All posts by nagaraj11081993

CSK vs RR Playing XI: ಟಾಸ್ ಗೆದ್ದ ರಾಜಸ್ಥಾನ್; ಧೋನಿ, ಬ್ರೆವಿಸ್ ಇಲ್ಲದೆ ಕಣಕ್ಕಿಳಿದ ಸಿಎಸ್​ಕೆ

CSK vs RR Playing XI: ಟಾಸ್ ಗೆದ್ದ ರಾಜಸ್ಥಾನ್; ಧೋನಿ, ಬ್ರೆವಿಸ್ ಇಲ್ಲದೆ ಕಣಕ್ಕಿಳಿದ ಸಿಎಸ್​ಕೆ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2026 ರ ಮೊದಲ ಪಂದ್ಯವು ಮಾರ್ಚ್ 30, 2026 ರಂದು ಅಸ್ಸಾಂನ ಗುವಾಹಟಿಯಲ್ಲಿರುವ ಬಾರ್ಬರಪ್ಪ ​​ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಕಳೆದ ಸೀಸನ್‌ನಲ್ಲಿ ಎರಡೂ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದವು. ಪರಿಣಾಮವಾಗಿ, ಎರಡೂ ತಂಡಗಳು ಈ ಸೀಸನ್ ಅನ್ನು ಗೆಲುವಿನೊಂದಿಗೆ ಪ್ರಾರಂಭಿಸುವ ಇರಾದೆಯಲ್ಲಿವೆ. ಐಪಿಎಲ್‌ನ ಮೊದಲ ಆವೃತ್ತಿಯ ಚಾಂಪಿಯನ್ ಆಗಿರುವ ರಾಜಸ್ಥಾನ್ ರಾಯಲ್ಸ್, ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದ್ದು, ಇದೀಗ ಈ ಪಂದ್ಯದ ಟಾಸ್ ಕೂಡ ಮುಗಿದಿದೆ.

ಟಾಸ್ ಗೆದ್ದ ರಾಜಸ್ಥಾನ್

ಟಾಸ್ ಗೆದ್ದ ರಾಜಸ್ಥಾನ್ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸಿಎಸ್​ಕೆ ಮೊದಲು ಬ್ಯಾಟಿಂಗ್ ಮಾಡಲಿದೆ. ಗುವಾಹಟಿಯಲ್ಲಿ ಮಳೆ ಬಿದ್ದಿರುವ ಕಾರಣ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾಗಿ ಪರಾಗ್ ಹೇಳಿದರು. ಇದರೊಂದಿಗೆ ತಂಡದ ಆಡುವ ಹನ್ನೊಂದರ ಬಳಗವನ್ನು ಖಚಿತಪಡಿಸಿದರು. ಇತ್ತ ಟಾಸ್ ಸೋತ ಬಳಿಕ ಮಾತನಾಡಿದ ಸಿಎಸ್​ಕೆ ನಾಯಕ ರುತುರಾಜ್ ತಾವು ಕೂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದಾಗಿ ಹೇಳಿದರು. ಈ ಮೊದಲೇ ವರದಿಯಾದ್ದಂತೆ ಈ ಪಂದ್ಯದಲ್ಲಿ ಸಿಎಸ್​ಕೆ, ಧೋನಿ ಹಾಗೂ ಡೆವಾಲ್ಡ್ ಬ್ರೆವಿಸ್ ಇಲ್ಲದೆ ಕಣಕ್ಕಿಳಿಯುತ್ತಿದೆ.

ಮುಖಾಮುಖಿ ದಾಖಲೆ

ರಾಜಸ್ಥಾನ ಮತ್ತು ಚೆನ್ನೈ ನಡುವಿನ ಮುಖಾಮುಖಿಯಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನೀಡಿವೆ. ಎರಡೂ ತಂಡಗಳ ನಡುವೆ ಇದುವರೆಗೆ ಒಟ್ಟು 31 ಪಂದ್ಯಗಳು ನಡೆದಿದ್ದು, ಇದರಲ್ಲಿ ಚೆನ್ನೈ 16 ಪಂದ್ಯಗಳಲ್ಲಿ ಗೆದ್ದರೆ, ರಾಜಸ್ಥಾನ 15 ಪಂದ್ಯಗಳಲ್ಲಿ ಗೆದ್ದಿದೆ. ಇನ್ನು ಕಳೆದ ನಾಲ್ಕು ಆವೃತ್ತಿಗಳಲ್ಲಿ, ಎರಡೂ ತಂಡಗಳು ಒಟ್ಟು ಆರು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ರಾಜಸ್ಥಾನ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಈ ಆರು ಪಂದ್ಯಗಳಲ್ಲಿ ರಾಜಸ್ಥಾನ ಐದು ಪಂದ್ಯಗಳನ್ನು ಗೆದ್ದರೆ, ಚೆನ್ನೈ 2024 ರಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಯಿತು. ಉಳಿದಂತೆ ಐಪಿಎಲ್ 2025 ರಲ್ಲಿ ಆಡಿದ ಎರಡೂ ಪಂದ್ಯಗಳನ್ನು ರಾಜಸ್ಥಾನ ಗೆದ್ದಿತು.

ಉಭಯ ತಂಡಗಳ ಪ್ಲೇಯಿಂಗ್ 11

ಸಿಎಸ್​ಕೆ:ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್(ನಾಯಕ), ಆಯುಷ್ ಮ್ಹಾತ್ರೆ, ಮ್ಯಾಥ್ಯೂ ಶಾರ್ಟ್, ಶಿವಂ ದುಬೆ, ಕಾರ್ತಿಕ್ ಶರ್ಮಾ, ಜೇಮಿ ಓವರ್ಟನ್, ನೂರ್ ಅಹ್ಮದ್, ಮ್ಯಾಟ್ ಹೆನ್ರಿ, ಅನ್ಶುಲ್ ಕಾಂಬೋಜ್, ಖಲೀಲ್ ಅಹ್ಮದ್.

