರಿಸಿದ್ದರು.
ರೋಹಿತ್ ಶರ್ಮಾ ವಿಜಯ ಹಝಾರೆ ಟೂರ್ನಿಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದು 2019 ರಲ್ಲಿ. ಮುಂಬೈ ಪರ ಎರಡು ಮ್ಯಾಚ್ಗಳಲ್ಲಿ ಕಣಕ್ಕಿಳಿದಿದ್ದ ಹಿಟ್ಮ್ಯಾನ್ ಒಟ್ಟು 50 ರನ್ ಕಲೆಹಾಕಿದ್ದರು. ಇದಾದ ಬಳಿಕ ದೇಶೀಯ ಏಕದಿನ ಟೂರ್ನಿಯಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಂಡಿರಲಿಲ್ಲ.
ಇದೀಗ ವಿರಾಟ್ ಕೊಹ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಹಾಗೂ ರೋಹಿತ್ ಶರ್ಮಾ 7 ವರ್ಷಗಳ ನಂತರ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇಬ್ಬರು ದಿಗ್ಗಜರು 2 ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದು, ಇದಾದ ಬಳಿಕ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಕಿಂಗ್’ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್‌ಪ್ರೆಸ್’, ‘ಪಠಾಣ್’ ಮತ್ತು‘ ಹ್ಯಾಪಿ ನ್ಯೂ ಇಯರ್’ ಚಿತ್ರಗಳಲ್ಲಿ ಇವರು ಒಟ್ಟಿಗೆ ನಟಿಸಿದ್ದಾರೆ.‘ಜವಾನ್’ ಸಿನಿಮಾದಲ್ಲೂ ಶಾರುಖ್-ದೀಪಿಕಾ ಕಾಂಬಿನೇಷನ್ ಇದೆ. ಈ ಜೋಡಿ ‘ಕಿಂಗ್’ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಈ ಚಿತ್ರದ ಹಾಡಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊ ಕಿಂಗ್ ಚಿತ್ರದ ಸೋರಿಕೆಯಾದ ಹಾಡು ಎಂದು ಹೇಳಲಾಗುತ್ತಿದೆ. ಆದರೆ, ಇದರ ಅಸಲಿಯತ್ತ ಬೇರೆಯೇ ಇದೆ.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ರೊಮ್ಯಾಂಟಿಕ್ ಹಾಡು ಗಮನ ಸೆಳೆದಿದೆ. ಇವರು ಡ್ಯಾನ್ಸ್ ಮಾಡುತ್ತಿದ್ದು ಹಿನ್ನೆಲೆಯಲ್ಲಿ ಒಂದು ಹಾಡು ಪ್ಲೇ ಆಗುತ್ತಿದೆ. ಇಬ್ಬರ ನಡುವಿನ ಚುಂಬನ ದೃಶ್ಯವೂ ವೀಡಿಯೊದಲ್ಲಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ಸೋರಿಕೆಯಾದ ಈ ವೀಡಿಯೊ ನಿಜವಾಗಿಯೂ ‘ಕಿಂಗ್’ ಚಿತ್ರದ್ದೇ ಎಂದು ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ.
ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ ಶಾರುಖ್ ಹಾಗೂ ದೀಪಿಕಾ ರಿಯಲ್ ಎಂಬಂತೆ ಕಾಣಿಸಿಕೊಂಡಿದ್ದಾರೆ. ವೀಡಿಯೊದ ಟೋನ್ ಸಂಪೂರ್ಣವಾಗಿ ಸಿನಿಮೀಯ ಮತ್ತು ರೋಮ್ಯಾಂಟಿಕ್ ಆಗಿದೆ. ಇದು ಕಿಂಗ್ ಚಿತ್ರದ ಸೋರಿಕೆಯಾದ ಹಾಡು ಎಂದು ಹಲವರು ಭಾವಿಸುತ್ತಿದ್ದಾರೆ. ಆದಾಗ್ಯೂ, ಈ ವೀಡಿಯೊ ಯಾವುದೇ ರೀತಿಯಲ್ಲಿ ‘ಕಿಂಗ್’ ಚಿತ್ರದ ಭಾಗವಲ್ಲ. ಇದು AI- ರಚಿತವಾದ ಫ್ಯಾನ್ ಎಡಿಟ್ ಮಾಡಿದ ವೀಡಿಯೊ ಎಂದು ತಿಳಿದುಬಂದಿದೆ. ಇದರಲ್ಲಿ ಶಾರುಖ್ ಖಾನ್ ಅವರ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ‘ಜವಾನ್’ ಚಿತ್ರದಂತೆಯೇ ಕಾಣುತ್ತದೆ. ವೀಡಿಯೊವನ್ನು ನೈಜವಾಗಿ ಕಾಣುವಂತೆ ಮಾಡಲು ತಂತ್ರಜ್ಞಾನವನ್ನು ಬಳಸಿಕೊಂಡು ಇಬ್ಬರ ಮುಖವನ್ನು ಎಡಿಟ್ ಮಾಡಲಾಗಿದೆ.
