ಬೆಂಗಳೂರು ವಿಶ್ವವಿದ್ಯಾಲಯದ 100 ಎಕರೆ ಜಾಗದ ಮೇಲೆ ಕಣ್ಣಾಕಿದ ಕೇಂದ್ರ ಸರ್ಕಾರ! – Kannada News
ಬೆಂಗಳೂರು, (ಜೂನ್ 05): ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ (Karnataka Universities) ಬೆಂಗಳೂರು ವಿಶ್ವವಿದ್ಯಾಲಯ (Bengaluru University) ಪ್ರಮುಖವಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. 1200 ಎಕರೆ ಜಾಗದಲ್ಲಿ ಸ್ಥಾಪನೆಯಾದ ಬೆಂಗಳೂರು ವಿಶ್ವವಿದ್ಯಾಲ ಕ್ರಮೇಣ ಕಿರಿದಾಗಿದ್ದು, ಈಗಾಗಲೇ 300ಕ್ಕೂ ಹೆಚ್ಚು ಎಕರೆ ಜಾಗವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಸ್ಥೆಗಳಿಗೆ ಬಿಟ್ಟುಕೊಡಲಾಗಿದೆ. ಈ ವಿಚಾರಕ್ಕೆ ವಿರೋಧವಿದ್ದು, ಇದರ ಮಧ್ಯೆ ಇದೀಗ ಮತ್ತೆ ಜ್ಞಾನಭಾರತಿ ಆವರಣದ ಮೇಲೆ ಕೇಂದ್ರದ ಕಣ್ಣು ಬಿದ್ದಿದೆ. ಒಲಿಂಪಿಕ್ಸ್ ಟ್ರೈನಿಂಗ್ ಸೆಂಟರ್ಗೆ 100 ಎಕರೆ ಜಾಗ ಬೇಕು…