ರಾಜಸ್ಥಾನ್: ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ರಿಯಾನ್ ಪರಾಗ್(ನಾಯಕ), ಶಿಮ್ರೋನ್ ಹೆಟ್ಮೆಯರ್, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಸಂದೀಪ್ ಶರ್ಮಾ, ರವಿ ಬಿಷ್ಣೋಯ್, ಬ್ರಿಜೇಶ್ ಶರ್ಮಾ.

Source link

IPL 2026: ಆರ್​ಸಿಬಿ ಪರ ಆಡಲು ರಾಷ್ಟ್ರೀಯ ತಂಡ ತೊರೆಯಲು ನಿರ್ಧರಿಸಿದ ಸ್ಟಾರ್ ವೇಗಿ

2026 ರ ಐಪಿಎಲ್ (IPL 2026) ಉದ್ಘಾಟನಾ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಮಣಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದೆ. ಆರ್​ಸಿಬಿಯ (RCB) ಮುಂದಿನ ಸಿಎಸ್​ಕೆ ವಿರುದ್ಧ ಏಪ್ರಿಲ್ 5 ರ ಭಾನುವಾರದಂದು ನಡೆಯಲಿದೆ. ಅಂದರೆ ಈ ಪಂದ್ಯಕ್ಕೆ ಇನ್ನು ಸಾಕಷ್ಟು ಸಮಯ ಉಳಿದಿದೆ. ಆದಾಗ್ಯೂ ಆರ್​ಸಿಬಿ ತಂಡವನ್ನು ಸೇರಲು ಪಣತೊಟ್ಟಿರುವ ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ (Nuwan Thushara), ಲಂಕಾ ಕ್ರಿಕೆಟ್ ಮಂಡಳಿಯ ಕೇಂದ್ರ ಒಪ್ಪಂದದಿಂದ ಹೊರಬರಲು ನಿರ್ಧರಿಸಿದ್ದಾರೆ. ಹೀಗಾಗಿ ಅವರು ನನ್ನನ್ನು ಕೇಂದ್ರ ಒಪ್ಪಂದದಲ್ಲಿ ಸೇರಿಸದಂತೆ ಲಂಕಾ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ವಾಸ್ತವವಾಗಿ ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾದ ಕಾರಣದಿಂದಾಗಿ ನುವಾನ್ ತುಷಾರ ಐಪಿಎಲ್‌ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಯಾವುದೇ ಆಟಗಾರ ವಿದೇಶಿ ಲೀಗ್‌ಗಳಲ್ಲಿ ಆಡಲು ಸಾಧ್ಯವಿಲ್ಲ ಎಂಬುದು ಶ್ರೀಲಂಕಾ ಕ್ರಿಕೆಟ್‌ನ ನೀತಿಯಾಗಿದೆ. ಹೀಗಾಗಿ ಫಿಟ್‌ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿರುವ ತುಷಾರ ಐಪಿಎಲ್​ನಲ್ಲಿ ಆರ್‌ಸಿಬಿ ತಂಡವನ್ನು ಇದುವರೆಗೂ ಸೇರಲಾಗಿಲ್ಲ.

ನುವಾನ್ ತುಷಾರ ಐಪಿಎಲ್ ವೃತ್ತಿಜೀವನ

ನುವಾನ್ ತುಷಾರ ಅವರನ್ನು ಆರ್​ಸಿಬಿ 1.6 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಆದಾಗ್ಯೂ, ಶ್ರೀಲಂಕಾ ಕ್ರಿಕೆಟ್ ಅವರಿಗೆ ಎನ್​ಒಸಿ ನೀಡಿಲ್ಲ. ಹೀಗಾಗಿ ಅವರು ಇದುವರೆಗೆ ತಂಡವನ್ನು ಸೇರಲಾಗಿಲ್ಲ. ಇದುವರೆಗೆ ಐಪಿಎಲ್​ನಲ್ಲಿ 8 ಪಂದ್ಯಗಳನ್ನಾಡಿರುವ ನುವಾನ್ ತುಷಾರ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2024 ರ ಐಪಿಎಲ್​ನಲ್ಲಿ ಮುಂಬೈ ಪರ ಆಡಿದ್ದ ತುಷಾರ, ಕಳೆದ ವರ್ಷ ಆರ್​ಸಿಬಿ ಪರ ಕೇವಲ ಒಂದು ಪಂದ್ಯವನ್ನು ಆಡಿದ್ದರು. ಇದೀಗ ಫಿಟ್‌ನೆಸ್ ಪರೀಕ್ಷೆಯಲ್ಲಿ ಅನುತೀರ್ಣರಾಗಿರುವ ತುಷಾರ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

CSK vs RR IPL 2026 Live Score: ರಾಜಸ್ಥಾನ್- ಸಿಎಸ್​ಕೆ ಮುಖಾಮುಖಿ

ಟಿ20 ಸ್ಪೆಷಲಿಸ್ಟ್ ಬೌಲರ್ ತುಷಾರ

ಟಿ20 ಸ್ಪೆಷಲಿಸ್ಟ್ ಬೌಲರ್​ಗಳ ಪಟ್ಟಿಯಲ್ಲಿ ತುಷಾರ ಕೂಡ ಒಬ್ಬರು. ಅವರ ಆಕ್ಷನ್ ಲಸಿತ್ ಮಾಲಿಂಗ ಅವರಂತೆಯೇ ಇದೆ. ಪವರ್‌ಪ್ಲೇನಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಮತ್ತು ಡೆತ್ ಓವರ್‌ಗಳಲ್ಲಿ ಅತ್ಯುತ್ತಮ ಯಾರ್ಕರ್‌ಗಳನ್ನು ಎಸೆಯುವ ಸಾಮರ್ಥ್ಯ ಅವರಿಗಿದೆ. ತುಷಾರ ಶ್ರೀಲಂಕಾ ಪರ 30 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 36 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಎಕಾನಮಿ ದರ ಪ್ರತಿ ಓವರ್‌ಗೆ ಕೇವಲ 8.1 ಆಗಿದ್ದು, 20 ರನ್‌ಗಳಿಗೆ 5 ವಿಕೆಟ್‌ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇಗ ಡೀಲ್ ಆಗದಿದ್ದರೆ ಇರಾನ್​ನ ಇಂಧನ ಘಟಕಗಳು, ಖರ್ಗ್ ದ್ವೀಪವನ್ನು ಉಡಾಯಿಸುತ್ತೇವೆ: ಡೊನಾಲ್ಡ್ ಟ್ರಂಪ್ ಕಟ್ಟೆಚ್ಚರಿಕೆ