AI Grok ಸೇರಿದಂತೆ ಹಲವಾರು ಪರಿಕರಗಳು ವೈರಲ್ ವೀಡಿಯೊವನ್ನು ತನಿಖೆ ಮಾಡಿವೆ. ಅವರು ವೀಡಿಯೊ ನಕಲಿ ಮತ್ತು ಅಭಿಮಾನಿಗಳಿಂದ ನಿರ್ಮಿತ ಎಂದು ಹೇಳುತ್ತಾರೆ. ಚಿತ್ರದ ಯಾವುದೇ ಹಾಡುಗಳು ಅಥವಾ ದೃಶ್ಯಗಳು ಸೋರಿಕೆಯಾಗಿಲ್ಲ.
ವೀಡಿಯೊ ಕಾಣಿಸಿಕೊಂಡ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಉತ್ಸಾಹದಿಂದ ಪ್ರತಿಕ್ರಿಯಿಸಿದರು. ಅನೇಕ ಅಭಿಮಾನಿಗಳು ಈ ವೀಡಿಯೊವನ್ನು AI ನಿಂದ ರಚಿಸಲಾಗಿದೆ ಎಂದು ತಕ್ಷಣವೇ ಗುರುತಿಸಿದರು. ಕೆಲವರು ಇದನ್ನು ತಮಾಷೆಯೆಂದು ಕಂಡುಕೊಂಡರೆ, ಇತರರು ಇಂತಹ ನಕಲಿ ವೀಡಿಯೊಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ತಂತ್ರಜ್ಞಾನದ ಈ ಯುಗದಲ್ಲಿ, ನಿಜವಾದ ಮತ್ತು ನಕಲಿ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಹೆಚ್ಚು ಕಷ್ಟಕರವಾಗುತ್ತಿದೆ ಎಂದು ಜನರು ಕಾಮೆಂಟ್ ಮಾಡಿದ್ದಾರೆ.
ಭೋಪಾಲ್, ಡಿಸೆಂಬರ್ 20: ಬಂಧಿತ ವ್ಯಕ್ತಿಯೊಬ್ಬ ಪೊಲೀಸ್ ಕಸ್ಟಡಿಯಿಂದ ವಿಚಿತ್ರವಾಗಿ ತಪ್ಪಿಸಿಕೊಳ್ಳುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ. ರಸ್ತೆಯಲ್ಲಿ ಪೊಲೀಸರು ತಮ್ಮ ವಾಹನವನ್ನು ನಿಲ್ಲಿಸಿದ್ದರು. ಆ ವೇಳೆ ಆರೋಪಿ ಓಡಿ ಹೋಗಿದ್ದಾನೆ. ಹಿಂದೆ ಪೊಲೀಸರು ಓಡಿದ್ದಾರೆ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ.ಈ ಘಟನೆ ಯಾವುದೋ ಸಿನಿಮಾದಂತೆ ಕಾಣಿಸುತ್ತದೆ.
ಮಧ್ಯಪ್ರದೇಶದ ಹೋಶಂಗಾಬಾದ್ ಹೊರವಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ ಆದರೆ ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.ಈ ಕ್ಲಿಪ್ ವಿಡಿಯೋದಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನವನ್ನು ತೋರಿಸಲಾಗಿದ್ದು, ಕೆಲವು ಪೊಲೀಸರು ವಾಹನದ ಆಸು ಪಾಸಿನಲ್ಲಿದ್ದರು ಆಗ ವ್ಯಕ್ತಿ ವಾಹನದಿಂದ ಕೆಳಗಿಳಿದು ಓಡಲು ಶುರು ಮಾಡುತ್ತಾನೆ. ಇದು ನಿಜವಾದ ಘಟನೆಯೋ ಅಥವಾ ಮನರಂಜನೆಗಾಗಿ ಸಿದ್ಧಪಡಿಸಿರುವ ಸ್ಕ್ರಿಪ್ಟೋ ಎನ್ನುವ ಮಾಹಿತಿ ಲಭ್ಯವಿಲ್ಲ.