ನವದೆಹಲಿ, ಮಾರ್ಚ್ 30: ಇರಾನ್​ನ ಹೆಚ್ಚು ಉದಾರಿ ಆಡಳಿತದ ಜೊತೆ ಅಮೆರಿಕದ ಸಂಧಾನ (Negotiations) ನಡೆಸುತ್ತಿದೆ. ಒಂದು ವೇಳೆ, ಈ ಮಾತುಕತೆ ವಿಫಲವಾಗಿ ಶೀಘ್ರದಲ್ಲೇ ಒಪ್ಪಂದಕ್ಕೆ ಬರಲಾಗದಿದ್ದರೆ ಮತ್ತು ಹಾರ್ಮುಜ್ ಜಲಸಂಧಿ ಮುಕ್ತವಾಗದಿದ್ದರೆ ಇರಾನ್​ನ ಇಂಧನ ಮೂಲಸೌಕರ್ಯ (Energy infra), ತೈಲ ಬಾವಿಗಳು (oil wells) ಮತ್ತು ಖರ್ಗ್ ದ್ವೀಪವನ್ನು (Kharg island) ಉಡಾಯಿಸಿಬಿಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ ಪ್ಲಾಟ್​ಫಾರ್ಮ್​ನಲ್ಲಿ ಈ ಬಗ್ಗೆ ಒಂದು ಪೋಸ್ಟ್ ಹಾಕಿದ್ದಾರೆ. ಇರಾನ್​ನಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆ ಅಂತ್ಯಗೊಳ್ಳಲು ಅಗತ್ಯವಾದ ಸಂಧಾನಗಳನ್ನು ಗಂಭೀರವಾಗಿ ನಡೆಸಲಾಗುತ್ತಿದೆ. ಇರಾನ್​ನ ಹೊಸ ಮತ್ತು ಹೆಚ್ಚು ಉದಾರಿ ಆಡಳಿತದ ಜೊತೆ ಮಾತುಕತೆ ನಡೆಯುತ್ತಿದೆ ಎಂದೂ ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಇರಾನ್​ನ ಖರ್ಗ್ ದ್ವೀಪದ ಮೇಲೆ ಟ್ರಂಪ್​ಗೆ ಕಣ್ಣು? ಅಂಥದ್ದೇನಿದೆ ಅಲ್ಲಿ?

‘ಮಾತುಕತೆಯಲ್ಲಿ ಗಮನಾರ್ಹ ಪ್ರಗತಿ ಸಿಕ್ಕಿದೆ. ಒಪ್ಪಂದ ಬಹಳ ಬೇಗ ಕುದುರಬಹುದು. ಒಂದು ವೇಳೆ ಒಪ್ಪಂದ ಏರ್ಪಡಲು ಆಗದಿದ್ದರೆ ಮತ್ತು ಹಾರ್ಮುಜ್ ಜಲಸಂಧಿಯು ವ್ಯಾಪಾರಕ್ಕೆ ತತ್​ಕ್ಷಣವೇ ತೆರೆಯದಿದ್ದರೆ, ನಾವು ಉದ್ದೇಶಪೂರ್ವಕವಾಗಿ ಮುಟ್ಟದೇ ಸುಮ್ಮನಿರುವ ಇರಾನ್​ನ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳು, ತೈಲ ಬಾವಿಗಳು ಮತ್ತು ಖರ್ಗ್ ದ್ವೀಪ ಎಲ್ಲವನ್ನೂ ಉಡಾಯಿಸಿ ನಾಶ ಮಾಡುವ ಮೂಲಕ ಇರಾನ್​ನಲ್ಲಿ ನಮ್ಮ ಅದ್ಭುತ ಇರುವಿಕೆಯನ್ನು ಅಂತ್ಯಗೊಳಿಸುತ್ತೇವೆ. ಹಳೆಯ ಆಡಳಿತದ 47 ವರ್ಷದ ಭಯೋತ್ಪಾದನೆಗೆ ಬಲಿಯಾದ ನಮ್ಮ ಹಲವು ಸೈನಿಕರು ಹಾಗು ಇತರರ ಸಾವಿಗೆ ನ್ಯಾಯ ಸಿಕ್ಕಂತಾಗುತ್ತದೆ’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಯುದ್ಧ ಆರಂಭಿಸಿ ಒಂದು ತಿಂಗಳ ಮೇಲಾಯಿತು. ಫೆಬ್ರುವರಿ 28ರಂದು ಮೊದಲು ದಾಳಿಯಾಗಿದೆ. ಸಾವಿರಾರು ಕ್ಷಿಪಣಿಗಳು, ಡ್ರೋನ್​ಗಳು ಸಾಕಷ್ಟು ಹಾನಿ ತಂದಿವೆ. ಇರಾನ್ ತೀವ್ರ ಪ್ರತಿರೋಧ ಒಡ್ಡುತ್ತಿದೆ. ಇಸ್ರೇಲ್ ಮೇಲೆ ವ್ಯಾಪಕ ವಾಯುದಾಳಿಗಳನ್ನು ಮಾಡಿದೆ. ಅಷ್ಟೇ ಅಲ್ಲ, ಸೌದಿ, ಯುಎಇ ಇತ್ಯಾದಿ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳು ಹಾಗೂ ಇಂಧನ ಘಟಕಗಳ ಮೇಲೆ ಇರಾನ್ ದಾಳಿ ಮಾಡಿ ಹಾನಿಗೊಳಿಸಿದೆ.