ರಕ್ಷಿತಾ ಶೆಟ್ಟಿ (Rakshita Shetty) ಅವರ ಆಟದಲ್ಲಿ ಸಂಪೂರ್ಣ ಬದಲಾವಣೆ ಕಾಣುತ್ತಿದೆ. ಮೊದಲಿನ ರಕ್ಷಿತಾ ಶೆಟ್ಟಿಗೂ ಈಗಿನ ರಕ್ಷಿತಾ ಶೆಟ್ಟಿಗೂ ತುಂಬಾನೇ ವ್ಯತ್ಯಾಸ ಇದೆ. ಇದನ್ನು ಅನೇಕರು ಗಮನಿಸಿದ್ದಾರೆ. ಈಗ ಅವರು ನಡೆದುಕೊಂಡ ರೀತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಅನೇಕರು ರಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರು ತುಂಬಾನೇ ಕೆಳಮಟ್ಟದಲ್ಲಿ ಯೋಚಿಸುತ್ತಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ರಕ್ಷಿತಾ ಶೆಟ್ಟಿ ಅವರು ಸದ್ಯ ಸೀಕ್ರೆಟ್ ರೂಂನಲ್ಲಿ ಇದ್ದಾರೆ. ಈ ವಾರ ಅವರು ಮತ್ತೆ ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸೋ ಸಾಧ್ಯತೆ ಇದೆ. ಡಿಸೆಂಬರ್ 19ರ ಎಪಿಸೋಡ್ನಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದರು. ಇದರ ಅನುಸಾರ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಸೀಕ್ರೆಟ್ ರೂಂನಿಂದ ಬಿಗ್ ಬಾಸ್ ಮನೆ ಒಳಗೆ ತೆರಳಿ ಕಸ ಹರಡಿ ಬರಬೇಕು.
Whose personal MAKEUP kit is this?
How they react to this HYPER EGOISTIC blunder is going to decide not just this weekend syllabus but will set the tone for the rest of #BBK12
P.S: Ashtu haalu mado aasakthi idre avrde personal belongings halmadkondu KaSa madbekithu Alva? pic.twitter.com/1siA6LHKFZ
ಇದನ್ನು ಕೇಳುತ್ತಿದ್ದಂತೆ ರಕ್ಷಿತಾ ಶೆಟ್ಟಿ ಅವರು ಸಾಕಷ್ಟು ಎಗ್ಸೈಟ್ ಆದರು. ಸಿಕ್ಕಿದ್ದೇ ಚಾನ್ಸ್ ಎಂದು ಇಡೀ ಮನೆಯ ತುಂಬಾ ಥರ್ಮಕೋಲ್ ಚೂರು, ಪೇಪರ್ ಕಸವನ್ನು ಹರಡಿದರು. ಬಿಗ್ ಬಾಸ್ ಕೊಟ್ಟ ಟಾಸ್ಕ್ ಆದ್ದರಿಂದ ಮಾಡಲೇಬೇಕಿತ್ತು. ಆದರೆ, ಅವರು ಕೆಲವು ಮಹಿಳಾ ಸ್ಪರ್ಧಿಗಳ ವೈಯಕ್ತಿಕ ಮೇಕಪ್ ಬ್ರಶ್ಗಳನ್ನು ನೆಲಕ್ಕೆ ಹರಡಿದ್ದಾರೆ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ.
ಬ್ರಶ್ಗಳು ನೆಲದ ಮೇಲೆ ಬಿದ್ದಿದ್ದನ್ನು ನೋಡುತ್ತಿದ್ದಂತೆ ರಾಶಿಕಾಗೆ ಸಾಕಷ್ಟು ಬೇಸರ ಆಯಿತು. ‘ಅವೆಲ್ಲ ನನ್ನ ಬ್ರಶ್ಗಳು. ಇದನ್ನು ಹೇಗೆ ಮರು ಜೋಡಿಸೋದು’ ಎಂದು ಅವರು ತಮ್ಮನ್ನು ತಾವು ಕೇಳಿಕೊಂಡರು. ಎಲ್ಲಕ್ಕಿಂತ ಮುಖ್ಯವಾಗಿ ಆ ಎಲ್ಲಾ ಬ್ರಶ್ಗಳು ಮುಖಕ್ಕೆ ಬಳಕೆ ಮಾಡೋದು. ನೆಲಕ್ಕೆ ಬಿದ್ದಾಗ ಧೂಳು-ಮಣ್ಣುಗಳು ಅದಕ್ಕೆ ಸೇರಿಕೊಳ್ಳಬಹುದು. ನಂತರ ಅದನ್ನು ಮುಖಕ್ಕೆ ಬಳಕೆ ಮಾಡಿದರೆ ಅಲರ್ಜಿ ಆಗಬಹುದು. ಇನ್ನು ಕಷ್ಟ ಪಟ್ಟು ದುಡಿದ ಹಣದಿಂದ ಮೇಕಪ್ ಕಿಟ್ಗಳನ್ನು ಖರೀದಿ ಮಾಡಿರುತ್ತಾರೆ. ಇದನ್ನು ಹಾಳು ಮಾಡೋದು ಎಷ್ಟು ಸರಿ ಎಂದು ಅನೇಕರು ಕೇಳಿದ್ದಾರೆ. ರಕ್ಷಿತಾ ಈ ಕೀಳು ಬುದ್ಧಿಯನ್ನು ಬಿಡಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.