ಇದನ್ನೂ ಓದಿ: ಹಾರ್ಮುಜ್ ನಂತರ ಮತ್ತೊಂದು ಜಲಸಂಧಿ ಕಂಟಕ; ಜಗತ್ತಿಗೆ ಕಾದಿದೆ ಡಬಲ್ ಶಾಕ್

ಇರಾನ್ ಮೇಲೆ ದಾಳಿ ಮಾಡಿದ ಉದ್ದೇಶ ಈಡೇರಿದೆ ಎಂದು ಟ್ರಂಪ್ ಹೇಳಿಕೊಳ್ಳುತ್ತಿದ್ದಾರೆ. ಯುದ್ಧದ ಆರಂಭದಲ್ಲೇ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೆನೈ ಹಾಗೂ ಹಲವಾರು ಇತರ ಮುಖಂಡರನ್ನು ಇಸ್ರೇಲ್ ಮತ್ತು ಅಮೆರಿಕದ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿತ್ತು. ಈಗ ವಿಶ್ವದ ಶೇ. 20ರಷ್ಟು ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಹಿಡಿತದಿಂದ ಮುಕ್ತಗೊಳಿಸುವುದು ಮತ್ತು ಇರಾನ್​ನ ತೈಲ ಸಾಗಣೆಯ ಕೇಂದ್ರಬಿಂದುವಾಗಿರುವ ಖರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು ಅಮೆರಿಕದ ಮತ್ತೊಂದು ಗುರಿ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ

ಹಾಸನ, ಮಾರ್ಚ್​ 30: ಸಿಲಿಂಡರ್ ಬದಲಿಸುವ ವೇಳೆ ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿದ್ದು, ನಾಲ್ವರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆ.ಅಬ್ಬೂರು ಗ್ರಾಮದಲ್ಲಿ ನಡೆದಿದೆ. ಸಿಲಿಂಡರ್​ನಲ್ಲಿದ್ದ ಗ್ಯಾಸ್ ಖಾಲಿಯಾದ ಹಿನ್ನೆಲೆಯಲ್ಲಿ ಬದಲಾವಣೆ ಮುಂದಾಗಿದ್ದಾರೆ. ಗ್ಯಾಸ್ ತುಂಬಿದ್ದ ಸಿಲಿಂಡರ್​ಗೆ ರೆಗ್ಯುಲೇಟರ್ ಅಳವಡಿಸುವಾಗ ಅಡುಗೆ ಅನಿಲ ಸೋರಿಕೆಯಾಗಿ ಏಕಾಏಕಿ ಸ್ಫೋಟವಾಗಿದೆ. ಮಹಿಳೆ, ಪುತ್ರ ಸೇರಿದಂತೆ ಮನೆಯಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸುಂದರೇಶ್ ಮನೆಯಲ್ಲಿ ಘಟನೆ ನಡೆದಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಪಿ ಇರುವವರು ಬೇಸಿಗೆಯಲ್ಲಿ ಈ ವಿಷಯಗಳನ್ನು ಅಪ್ಪಿತಪ್ಪಿಯೂ ಮರೆಯಬೇಡಿ!

ಇತ್ತೀಚಿನ ದಿನಗಳಲ್ಲಿ ಹೈ ಬಿಪಿ (High Blood Pressure) ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿರುವುದನ್ನು ನೀವು ಕಾಣಬಹುದಾಗಿದೆ. ಇದಕ್ಕೆ ಜೀವನಶೈಲಿಯಲ್ಲಿ ಆಗಿರುವಂತಹ ಬದಲಾವಣೆ, ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಜೊತೆಗೆ ಒತ್ತಡ (ಸ್ಟ್ರೆಸ್) ಪ್ರಮುಖ ಕಾರಣಗಳಾಗಿವೆ. ಅದರಲ್ಲಿಯೂ ಈ ಸಮಯದಲ್ಲಿ ಅಂದರೆ ಬೇಸಿಗೆಯಲ್ಲಿ ಬಿಸಿಲು ವಿಪರೀತವಾಗಿರುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು, ಇದು ರಕ್ತದ ಒತ್ತಡದ ಮೇಲೆ ಪರಿಣಾಮ ಬೀರಬಹುದು. ಹೆಚ್ಚು ಬೆವರು ಬರುವುದರಿಂದ ದೇಹದಲ್ಲಿನ ಇಲೆಕ್ಟ್ರೋಲೈಟ್‌ಗಳ ಸಮತೋಲನ ಹಾಳಾಗಬಹುದು, ಇದು ಹೃದಯ ಮತ್ತು ಬಿಪಿ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ, ದೇಹದ ತಾಪಮಾನವನ್ನು ನಿಯಂತ್ರಿಸಲು ಹೃದಯ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಬೇಸಿಗೆಯಲ್ಲಿ ಕೆಲವರಿಗೆ ಹಸಿವು ಕಡಿಮೆಯಾಗುತ್ತದೆ, ಇದರಿಂದ ಸರಿಯಾದ ಆಹಾರ ಸೇವನೆ ಆಗದೆ, ಅಗತ್ಯ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದರಿಂದ ದುರ್ಬಲತೆ ಮತ್ತು ಬಿಪಿಯಲ್ಲಿ ಏರುಪೇರಿನ ಸಮಸ್ಯೆಗಳು ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಬಿಪಿ ಇರುವವರು ಈ ಸಮಯದಲ್ಲಿ ಕಂಡುಬರುವ ಕೆಲವು ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಜೊತೆಗೆ ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಈ ರೀತಿ ಸಮಸ್ಯೆಯನ್ನು ತಡೆಯಬಹುದು.

ಹೈ ಬಿಪಿ ಇರುವವರು ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:

  • ತೀವ್ರ ತಲೆನೋವು
  • ತಲೆ ಸುತ್ತುವುದು
  • ಕಣ್ಣು ಮಸುಕಾಗುವುದು
  • ಎದೆ ನೋವು
  • ಉಸಿರಾಟದ ತೊಂದರೆ
  • ಹೃದಯ ಬಡಿತದಲ್ಲಿ ಏರಿಳಿತ
  • ಹೆಚ್ಚು ಬೆವರುವುದು
  • ದುರ್ಬಲತೆ ಮತ್ತು ದಣಿವು
    ಈ ಲಕ್ಷಣಗಳು ಪದೇಪದೇ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಬೇಸಿಗೆಯಲ್ಲಿ ಪಾಲಿಸಬೇಕಾದ ಸರಳ ಕ್ರಮಗಳು:

  • ಹೈ ಬಿಪಿ ಇರುವವರು ತಮ್ಮ ದಿನಚರಿ ಮತ್ತು ಆಹಾರದ ಬಗ್ಗೆ ವಿಶೇಷ ಗಮನ ಕೊಡಬೇಕು
  • ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು
  • ಹೆಚ್ಚು ಉಪ್ಪು ಮತ್ತು ಎಣ್ಣೆ ಅಂಶವಿರುವ ಆಹಾರ ಸೇವನೆ ಮಾಡುವುದನ್ನು ಬಿಡಬೇಕು
  • ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು
  • ತೀವ್ರ ಬಿಸಿಲಿರುವಾಗ ಹೊರಗೆ ಹೋಗುವುದನ್ನು ತಪ್ಪಿಸಬೇಕು
  • ಹೊರಗೆ ಹೋಗಲೇಬೇಕಾದಾಗ ತಲೆ ಮತ್ತು ದೇಹವನ್ನು ಮುಚ್ಚಿಕೊಳ್ಳಬೇಕು
  • ನಿಯಮಿತವಾಗಿ ಬ್ಲಡ್ ಪ್ರೆಶರ್ ಚೆಕ್ ಮಾಡಿಕೊಳ್ಳಬೇಕು

ಇದನ್ನೂ ಓದಿ: ಸಣ್ಣ ವಯಸ್ಸಿನಲ್ಲಿ ಬಿಪಿ ಬರುವುದಕ್ಕೆ ನಿಮ್ಮ ಈ ಅಭ್ಯಾಸಗಳೇ ಕಾರಣ! ಇಂದೇ ಬದಲಾಯಿಸಿಕೊಳ್ಳಿ

ಇತರ ಪ್ರಮುಖ ಸಲಹೆಗಳು:

  • ಪ್ರತಿದಿನ ಲಘು ವ್ಯಾಯಾಮ ಅಥವಾ ವಾಕಿಂಗ್ ಮಾಡುವ ಅಭ್ಯಾಸ ಇರಲಿ
  • ಅತಿಯಾಗಿ ದೇಹಕ್ಕೆ ಒತ್ತಡ ಕೊಡುವ ವ್ಯಾಯಾಮಗಳನ್ನು ತಪ್ಪಿಸಿ
  • ಒತ್ತಡವನ್ನು ನಿಯಂತ್ರಿಸಿ
  • ಸರಿಯಾಗಿ ನಿದ್ರೆ ಮಾಡಿ
  • ವೈದ್ಯರ ಸಲಹೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ
  • ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

ಈ ಸರಳ ಕ್ರಮಗಳನ್ನು ಪಾಲಿಸಿದರೆ ಬೇಸಿಗೆಯಲ್ಲಿ ಹೈ ಬಿಪಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು ಬರುವುದನ್ನು ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ಸುದ್ದಿ ಬಿಟ್ಟು, ಸಿನಿಮಾದ ಗುಡ್ ನ್ಯೂಸ್ ನೀಡಿದ ನಟಿ ಅನುಷ್ಕಾ ಶೆಟ್ಟಿ

ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಸಿನಿಮಾಗಳ ಆಯ್ಕೆಯಲ್ಲಿ ಈಗ ಬಹಳ ಚ್ಯೂಸಿ ಆಗಿದ್ದಾರೆ. ಅದರ ನಡುವೆ ಅವರ ಮದುವೆ ಬಗ್ಗೆ ಆಗಾಗ ಗಾಸಿಪ್ ಕೇಳಿಬರುತ್ತಲೇ ಇರುತ್ತದೆ. ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂದು ಇತ್ತೀಚೆಗೆ ವದಂತಿ ಹಬ್ಬಿತ್ತು. ಅದಕ್ಕೆ ಅನುಷ್ಕಾ ಶೆಟ್ಟಿ ಕಡೆಯಿಂದ ಸ್ಪಷ್ಟನೆ ಸಿಗಬಹುದು ಎಂದು ಫ್ಯಾನ್ಸ್ ಕಾದಿದ್ದಾರೆ. ಆದರೆ ಮದುವೆ ಬಿಟ್ಟು ಬೇರೊಂದು ಗುಡ್ ನ್ಯೂಸ್ ಸಿಕ್ಕಿದೆ. ಇದು ಅವರ ‘ಕಥನಾರ್’ (Kathanar) ಸಿನಿಮಾಗೆ ಸಂಬಂಧಿಸಿದ ಸಿಹಿ ಸುದ್ದಿ.

ಅನುಷ್ಕಾ ಶೆಟ್ಟಿ ಈಗ ಮತ್ತೊಂದು ಬಿಗ್ ಪ್ರಾಜೆಕ್ಟ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ‘ಘಾಟಿ’ ಚಿತ್ರದ ನಂತರ ಅನುಷ್ಕಾ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಕಥನಾರ್’ ಈಗ ಟ್ರೇಲರ್ ಬಿಡುಗಡೆಗೆ ಸಜ್ಜಾಗಿದೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಅನುಷ್ಕಾ ಅವರು ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

‘ಕಥನಾರ್’ ಚಿತ್ರತಂಡವು ಟ್ರೇಲರ್ ಬಿಡುಗಡೆಗೆ ಆರಿಸಿಕೊಂಡಿರುವ ಸಮಯ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಬೆಳಗ್ಗೆ ಅಥವಾ ಸಂಜೆ ಟ್ರೇಲರ್ ಬಿಡುಗಡೆ ಮಾಡುವುದು ವಾಡಿಕೆ. ಆದರೆ, ‘ಕಥನಾರ್’ ಟ್ರೇಲರ್ ಮಾರ್ಚ್ 31ರ ಮಧ್ಯಾಹ್ನ ಸರಿಯಾಗಿ 1.31ಕ್ಕೆ ಅನಾವರಣಗೊಳ್ಳಲಿದೆ. ಈ ಸಮಯವನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಯಾವುದಾದರೂ ವಿಶೇಷ ಕಾರಣ ಇದೆಯೇ ಎಂದು ಸಿನಿಪ್ರಿಯರು ಚರ್ಚಿಸುತ್ತಿದ್ದಾರೆ.

ರೋಜಿನ್ ಥಾಮಸ್ ನಿರ್ದೇಶನದ ಈ ಡಾರ್ಕ್ ಫ್ಯಾಂಟಸಿ ಡ್ರಾಮಾ ಕಥೆಯುಳ್ಳ ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರು ನೀಲಿ ಎಂಬ ನಿಗೂಢ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಶೂಟಿಂಗ್ ಬಹಳ ಹಿಂದೆಯೇ ಮುಗಿದಿದ್ದರೂ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚು ಸಮಯ ಹಿಡಿಯುತ್ತಿದೆ. ಈ ಟ್ರೇಲರ್ ಜೊತೆಗೆ ಸಿನಿಮಾ ಬಿಡುಗಡೆಯ ದಿನಾಂಕವೂ ಘೋಷಣೆಯಾಗುವ ಸಾಧ್ಯತೆಯಿದೆ.

ಸುಮಾರು 90 ಕೋಟಿ ರೂಪಾಯಿ ವೆಚ್ಚದಲ್ಲಿ ‘ಶ್ರೀ ಗೋಕುಲಂ ಮೂವೀಸ್’ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದಲ್ಲಿ ಮಲಯಾಳಂ ನಟ ಜಯಸೂರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ವಿಶೇಷವೆಂದರೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅತಿಥಿ ಪಾತ್ರಗಳಲ್ಲಿ ಮಿಂಚಲಿದ್ದಾರೆ. ವಿನೀತ್, ಸ್ಯಾಂಡಿ ಮತ್ತು ನಿತೀಶ್ ಭಾರದ್ವಾಜ್ ಅವರಂತಹ ಪ್ರತಿಭಾವಂತ ನಟರು ಈ ಚಿತ್ರದ ಭಾಗವಾಗಿದ್ದಾರೆ.

ಇದನ್ನೂ ಓದಿ: ಅನುಷ್ಕಾ ಶೆಟ್ಟಿ-ಪ್ರಭಾಸ್ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ

ಕೇವಲ ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಅಂತರಾಷ್ಟ್ರೀಯ ಭಾಷೆಗಳಲ್ಲಿ ‘ಕಥನಾರ್’ ಬಿಡುಗಡೆಯಾಗಲಿದೆ. ರಾಹುಲ್ ಸುಬ್ರಮಣಿಯನ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐಪಿಎಲ್ ಮ್ಯಾಚ್ ನೋಡಲು ಹೋಗುವ ಕ್ರಿಕೆಟ್ ಅಭಿಮಾನಿಗಳೇ ಈ ಮಹಿಳೆಯ ಮಾತು ಕೇಳಿ

ಬೆಂಗಳೂರು, (ಮಾರ್ಚ್ 30): ಈಗಾಗಲೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಟೂರ್ನಿ 2026ಕ್ಕೆ ಚಾಲನೆ ಸಿಕ್ಕಿದೆ. ಆರ್​​ಸಿಬಿ ಹಾಗೂ ಸನ್ ರೈಸರ್ಸ್​ ಉದ್ಘಾಟನಾ ಪಂದ್ಯವಾಡಿದ್ದು, ತವರಿನ ಅಂಗಳದಲ್ಲಿ ಆರ್​​ಸಿಬಿ ಶುಭಾರಂಭ ಮಾಡಿದೆ. ಇನ್ನು ಕಾಲ್ತುಳಿತ ದುರಂತ ಸಂಬಂಧ ಪೊಲೀಸರು ಹಾಗೂ ಕೆಎಸ್​ಸಿಯಿಂದ ಯಾವುದೇ ಗೊಂದಲಗಳು ಆಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಪ್ರೇಕ್ಷಕರಿಗೆ ಆಗಮನ ಮತ್ತು ನಿರ್ಗಮನದಲ್ಲಿ ಯಾವುದೇ ನೂಕುನುಗ್ಗಲು ಆಗಿಲ್ಲ. ಆದ್ರೆ, ಕಳ್ಳರು ಮಾತ್ರ ತಮ್ಮ ಕೈಚಳ ತೋರಿಸಿದ್ದಾರೆ.

ಹೌದು…ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಮತ್ತು ಹೈದರಾಬಾದ್ ನಡುವಿನ ಉದ್ಘಾಟನಾ ಪಂದ್ಯದ ವೇಳೆ ಕ್ರಿಕೆಟ್ ಪ್ರೇಮಿಗಳ ಜೇಬಿಗೆ ಕಳ್ಳರು ಕನ್ನ ಹಾಕಿದ್ದಾರೆ. ಪಂದ್ಯ ನೋಡಲು ಹೋಗಿದ್ದ ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ತಮ್ಮ ಪತಿಯ ಮೊಬೈಲ್ ಫೋನ್ ಕೂಡ ಕಳ್ಳತನವಾಗಿರುವುದಾಗಿ ನೋವು ಹೇಳಿಕೊಂಡಿದ್ದಾರೆ. ಕ್ರಿಕೆಟ್ ನೋಡಲು ಬರುವವರು ಹುಷಾರಾಗಿರಿ, ಇಲ್ಲಿ ಸಂಭ್ರಮದ ನಡುವೆಯೇ ಮೊಬೈಲ್ ಕಳ್ಳತನ ಮಾಡುವ ದೊಡ್ಡ ಜಾಲವೇ ಇದೆ ಎಂದು ಮಹಿಳೆ ಐಪಿಎಲ್ ಅಭಿಮಾನಿಗಳಿಗೆ ಹುಷಾರಾಗಿರಲು ಕರೆ ನೀಡಿದ್ದಾರೆ.

Source link

CSK vs RR IPL 2026 Live Score: ರಾಜಸ್ಥಾನ್- ಸಿಎಸ್​ಕೆ ಮುಖಾಮುಖಿ – Kannada News | CSK vs RR IPL 2026 Live Cricket Score Chennai Super Kings vs Rajasthan Royals Match on 30th March latest news in Kannada

ಐಪಿಎಲ್ 2026 ರ ಮೂರನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದು ಮುಖಾಮುಖಿಯಾಗಿವೆ. ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದೊಂದಿಗೆ, ಮಾಜಿ ಐಪಿಎಲ್ ಚಾಂಪಿಯನ್‌ಗಳೆರಡೂ ಲೀಗ್‌ನ 19 ನೇ ಸೀಸನ್‌ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿವೆ. ಹೊಸ ನಾಯಕ ರಿಯಾನ್ ಪರಾಗ್ ನೇತೃತ್ವದಲ್ಲಿ ತಂಡವು ಮೈದಾನಕ್ಕೆ ಇಳಿಯುವುದರಿಂದ ರಾಜಸ್ಥಾನ ರಾಯಲ್ಸ್‌ಗೆ ಇದು ಹೊಸ ಯುಗದ ಆರಂಭವಾಗಿದೆ. ಗಾಯದ ಕಾರಣದಿಂದಾಗಿ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿದಿರುವ ಮಾಜಿ ನಾಯಕ ಎಂಎಸ್ ಧೋನಿ ಇಲ್ಲದೆ ಚೆನ್ನೈ ಕೂಡ ಈ ಸೀಸನ್ ಪ್ರಾರಂಭಿಸಲಿದೆ.

Source link

CSK vs RR IPL 2026 Live Score: ರಾಜಸ್ಥಾನ್- ಸಿಎಸ್​ಕೆ ಮುಖಾಮುಖಿ

ಐಪಿಎಲ್ 2026 ರ ಮೂರನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದು ಮುಖಾಮುಖಿಯಾಗಿವೆ. ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದೊಂದಿಗೆ, ಮಾಜಿ ಐಪಿಎಲ್ ಚಾಂಪಿಯನ್‌ಗಳೆರಡೂ ಲೀಗ್‌ನ 19 ನೇ ಸೀಸನ್‌ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿವೆ. ಹೊಸ ನಾಯಕ ರಿಯಾನ್ ಪರಾಗ್ ನೇತೃತ್ವದಲ್ಲಿ ತಂಡವು ಮೈದಾನಕ್ಕೆ ಇಳಿಯುವುದರಿಂದ ರಾಜಸ್ಥಾನ ರಾಯಲ್ಸ್‌ಗೆ ಇದು ಹೊಸ ಯುಗದ ಆರಂಭವಾಗಿದೆ. ಗಾಯದ ಕಾರಣದಿಂದಾಗಿ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿದಿರುವ ಮಾಜಿ ನಾಯಕ ಎಂಎಸ್ ಧೋನಿ ಇಲ್ಲದೆ ಚೆನ್ನೈ ಕೂಡ ಈ ಸೀಸನ್ ಪ್ರಾರಂಭಿಸಲಿದೆ.

Source link

ಬಂದ ಒಂದೇ ವಾರಕ್ಕೆ ಹೆಚ್ಚಿಗೆ ಬಾಡಿಗೆ ಕೇಳಿದ ಮನೆ ಮಾಲೀಕ: ಸೌಟು, ಚಾಕು ಹಿಡಿದು ಹೊಡೆದಾಟ

ಬೆಂಗಳೂರು, ಮಾರ್ಚ್​ 30: ಉತ್ತರ ಪ್ರದೇಶ ಮೂಲದ ಕುಟುಂಬವೊಂದು ಬದುಕು ಕಟ್ಟಿಕೊಳ್ಳುವುದಕ್ಕೆ ಅಂತಾ ಬೆಂಗಳೂರಿಗೆ ಆಗಮಿಸಿದ್ದರು. ಸಿಲಿಕಾನ್ ಸಿಟಿಯ ಗಲ್ಲಿಗಲ್ಲಿ ವಾಸಿಸಲು ಮನೆಗಾಗಿ ಹುಡುಕಾಡಿದ್ದಾರೆ. ಸಿಕ್ಕ ಮನೆಯಲ್ಲಿ ಒಂದು ವಾರವಿದ್ದರೂ ಅಷ್ಟೇ, ಅಷ್ಟರಲ್ಲೇ ಮನೆ ಮಾಲೀಕ ಕ್ಯಾತೆ ತೆಗೆದಿದ್ದಾರೆ. ಬಾಡಿಗೆ ಜಾಸ್ತಿ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಇದೇ ವಿಚಾರ ಪರಸ್ಪರ ಹೊಡೆದಾಡಿಕೊಳ್ಳುವ (Clash) ಮಟ್ಟಕ್ಕೆ ಹೋಗಿದೆ. ಈ ಘಟನೆ ಜೀವನಭೀಮಾ ನಗರದ ಕೋಡಿಹಳ್ಳಿಯಲ್ಲಿ ಮಾರ್ಚ್ 29ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಡೆದದ್ದೇನು?

ಉತ್ತರ ಪ್ರದೇಶ ಮೂಲದ ಸಹೋದರರಾದ ನರೇಶ್, ಸಚಿನ್ ಮತ್ತು ಹೋದರಿ ರೇಖಾ. ಬೆಂಗಳೂರಿಗೆ ಬಂದು ಸಣ್ಣಪುಟ್ಟ ಕೆಲಸ ಮಾಡ್ಕೊಂಡು ಬದುಕು ನಡೆಸುತ್ತಿದ್ದರು. ಹಾಗೆ ಬೆಂಗಳೂರಿನಲ್ಲಿರಲು ಒಂದು ಬಾಡಿಗೆ ಮನೆಯನ್ನ ಹುಡಕ್ತಿದ್ದ ಇವರಿಗೆ ಶೋಭಾ ಮತ್ತು ದೇವರಾಜ್​​​ ಎಂಬುವವರ ಬಿಲ್ಡಿಂಗ್​ನಲ್ಲಿ 1RK ಮನೆ ಸಿಕ್ಕಿತ್ತು. ಬಾಡಿಗೆ 8 ಸಾವಿರ ರೂ ಒಪ್ಪಂದವಾಗಿತ್ತು. ಮಾರ್ಚ್ 24ರಂದು ಬಂದ ಇವರಿಗೆ ಮನೆ ಮಾಲೀಕರಿಂದ ಕಿರುಕುಳು ಶುರುವಾಗಿತ್ತಂತೆ. ಗ್ಯಾಸ್ ರೇಟ್ ಜಾಸ್ತಿ ಆಗಿದೆ. ವಾಟರ್ ಬಿಲ್ ಜಾಸ್ತಿ ಆಗಿದೆ, ಹಾಗಾಗಿ 10 ಸಾವಿರ ರೂ ಬಾಡಿಗೆ ನೀಡುವಂತೆ ಒತ್ತಾಯಿಸಲು ಶುರು ಮಾಡಿದ್ದರಂತೆ. ಇಲ್ಲದಿದ್ದರೆ ಮನೆ ಖಾಲು ಮಾಡಲು ಹೇಳಿದ್ದರಂತೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಿನಾ ಕಾರಣ ಬೈಕ್ ತಡೆದು ಹಣ ವಸೂಲಿ: ಮೂವರು ಪೊಲೀಸರು ಸಸ್ಪೆಂಡ್

ಇದಕ್ಕೆ ಬಾಡಿಗೆದಾರರು 15 ದಿನ ಸಮಯವಾದರೂ ನೀಡುವಂತೆ ಕೇಳಿಕೊಂಡಿದ್ದಾರೆ. ಮಾಲೀಕರು ಒಪ್ಪದೇ ಬಾಡಿಗೆದಾರರು ಮತ್ತು ಮಾಲೀಕರ ಮಧ್ಯೆ ಪರಸ್ಪರ ಮಾತುಕತೆ ಬೆಳೆದು ಗಲಾಟೆ ಆಗಿದ್ದು, ಪರಸ್ಪರ ಹಲ್ಲೆ ಕೂಡ ನಡೆದಿದೆ. ಶೋಭಾ ಹಾಗೂ ರೇಖಾ ಜುಟ್ಟು ಹಿಡಿದುಕೊಂಡು ಗುದ್ದಾಡಿ ಕೊಂಡಿದ್ದಾರೆ. ಮನೆ ಮಾಲೀಕರು ತಮ್ಮ ಆಪ್ತರನ್ನು ಕರೆಸಿ ಬಾಡಿದಾರರ ಮೇಲೆ ಹಲ್ಲೆ ಮಾಡಿಸಿರುವ ಆರೋಪ ಕೂಡ ಕೇಳಿ ಬಂದಿದೆ.

ಮನೆ ಮಾಲೀಕರ ವಾದವೇನು?

ಇತ್ತ ಮನೆ ಮಾಲೀಕರು ಹೇಳುವುದೇ ಬೇರೆ. ಬಾಡಿಗೆಗೆ ಅಂತಾ ಬಂದವರು ಆಧಾರ್ ಕಾರ್ಡ್ ಕೊಟ್ಟಿರಲಿಲ್ಲ. ಐದು ದಿನ ಕಳೆದರೂ ಅಗ್ರಿಮೆಂಟ್ ಮಾಡಿಸಿರಲಿಲ್ಲ. ಹಾಗಾಗಿ ನಮಗೆ ಅನುಮಾನ ಬಂದು ಮನೆ ಖಾಲಿ ಮಾಡಲು ಹೇಳಿದ್ದೆವು. ಅಷ್ಟಕ್ಕೆ ಇಷ್ಟು ದೊಡ್ಡ ರಾದ್ಧಾಂತ ಮಾಡಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಅಂತಾ ಪ್ರತ್ಯಾರೋಪ ಮಾಡಿದ್ದಾರೆ.

ಇದನ್ನೂ ಓದಿ: ಸಣ್ಣ ವೈವಾಹಿಕ ಜಗಳಗಳು ಅಪರಾಧವಲ್ಲ: ಅತ್ತೆ-ಮಾವ, ನಾದಿನಿ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಘಟನೆಯಲ್ಲಿ ಚಮಚ, ಸೌಟು ಮತ್ತು ಚಾಕುವಿನಿಂದ ಬಡಿದಾಡಿಕೊಂಡಿದ್ದು, ಬಾಡಿಗೆದಾರರ ಮುಖ, ಕೈ ಸೇರಿದಂತೆ ದೇಹದ ಹಲವೆಡೆ ಗಾಯಗಳಾಗಿವೆ. ಸದ್ಯ ಘಟನೆ ಸಂಬಂಧ ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link